Tag: jayanagar

  • ಚಿತ್ರ ಪ್ರದರ್ಶನ, ರಕ್ತದಾನ ಶಿಬಿರ – ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಜನ್ಮದಿನಾಚರಣೆ

    ಚಿತ್ರ ಪ್ರದರ್ಶನ, ರಕ್ತದಾನ ಶಿಬಿರ – ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಜನ್ಮದಿನಾಚರಣೆ

    ಬೆಂಗಳೂರು: ಪ್ರಧಾನಿ ಮೋದಿ (PM Modi) ಜನ್ಮದಿನದ ಹಿನ್ನೆಲೆ ಬಿಜೆಪಿ (BJP) ನಾಯಕರು ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಹುಟ್ಟುಹಬ್ಬವನ್ನು ಆಚರಿಸಿದರು.

    ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಇಂದು (ಸೆ.17) ಜಯನಗರ (Jayanagar )ವಿಧಾನಸಭಾ ಕ್ಷೇತ್ರದಲ್ಲಿ ರಕ್ತದಾನ ಶಿಬಿರ, ಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೋದಿಯವರ ಜೀವನಾಧಾರಿತ ಚಿತ್ರದ ಪ್ರದರ್ಶನವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಉದ್ಘಾಟಿಸಿದರು. ಇದೇ ವೇಳೆ ರಕ್ತದಾನ ಶಿಬಿರಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಚಾಲನೆ ನೀಡಿದರು.ಇದನ್ನೂ ಓದಿ: ಮೋದಿ ನಿವೃತ್ತಿಯಾಗಲ್ಲ, ಅವರ ಸೇವೆ ಇನ್ನೂ ದೇಶಕ್ಕೆ ಬೇಕು: ಸೋಮಣ್ಣ

    ರಕ್ತದಾನ ಶಿಬಿರದಲ್ಲಿ ಸುಮಾರು 75 ಬಾಟಲ್ ರಕ್ತವನ್ನು ಸಂಗ್ರಹಿಸಲಾಯಿತು. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಮರದ ಕೊಂಬೆ ಬಿದ್ದು ಯುವಕ ಸಾವು – ಮೂವರು ಬಿಬಿಎಂಪಿ ಅರಣ್ಯಾಧಿಕಾರಿಗಳ ವಿರುದ್ಧ FIR

    ಮರದ ಕೊಂಬೆ ಬಿದ್ದು ಯುವಕ ಸಾವು – ಮೂವರು ಬಿಬಿಎಂಪಿ ಅರಣ್ಯಾಧಿಕಾರಿಗಳ ವಿರುದ್ಧ FIR

    ಬೆಂಗಳೂರು: ಮರದ ಕೊಂಬೆ ಬಿದ್ದು ಯುವಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿಯ
    (BBMP) ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ಬೆನಕ್ ರಾಜ್ ಎಂಬುವವರು ಹನುಮಂತ ನಗರ (Hanumant Nagar) ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಬಿಎಂಪಿಯ ಮೂವರು ಅರಣ್ಯಾಧಿಕಾರಿಗಳಾದ ಆರ್‌ಎಫ್‌ಓ, ಎಸಿಎಫ್, ಡಿಎಫ್‌ಓ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.ಇದನ್ನೂ ಓದಿ:KRS ಭರ್ತಿಗೆ 7 ಅಡಿಗಳಷ್ಟೇ ಬಾಕಿ

    ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ಷಯ್ ಸಾವಿಗೆ ಕಾರಣವಾಗಿದೆ. ಎ1 ಆರೋಪಿ ಆರ್‌ಎಫ್‌ಓ, ಎ2 ಆರೋಪಿ ಎಸಿಎಫ್, ಎ3 ಆರೋಪಿ ಡಿಎಫ್‌ಓ ಆಗಿದ್ದು, ಯುವಕನ ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಬಿಬಿಎಂಪಿ ಅರಣ್ಯಾಧಿಕಾರಿಗಳಿಗೆ ಕರೆದು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

    ಘಟನೆ ಏನು?
    ಇದೇ ಜೂ.15ರಂದು ಯುವಕ ಅಕ್ಷಯ್ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ ಕೊಂಬೆ ಬಿದ್ದು ಬಸವನಗುಡಿಯ (Basavanagudi) ಬ್ರಹ್ಮ ಚೈತನ್ಯ ಮಂದಿರದ ಬಳಿ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಕೊಂಬೆ ಬೀಳುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರುಗಡೆ ನಿಲ್ಲಿಸಿದ್ದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು.

