Tag: Jarakiholi Brothers

  • ಸರ್ಕಾರ ಕೆಡವಿ ನಮ್ಮ ದಾರಿ ನೋಡಿಕೋಳ್ಳುತ್ತೇವೆ ಅನ್ತಿದ್ದವರಿಗೆ ಬಿಗ್ ಶಾಕ್

    ಸರ್ಕಾರ ಕೆಡವಿ ನಮ್ಮ ದಾರಿ ನೋಡಿಕೋಳ್ಳುತ್ತೇವೆ ಅನ್ತಿದ್ದವರಿಗೆ ಬಿಗ್ ಶಾಕ್

    -ಆಪರೇಷನ್ ‘310’ ನಡೆಯುತ್ತಿರೋದು ಯಾಕೆ..?
    -ಯಾರ ವಿರುದ್ಧ ಆಪರೇಷನ್ ‘310’

    ಬೆಂಗಳೂರು: ವಿಧಾನಮಂಡಲ ಅಧಿವೇಶನದ ವೇಳೆಯಲ್ಲೇ ಜಾರಕಿಹೋಳಿ ಸಹೋದರರ ವಿರುದ್ಧ ಸೀಕ್ರೆಟ್ ಆಪರೇಷನ್ `310′ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆಪರೇಷನ್ ಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ಮೂಲಕ ಸರ್ಕಾರ ಕೆಡವಿ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದವರಿಗೆ ಬಿಗ್ ಶಾಕ್ ಎದುರಾಗಿದೆ.

    ಸಚಿವ ರಮೇಶ್, ಮಾಜಿ ಸಚಿವರಾದ ಸತೀಶ್, ಬಾಲಚಂದ್ರ ಜಾರಕಿಹೋಳಿ ಇಲ್ಲಿ ಟಾರ್ಗೇಟ್ ಆಗಿದ್ದಾರೆ. ಟ್ರಿಪ್ ಹೋಗುವ ಮುನ್ನ ಆ ಮೂವರು ಮೇಲೆ ಎಲ್ಲಿ ಹೋಗ್ತಾರೆ..? ಎಲ್ಲಿ ಬರ್ತಾರೆ..? ಯಾರ ಜೊತೆ ಮಾತಾಡ್ತಾರೆ..? ಎಲ್ಲಿ ಸೇರ್ತಾರೆ..? ಕಣ್ಣಿಡಿ ಎಂದು ಸಿಎಂ, ಡಿಸಿಎಂಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಸಿಎಂ ಸೂಚನೆಯಂತೆ ಗುಪ್ತಚರ ಇಲಾಖೆಯಿಂದ ಆಪರೇಷನ್ `310′ ಶುರುವಾಗಿದೆ. ನಿಗಾ ಇಡಲೆಂದೇ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಂಕಮ್ ಹೋಟೆಲ್‍ನಲ್ಲಿ 310ನೇ ಕೊಠಡಿ ನೀಡಲಾಗಿದ್ದು, ಈ ಹೋಟೆಲ್ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ರೂಂ ಬಳಿ ಸುಳಿದಾಡುತ್ತಿರುವ, ತಪಾಸಣೆ ಮಾಡಿದ ಎಕ್ಸ್ ಕ್ಲೂಸಿವ್ ದೃಶ್ಯ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಪರೇಷನ್ `310′ ಸುಳಿವು ಸಿಗುತ್ತಲೇ ಬೆಳಗಾವಿ ಸಾಹುಕಾರ ಫುಲ್ ಅಲರ್ಟ್ ಆಗಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕಾರ್, ಎಸ್ಕಾರ್ಟ್, ಪೈಲೆಟ್ ಎಲ್ಲಾ ಬಿಟ್ಟು ಓಡಾಡುತ್ತಿದ್ದಾರೆ. ನಡೆದಿದ್ದೇ ಹಾದಿ ಎನ್ನುವ ಬ್ರದರ್ಸ್ ಗೆ ಈಗ ತಮ್ಮ ನೆಲದಲ್ಲೆ `ಕದ್ದುಮುಚ್ಚಿ’ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಆಪರೇಷನ್ ಕಮಲದ ಭೀತಿ, ರೆಸಾರ್ಟ್ ರಾಜಕಾರಣದ ಆತಂಕದಿಂದ ಆಪರೇಷನ್ `310′ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಸಿದ್ದು-ಸ್ವಾಮಿ-ಪರಮ ರಹಸ್ಯದ ಸ್ಕೆಚ್‍ಗೆ ಜಾರಕಿಹೊಳಿ ಬ್ರದರ್ಸ್ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಡಿಕೆಶಿ ಬರುತ್ತಿದ್ದಂತೆ ಬಳ್ಳಾರಿ ತೊರೆದ ರಮೇಶ್ ಜಾರಕಿಹೊಳಿ

    ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಂತೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯಿಂದ ಹೊರಗೆ ತೆರಳುವ ಮೂಲಕ ತಮ್ಮ ಗುದ್ದಾಟವನ್ನು ಬಳ್ಳಾರಿಯಲ್ಲೂ ಮುಂದುವರಿಸಿದ್ದಾರೆ.

    ಹೌದು, ಡಿಕೆಶಿ ಬಳ್ಳಾರಿಗೆ ಬರುತ್ತಿದ್ದಂತೆ, ಜಿಲ್ಲೆಯಿಂದ ರಮೇಶ್ ಜಾರಕಿಹೋಳಿ ಹೊರ ನಡೆದಿದ್ದಾರೆ. ರಮೇಶ್ ರವರ ಅನುಪಸ್ಥಿತಿಯಲ್ಲೂ ಅವರ ಉಸ್ತುವಾರಿ ಕ್ಷೇತ್ರದಲ್ಲಿ ಡಿಕೆಶಿ ಪ್ರಚಾರ ನಡೆಸುತ್ತಿದ್ದಾರೆ.

    ಬಳ್ಳಾರಿಯ ಉಪ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಅವರು ಎರಡು ದಿನದ ಹಿಂದೆಯೇ ಬಂದು ಕಾಂಗ್ರೆಸ್ ನಾಯಕರ ಸಭೆ ನಡೆಸಿದ್ದರು. ಇಂದು ಸಂಜೆ ಕೂಡ ಕೂಡ್ಲಿಗಿಯ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಂಡಿದ್ದರು. ಯಾವಾಗ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರೋ, ರಮೇಶ್ ಬಳ್ಳಾರಿ ತೊರೆದಿದ್ದಾರೆ. ಇಂದು ಬೆಳಗ್ಗೆ ಕೂಡ್ಲಿಗಿ ಮುಖಂಡರಿಗೆ ಕರೆ ಮಾಡಿ, ಇನ್ನೂ ಎರಡು ದಿನ ಬಿಟ್ಟು ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿ ಕ್ಷೇತ್ರದಲ್ಲಿ ಏಕಾಂಗಿಯಾಗಿ ಪ್ರಚಾರ ಆರಂಭಿಸಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಕರೆದಿದ್ದ ಸಭೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಆಹ್ವಾನಿಸಿ ಪರೋಕ್ಷವಾಗಿ ರಮೇಶ್ ಗೆ ಟಕ್ಕರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಈ ಕುರಿತು ಮಾಧ್ಯಮಗಳು ಡಿಕೆಶಿಯವರನ್ನು ಪ್ರಶ್ನಿಸಿದಾಗ, ಚುನಾವಣಾ ಜವಾಬ್ದಾರಿಯನ್ನ ಕೆಪಿಸಿಸಿ ಅಧ್ಯಕ್ಷರು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನೀವು ಅವರನ್ನೇ ಪ್ರಶ್ನೆ ಮಾಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆ, ಬೇಡಿಕೆ ಇಟ್ಟಿದ್ದಾರೆ: ಡಿಸಿಎಂ ಪರಮೇಶ್ವರ್

    ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆ, ಬೇಡಿಕೆ ಇಟ್ಟಿದ್ದಾರೆ: ಡಿಸಿಎಂ ಪರಮೇಶ್ವರ್

    ನವದೆಹಲಿ: ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.

