Tag: jawan film

  • ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    ಶಾರುಖ್ ಖಾನ್ ಕಣ್ಣಿಗೆ ಗಾಯ- ಸರ್ಜರಿಗಾಗಿ ವಿದೇಶಕ್ಕೆ ಹೊರಟ ‘ಜವಾನ್’ ನಟ

    ಬಾಲಿವುಡ್ (Bollywood) ನಟ ಶಾರುಖ್ ಖಾನ್‌ಗೆ (Shah Rukh Khan) ಮತ್ತೊಮ್ಮೆ ಆರೋಗ್ಯ ಸಮಸ್ಯೆ ಎದುರಾಗಿದೆ. ಇದೀಗ ಶಾರುಖ್‌ಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಸರ್ಜರಿಗಾಗಿ (Eye Surgery) ಅಮೆರಿಕಾಗೆ ನಟ ತೆರಳಲಿದ್ದಾರೆ. ಇದನ್ನೂ ಓದಿ:‘ದೈಜಿ’ ಸಿನಿಮಾ ಚಿತ್ರೀಕರಣಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಡೈರೆಕ್ಟರ್ ಟೆಂಪಲ್ ರನ್

    ಬಾಲಿವುಡ್ ಮೂಲಗಳ ಪ್ರಕಾರ, ಜುಲೈ 29ರಂದು ಶಾರುಖ್ ಖಾನ್ ಮುಂಬೈ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಯೇ ಚಿಕಿತ್ಸೆ ಪಡೆಯಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿರುವ ಹಾನಿ ಸರಿಪಡಿಸಲು ನಟ ಅಮೆರಿಕಾಗೆ ಹೊರಡಲಿದ್ದಾರೆ ಎನ್ನಲಾಗಿದೆ.

    ಜು.30ಕ್ಕೆ ಅವರು ಅಮೆರಿಕಾಗೆ ಹೊರಡಲಿದ್ದಾರೆ. ಸದ್ಯದಲ್ಲೇ ಶಾರುಖ್‌ಗೆ ಕಣ್ಣಿನ ಸರ್ಜರಿ ನಡೆಯಲಿದೆ. ಆದರೆ ಅವರ ಕಣ್ಣಿಗೆ ಏನಾಯಿತು? ಅವರ ಆರೋಗ್ಯದ ಸಮಸ್ಯೆ ಏನು ಎಂಬುದು ತಿಳಿದು ಬಂದಿಲ್ಲ. ಮುಂಬೈನಲ್ಲಿ ಉತ್ತಮ ಡಾಕ್ಟರ್‌ಗಳಿದ್ರೂ ಕೂಡ ಯಾಕೆ ವಾಸಿಯಾಗುತ್ತಿಲ್ಲ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ನಟನ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನಲಾಗಿದೆ.

    ಅಂದಹಾಗೆ, 2014ರಲ್ಲಿ ಶಾರುಖ್ ಕಣ್ಣಿನ ಸರ್ಜರಿಗೆ ಒಳಗಾಗಿದ್ದರು. ಈಗ ಮತ್ತೆ ಪುನರಾವರ್ತನೆಯಾಗಿದೆ.

  • ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ದುಡ್ಡು ಕೊಟ್ರೆ ಮಾತ್ರ ಬರುತ್ತಾರೆ- ಬಿಟೌನ್ ಬಗ್ಗೆ ಪ್ರಿಯಾಮಣಿ ಶಾಕಿಂಗ್ ಹೇಳಿಕೆ

    ಬೆಂಗಳೂರಿನ ಬೆಡಗಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ‘ಜವಾನ್’ (Jawan) ಸಕ್ಸಸ್ ನಂತರ ಕನ್ನಡದ ಹುಡುಗಿಗೆ ಬಿಟೌನ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ಇದೀಗ ಬಾಲಿವುಡ್‌ನ ಕರಾಳ ಸತ್ಯವನ್ನು ನಟಿ ರಿವೀಲ್ ಮಾಡಿದ್ದಾರೆ. ಪಬ್ಲಿಸಿಟಿಗಾಗಿ ಸೆಲೆಬ್ರಿಟಿಗಳು ಏನೆಲ್ಲ ಮಾಡುತ್ತಾರೆ.