    ಶ್ರೀನಿವಾಸನಗರದ ನಿವಾಸಿಯಾಗಿರುವ ಅಕ್ಷಯ್ ರಾಜಾಜಿನಗರದರುವ ಖಾಸಗಿ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಮರದ ಕೊಂಬೆ ಬಿದ್ದು ತಲೆಯ ಮಧ್ಯ ಭಾಗಕ್ಕೆ ತೀವ್ರ ಹಾನಿಯಾಗಿತ್ತು. ಮೂಗು, ಬಾಯಿ, ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ಅಕ್ಷಯ್ ತಂದೆಗೆ ಡಯಾಲಿಸಿಸ್ ನಡೆಯುತ್ತಿದ್ದು, ಕುಟುಂಬಕ್ಕೆ ಅಕ್ಷಯ್ ಆಧಾರವಾಗಿದ್ದರು. ಎರಡು ದಿನದ ಹಿಂದೆಯಷ್ಟೇ ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎಂದಿದ್ದರು. ಆದರೆ ಜೂ.19ರ ಮಧ್ಯಾಹ್ನ 1 ಗಂಟೆಗೆ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದರು.ಇದನ್ನೂ ಓದಿ: Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

  • ಜಯನಗರ ಕ್ಷೇತ್ರಕ್ಕೆ ಕೊನೆಗೂ ಅನುದಾನ ಬಿಡುಗಡೆ ಮಾಡಿದ ಡಿಸಿಎಂ

    ಜಯನಗರ ಕ್ಷೇತ್ರಕ್ಕೆ ಕೊನೆಗೂ ಅನುದಾನ ಬಿಡುಗಡೆ ಮಾಡಿದ ಡಿಸಿಎಂ

    – ರಾಜ್ಯ ಸರ್ಕಾರದಿಂದ 10 ಕೋಟಿ ಅನುದಾನ ರಿಲೀಸ್

    ಬೆಂಗಳೂರು: ಜಯನಗರ (Jayanagar Constituency) ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

    ರಾಜ್ಯ ಸರ್ಕಾರ (State Government) 27 ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿ, ಜಯನಗರಕ್ಕೆ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಪತ್ರ ಬರೆದು ಅನುದಾನಕ್ಕೆ ಆಗ್ರಹಿಸಿದ್ದರು. ಜೊತೆಗೆ ಅನುದಾನದ ವಿಚಾರವಾಗಿ ಜಯನಗರದ ಸೆಲೆಬ್ರಿಟಿಗಳು, ಮತದಾರರು, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೋರಾಟ ಮಾಡಿದ್ದರು.

    ಡಿಕೆ ಶಿವಕುಮಾರ್ ಬೆಂಗಳೂರು (Bengaluru) ಉಸ್ತುವಾರಿ ಸಚಿವರಾದ ಮೇಲೆ ಬೆಂಗಳೂರು ಅಧೋಗತಿಗೆ ಹೋಗಿದೆ ಎಂಬ ಶಾಸಕ ಸಿ.ಕೆ ರಾಮಮೂರ್ತಿ ಹೇಳಿಕೆಗೆ ಅನುದಾನ ತಡೆ ಹಿಡಿದಿದ್ದೇನೆ. ರಾಮಮೂರ್ತಿ ತಮ್ಮ ಹೇಳಿಕೆಗೆ ನನಗೆ ಸಮಜಾಯಿಷಿ ನೀಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕೊನೆಗೂ ಜಯನಗರ ಕ್ಷೇತ್ರಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, 10 ಕೋಟಿ ಅನುದಾನ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ – ಜೆಸಿಬಿ ಮೂಲಕ ಮನೆ ಗೋಡೆ ಧ್ವಂಸ

    ಕಳೆದ ಅಕ್ಟೋಬರ್ ಕೊನೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ.ನಂತೆ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