    ಜಾರಕಿಹೊಳಿ ಸಹೋದರರ ಸಮಸ್ಯೆಯು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಈ ಸಂಬಂಧ ಇಂದು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಪ್ರಮುಖ ಕೈ ನಾಯಕರು ಹಾಜರಾಗಿದ್ದಾರೆ.

    ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿರುವ ಡಿಸಿಎಂ ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಸಂಜೆ ಐದು ಗಂಟೆಗೆ ಎಲ್ಲಾ ರಾಜ್ಯ ನಾಯಕರು ಸೇರಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇವೆ. ಭೇಟಿ ವೇಳೆ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹಾಗೂ ನಿಗಮ ಮಂಡಳಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಪ್ರಮುಖವಾಗಿ ರಾಜ್ಯ ರಾಜಕಾರಣದ ಬೆಳವಣಿಗೆಗೆ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದರು.

    ಈ ವೇಳೇ ಮಾತನಾಡಿ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಕೇಂದ್ರದ ಮುಂದೆ ತಮ್ಮ ಸಮಸ್ಯೆ ಹಾಗೂ ಬೇಡಿಕೆಯನ್ನು ಇಟ್ಟಿದ್ದಾರೆ. ಅವುಗಳನ್ನು ಬಗೆಹರಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಈಗಾಗಲೇ ನಾವು ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗುತ್ತಿಲ್ಲ ಎನ್ನುವ ಅಸಮಾಧಾನವಿದೆ. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

    ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲಿದ್ದು, ಹೈಕಮಾಂಡ್ ನಿರ್ದೇಶನದ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲದೇ ಇಂದು ಅಥವಾ ನಾಳೆ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಸಂಧಾನ ಸಕ್ಸಸ್- ತಮ್ಮ ರಾಜೀನಾಮೆಯನ್ನು ಮುಂದೂಡಿದ್ರಾ ಜಾರಕಿಹೊಳಿ?

    ಸಿಎಂ ಸಂಧಾನ ಸಕ್ಸಸ್- ತಮ್ಮ ರಾಜೀನಾಮೆಯನ್ನು ಮುಂದೂಡಿದ್ರಾ ಜಾರಕಿಹೊಳಿ?

    ಬೆಂಗಳೂರು: ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಸಿಎಂ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಆದರೆ ಸಿಎಂ ಸಂಧಾನ ಸಕ್ಸಸ್ ಆಗಿದ್ದು ಸದ್ಯಕ್ಕೆ ಮಾತ್ರ, ಮುಂದೆ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಮಂಗಳವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಜಾರಕಿಹೊಳಿ ಸಹೋದರರು ಸದ್ಯಕ್ಕೆ ತಟಸ್ಥರಾಗಿದ್ದಾರೆ. ಅಲ್ಲದೇ ರಮೇಶ್ ಜಾರಕಿಹೊಳಿಯವರು ಸಹ ರಾಜೀನಾಮೆ ನೀಡುವ ವಿಚಾರವನ್ನು ಮುಂದೂಡಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗೆ ಮೂಲ ಕಾರಣ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗಳ ಎಫೆಕ್ಟ್ ಎಂದು ಹೇಳಲಾಗುತ್ತಿದೆ.

