Tag: jawad cyclone

  • ಜವಾದ್ ಚಂಡಮಾರುತದ ಅಬ್ಬರ – 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಜವಾದ್ ಚಂಡಮಾರುತದ ಅಬ್ಬರ – 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಏರ್ಪಟ್ಟಿರುವ ಜವಾದ್ ಚಂಡಮಾರುತದ ಅಬ್ಬರ ಜೋರಾಗಿದೆ. ಸದ್ಯ ಪಶ್ಚಿಮ ವಾಯುವ್ಯ ದಿಕ್ಕಿನತ್ತ ಗಂಟೆಗೆ 25 ಮೈಲಿ ವೇಗದಲ್ಲಿ ಚಲಿಸುತ್ತಿರುವ ಜವಾದ್ ಚಂಡಮಾರುತ ವಿಶಾಖಪಟ್ಟಣದ ಆಗ್ನೇಯ ದಿಕ್ಕಿನಲ್ಲಿ 420 ಕಿಲೋಮೀಟರ್ ದೂರದಲ್ಲಿ ಒಡಿಶಾದ ಗೋಪಾಲಪುರದಿಂದ 530 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ.

    ನಾಳೆ ಬೆಳಗ್ಗೆ ಆಂಧ್ರದ ಉತ್ತರ ಕರಾವಳಿ ತೀರದ ಸನಿಹಕ್ಕೆ ಬರುವ ನಿರೀಕ್ಷೆ ಇದೆ. ಚಂಡಮಾರುತ ತೀರಕ್ಕೆ ಹತ್ತಿರವಾದಂತೆಲ್ಲಾ ದಿಕ್ಕನ್ನು ಬದಲಿಸುವ ಸಾಧ್ಯತೆ ಇದ್ದು, ಪುರಿಯತ್ತ ಅದು ಚಲಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಆಂಧ್ರದ ಕರಾವಳಿಯಲ್ಲಿ ಗಾಳಿ ಸಹಿತ ಮಳೆ ಶುರುವಾಗಿದೆ. ಈಗಾಗಲೇ ಆಂಧ್ರಪ್ರದೇಶದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಹಲವೆಡೆ 200 ಮಿಲಿಮೀಟರ್‌ನಷ್ಟು ಮಳೆ ಸುರಿಯುವ ಸಂಭವ ಇದೆ. ಇದನ್ನೂ ಓದಿ: ಯುವಕರು ಹೋದಲೆಲ್ಲಾ ಮೋದಿ.. ಮೋದಿ..ಅಂತಿದ್ರು, ಈಗ ಮೋದಿ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ: ಸಿದ್ದರಾಮಯ್ಯ

    ಹವಾಮಾನ ಇಲಾಖೆಯ ಪ್ರಕಾರ ಸಮುದ್ರದ ಅಲೆಗಳ ಆರ್ಭಟ ನಾಲ್ಕು ಮೀಟರ್‌ವರೆಗೂ ಏಳಬಹುದು. ತಗ್ಗು ಪ್ರದೇಶದ ಜನತೆ ಎಚ್ಚರದಿಂದ ಇರಬೇಕು. ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ. ಪ್ರಧಾನಿ ಮೋದಿ ಕೂಡ ಜವಾದ್ ಚಂಡಮಾರುತದ ಕುರಿತಾಗಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಾಸ್ಕ್ ಧರಿಸದಿದ್ರೆ ಇನ್ಮುಂದೆ ನಗರ ಪ್ರದೇಶದಲ್ಲಿ 250, ಹಳ್ಳಿಗಳಲ್ಲಿ 100 ರೂ. ದಂಡ ಫಿಕ್ಸ್

  • ಜವಾದ್ ಚಂಡಮಾರುತ ಭೀತಿ- ರೈಲುಗಳ ಸೇವೆ ತಾತ್ಕಾಲಿಕ ರದ್ದು

    ಜವಾದ್ ಚಂಡಮಾರುತ ಭೀತಿ- ರೈಲುಗಳ ಸೇವೆ ತಾತ್ಕಾಲಿಕ ರದ್ದು

    ಹುಬ್ಬಳ್ಳಿ: ಈಗಾಗಲೇ ದೇಶಾದ್ಯಂತ ವರುಣನ ಅಬ್ಬರ ಜೋರಾಗಿದೆ. ಅಲ್ಲದೆ ಜವಾದ್ ಚಂಡಮಾರುತದ ಹಿನ್ನೆಲೆಯಲ್ಲಿ ಕೆಲವೊಂದು ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.

    ಡಿಸೆಂಬರ್ 03ರಂದು ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್‌ಪ್ರೆಸ್,12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್‌ಪ್ರೆಸ್,18464 ಕೆಎಸ್ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ಸೇವೆ ರದ್ದಾಗಿದೆ. ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ಇನ್ನೂ ಡಿ.4 ರಂದು ರೈಲು ಸಂಖ್ಯೆ 18463 ಭುಬನೇಶ್ವರ – ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್‌ಪ್ರೆಸ್, 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ. ಇದನ್ನೂ ಓದಿ: ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