Tag: japan

  • ಜಪಾನ್‌ನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ – 1.8 ಲಕ್ಷ ಕೋಟಿ ಸಂಪತ್ತು ನಷ್ಟ ಸಾಧ್ಯತೆ!

    ಜಪಾನ್‌ನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ – 1.8 ಲಕ್ಷ ಕೋಟಿ ಸಂಪತ್ತು ನಷ್ಟ ಸಾಧ್ಯತೆ!

    ಟೊಕಿಯೋ: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಆಘಾತದಿಂದ ಜಗತ್ತು ಚೇತರಿಸಿಕೊಳ್ಳುವ ಮೊದಲೇ ಜಪಾನ್‌ನಲ್ಲೂ ಪ್ರಬಲ ಭೂಕಂಪನ (Japan Earthquake) ಸಂಭವಿಸಿದೆ.

    ಭಾರತೀಯ ಕಾಲಮಾನ ಬುಧವಾರ ಸಂಜೆ 7:34ರ ವೇಳೆಗೆ ಜಪಾನ್‌ನ ಕ್ಯುಶುನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿಯಿಂದ 30 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ತಕ್ಷಣಕ್ಕೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 334 ಅಣುಬಾಂಬ್‌ಗಳ ಶಕ್ತಿಗೆ ಹೋಲಿಸಿದ ವಿಜ್ಞಾನಿಗಳು

    ಒಂದು ದಿನದ ಹಿಂದೆಯಷ್ಟೇ ಜಪಾನ್‌ನಲ್ಲಿ ಮೆಗಾಕ್ವೇಕ್‌ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಉಂಟಾಗುವ ಸುನಾಮಿಯಲ್ಲಿ ಸರಿಸುಮಾರು 3,00,000 ಜನರು ಸಾಯಬಹುದು. ಅಲ್ಲದೇ ಈ ಬೃಹತ್‌ ಪ್ರಾಕೃತಿಕ ವಿಕೋಪದಿಂದ ಜಪಾನ್‌ಗೆ ಸುಮಾರು 1.8 ಟ್ರಿಲಿಯನ್‌ನಷ್ಟು (ಲಕ್ಷ ಕೋಟಿಯಷ್ಟು) ಆರ್ಥಿಕ ನಷ್ಟ ಸಂಭವಿಸಬಹುದು ಎಂದು ವರದಿ ಹೇಳಿತ್ತು.

    ಕಳೆದ ಆಗಸ್ಟ್‌ನಲ್ಲಿ ಜಪಾನ್ ಹವಾಮಾನ ಸಂಸ್ಥೆ ಮೊದಲ ಬಾರಿಗೆ ಮೆಗಾಕ್ವೇಕ್ ಸಂಭವಿಸುವ ಆತಂಕವನ್ನು ಹೊರಹಾಕಿತ್ತು. ಅದೇ ರೀತಿ ಹೊಸ ವರ್ಷದ ಮೊದಲ ದಿನವೇ ನೋಟೊ ದ್ವೀಪ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಿ, ಕನಿಷ್ಠ 260 ಜನರು ಸಾವನ್ನಪ್ಪಿದರು. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

    ಭೂಕಂಪ ಸಂಭವಿಸಿದ್ದು ಏಕೆ?
    ಕ್ಯುಶುವಿನಲ್ಲಿ ಇಲ್ಲಿ ಫಿಲಿಪ್ಪೀನ್ ಸಮುದ್ರದ ಟೆಕ್ಟಾನಿಕ್ ಪ್ಲೇಟ್, ಜಪಾನ್ ಇರುವ ಖಂಡಾಂತರ ಪ್ಲೇಟ್‌ನ ಕೆಳಗೆ ಸಾಗುತ್ತದೆ. ಈ ಶಿಲಾ ಫಲಕವು ಒಂದಕ್ಕೊಂದು ಬಂಧಿಯಾಗುವುದರಿಂದ ಶಕ್ತಿ ಸಂಗ್ರಹಗೊಂಡು ದೊಡ್ಡ ಭೂಕಂಪಗಳ ರೂಪದಲ್ಲಿ ಬಿಡುಗಡೆಯಾಗುತ್ತದೆ. ಹೀಗಾಗಿಯೇ ಭೂಕಂಪ ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

     

  • ಏನಿದು ಘಿಬ್ಲಿ? ದಿಢೀರ್‌ ಫೇಮಸ್‌ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?

    ಏನಿದು ಘಿಬ್ಲಿ? ದಿಢೀರ್‌ ಫೇಮಸ್‌ ಆಗಿದ್ದು ಹೇಗೆ? ಮೂಲ ಮಾಲೀಕನ ಸಂಪತ್ತು ಎಷ್ಟಿದೆ?

    ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ಕಾರ್ಟೂನ್‌ ಅಥವಾ ಆನಿಮೇಟೆಟ್‌ ಸಿನಿಮಾ ಪಾತ್ರಗಳಂತೆ ಇರುವ ಚಿತ್ರಗಳು ಟ್ರೆಂಡ್‌ ಸೃಷ್ಟಿಸಿದೆ. ನಟ, ನಟಿಯರು, ರಾಜಕಾರಣಿಗಳು ಈ ಟ್ರೆಂಡ್‌ಗೆ ಸೇರ್ಪಡೆಯಾಗಿದ್ದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಟೂನ್‌ಗಳಿಗೆ ಭಾರೀ ಜನಪ್ರಿಯತೆ ಬಂದಿದೆ.

    ಈ ಚಿತ್ರದ ಮೂಲ ಇರುವುದು ಜಪಾನ್‌ನಲ್ಲಿ. ಜಪಾನ್‌ನ (Japan) ಅತ್ಯಂತ ಜನಪ್ರಿಯ ಆನಿಮೇಷನ್‌ ಫಿಲ್ಮ್‌ ಸ್ಟುಡಿಯೋದ ಹೆಸರು ಘಿಬ್ಲಿ. 1985ರಲ್ಲಿ ಮಿಯಾಝಾಕಿ ಹಯಾವೋ, ಸುಜುಕಿ ಟೊಶಿವೊ ಹಾಗೂ ತಕಾಹತ ಇಸಾವೊ ಈ ಸ್ಟುಡಿಯೋವನ್ನು ಸ್ಥಾಪಿಸಿದ್ದರು. ಇದನ್ನೂ ಓದಿ: ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!

    ಭಾವನಾತ್ಮಕವಾಗಿ ಆಕರ್ಷಕವಾಗಿರುವ ಕಥೆ ಹೇಳುವಿಕೆಯೊಂದಿಗೆ ಕೈಯಿಂದ ಚಿತ್ರಿಸಿದ ಅನಿಮೇಷನ್‌ಗೆ ಘಿಬ್ಲಿ (Studio Ghibli) ಹೆಸರುವಾಸಿಯಾಗಿದೆ. 90ರ ದಶಕದಲ್ಲಿ ಮೈ ನೇಬರ್‌ ಟೊಟೊರೊ, ಕಿಕಿಸ್‌ ಡೆಲಿವರಿ ಸರ್ವೀಸ್‌, ಸೇರಿದಂತೆ ಹಲವು ಆನಿಮೇಟೆಡ್‌ ಸಿನಿಮಾ/ ಸೀರಿಯಲ್‌ಗಳು ಪ್ರಸಿದ್ಧಿ ಪಡೆದಿದ್ದವು.