    ನಾಗಸಂದ್ರದಿಂದ ಮಾದಾವರ ಮೆಟ್ರೋ ಸೇವೆ ಲೋಕಾರ್ಪಣೆಗೂ ಮುನ್ನ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಜೊತೆಯಾಗಿ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು ಜಯನಗರದ ಅನುದಾನ ವಿಚಾರವನ್ನು ಪ್ರಸ್ತಾಪಿಸಿ ಮನವಿ ಮಾಡಿದ್ದರು. ಈ ವೇಳೆ, ನಾನು ಬಂದ ಮೇಲೆ ಬೆಂಗಳೂರು ಅಧೋಗತಿ ಆಗೋಯ್ತು ಎಂದು ಅವನು (ಜಯನಗರ ಶಾಸಕ ರಾಮಮೂರ್ತಿ) ಹೇಳಿಕೆಯನ್ನು ನೀಡಿದ್ದ. ನನ್ನ ಜೊತೆ ಮಾತನಾಡಬೇಕಾದರೆ ತಗ್ಗಿಬಗ್ಗಿ ಇರಬೇಕು. ಬೇರೆಯವರ ಜೊತೆಗೆ ಇದ್ದಂತೆ ಇದ್ದರೆ ಆಗುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದನ್ನೂ ಓದಿ: ಬಾಣಂತಿಯರ ಸಾವು ಕೇಸ್ – ಪ್ರಕರಣದಲ್ಲಿ ನನ್ನ ತಪ್ಪಿದ್ರೆ ರಾಜೀನಾಮೆ ಕೊಡಲು ಸಿದ್ಧ: ದಿನೇಶ್ ಗುಂಡೂರಾವ್

  • Tumakuru| ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಚಾಕುವಿನಿಂದ ಇರಿದು ಯುವಕನ ಹತ್ಯೆ

    Tumakuru| ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಚಾಕುವಿನಿಂದ ಇರಿದು ಯುವಕನ ಹತ್ಯೆ

    ತುಮಕೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದು ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿರುವ ಘಟನೆ ತುಮಕೂರಿನ (Tumakuru) ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ರಿಷಾಬ್ ಪಾಷ (20) ಕೊಲೆಯಾದ ಯುವಕ. ಮನೆಯಲ್ಲಿ ಊಟ ಮಾಡುತ್ತಿದ್ದವನನ್ನು ಕರೆಸಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಘಟನೆ ನಡೆದಿದ್ದು, ಹುಡುಗಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾತನಾಡಬೇಕು ಬಾ ಎಂದು ಕರೆಸಿ ಕಿಡಿಗೇಡಿಗಳು ಹೊಟ್ಟೆಭಾಗಕ್ಕೆ ಇರಿದಿದ್ದಾರೆ. ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಯುವಕನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮಣಿಪುರ-ಅಸ್ಸಾಂ ಗಡಿಯ ನದಿಯಲ್ಲಿ ಮಹಿಳೆ ಸೇರಿ 3 ಮೃತದೇಹಗಳು ಪತ್ತೆ

  • ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ಬೆಂಗಳೂರು: ಜಯನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ವಿಚಾರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.

    ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರದಲ್ಲಿ ಬಿಜೆಪಿಯಿಂದ (BJP) ವಿರೋಧ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ವಿರೋಧ ಮಾಡಲಿ ಅಂತಾನೇ ಸುಮ್ಮನೆ ಇರೋದು. ನಾನು ಎಲ್ಲರಿಗೂ ಅನುದಾನ ಕೊಟ್ಟಿದ್ದೇನೆ. ಡಿಸಿಎಂ ನಿಧಿಯ ಹಣ ಕೊಟ್ಟಿರೋದು. ಸಮಸ್ಯೆ ಇದೆ ಎಂದು 10 ಕೋಟಿ ರೂ. ಎಮರ್ಜೆನ್ಸಿ ರಿಲೀಸ್ ಮಾಡಿದ್ದೇನೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಸಮಸ್ಯೆ ಇಲ್ಲ. ಆದರೂ ನನಗೆ ಅನುದಾನ ಕೊಡಬೇಕು ಎಂದು ಅರಿವಿದೆ. ಆದರೆ, ಅವರು ಬಹಳ ದೊಡ್ಡ ಆರೋಪಗಳನ್ನು ಮಾಡಿದ್ದರು. ಸ್ವಲ್ಪ ಆರೋಪಗಳನ್ನ ನೋಡಬೇಕು. ಜಾಸ್ತಿ ಬೇಕೋ, ಕಡಿಮೆ ಬೇಕೋ ಅಂತ ನೋಡಬೇಕಲ್ಲವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಈಗಾಗಲೇ ಜಯನಗರಕ್ಕೆ 40 ಕೋಟಿ ರೂ. ಕೊಟ್ಟಿದ್ದೇವೆ. ಎಲ್ಲಾ ಕ್ಷೇತ್ರಕ್ಕೆ 600 ಕೋಟಿ ರೂ. ಪ್ರಾಜೆಕ್ಟ್ ಕೊಡುತ್ತಿದ್ದೇವೆ. ಆ ಕ್ಷೇತ್ರ ಒಂದಕ್ಕೆ 40 ಕೋಟಿ ರೂ. ಸೇರಿದೆ. ಆದರೆ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ ಇಲ್ಲವೇ ಇಲ್ಲ. ಕಣ್ಣಲ್ಲಿ ಬಂದು ನೋಡಬೇಕು ಎಂದು ಶಾಸಕರು ಕೇಳಿದ್ದಾರೆ. ಕ್ಷೇತ್ರಕ್ಕೆ ಹೋಗಿ ನೋಡುತ್ತೇನೆ. ಟೀಕೆ ಮಾಡುವವರು ಮಾಡಲಿ. ಟೀಕೆ ಮಾಡುವವರನ್ನು ಬೇಡ ಅನ್ನುವುದಕ್ಕೆ ಆಗುವುದಿಲ್ಲ. ಮೊಟ್ಟೆಯಾದರು ಹೊಡೆಯಲಿ, ಕಲ್ಲಾದರೂ ಹೊಡೆಯಲಿ, ಕಪ್ಪು ಬಾವುಟವಾದರು ತೋರಿಸಲಿ ಎಂದು ಹೇಳಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

  • ಬೆಂಗಳೂರಿನ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲೂ ರಾಜಕೀಯ – ಜಯನಗರಕ್ಕಿಲ್ಲ ಫಂಡ್; ಆಕ್ರೋಶ

    ಬೆಂಗಳೂರಿನ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲೂ ರಾಜಕೀಯ – ಜಯನಗರಕ್ಕಿಲ್ಲ ಫಂಡ್; ಆಕ್ರೋಶ

    – ಬೇಕು ಅಂತಾನೆ ಕೊಟ್ಟಿಲ್ಲ ಅಂದ್ರು ಡಿಸಿಎಂ

    ಬೆಂಗಳೂರು: ಬೆಂಗಳೂರು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ರಾಜಕೀಯ ನಡೆದಿದೆ. ಬಿಜೆಪಿ ಶಾಸಕ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಡಿಸಿಎಂ ಹೊರಗಿಟ್ಟಿದ್ದಾರೆ.

    ರಾಜ್ಯ ಸರ್ಕಾರ ಬೆಂಗಳೂರಿನ 27 ವಿಧಾನಸಭಾ ಕ್ಚೇತ್ರಗಳಿಗೆ ತಲಾ 10 ಕೋಟಿಯಂತೆ 270 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಬೇಕಂತಲೇ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರತಿನಿಧಿಸುವ ಜಯನಗರ ಕ್ಷೇತ್ರವನ್ನು ಹೊರಗಿಟ್ಟಿದ್ದಾರೆ.

    ಅಸೆಂಬ್ಲಿಯಲ್ಲಿ ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಶಾಸಕ ಸಿ.ಕೆ.ರಾಮಮೂರ್ತಿ ಮಾತಾಡಿದ್ದರು ಎಂಬ ಕಾರಣಕ್ಕೆ ಜಯನಗರಕ್ಕೆ ಅನುದಾನ ನೀಡಿಲ್ಲ ಎಂದು ಹೇಳಲಾಗಿದೆ. ಇದು ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

    ಇದು ಸೇಡಿನ ಕ್ರಮ. ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಈ ಸರ್ಕಾರ ಶಿಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಡಿಸಿಎಂ ಮಾತಾಡಿದ್ದು, ನಾನೇ ಬೇಕು ಅಂತಾ ಜಯನಗರಕ್ಕೆ ಅನುದಾನ ಕೊಟ್ಟಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

  • ಬೈಕ್ ಬೆಲೆ 25 ಸಾವಿರ – ಗಾಡಿ ಮೇಲಿದೆ 225 ಕೇಸ್!

    ಬೈಕ್ ಬೆಲೆ 25 ಸಾವಿರ – ಗಾಡಿ ಮೇಲಿದೆ 225 ಕೇಸ್!

    ಬೆಂಗಳೂರು: ಆ ದ್ವಿಚಕ್ರ ವಾಹನದ (Two Wheeler) ಬೆಲೆ 35-30 ಸಾವಿರ ಇರಬಹುದು. ಆದರೆ ಆ ವಾಹನದ ಮೇಲೆ ಬರೋಬ್ಬರಿ 225 ಕೇಸ್ ದಾಖಲಾಗಿರುವಂತಹ ಘಟನೆ ನಡೆದಿದೆ.

    ಹೌದು, ಜಯನಗರದ ಏಳುಮಲೈ ಅವರ ಟೂ ವೀಲರ್‌ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಮೂಲಕ ಕೇವಲ 25 ಸಾವಿರ ರೂ.ಯ ದ್ವಿಚಕ್ರ ವಾಹನಕ್ಕೆ ಬರೋಬ್ಬರಿ 1,34,000 ರೂ. ದಂಡ ಬಿದ್ದಿದೆ.

    ನಗರದಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರೋ ಪ್ರಕರಣ ಹೆಚ್ಚುತ್ತಾ ಇದ್ದಾಗ ಈ ಟೂ ವೀಲರ್ ಪತ್ತೆಯಾಗಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ (Traffic Fine)ಮೊತ್ತವನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

    ಸದ್ಯ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಸ್ಥಳದಲ್ಲಿ ಕಟ್ಟಿಸಿಕೊಂಡು ಬಾಕಿ ದಂಡವನ್ನು ಪಾವತಿಸಲು ಏಳುಮಲೈಗೆ ಜಯನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದ ಕೇಸ್‌ – ನಟ ದರ್ಶನ್‌ಗೆ ಕ್ಲೀನ್‌ ಚಿಟ್‌, ಶೀಘ್ರವೇ ಚಾರ್ಜ್‌ಶೀಟ್‌

  • ಬರೋಬ್ಬರಿ 500 ಸಿಸಿಟಿವಿ ಪರಿಶೀಲಿಸಿ ಯುವತಿ ಬಟ್ಟೆ ಎಳೆದವನ ಬಂಧನ!

    ಬರೋಬ್ಬರಿ 500 ಸಿಸಿಟಿವಿ ಪರಿಶೀಲಿಸಿ ಯುವತಿ ಬಟ್ಟೆ ಎಳೆದವನ ಬಂಧನ!

    ಬೆಂಗಳೂರು: ಕೆಲವರಿಗೆ ತಾನು ಏನ್ ಮಾಡ್ತಿದ್ದೀನಿ, ಎಲ್ಲಿದ್ದೀನಿ, ಇದರ ಎಫೆಕ್ಟ್ ಮುಂದೆ ಏನ್ ಆಗಬಹುದು ಅನ್ನೋ ಸಣ್ಣ ಸೆನ್ಸ್ ಕೂಡ ಇರೋದಿಲ್ಲ. ಇದಕ್ಕೆ ತಾಜಾ ಉದಾರಣೆ ಎಂಬಂತೆ ಬೆಂಗಳೂರಿನ ಸೌತ್ ಎಂಡ್ ಬಳಿಯ ಡಿಸಿಪಿ ಕಚೇರಿ ಮುಂಭಾಗದಲ್ಲಿ ನಡೆದ ಅದೊಂದು ಘಟನೆ.

    ಕಳೆದ ನವೆಂಬರ್ 6ರಂದು ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಸಿಗ್ನಲ್ ಬಳಿ ಯುವತಿಯೊಬ್ಬರು ಬೈಕ್ ನಿಲ್ಲಿಸಿಕೊಂಡಿದ್ರು. ಇದೇ ವೇಳೆ ಹರೀಶ್ ಎಂಬಾತ ತನ್ನ ಬೈಕ್‍ನ ಪಕ್ಕದಲ್ಲಿ ನಿಲ್ಲಿಸಿದ್ದ. ಸಿಗ್ನಲ್ ಬಿಟ್ಟ ವೇಳೆ ಪರಸ್ಪರ ಬೈಕ್ ಸಣ್ಣದಾಗಿ ಟಚ್ ಆಗಿತ್ತು. ಅಷ್ಟೇ ಮುಂದೆ ಹೋಗ್ತಿದ್ದ ಯುವತಿಯ ಬೈಕ್ ಅಡ್ಡಗಟ್ಟಿದ ಬೈಕ್ ಸವಾರ ಹರೀಶ್, ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ.

    ಡಿಸಿಪಿ ಕಚೇರಿ ಮುಂದೆಯೇ ಯುವತಿ ಬಟ್ಟೆ ಎಳೆದಾಡಿದ ವಿಚಾರ ಸಾರ್ವಜನಿಕರನ್ನೇ ಶಾಕ್ ಆಗುವಂತೆ ಮಾಡಿತ್ತು. ವಿಚಾರ ತಿಳಿದ ಜಯನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ ಆರೋಪಿ ಯಾರು, ಹೇಗಿದ್ದ ಯಾವ್ ಕಡೆ ಹೋದ ಅನ್ನೋ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಡಿಸಿಪಿ ಕಚೇರಿ ಮುಂಭಾಗಲ್ಲಿ ನಡೆದ ಘಟನೆಯನ್ನು ಸಿರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಸುಮಾರು 500 ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಬಿನ್ನಿಪೇಟೆಗೆ ಕರೆದುಕೊಂಡು ಹೋಗಿತ್ತು. ಹರೀಶ್ ಮನೆಯನ್ನು ಪತ್ತೆ ಮಾಡಿದ ಪೊಲೀಸರು ಆರಾಮಾಗಿ ಟಿವಿ ನೋಡ್ತಿದ್ದ ಆರೋಪಿ ಹರೀಶ್‍ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

    ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಇಷ್ಟೆಲ್ಲಾ ದೊಡ್ಡ ಸುದ್ದಿ ಆಗಿ ಹರೀಶ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ರು ಕೂಡ ಆರೋಪಿ ಹರೀಶ್‍ಗೆ ಈ ಬಗ್ಗೆ ಯಾವುದೇ ಮಾಹಿತಿ ಇರ್ಲಿಲ್ವಂತೆ. ಕೋಪದ ಕೈಗೆ ಬುದ್ದಿಕೊಟ್ಟು ಯುವತಿಯ ತಂಟೆಗೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣ ಬೆಸ್ಟ್ ಎಗ್ಸಾಂಪಲ್.

  • ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್ – ತೆರವು ಖಂಡಿಸಿ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

    ಬೆಂಗಳೂರು: ಕಳೆದ ಒಂದು ವಾರದಿಂದ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಬಿಸಿ ಈಗ ಮಲ್ಲೇಶ್ವರಂ ಮಾರ್ಕೆಟ್‌ಗೂ (Malleshwaram Market) ತಟ್ಟಿದ್ದು, ಬೀದಿಬದಿ ವ್ಯಾಪಾರಿಗಳ (Street Vendors) ಗೋಳು ಹೇಳತೀರದಂತಿದೆ.

    ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮಲ್ಲೇಶ್ವರಂ ಮಾರ್ಕೆಟ್‌ಗೂ ಕಾಲಿಟ್ಟಿದೆ. ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಂಗಡಿಗಳನ್ನು ಎತ್ತಿಸಲಾಗಿದ್ದು, ವ್ಯಾಪಾರಿಗಳು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ

    ನಗರದ ಬೇರೆ ಬೇರೆ ಕಡೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಆರಂಭಿಸಿರುವ ಬಿಬಿಎಂಪಿ ಬುಧವಾರ ಸಂಜೆ ದಿಢೀರ್ ಅಂತಾ ಮಲ್ಲೇಶ್ವರಂ 8ನೇ ಕ್ರಾಸ್‌ನ ಮಾರ್ಕೆಟ್‌ನಲ್ಲೂ ಕಾರ್ಯಚರಣೆ ಆರಂಭಿಸಿತ್ತು. ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಮಾರ್ಷಲ್‌ಗಳ ಸಹಾಯದಿಂದ ತೆರವು ಮಾಡಲಾಯಿತು. ಆರಂಭದಲ್ಲಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಆದರೆ ಪೊಲೀಸರು ದೊಡ್ಡ ಮಟ್ಟದ ವಿರೋಧಕ್ಕೆ ಆಸ್ಪದ ನೀಡದೆ ಸಂಪೂರ್ಣ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ವ್ಯಾಪಾರಿಗಳು ಕೂಡ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

