Tag: jatre

  • ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

    ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!

    ಚಾಮರಾಜನಗರ: ಇಲ್ಲಿನ ತಮ್ಮಡಹಳ್ಳಿಯಲ್ಲಿ ಮಹಿಳೆಯೊಬ್ಬರು ಭಾವೋದ್ವೇಗಕ್ಕೆ ಒಳಗಾಗಿರುವ ಪ್ರಸಂಗ ಚಾಮರಾಜನಗರದಲ್ಲಿ (Chamarajanagara) ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ.

    ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯಲ್ಲಿ ಸ್ಥಗಿತಗೊಂಡ ಗುಜ್ಜಮ್ಮತಾಯಿ ಕೊಂಡೋತ್ಸವ ಸ್ಥಗಿತಗೊಂಡ ಬೆನ್ನಲ್ಲೇ ತನ್ನ ಮೇಲೆ ಗುಜ್ಜಮ್ಮತಾಯಿ ದೇವರು ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಮಹಿಳೆ ಊರಿನ ಜನಕ್ಕೆ ಶಾಪ ಹಾಕಿದ್ದಾರೆ. ಈ ಮಹಿಳೆ ಕೊಂಡ ಹಾಯಲು ಮೂರು ದಿನ ಉಪವಾಸ ಇದ್ದರು ಎಂದೂ ಸಹ ಹೇಳಲಾಗಿದೆ. ಇದನ್ನೂ ಓದಿ: ಡಿಕೆಶಿ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿಲ್ಲ, ತಿದ್ದುಪಡಿ ಬಗ್ಗೆ ಮಾತಾಡಿರೋದು: ಪ್ರಿಯಾಂಕ್ ಖರ್ಗೆ

    ನನ್ನ ಕೊಂಡ, ನನ್ನ ಜಾತ್ರೆ, ನನ್ನ ಕನ್ನಡಿ ಎಲ್ಲವನ್ನು ನಿಲ್ಲಿಸಿ ಮೋಸ ಮಾಡಿದ್ದಾರೆ. ನನ್ನ ಜಾತ್ರೆ ನಿಲ್ಸಿದ್ದೀರಿ… ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ.. ಎಂದು ಪೊಲೀಸರ ಮುಂದೆಯೇ ಮಹಿಳೆ ಶಾಪಾ ಹಾಕಿದ್ದಾರೆ. ಈ ಕುರಿತ ವಿಡಿಯೋ ತುಣುಕು ಹರಿದಾಡುತ್ತಿದೆ. ಇದನ್ನೂ ಓದಿ: ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿ – ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

  • ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ನ್ನಡದ ಖ್ಯಾತ ನಟ ಸುದೀಪ್ (Sudeep) ಅಭಿಮಾನಿಗಳು (Fans) ವಾಲ್ಮೀಕಿ (Valmiki) ಜಾತ್ರೆಯಲ್ಲಿ (Jatre) ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಗೂ ಸುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಪದೇ ಪದೇ ಆಯೋಜಕರು ಸುದೀಪ್ ಅವರ ಹೆಸರನ್ನು ಹೇಳುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದಿದ್ದಾರೆ. ಸುದೀಪ್ ಅವರಿಗೆ ಆಹ್ವಾನವಿದ್ದರೆ ಯಾವುದೇ ಕಾರಣಕ್ಕೂ ಅವರು ತಪ್ಪಿಸುತ್ತಿರಲಿಲ್ಲ ಎಂದು ನಟನ ಬೆನ್ನಿಗೆ ನಿಂತಿದ್ದಾರೆ.

    ತಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು.

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು.

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಜೃಂಭಣೆಯಿಂದ ನಡೆದ ಐತಿಹಾಸಿಕ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ

    ವಿಜೃಂಭಣೆಯಿಂದ ನಡೆದ ಐತಿಹಾಸಿಕ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ

    ಕಲಬುರಗಿ: 18ನೇ ಶತಮಾನದ ಸಂತ ಶರಣಬಸವೇಶ್ವರರ 200ನೇ ಪುಣ್ಯತಿಥಿಯ ಸ್ಮರಣಾರ್ಥ ಐತಿಹಾಸಿಕ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ದೇಶ, ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.