    ಹೌದು, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಘೋಷಣೆ ಬಳಿಕ ರಾಜೀನಾಮೆ ನೀಡಿದರೆ ಉತ್ತಮ ಎಂಬ ಆಲೋಚನೆಗೆ ಜಾರಕಿಹೊಳಿ ಸಹೋದರರು ಬಂದಿದ್ದಾರೆ. ಒಂದು ವೇಳೆ ಈಗ ಏನಾದರೂ ರಾಜೀನಾಮೆ ಕೊಟ್ಟರೆ ಎರಡೂ ರಾಜ್ಯಗಳ ಜತೆಯಲ್ಲೇ ಚುನಾವಣೆಗೆ ಹೋಗಬೇಕು. ಇವುಗಳ ಜೊತೆ ಚುನಾವಣೆಗೆ ಹೋದರೆ ನಮ್ಮ ಗೆಲುವು ಕಷ್ಟ ಆಗುತ್ತದೆ ಎನ್ನುವ ನಿರ್ಧಾರದಿಂದಾಗಿ ರಾಜೀನಾಮೆಯ ವಿಚಾರಕ್ಕೆ ಸದ್ಯಕ್ಕೆ ತಡೆ ಹಾಕಿದ್ದಾರೆ ಎನ್ನಲಾಗಿದೆ.

    ಒಂದು ತಿಂಗಳು ಬಿಟ್ಟು ರಾಜೀನಾಮೆ ನೀಡಿದರೆ, ನಮಗೆ ಗೆಲ್ಲೋದಕ್ಕೆ ಸುಲಭ ಆಗುತ್ತದೆ. ಅಲ್ಲದೇ ಲೋಕಸಭಾ ಚುನಾವಣೆಯ ಜೊತೆಯಲ್ಲೇ ನಮ್ಮ ಕ್ಷೇತ್ರಗಳ ಉಪಚುನಾವಣೆಗಳು ನಡೆದರೆ ನಮಗೆ ಅನುಕೂಲವಾಗುತ್ತೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನಾವು ಸುಲಭವಾಗಿ ಗೆಲ್ಲಬಹುದು ಅಂತ ಅಸಮಾಧಾನಿತ ಶಾಸಕರ ಮುಂದೆ ಪ್ರಸ್ತಾಪಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಸಿಎಂ ಕುಮಾರಸ್ವಾಮಿ ಎಷ್ಟೇ ಹರಸಾಹಸ ಪಟ್ಟು ಸಂಧಾನ ಮಾಡಿದರೂ, ಸದ್ಯಕ್ಕೆ ಮಾತ್ರ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಆದರೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಮೇಲೆ ರಾಜ್ಯದ ರಾಜಕಾರಣ ಏನಾಗುತ್ತದೆ ಎನ್ನುವುದು ಕೂತುಹಲ ಕೆರೆಳಿಸಿದೆ. ಈಗಾಗಲೇ ಹೈಕಮಾಂಡ್ ಅಂಗಳ ತಲುಪಿರುವ ಸಹೋದರರ ಸಂಕಟ, ಏನಾಗಬಹುದು ಎಂಬುದು ಇಂದು ಸಂಜೆಯೊಳಗೆ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕಿಂದು ನಿರ್ಣಾಯಕ ದಿನ – ದೆಹಲಿಯಲ್ಲಿ ಕೈ ನಾಯಕರ ರಿಯಲ್ ಸರ್ಕಸ್

    ಸಮ್ಮಿಶ್ರ ಸರ್ಕಾರಕ್ಕಿಂದು ನಿರ್ಣಾಯಕ ದಿನ – ದೆಹಲಿಯಲ್ಲಿ ಕೈ ನಾಯಕರ ರಿಯಲ್ ಸರ್ಕಸ್

    ನವದೆಹಲಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನವಾಗಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ರಿಯಲ್ ಸರ್ಕಸ್ ನಡೆಯಲಿದ್ದು, ಜಾರಕಿಹೊಳಿ ಬ್ರದರ್ಸ್ ನ್ನು ಹೈಕಮಾಂಡ್ ಸಮಾಧಾನ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

    ಸರ್ಕಾರ ಉಳಿಯಲು ಜಾರಕಿಹೊಳಿ ಸಹೋದರರ ಬೇಡಿಕೆ ಈಡೇರಿಸುತ್ತಾರೆಯೇ ಎಂಬ ಕುತೂಹಲವೊಂದು ಮೂಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಾರಕಿಹೊಳಿ ಬ್ರದರ್ಸ್ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆಯೆ ಎಂಬುದು ಇಂದು ತಿಳಿದುಬರಲಿದೆ.

