Tag: jaya prada

  • 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

    40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

    ಬೆಂಗಳೂರು: ಮಕ್ಕಳ ನೃತ್ಯ ಪ್ರದರ್ಶನಕ್ಕೆ (Dace Show) 40 ರಿಂದ 60 ಸಾವಿರ ರೂ. ಪಡೆದು ಕೊನೆಗೆ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡದ್ದಕ್ಕೆ ಪೋಷಕರು ಆಯೋಜಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಟೌನ್‌ಹಾಲ್‌ನಲ್ಲಿ (Town Hall) ನಡೆದಿದೆ.

    ನಗರದ ಟೌನ್‌ಹಾಲ್‌ನಲ್ಲಿ ನೃತ್ಯಾಂಗನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹೀನಾ ಜೈನ್ ಎಂಬವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟಿ ಜಯಪ್ರದಾ (Jaya Prada) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

    ಸಮಯದ ಅಭಾವ ಹಾಗೂ ಬಿಸಿನೆಸ್ ಅವಾರ್ಡ್ ನೆಪದಲ್ಲಿ ಡ್ಯಾನ್ಸ್ ಗ್ರೂಪ್‌ಗಳಿಗೆ ಆಯೋಜಕರು ಅವಕಾಶ ನೀಡಿರಲಿಲ್ಲ. ಮಕ್ಕಳ ನೃತ್ಯ ಪ್ರದರ್ಶನಕ್ಕೆ ಸಿಟ್ಟಾದ ಪೋಷಕರು ಆಯೋಜಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು

     

    ಸುಮಾರು 100ಕ್ಕೂ ಹೆಚ್ಚು ನೃತ್ಯ ತಂಡಗಳು ಆಗಮಿಸಿವೆ. 3-4 ನಿಮಿಷದ ನೃತ್ಯಕ್ಕೆ ಒಬ್ಬ ವಿದ್ಯಾರ್ಥಿಯಿಂದ 2-3 ಸಾವಿರ ರೂ. ಪಡೆಯಲಾಗಿದೆ.  ಒಂದೊಂದು ತಂಡದಿಂದ 40 ರಿಂದ 60 ಸಾವಿರ ರೂ. ಹಣವನ್ನು ಪಡೆದಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಕಾದಿದ್ದೆವು. ಆದರೆ ನಮ್ಮ ಮಕ್ಕಳ ನೃತ್ಯಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ನಾವು ಪಾವತಿಸಿದ್ದ ಹಣವನ್ನು ವಾಪಸ್‌ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

    ಪೋಷಕರ ಆರೋಪಕ್ಕೆ ಅಯೋಜಕಿ ಹೀನಾ ಜೈನ್ ಪ್ರತಿಕ್ರಿಯಿಸಿ, ನಾವು ಯಾರಿಗೂ ಮೋಸ ಮಾಡಿಲ್ಲ, ಸಮಯದ ಅಭಾವವಿತ್ತು. ಜಯಪ್ರದಾ ಅವರು ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿಲ್ಲ. ಸುಮಾರು 110 ಡ್ಯಾನ್ಸ್ ತಂಡಗಳು ಹೆಸರು ಕೊಟ್ಟಿದ್ದರಿಂದ ಎಲ್ಲರಿಗೂ ಅವಕಾಶ ಸಿಗಲಿಲ್ಲ. ಕಾರ್ಯಕ್ರಮದಲ್ಲಿ ಸ್ವಲ್ಪ ವ್ಯತ್ಯಾಸಗಳು ಆಗಿವೆ. ಪೂರ್ತಿ ಹಣವನ್ನು ವಾಪಸ್ ನೀಡಲು ಸಾಧ್ಯವಿಲ್ಲ. 1 ತಿಂಗಳ ಸಮಯಾವಕಾಶ ನೀಡಿದರೆ ಸ್ವಲ್ಪ ಹಣ ಹಣ ವಾಪಸ್ ಮಾಡಲಾಗುವುದು ಎಂದು ತಿಳಿಸಿದರು.