    ಬಾಲಿವುಡ್ ಸೆಲೆಬ್ರೆಟಿಗಳು ಜಿಮ್‌ಗೆ ಹೋಗಲಿ, ಸಲೂನ್‌ಗೆ ಹೋಗಲಿ, ಮನೆ, ಪಾರ್ಟಿ, ವಿಮಾನ ನಿಲ್ದಾಣಕ್ಕೆ ಹೋದ್ರು ಪಾಪರಾಜಿಗಳು ಮುತ್ತಿಕೊಳ್ತಾರೆ. ಹೇಗೆ ಬರ್ತಾರೆ ಇವರೆಲ್ಲಾ ಅಂತ ಅನೇಕರು ಯೋಚಿಸುತ್ತಾರೆ. ಇದಕ್ಕೆಲ್ಲಾ ಈಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಆಮೀರ್ ಖಾನ್ ಮಗನ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ

    ಟಿವಿ ಸಂದರ್ಶನವೊಂದರಲ್ಲಿ ಮಾತಾಡಿದ ಪ್ರಿಯಾಮಣಿ, ಸೆಲೆಬ್ರಿಟಿಗಳು ಒಂದು ರೀತಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರ ಎಂದಿದ್ದಾರೆ. ಸೆಲೆಬ್ರೆಟಿಗಳು ಸೂಟ್‌ನಲ್ಲಿ ಇರೋದು, ಸಲೂನ್‌ಗೆ ಹೋದಾಗಲೂ ಪಾಪರಾಜಿಗಳ ಕ್ಯಾಮೆರಾಗೆ ಸಿಗ್ತಾರೆ. ಪಾಪರಾಜಿಗಳೇ ಅವರ ಹಿಂದೆ ಓಡಾಡ್ತಿರುತ್ತಾರೆ ಎಂದು ಜನಸಾಮಾನ್ಯರು ಊಹಿಸಿರುತ್ತಾರೆ. ಆದರೆ ಅಸಲಿ ಸಂಗತಿಯೇ ಬೇರೇ ಇದೆ ಎಂದಿದ್ದಾರೆ.

    ಪ್ರಚಾರಕ್ಕಾಗಿ ಪಿಆರ್‌ಗಳ ಮೂಲಕ ಸೆಲೆಬ್ರೆಟಿಗಳೇ ಪಾಪರಾಜಿಗಳಿಗೆ ದುಡ್ಡು ಕೊಟ್ಟು ಕರೆಸಿಕೊಳ್ತಾರೆ. ದುಡ್ಡು ಕೊಟ್ಟರಷ್ಟೇ ಅವರು ಬಂದು ಫೋಟೋ-ವಿಡಿಯೋ ತೆಗೆದು ಪ್ರಚಾರ ಮಾಡೋದು ಅಂತ ನಟಿ ಪ್ರಿಯಾಮಣಿ ಹೇಳಿದ್ದಾರೆ. ಪ್ರಿಯಾಮಣಿ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

    ‘ಜವಾನ್’ ಬಳಿಕ ‘ಆರ್ಟಿಕಲ್ 370’ (Article 370) ಚಿತ್ರದಲ್ಲಿ ಪ್ರಿಯಾಮಣಿ ಯಾಮಿ ಗೌತಮಿ (Yami Gouthami) ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಮಣಿ ನಟನೆಗೆ ಮೆಚ್ಚುಗೆ ಸಿಕ್ಕಿದೆ.

  • ಅವಳಿ ಮಕ್ಕಳ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ ನಯನತಾರಾ ದಂಪತಿ

    ಅವಳಿ ಮಕ್ಕಳ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ ನಯನತಾರಾ ದಂಪತಿ

    ಬಾಲಿವುಡ್ (Bollywood) ನಟಿ ನಯನತಾರಾ- ವಿಘ್ನೇಶ್ ಶಿವನ್ ಜೋಡಿ, ಅವಳಿ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬದ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡನ್ನು ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಜವಾನ್’ (Jawan Film) ಸಕ್ಸಸ್ ಬಳಿಕ ಮತ್ತೆ ವೈಯಕ್ತಿಕ ಬದುಕಿಗೆ ನಟಿ ಸಮಯ ಮೀಸಲಿಡುತ್ತಿದ್ದಾರೆ. ಅವಳಿ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬವಾಗಿರೋ ಕಾರಣ, ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರೂ ಮಕ್ಕಳಿಗೆ ಬ್ಲ್ಯಾಕ್ & ವೈಟ್ ಡ್ರೆಸ್ ಧರಿಸಿ ಚೆಂದದ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ.