    ತಮ್ಮ ಸಮುದಾಯಕ್ಕೆ ಇನ್ನೊಂದು ಸಚಿವ ಸ್ಥಾನ ಬೇಕು ಹಾಗೂ ಬೆಂಬಲಿಗರಿಗೆ ನಿಗಮ ಮಂಡಳಿ ಅವಕಾಶ ಬೇಕು ಅಂತ ಜಾರಕಿಹೊಳಿ ಬ್ರದರ್ಸ್ ಬೇಡಿಕೆ ಇಟ್ಟಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಅವರ ಈ ಮನವಿಗೆ ರಾಹುಲ್ ಗಾಂಧಿ ಅಸ್ತು ಅನ್ನಬಹುದು ಎನ್ನಲಾಗುತ್ತಿದೆ.

    ಇತ್ತ ಡಿಕೆಶಿ ವಿಚಾರದಲ್ಲಿ `ರಾಗಾ’ ಖಚಿತ ಭರವಸೆ ಕೊಡ್ತಾರಾ ಅನ್ನೋದು ಡೌಟು. ಯಾಕಂದ್ರೆ ಟ್ರಬಲ್ ಶೂಟರ್ ಡಿಕೆಶಿ ಅಂದರೆ ರಾಹುಲ್ ಗಾಂಧಿಗೆ ಅಚ್ಚುಮೆಚ್ಚು ಅಂತೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್ ಗಾಗಿ ಡಿಕೆಶಿಯನ್ನ ದೂರ ಇಡಲು ರಾಹುಲ್ ಗಾಂಧಿ ಒಪ್ಪಲ್ಲ. ಒಂದು ವೇಳೆ ಒಪ್ಪದಿದ್ರೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಹುಟ್ಟಿಸುತ್ತದೆ. ಒಟ್ಟಿನಲ್ಲಿ ಬಂಡಾಯವೆದ್ದ ಬ್ರದರ್ಸ್ ಮೇಲೆ ಇಂದಿನ ದಿನ ನಿರ್ಣಯಕವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಉಳಿಸಿಕೊಳ್ಳೋಕೆ ಅಖಾಡಕ್ಕೆ ಇಳಿದ್ರಾ ಸಿಎಂ ಕುಮಾರಸ್ವಾಮಿ?

    ಸರ್ಕಾರ ಉಳಿಸಿಕೊಳ್ಳೋಕೆ ಅಖಾಡಕ್ಕೆ ಇಳಿದ್ರಾ ಸಿಎಂ ಕುಮಾರಸ್ವಾಮಿ?

    ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಅತೃಪ್ತ ಶಾಸಕರ ಅಸಮಾಧಾನವನ್ನು ಶಮನಗೊಳಿಸಲು ಖುದ್ದು ಸಿಎಂ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.

    ಮಂಗಳವಾರ ನಗರದ ತಾಜ್‍ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಅತೃಪ್ತರಾಗಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ನಾಗೇಂದ್ರರವರು ಒಟ್ಟಿಗೆ ಭೇಟಿಯಾಗಿ ಸಭೆ ನಡೆಸುತ್ತಿದ್ದರು. ಈ ವೇಳೆ ದಿಢೀರ್ ಎಂದು ಹೋಟೆಲ್‍ಗೆ ಭೇಟಿ ನೀಡಿದ ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ಅಧಿಕಾರಿಗಳ ಬಳಿ ಯಾರೆಲ್ಲಾ ಇದ್ದಾರೆಂದು ಮಾಹಿತಿ ಪಡೆದುಕೊಂಡು, ಬಳಿಕ ಯಾರಿಗೋ ಕರೆ ಮಾಡಿ ಹೋಟೆಲ್ ಪ್ರವೇಶಿಸಿದರು.