    ಈಗ ಫೇಮಸ್‌ ಹೇಗಾಯ್ತು?
    ಓಪನ್‌ ಎಐನ (OpenAI) ಸಿಇಒ ಸ್ಯಾಮ್‌ ಆಲ್ಟ್‌ಮನ್‌ (Sam Altman) ಘಿಬ್ಲಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಚಾಟ್‌ಜಿಪಿಟಿ 4ನೇ ಆವೃತ್ತಿಯಲ್ಲಿ ಘಿಬ್ಲಿ ಚಿತ್ರಗಳನ್ನು ಸೃಷ್ಟಿಸುವ ಆಯ್ಕೆ ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೇ ತಮ್ಮ ಪ್ರೊಫೈಲಿಗೆ  ಘಿಬ್ಲಿ ಚಿತ್ರವನ್ನೇ ಅಪ್ಲೋಡ್‌ ಮಾಡಿದರು. ಹೇಳಿ ಕೇಳಿ ಈಗ ದೊಡ್ಡವರು ಖ್ಯಾತನಾಮರು ಏನೇ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸುತ್ತದೆ. ಆಲ್ಟ್‌ಮನ್‌ ಹೇಳಿದ್ದೇ ತಡ ನೆಟ್ಟಿಗರು ಈಗ ಘಿಬ್ಲಿ ಹಿಂದೆ ಬಿದ್ದಿದ್ದಾರೆ. ತಮ್ಮದೇ ಕಾರ್ಟೂನ್‌ ಚಿತ್ರಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಆಪಲ್‌ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್‌ ಭಾಗಗಳು ರಫ್ತು!

     

    ಸಂಪತ್ತು ಎಷ್ಟಿದೆ?
    ಮಿಯಾಝಾಕಿ ಹಯಾವೋ ಅವರು ಈ ಹಿಂದೆ ಎಐ ರಚಿಸಿದ ಅನಿಮೇಷನ್‌ ಕಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಿಯಾಝಾಕಿಯವರ ಸಂಪತ್ತಿನ ಮೌಲ್ಯ 50 ಮಿಲಿಯನ್ ಡಾಲರ್‌  ಆಗಿದ್ದು, ಅನಿಮೇಶನ್‌ ಕ್ಷೇತ್ರದ ಶ್ರೀಮಂತ ಉದ್ಯಮಿಯಾಗಿದ್ದಾರೆ.

    ಡಿವಿಡಿ, ಸರಕುಗಳ ಮಾರಾಟ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಹಕ್ಕುಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಸ್ಟುಡಿಯೋ ಘಿಬ್ಲಿ ಆದಾಯ ಗಳಿಸುತ್ತದೆ. ಅನೇಕ ಸ್ಟುಡಿಯೋ ಘಿಬ್ಲಿ ಚಲನಚಿತ್ರಗಳು ನೆಟ್‌ಫ್ಲಿಕ್ಸ್‌ನಂತಹ ವೇದಿಕೆಗಳಲ್ಲಿ ಲಭ್ಯವಿದೆ.

     

    ಈಗ ಎಲ್ಲೆಲ್ಲಿ ರಚಿಸಬಹುದು?
    OpenAI ಮಾತ್ರವಲ್ಲದೇ ಘಿಬ್ಲಿ ಚಿತ್ರಗಳನ್ನು ಎಕ್ಸ್‌ನ ಗ್ರಾಕ್‌, ಗೂಗಲ್‌ ಜೆಮಿನಿ ಸೇರಿದಂತೆ ಇತರೇ ಪ್ಲಾಟ್‌ಫಾರ್ಮ್‌ಗಳಲ್ಲೂ ರಚಿಸಬಹುದು.

    ಸ್ನೇಹಿತರು, ಕುಟುಂಬದವರ ಫೋಟೋಗಳನ್ನು ಅಪ್ಲೋಡ್‌ ಮಾಡಿ ಎಐನಿಂದ (Artificial Intelligence) ಸೃಷ್ಟಿಸಿದ ಘಿಬ್ಲಿ ಚಿತ್ರಗಳನ್ನು ಪೋಸ್ಟ್ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಿಗೆ ಘಿಬ್ಲಿ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲು ಆರಂಭಿಸಿವೆ.

     

  • ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ

    ಟೋಕಿಯೊ: ಜಪಾನ್‌ನಲ್ಲಿ (Japan) 6.9 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು ಜಪಾನ್‌ನ ಹವಾಮಾನ ಇಲಾಖೆ (Japan Meteorological Agency) ಅಧಿಕಾರಿಗಳು ಸುನಾಮಿ (Tsunami) ಎಚ್ಚರಿಕೆ ನೀಡಿದ್ದಾರೆ.

    ಕ್ಯುಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಒಂದು ಮೀಟರ್ ವರೆಗಿನ ಸುನಾಮಿ ಅಲೆಗಳು ಏಳಬಹುದು ಎಂದು ಮುನ್ಸೂಚನೆ ನೀಡಿದೆ.

    ಸುನಾಮಿ ಪದೇ ಪದೇ ಅಪ್ಪಳಿಸಬಹುದು. ದಯವಿಟ್ಟು ಸಮುದ್ರಕ್ಕೆ ಇಳಿಯ ಬೇಡಿ. ಹಾಗೂ ಕರಾವಳಿ ಪ್ರದೇಶಗಳ ಬಳಿ ಹೋಗಬೇಡಿ ಎಂದು ಜೆಎಂಎ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

    ಭೂಕಂಪದ ಸಂಪೂರ್ಣ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಭೂಕಂಪದ ಬಗ್ಗೆ ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯೂ ವರದಿ ಮಾಡಿದೆ. ಅಲ್ಲದೇ ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

  • ಕೇವಲ 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ

    ಕೇವಲ 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ

    – ಜಪಾನ್‌ನಿಂದ Human Washing Machine ಆವಿಷ್ಕಾರ
    -ಸ್ನಾನ ಮಾತ್ರವಲ್ಲದೇ ಮನಸ್ಸಿಗೂ ಮುದ

    ಗಿನ ಯುಗ ತಂತ್ರಜ್ಞಾನದ ಯುಗವಾಗಿದೆ. ಪ್ರತಿನಿತ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವಲ್ಲಿ ಜಪಾನ್‌ ಮುಂದಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಮಷಿನ್ ಇದೆಯೋ ಅದೇ ರೀತಿಯಲ್ಲಿ ಮನುಷ್ಯರನ್ನೇ ಕ್ಲೀನ್ ಮಾಡಲು ಕೂಡ ಒಂದು ಯಂತ್ರ ಕಂಡುಹಿಡಿಯಲಾಗಿದೆ. ನೀವು ವಾಷಿಂಗ್ ಮಷಿನ್ ಒಳಗೆ ಬಟ್ಟೆ ಹಾಕಿ ನೀರು, ಪುಡಿ ಹಾಕಿದರೆ ಬಟ್ಟೆ ಎಲ್ಲಾ ಒಗೆದು ಒಣಗಿಸಿ ಕೊಡುತ್ತದೆ. ಅದೇ ರೀತಿ ಕೇವಲ 15 ನಿಮಿಷಗಳಲ್ಲಿ ಈ ಯಂತ್ರ ಕೂಡ ನಿಮ್ಮನ್ನೂ ಕ್ಲೀನ್ ಮಾಡುತ್ತದೆ. ಹಾಗಿದ್ರೆ ಈ ಯಂತ್ರ ಯಾವುದು? ಕೆಲಸ ಹೇಗೆ ಮಾಡುತ್ತದೆ? ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

    ಜಪಾನ್‌ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಷಿನ್ ಒಂದನ್ನು ಕಂಡುಹಿಡಿದಿದ್ದಾರೆ. ಇದು AI ಚಾಲಿತ ಯಂತ್ರವಾಗಿದ್ದು, ಮನುಷ್ಯರನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ, ಕ್ಲೀನ್ ಮಾಡುತ್ತದೆ.

