Tag: Jawahar Navodaya Vidyalaya

  • ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು

    ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ (Haryana) ಮದನ ಖುರ್ದ್ (Madana Khurd) ಎಂಬಲ್ಲಿ ಸೋಮವಾರ ನಡೆದಿದೆ.

    ಮೃತರ ಕುತ್ತಿಗೆ ಮತ್ತು ತಲೆಯ ಮೇಲೆ ಗುರುತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೊದಲು ವ್ಯಕ್ತಿ ತನ್ನ ಹೆಂಡತಿ, ಮಗಳು ಮತ್ತು ಮಗನನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ನೇಣು ಬಿಗಿದುಕೊಂಡಿದ್ದಾನೆ. ಮೃತ ವ್ಯಕ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವರ ಮಗಳು ಜವಾಹರ ನವೋದಯ ವಿದ್ಯಾಲಯದಲ್ಲಿ (Jawahar Navodaya Vidyalaya) 11ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮಗ 9ನೇ ತರಗತಿಯಲ್ಲಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

    CRIME

    ದುಜಾನಾ ಪೊಲೀಸ್ ಠಾಣಾಧಿಕಾರಿ (SHO) ಸುನೀಲ್ ಕುಮಾರ್ ಮಾತನಾಡಿ, ಸೋಮವಾರ ಮನೆಯೊಂದರಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ (Forensic Science Laboratory team) ತಂಡ ತನಿಖೆಗಾಗಿ ಸಾಕ್ಷ್ಯಗಳನ್ನು (Evidence) ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ.

    ಮೃತನ ಸಹೋದರನ ಹೇಳಿಕೆ ಮೇರೆಗೆ ದುಜಾನಾ (Dujana) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

  • ಜವಾಹರ್‌ ನವೋದಯ ಶಾಲೆ 59 ವಿದ್ಯಾರ್ಥಿಗಳು ಸೇರಿ 69 ಮಂದಿಗೆ ಕೊರೊನಾ

    ಜವಾಹರ್‌ ನವೋದಯ ಶಾಲೆ 59 ವಿದ್ಯಾರ್ಥಿಗಳು ಸೇರಿ 69 ಮಂದಿಗೆ ಕೊರೊನಾ

    ಚಿಕ್ಕಮಗಳೂರು: ಎನ್‌.ಆರ್‌.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಜವಾಹರ್‌ ನವೋದಯ ವಿದ್ಯಾಲಯದ 59 ವಿದ್ಯಾರ್ಥಿಗಳು ಹಾಗೂ 10 ಸಿಬ್ಬಂದಿ ಸೇರಿ ಒಟ್ಟು 69 ಮಂದಿಗೆ ಕೊರೊನಾ ಸೋಂಕು ತಗುಲಿದೆ.

    ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಒಟ್ಟು 443 ಮಂದಿಯ ಸ್ವ್ಯಾಬ್ ಪಡೆದು ಪರೀಕ್ಷೆ ನಡೆಸಲಾಯಿತು. ವರದಿಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ 69 ಮಂದಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಭಾರತದಲ್ಲಿ 5ಕ್ಕೇರಿದ ಸಂಖ್ಯೆ

    ಸೋಂಕು ಪತ್ತೆಯಾದ ಎಲ್ಲರಲ್ಲಿಯೂ ರೋಗದ ಲಕ್ಷಣಗಳಿಲ್ಲ. ಕೊರೊನಾ ಸೋಂಕಿತರನ್ನು ಜವಾಹರ್‌ ನವೋದಯ ವಿದ್ಯಾಲಯದಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ವಸತಿ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

  • ಜವಾಹರ್ ನವೋದಯ ವಿದ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

    ಜವಾಹರ್ ನವೋದಯ ವಿದ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

    ಮಡಿಕೇರಿ: ನಗರದ ಹೊರ ವಲಯದಲ್ಲಿರುವ ಗಾಳಿಬೀಡು ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸರಿಯಾದ ಮೂಲತಃ ಸೌಕರ್ಯಗಳು ಇಲ್ಲದೇ ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಅಳಲನ್ನು ವ್ಯಕ್ತಪಡಿಸಿದ್ದಾರೆ. ಶಾಲೆಯ ಪರಿಸ್ಥಿತಿ ಕಂಡ ಪೋಷಕರು ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

    ತಮ್ಮ ಮಕ್ಕಳು ಒಳ್ಳೆಯ ವಿದ್ಯಾಲಯದದಲ್ಲಿ ಕಲಿಯುತ್ತಾರೆ. ನಮ್ಮಗೂ ಹೆಮ್ಮೆ ಎಂಬ ಉದ್ದೇಶದಿಂದ ನವೋದಯ ವಿದ್ಯಾ ಸಂಸ್ಥೆಗೆ ಸೇರಿಸಲು ಪೋಷಕರು ಇಚ್ಚಿಸಿದ್ದರು. ಆದರೆ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಬೇಕಾದ ಸರಿಯಾದ ನೀರಿನ ವ್ಯವಸ್ಥೆ, ಸರಿಯಾದ ಸ್ವಚ್ಚತೆ, ಉತ್ತಮ ಶೌಚಾಲಯ ಕೂಡ ವ್ಯವಸ್ಥೆಯೂ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.

    ಮಡಿಕೇರಿ ವರ್ಷದ 9 ತಿಂಗಳು ಶೀತದ ವಾತಾವರಣ ಇರುವುದರಿಂದ ಶಾಲೆಯ ಕೊಠಡಿಗಳು ಈಗಾಗಲೇ ಪಾಚಿ ಹಿಡಿದಿದೆ. ಮಕ್ಕಳು ಶೀತದಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಈ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಕ್ಕಳ ಸಮಸ್ಯೆಯನ್ನು ಆಲಿಸಿ ಬಹುಬೇಗ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂಬ ಭವರಸೆಯನ್ನು ನೀಡಿದ್ದಾರೆ.