    ಈ ಬೆಳವಣಿಗೆಯ ನಂತರ ಸಿಎಂ ಕುಮಾರಸ್ವಾಮಿಯವರು ತಾಜ್‍ ವೆಸ್ಟ್ ಎಂಡ್ ಹೋಟೆಲ್‍ಗೆ ಆಗಮಿಸಿ ಅತೃಪ್ತ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ರೇವಣ್ಣ ಕೂಡ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ತಾಜ್‍ ವೆಸ್ಟ್ ಎಂಡ್ ಹೋಟೆಲ್‍ಗೆ ಆಗಮಿಸುವ ಮೊದಲೇ ರಮೇಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಸಹೋದರ ಸತೀಶ್ ಜಾರಕಿಹೊಳಿಯವರೊಂದಿಗೆ ಮಾತನಾಡಲು ಹೋಟೆಲ್‍ಗೆ ಆಗಮಿಸುವಂತೆ ಸೂಚಿಸಿದ್ದರು. ಇವರ ಜೊತೆ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಕೂಡ ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟದಿಂದಾಗಿ ಎಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಅಪಾಯವುಂಟಾಬಹುದು ಎನ್ನುವ ಭೀತಿಯಿಂದ ನೇರವಾಗಿ ಸಿಎಂ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಶಮನಗೊಳಿಸಲು ಖುದ್ದು ಅಖಾಡಕ್ಕೆ ಇಳಿದಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಬ್ರದರ್ಸ್ ಪ್ರಾಬ್ಲಂ: ರಾಗಾ ನೇತೃತ್ವದಲ್ಲಿ ಸಂಧಾನಕ್ಕೆ ಮುಂದಾದ ಕೈ ನಾಯಕರು!

    ಜಾರಕಿಹೊಳಿ ಬ್ರದರ್ಸ್ ಪ್ರಾಬ್ಲಂ: ರಾಗಾ ನೇತೃತ್ವದಲ್ಲಿ ಸಂಧಾನಕ್ಕೆ ಮುಂದಾದ ಕೈ ನಾಯಕರು!

    ಬೆಂಗಳೂರು: ಜಾರಕಿಹೊಳಿ ಸಹೋದರರ ಆಂತರಿಕ ಬಿಕ್ಕಟ್ಟು ದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಧಾನ ನಡೆಸಲು ರಾಜ್ಯ ಕೈ ನಾಯಕರು ಮುಂದಾಗಿದ್ದಾರೆ.

    ಹೌದು, ಕಾಂಗ್ರೆಸ್ಸಿನ ಆಂತರಿಕ ಬಿಕ್ಕಟ್ಟು ಹಾಗೂ ವಿವಾದಗಳ ಚಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಜಾರಕಿಹೊಳಿ ಸಹೋದರರು ತಮ್ಮ ಸಮಸ್ಯೆಯನ್ನು ಖುದ್ದು ಹೈಕಮಾಂಡ್ ನೇತೃತ್ವದಲ್ಲೇ ಪರಿಹಾರ ಆಗಬೇಕೆನ್ನುವ ಪಟ್ಟು ಹಿಡಿದಿದ್ದರು. ಹೀಗಾಗಿ ಮಂಗಳವಾರ ಹಾಗು ಬುಧವಾರ ಎಐಸಿಸಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ದೆಹಲಿಯಲ್ಲಿ ನಡೆಯುವ ಸಭೆಗೆ ಹಾಜರಾಗಲು ಮಂಗಳವಾರ ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಇತರೆ ಪ್ರಮುಖ ಕೈ ನಾಯಕರು ತೆರಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    ಬುಧವಾರ ಬೆಳೆಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ತುರ್ತು ಸಭೆ ನಡೆಯಲಿದ್ದು, ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ಪರಿಷತ್‍ಗೆ ಅಭ್ಯರ್ಥಿಗಳ ಅಂತಿಮ ಪಡಿಸುವ ವಿಚಾರ ಹಾಗೂ ಪ್ರಮುಖವಾಗಿ ಜಾರಕಿಹೊಳಿ ಸಹೋದರರ ಅಸಮಾಧಾನವನ್ನು ಬಗೆಹರಿಸುವ ಚರ್ಚೆ ನಡೆಯಲಿದೆ. ಪಕ್ಷದಲ್ಲಿನ ಆಂತರಿಕ ಗೊಂದಲವನ್ನು ಖುದ್ದು ರಾಹುಲ್ ಗಾಂಧಿಯೊ0ದಿಗೆ ಹಂಚಿಕೊಳ್ಳಲು ಜಾರಕಿಹೊಳಿ ಸಹೋದರರು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    ಜಾರಕಿಹೊಳಿ ಬ್ರದರ್ಸ್ ಗೆ ಮಾಜಿ ಸಿಎಂ ಕಿವಿಮಾತು