    ಜಪಾನ್‌ನ ಎಂಜಿನಿಯರ್‌ಗಳು ‘ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯೂಚರ್ ‘ ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ ಯನ್ನು ಅನಾವರಣಗೊಳಿಸಿದ್ದಾರೆ. ಜಪಾನಿನ ಶವರ್ ಹೆಡ್ ಕಂ. ಒಸಾಕಾದ ಸೈನ್ಸ್ ಕಂಪನಿ ಈ ಯಂತ್ರವನ್ನುಕಂಡುಹಿಡಿದಿದೆ. ಜಪಾನೀಸ್ ಪ್ರಕಟಣೆಯ ಅಸಾಹಿ ಶಿಂಬುನ್‌ನ ವರದಿಯ ಪ್ರಕಾರ, ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಯಂತ್ರದೊಳಗೆ ವ್ಯಕ್ತಿಯೊಬ್ಬ ಹೋದಾಗ ಮೊದಲು ಆತನ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ಸೋಪ್ ಆಯ್ಕೆ ಮಾಡುತ್ತದೆ. ಬಳಿಕ ದೇಹಕ್ಕೆ ಸ್ನಾನ ಮಾಡಿಸಿ ದೇಹವನ್ನು ಒಣಗಿಸಿ ಆಚೆ ಕಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಈ ಯಂತ್ರವನ್ನು ವಿಶೇಷವಾಗಿ ಅಂಗವಿಕಲರಿಗೆ ಹಾಗೂ ವಯಸ್ಸಾದವರನ್ನು ಗಮನದಲ್ಲಿರಿಸಿಕೊಂಡು ಆವಿಷ್ಕಾರ ಮಾಡಲಾಗಿದೆ. ಈ ಯಂತ್ರ ಬಹಳ ಸರಳ ಸೆಟ್ಟಿಂಗ್ಸ್‌ಗಳನ್ನು ಹೊಂದಿದ್ದು, ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಈ ಯಂತ್ರ ಸುರಕ್ಷತೆಯನ್ನೂ ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೇ ಸೋಂಕುಗಳು ಮತ್ತು ಚರ್ಮದ ಕಿರಿಕಿರಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ.

    ಕೆಲಸ ಹೇಗೆ?
    *ವ್ಯಕ್ತಿ ಯಂತ್ರದ ಬಾತ್ ಟಬ್‌ನಲ್ಲಿ ಹೋಗಿ ಕುಳಿತರೆ ಮೊದಲು ಸ್ನಾನಕ್ಕೆ ಸೂಕ್ತವಾಗುವಷ್ಟು ಬೆಚ್ಚಗಿನ ನೀರಿನಿಂದ ಟಬ್ ತುಂಬಲು ಪ್ರಾರಂಭವಾಗುತ್ತದೆ.
    *ಬಳಿಕ ಸಣ್ಣ ಗಾಳಿಯ ಗುಳ್ಳೆಗಳು ಶಕ್ತಿಯುತ ಒತ್ತಡದ ತರಂಗವನ್ನು ಉಂಟುಮಾಡುತ್ತವೆ. ಅದು ಚರ್ಮದ ಮೇಲಿರುವ ಕೊಳೆಯನ್ನು ತೆಗೆದುಹಾಕುತ್ತದೆ. ನೀರಿನಿಂದ ನೀವು ಶುದ್ಧವಾದ ಬಳಿಕ ನಿಮ್ಮನ್ನು ಒಣಗಿಸಲು ಮುಂದಾಗುತ್ತದೆ.
    *ಇದರಲ್ಲಿ ನೀವು ಎಷ್ಟು ಬಿಸಿ ಗಾಳಿ ಬರಬೇಕು ಎಂಬುದನ್ನು ಕೂಡ ಆಯ್ಕೆ ಮಾಡಬಹುದು. ಇಲ್ಲವೆ ಎಐ ಮೂಲಕ ಹೊರಗಿನ ತಾಪಮಾನಕ್ಕೆ ಸರಿಯಾಗಿ ಅದಾಗಿಯೇ ಹೊಂದಿಸಿಕೊಳ್ಳುತ್ತದೆ. ಇದರ ಮಾಹಿತಿಯನ್ನು ಒದಗಿಸುತ್ತವೆ.
    *ಅಲ್ಲದೇ ಈ ಯಂತ್ರವು ದೇಹವನ್ನು ಮಾತ್ರವಲ್ಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮನಸ್ಸಿಗೂ ಆಹ್ಲಾದ ಉಂಟಾಗುವಂತೆ ಮಾಡುತ್ತದೆ.
    *ಇದು ಮಾನವನ ಮನಸ್ಸನ್ನು ಶಾಂತಗೊಳಿಸಿ ಒತ್ತಡದಿಂದ ಮುಕ್ತಗೊಳಿಸುತ್ತದೆ. ಸ್ನಾನದ ಪ್ರಕ್ರಿಯೆ ಇದರಲ್ಲಿ ತ್ವರಿತವಾಗಿ ನಡೆಯುತ್ತದೆ. ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕವಾಗಿ ಮಾನವನಿಗೆ ಉಲ್ಲಾಸವನ್ನು ನೀಡುತ್ತದೆ.

    ಮಾರುಕಟ್ಟೆಗೆ ಯಾವಾಗ?
    ʼಹ್ಯೂಮನ್ ವಾಷಿಂಗ್ ಮಷಿನ್‌ʼನ ಮೊದಲ ಯಂತ್ರವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದನ್ನು ಮೊದಲ ಬಾರಿಗೆ 1970ರಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್ ಕಂ. ಪ್ಯಾನಾಸೋನಿಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ನಿರ್ಮಿಸಿತ್ತು. ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಬಿಸಿ ನೀರು, ಸೂಕ್ಷ್ಮ ಬಬಲ್ ಗಳು, ಪ್ಲಾಸ್ಟಿಕ್ ಮಸಾಜ್ ಬಾಲ್‌ಗಳನ್ನು ಒಳಗೊಂಡಿತ್ತು. ಆದರೆ ಇದು ಕೆಲವೊಂದು ಕಾರಣಗಳಿಂದ ಮಾರುಕಟ್ಟೆಗೆ ಬರಲಿಲ್ಲ.

    ಇದೀಗ ಹೊಸದಾಗಿ ಅನಾವರಣಗೊಳಿಸಲಾದ ʼಹ್ಯೂಮನ್ ವಾಷಿಂಗ್ ಮಷಿನ್ʼ ವಿಶ್ವದ ಗಮನ ಸೆಳೆದಿದೆ. ಈ ಯಂತ್ರವನ್ನು ಸಿದ್ಧಪಡಿಸಿರುವ ಜಪಾನ್​ನ ಸೈನ್ಸ್​ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್​​ನಲ್ಲಿ ನಡೆಯಲಿರುವ ಎಕ್ಸ್​ಪೋದಲ್ಲಿ ಮೊದಲು 1,000 ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. 1,000 ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.

