ಬೆಂಗಳೂರು: ಜಪ್ತಿಯಾದ ಜಯಲಲಿತಾ (Jayalalitha) ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕರ್ನಾಟಕ ಹೈಕೋರ್ಟ್ (Karnataka High Court) ದಿನಾಂಕ ನಿಗದಿ ಮಾಡಿದೆ.
ತಮಿಳುನಾಡು (Tamil Nadu) ಮಾಜಿ ಸಿಎಂ ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಮಾರ್ಚ್ 6 ಮತ್ತು 7 ರಂದು ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ನ್ಯಾ. ಮೋಹನ್ ಸೂಚಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತರು – ‘ದೆಹಲಿ ಚಲೋ’ ಮುಂದುವರಿಸುವುದಾಗಿ ಘೋಷಣೆ
ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕವಾಗಬೇಕು. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಜಯಲಲಿತಾ (Jayalalitha) ಗೆ ಸೇರಿದ್ದ ಲಕ್ಷ ಲಕ್ಷ ಬೆಲೆಬಾಳುವ ರೇಷ್ಮೆ ಸೀರೆ, ಜಯಲಲಿತಾ ಧರಿಸಿದ್ದ ಬಂಗಾರ ಡೈಮಂಡ್, ರಾಶಿ ರಾಶಿ ಚಪ್ಪಲಿಯನ್ನು ಶೀಘ್ರದಲ್ಲಿಯೇ ಹರಾಜಿಗೆ ಕೂಗುವ ಸಾಧ್ಯತೆ ಇದೆ.
ತಮಿಳುನಾಡು ಮಾಜಿ ಸಿಎಂ. ಜಯಲಲಿತಾ ಅಕ್ರಮ ಆಸ್ತಿ (Property) ಗಳಿಕೆ ಅಂತಾ ದಾಳಿ ವೇಳೆ ವಶಪಡಿಸಿಕೊಂಡ ಆಸ್ತಿ ಸುಮಾರು 26 ವರ್ಷದಿಂದ ವಿಧಾನಸೌಧ (Vidhanasoudha) ದಲ್ಲಿಯೇ ಕೊಳೆಯುತ್ತಿದೆ. 11 ಸಾವಿರಕ್ಕೂ ಅಧಿಕ ರೇಷ್ಮೆ ಸೀರೆ, ಕೋಟಿಗಟ್ಟಲೇ ಮೌಲ್ಯದ ಅಭರಣ, 400ಕ್ಕೂ ಹೆಚ್ಚು ಚಪ್ಪಲಿಗಳು, 20 ಸೆಟ್ ಸೋಫಾ ವೆರೈಟಿ ವಾಚ್ ಬಂಗಾರದ ಡಾಬು ಸೇರಿದಂತೆ ಅನೇಕ ವಸ್ತುಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಜಯಲಲಿತಾ ಮೃತಪಟ್ಟ ಮೇಲೆ ವಾರಸುದಾರರು ಇಲ್ಲದ ಕಾರಣ ಈ ವಸ್ತುಗಳ ಹರಾಜು ಪ್ರಕ್ರಿಯೆ ಶುರುಮಾಡಬೇಕಾಗಿತ್ತು. ಆದರೆ ವಿಳಂಬವಾಗಿದ್ದು ಕೊನೆಗೂ ಕೋರ್ಟ್ ಚಾಟಿಯ ಬಳಿಕ ಈಗ ವಸ್ತುಗಳ ಹರಾಜಿಗೆ ರಾಜ್ಯಸರ್ಕಾರ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ರಣಬಿಸಿಲಿನ ಮಧ್ಯೆ ತಂಪೆರೆದ ವರುಣ- ಬೇಸಿಗೆ ಮಳೆಗೆ ಅಪಾರ ಬೆಳೆಗಳು ನಾಶ
ಜಯಲಲಿತಾ ಆಸ್ತಿ ಹರಾಜಿನ ವಿಚಾರದಲ್ಲಿ ಕಾನೂನು ಹೋರಾಟ ನಡೆಸಿದ್ದ ನರಸಿಂಹಮೂರ್ತಿ ಸರ್ಕಾರದ ಆದೇಶದ ಬಗ್ಗೆ ಖುಷಿಪಟ್ಟು ಅದೆಷ್ಟೋ ಮೌಲ್ಯದ ಆಸ್ತಿ ಹಾಳಾಗಿದ್ಯೋ ಗೊತ್ತಿಲ್ಲ. ಆದರೆ ಇಷ್ಟು ವರ್ಷಗಳ ನಂತ್ರವಾದ್ರೂ ಬುದ್ಧಿ ಕಲಿತಿದ್ಯಯಲ್ಲ ಸರ್ಕಾರ ಅಂತಾ ಖುಷಿಪಟ್ರು. ಜಯಲಲಿತಾ ವಸ್ತುಗಳ ಲಿಸ್ಟ್ ಕೇಳಿದ್ರೇ ಎಂತವರಿಗೂ ತಲೆತಿರುಗೋದು ಪಕ್ಕ. ಅಂತದ್ರಲ್ಲಿ 26 ವರ್ಷಗಳಿಂದ ಈ ವಸ್ತುಗಳೆಲ್ಲ ಹಾಗೆ ಕೊಳೆಯುತ್ತಿದ್ದಾವೆ ಅನ್ನೋದು ಇನ್ನೂ ದುರಂತ.
