Tag: Jatha

  • ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್

    ಅಗೌರವ ತೋರಿದ ಅಧಿಕಾರಿಗಳಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಮೇಯರ್

    ಮೈಸೂರು: ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದ ಮೈಸೂರು ಮೇಯರ್‌ಗೆ, ಕಾರ್ಯಕ್ರಮವನ್ನು ನೀವು ಬರುವುದಕ್ಕೂ ಮುಂಚಿತವಾಗಿ ಮುಗಿಸಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮ ಆಯೋಜಕರನ್ನು ಮೇಯರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಸೈಕಲ್ ಹಾಗೂ ಬೈಕ್ ರ‍್ಯಾಲಿಯಲ್ಲಿ ಮೈಸೂರು ಮೇಯರ್‍ಗೆ ಅಗೌರವ ಸೂಚಿಸಿಲಾಗಿದೆ. ಹೀಗಾಗಿ ಮೇಯರ್ ಸುನಂದಾ ಪಾಲನೇತ್ರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ

    ನಡೆದಿದ್ದೇನು?
    ಜಾಥಾ ಕಾರ್ಯಕ್ರಮ ಬೆಳಗ್ಗೆ 7ಕ್ಕೆ ನಿಗದಿಯಾಗಿತ್ತು. ಮೇಯರ್‍ಗೆ ಕರೆ ಮಾಡಿದ ಆಯೋಜಕರು 7.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತೆ. ಅರ್ಧಗಂಟೆ ತಡವಾಗಿ ಬನ್ನಿ ಎಂದು ಹೇಳಿದ್ದಾರೆ. ಮೇಯರ್ ಸರಿಯಾಗಿ 7.30ಕ್ಕೆ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಶಾಕ್ ಆಗಿದ್ದಾರೆ. ಏಕೆಂದರೆ ಜಾಥಾ ಆಗಲೇ ಮುಂದೆ ಸಾಗಿತ್ತು. ಇದರಿಂದ ಸಿಡಿಮಿಡಿಗೊಂಡ ಮೇಯರ್ ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

  • ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತೆ ಕ್ಲಬ್(ಇಎಲ್‍ಸಿ) ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

    ಜೂನ್ 15 2019ರಲ್ಲಿ ಸ್ಥಾಪನೆ ಅದ ಚುನಾವಣಾ ಸಾಕ್ಷರತೆ ಕ್ಲಬ್‍ನಲ್ಲಿ ನೋಡಲ್ ಅಧಿಕಾರಿಯಾಗಿ ಚಂದ್ರಹಾಸ ಮಾಯಗೌಡ, ಸಮಾಜ ಶಿಕ್ಷಕಿ ಶೈಲಾ, ಸಹಾಯಕ ನೋಡಲ್ ಅಧಿಕಾರಿಯಾಗಿ ಬಸವರಾಜ್ ಹಾಗೂ ಸುಮಾರು 10 ಜನ ವಿದ್ಯಾರ್ಥಿ ಪ್ರತಿನಿಧಿಗಳನ್ನು ಈ ಕ್ಲಬ್ ಒಳಗೊಂಡಿದೆ. ಇದರ ಉದ್ದೇಶ ಶಾಲೆಯ ಆಸು-ಪಾಸಿನಲ್ಲಿರುವ ಗ್ರಾಮದ ಜನರಿಗೆ ಜಾಥಾದ ಮೂಲಕ ಮತದಾನದ ಅರಿವು ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