    ಶಾರುಖ್ ಖಾನ್‌ಗೆ (Sharukh Khan) ನಾಯಕಿಯಾಗುವ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮೇಲೆ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಮತ್ತಷ್ಟು ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ:ನಟಿ ಸ್ವಾತಿ ರೆಡ್ಡಿ ಡಿವೋರ್ಸ್ ವದಂತಿ: ನಟಿಯ ಅಚ್ಚರಿ ಪ್ರತಿಕ್ರಿಯೆ

    ಭಕ್ತ ಕಣ್ಣಪ್ಪ ಸಿನಿಮಾದಲ್ಲಿ ಭಕ್ತನಾಗಿ ವಿಷ್ಣು ಮಂಚು ನಟಿಸುತ್ತಿದ್ದರೆ, ಶಿವನಾಗಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ. ಪ್ರಭಾಸ್‌ಗೆ ಜೋಡಿಯಾಗಿ ಪಾರ್ವತಿ ರೋಲ್‌ನಲ್ಲಿ ನಯನತಾರಾ ಬಣ್ಣ ಹಚ್ಚಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾರುಖ್‌ಗೆ ಡಬಲ್ ಧಮಾಕಾ- ಗೆಲುವಿನ ಟ್ರ್ಯಾಕ್‌ಗೆ ಮರಳಿದ ಬಾದ್‌ಶಾ

    ಶಾರುಖ್‌ಗೆ ಡಬಲ್ ಧಮಾಕಾ- ಗೆಲುವಿನ ಟ್ರ್ಯಾಕ್‌ಗೆ ಮರಳಿದ ಬಾದ್‌ಶಾ

    ಶಾರುಖ್ ಖಾನ್ (Sharukh Khan) ಖುಷಿಗೆ ಮಿತಿಯೇ ಇಲ್ಲ. ವರ್ಷದೊಳಗೆ ಎರಡೆರಡು ಬ್ಲಾಕ್‌ಬಸ್ಟರ್ ಹಿಟ್. 7 ವರ್ಷಗಳಿಂದ ಚಪ್ಪಾಳೆಯ ಸದ್ದನ್ನೇ ಕೇಳಿರದ ಕಿಂಗ್ ಖಾನ್ ಆ ದಿನಗಳಲ್ಲಿ ಅನುಭವಿಸಿದ್ದ ಯಾತನೆ ಬಿಚ್ಚಿಟ್ಟಿದ್ದಾರೆ. ಜವಾನ್ ಸಕ್ಸಸ್‌ಮೀಟ್‌ನಲ್ಲಿ ಕಿಂಗ್ ಖಾನ್ ಭಾವುಕ ನುಡಿ. ಇದನ್ನೂ ಓದಿ:‘ಫುಲ್ ಮೀಲ್ಸ್’ ಚಿತ್ರತಂಡದಿಂದ ನಾಯಕಿಗೆ ವಿಶೇಷ ಉಡುಗೊರೆ

    ಒಂದೇ ವರ್ಷ 2 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ. ಬಾದ್‌ಶಾ ಶಾರುಖ್ ಖಾನ್ ಮತ್ತೆ ಹಳೇ ಚಾರ್ಮ್‌ಗೆ ಮರಳಿದ್ದಾರೆ. ಜವಾನ್ (Jawan Film) ಭರ್ತಿ 700 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಕಿಂಗ್ ಖಾನ್ ಸಕ್ಸಸ್ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಯಾವ ಪೀಕ್‌ಲ್ಲಿ ಅಂದ್ರೆ ಪಾರ್ಟಿಯಲ್ಲಿ ನೆಲದ ಮೇಲೆ ಮಲಗಿ ಕ್ಯಾಮೆರಾಗೆ ಪೋಸ್ ಕೊಡುವಷ್ಟು! ಯಾಕಂದ್ರೆ ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ 3 ವರ್ಷ ಸಿನಿ ಅಜ್ಞಾತವಾಸ ಅನುಭವಿಸಿದ್ದರು. ಆ ಪರಿಸ್ಥಿತಿಯಿಂದ ಹೇಗೆ ಹೊರಬಂದ್ರು. ಸಂಕಟ ಕಮ್ಮಿ ಮಾಡಲು ಸಹಕರಿಸಿದ್ದು ಯರ‍್ಯಾರು ಎಲ್ಲವನ್ನೂ ಜವಾನ್ ಸಕ್ಸಸ್ ಪಾರ್ಟಿಯಲ್ಲಿ ಶಾರುಖ್ ಮನಬಿಚ್ಚಿದ್ದಾರೆ.

