Tag: Jawa Bike

  • ಎತ್ತಿನ ಗಾಡಿ ನಂತ್ರ ಜಾವಾ ಓಡಿಸಿದ ಸಾರಥಿ

    ಎತ್ತಿನ ಗಾಡಿ ನಂತ್ರ ಜಾವಾ ಓಡಿಸಿದ ಸಾರಥಿ

    ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತೋಟದಲ್ಲಿ ಸಮಯ ಕಳೆಯುತ್ತಿದ್ದಾರೆ. ಸದ್ಯ ಇತ್ತೀಚೆಗೆ ಎತ್ತಿನ ಗಾಡಿ ಓಡಿಸಿದ್ದ ದರ್ಶನ್ ಇದೀಗ ಜಾವಾ ಗಾಡಿಯನ್ನು ಓಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್

    ನಟ ದರ್ಶನ್ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದು, ಇತ್ತೀಚೆಗೆ ಎತ್ತಿನ ಗಾಡಿ ಓಡಿಸಿ ಖುಷಿ ಪಟ್ಟಿದ್ದರು. ಇದೀಗ ತೋಟದ ಮನೆಯಲ್ಲಿ ಜಾವಾ ಬೈಕ್ ಓಡಿಸಿ ದರ್ಶನ್ ಖುಷಿ ಪಟ್ಟಿದ್ದಾರೆ. ದರ್ಶನ್ ಬೈಕ್ ಓಡಿಸುತ್ತಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೆ ದರ್ಶನ್ ಮಾಜಿ ಸಚಿವ ವಿನಯ ಕುಲಕರ್ಣಿ ಹಾಲಿನ ಡೈರಿಗೆ ಭೇಟಿ ನೀಡಿದ್ದರು. ಹಲವು ವರ್ಷಗಳಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ದರ್ಶನ್ ಸ್ನೇಹರಾಗಿದ್ದು, ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾರೆ. ಇದೇ ವೇಳೆ ದರ್ಶನ್ ಧಾರವಾಡದಲ್ಲಿ ಚಕ್ಕಡಿ ಸವಾರಿ ಮಾಡಿದ್ದರು.

    https://www.instagram.com/p/CEwtoJHnWbN/?igshid=1lotu3zh27ihg

    ಅಷ್ಟೇ ಅಲ್ಲದೇ ದರ್ಶನ್ ಅವರು ದಾವಣಗೆರೆಯ ಎಸ್.ಎಸ್ ಮಲ್ಲಿಕಾರ್ಜುನ ಫಾರ್ಮ್ ಗೌಸ್‍ಗೆ ಭೇಟಿ ನೀಡಿದ್ದರು. ತಮ್ಮ ಹಳದಿ ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ಬಂದಿದ್ದು, ದಾವಣಗೆರೆಯ ಶಾಮನೂರು ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು. ದರ್ಶನ್ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಗೆಸ್ಟ್ ಹೌಸ್‍ಗೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಈ ವೇಳೆ ಪೊಲೀಸರು ಲ್ಯಾಂಬೋರ್ಗಿನಿ ಕಾರು ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.