    ನಿಗದಿತ ಸಮಯಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರರನ್ನು ಸ್ತುತಿಸುವ ಘೋಷಣೆಗಳ ಮಧ್ಯೆ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ಎಳೆಯಲಾಯಿತು. ಇದನ್ನೂ ಓದಿ: ಕದ್ದ ಹುಂಡಿ ವಾಪಸ್ ತಂದಿಟ್ಟ ಕಳ್ಳರು

    ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಮತ್ತು ದೇವರಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಗಮಿಸಿದ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ರಥದ ಮೇಲೆ ಮೊದಲ ಬಾರಿಗೆ ಸಂಸ್ಥಾನವು ಹೆಲಿಕಾಪ್ಟರ್ ಮತ್ತು ಡ್ರೋನ್‍ಗಳ ಮೂಲಕ ಗುಲಾಬಿ ದಳಗಳನ್ನು ಸುರಿಸಿತು.

    ಈ ಬಾರಿಯ ಜಾತ್ರೆಯು ಹಲವು ರೀತಿಯಲ್ಲಿ ವಿಶಿಷ್ಟವಾಗಿದ್ದು, ಇದೇ ಮೊದಲ ಬಾರಿಗೆ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿಯಾಗಿ ನೂತನವಾಗಿ ಪಟ್ಟಾಭಿಷೇಕಗೊಂಡ ಅವರ ಪುತ್ರ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರದರ್ಶಿಸಿದರು. ಈ ದಿನದಂದು ಸಂಸ್ಥಾನದ ಪೀಠಾಧಿಪತಿಗಳು ಸಾಂಪ್ರದಾಯಿಕವಾಗಿ ಪೀಠಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಔಪಚಾರಿಕವಾಗಿ ವಹಿಸಿಕೊಳ್ಳುತ್ತಾರೆ. ಇದನ್ನೂ ಓದಿ: 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಿದ್ದಗಂಗಾ ಶ್ರೀ

    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ, ಹಿರಿಯ ವೈದ್ಯಕೀಯ ಕ್ಯಾನ್ಸರ್ ತಜ್ಞ ಡಾ.ಶೇಖರ ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಶರಣಬಸವ ವಿಶ್ವವಿದ್ಯಾಲಯದ ಡಾ ನಿರಂಜನ್ ವಿ. ನಿಷ್ಠಿ ಮತ್ತು ಡಾ. ಅಪ್ಪಾಜಿ ಅವರ ಕುಟುಂಬದ ಸದಸ್ಯರು ಹಾಗೂ ಇತರ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

  • ಮೊದಲ ಬಾರಿಗೆ ಶ್ರೀಶೈಲ ಖಾಲಿ ಖಾಲಿ – ಯುಗಾದಿ ಜಾತ್ರೆ ರಥೋತ್ಸವ ರದ್ದು

    ಮೊದಲ ಬಾರಿಗೆ ಶ್ರೀಶೈಲ ಖಾಲಿ ಖಾಲಿ – ಯುಗಾದಿ ಜಾತ್ರೆ ರಥೋತ್ಸವ ರದ್ದು

    ರಾಯಚೂರು: ಯುಗಾದಿ ಹಬ್ಬಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರಿಂದ ಕೂಡಿರುತ್ತಿದ್ದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಈಗ ಕೊರೊನಾ ವೈರಸ್ ಭೀತಿಯಿಂದ ಬಣಗುಡುತ್ತಿದೆ. ಅಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ಯುಗಾದಿ ವೇಳೆ ದೇವಾಲಯ ಖಾಲಿ ಖಾಲಿಯಾಗಿದೆ. ಜೊತೆಗೆ ಜಾತ್ರೆ ರಥೋತ್ಸವ ಕೂಡ ರದ್ದಾಗಿದೆ.