    ಈ ಯಂತ್ರವು ವಯಸ್ಸಾದ ಮತ್ತು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ನವೀನ ತಂತ್ರಜ್ಞಾನದ ಗಮನಾರ್ಹ ಉದಾಹರಣೆಯಾಗಿದೆ. ಅದರ ಸ್ವಯಂಚಾಲಿತ ಸ್ನಾನದ ವ್ಯವಸ್ಥೆ, ಸೌಕರ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಸ್ನಾನದ ಸಹಾಯದ ಅಗತ್ಯವಿರುವವರಿಗೆ ಅಮೂಲ್ಯವಾದ ಸಂಪನ್ಮೂಲವೆಂದರೆ ತಪ್ಪಾಗಲಾರದು.

    ಹ್ಯೂಮನ್ ವಾಷಿಂಗ್ ಮಷಿನ್‌ನಲ್ಲಿ ಸ್ನಾನ ಮಾಡಲು ಇಚ್ಛಿಸುವವರಿಗೆ ಕಂಪನಿಯು ಈಗಾಗಲೇ ತನ್ನ ವೆಬ್‌ಸೈಟ್‌ನಲ್ಲಿ ಈ ಯಂತ್ರವನ್ನು ಕಾಯ್ದಿರಿಸುವ ಅವಕಾಶವನ್ನೂ ನೀಡುತ್ತಿದೆ.

  • ವಿಶ್ವದಲ್ಲೇ ಮೊದಲು; ಜಪಾನ್‌ನಿಂದ ಬಾಹ್ಯಾಕಾಶಕ್ಕೆ ಮರದ ಉಪಗ್ರಹ ಉಡಾವಣೆ

    ವಿಶ್ವದಲ್ಲೇ ಮೊದಲು; ಜಪಾನ್‌ನಿಂದ ಬಾಹ್ಯಾಕಾಶಕ್ಕೆ ಮರದ ಉಪಗ್ರಹ ಉಡಾವಣೆ

    -ಚಂದ್ರ, ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಗುರಿ

    ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಮರ ಬಳಸಿ ಮನೆ ಕಟ್ಟುವ ಯೋಜನೆಯನ್ನು ಹೊಂದಿರುವ ವಿಜ್ಞಾನಿಗಳು, ಇದರ ಸಾಧ್ಯಾಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬಾಹ್ಯಾಕಾಶಕ್ಕೆ ಮರದಿಂದ ತಯಾರಿಸಿದ ಉಪಗ್ರಹ ʼಲಿಗ್ನೋಸ್ಯಾಟ್‌ʼ ಉಡಾವಣೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಮರದ ಉಪಗ್ರಹ ಎಂಬ ಖ್ಯಾತಿ ಪಡೆದುಕೊಂಡಿದೆ. ಹೇಗಿದೆ ಈ ಉಪಗ್ರಹ? ಉಪಗ್ರಹದಲ್ಲಿ ಮರದ ಬಳಕೆ ಏಕೆ? ವಿಜ್ಞಾನಿಗಳ ಯೋಜನೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಹೆಸರು ಹೇಗೆ ಬಂತು?
    ಮರ ಎಂಬುದಕ್ಕೆ ಲ್ಯಾಟಿನ್‌ ಭಾಷೆಯಲ್ಲಿರುವ ಪದವನ್ನು ಬಳಸಿ ʼಲಿಗ್ನೋಸ್ಯಾಟ್‌ʼ ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಜಪಾನ್‌ನ ಕ್ಯೋಟೋ ವಿವಿ ಮತ್ತು ಸುಮಿಟಾಮೋ ಫಾರೆಸ್ಟ್ರಿ ಸೇರಿ ತಯಾರು ಮಾಡಿರುವ ಈ ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ನವೆಂಬರ್‌ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಇದನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಈ ಉಪಗ್ರಹ ಕೇವಲ ಅಂಗೈ ಅಗಲವಿದೆ. ಬಾಹ್ಯಾಕಾಶಕ್ಕೆ ಕಳುಹಿಸುವ ನವೀಕರಿಸಬಹುದಾದ ವಸ್ತುವಿನ ಮೇಲೆ ಕಾಸ್ಮಿಕ್‌ ಪರಿಣಾಮ ಏನಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಇದರ ಮೂಲಕ ಬಾಹ್ಯಾಕಾಶದಲ್ಲಿ ಮನುಷ್ಯದ ಜೀವನ ಕುರಿತ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಕ್ಯೋಟೋ ಸಂಸ್ಥೆಯ ಪ್ರಮುಖ ಗುರಿ ಚಂದ್ರ ಮತ್ತು ಮಂಗಳನ ಮೇಲೆ ಮರದಿಂದ ಮನೆ ನಿರ್ಮಾಣ ಮಾಡುವುದಾಗಿದೆ. ಇದಕ್ಕಾಗಿ 50 ವರ್ಷಗಳ ಗುರಿ ಹಾಕಿಕೊಳ್ಳಲಾಗಿದ್ದು, ನಾಸಾ ಪ್ರಮಾಣಿತ ಮರದ ಉಪಗ್ರಹವನ್ನು ತಯಾರು ಮಾಡುವ ಉದ್ದೇಶವಿದೆ. ಪ್ರಸ್ತುತ ಈ ಉಪಗ್ರಹವನ್ನು ಜಪಾನ್‌ನಲ್ಲಿ ಸಿಗುವ ಮ್ಯಾಗ್ನೊಲಿಯಾ ಹೊನೊಕಿ ಎಂಬ ಮರದಲ್ಲಿ ತಯಾರಿಸಲಾಗಿದೆ ಎಂದು ವಿಜ್ಞಾನಿ ಟಾಕೋ ಡಾಯ್‌ ಹೇಳಿದ್ದಾರೆ.

    ಮುಂದಿನ 6 ತಿಂಗಳು ಈ ಉಪಗ್ರಹ ಭೂಮಿಯ ಸುತ್ತ ಸುತ್ತುತ್ತದೆ. ಬಾಹ್ಯಾಕಾಶದಲ್ಲಿ ಮರದ ಬಾಳ್ವಿಕೆಯನ್ನು ಮೌಲ್ಯಮಾಪನ ಮಾಡಿ ಡೇಟಾವನ್ನು ಸಂಗ್ರಹಿಸುತ್ತದೆ. ಈ ಡೇಟಾವು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಮರವನ್ನು ಬಳಸುವ ಕಾರ್ಯಸಾಧ್ಯತೆಯನ್ನು ನಿರ್ಧರಿಸಲು ನಿರ್ಣಾಯಕವಾಗಿದೆ.

    ಲೋಹದ ಉಪಗ್ರಹಗಳು ಮರು-ಪ್ರವೇಶದ ಸಮಯದಲ್ಲಿ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಬಿಡುತ್ತವೆ, ಆದರೆ ಮರದ ಉಪಗ್ರಹಗಳ ಸಂದರ್ಭದಲ್ಲಿ ಇದು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಕಡಿಮೆ ಪರಿಸರದ ಹೆಜ್ಜೆಗುರುತನ್ನು ಉಂಟುಮಾಡುತ್ತದೆ.

