Tag: Jatra Mahotsav

  • ಕಾರವಾರ: ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವರ ಜಾತ್ರೆ ಆರಂಭ

    ಕಾರವಾರ: ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವರ ಜಾತ್ರೆ ಆರಂಭ

    ಕಾರವಾರ: ವರ್ಷದಲ್ಲಿ 7 ದಿನಗಳು ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರಸಿದ್ಧ ಶ್ರೀ ಸಾತೇರಿ ದೇವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸೆಪ್ಟೆಂಬರ್ 5 ರಿಂದ 5 ದಿನಗಳ ಕಾಲ ಸಾರ್ವಜನಿಕರ ಸೇವೆ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಸೆ.3ರ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಮೊದಲ 2 ದಿನಗಳಲ್ಲಿ ಕುಳಾವಿ ಸಮುದಾಯದ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಂದ ಅಡಿಕೆ ಹಾಗೂ ಪುರುಷರಿಂದ ತಳಯ ಸಲ್ಲಿಸಲಾಗುತ್ತಿದೆ. ಸೆ.5 ರಿಂದ 9ರ ವರೆಗೆ ಸಾರ್ವಜನಿಕರಿಗೆ ದೇವಿಯ ದರ್ಶನ ಹಾಗೂ ಹರಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್‌

    ಸೆ.5 ರಿಂದ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 7 ಗಂಟೆಗೆ ವಿವಿಧ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಸೆ.5 ರಿಂದ 8ರ ವರೆಗೆ ಸದಾಶಿವಗಡದ ಓಂಕಾರ ಭಕ್ತಿ ಸಂಗೀತ ಮಂಡಳಿ, ಹಣಕೋಣದ ರಾಮದಾಸ ರಾಯ್ಕರ ಭಜನಾ ಮಂಡಳಿ, ಕಾಣಕೋಣ ಭಕ್ತಮಂಡಳಿ, ಮಾಜಾಳಿಯ ಸಂಕಟಮೋಚನ ಭಜನಾ ಮಂಡಳಿಗಳು ವಿವಿಧ ಭಜನಾ ಕಾರ್ಯಕ್ರಮ ನಡೆಸಿಕೊಡಲಿವೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಗ್ರೂಪ್‍ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

    ಸೆ.9 ರಂದು ಮಧ್ಯಾಹ್ನದವರೆಗೆ ಶ್ರೀ ಸಾತೇರಿ ದೇವಿಯ ದರ್ಶನಕ್ಕೆ ಅವಕಾಶವಿರಲಿದ್ದು, ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ರದ್ದಾಯಿತು ಕತ್ತರಿಘಟ್ಟ ಜಾತ್ರಾಮಹೋತ್ಸವ

    ಮತ್ತೆ ರದ್ದಾಯಿತು ಕತ್ತರಿಘಟ್ಟ ಜಾತ್ರಾಮಹೋತ್ಸವ

    ಹಾಸನ: ಕೊರೊನಾ ಕಾರಣದಿಂದ ಈ ವರ್ಷವೂ ಕೂಡ ಕತ್ತರಿಘಟ್ಟ ಜಾತ್ರಾಮಹೋತ್ಸವವನ್ನು ರದ್ದು ಪಡಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    \

    ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಸಮೀಪ ಇರುವ ಕತ್ತರಿಘಟ್ಟ ಗ್ರಾಮದಲ್ಲಿ ಇದೇ ತಿಂಗಳು 17 ಮತ್ತು 18 ರಂದು ಜಾತ್ರಾಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಕತ್ತರಿಘಟ್ಟ ಗ್ರಾಮದ ಶ್ರೀ ಲಕ್ಷ್ಮಿದೇವಿ ಜಾತ್ರಾಮಹೋತ್ಸವವು ಕತ್ತರಿಘಟ್ಟ ಜಾತ್ರಾಮಹೋತ್ಸವ ಎಂದೇ ಪ್ರಸಿದ್ಧಿಯಾಗಿದೆ. ಇದನ್ನೂ ಓದಿ:  ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ!

    ಪ್ರತಿ ವರ್ಷ ಸಾವಿರಾರು ಜನ ಈ ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಹಾಸನದಲ್ಲಿ ಕೊರೊನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜಾತ್ರಾಮಹೋತ್ಸವ ನಡೆಸದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದೆ. ಇದನ್ನೂ ಓದಿ:  ಮೋದಿ ಹುಟ್ಟುಹಬ್ಬ – 71 ನದಿಗಳಲ್ಲಿ ಸ್ವಚ್ಛತಾ ಕಾರ್ಯ