    – ಬಂಡಾಯ ಬ್ರದರ್ಸ್ ಗೆ ಬೇಕಂತೆ ಸಿದ್ದರಾಮಯ್ಯ ಬೆಂಬಲ

    ಬೆಂಗಳೂರು: ನಮಗೆ ಹೈಕಮಾಂಡ್ ಮಟ್ಟದಲ್ಲಿ ನ್ಯಾಯ ಸಿಗಬೇಕು. ಇಲ್ಲದಿದ್ರೆ ಬೇರೆ ಯೋಚನೆ ಮಾಡ್ತೀವಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಜಾರಕಿ ಹೊಳಿ ಬ್ರದರ್ಸ್ ದಾಳ ಉರುಳಿಸಿದ್ದಾರೆ.

    ಈ ವೇಳೆ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ದುಡುಕದಂತೆ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣ ಮೊದಲಿನಂತಿಲ್ಲ. ದುಡುಕಿ ತೀರ್ಮಾನ ಮಾಡಿದರೆ ಸರ್ವೈವಲ್ ಆಗೋದು ಕಷ್ಟ. ಹೆಚ್ಚು ಕಡಿಮೆ ಆದರೆ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಎಚ್ಚರಿಕೆಗೆ ರಮೇಶ್ ಜಾರಕಿಹೊಳಿ ಮೌನವಾಗಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಿಮ್ಮಿಂದ ಸಾಧ್ಯವಾಗದೇ ಇದ್ರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ- ಸಿದ್ದು, ಜಾರಕಿಹೊಳಿ ಸಭೆಯ ಇನ್‍ಸೈಡ್ ಸ್ಟೋರಿ

    ಡಿಕೆಶಿ ಮೇಲಿನ ದೂರಿನ ಜೊತೆಗೆ ತಮ್ಮ ಬೇಡಿಕೆ ಈಡೇರಿಕೆಗೂ ನಿಮ್ಮ ಬೆಂಬಲ ಬೇಕು. ಹೈಕಮಾಂಡ್ ಬಳಿ ಮಾತನಾಡುವಾಗ ನೀವು ಜೊತೆಗಿರಿ ಅಂತ ಸಿದ್ದರಾಮಯ್ಯ ಅವರನ್ನು ಜಾರಕಿಹೊಳಿ ಬ್ರದರ್ಸ್ ಬೆಂಬಲಕ್ಕೆ ಆಹ್ವಾನಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಅವರು ಗೊಂದಲದಲ್ಲೇ ಓಕೆ ಅಂದಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜಾರಕಿಹೊಳಿ ಬ್ರದರ್ಸ್ ಗೆ ಹೈಕಮಾಂಡ್ ಮಟ್ಟದಲ್ಲಾದ್ರೂ ಪರಿಹಾರ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯರ ಸಂಧಾನಕ್ಕೆ ಬಾಗ್ತಾರಾ ಜಾರಕಿಹೊಳಿ ಬ್ರದರ್ಸ್?