    ಬಾಹ್ಯಾಕಾಶದಲ್ಲಿ ಪ್ರತಿ 45 ನಿಮಿಷಗಳಿಗೊಮ್ಮೆ ಸೂರ್ಯನ ಬೆಳಕು ಹಾಗೂ ಕತ್ತಲು ಆವರಿಸುವುದರಿಂದ ಮೈನಸ್‌ 100 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಬದಲಾಗುತ್ತದೆ. ಕಕ್ಷೆಗೆ ಸೇರಿದ ಬಳಿಕ ಈ ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್‌ ಉಪಕರಣಗಳು ಅಲ್ಲಿನ ಪರಿಸರದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಮಾಹಿತಿಯನ್ನು ನಿರಂತರವಾಗಿ ಭೂಮಿ ಮೇಲಿರುವ ಕೇಂದ್ರಕ್ಕೆ ಕಳುಹಿಸುತ್ತದೆ.

    ಮರದ ಬಳಕೆ ಏಕೆ?
    *ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ ಮರ ಬೇಗ ಹಾಳಾಗಲ್ಲ
    *ಬಾಹ್ಯಾಕಾಶದಲ್ಲಿ ಕಸವನ್ನು ಕಡಿಮೆ ಮಾಡುವ ಉದ್ದೇಶ
    *ಮರದ ಉಪಗ್ರಹ ಭೂಮಿ ತಲುಪುವ ಸಮಯದಲ್ಲಿ ಉರಿದುಹೋಗುತ್ತದೆ. ಹೀಗಾಗಿ ಪರಿಸರಕ್ಕೆ ಹಾನಿ ತಪ್ಪಿಸಬಹುದು
    *ಲೋಹದ ಉಪಗ್ರಹಗಳು ವಾತಾವರಣಕ್ಕೆ ಬಿಡುಗಡೆ ಮಾಡುವ ಅಲ್ಯುಮಿನಿಯಂ ಆಕ್ಸೆ„ಡ್‌ ಇದರಲ್ಲಿ ಬಿಡುಗಡೆಯಾಗುವುದಿಲ್ಲ

    ಡಾಟಾ ಸೆಂಟರ್‌ಗಳೂ ಮರದಿಂದ ನಿರ್ಮಾಣ?
    ಬಾಹ್ಯಾಕಾಶದಲ್ಲಿ ವಿಕಿರಣಗಳು ಉಪಗ್ರಹ ಒಳಗಿರುವ ಸೆಮಿಕಂಡಕ್ಟರ್‌ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಲಿಗ್ನೊಸ್ಯಾಟ್‌ ಅಧ್ಯಯನ ಮಾಡಲಿದೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಡಾಟಾ ಸೆಂಟರ್‌ಗಳನ್ನು ಮರದಿಂದ ನಿರ್ಮಾಣ ಮಾಡಬಹುದು ಎಂಬುದು ವಿಜ್ಞಾನಿಗಳ ಆಲೋಚನೆ.

    ಐಎಫ್ಎಲ್ ಸೈನ್ಸ್ ವರದಿಯ ಪ್ರಕಾರ, ಕ್ಯೋಟೋ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ಉಪನ್ಯಾಸಕರಾದ ಕೋಜಿ ಮುರಾಟಾ ಅವರು 1900ರ ಕಾಲಘಟ್ಟದಲ್ಲಿ ವಿಮಾನಗಳನ್ನೂ ಮರವನ್ನು ಬಳಸಿ ನಿರ್ಮಿಸುತ್ತಿದ್ದರಿಂದ, ಮರದಿಂದ ನಿರ್ಮಿಸುವ ಉಪಗ್ರಹಗಳೂ ಕಾರ್ಯಾಚರಿಸಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ, ಅಲ್ಲಿ ಮರ ಹೆಚ್ಚು ಬಾಳಿಕೆ ಬರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಇಂತಹ ಸನ್ನಿವೇಶ ಮರವನ್ನು ಕೊಳೆಯುವುದರಿಂದ ಮತ್ತು ನಶಿಸಿಹೋಗುವುದರಿಂದ ರಕ್ಷಿಸಿ, ಬಾಹ್ಯಾಕಾಶದ ವಾತಾವರಣದಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ.

    ಹಿಂದಿನ ಪರೀಕ್ಷೆಗಳ ಸಂದರ್ಭದಲ್ಲಿ, ಮರದ ತುಂಡುಗಳನ್ನು ಐಎಸ್ಎಸ್‌ನಲ್ಲಿ ಹತ್ತು ತಿಂಗಳುಗಳ ಕಾಲ ಬಾಹ್ಯಾಕಾಶ ಸನ್ನಿವೇಶಕ್ಕೆ ತೆರೆದಿಡಲಾಯಿತು. ಈ ಪರೀಕ್ಷೆಗಳ ಫಲಿತಾಂಶಗಳು ಆಶಾದಾಯಕವಾಗಿವೆ. ಈ ಮರದ ವಸ್ತುಗಳು ಅತ್ಯಂತ ಕಡಿಮೆ ಹಾನಿಗೊಳಗಾಗಿದ್ದು, ಬಾಹ್ಯಾಕಾಶದಲ್ಲಿ ಮರ ದೀರ್ಘಕಾಲ ಉಳಿಯಬಹುದು ಎಂಬ ನಂಬಿಕೆ ಮೂಡಲು ಕಾರಣವಾಗಿದೆ. ಮರದ ಉಪಗ್ರಹಗಳನ್ನು ಬಳಸುವುದರಿಂದ ಲಭಿಸುವ ಅತಿದೊಡ್ಡ ಪ್ರಯೋಜನವೆಂದರೆ, ಅವುಗಳ ಕಾರ್ಯಾಚರಣಾ ಅವಧಿ ಮುಕ್ತಾಯಗೊಂಡ ಬಳಿಕ, ಅವುಗಳ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುತ್ತಿದ್ದಂತೆ ಯಾವುದೇ ತ್ಯಾಜ್ಯವೂ ಉಳಿಯದಂತೆ ಸಂಪೂರ್ಣವಾಗಿ ದಹಿಸಿ ಹೋಗುತ್ತವೆ.

    ಲಿಗ್ನೋಸ್ಯಾಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದರೆ ತಂಡವು ಮರದ ಉಪಗ್ರಹಗಳನ್ನು ಸ್ಪೇಸ್ ಎಕ್ಸ್‌ಗೂ ಪ್ರಯೋಜನವಾಗುವ ಅಥವಾ ಪರಿಚಯಿಸುವ‌  ಸಾಧ್ಯತೆಯಿದೆ. ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಸ್ಟಾರ್ ಲಿಂಕ್ ಯೋಜನೆಗೆ ಇದು ನೆರವಾಗಬಹುದು. ಉಪಗ್ರಹವು ಪರಿಸರ ಸ್ನೇಹಿ ವಸ್ತುಗಳೊಂದಿಗೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಕ್ರಾಂತಿಯನ್ನು ಉಂಟುಮಾಡಬಹುದು. ಸುಮಿಟೊಮೊ ಫಾರೆಸ್ಟ್ರಿಯ ಕೆಂಜಿ ಕರಿಯಾ ಅವರ ಪ್ರಕಾರ, ಮರದ ಉದ್ಯಮವು ಇತ್ತೀಚಿನ ಆವಿಷ್ಕಾರದಿಂದ ಪ್ರಯೋಜನ ಪಡೆಯುತ್ತದೆ.