    ಮುಂಬೈನಲ್ಲಿ ಅದ್ದೂರಿಯಾಗಿ ‘ಜವಾನ್’ ಸಕ್ಸಸ್ ಪಾರ್ಟಿ ನಡೆದಿದೆ. ದೀಪಿಕಾ (Deepika Padukone) ಸಮೇತವಾಗಿ ಪ್ರತಿಯೊಬ್ಬರೂ ಭಾಗಿಯಾಗಿದ್ರು. ನಯನತಾರಾ (Nayanatara) ಮಾತ್ರಾ ಮಿಸ್ಸಿಂಗ್ ಅನ್ನೋದನ್ನ ಬಿಟ್ರೆ ಶಾರುಖ್ ಎಲ್ಲರನ್ನೂ ವೇದಿಕೆಗೆ ಕರೆಸಿದ್ರು. ಈ ಸೆಲ್ಫ್ ಮೇಡ್ ಶಹಜಾದಾ ಪಠಾಣ್ (Pathaan) ಸಿನಿಮಾದ ಬಳಿಕ ಮತ್ತೊಂದು ಹಿಟ್ ಕೊಟ್ಟಿದ್ದಾರೆ.

    ಇಂಥಹ ಎಷ್ಟೋ ದಾಖಲೆಗಳನ್ನ ಶಾರುಖ್ (Sharukh Khan) ಉಡೀಸ್ ಮಾಡಿರುವ ಹಿನ್ನೆಲೆ ಇದ್ದರೂ ಕೂಡ ಶಾರುಖ್ ಚೆನೈ ಎಕ್ಸ್‌ಪ್ರೈಸ್ (Chennai Express) ಬಳಿಕ ಸೋಲಿನ ರಾಶಿಯಲ್ಲಿ ಮುಳುಗಿ ಸುಸ್ತಾಗಿದ್ರು. ಕೊನೆಗೂ ಒಂದರಮೇಲೊಂದು ಚಿತ್ರ ಯಶಸ್ಸಿನ ಹಾದಿ ಹಿಡಿಯುತ್ತಿರೋದ್ರಿಂದ ಶಾರುಖ್ ಮತ್ತೆ ಬಾದ್‌ಶಾ ಗದ್ದುಗೆಗೆ ಮರಳಿದ್ದಾರೆ. ಇದೇ ಖುಷಿಯಲ್ಲೇ ಜವಾನ್ ಸಕ್ಸಸ್‌ಮೀಟ್‌ನಲ್ಲಿ ಶಾರುಖ್ ಫ್ಲ್ಯಾಶ್‌ ಬ್ಯಾಕ್ ಕಥೆಯನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂಟಿ ಎಂದು ಕರೆದಿದ್ದಕ್ಕೆ ಪ್ರಿಯಾಮಣಿ ಕೊಟ್ರು ಖಡಕ್ ಉತ್ತರ

