Tag: jashwanth boppanna

  • ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

    ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

    ಬಿಗ್ ಬಾಸ್ ಒಟಿಟಿ ಕನ್ನಡ 1ರ ಸ್ಪರ್ಧಿಯಾಗಿದ್ದ (Bigg Boss) ಜಶ್ವಂತ್ ಬೋಪಣ್ಣ (Jashwanth Bopanna) ಇದೀಗ ಡೇಟಿಂಗ್ ರಿಯಾಲಿಟಿ ಶೋ ‘ಸ್ಲ್ಪಿಟ್ಸ್‌ವಿಲ್ಲಾ 15’ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್‌ಟಿ’ ಸಿನಿಮಾ

     

    View this post on Instagram

     

    A post shared by Sunny Leone (@sunnyleone)

    ‘ಸ್ಲ್ಪಿಟ್ಸ್‌ವಿಲ್ಲಾ 15’ರಲ್ಲಿ ಆಕ್ರಿತಿ ನೇಗಿಗೆ (Akriti Negi) ಜೊತೆಯಾಗಿ ಜಶ್ವಂತ್ ಸ್ಪರ್ಧಿಸಿದ್ದರು. ಡೇಟಿಂಗ್‌ ರಿಯಾಲಿಟಿ ಶೋ ಹಿನ್ನೆಲೆ ಆಕ್ರಿತಿ ಅವರ ಮಾಜಿ ಬಾಯ್‌ಫ್ರೆಂಡ್‌ಗಳು ಕೂಡ ಈ ಶೋನಲ್ಲಿ ಭಾಗಿಯಾಗಿದ್ದರು. ಆದರೆ ಜಶ್ವಂತ್ ಮಾಜಿ ಪ್ರೇಯಸಿ ನಂದಿನಿ ಭಾಗವಹಿಸಲಿಲ್ಲ. ಆದರೆ ಎಲ್ಲರಿಂದ ಟಾರ್ಗೆಟ್ ಆಗಿದ್ದ ಆಕ್ರಿತಿ ಮತ್ತು ಜಶ್ವಂತ್, ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಟವಾಡಿ ಫಿನಾಲೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಈಗ ಫಿನಾಲೆಯಲ್ಲಿ 5 ಸೆಕೆಂಡ್‌ಗಳ ಅಂತರದಲ್ಲಿ ಜಶ್ವಂತ್ ಮತ್ತು ಆಕ್ರಿತಿ ಜೋಡಿ ಗೆದ್ದು ಬೀಗಿದ್ದಾರೆ. ಹರ್ಷ್ ಮತ್ತು ರುಷಾಲಿ ವಿರುದ್ಧ ಗೆದ್ದಿದ್ದಾರೆ.

    ಇನ್ನೂ ಈ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದ ಜಶ್ವಂತ್ ಮತ್ತು ಆಕ್ರಿತಿ ನೇಗಿಗೆ 5 ಲಕ್ಷ ರೂ. ಕ್ಯಾಶ್ ಪ್ರೈಝ್ ಸಿಕ್ಕಿದೆ. ನೆಚ್ಚಿನ ನಟನ ಗೆಲುವಿಗೆ ಫ್ಯಾನ್ಸ್‌ ಶುಭಕೋರಿದ್ದಾರೆ. ಆ

  • ನಂದುಗೆ ಕೈಕೊಟ್ಟು ಬೇರೆ ಹುಡುಗಿ ಜೊತೆ ಬಿಗ್ ಬಾಸ್ ಜಶ್ವಂತ್ ಡೇಟಿಂಗ್?

    ನಂದುಗೆ ಕೈಕೊಟ್ಟು ಬೇರೆ ಹುಡುಗಿ ಜೊತೆ ಬಿಗ್ ಬಾಸ್ ಜಶ್ವಂತ್ ಡೇಟಿಂಗ್?

    ಬಿಗ್ ಬಾಸ್ ಒಟಿಟಿ (Bigg Boss Ott) ಮೂಲಕ ಖ್ಯಾತಿ ಪಡೆದಿದ್ದ ಜೋಡಿ ಜಶ್ವಂತ್ (Jashwanth) ಮತ್ತು ನಂದು (Nandu) ಇದೀಗ ಬೇರೆ ಬೇರೆಯಾಗಿದ್ದಾರೆ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೈಟ್ ನಂದು, ಜಶ್ ಜೋಡಿ ಬ್ರೇಕಪ್ ಸುದ್ದಿ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಈಗ ಜಶ್ವಂತ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ನಂದುಗೆ ಕೈಕೊಟ್ಟು ಬೇರೇ ಹುಡುಗಿ ಜೊತೆ ಜಶ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಬಿಗ್ ಬಾಸ್ ಮನೆಯಲ್ಲಿ ನಂದು ಮತ್ತು ಜಶ್ ಜೋಡಿನ ನೋಡಿದವರೆಲ್ಲ, ಜೋಡಿ ಅಂದರೆ ಹೀಗಿರಬೇಕು ಎಂದು ಹಾಡಿ ಹೊಗಳುತ್ತಿದ್ದರು. ಈ ಜೋಡಿಯ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಏನೋ, ನಂದು ಮತ್ತು ಜಶ್ ದೂರ ದೂರ (Breakup) ಆಗಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಬಗ್ಗೆ ಅಧಿಕೃತವಾಗಿ ಬಿಗ್ ಬಾಸ್ ಸ್ಪರ್ಧಿ ನಂದು ತಿಳಿಸಿದ್ದರು.