  • ನಟಿ ಜಯಪ್ರದಾ ಸಹೋದರ ನಿಧನ

    ನಟಿ ಜಯಪ್ರದಾ ಸಹೋದರ ನಿಧನ

    ನ್ನಡದ ಶಬ್ದವೇಧಿ, ಈ ಬಂಧನ ಖ್ಯಾತಿಯ ನಟಿ ಜಯಪ್ರದಾ (Jaya Prada) ಅವರ ಹಿರಿಯ ಸಹೋದರ ರಾಜಾ ಬಾಬು (Raja Babu) ವಿಧಿವಶರಾಗಿದ್ದಾರೆ. ಸಹೋದರನ ನಿಧನದ ಕುರಿತು ನಟಿ ಭಾವನ್ಮಾತಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ನನ್ನ ಹಿರಿಯ ಸಹೋದರ ರಾಜಾ ಬಾಬು ಅವರ ನಿಧನದ ಬಗ್ಗೆ ನಾನು ತುಂಬಾ ದುಃಖದಿಂದ ತಿಳಿಸುತ್ತಿದ್ದೇನೆ. ಅವರು ಇಂದು ಮಧ್ಯಾಹ್ನ 3:26ಕ್ಕೆ ಹೈದರಾಬಾದ್‌ನಲ್ಲಿ ನಿಧನರಾದರು. ದಯವಿಟ್ಟು ಅವರ ಮೇಲೆ ನಿಮ್ಮ ಪ್ರಾರ್ಥನೆ ಇರಲಿ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ನಟಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Jaya Prada (@jayapradaofficial)

    ಇನ್ನೂ ಜಯಪ್ರದಾ ಅವರು ವರನಟ ರಾಜ್‌ಕುಮಾರ್, ವಿಷ್ಣುವರ್ಧನ್ ಅವರೊಂದಿಗೆ ಕನ್ನಡದ ಅನೇಕರ ಸಿನಿಮಾಗಳಲ್ಲಿ ನಟಿಸಿದ್ದಾರೆ. 70-80ರ ದಶಕದ ಟಾಪ್ ನಟಿಯಾಗಿ ಜಯಪ್ರದಾ ಸದ್ದು ಮಾಡಿದ್ದರು. ಬಾಲಿವುಡ್‌ನಲ್ಲೂ ಮಿಂಚಿದ್ದರು.

  • ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಬೆಂಗಳೂರು: ನಟಿ ಜಯಪ್ರದಾ ಅವರು ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನಲೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪ್ಪು ನಮ್ಮ ಜೊತೆಯಲ್ಲಿ ಇಲ್ಲ ಎನ್ನುವುದು ತುಂಬಾ ಕಷ್ಟವಾಗಿದೆ. ಈ ಕುಟುಂಬ ಎಂದರೆ ನನಗೆ ತುಂಬಾ ಇಷ್ಟವಾಗಿದೆ. ರಾಜ್‍ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಅವರ ಈ ಕುಟುಂಬದಲ್ಲಿ ನಾನು ಒಬ್ಬಳಾಗಿದ್ದೇನು. ಅಪ್ಪ ಇಂದು ಇಲ್ಲ ಎನ್ನುವುದು ತುಂಬಾ ಕಷ್ಟವಾಗಿದೆ ಎಂದು ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

    ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕುಟುಂಬದವರು ಕಷ್ಟದಲ್ಲಿ ಧರ್ಯ ತೆಗೆದುಕೊಳ್ಳಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಮನಸ್ಪೂರ್ತಿಯಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಅಪ್ಪು ನಿಧನದಕುರಿತಾಗಿ ಕಂಬನಿ ಮೀಡಿದಿದ್ದಾರೆ. ಇದನ್ನೂ ಓದಿ: ಒಬ್ಬ ಡ್ಯಾನ್ಸರ್ ಬರಬಹುದು, ಫೈಟರ್ ಬರಬಹುದು, ಆದ್ರೆ ಅಪ್ಪು ಬರಲ್ಲ: ರಮೇಶ್ ಅರವಿಂದ್