    ಆಂಟಿ ಎಂದು ಕರೆದಿದ್ದಕ್ಕೆ ಪ್ರಿಯಾಮಣಿ ಕೊಟ್ರು ಖಡಕ್ ಉತ್ತರ

    ಪ್ರಿಯಾಮಣಿ (Priyamani) ಯಾರಿಗೆ ಗೊತ್ತಿಲ್ಲ. ಮದುವೆಯಾದರೂ (Wedding) ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ. ಜವಾನ್‌ನಲ್ಲಿ (Jawan) ಶಾರುಖ್ ಜೊತೆ ಮಿಂಚಿದ ಮೇಲೆ ಇನ್ನಷ್ಟು ಜೋಶ್ ಬಂದಿದೆ. ಈ ಹೊತ್ತಲ್ಲೇ ಪ್ರಿಯಾಮಣಿಯನ್ನು ಯಾರೋ ಆಂಟಿ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮಲಯಾಳಿ ಕುಟ್ಟಿ ಕೊಟ್ಟ ಖಡಕ್ ಉತ್ತರ ಏನು ಗೊತ್ತೆ? ಇದನ್ನೂ ಓದಿ:Bigg Boss Kannada 10: ಊರ ಹಬ್ಬಕ್ಕೆ ರೆಡಿಯಾದ ಕಿಚ್ಚ ಸುದೀಪ್

    ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ (National Award) ಪಡೆದ ಹುಡುಗಿ. ಆಮೇಲೆ ಪಂಚಭಾಷೆಗಳಲ್ಲಿ ಮಿಂಚಿದರು. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎಂದರು. ಅದೇ ಪ್ರಿಯಾಮಣಿ ಡಿವೋರ್ಸಿಯನ್ನು (Divorce) ಮದುವೆಯಾದರು. ಆಗ ವಿವಾದ ಎದ್ದಿತ್ತು. ಇದೀಗ ಜವಾನ್‌ನಲ್ಲಿ ಕಿಂಗ್‌ಖಾನ್ ಜೊತೆ ಹಬ್ಬ ಮಾಡಿದ್ದಾರೆ. ಯಾರೋ ಒಬ್ಬ ಇಂಥ ಪ್ರಿಯಾಗೆ ಆಂಟಿ ಎನ್ನಬೇಕಾ? ಯಾರಿಗೆ ತಾನೇ ಪಿತ್ತ ನೆತ್ತಿಗೇರಲ್ಲ? ಪ್ರಿಯಾಮಣಿ ಕೊಟ್ಟಿದ್ದು ಉತ್ತರ ಅಲ್ಲ.ಜ್ವಾಲಾಮುಖಿ ಸೂಪು.

    ಏಯ್ ನಂಗ್ಯಾರೊ ಆಂಟಿ ಅನ್ನೋರು? ನಂಗಿನ್ನೂ 38 ವರ್ಷ. ಹಾಗಿದ್ರೂ ಹಾಟ್ ಹಾಟ್ ಆಗಿದ್ದೀನಿ ಬಾಯ್ ಮುಚ್ಕೊಳ್ಳಿ ಪ್ರಿಯಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಬ್ಬಾಶ್ ಎಂದಿದ್ದಾರೆ. ಮೂವತ್ತೆಂಟು ವಯಸ್ಸು ಆದ್ರೂ ಕಮ್ಮಿ ಇಲ್ಲ ತೇಜಸ್ಸು. ನೀನೇ ನಮ್ಮ ಕಲ್ಲಂಗಡಿ ಜ್ಯೂಸು ಹೀಗೆ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿಲ್ಲ ನಗಿಸಿದ್ದಾರೆ. ಪ್ರಿಯಾ ಮಣಿಯಂತೆ ವಯಸ್ಸನ್ನು ಹೇಳುವ ನಾ ಆಂಟಿ ಅಲ್ರಪ್ಪಾ ಎನ್ನುವ ಗತ್ತು ಯಾರಿಗಿದೆ?

    ಸದ್ಯ ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್ (Sharukh Khan) ಜೊತೆ ಪ್ರಿಯಾಮಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ರಿಲೀಸ್‌ಗೆ 2 ದಿನ ಬಾಕಿ- ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್

    ‘ಜವಾನ್’ ರಿಲೀಸ್‌ಗೆ 2 ದಿನ ಬಾಕಿ- ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್

    ಶಾರುಖ್ ಖಾನ್ (Sharukh Khan) ನಟನೆಯ ಜವಾನ್ (Jawan Film)  ಸಿನಿಮಾ ಇದೇ ಸೆ.7ರಂದು ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಬಿಡುಗಡೆಗೆ 2 ದಿನ ಬಾಕಿಯಿರುವಾಗಲೇ ಶಾರುಖ್ ಖಾನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪಠಾಣ್ (Pathaan) ನಟನ ಭಕ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