    ರಾಯಚೂರು ಮಾರ್ಗವಾಗಿ ಸಾವಿರಾರು ಜನ ಪಾದಯಾತ್ರೆ ತೆರಳುತ್ತಿದ್ದು, ಯುಗಾದಿ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಹಾಗೂ ಬಸ್ಸಿನಲ್ಲಿ ತೆರಳುತ್ತಿದ್ದರು. ಆದರೆ ಕೊರೊನಾ ಎಫೆಕ್ಟ್‌ನಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನವನ್ನು ಮುಚ್ಚಲಾಗಿದೆ.

    ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಮೊದಲೇ ಶ್ರೀಶೈಲ ಜಗದ್ಗುರುಗಳು ಜಾತ್ರೆ ಹಾಗೂ ರಥೋತ್ಸವ ರದ್ದಾಗಿರುವುದನ್ನ ಘೋಷಣೆ ಮಾಡಿದ್ದರು. ಆಗ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹೊರಟಿದ್ದ ಜನ ವಾಪಸ್ ಮನೆಗೆ ಹೋಗಿದ್ದರು. ಅಲ್ಲದೇ ದರ್ಶನಕ್ಕಾಗಿ ಬಂದಿದ್ದ ಸಾವಿರಾರು ಭಕ್ತರು ದರ್ಶನವೂ ಸಿಗದೆ, ವಾಪಸ್ ಬರಲು ಬಸ್ ಸೇರಿದಂತೆ ವಾಹನ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ. ಈಗ ಯುಗಾದಿ ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ಇಡೀ ಶ್ರೀಶೈಲ ಸಂಪೂರ್ಣ ಖಾಲಿ ಖಾಲಿಯಾಗಿದೆ.

    ಜಾತ್ರೆ, ರಥೋತ್ಸವ ರದ್ದಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ದೇವಾಲಯ ಹಾಗೂ ದೇವಾಲಯದ ಸುತ್ತಲಿನ ಪ್ರದೇಶ ಖಾಲಿಯಾಗಿ ಕಾಣುತ್ತಿದೆ. ಶ್ರೀಶೈಲದ ಈಗಿನ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಾವ ವಾಹನಗಳು, ಜನರ ಓಡಾಟವೂ ಇಲ್ಲದೆ ಶ್ರೀಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿದೆ.

  • ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಗ್ರಾಮಕ್ಕೂ ಲಗ್ಗೆ ಇಟ್ಟ ಡಾಗ್ ಶೋ- ಚಿಕ್ಕೋಡಿಯಲ್ಲಿ ಶ್ವಾನಗಳ ಕ್ಯಾಟ್ ವಾಕ್

    ಚಿಕ್ಕೋಡಿ/ಬೆಳಗಾವಿ: ಶ್ವಾನಗಳ ಸಾಕುವಿಕೆ ಇತ್ತೀಚಿಗೆ ಫ್ಯಾಷನ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ವಾನ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಶ್ವಾನ ಪ್ರದರ್ಶನವನ್ನ ಆಯೋಜಿಸಲಾಗಿತ್ತು.

    ಐನಾಪುರ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ ಕೃಷಿ ಮೇಳದಲ್ಲಿ ಈ ಡಾಗ್ ಶೋ ಏರ್ಪಡಿಸಲಾಗಿತ್ತು. ಪ್ರದರ್ಶನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ನೂರಾರು ಜನ ತಮ್ಮ ಶ್ವಾನಗಳನ್ನು ತಂದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವಾನಗಳು ವಿಶೇಷವಾದ ಕೂದಲು, ಬಣ್ಣ, ದೇಹಾಕಾರದಿಂದ ಪ್ರೇಕ್ಷಕರನ್ನು ಸೆಳೆದವು. ನೋಡುವುದಕ್ಕೆ ಭಯ ತರಿಸುವಂತಿದ್ದರೂ, ಬಹಳ ಮೃದು ಸ್ವಭಾವದ ಶ್ವಾನಗಳಾಗಿದ್ದು, ಪ್ರೇಕ್ಷಕರು ಸುತ್ತುವರಿದು ನಾಮುಂದು, ತಾಮುಂದು ಎಂದು ಸೆಲ್ಫಿ ಕ್ಲಿಕ್ಕಿಸಿದರು. ಈ ಶ್ವಾನ ಪ್ರದರ್ಶನದಲ್ಲಿ ಸುಮಾರು 20ಕ್ಕೂ ಅಧಿಕ ತಳಿಯ ಒಂದು ಕೆ.ಜಿ ತೂಕದಿಂದ 150 ಕೆ.ಜಿ ತೂಕದ 250ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿದ್ದವು.

    ಮಾಲೀಕರೊಂದಿಗೆ ಸಾಕು ನಾಯಿಗಳು ವೇದಿಕೆಯಲ್ಲಿ ರ್ಯಾಂಪ್ ವಾಕ್ ಮಾಡಿದರೆ, ಕೆಲವೊಂದು ದೈತ್ಯ ದೇಹದ ಶ್ವಾನಗಳು ತುಂಟತನದೊಂದಿಗೆ ನೋಡುಗರನ್ನು ಸೆಳೆದವು. ಮನುಷ್ಯನಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಕೆಲ ನಾಯಿಗಳು ತರಹೇವಾರಿ ಉಡುಪುಗಳನ್ನು ತೊಟ್ಟು ಸೈ ಎನಿಸಿಕೊಂಡವು.

    ಪ್ರದರ್ಶನದಲ್ಲಿ ನೂರಾರು ಜನ ವಿವಿಧ ತಳಿಯ ಶ್ವಾನಗಳನ್ನು ಕಂಡು ಸಂತೋಷಪಟ್ಟರು. ಶ್ವಾನ ಪ್ರದರ್ಶನದಲ್ಲಿ ಗ್ರೇಟ್ಡಾನ್, ಟುಮೋರಿಯನ್, ಡೊಬರಮನ್, ಸೆಂಡ್ ಬರ್ನಾರ್ಡ, ಜರ್ಮನ್ ಷಫರ್ಡ, ಪಗ್, ರಾಟ್ ವ್ಹಿಲ್, ಅಮೆರಿಕನ್ ಫಿಟ್ಬುಕ್, ಟೆರಿಯರ್, ಶಿಖಾರಿ ಸೇರಿದಂತೆ ವಿವಿಧ 20 ತಳಿಗಳ ಶ್ವಾನಗಳು ಪಾಲ್ಗೊಂಡಿದ್ದವು. ವಿವಿಧ ರೀತಿಯ ಶ್ವಾನಗಳನ್ನು ಕಂಡು ಸ್ಥಳೀಯರು ಸಂತೋಷ ಪಟ್ಟರು.

  • ಗವಿಮಠ ಜಾತ್ರಾ ಮಹೋತ್ಸವದಲ್ಲಿ ಬದಲಾವಣೆಯಿಲ್ಲ: ಗವಿಸಿದ್ಧೇಶ್ವರ ಶ್ರೀ

    ಗವಿಮಠ ಜಾತ್ರಾ ಮಹೋತ್ಸವದಲ್ಲಿ ಬದಲಾವಣೆಯಿಲ್ಲ: ಗವಿಸಿದ್ಧೇಶ್ವರ ಶ್ರೀ

    ಕೊಪ್ಪಳ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಶ್ರೀಗಳ ಶಿವೈಕ್ಯರಾದ ಹಿನ್ನೆಲೆಯಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ತಿಳಿಸಿದ್ದಾರೆ.

    ನಗರದ ಗವಿಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳವಾರದಿಂದ ಪ್ರಾರಂಭವಾಗುವ ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ನಾಳೆ ಸಂಜೆ 6 ಗಂಟೆಗೆ ಕೆನಡಾದ ಮ್ಯಾಥ್ಯೂ ಪೌರ್ಟಿಯರ್ ದಂಪತಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಿದ್ದಗಂಗಾ ಶ್ರೀಗಳ ಅಗಲಿಕೆ ನೋವನ್ನು ತಂದಿದೆ. ಲಕ್ಷಾಂತರ ಜನರಿಗೆ ಅನ್ನ, ಜ್ಞಾನವನ್ನು ನೀಡಿ ಬೆಳಕು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ತಂದೆ-ತಾಯಿ, ಗುರುವಾಗಿ ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಶ್ರೀಗಳನ್ನು ಜಗತ್ತಿನ ಎಂಟನೇ ಅದ್ಭುತ ಅಂತ ಕರೆಯಬಹುದು ಎಂದು ಹೇಳಿದರು.