    ಈ ಬೆನ್ನಲ್ಲೇ ಜಶ್ವಂತ್ ಬಗ್ಗೆ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಜಶ್ವಂತ್ ಬೇರೆ ಹುಡುಗಿ ಡೇಟ್ ಮಾಡ್ತಿದ್ದಾರೆ. ಹಾಗಾಗಿ ನಂದುಗೆ ಜಶ್ ಕೈಕೊಟ್ಟಿದ್ದಾರೆ ಎಂದು ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ.

    ಸಾನ್ಯ ಅಯ್ಯರ್ ಬಂದ ಮೇಲೆನೇ ನಂದು ಮತ್ತು ಜಶ್ವಂತ್ ನಡುವೆ ಬಿರುಕು ಮೂಡಿತ್ತು ಎನ್ನಲಾಗುತ್ತಿದೆ. ಬಿಗ್ ಬಾಸ್ ಶೋ ಬಳಿಕ ನಂದು ರಿಲೇಷನ್‌ಶಿಪ್‌ಗೆ ಬೈ ಹೇಳಿ, ಬೇರೆ ಹುಡುಗಿ ಜೊತೆ ಜಶ್ವಂತ್ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

    ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

    ದೊಡ್ಮನೆ ಬಿಗ್ ಬಾಸ್‌ನಲ್ಲಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಸ್ಪರ್ಧಿಗಳು ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಉದಯ್ ಸೂರ್ಯ, ಸಾನ್ಯ ಮತ್ತು ಜಶ್ವಂತ್ ಆಡಿರುವ ಮಾತು ಮನಸ್ತಾಪಕ್ಕೆ ಕಾರಣವಾಗಿದೆ. ಉದಯ್ ಆಡಿರುವ ಮಾತಿನಿಂದ ಮನೆಯ ಕಲಹಕ್ಕೆ ಕಾರಣವಾಗಿದೆ.‌

    ಬಿಗ್ ಬಾಸ್ ಶೋ ಆರಂಭವಾದ ದಿನದಿಂದಲೂ ಸಾನ್ಯ ಮತ್ತು ರೂಪೇಶ್, ಸಾನ್ಯ ಮತ್ತು ಜಶ್ವಂತ್ ಬೋಪಣ್ಣ ಒಳ್ಳೆಯ ಸ್ನೇಹಿತರು ಆದರೆ ಇವರ ಸ್ನೇಹ, ಸಂಬಂಧದ ಬಗ್ಗೆ ಕೆಟ್ಟಾಗಿ ಉದಯ್ ಮಾತನಾಡಿದ್ದರು. ಈ ಎಲ್ಲಾ ವಿಚಾರಗಳು ಉದಯ್ ಸೂರ್ಯಗೆ ಮುಳುವಾಗಿದೆ. ಮನೆ ಮಂದಿ ಉದಯ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉದಯ್‌ಗೆ ಕ್ಲಾಸ್ ತರಟೆಗೆ ತೆಗೆದುಕೊಂಡಿದ್ದಾರೆ.

    ಒಳ ಉಡುಪಿನ ವಿಚಾರಕ್ಕೆ ಸಂಬಂಧಿಸಿ ಸಾನ್ಯಾ ಹಾಗೂ ಉದಯ್ ನಡುವೆ ಒಂದು ಹಾಸ್ಯಮಯ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ಉದಯ್‌ಗೆ ಚೈತ್ರಾ ಕ್ಲೋಸ್ ಇದ್ದರು. ಹಾಸ್ಯದ ರೀತಿಯಲ್ಲಿ ನಡೆದ ಒಳ ಉಡುಪಿನ ವಿಚಾರವನ್ನು ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಚೈತ್ರಾ ಎದುರು ಬಣ್ಣಿಸಿದ್ದರು ಉದಯ್. ಇದು ಚೈತ್ರಾಗೆ ಇಷ್ಟವಾಗಿರಲಿಲ್ಲ.

    ಗರ್ಲ್‌ಫ್ರೆಂಡ್ ನಂದು ಇದ್ದಾಗ ಜಶ್ವಂತ್ ಒಂದು ರೀತಿಯಲ್ಲಿ ಇರುತ್ತಾನೆ. ಅವಳು ಇಲ್ಲದ್ದಾಗ ಸಾನ್ಯ ಅಯ್ಯರ್ ಬಳಿ ಬೇರೆ ರೀತಿಯಲ್ಲಿ ಇರುತ್ತಾನೆ. ಕ್ಯಾಮೆರಾ ಇಲ್ಲದಿದ್ದರೆ ಇಲ್ಲಿ ಬೇರೆಯದೇ ಆಗುತ್ತಿತ್ತು. ಸಾನ್ಯಾಳನ್ನು ಬೀಳಿಸಿಕೊಳ್ಳಬೇಕು ಎಂಬುದು ರೂಪೇಶ್‌ಗೆ ಇದೆ ಎಂಬುದನ್ನೂ ಚೈತ್ರಾ ಎದುರು ಉದಯ್ ಹೇಳಿದ್ದರು. ಇದೀಗ ಉದಯ್‌ ಮಾತು ಸಾನ್ಯ ಕೋಪಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಇದೀಗ ಚೈತ್ರಾ, ಜಶ್ವಂತ್, ಸಾನ್ಯ, ಜಶ್ವಂತ್, ರೂಪೇಶ್, ನಂದು ಚರ್ಚಿಸಿದ ಬಳಿಕ ಎಲ್ಲರ ಎದುರಲ್ಲೇ ರೆಡ್ ಹ್ಯಾಂಡ್ ಆಗಿ ಉದಯ್ ಸಿಕ್ಕಿಹಾಕಿಕೊಂಡಿದ್ದಾರೆ. ಉದಯ್ ನಡೆಗೆ ಎಲ್ಲರೂ ಛೀಮಾರಿ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]