Tag: Jatare

  • ಜಾತರೆ ಚಿತ್ರತಂಡದಿಂದ ಪ್ರಜ್ವಲ್ ಹುಟ್ಟುಹಬ್ಬ

    ಜಾತರೆ ಚಿತ್ರತಂಡದಿಂದ ಪ್ರಜ್ವಲ್ ಹುಟ್ಟುಹಬ್ಬ

    ಟ ಪ್ರಜ್ವಲ್ ದೇವರಾಜ್ (Prajwal Devaraj) ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ  ಅಭಿಮಾನಿಗಳು ತಮ್ನ ನೆಚ್ಚಿನ ಸ್ಟಾರ್ ನಟನ ಹುಟ್ಟು ಹಬ್ಬಕ್ಕೆ  ಶುಭಾಶಯ  ಕೋರಿದ್ದಾರೆ. ಅದೇ ರೀತಿ‌ ಪ್ರಜ್ವಲ್ ನಾಯಕನಾಗಿ  ಅಭಿನಯಿಸುತ್ತಿರುವ, ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ  ಪ್ಯಾನ್ ಇಂಡಿಯಾ ಚಿತ್ರ ‘ಜಾತರೆ’ (Jatare) ಯ ನಿರ್ಮಾಪಕ ಗೋವರ್ಧನ್ ರೆಡ್ಡಿ (Govardhan Reddy) ಹಾಗೂ ನಿರ್ದೇಶಕ  ಉದಯ ನಂದನವನಂ (Udaya Nandanavanam) ಕೂಡ ಪ್ರಜ್ವಲ್ ಮನೆಗೆ ತೆರಳಿ ಹೂಗುಚ್ಛ ನೀಡಿ ಹುಟ್ಟುಹಬ್ಬಕ್ಕೆ (Birthday) ಶುಭ ಕೋರಿದ್ದಾರೆ.

    ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಟೈಟಲ್ ಲಾಂಚ್ ಮಾಡಲಾಗಿತ್ತು. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ. ಅಲ್ಲದೇ ಜಾತರೆಯ ಅನೇಕ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದನ್ನೂ ಓದಿ:‘ಕಾಂತಾರ’ ಹೀರೋ ಕಡೆಯಿಂದ ಫ್ಯಾನ್ಸ್‌ಗೆ ಸಿಹಿಸುದ್ದಿ- ರಿಷಬ್ ಬರ್ತ್‌ಡೇಗೆ ಬಿಗ್ ಸರ್ಪ್ರೈಸ್

     

    ಹಲವು ವರ್ಷಗಳಿಂದ ಪ್ರಜ್ವಲ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಸಮ್ಮುಖದಲ್ಲಿ ಅವರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಲ್ಲದೇ ಅವರ ಅನೇಕ ಸಿನಿಮಾಗಳ ಪೋಸ್ಟರ್ ಕೂಡ ಈ ಸಂದರ್ಭದಲ್ಲಿ ಬಿಡುಗಡೆಯಾಗಿವೆ. ಹೊಸ ಸಿನಿಮಾಗಳ ಘೋಷಣೆ ಕೂಡ ಆಗಿವೆ. ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಈ ಮೂಲಕ ಸಡಗರದಿಂದ ಆಚರಿಸಿವೆ ಆಯಾ ತಂಡಗಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐದು ಭಾಷೆಗಳಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾ

    ಐದು ಭಾಷೆಗಳಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾ

    ಪ್ರಿನ್ಸ್  ಪ್ರಜ್ವಲ್ ದೇವರಾಜ್ (Prajwal Devaraj) ಅವರು ಈಗಾಗಲೇ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗವರು ಇದೇ ಮೊದಲ ಬಾರಿಗೆ  ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ  ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ  ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು (Jatare) ‘ಜಾತರೆ’.

    ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಇರುವ ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ (Udaya Nandanavanam) ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:ಮಗುವಾಗಿ ಒಂದೇ ತಿಂಗಳಿಗೆ ಹಸುಗೂಸನ್ನು ಶೂಟಿಂಗ್‌ಗೆ ಕರೆದೊಯ್ದ ನಟಿ ದಿವ್ಯಾ ಶ್ರೀಧರ್

    ಹೈದರಾಬಾದ್‌ ಮೂಲದ ಹೆಸರಾಂತ ವರ್ಧಮಾನ್ ಫಿಲಂಸ್ ಹಾಗೂ  ಲೋಟಸ್ ಎಂಟರ್ ಟೈನ್ ಮೆಂಟ್ಸ್  ಮೂಲಕ ಗೋವರ್ಧನ್ ರೆಡ್ಡಿ ಅವರು ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ‌  ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಸಹಕಾರ ನಗರದ ನಿರ್ಮಾಪಕರ ಕಛೇರಿಯಲ್ಲಿ ನಡೆಯಿತು. ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಿ, ಬರುವ ಜನವರಿಯಲ್ಲಿ ಸಂಕ್ರಾಂತಿ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

     

    ಭೀಮ್ಸ್ ಸೆಸಿರೋಲಿಯೋ ಅವರ ಸಂಗೀತ,  ಸಾಯಿಶ್ರೀರಾಂ ಅವರ ಛಾಯಾಗ್ರಹಣ, ಬಿ.ವಾಸುದೇವರೆಡ್ಡಿ ಅವರ ಕಥೆ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಅಲ್ಲದೆ ಚಿತ್ರದ ನಾಯಕಿ, ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.