    ಇತ್ತೀಚಿಗಷ್ಟೇ ವೈಷ್ಣೋದೇವಿ ದೇವಾಲಯಕ್ಕೆ ಶಾರುಖ್ & ಟೀಂ ಭೇಟಿ ನೀಡಿದ್ದರು. ನಯನತಾರಾ (Nayanatara) ಜೊತೆ ತಿರುಪತಿ(Tirupati) ತಿಮ್ಮಪ್ಪನ ದರ್ಶನವನ್ನ ನಟ ಪಡೆದಿದ್ದಾರೆ. ಈ ವೇಳೆ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಭಾಗಿಯಾಗಿದ್ದರು. ತಿಮ್ಮಪ್ಪನ ದರ್ಶನದ ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಿಳಿ ಬಣ್ಣ ಪಂಚೆ ಶಲ್ಯ ಧರಿಸಿ ಶಾರುಖ್‌ ಮಿಂಚಿದ್ದಾರೆ.

    ಪಠಾಣ್ ಅಂತೆಯೇ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಲಿ ಎಂದು ಶಾರುಖ್ ಪಣ ತೊಟ್ಟಿದ್ದಾರೆ. ಸಿನಿಮಾ ಹಿಟ್ ಆಗಲೇಬೇಕು ಎಂದು ಭರ್ಜರಿಯಾಗಿ ಪ್ರಮೋಟ್ ಮಾಡ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಜವಾನ್ ರಿಲೀಸ್ ದಿನ 85 ಸಾವಿರಕ್ಕೂ ಅಧಿಕ ಜನ ಅಭಿಮಾನಿಗಳು ಸೇರುತ್ತಿದ್ದಾರೆ. ಜವಾನ್ ಗೆಲುವನ್ನ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ

    ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಹೀರೋ ಮುಂದೆ ವಿಜಯ್ ಸೇತುಪತಿ (Vijay Sethupathi) ಅಬ್ಬರಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಎಲ್ಲವೂ ಕಮಾಲ್ ಮಾಡಿದೆ. ಇದೇ ಸೆಪ್ಟೆಂಬರ್ 7ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ

    ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ

    ‘ಜವಾನ್’ (Jawan) ಬ್ಯೂಟಿ ನಯನತಾರಾ (Nayanatara) ಇದೀಗ ಇನ್ಸ್ಟಾಗ್ರಾಂಗೆ ಲಗ್ಗೆ ಇಟ್ಟಿದ್ದಾರೆ. ಹೊಸ ಖಾತೆಯನ್ನ ನಟಿ ಕ್ರಿಯೇಟ್ ಮಾಡಿದ ಕೆಲವೇ ಗಂಟೆಯಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಟಿಯ ನಯಾ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

    ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ನಯನತಾರಾ ಆ್ಯಕ್ಟೀವ್ ಆಗಿದ್ದರು. ಆದರೆ ಸಾಮಾಜಿಕ ಜಾಲತಾಣಗಳಿಂದ ನಟಿ ದೂರವಿದ್ದರು. ಈಗ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. 15 ಲಕ್ಷ ಫಾಲೋವರ್ಸ್‌ ಹೊಂದಿರುವ ನಟಿ ಮೊದಲ ಪೋಸ್ಟ್ ಆಗಿ ‘ಜವಾನ್’ ಸಿನಿಮಾದ ಟ್ರೈಲರ್ ಹಂಚಿಕೊಂಡಿದ್ದಾರೆ. ಬಳಿಕ ಅವಳಿ ಮಕ್ಕಳ ಜೊತೆಯಿರುವ ಮುದ್ದಾದ ಫೋಟೋವನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮೂಗುತಿ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by N A Y A N T H A R A (@nayanthara)

    ಇದೇ ಸೆ.7ಕ್ಕೆ ಜವಾನ್ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಮೊದಲ ಬಾರಿಗೆ ಶಾರುಖ್ ಖಾನ್‌ಗೆ(Sharukh Khan) ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಟೀಸರ್, ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