    ಇಂದು ಶಾಲಾ ಮಕ್ಕಳು 7ನೇ ಹೊಸಕೋಟೆಯ ಬೀದಿಗಳಲ್ಲಿ ಜಾಥಾ ನಡೆಸಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಮತದಾನದ ಅರಿವು ಮೂಡಿಸಿದ್ದಾರೆ. ಶಾಲೆಯಲ್ಲಿಯೇ ಮಂತ್ರಿ ಮಂಡಲವನ್ನು ರಚಿಸಿ ಯಾವ ರೀತಿ ಅಭ್ಯರ್ಥಿಯು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು? ಜನ ಸಾಮಾನ್ಯರು ಯಾವ ರೀತಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು? ಹೀಗೆ ಮತದಾನದ ಹಲವು ವಿಚಾರದ ಬಗ್ಗೆ ಶಾಲೆಯಲ್ಲಿಯೇ ಮಾದರಿ ಚುನಾವಣೆಯನ್ನು ಏರ್ಪಡಿಸಿ, ಶಾಲಾ ಮಂತ್ರಿಮಂಡಲವನ್ನು ರಚಿಸಿಕೊಂಡು ಶಾಲೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿದರು.

  • “ಬಾರ್ ಹಠಾವ್, ಮಠ ಬಚಾವ್”- ತೋಂಟದಾರ್ಯ ಶ್ರೀ ಗಳಿಂದ ಜಾಥಾ

    “ಬಾರ್ ಹಠಾವ್, ಮಠ ಬಚಾವ್”- ತೋಂಟದಾರ್ಯ ಶ್ರೀ ಗಳಿಂದ ಜಾಥಾ

    ಗದಗ : ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನ ಬಾರ್ ಮತ್ತು ರೆಸ್ಟೋರೆಂಟ್‍ ಗಳನ್ನ ತೆರವುಗೊಳಿಸುವಂತೆ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಜಾಥಾ ನಡೆಸಲಾಗಿದೆ.

    ಮಠದ ಆವರಣದಿಂದ ಆರಂಭವಾದ ಜಾತ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ಜಾಥಾ ವೇಳೆ ಮಾತನಾಡಿದ ಶ್ರೀಗಳು ಮಠ ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತ-ಮುತ್ತ ಬಾರ್ ಮತ್ತು ರೆಸ್ಟೋರೆಂಟ್‍ ಗಳನ್ನ ತೆರವುಗೊಳಿಸುವಂತೆ ಆಗ್ರಹಿಸಿದರು.

    ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಜಾಥಾ ನೇತೃತ್ವ ವಹಿಸಿದ್ದರು. ಈ ವೇಳೆ “ಬಾರ್ ಹಠಾವ್, ಮಠ ಬಚಾವ್” ಎಂಬ ಪ್ರತಿಭಟನೆ ಘೋಷಣೆಯನ್ನು ಮಾಡಲಾಯಿತು. ಜಾಥಾ ಮೆರವಣಿಗೆಯಲ್ಲಿ ನಗರದ ತಿರಂಗಾ ಯುವಮೋರ್ಚಾ ಘಟಕ ಕಾರ್ಯಕರ್ತರು ಸೇರಿದಂತೆ ಹಲವು ಭಾಗವಹಿಸಿದ್ದರು.

    ತೋಂಟದಾರ್ಯ ಮಠದ ಸುತ್ತ-ಮುತ್ತ ಸುಮಾರು 6 ಮದ್ಯದ ಅಂಗಡಿಗಳಿದ್ದು ಮಠಕ್ಕೆ ಬರುವ ಭಕ್ತರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪತ್ರಿಭಟನಾಕಾರರು, ಮದ್ಯವೆಸನಿಗಳ ವರ್ತನೆಗೆ ಬೇಸತ್ತು ಸ್ವಾಮಿಜಿಗಳು, ಸಂಘಟಿಕರು, ಸಾರ್ವಜನಿಕರರು, ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಮಠದ ಸುತ್ತಲಿನ ಸುಮಾರು 200 ಮೀಟರ್ ಒಳಗಿರುವ ಮದ್ಯದ ಅಂಗಡಿಗಳನ್ನ ಸ್ಥಳಾಂತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮದ್ಯ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ಬಾರ್ ತೆರವಿಗೆ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪವನ್ನು ತೋಂಟದ ಶ್ರೀಗಳು ಮಾಡಿದ್ದಾರೆ.