    ಸಿದ್ದಗಂಗಾ ಶ್ರೀಗಳನ್ನು ಕಳೆದುಕೊಂಡ ನಾಡು ಅನಾಥವಾಗಿದೆ. ಅವರು ಈ ಕಾಲದ ಸರ್ವಶ್ರೇಷ್ಠ ಸಂತರು, ಶಿವಕುಮಾರ ಶ್ರೀಗಳು ಒಬ್ಬ ತಪಸ್ವಿ, ಇಷ್ಟಲಿಂಗ, ಸಮಾಜ ಸೇವಕ, ಕರುಣಾಮಯಿ ಇಷ್ಟು ಗುಣಗಳನ್ನು ಹೊತ್ತು ಭೂಮಿಗೆ ಬಂದ ಭಗವಂತ. ಶ್ರೀಗಳ ಆತ್ಮಕ್ಕೆ ಚಿರಶಾಂತಿ ನೀಡಲಿ ಎನ್ನುವುದಕ್ಕಿಂತ, ಸಿದ್ದಗಂಗಾ ಶ್ರೀಗಳ ಆತ್ಮ ಲಕ್ಷಾಂತರ ಆತ್ಮದಲ್ಲಿ ಬೆರೆಯಲಿ ಅಂತ ದೇವರಲ್ಲಿ ಬೇಡಿಕೊಳ್ಳಬೇಕು ಎಂದರು.

    2005ರಲ್ಲಿ ಗವಿಮಠದ ಎರಡು ಸಾವಿರ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಅಡಿಗಲ್ಲು ಹಾಗೂ 2006ರಲ್ಲಿ ಉದ್ಘಾಟನೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳು ನೆರವೇರಿಸಿದ್ದರು. ಇತ್ತೀಚೆಗೆ ಶ್ರೀಗಳ 111ನೇ ಜನ್ಮದಿನಾಚರಣೆಯಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರಿಂದ ಆಶೀರ್ವಾದ ಪಡೆದಿದ್ದೆ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಸ್ಮರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ

    ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ

    ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ಭಕ್ತರಿಗೆ ಚಾಕುವಿನಿಂದ ಇರಿದು ದರೋಡೆ ಮಾಡಲಾಗಿದೆ.

    ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ಭಾಗವಹಿಸುವ ಜಾತ್ರೆಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿಗಳಾದ ಸತೀಶ ಪಾಟೀಲ ಹಾಗೂ ಪ್ರವೀಣ ಸ್ವಾಮಿ ಬಹಿರ್ದೆಸೆಗೆ ಹೋದ ವೇಳೆ ಚಾಕುವಿನಿಂದ ಇರಿದಿದ್ದಾರೆ.

    20ಕ್ಕೂ ಹೆಚ್ಚು ದರೋಡೆಕೋರರ ತಂಡ ಈ ಕೃತ್ಯವೆಸಗಿದ್ದು, ಕೊರಳಲ್ಲಿನ ಚಿನ್ನದ ಸರ, ಕೈಯಲ್ಲಿನ ರಿಂಗ್, ಮೊಬೈಲ್, ನಗದು ಹಣ ದೋಚಿ ಪರಾರಿಯಾಗಿದೆ.

    ಅಥಣಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

     

  • ಹಾಸನಾಂಬೆ ಜಾತ್ರೆ ಮುಕ್ತಾಯ- ಬ್ಯಾಂಕ್ ಸಿಬ್ಬಂದಿ ಸೇರಿ 50 ಮಂದಿಯಿಂದ ಹುಂಡಿ ಎಣಿಕೆ

    ಹಾಸನಾಂಬೆ ಜಾತ್ರೆ ಮುಕ್ತಾಯ- ಬ್ಯಾಂಕ್ ಸಿಬ್ಬಂದಿ ಸೇರಿ 50 ಮಂದಿಯಿಂದ ಹುಂಡಿ ಎಣಿಕೆ

    ಹಾಸನ: ಇಲ್ಲಿನ ಹಾಸನಾಂಬೆ ಜಾತ್ರಾ ಮಹೋತ್ಸವ ಶನಿವಾರವಷ್ಟೇ ಮುಗಿದಿದ್ದು, ಇಂದು ಬೆಳಗ್ಗೆಯಿಂದ ಹುಂಡಿ ಎಣಿಕೆ ಕಾರ್ಯ ಶುರುವಾಗಿದೆ.

    ಇದಕ್ಕಾಗಿ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು ಒಟ್ಟು 4 ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

    ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾಕಾರ್ಯ ಸಂಜೆವರೆಗೂ ನಡೆಯುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಸುಮಾರು 5 ಕೋಟಿ ರೂ. ಅಧಿಕ ಆದಾಯ ಕಾಣಿಕೆ ರೂಪದಲ್ಲಿ ಬರುವ ಸಾಧ್ಯತೆ ಇದೆ.

    ಕಳೆದ ವರ್ಷ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

    ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಶುಕ್ರವಾರ ಅಂತಿಮ ದಿನವಾಗಿತ್ತು. ಹೀಗಾಗಿ ಅಂದು ಬೆಳಗ್ಗೆ 5 ರಿಂದ ಸಂಜೆ 5 ಮತ್ತು ರಾತ್ರಿ 9 ರಿಂದ ಇಂದು ಬೆಳಗ್ಗೆ 6 ಗಂಟೆವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿತ್ತು. ಶನಿವಾರ ಮಧ್ಯಾಹ್ನ ವಿಶ್ವರೂಪ ದರ್ಶನದ ನಂತರ ಗರ್ಭಗುಡಿಯ ಬಾಗಿಲು ಹಾಕಲಾಗಿದೆ.

    ದೇವಿ ದರ್ಶನಕ್ಕೆ ಶನಿವಾರ ಕಡೇ ದಿನವಾಗಿರುವ ಹಿನ್ನೆಲೆಯಲ್ಲಿ ಜನಸಾಗರವೇ ದೇಗುಲಕ್ಕೆ ಹರಿದು ಬಂದಿತ್ತು. ಭಕ್ತರ ಸಾಮಾನ್ಯ ದರ್ಶನದ ಸಾಲು 2 ಕಿಲೋ ಮೀಟರ್ ಗೂ ಹೆಚ್ಚಿತ್ತು. ದೇವಿಯ ವಿಶೇಷ ದರ್ಶನದ 300 ರೂ. ಪಾಸ್ ಹಾಗೂ 1000 ರೂ. ಪಾಸ್ ಗೂ ಭಾರೀ ಬೇಡಿಕೆ ಇತ್ತು. ದೇವಿ ದರ್ಶನದ ಕೊನೆಯ ದಿನವಾದ ಶುಕ್ರವಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಶಾಸಕ ಶರವಣ ದೇಗುಲಕ್ಕೆ ಭೇಟಿ ನೀಡಿದ್ದರು.

    https://www.youtube.com/watch?v=7uuQGmRXoFk

    https://www.youtube.com/watch?v=Xt40GinaJsM

  • ಹಾಸನಾಂಬೆಯ ದರ್ಶನ ಮಹೋತ್ಸವ ನಾಳೆಯಿಂದ ಆರಂಭ – ಶುಕ್ರವಾರದಿಂದ ಭಕ್ತರಿಗೆ ದರ್ಶನ

    ಹಾಸನಾಂಬೆಯ ದರ್ಶನ ಮಹೋತ್ಸವ ನಾಳೆಯಿಂದ ಆರಂಭ – ಶುಕ್ರವಾರದಿಂದ ಭಕ್ತರಿಗೆ ದರ್ಶನ

    ಹಾಸನ: ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಿದ್ಧತೆ ಶುರುವಾಗಿದೆ. ಅಧಿದೇವತೆ ಹಾಸನಾಂಬೆಯ ದರ್ಶನ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ.

    ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಅಕ್ಟೋಬರ್ 12 ರಿಂದ 21 ರ ರವರೆಗೆ ಹಾಸನಾಂಬೆ ಜಾತ್ರೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದಿನವಿಡೀ ದರ್ಶನ ವ್ಯವಸ್ಥೆ ಮಾಡಿರುವುದಿರಿಂದ ಭಕ್ತರ ನೂಕುನುಗ್ಗಲು ಕಡಿಮೆಯಾಗುವ ನಿರೀಕ್ಷೆ ಇದೆ.

    ಸಂಪ್ರದಾಯದ ಪ್ರಕಾರ ಅರಸು ವಂಶಸ್ಥರು ಬಾಳೆಕಂಬ ಕಡಿದ ಕೂಡಲೇ, ವರ್ಷದಿಂದ ಮುಚ್ಚಿದ್ದ ಅಮ್ಮನವರ ಗರ್ಭಗುಡಿ ಬಾಗಿಲು ಮಧ್ಯಾಹ್ನ 12.30ಕ್ಕೆ ತೆರೆಯಲಿದೆ. ಈಗಾಗಲೇ ಹೇಳಿರುವಂತೆ ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗಿರುವ ಆಭರಣಧಾರಣೆ ನಂತರ ಪೂಜಾಕಾರ್ಯ ನಡೆಯಬೇಕಿರುವುದರಿಂದ ದರ್ಶನ ವ್ಯವಸ್ಥೆ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಮಧ್ಯಾಹ್ನ 1.30 ರಿಂದ 3.30 ರ ವರೆಗೆ ನೈವೇದ್ಯ ಸಮಯ ಹೊರತುಪಡಿಸಿ, ಉಳಿದ ಸಮಯದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ.

    ಹಾಸನಾಂಬೆ ಹಲವು ಪವಾಡ ಸದೃಶ ಮಹಿಮೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಇಷ್ಟಾರ್ಥವನ್ನು ಸಿದ್ಧಿಸುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಹಿಂದೆ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟ ಹಣತೆ ಹಾಗೆಯೇ ಉರಿಯಲಿದೆ. ದೇವಿಯ ಮಹಿಮೆ ಅಪಾರ ಎನ್ನುವುದು ಅಸಂಖ್ಯಾತ ಭಕ್ತರ ನಂಬಿಕೆ. ಪರಂಪರೆ ಈಗಲೂ ನಡೆದುಕೊಂಡು ಬಂದಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಸಾಗರವೇ ಹರಿದು ಬರುವ ಸಾಧ್ಯತೆ ಇದೆ.

    ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವಾಗ ಮಳೆ-ಬಿಸಿಲಿನ ತಾಪ ತಪ್ಪಸಿಕೊಳ್ಳಲು ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಂತೆ ಲಾಡು-ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿದೆ.

    ಈ ಬಾರಿ ಶುಲ್ಕವಿದೆ: ಶೀಘ್ರ ದರ್ಶನಕ್ಕೆ 300 ಮತ್ತು ಗಣ್ಯರು ಪ್ರವೇಶದ್ವಾರದಲ್ಲೇ ತೆರಳಿ ನೇರ ದರ್ಶನ ಪಡೆಯಲು ಇದೇ ಮೊದಲ ಬಾರಿ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಬಾರಿ 9 ದಿನಗಳ ದರ್ಶನ ಇರುವುದರಿಂದ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಅಪರಾಧ ಪತ್ತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಒಟ್ಟು ಮೂರು ಶಿಫ್ಟ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಕ್ಟೋಬರ್ 21 ರ ಮಧ್ಯಾಹ್ನ ಅಂದ್ರೆ ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಬಾಗಿಲು ಮುಚ್ಚಲಿದೆ. ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಅಂದೂ ಸಹ ಭಕ್ತರ ದರ್ಶನವನ್ನು ನಿರ್ಬಂಧಿಸಲಾಗಿದೆ.