Tag: jawan 2

  • ‘ಜವಾನ್ 2’ ಜೊತೆ ಮತ್ತೊಂದು ಸರ್ ಪ್ರೈಸ್ ನೀಡಿದ ನಿರ್ದೇಶಕ ಅಟ್ಲಿ

    ‘ಜವಾನ್ 2’ ಜೊತೆ ಮತ್ತೊಂದು ಸರ್ ಪ್ರೈಸ್ ನೀಡಿದ ನಿರ್ದೇಶಕ ಅಟ್ಲಿ

    ಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿ (Atli) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

    ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಭಾರತದಲ್ಲೇ 400 ಕೋಟಿಗೂ ಅಧಿಕ ಹಣ ಬಾಚಿದೆ. ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಹಣ ನಿರ್ಮಾಪಕರಿಗೆ ಹರಿದು ಬಂದಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

     

    ಜವಾನ್ 2 ಸಿನಿಮಾದಲ್ಲಿ ವಿಕ್ರಮ್ ರಾಥೋಡ್ ಪಾತ್ರದ ಮೇಲೆ ಹೆಚ್ಚು ಫೋಕಸ್ ಮಾಡಲಾಗುವುದು ಮತ್ತು ಈ ಸಿನಿಮಾ ಇನ್ನೂ ವಿಶೇಷವಾಗಿ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ ಅಟ್ಲಿ. ಜವಾನ್ ಸಿನಿಮಾ ಭಾರೀ ಗೆಲುವು ಸಾಧಿಸುತ್ತಿದ್ದಂತೆಯೇ ಬಾಲಿವುಡ್ ನಲ್ಲೂ ಅಟ್ಲಿ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಪಾರ್ಟ್ 2: ಶಾರುಖ್‌ ಖಾನ್‌ ಹೇಳಿದ್ದೇನು?

    ‘ಜವಾನ್’ ಪಾರ್ಟ್ 2: ಶಾರುಖ್‌ ಖಾನ್‌ ಹೇಳಿದ್ದೇನು?

    ಶಾರುಖ್ ಖಾನ್ (Sharukh Khan) ನಟನೆಯ ‘ಜವಾನ್’ (Jawan) ಸಿನಿಮಾ ಚಿತ್ರಮಂದಿರಲ್ಲಿ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಜವಾನ್ 2 (Jawan 2) ಬರುವ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ.

    ಶಾರುಖ್- ವಿಜಯ್ ಸೇತುಪತಿ (Vijay Sethupathi) ಜುಗಲ್‌ಬಂದಿ ಜವಾನ್ ಸಿನಿಮಾದಲ್ಲಿ ವರ್ಕೌಟ್ ಆಗಿದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಶಾರುಖ್‌ಗೆ ‘ಜವಾನ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅವರ ಉತ್ತರ ಜವಾನ್ 2 ಬರುವ ಬಗ್ಗೆ ಸೂಚನೆ ಕೊಟ್ಟಿದೆ.

    ಅಭಿಮಾನಿಯೊಬ್ಬರು, ಸರ್, ನೀವೇಕೆ ಕಾಳಿ ವಿಜಯ್ ಸೇತುಪತಿ ಜೊತೆಗೆ ಡೀಲ್ ಮಾಡಿಕೊಳ್ಳಲಿಲ್ಲ? ನಾನು ವಿಜಯ್ ಸೇತುಪತಿ ಸರ್‌ಗೆ ದೊಡ್ಡ ಅಭಿಮಾನಿ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ನಾನು ಕೂಡ ವಿಜಯ್ ಸರ್‌ಗೆ ದೊಡ್ಡ ಅಭಿಮಾನಿ. ನಾನು ಈಗಾಗಲೇ ಕಾಳಿಯ ಕಪ್ಪು ಹಣವನ್ನು ತೆಗೆದುಕೊಂಡು ಬಂದಿದ್ದೇನೆ. ಈಗ ಬೇರೆಯವರ ಕಪ್ಪು ಹಣವನ್ನು ಹೊರ ತೆಗೆಯುವುದಕ್ಕೆ ಕಾಯುತ್ತಿದ್ದೇನೆ. ವೀಸಾಗಾಗಿ ಕಾಯುತ್ತಿದ್ದೇನೆ ಎಂದು ಟ್ಟೀಟ್ ಮಾಡಿದ್ದಾರೆ. ಈ ಟ್ವೀಟ್ ಜವಾನ್ 2 ಬರುವ ಬಗ್ಗೆ ಸೂಚನೆ ನೀಡುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಯಶ್ 19 ಚಿತ್ರಕ್ಕೆ ಸಂಯುಕ್ತಾ ಮೆನನ್ ನಾಯಕಿ: ಈ ತಿಂಗಳಲ್ಲೇ ಘೋಷಣೆ?

    ಜವಾನ್‌ನಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಮುಗಿದ ಮೇಲೆ ಪಾರ್ಟ್ 2 ಬರುವ ರೀತಿಯಲ್ಲಿ ಒಂದು ಸೀನ್ ಇಡಲಾಗಿದೆ. ಅದಕ್ಕೆ ತಕ್ಕಂತೆ ಶಾರುಖ್ ಟ್ವೀಟ್ ಕೂಡ ಹೋಲಿಕೆಯಾಗುತ್ತಿದೆ. ಜವಾನ್ ಸೀಕ್ವೆಲ್ ಬಂದೇ ಬರುತ್ತೆ ಅಂತಾ ಫ್ಯಾನ್ಸ್ ಸಂಭ್ರಮದಲ್ಲಿದ್ದಾರೆ. ‘ಜವಾನ್ 2’ ಬರುವ ಬಗ್ಗೆ ಈ ಮೂಲಕ ನಟ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]