    ಈ ಮಧ್ಯೆ ವ್ಯಾಪಾರಿಗಳ ತೆರವು ವಿಚಾರ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಜಿಎಸ್‌ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನು ಫುಟ್‌ಪಾತ್‌ನಲ್ಲಿ ಮಾರುತ್ತಿದ್ದಾರೆ. ತಾವು ಬೀದಿಬದಿ ವ್ಯಾಪಾರಿ ಅಂತಾ ಗುರುತಿನ ಚೀಟಿ ಇದ್ದರೆ ವ್ಯಾಪಾರ ಮಾಡಬಹುದು. ರಸ್ತೆಯಿಂದ 10 ಮೀಟರ್ ದೂರದಲ್ಲಿ ಪಾದಚಾರಿಗಳಿಗೆ ತೊಂದರೆ ಆಗದಂತೆ ಮಾಡಬಹುದು ಎಂದಿದ್ದಾರೆ. ಆದರೆ, ಈ ಮಧ್ಯೆ ಕಾರ್ಡ್ ಇರುವ ಭಾಗಗಳಲ್ಲೂ ತೆರವು ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಮಿಷನರ್ ಹುಸಿ ಭರವಸೆ ನೀಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆ – 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

    ಮಲ್ಲೇಶ್ವರಂ, ಜಯನಗರ (Jayanagar), ಸೇರಿ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸುತ್ತಿರುವುದನ್ನು ಖಂಡಿಸಿ ಇಂದು ಬೀದಿಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸುತ್ತಿದೆ. ಬೆಳಗ್ಗೆ 11 ಘಂಟೆಗೆ ಜಯನಗರ 4 ಬ್ಲಾಕ್‌ನಲ್ಲಿ ಬಿಡಿಎ ಮಾರ್ಕೆಟ್ ಕಾಂಪ್ಲೆಕ್ಸ್ ಹತ್ತಿರ ಬಿಬಿಎಂಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿ ನಿರ್ಧಾರ ಬೀದಿಬದಿಯಲ್ಲಿ ಜೀವನ ಮಾಡುತ್ತಿದ್ದ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿರುವುದಂತು ಸತ್ಯ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ

  • ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ!

    ಬೆಂಗಳೂರು: ಮೆಟ್ರೋದಲ್ಲಿ (Namma Metro) ಪ್ರಯಾಣಿಸುವ ವೇಳೆ ಗೋಬಿ ಮಂಚೂರಿಯನ್ನು ಸೇವಿಸಿದ ವ್ಯಕ್ತಿಗೆ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದಾರೆ.

    ವ್ಯಕ್ತಿ ಮೆಟ್ರೋ ಪ್ರಯಾಣದ ವೇಳೆ ಗೋಬಿ ಸೇವಿಸುತ್ತಿರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದೆ. ಬಳಿಕ ಈ ವಿಚಾರ ಬಿಎಂಆರ್‌ಸಿಎಲ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೆಟ್ರೋ ನಿಗಮ ವ್ಯಕ್ತಿಯಿಂದ ದಂಡ ವಸೂಲಿ ಮಾಡಿದೆ.‌ ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಕಾಲದ ರಾವಣ – ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ

    ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಜಯನಗರದ (Jayanagar) ಪ್ರತಿಷ್ಠಿತ ಆಭರಣ ಮಳಿಗೆ ಒಂದರ ಉದ್ಯೋಗಿಯಾಗಿದ್ದಾನೆ. ಆತ ಪ್ರತಿದಿನ ಸಂಪಿಗೆ ರೋಡ್ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

    ವೀಡಿಯೋ ಗಮನಕ್ಕೆ ಬಂದ ಬಳಿಕ ಎಂದಿನಂತೆ ನಿಲ್ದಾಣಕ್ಕೆ ಬಂದಾಗ ಆತನನ್ನು ಅಧಿಕಾರಿಗಳು ತಡೆದಿದ್ದಾರೆ. ಬಳಿಕ ದಂಡ ವಿಧಿಸಿ ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು, ಮುಂದೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಕ್ತ ವಿವಿಯಲ್ಲಿ 250 ಕೋಟಿ ಅಕ್ರಮ – ಎಫ್‌ಐಆರ್‌ ದಾಖಲಿಸಿದ ಸಿಬಿಐ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]