    ಸಿದ್ದರಾಮಯ್ಯರ ಸಂಧಾನಕ್ಕೆ ಬಾಗ್ತಾರಾ ಜಾರಕಿಹೊಳಿ ಬ್ರದರ್ಸ್?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡುವ ಸಾಧ್ಯತೆಗಳಿವೆ. ಭಾನುವಾರವಷ್ಟೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯ ಅವರ ಇಂದಿನ ಸಂಧಾನ ಸಕ್ಸಸ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

    ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಅನ್ನು ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸ್ತಾರಾ ಅನ್ನುವ ಪ್ರಶ್ನೆಯೊಂದು ಮೂಡಿದೆ. ಹೀಗಾಗಿ ಇಂದಿನ ಮೆಗಾ ಪೊಲಿಟಿಕಲ್ ಟರ್ನ್ ಸಿದ್ದರಾಮಯ್ಯ ಮೇಲೆ ನಿಂತಿದೆ. ಕಾಂಗ್ರೆಸ್ ಹೈಕಮಾಂಡ್ ಶಾಸಕರನ್ನು ಸಮಾಧಾನಪಡಿಸುವ ಹೊಣೆ ಸಿದ್ದರಾಮಯ್ಯಗೆ ಕೊಟ್ಟಿದೆ. ಆದ್ರೆ ಎಲ್ಲ ಅಸಮಾಧಾನಿತ ಶಾಸಕರು ಸಿದ್ದರಾಮಯ್ಯ ಮಾತು ಕೇಳ್ತಾರಾ? ಅಥವಾ ಸಿದ್ದು ಮಾತು ಕೇಳದೇ ಕಮಲ ಮನೆಯ ಬಾಗಿಲು ತಟ್ಟುತ್ತಾರಾ ಅನ್ನುವ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಇದನ್ನೂ ಓದಿ: ಕೈ ನಾಯಕರ ಜೊತೆ ವೇಣುಗೋಪಾಲ್ ಸಭೆಯಲ್ಲಿ ಏನಾಯ್ತು: ಇಲ್ಲಿದೆ ಇನ್‍ಸೈಡ್ ಸ್ಟೋರಿ

    ಸಿದ್ದರಾಮಯ್ಯ ಸಂಧಾನ ವಿಫಲವಾದ್ರೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿರುವ ಕುರಿತು ಚರ್ಚೆಗಳು ನಡೆಯುತ್ತಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾರಕಿಹೊಳಿ ಸಹೋದರರ ಸಂಧಾನಕ್ಕೆ ಮುಂದಾದ ಖರ್ಗೆ

    ಜಾರಕಿಹೊಳಿ ಸಹೋದರರ ಸಂಧಾನಕ್ಕೆ ಮುಂದಾದ ಖರ್ಗೆ

    ಬೆಂಗಳೂರು: ಬೆಳಗಾವಿಯ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರ ಸಮಸ್ಯೆಯನ್ನು ದಮನ ಮಾಡಲು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ.

    ಈ ಕುರಿತು ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯ ಸಮಸ್ಯೆಯಿಂದಾಗಿ ಎದ್ದಿರುವ ಸಮಸ್ಯೆಯನ್ನು ಕುರಿತು ಚರ್ಚಿಸಿ, ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡುತ್ತೇನೆ. ಅಲ್ಲದೇ ಅವರ ಗೊಂದಲ ಏನೆಂಬುದು ಸರಿಯಾಗಿ ನನಗೆ ಗೊತ್ತಿಲ್ಲ. ಅವರ ಜೊತೆ ಮಾತನಾಡಿ ಎಲ್ಲಾ ಬಗೆಹರಿಸುತ್ತೇನೆ. ರಮೇಶ್ ಜಾರಕಿಹೊಳಿಯವರು ಮೊದಲಿನಿಂದಲೂ ಕಾಂಗ್ರೆಸ್ಸಿನಲ್ಲಿಯೇ ಇದ್ದವರು, ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಎಂದು ಹೇಳಿದರು.

    ಬೆಳಗಾವಿಯ ಸಮಸ್ಯೆಯನ್ನು ಮಾಧ್ಯಮಗಳು ವೈಭವಿಕರಿಸಿ ಸೃಷ್ಟಿಸುತ್ತಿವೆ. ಬಿಜೆಪಿಯವರು ಸರ್ಕಾರ ರಚಿಸುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv