Tag: jayamma

  • ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಿಧನ

    ನ್ನಡದ ಖ್ಯಾತ ನಿರ್ಮಾಪಕಿ, ಡಾ.ರಾಜ್ ಕುಮಾರ್ ಪತ್ನಿ ಪಾರ್ವತಮ್ಮನವರ ಸಹೋದರಿ ಎಸ್.ವಿ. ನಾಗಮ್ಮನವರು ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 81ರ ವಯಸ್ಸಿನ ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

    ಪಾರ್ವತಮ್ಮನವರಿಗೆ ಬೆನ್ನೆಲುಬಾಗಿಯೂ ನಿಂತಿದ್ದ ನಾಗಮ್ಮನವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿದ್ದರು. ಸಹೋದರಿಯನ್ನು ಕಳೆದುಕೊಂಡ ನಂತರ ಕೊಂಚ ಅವರು ಬಳಲಿದ್ದರು. ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ ಮತ್ತು ಮಗ ಮಹೇಶ್ ಮೊಮ್ಮಕ್ಕಳನ್ನು ಅವರು ಅಗಲಿದ್ದು, ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.

  • ಅಂಗನವಾಡಿ ಸಿಬ್ಬಂದಿಗೆ ಕನಿಷ್ಠ ವೇತನದ ಕೂಗಿನ ನಡುವೆ ಶುರುವಾಗಿದೆ ಮೊಟ್ಟೆ ಕಿರಿಕಿರಿ

    ಅಂಗನವಾಡಿ ಸಿಬ್ಬಂದಿಗೆ ಕನಿಷ್ಠ ವೇತನದ ಕೂಗಿನ ನಡುವೆ ಶುರುವಾಗಿದೆ ಮೊಟ್ಟೆ ಕಿರಿಕಿರಿ

    ಬೆಂಗಳೂರು: ಅಂಗನವಾಡಿ ಸಿಬ್ಬಂದಿಗೆ ಕನಿಷ್ಠ ವೇತನದ ಕೂಗಿನ ನಡುವೆ ಮೊಟ್ಟೆ ಕಿರಿಕಿರಿ ಶುರುವಾಗಿದೆ.

    ಸರ್ಕಾರ ನೀಡುವ 10 ಸಾವಿರ ಗೌರವ ಧನವೂ ಮೊಟ್ಟೆಯಿಂದ ಖಾಲಿಯಾಗುತ್ತಿದೆ. ಮೊಟ್ಟೆ ಪೆಟ್ಟಿನಿಂದ ಅಂಗನವಾಡಿ ಸಿಬ್ಬಂದಿ ಕಿಂಚಿತ್ತು ಹಣ ಪೋಲು ಮಡುವಂತಿಲ್ಲ. ಸರ್ಕಾರ ನಿಡುತ್ತಿರುವ 5 ರೂ. ನಿಂದ ಮೊಟ್ಟೆಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳಲ್ಲಿ ಮೊಟ್ಟೆ ಬೆಲೆ ಪ್ರಸ್ತುತ 5.5 ರೂ. ಅಂದರೆ 6 ರೂ. ಗೆ ಮಾರಾಟವಾಗುತ್ತಿದೆ. ಈ ಕಾರಣ ಬಾಕಿ ಮೊತ್ತ ಅಂಗನವಾಡಿ ಸಿಬ್ಬಂದಿಯೇ ನೀಡಿ ತರಬೇಕಾದ ಅನಿವಾರ್ಯತೆ ಬಂದಿದೆ. ಇದನ್ನೂ ಓದಿ: ಹಿಜಬ್ ಧರಿಸಿದ್ರೆ ನಾಳೆಯಿಂದ ಪಂಚೆ, ಶಾಲು, ರುದ್ರಾಕ್ಷಿಯೊಂದಿಗೆ ವಿದ್ಯಾರ್ಥಿಗಳು ಹಾಜರ್

    ಸರ್ಕಾರವು ಶಾಲಾ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡುತ್ತಿದೆ. ಸರ್ಕಾರ ಪ್ರತಿ ಮೊಟ್ಟೆಗೆ 5 ರೂ. ಬೆಲೆ ನೀಡುತ್ತಿದೆ. ಬಾಲ ವಿಕಾಸ ಸಮಿತಿಯ ನೇತೃತ್ವದಲ್ಲಿ ಸ್ಥಳೀಯವಾಗಿ ಮೊಟ್ಟೆ ಖರೀದಿಗೆ ಪ್ರತಿ ಮೊಟ್ಟೆಯ ಮೇಲೆ ಬೆಲೆ 5 ರೂ. ಮಾತ್ರ ಸರ್ಕಾರ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಬೆಲೆ 6 ರೂ. ಗೆ ಒಂದು ಮೊಟ್ಟೆ ಮಾರಾಟವಾಗುತ್ತಿದೆ. ಇದರಿಂದಾಗಿ ಅಂಗನವಾಡಿ ಸಿಬ್ಬಂದಿಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಇದನ್ನೂ ಓದಿ: ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ

    ಮೊಟ್ಟೆ ಬೆಲೆಯಲ್ಲಿ 5 ರೂ. ಗಿಂತ ಹೆಚ್ಚು ಬೆಲೆ ಇದ್ದರೆ ಅಂಗನವಾಡಿ ಕಾರ್ಯಕರ್ತೆಯರೇ ಕೈಯಿಂದ ಹಣ ಹಾಕಿ ತರಬೇಕಾಗಿದೆ. ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು 62 ಸಾವಿರ ಎಲ್ಲಾ ಕೇಂದ್ರಗಳಲ್ಲೂ ಮೊಟ್ಟೆ ಬೆಲೆಯ ಏರುಪೇರಿನಿಂದಾಗಿ ಸಮಸ್ಯೆ ಎದುರಾಗಿದೆ.

    ಗರ್ಭಿಣಿ-ಬಾಣಂತಿಯರಿಗೆ ಪ್ರತಿ ತಿಂಗಳು 25 ಮೊಟ್ಟೆ ನೀಡಬೇಕು. 3 ರಿಂದ 6 ವರ್ಷದ ಮಕ್ಕಳಿಗೆ ಪ್ರತೀ ತಿಂಗಳು ಎಂಟು ಮೊಟ್ಟೆ ನೀಡಬೇಕು. ಮೊಟ್ಟೆ ಬೆಲೆ ಏರುಗತಿಯಾಗುತ್ತಿರುವದರಿಂದ ಅಂಗನವಾಡಿ ಸಿಬ್ಬಂದಿಗೆ ಬರೆಯೆಳೆದಂತಾಗಿದೆ. ಈ ಸಮಸ್ಯೆಯನ್ನು ಸರ್ಕಾರ ಕೂಡಲೇ ಪರಿಹರಿಸುವಂತೆ ಅಂಗನವಾಡಿ ಸಿಬ್ಬಂದಿ ಬೇಡಿಕೆಯಿಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಕಾರ್ಯದರ್ಶಿ ಜಯಮ್ಮ ಕೂಡಾ ಈ ಕುರಿತು ಒತ್ತಾಯಿಸುತ್ತಿದ್ದಾರೆ.