Tag: Javagal

  • ಹಾಸನ | ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

    ಹಾಸನ | ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

    ಹಾಸನ: ಅಪ್ರಾಪ್ತನೊಬ್ಬ ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆಗೈದ ಪ್ರಕರಣ ಅರಸೀಕೆರೆಯ (Arsikere) ಬಂದೂರು ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ಮೀನಾಕ್ಷಮ್ಮ (43) ಎಂದು ಗುರುತಿಸಲಾಗಿದೆ. ಹತ್ಯೆಗೈದ ಬಾಲಕ ಚಿಕ್ಕಂದಿನಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು, ಮೀನಾಕ್ಷಮ್ಮರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಅವರೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ಬಂದೂರು ಗ್ರಾಮದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದ ಮಹಿಳೆಯ ಜೊತೆ ಸೆ.15ರಂದು ಬಾಲಕ ಪುನಃ ಜಗಳವಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಮೀನಾಕ್ಷಮ್ಮ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಸೆ.16 ರಂದು ತಮ್ಮ ತಾಯಿಯದ್ದು ಅನುಮಾನಸ್ಪದ ಸಾವು ಎಂದು ಅವರ ಪುತ್ರ ದಿನೇಶ್ ಪೊಲೀಸರಿಗೆ ದೂರು ನೀಡಿದ್ದರು.

    ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಾವಗಲ್ (Javagal) ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಗಡ್ಚಿರೋಲಿ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಬಲಿ

  • ಮನೆ ಬಾಗಿಲು ಮುರಿದು ಬಂದೂಕು ಕದ್ದ ಕಳ್ಳರು

    ಮನೆ ಬಾಗಿಲು ಮುರಿದು ಬಂದೂಕು ಕದ್ದ ಕಳ್ಳರು

    ಹಾಸನ: ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಬಂದೂಕನ್ನು ಕದ್ದಿರುವ ಘಟನೆ ಅರಸೀಕೆರೆಯ (Arsikere) ಕೆ.ಕೆಂಗನಹಳ್ಳಿಯಲ್ಲಿ ನಡೆದಿದೆ.

    ಅನಿಲ್‍ಕುಮಾರ್ ಎಂಬವರಿಗೆ ಸೇರಿದ ಬಂದೂಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಅನಿಲ್ ಅವರು ತಂದೆಯ ಕಣ್ಣಿನ ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕಳ್ಳರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್

    ಮನೆಯಲ್ಲಿ ಯಾರು ಇಲ್ಲದಿರುವುದು ಗ್ರಾಮಸ್ಥರಿಗೆ ಗೊತ್ತಿತ್ತು. ಆದರೆ ಬೆಳಗ್ಗೆ ಬಾಗಿಲು ತೆರೆದಿರುವುದನ್ನು ನೋಡಿದ ಗ್ರಾಮಸ್ಥರು ಮನೆಯ ಬಳಿ ತೆರಳಿ ನೋಡಿದ್ದಾರೆ. ಈ ವೇಳೆ ಬಾಗಿಲು ಒಡೆದಿರುವ ವಿಚಾರ ತಿಳಿದಿದೆ. ಕೂಡಲೇ ಗ್ರಾಮಸ್ಥರು ಅನಿಲ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

    ಬೆಂಗಳೂರಿನಿಂದ ಅನಿಲ್ ವಾಪಾಸ್ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ 20,000 ರೂ. ಬೆಲೆ ಬಾಳುವ ಡಿಬಿಬಿಎಲ್ ಬಂದೂಕನ್ನು ಕದ್ದಿರುವುದು ತಿಳಿದಿದೆ.

    ಈ ಸಂಬಂಧ ಜಾವಗಲ್ (Javagal) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 110 ಅಡಿ ತಲುಪಿದ KRS ನೀರಿನ ಮಟ್ಟ – ಡ್ಯಾಂ ಭರ್ತಿಗೆ 14 ಅಡಿಯಷ್ಟೇ ಬಾಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]