    ಲಿಗ್ನೋಸ್ಯಾಟ್ ಉಪಗ್ರಹದ ವಸ್ತು ಮತ್ತು ಅಳತೆ:
    ಲಿಗ್ನೋಸ್ಯಾಟ್ 4 ಇಂಚಿನ ಘನ-ಗಾತ್ರದ ಉಪಗ್ರಹವಾಗಿದ್ದು, ಸುಮಾರು 2 ಪೌಂಡ್‌ಗಳಷ್ಟು ತೂಗುತ್ತದೆ.

  • Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು

    Japan| ಏರ್‌ಪೋರ್ಟ್‌ ಬಳಿ 2ನೇ ಮಹಾಯುದ್ಧದ ಕಾಲದ ಬಾಂಬ್ ಸ್ಫೋಟ – ವಿಮಾನ ಹಾರಾಟ ರದ್ದು

    ಟೋಕಿಯೋ: ಜಪಾನ್‍ನ (Japan) ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ (Airport ) ರನ್‍ವೇ ಬಳಿ 2ನೇ ಮಹಾಯುದ್ದದ (2nd World War) ಕಾಲದ ಬಾಂಬ್ ಈಗ ಸ್ಫೋಟಗೊಂಡಿದ್ದು, 87 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

    ಯುದ್ಧ ನಡೆದ ಕಾಲದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಗೊಳ್ಳದ ಬಾಂಬ್‍ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟಗೊಂಡಿದೆ ಎಂದು ಜಪಾನ್‍ನ ಸಾರಿಗೆ ಸಚಿವಾಲಯ ದೃಢಪಡಿಸಿದೆ. ಇದನ್ನೂ ಓದಿ: ನಾಗಾ-ಸಮಂತಾ ಡಿವೋರ್ಸ್‌ ಕಿಚ್ಚು ಹಚ್ಚಿದ ತೆಲಂಗಾಣ ಸಚಿವೆ; ರಾಜಕೀಯ ಜಗಳಗಳಿಂದ ನನ್ನ ಹೆಸರು ದೂರವಿಡಿ: ಸಮಂತಾ

    ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ಹೆಚ್ಚಿನ ಸ್ಫೋಟಗಳ ಅಪಾಯವಿಲ್ಲ. ಕುಳಿ ತುಂಬುವ ದುರಸ್ತಿ ಇಂದು (ಗುರುವಾರ) ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ಹಠಾತ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ.

    ಜಪಾನ್‍ಗೆ ಸ್ಫೋಟಗೊಳ್ಳದ ಬಾಂಬ್‍ಗಳು ನಿರಂತರ ಬೆದರಿಕೆಯಾಗಿವೆ. ಯುದ್ಧ ನಡೆದು 79 ವರ್ಷಗಳಾಗಿವೆ. ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಹಲವು ಸ್ಫೋಟಿಸದ ಬಾಂಬ್‍ಗಳು ಪತ್ತೆಯಾಗಿವೆ. 2023 ರಲ್ಲಿ ಸ್ವಯಂ ರಕ್ಷಣಾ ಪಡೆಗಳು 37.5 ಟನ್ ತೂಕದ 2,348 ಬಾಂಬ್‍ಗಳನ್ನು ವಿಲೇವಾರಿ ಮಾಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

  • ಬಿರುಗಾಳಿಗೆ ವಾಲಿದ ವಿಮಾನ, ಲ್ಯಾಂಡಿಂಗ್‌ ಆಗದೇ ಮತ್ತೆ ಟೇಕಾಫ್‌ – ವೈರಲ್‌ ವಿಡಿಯೋ

    ಬಿರುಗಾಳಿಗೆ ವಾಲಿದ ವಿಮಾನ, ಲ್ಯಾಂಡಿಂಗ್‌ ಆಗದೇ ಮತ್ತೆ ಟೇಕಾಫ್‌ – ವೈರಲ್‌ ವಿಡಿಯೋ

    ಟೋಕಿಯೋ: ವೇಗವಾಗಿ ಬೀಸಿದ ಗಾಳಿಯಿಂದ ವಿಮಾನ (Plane) ಲ್ಯಾಂಡಿಂಗ್‌ (Landing) ಮಾಡಲು ಪರದಾಡಿದ ಘಟನೆ ಜಪಾನ್‌ನಲ್ಲಿ (Japan) ನಡೆದಿದೆ.

    ಪೀಚ್ ಕಂಪನಿಯ ವಿಮಾನವು ಫುಕುವೋಕಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ವಿಮಾನ ಮತ್ತೆ ಟೇಕಾಫ್‌ ಆಗಿದೆ. ಟೇಕಾಫ್‌ ವೇಳೆ ವಿಮಾನ ಆಕಾಶದಲ್ಲಿ ವಾಲಿದೆ. ಅದರೂ ಪೈಲೆಟ್‌ ನಿಯಂತ್ರಣ ತಂದು ವಿಮಾನವನ್ನು ಮುಂದಕ್ಕೆ ಹಾರಿಸಿದ್ದಾರೆ. ವಿಮಾನ ಆಕಾಶದಲ್ಲಿ ಗಾಳಿಗೆ ವಾಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

    ಶಂಶಾನ್ ಚಂಡಮಾರುತ (Shanshan Cyclone) ಗುರುವಾರ ಬೆಳಿಗ್ಗೆ ಜಪಾನ್‌ಗೆ ಅಪ್ಪಳಿಸಿತ್ತು. ಶಂಶಾನ್ ಚಂಡಮಾರುತದ ಬಲವಾದ ಗಾಳಿಯಿಂದಾಗಿ ಜಪಾನ್‌ನ ಫುಕುವೋಕಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಹಲವಾರು ವಿಮಾನಗಳು ತಮ್ಮ ಲ್ಯಾಂಡಿಂಗ್ ರದ್ದುಗೊಳಿಸಿದ್ದವು. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ – ಗೃಹಸಚಿವರ ಭೇಟಿಯಾದ ತನಿಖಾಧಿಕಾರಿ

    ಚಂಡಮಾರುತದಿಂದ ನೂರಕ್ಕೂ ಅಧಿಕ ಸಂಖ್ಯೆಯ ವಿಮಾನ ಸೇರಿದಂತೆ ಕೆಲವು ಹೈ-ಸ್ಪೀಡ್‌ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.

  • ಇನ್ನು ಮುಂದೆ  ಜಪಾನ್‌ಗೆ ಭಾರತದಿಂದ ಹಸಿರು ಅಮೋನಿಯಾ ರಫ್ತು

    ಇನ್ನು ಮುಂದೆ ಜಪಾನ್‌ಗೆ ಭಾರತದಿಂದ ಹಸಿರು ಅಮೋನಿಯಾ ರಫ್ತು

    – ಹಸಿರು ಹೈಡ್ರೋಜನ್, ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ತವಕ

    ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್‌ಗೆ (Japan) ಹಸಿರು ಅಮೋನಿಯಾ (Ammonium) ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದೆ.

    ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಭಾರೀ ಹಸಿರು ಅಮೋನಿಯಾ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ.

    ಈ ವೇಳೆ ಸಚಿವ ಪ್ರಹ್ಲಾದ್‌ ಜೋಶಿ (Prahlad Joshi) ಅವರು ಮಾತನಾಡಿ, ಜಪಾನ್‌ಗೆ ಹಸಿರು ಅಮೋನಿಯಾ ರಫ್ತು ಮಾಡುವ ಈ ಒಪ್ಪಂದ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಪ್ರತಿಪಾದಿಸಿದರು.

    ಭಾರತದಲ್ಲಿ ಹಸಿರು ಅಮೋನಿಯಾ ಉತ್ಪಾದನೆಗೆ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮುಂದಾಗಿದ್ದು, ಇದಕ್ಕಾಗಿ ದೇಶದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುತ್ತದೆ. ಜಪಾನ್‌ ತನ್ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಭಾಗಶಃ ಬದಲಾಯಿಸಿ ಹಸಿರು ಅಮೋನಿಯಾ ಬಳಕೆಗೆ ಮುಂದಾಗಿದ್ದು, ಭಾರತ ಹಸಿರು ಅಮೋನಿಯಾ ಪೂರೈಕೆ ಮಾಡುವ ಮೂಲಕ ಜಪಾನ್ ಈ ಕಾರ್ಯಕ್ಕೆ ಸಾಥ್ ನೀಡಲಿದೆ ಎಂದರು. ಇದನ್ನೂ ಓದಿ: ಸಾಕ್ಷ್ಯ ನೀಡಿದ್ರೆ ಝಾಕೀರ್‌ ನಾಯ್ಕ್‌ ಭಾರತಕ್ಕೆ ಹಸ್ತಾಂತರ – ಮಲೇಷ್ಯಾ ಪ್ರಧಾನಿ ಇಬ್ರಾಹಿಂ

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಸಿರು ಅಮೋನಿಯಾ ರಫ್ತು ಮಾಡುವ ಜಪಾನ್ ನೊಂದಿಗಿನ ಒಪ್ಪಂದ ನಿದರ್ಶನ ಎಂದು ಹೇಳಿದರು.

     

    7.5 ಲಕ್ಷ ಟಿಪಿಎ ಗೆ ಟೆಂಡರ್: ಪ್ರಸ್ತುತದಲ್ಲಿ ಗ್ರೀನ್ ಅಮೋನಿಯಾದ 7.5 ಲಕ್ಷ ಟಿಪಿಎಗೆ ಟೆಂಡರ್ ಆಗಿದೆ. 4.5 ಲಕ್ಷ ಟಿಪಿಎ ಸಾಮರ್ಥ್ಯಕ್ಕೆ ಹೆಚ್ಚುವರಿ ಟೆಂಡರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.

    1 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ: ಭಾರತದಲ್ಲಿ ವಾರ್ಷಿಕ ಒಂದು ಮಿಲಿಯನ್ ಟನ್‌ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಹಸಿರು ಶಕ್ತಿ ಉತ್ಪಾದನೆಯಲ್ಲಿ ಭಾರತ ತ್ವರಿತ ಮತ್ತು ಅಭೂತಪೂರ್ವ ಸಾಧನೆ ತೋರುತ್ತಿದೆ ಎಂದರು.

    ಭಾರತ, ಜಪಾನ್ ಮತ್ತು ಸಿಂಗಾಪುರ ಈ ಮೂರು ದೇಶಗಳು ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಸಹಯೋಗ ಮಾಡುತ್ತಿವೆ ಎಂದು ತಿಳಿಸಿದರು.

     

  • ಜಪಾನ್, ಕೊರಿಯಾದ ಕಂಪನಿಗಳಿಂದ 6,450 ಕೋಟಿ ಹೂಡಿಕೆ – ಯಾವೆಲ್ಲ ಕಂಪನಿಗಳು ಕರ್ನಾಟಕದಲ್ಲಿ ಎಲ್ಲಿ ಹೂಡಿಕೆ ಮಾಡಲಿವೆ?

    ಜಪಾನ್, ಕೊರಿಯಾದ ಕಂಪನಿಗಳಿಂದ 6,450 ಕೋಟಿ ಹೂಡಿಕೆ – ಯಾವೆಲ್ಲ ಕಂಪನಿಗಳು ಕರ್ನಾಟಕದಲ್ಲಿ ಎಲ್ಲಿ ಹೂಡಿಕೆ ಮಾಡಲಿವೆ?

    – 1,000ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ
    – ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ತಿಳಿಸಿದ ಎಂಬಿಪಿ

    ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್‌ (MB Patil) ಅವರ ನೇತೃತ್ವದಲ್ಲಿನ ಕರ್ನಾಟಕದ (Karnataka) ಉನ್ನತ ಮಟ್ಟದ ನಿಯೋಗವು ಜಪಾನ್ (Japan) ಮತ್ತು ದಕ್ಷಿಣ ಕೊರಿಯಾದ (South Korea) ಎರಡು ವಾರಗಳ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು 6,450 ಕೋಟಿ ರೂ. ಮೊತ್ತದ ಬಂಡವಾಳ (Investment) ಹೂಡಿಕೆಯ ಬದ್ಧತೆ ಪಡೆದುಕೊಂಡಿದೆ. ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

    ಉಭಯ ದೇಶಗಳ ಭೇಟಿಯ ಫಲಶ್ರುತಿ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡ ಸಚಿವರು, ಜೂನ್ 24 ರಿಂದ ಜುಲೈ 5 ರವರೆಗಿನ ಉಭಯ ದೇಶಗಳ ಎರಡು ವಾರಗಳ ಭೇಟಿಯ ಸಮಯದಲ್ಲಿ, ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (SME) ಬಂಡವಾಳ ಹೂಡಿಕೆ ರೋಡ್‌ಷೋಗಳನ್ನು ನಡೆಸಿತು. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜಕರ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿತುʼ ಎಂದು ಹೇಳಿದರು.

    35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿದ ನಿಯೋಗವು, ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ – ʼಇನ್ವೆಸ್ಟ್ ಕರ್ನಾಟಕ 2025ʼರಲ್ಲಿ ಭಾಗವಹಿಸಲು ಟೋಕಿಯೋ ಮತ್ತು ಸಿಯೋಲ್‌ನಲ್ಲಿ ನಡೆದ ರೋಡ್‌ ಶೋಗಳಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಯಿತು ಎಂದರು.

    ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದರ್ ಇಂಡಸ್ಟ್ರೀಸ್, ಶಿಮಾಡ್ಜು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳು ಪ್ರಮುಖವಾಗಿವೆ. ಇದನ್ನೂ ಓದಿ: ಮಹಿಳೆಯಿಂದ ಪುರುಷನಾದ ಐಆರ್‌ಎಸ್‌ ಅಧಿಕಾರಿ – ಲಿಂಗ, ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ


    ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್‌ ಗವರ್ನರ್ ಮತ್ತು ಸೋಲ್‌ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಯಿತು.

    ದಕ್ಷಿಣ ಕೊರಿಯಾದಲ್ಲಿ ನಡೆದ ಸಭೆಗಳಲ್ಲಿ ಸ್ಯಾಮ್‌ಸ್ಯಂಗ್‌ ಎಲೆಕ್ಟ್ರಾನಿಕ್ಸ್‌, ಎಲ್‌ಜಿ ಎನರ್ಜಿ ಸೊಲ್ಯೂಷನ್ಸ್, ಎಲ್‌ಎಕ್ಸ್‌ ಎಲೆಕ್ಟ್ರಾನಿಕ್ಸ್, ನಿಫ್ಕೊ ಕೊರಿಯಾ, ಒಸಿಐ ಹೋಲ್ಡಿಂಗ್ಸ್, ಕ್ರಾಫ್ಟನ್‌, ಎಚ್‌ವೈಎಸಿ, ಹುಂಡೈ ಮೋಟರ್ಸ್‌, ವೈಜಿ-1, ಹೊಯ್ಸಂಗ್‌ ಅಡ್ವಾನ್ಸಡ್‌ ಮಟೇರಿಯಲ್ಸ್‌ ಮುಂತಾದವು ಸೇರಿವೆ ಎಂದು ಎಂಬಿಪಿ ವಿವರಿಸಿದರು. ಇದನ್ನೂ ಓದಿ: ಮಹಿಳೆ ಕಿಡ್ನ್ಯಾಪ್‌ ಕೇಸ್‌ – ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್‌ ನೋಟಿಸ್‌


    ಹೂಡಿಕೆ ಬದ್ಧತೆಗಳು ಮತ್ತು ಒಪ್ಪಂದಗಳ ವಿವರ

    ಒಸಾಕಾ ಗ್ಯಾಸ್: ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು 5000 ಕೋಟಿ ರೂ. (600 ದಶಲಕ್ಷ ಡಾಲರ್‌) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ.