    ಪುನೀತ್ ರಾಜಕುಮಾರ್ ಸಮಾಧಿಯ ದರ್ಶನ ಪಡೆದು, ಚಿತ್ರರಂಗದ ಹಲವರು ನಮನ ಸಲ್ಲಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬೇರೆ ಭಾಷಯೆ ನಟ, ನಟಿಯರು ಅಪ್ಪು ಮನೆಗೆ ಭೇಟಿಕೊಟ್ಟು ಕುಟುಂಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

  • ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ ಆಕ್ರೋಶ

    ಡಿಸಿಪಿ ಅಣ್ಣಾಮಲೈ ವಿರುದ್ಧ ನಟಿ ಜಯಪ್ರದಾ ಆಕ್ರೋಶ

    ಬೆಂಗಳೂರು: ದಿವಂಗತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯ ಸಮಯದಲ್ಲಿ ನಟಿ ಜಯಪ್ರದಾ ಅವರು ಖಡಕ್ ಅಧಿಕಾರಿ ಡಿಸಿಪಿ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಆದ್ದರಿಂದ ಬೆಂಗಳೂರು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಆಗ ಕಂಠೀರವ ಸ್ಟುಡಿಯೋದ ಗೇಟ್ ಬಳಿ ಜಯಪ್ರದಾ ಅವರು ನಿಂತಿದ್ದರು. ನೂಕುನುಗ್ಗಲು ಉಂಟಾಗುತ್ತಿದ್ದಂತೆ ಅಣ್ಣಾಮಲೈ, ಕಾರಿನಲ್ಲಿ ಕುಳಿತುಕೊಳ್ಳುವಂತೆ ಜಯಪ್ರದಾ ಅವರಿಗೆ ಸೂಚಿಸಿದ್ದಾರೆ.

    ಡಿಸಿಪಿ ಅಣ್ಣಾಮಲೈ ಅವರು ಹೇಳಿದ್ದ ಮಾತನ್ನು ತಪ್ಪಾಗಿ ತಿಳಿದುಕೊಂಡ ನಟಿ ಜಯಪ್ರದಾ, ಸ್ಥಳದಲ್ಲಿಯೇ ಅವರ ವಿರುದ್ಧ ಕೂಗಾಡಿದ್ದಾರೆ. ಅಣ್ಣಾಮಲೈ ಡಿಸಿಪಿ ಆದರೆ ನಾನು ಮಾಜಿ ಸಂಸದೆಯಾಗಿದ್ದಾನೆ. ಅದರಲ್ಲೂ ನಾನೊಬ್ಬ ಮಹಿಳೆ. ನಮಗೆ ಭದ್ರತೆ ಒದಗಿಸಬೇಕು ಅವರು. ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಹೇಳುವ ಮೂಲಕ ಅಣ್ಣಾಮಲೈ ವಿರುದ್ಧ ಜಯಪ್ರದಾ ಕಿಡಿಕಾರಿದ್ದಾರೆ.

    ದಿವಂಗತ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ವಿಧಿವಶರಾಗಿದ್ದರು. ಅಂದಿನಿಂದಲೂ ಅಂತ್ಯಸಂಸ್ಕಾರದವರೆಗೆ ಬೆಂಗಳೂರು ಪೊಲೀಸರು ಭದ್ರತೆ ನೀಡುವ ಮೂಲಕ ಶಾಂತಿಯನ್ನು ಕಾಪಾಡಿದ್ದಾರೆ. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ, ರೆಬೆಲ್ ಸ್ಟಾರ್ ಅಂಬರೀಶ್ ನಿಧನದಿಂದ ಹಿಡಿದು ಅಂತ್ಯಕ್ರಿಯೆಯವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಕಂಠೀರವ ಸ್ಟೇಡಿಯಂ ಬಳಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರು ಹಾಗೂ ಮಂಡ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ಎಲ್ಲರೂ ಎರಡು ದಿನಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಿದ್ದಾರೆ. ಬಹಳ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv