Tag: Jayam Ravi

  • ಪ್ರೇಯಸಿ ಜೊತೆ ಜಯಂ ರವಿ ಮ್ಯಾಚಿಂಗ್ ಮ್ಯಾಚಿಂಗ್!

    ಪ್ರೇಯಸಿ ಜೊತೆ ಜಯಂ ರವಿ ಮ್ಯಾಚಿಂಗ್ ಮ್ಯಾಚಿಂಗ್!

    ಕಾಲಿವುಡ್ ನಟ ಜಯಂ ರವಿ (Jayam Ravi) ಸೀಕ್ರೆಟ್ ರಿಲೇಶನ್‌ಶಿಪ್ ಈಗಂತೂ ಸೀಕ್ರೆಟಾಗಿ ಉಳಿದಿಲ್ಲ. ಜಯಂ ರವಿ ಹಾಗೂ ಸಿಂಗರ್ ಕೆನೀಶಾ ಕಾರ್ಯಕ್ರಮವೊಂದರಲ್ಲಿ ಟ್ವಿನ್ನಿಂಗ್ ಡ್ರೆಸ್‌ಕೋಡ್ ಕಾಣಿಸಿಕೊಂಡಿದ್ದು, ಇವರಿಬ್ಬರ ಲವ್ ರಿಲೇಶನ್‌ಶಿಪ್‌ಗೆ ಬಗೆಗಿನ ಚರ್ಚೆಗೆ ಮತ್ತಷ್ಟು ಬಲಬಂದಂತಿದೆ.

    ಕೆನೀಶಾ (Kenisha) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಜಯಂ ರವಿ ವಿಚ್ಛೇದನ ಘೋಷಿಸಿದ್ದಾರೆ ಅನ್ನೋದಾಗಿ ಪತ್ನಿ ಆರತಿ ಹೇಳಿಕೊಂಡಿದ್ದರು. ಇತ್ತೀಚೆಗೆ ಕೆನೀಶಾ ಜೊತೆ ಜಯಂ ರವಿ ಊರೂರು ಸುತ್ತುವುದು ಜಗಜ್ಜಾಹೀರಾದ ಮೇಲಂತೂ ಪ್ರೀತಿ ವಿಚಾರ ಬಟಾ ಬಯಲಾಗಿದೆ. ಇಷ್ಟು ಸಾಲದು ಎಂದು ಇದೀಗ ಆಫೀಷಿಯಲ್ ಆಗಿಯೇ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

    ಹೌದು, ನಟ ಜಯಂ ರವಿ ಚಿತ್ರ ನಿರ್ಮಾಣ ಪ್ರಾರಂಭಿಸಿದ್ದು, ನಿರ್ಮಾಣ ಸಂಸ್ಥೆ ಉದ್ಘಾಟನೆ ಸಮಾರಂಭವನ್ನ ಚೆನ್ನೈನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವು ರಂಗ ಗಣ್ಯರು ಆಗಮಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಹೈಲೈಟ್ ಆಗಿದ್ದು ಕೆನೀಶಾ. ಕಾರಣ ಜಯಂ ರವಿ ಜೊತೆ ಒಂದೇ ಕಾರ್‌ನಲ್ಲಿ ಬಂದಿಳಿದ ಕೆನೀಶಾ, ರವಿಗೆ ಜೋಡಿಯಂತೆ ಕಂಡುಬಂದರು.

    ಜೊತೆಗೆ ಟ್ವಿನ್ನಿಂಗ್ ಡ್ರೆಸ್‌ನಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಮನೆಯ ಕಾರ್ಯವೆಂಬಂತೆ ಕೆನೀಶಾ ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳನ್ನ ವಿಚಾರಿಸಿಕೊಂಡರು. ಇಷ್ಟೆಲ್ಲಾ ಆದ್ಮೇಲೂ ಕೆನೀಶಾ ಜೊತೆ ಜಯಂ ರವಿ ಪ್ರೀತಿಯ ವಿಚಾರ ಸುಳ್ಳೆಂದು ವಾದಿಸಲು ಸಾಧ್ಯವೇ?

    ಅಂದಹಾಗೆ ಸ್ಟುಡಿಯೋ ಉದ್ಘಾಟನಾ ಸಮಾರಂಭ ನಡೆಯೋದಕ್ಕೂ ಮುನ್ನ ದಿನ ಈ ಜೋಡಿ ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು. ಮೂಲಗಳ ಪ್ರಕಾರ ಕೆನೀಶಾ ಈ ನಿರ್ಮಾಣ ಸಂಸ್ಥೆಯ ಮುಖ್ಯ ಉಸ್ತುವಾರಿಯಾಗಿರುತ್ತಾರೆ ಎಂಬ ವದಂತಿ ಇದೆ.

    ಆರತಿಯೊಂದಿಗೆ ವಿಚ್ಛೇದನ ಮಂಜೂರಾದ ಬಳಿಕ ಜಯಂ ರವಿ ಹಾಗೂ ಕೆನೀಶಾ ಮದುವೆಯಾಗುತ್ತಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಇದುವರೆಗೆ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೇಮಕಥೆ ಈಗ ಜಗಜ್ಜಾಹೀರಾಗಿದ್ದಂತೂ ಸತ್ಯ.

  • ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

    ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

    ಮಿಳು ನಟ ಜಯಂ ರವಿ (Jayam Ravi) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಕಾರಣಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಪತ್ನಿಯೊಂದಿಗೆ ಜಗಳ ಹಾಗೂ ವಿಚ್ಛೇದನ ವಿಚಾರವಾಗಿ ಜಯಂ ರವಿ ಸುದ್ದಿಯಾಗಿದ್ದರು. ಇದೀಗ ಸಿನಿಮಾ ನಿರ್ಮಾಪಕರು ಹಾಗೂ ನಿರ್ಮಾಣ ಸಂಸ್ಥೆಯ ವಿಚಾರವಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    ಜಯಂ ರವಿ ಜೊತೆ ಸಿನಿಮಾ ಮಾಡುವುದಾಗಿ 80 ದಿನಗಳ ಕಾಲ್‌ಶೀಟ್ ಪಡೆದು ಅನಾವಶ್ಯಕವಾಗಿ ಕಾಲಹರಣ ಮಾಡಿದೆ. ಕಾಲ್‌ಶೀಟ್ ಕೊಟ್ಟ ದಿನಾಂಕದಂದು ಯಾವುದೇ ಸಿನಿಮಾ ಮಾಡಿಲ್ಲ. ಹೀಗಾಗಿ, ಜಯಂ ರವಿ ಇದಕ್ಕೆ ಪರಿಹಾರವಾಗಿ ನಿರ್ಮಾಪಕರು 9 ಕೋಟಿ ಹಣ ನೀಡಬೇಕು ಅಂತಾ ಕೋರ್ಟ್ ಮುಂದೆ ಹೋಗಿದ್ದಾರೆ. ಇದನ್ನೂ ಓದಿ: ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್

    ಅಂದಹಾಗೆ ನಟ ರವಿ ಮೋಹನ್ ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 80 ದಿನಗಳ ಕಾಲ್‌ಶೀಟ್ ನೀಡಿದ್ದರಂತೆ. ಈ ಸಂಸ್ಥೆ ಸಿನಿಮಾವನ್ನ ಪ್ರಾರಂಭ ಕೂಡ ಮಾಡಿಲ್ಲ. ಅಲ್ಲದೇ ಆ ಕಾಲ್‌ಶೀಟ್ ಕೊಟ್ಟ ಟೈಂನಲ್ಲಿ ಜಯಂ ರವಿ ಬೇರೆ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಕಾಲ್‌ಶೀಟ್ ಮೇಲೆ ಎರಡು ಸಿನಿಮಾಗಳ ಆಫರ್ ಕೂಡಾ ಬಂದಿದ್ದರೂ ಒಪ್ಪಿಕೊಳ್ಳಲಿಲ್ಲ.

    ಸುಳ್ಳು ಭರವಸೆ ನೀಡಿ ಸಿನಿಮಾನೂ ಮಾಡದೇ ಇರೋ ಕಾರಣಕ್ಕೆ ಜಯಂ ರವಿ ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೆಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆ ವಿರುದ್ಧ ಹೈದರಾಬಾದ್ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರಂತೆ. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

  • ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಜಯಂ ರವಿ ಜೊತೆ ಬೋಲ್ಡ್ ಆಗಿ ಕಾಣಿಸ್ಕೊಂಡ ವದಂತಿ ಗೆಳತಿ ಕೆನೀಶಾ

    ಮಿಳು ನಟ ಜಯಂ ರವಿ (Jayam Ravi) ಅಲಿಯಾಸ್ ರವಿಮೋಹನ್ ವಿಚ್ಛೇದನ ಘೋಷಿಸಿದ ಬಳಿಕ ಗಾಯಕಿ ಕೆನೀಶಾ (Kenishaa) ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗೇ ಇಬ್ಬರ ನಡುವಿನ ವದಂತಿ ಹೆಚ್ಚಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಜಯಂ ರವಿ ಕೆನೀಶಾ ಆಲ್ಬಂ ಸಕ್ಸಸ್ ಪಾರ್ಟಿ ಕೊಟ್ಟಿದ್ದಾರೆ. ಕೆನೀಶಾ ಫ್ರಾನ್ಸಿಸ್ ಜೊತೆ ಜಯಂ ರವಿ ಬಿಂದಾಸ್ ಆಗಿರುವ ಫೋಟೋ ವೈರಲ್ ಆಗಿದೆ.

    ಕೆನೀಶಾ ಹಾಡಿರುವ (ಅಂಡ್ರುಂ ಇಡ್ರುಂ) ನಯಾ ಆಲ್ಬಂ ರಿಲೀಸ್ ಆಗಿದೆ. ವೀಡಿಯೋ ಕೊನೆಯಲ್ಲಿ ಜಯಂ ರವಿ ಎಂಟ್ರಿ ಇಬ್ಬರ ನಡುವಿಗೆ ಗಾಸಿಪ್‌ಗೆ ತುಪ್ಪ ಸುರಿದಂತಿತ್ತು. ಮ್ಯೂಸಿಕ್ ಆಲ್ಬಂ ರಿಲೀಸ್ ಬೆನ್ನಲ್ಲೇ ಈಗ ಚೆನೈನಲ್ಲಿ ಕೆನೀಶಾ, ಆಕೆಯ ಮ್ಯೂಸಿಕ್ ಟೀಮ್ ಹಾಗೂ ರವಿಮೋಹನ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಫೋಟೋಗಳು ವೈರಲ್ ಆಗಿದೆ. ಕೆನೀಶಾ ಹಾಗೂ ಜಯಂ ರವಿ ಪರಸ್ಪರ ಭಾರೀ ಆಪ್ತತೆಯಿಂದ ಪಬ್‌ನಲ್ಲಿ ಸಕ್ಸಸ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

    ರವಿ ಜೀವನದಲ್ಲಿ ಕೆನೀಶಾ ಪ್ರವೇಶ ಆಗಿದ್ದಕ್ಕೆ ಏಕಪಕ್ಷೀಯವಾಗಿ ರವಿ ತಮಗೆ ವಿಚ್ಛೇದನ ಘೋಷಿಸಿದ್ದಾರೆ ಎಂದು ರವಿ ಪತ್ನಿ ಆರತಿ ಆರೋಪ ಮಾಡಿದ್ದರು. ಬಳಿಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಜಗಳ ಬೀದಿಗೆ ಬಂದಿತ್ತು. ಇಂದಿಗೂ ಪತ್ನಿ ಆರತಿ ಜೊತೆ ನಟ ರವಿಯ ವಿಚ್ಛೇದನವಾಗಿಲ್ಲ. ಅದಾಗಲೇ ರವಿ ಬಹಿರಂಗವಾಗಿ ಕೆನೀಶಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

    ನಟ ಜಯಂ ರವಿ ಪತ್ನಿ ಆರತಿ ಜೊತೆ 15 ವರ್ಷಗಳ ಸಂಸಾರ ನಡೆಸಿ ಇತ್ತೀಚೆಗಷ್ಟೇ ಡಿವೋರ್ಸ್ ಘೋಷಣೆ ಮಾಡಿದ್ದರು. ರವಿಗೆ ಕೆನೀಶಾ ಜೊತೆ ಸಂಬಂಧ ಇರೋದಕ್ಕೆ ಡಿವೋರ್ಸ್‌ಗೆ ಒತ್ತಾಯಿಸುತ್ತಿದ್ದಾರೆ ಅನ್ನೋದಾಗಿ ಆರತಿ ಹೇಳಿದ್ದರು. ಇದೀಗ ಆರತಿ ಆರೋಪದಂತೆ ರವಿ ಕೆನೀಶಾ ಸ್ನೇಹದ ಬಾರ್ಡರ್ ಮೀರಿ ಆಪ್ತರಾಗಿರುವಂತಿದೆ. ಖ್ಯಾತ ನಟನಾಗಿರುವ ರವಿ ಕೆನೀಶಾಗಾಗಿ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸ್ಕೊಂಡಿದ್ದೂ ಕೂಡ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಕೆನೀಶಾ ಜೊತೆಗೆ ಯಾವುದೇ ಸಂಬಂಧವನ್ನೂ ರವಿ ಇದುವರೆಗೂ ಘೋಷಿಸಿಲ್ಲ. ಇದನ್ನೂ ಓದಿ: ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

  • ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ

    ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ

    ಮಿಳು ನಟ ಜಯಂ ರವಿ (Jayam Ravi) ದಾಂಪತ್ಯದಲ್ಲಿ ಬಿರುಗಾಳಿ ಎದ್ದು ಅದು ಜಗಜ್ಜಾಹೀರಾಗಿತ್ತು. ಇದೀಗ ಪತ್ನಿ ಆರತಿ ಜೊತೆ ನಟ ರವಿ ವಿಚ್ಛೇದನ ಪ್ರಗತಿಯಲ್ಲಿದ್ದಾಗಲೇ ವದಂತಿ ಗೆಳತಿ ಜೊತೆ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಮಿಳುನಾಡಿನ ಕುಂದ್ರಕುಡಿ ಮುರುಗನ್ ದೇವಸ್ಥಾನದಲ್ಲಿ ಗೆಳತಿ ಕೆನಿಶಾ ಫ್ರಾನ್ಸಿಸ್ (Kenishaa Francis) ಜೊತೆ ಕಾಣಿಸ್ಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ದೇವಸ್ಥಾನದಲ್ಲಿ ಪ್ರವೇಶ ಮಾಡಿಲ್ಲವಾದರೂ ದೇವಸ್ಥಾನದ ಕಡೆಯಿಂದ ಹೊರಗೆ ಬಂದಿರುವ ಫೋಟೋದಲ್ಲಿ ಜಯಂ ರವಿ ಪಕ್ಕ ವದಂತಿ ಗೆಳತಿ ಕೆನಿಶಾ ಫ್ರಾನ್ಸಿಸ್ ಹಾರ ಹಾಕಿಕೊಂಡು ನಿಂತಿದ್ದಾರೆ. ಈ ವಿಚಾರ ಇದೀಗ ಕಾಲಿವುಡ್‌ನಲ್ಲಿ ಸೆನ್ಷೇಷನಲ್ ಸುದ್ದಿಯಾಗಿ ಹೊರಹೊಮ್ಮಿದೆ.

    ನಟ ರವಿಮೋಹನ್ ಅಲಿಯಾಸ್ ಜಯಂ ರವಿ ಪಕ್ಕ ಕೆನಿಶಾ ಪರಸ್ಪರ ಹಾರ ಬದಲಿಸಿಕೊಂಡಂತೆ ನಿಂತಿರುವ ಫೋಟೋ ಥಟ್ ಅಂತ ನೋಡಿದವರಿಗೆ ಮದುವೆಯಾದ್ರಾ ಅನ್ನಿಸದೇ ಇರಲ್ಲ. ಆದರೆ ಹಾಗಾಗಲಿಲ್ಲ. ಬದಲಿಗೆ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಹಾರ ಕೊಡಲಾಗಿದ್ದು, ಕೆನಿಶಾ-ರವಿ ಇಬ್ಬರೂ ಹಾರ ಧರಿಸಿ ನಿಂತಿದ್ದಾರೆ. ಆದರೆ ದೇವಸ್ಥಾನದ ಹೊರಗಡೆ ಮಾತ್ರ ಇಬ್ರೂ ಒಟ್ಟಿಗೆ ಕಾಣಿಸ್ಕೊಂಡಿಲ್ಲ. ಭಕ್ತರ ಕಣ್ತಪ್ಪಿಸಿ ಕೆನಿಶಾ ಮುಂಚೆಯೇ ದೇವಸ್ಥಾನ ಪ್ರವೇಶಿಸಿದ್ದರು ಆದರೆ ಜಯಂ ರವಿಗೆ ಅದು ಸುಲಭವಲ್ಲ. ಈಗಾಗ್ಲೇ ಭಾರೀ ಹೆಸರು ಮಾಡಿರುವ ತಮಿಳು ನಟ. ಇವರ ಈ ನಡೆ ಇನ್ನೂ ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

    ಅಂದಹಾಗೆ ಜಯಂ ರವಿ ಪತ್ನಿ ಆರತಿ ಜೊತೆ ದಿಢೀರ್ ಡಿವೋರ್ಸ್ ವಿಚಾರ ಭಾರೀ ವಿಕೋಪಕ್ಕೆ ತಿರುಗಿದೆ. ಪತಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಎಂದಿದ್ದರು ಆರತಿ. ವಿಚ್ಛೇದನದ ನೀಡಲು ಪತಿಯಿಂದ ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೇಳಿದ್ದರು ಎಂದು ವದಂತಿ ಹಬ್ಬಿತ್ತು. ಜಯಂ ರವಿ ಹಾಗೂ ಆರತಿ ದಂಪತಿಗೆ ಇಬ್ಬರು ಪುತ್ರರಿದ್ದು, ಮದುವೆಯಾಗಿ 15 ವರ್ಷಗಳ ಅನ್ಯೋನ್ಯ ದಾಂಪತ್ಯದ ಬಳಿಕ ವಿಚ್ಛೇದನ ಪಡೆಯುತ್ತಿರುವುದು ಕುತೂಹಲ. ದಂಪತಿ ನಡುವಿನ ಬಿರುಕಿಗೆ ಸಿಂಗರ್ ಕೆನಿಶಾ ಕಾರಣ ಎನ್ನಲಾಗಿತ್ತು. ಇಬ್ಬರೂ ಗೋವಾದಲ್ಲಿರುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ದೇವಸ್ಥಾನದಲ್ಲಿ ಹಾರ ಹಾಕಿಕೊಂಡು ಅಕ್ಕ ಪಕ್ಕ ನಿಂತಿದ್ದಾರೆ. ಈ ಮೂಲಕ ಜಯಂ ರವಿ ಪತ್ನಿ ಆರತಿ ಸುಳಿವು ಕೊಟ್ಟಿದ್ದ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ.

  • ಜಯಂ ರವಿ ಈಗ ರವಿ ಮೋಹನ್- ಹೆಸರು ಬದಲಿಸಿಕೊಂಡು ಹೊಸ ಜರ್ನಿ ಶುರು ಮಾಡಿದ ನಟ

    ಜಯಂ ರವಿ ಈಗ ರವಿ ಮೋಹನ್- ಹೆಸರು ಬದಲಿಸಿಕೊಂಡು ಹೊಸ ಜರ್ನಿ ಶುರು ಮಾಡಿದ ನಟ

    ಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು ಜಯಂ ರವಿ. ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಅವರೀಗ ಹೆಸರು ಬದಲಿಸಿಕೊಂಡಿದ್ದಾರೆ. ಜಯಂ ರವಿ (Jayam Ravi) ಇನ್ಮುಂದೆ ರವಿ ಮೋಹನ್ (Ravi Mohan) ಆಗಿ ಬದಲಾಗಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುತ್ತಾ ತಾವು ಇಲ್ಲಿವರೆಗೆ ಜಯಂ ರವಿಗೆ ನೀಡಿದ ಬೆಂಬಲವನ್ನು ರವಿ ಮೋಹನ್ ಹೆಸರಿಗೂ ನೀಡಬೇಕು ಎಂದಿದ್ದಾರೆ. ಇದನ್ನೂ ಓದಿ:ಅನಯಾ ವಸುಧಾ ಜೊತೆ ಚಾರ್ಲಿ-777 ನಿರ್ದೇಶಕ ಕಿರಣ್ ರಾಜ್ ಎಂಗೇಜ್

    ಜಯಂ ರವಿ ಅವರು ರವಿ ಮೋಹನ್ ಆಗಿ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಹೊಸ ಪಯಣ ಕೂಡ ಆರಂಭಿಸಿದ್ದಾರೆ. ‘ರವಿ ಮೋಹನ್ ಸ್ಟುಡಿಯೋಸ್’ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ, ಈ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೆಯ ಸಿನಿಮಾಗಳನ್ನು, ನಿರ್ದೇಶಕರು ಹಾಗೂ ಹೊಸ ನಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವುದಾಗಿ ರವಿ ಮೋಹನ್ ಘೋಷಣೆ ಮಾಡಿದ್ದಾರೆ.

     

    View this post on Instagram

     

    A post shared by Ravi Mohan (@jayamravi_official)

    ರವಿ ಮೋಹನ್ ತಮ್ಮನ್ನು ಇಲ್ಲಿವರೆಗೆ ಬೆಳೆಸಿದ ಹಾಗೂ ಬೆಂಬಲಿಸಿ ಅಭಿಮಾನಿಗಳಿಗೆ ಏನಾದರೂ ಮರಳಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ಮೋಹನ್ ಫ್ಯಾನ್ಸ್ ಕ್ಲಬ್ ಗಳು ರವಿ ಮೋಹನ್ ಫ್ಯಾನ್ಸ್ ಫೌಂಡೇಶನ್ ಎಂಬ ರಚನಾತ್ಮಕ ಸಂಸ್ಥೆಯಾಗಿ ಪರಿವರ್ತನೆಯಾಗಿವೆ. ಈ ಫೌಂಡೇಷನ್ ಮೂಲಕ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವುದಾಗಿ ರವಿ ಮೋಹನ್ ತಿಳಿಸಿದ್ದಾರೆ.

  • ಡಿವೋರ್ಸ್ ಬಳಿಕ ಪ್ರಿಯಾಂಕಾ ಜೊತೆ 2ನೇ ಮದುವೆಯಾದ್ರಾ ಜಯಂ ರವಿ?

    ಡಿವೋರ್ಸ್ ಬಳಿಕ ಪ್ರಿಯಾಂಕಾ ಜೊತೆ 2ನೇ ಮದುವೆಯಾದ್ರಾ ಜಯಂ ರವಿ?

    ಸೌತ್ ನಟ ಜಯಂ ರವಿ (Jayama Ravi) ಇತ್ತೀಚೆಗೆ ಆರತಿ ಜೊತೆಗಿನ ಡಿವೋರ್ಸ್ ಕುರಿತು ಘೋಷಿಸಿದ ಬೆನ್ನಲ್ಲೇ ಪ್ರಿಯಾಂಕಾ ಮೋಹನ್ (Priyanka Mohan) ಜೊತೆ ಮದುವೆಯಾಗಿದ್ದಾರೆ ಎನ್ನಲಾದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    15 ವರ್ಷಗಳ ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಜಯಂ ರವಿ ಸೆ.10ರಂದು ಘೋಷಿಸಿದ್ದರು. ಬಳಿಕ ಗಾಯಕಿ ಕೆನಿಷಾ ಜೊತೆ ಜಯಂ ರವಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬಂದ ಬೆನ್ನಲ್ಲೇ ಇದು ಸುಳ್ಳು ಸುದ್ದಿ ಎಂದು ನಟ ಜಯಂ ರವಿ ಸ್ಪಷ್ಟನೆ ನೀಡಿದ್ದರು. ಈಗ ಜಯಂ ರವಿ 2ನೇ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

    ಅಸಲಿಗೆ ಕನ್ನಡದ ನಟಿ ಪ್ರಿಯಾಂಕಾ ಮೋಹನ್ ಜೊತೆ ಜಯಂ ರವಿ ಮದುವೆ ಆಗಿಯೇ ಇಲ್ಲ. ಸದ್ಯ ವೈರಲ್ ಆಗಿರುವ ಫೋಟೋ ‘ಬ್ರದರ್’ ಸಿನಿಮಾದಲ್ಲಿರುವ ತುಣುಕಾಗಿದೆ. ಈ ಚಿತ್ರದಲ್ಲಿ ಜಯಂ ರವಿ ಮತ್ತು ಪ್ರಿಯಾಂಕಾ ಜೊತೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿನ ನಿಶ್ಚಿತಾರ್ಥದ ತುಣುಕು ನೋಡಿ ನಟನ 2ನೇ ಮದುವೆ ಆಗಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ಚಿತ್ರೀಕರಣ ಫೋಟೋ ಆಗಿದೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    ಅಂದಹಾಗೆ, ಜಯಂ ರವಿ, ಪ್ರಿಯಾಂಕಾ ನಟನೆಯ ‘ಬ್ರದರ್’ ಸಿನಿಮಾ ಇದೇ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ.

  • `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’..ಪೊಲೀಸರ ಮೊರೆ ಹೋದ ಜಯಂ ರವಿ

    `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’..ಪೊಲೀಸರ ಮೊರೆ ಹೋದ ಜಯಂ ರವಿ

    ತಮಿಳು ನಟ ಜಯಂ ರವಿ (Jayam Ravi) ಪತ್ನಿ ಆರತಿ ಜೊತೆಗಿನ ವಿವಾಹ ವಿಚ್ಛೇದನ (Divorce) ಘೋಷಣೆ ಬೆನ್ನಲ್ಲೇ ಸಂಸಾರ ಗಲಾಟೆ ಬೀದಿಗೆ ಬಂದಿದೆ. ಪತ್ನಿ ಆರತಿ ಜೊತೆ 15 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದಾಗಿ ಜಯಂ ರವಿ ಘೋಷಿಸಿದ್ದರು. ಬಳಿಕ ಆರತಿ ಕೂಡ ಸೋಶಿಯಲ್ ಮೀಡಿಯಾದಲ್ಲೇ ಪೋಸ್ಟ್ ಮಾಡಿ ಜಯಂ ರವಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿ ಪತಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜಯಂ ರವಿ ತಮ್ಮ ಪತ್ನಿ ವಿರುದ್ಧವೇ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

    ಚೆನೈನಲ್ಲಿ (Chennai) ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಜಯಂರವಿ ಸಂಸಾರ ತಾಪತ್ರಯ ಈಗ ಮುರಾಬಟ್ಟೆಯಾಗಿದೆ. ಕಾರಣ ಪತಿ ವಿಚ್ಛೇದನ ಘೋಷಿಸಿದ ಬಳಿಕ ಪತ್ನಿ ಆರತಿ ಪತಿಯನ್ನ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವಂತೆ, ಕಾರು, ಬೈಕ್ ಹಾಗೂ ಬಟ್ಟೆಗಳು ಜೊತೆಗೆ ಕೆಲವು ಬೆಲೆ ಬಾಳುವ ವಸ್ತುಗಳು ಮನೆಯಲ್ಲೇ ಇರುವ ಕಾರಣ ಮನೆಯೊಳಗೆ ಬರಲು ಜಯಂ ರವಿ ಯತ್ನಿಸಿದ್ದಾರೆ. ಆದರೆ ಪತಿ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಆರತಿ ಪತಿಗೆ ಮನೆಗೆ ಬರಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಜಯಂ ರವಿ ನಿವಾಸವಿರುವ ಜಾಗದ ವ್ಯಾಪ್ತಿಗೆ ಬರುವ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿ ಮನೆಯೊಳಗೆ ಪ್ರವೇಶ ಪಡೆಯಲು ಅನುಮತಿ ಕೋರಿದ್ದಾರೆ. ನಾಲ್ಕು ಗೋಡೆ ಮಧ್ಯೆ ಇದ್ದ ಜಗಳ ಈಗ ಜಗಜ್ಜಾಹೀರಾಗಿದೆ.ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ಓರ್ವ ಸಿಂಗರ್ ಜೊತೆ ಜಯಂ ರವಿ ಹೆಸರು ಥಳುಕು ಹಾಕಿಕೊಂಡಿತ್ತು. ಆಕೆಯೊಂದಿಗೆ ಜಯಂ ರವಿ ಗೋವಾದಲ್ಲಿ ಇದ್ದರಂತೆ. ಈ ವಿಚಾರ ತಿಳಿದು ಪತ್ನಿ ಆರತಿ ಗೋವಾಕ್ಕೆ ತೆರಳಿ ರೆಸಾರ್ಟ್ನಲ್ಲಿ ರಾದ್ಧಾಂತ ಮಾಡಿದ್ದರಂತೆ, ಬಳಿಕ ಪತ್ನಿ ಸುಮ್ಮನಿದ್ದರೆ ಜಯಂ ರವಿ ಅಲ್ಲಿಂದಲೇ ವಿಚ್ಛೇದನ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೋಪಗೊಂಡ ಆರತಿ ಪತ್ನಿಯನ್ನ ಮನೆಗೆ ಬಿಟ್ಟುಕೊಳ್ತಿಲ್ಲ. ಹೀಗಾಗಿ ತಮ್ಮ ವಸ್ತುಗಳನ್ನ ಕೊಡಿಸುವಂತೆ ಜಯಂ ರವಿ ಈಗ ಕೋರ್ಟ್ ಮೊರೆಹೋಗಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಇವರಿಬ್ಬರ ವಿಚ್ಚೇದನ ಗಲಾಟೆ ಅದೆಷ್ಟು ವರ್ಷಗಳು ಮುಂದುವರೆಯುತ್ತದೆಯೋ!

  • ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ಮಿಳು ನಟ ಜಯಂ ರವಿ (Jayam Ravi) ಇತ್ತೀಚೆಗೆ ಆರತಿ (Aarati) ಜೊತೆಗಿನ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈ ಬೆನ್ನಲ್ಲೇ ಅವರ ಡಿವೋರ್ಸ್‌ಗೆ ಕಾರಣವೇನು ಎಂಬುದರ ಬಗ್ಗೆ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದರು. ಗಾಯಕಿ ಕೆನಿಷಾ (Kenishaa Francis) ಜೊತೆ ಜಯಂ ರವಿ ಸಂಬಂಧದಲ್ಲಿದ್ದಾರೆ ಎಂದು ಗುಸು ಗುಸು ಶುರುವಾಗಿತ್ತು. ಇದಕ್ಕೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಡಿವೋರ್ಸ್ ವಿಚಾರದಲ್ಲಿ ಕೆನಿಷಾರನ್ನು ಎಳೆಯಬೇಡಿ ಎಂದು ಜಯಂ ರವಿ ಗರಂ ಆಗಿದ್ದಾರೆ.

    ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ಜಯಂ ರವಿ ಅವರು ಕೆನಿಷಾ ಜೊತೆಗಿನ ರಿಲೇಷನ್‌ಶಿಪ್ ಕುರಿತು ಪ್ರತಿಕ್ರಿಯಿಸಿ, ಬದುಕಿ ಮತ್ತು ಬದಕಲು ಬಿಡಿ. ನನ್ನ ಡಿವೋರ್ಸ್ ವಿಚಾರದಲ್ಲಿ ಅವರನ್ನು ಎಳೆಯಬೇಡಿ. ವೈಯಕ್ತಿಕ ಬದುಕು ವೈಯಕ್ತಿಕವಾಗಿಯೇ ಇರಲಿ, ಕೆನಿಷಾ ವೃತ್ತಿರಂಗದಲ್ಲಿ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರು 600ಕ್ಕೂ ಹೆಚ್ಚು ಸ್ಟೇಜ್‌ ಶೋ ನೀಡಿದ್ದಾರೆ ಎಂದರು. ಇದನ್ನೂ ಓದಿ:ಹರ್ಷಿಕಾ ಬೇಬಿ ಶವರ್ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

    ಕೆನಿಷಾ ಮನೋವೈದ್ಯೆ ಕೂಡ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಹೀಲಿಂಗ್ ಸೆಂಟರ್ ಆರಂಭಿಸುವ ಯೋಜನೆಯಿದೆ ಎಂದು ಹೇಳಿದ್ದಾರೆ. ಅದನ್ನು ತಡೆಯಲು ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು. ಆದರೆ ಹಾಗೆ ಮಾಡುವುದು ತಪ್ಪು. ಇದಕ್ಕೆ ಕಾನೂನು ಹೋರಾಟದ ಮೂಲಕ ಸೂಕ್ತ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎಂದು ಜಯಂ ರವಿ ಮಾತನಾಡಿದರು.

    ಆರತಿಗೆ ಡಿವೋರ್ಸ್ ವಿಚಾರ ಗೊತ್ತಿರಲಿಲ್ಲ ಎಂಬುದಕ್ಕೆ ಲಾಜಿಕ್ ಇಲ್ಲ, ನಾನು ಈಗಾಗಲೇ 2 ಬಾರಿ ಅವರಿಗೆ ನೋಟಿಸ್ ಕಳುಹಿಸಿದ್ದೇನೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇಲ್ಲಾ ಆದ್ಮೇಲೆ ನನಗೆ ಗೊತ್ತಿಲ್ಲ ಎಂದು ಹೇಳಿರುವುದು ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಮಕ್ಕಳಿಗಾಗಿ ಶಾಂತವಾಗಿದ್ದೇನೆ. ಕಾನೂನುಬದ್ಧವಾಗಿ ಹೋಗುತ್ತೇನೆ ಎಂದು ನಟ ಮಾತನಾಡಿದ್ದಾರೆ.

  • ನನ್ನ ಗಮನಕ್ಕೆ ತರದೇ ಡಿವೋರ್ಸ್ ಘೋಷಿಸಿದ್ದಾರೆ: ಜಯಂ ರವಿ ವಿರುದ್ಧ ಆರತಿ ಆಕ್ರೋಶ

    ನನ್ನ ಗಮನಕ್ಕೆ ತರದೇ ಡಿವೋರ್ಸ್ ಘೋಷಿಸಿದ್ದಾರೆ: ಜಯಂ ರವಿ ವಿರುದ್ಧ ಆರತಿ ಆಕ್ರೋಶ

    ಮಿಳಿನ ಸ್ಟಾರ್ ನಟ ಜಯಂ ರವಿ (Jayam Ravi) ಸೆ.9ರಂದು ಆರತಿ ಜೊತೆಗಿನ ದಾಂಪತ್ಯ ಅಂತ್ಯವಾಗಿರೋದಾಗಿ ಘೋಷಿಸಿದ್ದರು. ಈ ಬೆನ್ನಲ್ಲೇ, ನಟನ ನಡೆಗೆ ಆರತಿ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗಮನಕ್ಕೆ ತರದೇ ಡಿವೋರ್ಸ್ (Divorce) ಘೋಷಿಸಿದ್ದಾರೆ. ಏಕಪಕ್ಷೀಯ ನಿರ್ಧಾರ, ಇದರ ಬಗ್ಗೆ ನನಗೇನು ಹೇಳಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆರತಿ (Aarti) ಆರೋಪಿಸಿದ್ದಾರೆ.

    ಡಿವೋರ್ಸ್ ಕುರಿತು ಸುದೀರ್ಘವಾಗಿ ಆರತಿ ಪತ್ರ ಬರೆದಿದ್ದಾರೆ. ಅದರಲ್ಲಿ, ಇತ್ತೀಚೆಗೆ ನಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಘೋಷಣೆಯಿಂದ ನನಗೆ ಶಾಕ್ ಆಗಿದೆ. ಯಾಕೆಂದರೆ ನನಗೆ ಗಮನಕ್ಕೆ ತರದೆ, ನನ್ನ ಅನುಮತಿಯನ್ನು ಪಡೆಯದೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 18 ವರ್ಷಗಳ ಕಾಲ ದಾಂಪತ್ಯದ ಇತಿಹಾಸವಿರುವ ವಿಷಯವನ್ನು ಗೌರವಯುತವಾಗಿ, ಖಾಸಗಿಯಾಗಿ ಹ್ಯಾಂಡಲ್ ಮಾಡಬಹುದಿತ್ತು ಎಂದಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

     

    View this post on Instagram

     

    A post shared by Aarti Ravi (@aarti.ravi)

    ಕಳೆದ ಕೆಲವು ದಿನಗಳಿಂದ ನನ್ನ ಪತಿಯೊಡನೆ ಮಾತನಾಡುವುದಕ್ಕೆ ಪ್ರಯತ್ನಪಡುತ್ತಲೇ ಇದ್ದೇನೆ. ನಾವು ನಮ್ಮ ಕುಟುಂಬಕ್ಕಾಗಿ ಮಾಡಿಕೊಂಡಿರುವ ಕಮಿಟ್‌ಮೆಂಟ್‌ಗಳ ಬಗ್ಗೆ ಓಪನ್ ಆಗಿ ಮಾತಾಡುವುದಕ್ಕೆ ಪ್ರಯತ್ನಿಸಿದೆ. ಆದರೆ, ಆ ಅವಕಾಶವನ್ನು ಅವರು ನನಗೆ ಕೊಡಲೇ ಇಲ್ಲ. ನನ್ನ ಹಾಗೂ ನನ್ನ ಮಕ್ಕಳನ್ನು ಕತ್ತಲೆಯಲ್ಲಿಟ್ಟು ಈ ಘೋಷಣೆಯನ್ನು ಮಾಡಲಾಗಿದೆ. ಈ ದಾಂಪತ್ಯದಿಂದ ಹೊರಬರುವುದು ಸಂಪೂರ್ಣ ಏಕಪಕ್ಷೀಯ ನಿರ್ಧಾರವಾಗಿದ್ದು, ಇದು ನಮ್ಮ ಕುಟುಂಬಕ್ಕೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ ಎಂದು ಜಯಂ ರವಿ ವಿರುದ್ಧ ಆರತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಬ್ಬ ತಾಯಿಯಾಗಿ ತನ್ನ ಇಬ್ಬರು ಮಕ್ಕಳು ಮೊದಲ ಆದ್ಯತೆಯಾಗಿದ್ದು, ಅವರ ಮೇಲೆ ಇಂತಹ ವಿಷಯಗಳು ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲದೆ ತನ್ನ ಮೇಲೆ ಸಾರ್ವಜನಿಕವಾಗಿ ತಪ್ಪನ್ನು ಹೊರಿಸಲಾಗುತ್ತಿದೆ. ನನ್ನ ಕ್ಯಾರೆಕ್ಟರ್ ಮೇಲೆ ಅಟ್ಯಾಕ್ ಮಾಡಲಾಗುತ್ತಿದೆ. ತಮ್ಮ ಕುಟುಂಬದ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡಿ, ಅನಗತ್ಯ ವದಂತಿಗಳನ್ನು ಹಬ್ಬಿಸದಿರುವಂತೆ ಆರತಿ ಮನವಿ ಕೂಡ ಮಾಡಿಕೊಂಡಿದ್ದಾರೆ. ಈಗ ಆರತಿ ಪರವಾಗಿ ಅವರ ಆಪ್ತರು, ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ.

    ಅಂದಹಾಗೆ, ಜಯಂ ರವಿ ಅವರು ಆರತಿ ಜೊತೆ 2009ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರೂ ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.

  • 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    ಕಾಲಿವುಡ್ ನಟ ಜಯಂ ರವಿ (Actor Jayam Ravi) ಅವರ ವೈವಾಹಿಕ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆ ಗ್ರಾಸವಾಗಿತ್ತು. ಇದೀಗ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ಇಂದು (ಸೆ.9) ಸ್ವತಃ ನಟ ಜಯಂ ರವಿ ಸೋಶಿಯಲ್‌ ಮೀಡಿಯಾದಲ್ಲಿ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

    ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ (Aarati) ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ತಿಳಿಸಿದ್ದಾರೆ.

    ನನ್ನ ಆದ್ಯತೆ ಯಾವಾಗಲೂ ಒಂದೇ ಆಗಿರುತ್ತದೆ. ನನ್ನ ಪ್ರೀತಿಯ ಪ್ರೇಕ್ಷಕರಿಗೆ ಸಿನಿಮಾಗಳ ಮೂಲಕ ಮನರಂಜನೆ ನೀಡಿವುದನ್ನು ಮುಂದುವರೆಸುವುದು ಎಂದು ಜಯಂ ರವಿ ಬರೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡಿವೋರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಜೊತೆಗಾಗಿ ಇರಿ ಎಂದೆಲ್ಲಾ ಫ್ಯಾನ್ಸ್‌ ನಟನಿಗೆ ಮನವಿ ಮಾಡಿದ್ದಾರೆ.

    ಅಂದಹಾಗೆ, ಆರತಿ ಮತ್ತು ಜಯಂ ರವಿ 2009ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.