    ಜವಾನ್ ಸಿನಿಮಾದಲ್ಲಿ ಶಾರುಖ್, ನಯನತಾರಾ, ವಿಜಯ್ ಸೇತುಪತಿ(Vijay Sethupathi), ಪ್ರಿಯಾಮಣಿ (Priyamani) ಸೇರಿದಂತೆ ಹಲವರು ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jawan Film:’ಜಿಂದಾ ಬಂದಾ’ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ ಶಾರುಖ್ ಖಾನ್

    Jawan Film:’ಜಿಂದಾ ಬಂದಾ’ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ ಶಾರುಖ್ ಖಾನ್

    ‘ಪಠಾಣ್’ (Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ತಾವು ಗೆಲ್ಲಲೇಬೇಕು ಅಂತಾ ಶಾರುಖ್ ಖಾನ್ ಪಣ ತೊಟ್ಟಂತೆಯಿದೆ. ‘ಜವಾನ್’ (Jawan) ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ‘ಜಿಂದಾ ಬಂದಾ’ (Zinda Bandha) ಅಂತಾ ಬಾದಶಾ ಜಬರ್‌ದಸ್ತ್ ಆಗಿ ಕುಣಿದಿದ್ದಾರೆ.

    ದೀಪಿಕಾ ಪಡುಕೋಣೆ ಜೊತೆ ‘ಪಠಾಣ್’ ಸಿನಿಮಾ ಮೂಲಕ ಶಾರುಖ್ ಬಿಗ್ ಹಿಟ್ ಕೊಟ್ಟ ಮೇಲೆ ಜವಾನ್ ಆಗಿ ಮಿಂಚಲು ಶಾರುಖ್ ಖಾನ್ (Sharukh Khan) ರೆಡಿಯಾಗಿದ್ದಾರೆ. ನಯನತಾರಾ (Nayanatara) ಜೊತೆ ಬಾದಶಾ ಮತ್ತೆ ಬಿಗ್ ಹಿಟ್ ಕೊಡಲು ಸಜ್ಜಾಗಿದ್ದಾರೆ. ಜವಾನ್ ಟೀಸರ್‌ನಿಂದ ಶಾರುಖ್ ಈ ಹಿಂದೆ ಹೈಪ್ ಕ್ರಿಯೆಟ್ ಮಾಡಿದ್ರು. ಈಗ ಸಿನಿಮಾದ ಮೊದಲ ಸಾಂಗ್ ಫ್ಯಾನ್ಸ್‌ಗೆ ಸೂಪರ್ ಕಿಕ್ ಕೊಡುತ್ತಿದೆ. ಇದನ್ನೂ ಓದಿ:ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

    ಶಾರುಖ್ ಖಾನ್ ಅವರ ಸಿನಿಮಾಗಳಲ್ಲಿ ಹಾಡಿಗೆ ಬಹಳ ಮಹತ್ವ ನೀಡಲಾಗುತ್ತದೆ. ಅದು ಜವಾನ್ ಸಿನಿಮಾದಲ್ಲೂ ಮುಂದುವರಿದಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ಬಹಳ ಮಾಸ್ ಆಗಿ ‘ಜಿಂದಾ ಬಂದಾ’ ಹಾಡು ಮೂಡಿಬಂದಿದೆ. ತುಂಬ ಅದ್ದೂರಿಯಾಗಿ ಇದನ್ನು ಶೂಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಬರೋಬ್ಬರಿ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಶಾರುಖ್ ಖಾನ್ ಜೊತೆ ಸಾವಿರಾರು ಹುಡುಗಿಯರು ಡ್ಯಾನ್ಸ್ ಮಾಡಿರುವುದು ಈ ಹಾಡಿನ ವಿಶೇಷ. ರಿಲೀಸ್ ಆಗಿ ಕೆಲವೇ ನಿಮಿಷಗಳಲ್ಲಿ ಭರ್ಜರಿ ವಿವ್ಸ್ ಬಾಚಿಕೊಳ್ತಿದೆ.

    1000 ಡ್ಯಾನ್ಸರ್‌ಗಳ ನಡುವೆ ಶಾರುಖ್ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಜವಾನ್ ಚಿತ್ರ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಗೌರಿ ಖಾನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಶಾರುಖ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಪ್ರಿಯಾಮಣಿ, ದೀಪಿಕಾ ಪಡುಕೋಣೆ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

    2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

    ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

    ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.