    ಗ್ರಾಮಸ್ಥರು ಜಾತ್ರಾಮಹೋತ್ಸವ ರದ್ದು ಮಾಡಲು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರೆಡು ವರ್ಷದಿಂದ ಜಾತ್ರೆ ಸರಿಯಾಗಿ ನಡೆದಿಲ್ಲ. ಹೀಗಿರುವಾಗ ಈ ವರ್ಷವೂ ಜಾತ್ರಾಮಹೋತ್ಸವ ರದ್ದು ಮಾಡುವುದು ಸರಿಯಲ್ಲ. ರೋಗದ ವಿರುದ್ಧ ಹೋರಾಡಲು ದೈವಿಶಕ್ತಿಯೂ ಬೇಕಾಗಿದ್ದು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಜಾತ್ರಾಮಹೋತ್ಸವ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

  • ಅ.17ರಿಂದ 29ರವರೆಗೆ ಭಕ್ತರಿಗೆ ಹಸನಾಂಬೆಯ ದರುಶನ ಭಾಗ್ಯ

    ಅ.17ರಿಂದ 29ರವರೆಗೆ ಭಕ್ತರಿಗೆ ಹಸನಾಂಬೆಯ ದರುಶನ ಭಾಗ್ಯ

    ಹಾಸನ: ವರ್ಷಕ್ಕೊಮ್ಮೆಯಷ್ಟೇ ಬಾಗಿಲು ತೆಗೆಯುವ ಹಾಸನಾಂಬೆಯ ದರ್ಶನಕ್ಕೆ ದಿನಗಣನೆ ಶುರುವಾಗಿದ್ದು, ಅಕ್ಟೋಬರ್ 17 ರಿಂದ 29 ರವರಗೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. ಒಟ್ಟು 13 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ ಉಳಿದೆಲ್ಲ ದಿನಗಳು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗಲಿದೆ.

    ಒಂದು ವರ್ಷಗಳ ಕಾಲ ದೀಪ ಉರಿಯುತ್ತಿರುತ್ತದೆ ಎನ್ನುವ ಪವಾಡ ಹಾಸನಾಂಬೆಯದ್ದಾಗಿದೆ. ದೇವಿಯ ಸನ್ನಿಧಿಗೆ ಆಗಮಿಸಿ ಪ್ರತಿವರ್ಷ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ. ಹಾಸನದ ಅಧಿದೇವತೆಯ ದೇವಸ್ಥಾನದ ಬಾಗಿಲು ಪ್ರತಿ ವರ್ಷ ಆಶ್ವಿಜ ಮಾಸದ ಮೊದಲ ಗುರುವಾರ ತೆರೆಯಲಿದೆ. ಬಲಿಪಾಡ್ಯಮಿ ಮಾರನೇ ದಿನ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಸಂಪ್ರದಾಯ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

    ಈ ಸಂಪ್ರದಾಯದಂತೆ ಅಕ್ಟೋಬರ್ 17 ರಿಂದ 29 ರ ವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಾರಿ ಅಮ್ಮನವರನ್ನು ಎದುರುಗೊಳ್ಳುವ ಅಪೂರ್ವ ಅವಕಾಶ ಸಿಗುವುದು 11 ದಿನಗಳು ಮಾತ್ರ. ಈ ವರ್ಷದ ಉತ್ಸವ ಆರಂಭವಾಗಲು ಕೇವಲ 30 ದಿನಗಳು ಮಾತ್ರ ಬಾಕಿ ಇವೆ. ಬಾಗಿಲು ಮುಚ್ಚುವ ವೇಳೆ ಹಚ್ಚಿದ ಹಣತೆ ಹಾಗೇ ಬೆಳಗುತ್ತಿರುತ್ತದೆ ಎಂಬ ಪವಾಡ ನಂಬಿಕೆಗಳಿರುವುದರಿಂದ ಪ್ರತಿವರ್ಷ ಜಿಲ್ಲೆ, ರಾಜ್ಯ ಮಾತ್ರವಲ್ಲದೇ ದೂರದೂರುಗಳಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ.

    ಸಾಮಾನ್ಯ ದರ್ಶನವನ್ನು ಪಡೆಯುವ ಭಕ್ತಾದಿಗಳಿಗೆ ಧರ್ಮದರ್ಶನದ ವ್ಯವಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ಇರಲಿದೆ. ಅಲ್ಲದೆ, ವಿಶೇಷ ದರ್ಶನಕ್ಕೆ ವ್ಯವಸ್ಥೆ ಸಹ ಮಾಡಲಾಗಿದೆ. ಒಂದು ಸಾವಿರ ರೂ. ಮತ್ತು 300 ರೂ. ಪಾಸ್ ಪಡೆದು ದೇವಿಯ ದರ್ಶನ ಪಡೆಯಬಹುದಾಗಿದೆ. ಒಂದು ಸಾವಿರ ರೂ.ನ ವಿಶೇಷ ದರ್ಶನಕ್ಕೆ 4 ಲಾಡುಗಳು ಮತ್ತು 300 ರೂಪಾಯಿ ದರ್ಶನಕ್ಕೆ 2 ಲಾಡುಗಳು ಪ್ರಸಾದವಾಗಿ ಸಿಗಲಿದೆ.