ವಿಕ್ರಾಂತ್ ರೋಣ ಸಿನಿಮಾದಲ್ಲಿ ರಾ ರಾ ರಕ್ಕಮ್ಮ ಹಾಡಿಗೆ ಸೊಂಟ ಬಳುಕಿಸಿರುವ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಮತ್ತು 215 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ನಡುವಿನ ಪ್ರಕರಣಕ್ಕೆ ನಾನಾ ರೀತಿಯ ತಿರುವುಗಳು ಸಿಗುತ್ತಿವೆ. ಇಡಿ ವಿಚಾರಣೆ ವೇಳೆ ಇಬ್ಬರೂ ಭೇಟಿಯಾಗಿದ್ದು ಮತ್ತು ತಮ್ಮ ನಡುವಿನ ಗೆಳೆತನ ಹಾಗೂ ಹಂಚಿಕೊಂಡಿರುವ ಗಿಫ್ಟ್ ಗಳ ಬಗ್ಗೆ ಇಬ್ಬರೂ ಬಾಯ್ಬಿಟ್ಟಿದ್ದಾರೆ. ಹಾಗಾಗಿ ಇದೊಂದು ದುಬಾರಿ ಭೇಟಿ ಎಂದೇ ಬಣ್ಣಿಸಲಾಗುತ್ತಿದೆ.
ಸುಕೇಶ್ ಚಂದ್ರಶೇಖರ್ ತಾವು ತಮಿಳಿನ ಖಾಸಗಿ ವಾಹಿನಿಯೊಂದರ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಅಳಿಯ ಅಂತಲೂ ಹೇಳಿಕೊಂಡಿದ್ದಾರೆ ಎಂದು ಜಾಕ್ವೇಲಿನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಫೆಬ್ರವರಿ 2021ರ ವೇಳೆ ತಮ್ಮಿಬ್ಬರ ಪರಿಚಯವಾಗಿ ಆಗಸ್ಟ್ 2021ರವರೆಗೆ ಮಾತ್ರ ತಾವಿಬ್ಬರೂ ಫೋನ್ ಸಂಪರ್ಕದಲ್ಲಿ ಇದ್ದೆವು ಅಂದಿದ್ದಾರೆ. ಅಲ್ಲದೇ, ಎರಡು ಬಾರಿ ಚೆನ್ನೈನಲ್ಲಿ ತಾವಿಬ್ಬರೂ ಭೇಟಿ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
ಅವರೇ ಇಡಿ ಅಧಿಕಾರಿಗಳ ಮುಂದೆ ಹೇಳಿಕೊಂಡಂತೆ, ಕೇವಲ ಎಂಟೇ ತಿಂಗಳ ಅವರ ಸ್ನೇಹವಿತ್ತು, ಎರಡು ಬಾರಿ ಭೇಟಿ. ಈ ವೇಳೆಯಲ್ಲಿ ಸುಕೇಶ್ ಅವರು ದುಬಾರಿ ಕಾರು, ಡೈಮೆಂಡ್ ನಕ್ಲೆಸ್, ಕಾಸ್ಟ್ಲಿ ಬ್ಯಾಗ್ಸ್, ವಿದೇಶ ಪ್ರಯಾಣ, ಒಂದು ಕುದುರೆ ಹೀಗೆ ಜಾಕ್ವೇಲಿನ್ ಗಾಗಿ ಕೋಟಿ ಕೋಟಿ ಸುರಿದ್ದಾರೆ ಎಂದು ಗೊತ್ತಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಗಿಫ್ಟ್ ಕೊಡಲು ಹೇಗೆ ಸಾಧ್ಯ ಎಂದು ಇಡಿ ಅಧಿಕಾರಿಗಳು ತಲೆ ಕೆಡಿಸಿಕೊಂಡು ಕೂತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಅಕ್ರಮ ಆಸ್ತಿ ಸಂಬಂಧ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಆಪ್ತೆ ಶಶಿಕಲಾರಿಂದ ಇದೀಗ ಜೈಲು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ.
4 ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ವೇಳೆ ಶಶಿಕಲಾಗೆ ಜೈಲಿನಲ್ಲಿದ್ದ ಜೈಲು ಅಧಿಕಾರಿಗಳು ರಾಜಾತಿಥ್ಯ ನೀಡಲು ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಎಸಿಬಿ ಹೈಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದೆ. ಶಶಿಕಲಾ ಜೈಲಿನಲ್ಲಿದ್ದಾಗ ಜೈಲು ಅಧಿಕಾರಿಗಳಾಗಿದ್ದ, ಕೃಷ್ಣ ಕುಮಾರ್, ಡಾ. ಅನಿತಾ ಆರ್, ಬಿ.ಎಸ್.ಸುರೇಶ್, ಗಜರಾಜ ಮಕನೂರು, ಇಳವರಸಿ, ಶಶಿಕಲಾಗೆ ರಾಜಾತಿಥ್ಯ ನೀಡಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ನಾಲ್ಕು ವರ್ಷ ಜೈಲು ಶಿಕ್ಷೆ ಪೂರ್ಣ – ಜೈಲಿನಿಂದ ಶಶಿಕಲಾ ಬಿಡುಗಡೆ
ಪೊಲೀಸರು ಲಂಚ ಪಡೆದಿದ್ದಾರೆ ಎಂಬ ಬಗ್ಗೆ ದೂರು ದಾಖಲಿಸಿದ ಬಳಿಕ ಎಸಿಬಿ ಅಧಿಕಾರಿಗಳು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಕೆ.ಎಸ್.ಗೀತಾ ಪಿಐಎಲ್ ಸಲ್ಲಿಸಿದ್ದರು. ಇದೀಗ ಎಸಿಬಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಶಶಿಕಲಾ, ಜೈಲು ಅಧಿಕಾರಿಗಳ ವಿರುದ್ಧ ಸರ್ಕಾರದ ಪೂರ್ವಾನುಮತಿ ಪಡೆದು, ಭ್ರಷ್ಟಾಚಾರ ತಡೆ ಕಾಯ್ದೆ ಸೆ.19ರಡಿ ಎಸಿಬಿ ಚಾರ್ಜ್‍ಶೀಟ್ ಹಾಕಿದೆ ಎಂದು ಹೈಕೋರ್ಟ್‍ಗೆ ಎಸಿಬಿ ಪರ ವಕೀಲ ಪಿ.ಎನ್.ಮನಮೋಹನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ
ಜೈಲು ಅಧಿಕಾರಿ ಕೃಷ್ಣಕುಮಾರ್, ಶಶಿಕಲಾ ಜೈಲಲ್ಲಿ ಇದ್ದಾಗ ಜೈಲಿನ ಸುಪರಿಡೆಂಟ್ ಆಗಿದ್ರು. ಕೃಷ್ಣಕುಮಾರ್ ವರ್ಗಾವಣೆ ಬಳಿಕ ಅನಿತಾ ಅಧಿಕಾರಿ ಆಗಿದ್ದರು. ಜೈಲಿನಲ್ಲಿ ಶಶಿಕಲಾಗೆ ಸೌಕರ್ಯ ಕಲ್ಪಿಸಿಕೊಡಲು ಕೋಟಿ, ಕೋಟಿ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ
ಅಕ್ರಮ ಆಸ್ತಿಗಳಿಕೆ ಸಂಬಂಧ ಶಶಿಕಲಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪರಪ್ಪನಗ್ರಹಾರದಲ್ಲಿ ಸೆರೆ ವಾಸದಲ್ಲಿ ನಾಲ್ಕು ವರ್ಷಗಳ ಕಾಲ ಇದ್ದ ಶಶಿಕಲಾ ಕಳೆದ ವರ್ಷ ಬಿಡುಗಡೆಗೊಂಡಿದ್ದರು. ಬಳಿಕ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದಾರೆ.
ಚೆನ್ನೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ತಲೈವಿ ಸಿನಿಮಾ ಬಿಡುಗಡೆಗೆ ಕೌಂಟ್‍ಡೌನ್ ಶುರುವಾಗಿದೆ. ಈ ನಡುವೆ ಕಂಗನಾ ರಣಾವತ್ ಜಯಲಲಿತಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಸದಾ ಒಂದಲ್ಲಾ ಒಂದು ವಿವಾದ ಮೂಲಕ ಭಾರೀ ಸದ್ದು ಮಾಡುವ ಕಂಗನಾ, ಯಾವಾಗಲೂ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಸದ್ಯ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನಾಧಾರಿತ ಸಿನಿಮಾದಲ್ಲಿ ಕಂಗನಾ ಕಾಣಿಸಿಕೊಂಡಿದ್ದು, ಈ ಸಿನಿಮಾ ಇದೇ ಸೆಪ್ಟೆಂಬರ್ 10ರಂದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಮೇಲೆ ಬರಲಿದೆ. ಇದನ್ನೂ ಓದಿ: ತಲೈವಿ ಜಯಲಲಿತಾ ಪಾತ್ರದಲ್ಲಿ ಬಾಲಿವುಡ್ ಕ್ವೀನ್
ಈಗಾಗಲೇ ತಲೈವಿ ಸಿನಿಮಾದ ಪೋಸ್ಟರ್, ಟೀಸರ್ ಹಾಗೂ ಹಾಡಿನ ಸಣ್ಣ ದೃಶ್ಯಗಳು ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಎಂಜಿಆರ್ ಪಾತ್ರದಲ್ಲಿ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದು, ಚಿತ್ರಕ್ಕೆ ಕೆ.ವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸಿದ್ದಾರೆ. ಒಟ್ಟಾರೆ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ ಬಿಗ್ ಸ್ಕ್ರೀನ್ ಮೇಲೆ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಕಾದು ನೋಡಬೇಕಾಗಿದೆ.
Actress Kangana Pays Tribute at Former CM J Jayalalithaa’s Memorial at Marina In Chennai… #Thalaivii
ಮುಂಬೈ: ಬಹುನೀರಿಕ್ಷಿತ ತಲೈವಿ ಸಿನಿಮಾದ ಚಿತ್ರೀಕರಣದ ಶೂಟಿಂಗ್ ಮುಗಿಸಿರುವ ಸಂತೋಷವನ್ನು ಕಂಗನಾ ರಣಾವತ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಹೈದ್ರಾಬಾದ್‍ನಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಸಿನಿಮಾ ತಂಡ ಇಂದು ಚಿತ್ರೀಕರಣವನ್ನು ಪೂರ್ಣಪ್ರಮಾಣದಲ್ಲಿ ಮುಗಿಸಿದೆ. ಈ ಬಗ್ಗೆ ಕಂಗನಾ ರಣಾವತ್ ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.
ತಲೈವಿ ಸಿನಿಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸಂಪೂರ್ಣವಾಗಿ ತಲೈವಿ ಪಾತ್ರದಲ್ಲಿ ಲೀನಳಾಗಿಬಿಟ್ಟಿದ್ದೆ. ಆದರೆ ಎಲ್ಲಾ ಒಳ್ಳೆಯ ಕ್ಷಣಗಳಿಗೆ ಅಂತ್ಯ ಇದ್ದೇ ಇರುತ್ತದೆ. ಈಗ ಬೈ ಹೇಳುವ ಸಮಯ ಬಂದಾಗಿದೆ. ಇಂಥಹ ಒಂದು ಅದ್ಭುತವಾದ ಪಾತ್ರ ನಿರ್ವಹಿಸಲು ಅವಕಾಶ ಒಮ್ಮೆ ಮಾತ್ರವೇ ಸಿಗುತ್ತದೆ. ಈ ಅವಕಾಶವನ್ನು ಕೊಟ್ಟ ನಿರ್ದೇಶಕ ಎಲ್.ಎ ವಿಜಯ್, ಶೈಲೇಶ್ ಆರ್ ಸಿಂಗ್ ಸೇರಿದಂತೆ ಹಲವರಿಗೆ ಧನ್ಯವಾದ ಹೇಳಿ ಕಂಗನಾ ಟ್ವಿಟ್ ಮಾಡಿದ್ದಾರೆ.
And it’s a wrap, today we successfully completed the filming of our most ambitious project Thalaivi- the revolutionary leader, rarely an actor finds a character that comes alive in flesh and blood and I fall in love so hard but now suddenly it’s time to say bye,mixed feelings❤️ pic.twitter.com/0tmrQ2ml3m
ತಲೈವಿ ಸಿನಿಮಾವು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಜೀವನ ಕತೆಯಾಧಾರಿತ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಾರೆ.
ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕಾಗಿ ನಟಿ ಕಂಗನಾ ಮಾತ್ರೆಗಳನ್ನು ಸೇವಿಸಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಲೇಡಿ ಸೂಪರ್ ಸ್ಟಾರ್ ಜಯಲಲಿತಾ ರವರ ಜೀವನಚರಿತ್ರೆ ಕುರಿತು ಎರಡು ಸಿನಿಮಾಗಳು ಕಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಯಾರಾಗುತ್ತಿವೆ. ಬಾಲಿವುಡ್‍ನಲ್ಲಿ ಜಯಲಲಿತಾ ಆಗಿ ನಟಿ ಕಂಗನಾ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಜಯಲಲಿತಾ ಆಗಿ ಕಂಗನಾ ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಇತ್ತೀಚೆಗೆ ‘ತಲೈವಿ’ ಚಿತ್ರದ ಫಸ್ಟ್‌ಲುಕ್ ಟೀಸರ್ ಬಿಡುಗಡೆಯಾಗಿದ್ದು, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ನಟಿ ಕಂಗನಾ ‘ತಲೈವಿ’ ಚಿತ್ರಕ್ಕಾಗಿ ತಾವು ಮಾಡಿಕೊಂಡಿರುವ ತಯಾರಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತೆರೆಮೇಲೆ ಜಯಲಲಿತಾ ಅವರಂತೆ ಕಾಣಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ಅದಕ್ಕಾಗಿ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದರಲ್ಲೂ ಸೊಂಟ ಮತ್ತು ತೊಡೆ ಭಾಗದಲ್ಲಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಹಾರ್ಮೋನ್ ಮಾತ್ರೆಗಳನ್ನು ಸೇವಿಸಿದ್ದೇನೆ. ನಾನು ಎತ್ತರ ಮತ್ತು ಸಣ್ಣ ಇರುವುದರಿಂದ ನನ್ನ ಮುಖವು ದುಂಡಾಗಿರಲಿಲ್ಲ. ಆದರೆ ಜಯಲಲಿತಾ ಅವರು ಮುಖ ದುಂಡಗಿತ್ತು. ಹೀಗಾಗಿ ಅತೀ ಹೆಚ್ಚಿನ ಆಹಾರವನ್ನು ಸೇವನೆ ಮಾಡುತ್ತಿದ್ದೆ. ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಟರು ಸಿನಿಮಾಗಾಗಿ ತಮ್ಮ ಸ್ಟೈಲ್ ಬದಲಾಯಿಸಿಕೊಳ್ಳುತ್ತಾರೆ. ಆದರೆ ಯಾರೂ ಕೂಡ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಿರ್ದೇಶಕರಾದ ವಿಜಯ್ ಅವರು ಸಾಧ್ಯವಾದಷ್ಟು ಜಯಲಲಿತಾ ಅವರನ್ನು ಹೋಲುವಂತೆ ನಾನು ಆಗಬೇಕೆಂದುಕೊಂಡಿದ್ದರು. ಆದರೆ ಜಯಲಲಿತಾ ಅವರು ದೈಹಿಕವಾಗಿ ದಪ್ಪವಾಗಿದ್ದರು. ಮೇಕಪ್ ಮೂಲಕ ನನ್ನ ಮುಖ ದಪ್ಪ ಕಾಣಲು ಸಾಧ್ಯವಾಯಿತು. ನನ್ನ ದೇಹದ ಹಲವೆಡೆ ಪ್ಯಾಡ್‍ಗಳನ್ನು ಬಳಸಿ ಜಯಲಲಿತಾ ಲುಕ್ ಫೈನಲ್ ಮಾಡಿದ್ದೇವೆ ಎಂದರು.
ಫಸ್ಟ್‌ಲುಕ್‌ನಲ್ಲಿ ಹಸಿರು ಸೀರೆ ಮತ್ತು ಹಸಿರು ಮೇಲಂಗಿ ತೊಟ್ಟು ಕಂಗನಾ ರನೌತ್ ಗೆಲುವಿನ ಸಂಕೇತವನ್ನು ತೋರಿಸುತ್ತಿದ್ದಾರೆ. ಕಂಗನಾ ಅವರು ಫಸ್ಟ್‌ಲುಕ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಗನಾ ನೋಟವನ್ನು ಇಷ್ಟಪಟ್ಟರೆ ಇನ್ನು ಕೆಲವರು ಜಯಲಲಿತಾ ಅವರಿಗೂ ಕಂಗನಾ ರನೌತ್ ಪಾತ್ರಕ್ಕೂ ಹೋಲಿಕೆಯಾಗುವುದೇ ಇಲ್ಲ. ಆನಿಮೇಟೆಡ್ ಬೊಂಬೆ ತರಹ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
‘ತಲೈವಿ’ ಸಿನಿಮಾವನ್ನು ಎ.ಎಲ್ ವಿಜಯ್ ಅವರು ನಿರ್ದೇಶನ ಮಾಡುತ್ತಿದ್ದು, ವಿಷ್ಣುವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಚೆನ್ನೈ: ಎಐಎಡಿಎಂಕೆ ನಾಯಕರೊಬ್ಬರು ತಮ್ಮ ಮಗನ ಮದುವೆಯನ್ನು ಜಯಲಲಿತಾ ಸಮಾಧಿ ಎದುರು ಮಾಡಿಸಿದ್ದಾರೆ.
ಎಐಎಡಿಎಂಕೆ ನಾಯಕ ಭವಾನಿಶಂಕರ್ ಅವರು ತಮ್ಮ ಮಗ ಸತೀಶ್ ಮದುವೆಯನ್ನು ದೀಪಿಕಾ ಎಂಬವರ ಜೊತೆ ಸಾಂಪ್ರದಾಯಿಕವಾಗಿ ಮಾಡಿಸಿದ್ದಾರೆ. ವಧು-ವರರು ಸಮಾಧಿಯ ಬಲಭಾಗದಲ್ಲಿ ಕುಳಿತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸತೀಶ್ ಹಾಗೂ ದೀಪಿಕಾ ಮದುವೆಗೆ ಇಬ್ಬರು ಕಡೆಯವರ ಅತಿಥಿಗಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು. ಬುಧವಾರ ಮದುವೆ ಇದ್ದ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಸಮಾಧಿಯನ್ನು ಹೂ ಹಾಗೂ ಹೂವಿನ ಮಾಲೆಯಿಂದ ಅಲಂಕರಿಸಲಾಗಿತ್ತು.
ಮದುವೆ ಕಾರ್ಯಕ್ರಮ ಮುಗಿದ ನಂತರ ಜಯಲಲಿತಾ ಅವರ ಸಮಾಧಿಗೆ ಆರತಿ ಮಾಡಲಾಯಿತು. ಜಯಲಲಿತಾ ಅವರ ಸಮಾಧಿ ಎದುರು ಮದುವೆ ಆಯೋಜಿಸಲು ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಜಯಲಲಿತಾ ಅವರಿಗೆ 2016ರ ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸತತ 72 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ, ಡಿಸೆಂಬರ್ 5 ರಂದು ವಿಧಿವಶರಾಗಿದ್ದರು.
ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾರವರು ನಿಧನರಾಗಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ.
ತಮಿಳುನಾಡಿನಲ್ಲಿ ಪುರುಚ್ಚಿ ತಲೈವಿ ಎಂದು ಹೆಸರು ಪಡೆದಿದ್ದ ಜಯಲಲಿತಾರವರು ಮೂಲತಃ ಕರ್ನಾಟಕ ಜಿಲ್ಲೆಯ ಮಂಡ್ಯ ಜಿಲ್ಲೆಯವರಾಗಿದ್ದರು. ರಾಜಕೀಯಕ್ಕೂ ಮುನ್ನ ತಮಿಳು ಚಿತ್ರರಂಗದ ಜನಪ್ರಿಯ ನಟಿಯಾಗಿದ್ದರು. ಎಂ.ಜಿ.ರಾಮಚಂದ್ರನ್ ರವರ ಪರಮಾಪ್ತರಲ್ಲಿ ಗುರುತಿಸಿಕೊಂಡಿದ್ದರು. ಇದೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಹಾಯಕವಾಗಿತ್ತು. ನಂತರ ರಾಜಕೀಯ ಬದಲಾವಣೆಗಳಿಂದ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಎಲ್ಲರೂ ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದರು.
2016ರ ಸೆಪ್ಟೆಂಬರ್ 22 ರಿಂದ ಜಯಲಲಿತಾ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸತತ 72 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ, ಡಿಸೆಂಬರ್ 5 ರಂದು ವಿಧಿವಶರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು.
ತಮಿಳುನಾಡಿನ ಅಮ್ಮ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳು ಸೃಷ್ಟಿಯಾಗಿದ್ದವು. ಆದರೆ 2017 ಜನವರಿ 6 ರಂದು ಲಂಡನ್ ವೈದ್ಯ ರಿಚರ್ಡ್ ಬಿಲೆ ಅವರು ಅಮ್ಮಾ ಅನಾರೋಗ್ಯದ ಗುಟ್ಟನ್ನು ಸುದ್ದಿಗೋಷ್ಠಿಯಲ್ಲಿ ರಟ್ಟು ಮಾಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ಜಯಲಲಿತಾ ಅವರಿಗೆ ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲದೇ ಅವರ ರಕ್ತದಲ್ಲಿ ಬ್ಯಾಕ್ಟೀರಿಯಾ ತುಂಬಿಕೊಂಡಿತ್ತು. ಅದು ಹೃದಯಕ್ಕೂ ವಿಸ್ತರಿಸಿತ್ತು.
ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯಕ್ಕೂ ಗುರಿಯಾಗಿದ್ದರು. ಜಯಲಲಿತಾರನ್ನು ಬದುಕಿಸಲು ಅಂತಿಮ ಕ್ಷಣದವರೆಗೂ ಪ್ರಯತ್ನ ಮಾಡಿದ್ದೆವು. ಕೃತಕ ಉಸಿರಾಟ ಯಂತ್ರ ಅಳವಡಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 5ರ ಸಂಜೆ 5 ಗಂಟೆಗೆ ಅವರಿಗೆ ಹೃದಯ ಸ್ತಂಭನವಾಗಿತ್ತು. ಅದಕ್ಕೆ ನಾವೇ ಸಾಕ್ಷಿ. ನಮ್ಮ ಬಳಿ ಯಾವುದೇ ಸಿಸಿಟಿವಿ ದೃಶ್ಯಗಳಿಲ್ಲ, ದೃಶ್ಯಗಳಿದ್ದರೂ ನಾವು ರಿಲೀಸ್ ಮಾಡಲ್ಲ. ರೋಗಿಯ ಖಾಸಗಿತನ ನಮಗೆ ಅತ್ಯಂತ ಮುಖ್ಯ ಎಂದು ಹೇಳಿದ್ದರು.