     ಡಿಎನ್‌ ಸೊಲ್ಯೂಷನ್ಸ್: ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್‌ ಸೊಲ್ಯೂಷನ್ಸ್‌, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು 1000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

     ಅವೊಯಮಾ ಸೈಸಕುಶೊ : ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ, ತುಮಕೂರು ಬಳಿಯ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು 210 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

     ಡೈಕಿ ಆ್ಯಕ್ಸಿಸ್‌, ಹೈವಿಷನ್‌ ಮತ್ತು ಇಎಂಎನ್‌ಐ ಕಂಪನಿ ಲಿಮಿಟೆಡ್‌ : ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ 210 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.

    ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ.

    ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ 25,000 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ. ಈ ಹೂಡಿಕೆ ನಿರೀಕ್ಷೆಯು, ಕರ್ನಾಟಕವು ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವವನ್ನು ಸೂಚಿಸುತ್ತದೆ.

    ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ, ಮೂಲಸೌಕರ್ಯ ಇಲಾಖೆ ಉಪ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಈ ಸಂದರ್ಭದಲ್ಲಿ ಇದ್ದರು.

     

  • ʻಡಿಮಾನಿಟೈಸೇಷನ್‌ʼ – 20 ವರ್ಷಗಳ ಬಳಿಕ ಜಪಾನ್‌ ಹೊಸ ಬ್ಯಾಂಕ್‌ ನೋಟುಗಳ ಚಲಾವಣೆಗೆ ಮುಂದಾಗಿದ್ದೇಕೆ?

    ʻಡಿಮಾನಿಟೈಸೇಷನ್‌ʼ – 20 ವರ್ಷಗಳ ಬಳಿಕ ಜಪಾನ್‌ ಹೊಸ ಬ್ಯಾಂಕ್‌ ನೋಟುಗಳ ಚಲಾವಣೆಗೆ ಮುಂದಾಗಿದ್ದೇಕೆ?

    2016 ರಲ್ಲಿ, ಭಾರತ ಸರ್ಕಾರವು ತನ್ನ ಕರೆನ್ಸಿ (Indian Currency) ವ್ಯವಸ್ಥೆಯಲ್ಲಿನ ಎರಡು ದೊಡ್ಡ ಮೌಲ್ಯದ ಕರೆನ್ಸಿಗಳಾದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು. ಈ ನೋಟುಗಳು ದೇಶದ ಚಲಾವಣೆಯಲ್ಲಿರುವ ಹಣದ ಶೇ.86 ರಷ್ಟಿದ್ದವು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8 ರಂದು ಎಲ್ಲಾ 500 ರೂ. ಮತ್ತು 1,000 ರೂ. ಬ್ಯಾಂಕ್-ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು. ಹೊಸದಾಗಿ ಪರಿಚಯಿಸಲಾದ 2,000 ರೂ. ಮತ್ತು 500 ರೂ.ಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಯಿತು. ಇದು ಭಾರತದ ಅರ್ಥ ವ್ಯವಸ್ಥೆಯಲ್ಲಿ (Indian Economy System) ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನೇ ತಂದಿತ್ತು. ಎಟಿಎಂಗಳು ಮತ್ತು ಬ್ಯಾಂಕುಗಳ ಮುಂದೆ ಜನರು ನೋಟುಗಳ ವಿನಿಮಯಕ್ಕೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಣ್ಣ ಉದ್ಯಮಗಳು ಮತ್ತು ಮನೆಮಂದಿಗೆ ನಗದುಕೊರತೆ ಉಂಟಾಗಿತ್ತು.

    ಕಪ್ಪು ಹಣದ ವಿರುದ್ಧದ ಹೋರಾಟ, ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು, ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ಭಾರತದಲ್ಲಿ ನೋಟು ಅಪನಗದೀರಣ ಘೋಷಣೆ ಮಾಡಲಾಯಿತು. ಇದೀಗ 20 ವರ್ಷಗಳ ಬಳಿಕ ಅಂತಹದ್ದೇ ಕ್ರಾಂತಿಕಾರಕ ಬದಲಾವಣೆಗೆ ಜಪಾನ್‌ ಮುಂದಾಗಿದ್ದು, ಹೊಸ ಬ್ಯಾಂಕ್‌ ನೋಟುಗಳನ್ನ (Japan New Banknotes) ಪರಿಚಯಿಸಿದೆ. ಜಪಾನ್‌ನಲ್ಲಿ ಹೊಸ ನೋಟುಗಳ ಮುದ್ರಣಕ್ಕೆ ಕಾರಣ ಏನು? 20 ವರ್ಷಗಳ ಬಳಿಕ ಎಷ್ಟು ಮೌಲ್ಯದ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗುತ್ತಿದೆ? ಇದು ಆರ್ಥಿಕತೆಯ ಮೇಲೆ ಅಥವಾ ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ? ಅದಕ್ಕೂ ಮುನ್ನ ಡಿಮಾನಿಟೈಸೇಷನ್‌ ಅಥವಾ ಅಪನಗದೀಕರಣ ಎಂದರೇನು ಎಂಬುದನ್ನು ತಿಳಿಯೋಣ…

    ಡಿಮಾನಿಟೈಸೇಷನ್‌ ಎಂದರೇನು?

    ಡಿಮಾನಿಟೈಸೇಷನ್‌ ಅಥವಾ ಅಪನಗದೀಕರಣ ಎನ್ನುವುದು ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸುವ ಪ್ರಕ್ರಿಯೆ. ರಾಷ್ಟ್ರೀಯ ಕರೆನ್ಸಿಯ ಬದಲಾವಣೆ ಇದ್ದಾಗಲೆಲ್ಲಾ ಅದು ಸಂಭವಿಸುತ್ತದೆ. ಉದಾಹರಣೆಗೆ 2016ರಲ್ಲಿ ಭಾರತದಲ್ಲಿ ಹಳೆಯ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ರದ್ದಾದ ನೋಟಿನ ಬದಲು ಹೊಸ ನೋಟು ಅಥವಾ ನಾಣ್ಯಗಳೊಂದಿಗೆ ಬದಲಾಯಿಸಲಾಗುತ್ತದೆ. ಕೆಲವೊಮ್ಮೆ, ಒಂದು ದೇಶವು ಹಳೆಯ ಕರೆನ್ಸಿಯನ್ನು ಹೊಸ ಕರೆನ್ಸಿಯೊಂದಿಗೆ ಸಂಪೂರ್ಣವಾಗಿ ಬದಲಾಯಿಸುತ್ತದೆ.

    ಜಪಾನ್‌ನಲ್ಲಿ ಹೊಸ ನೋಟು ಮುದ್ರಣ ಇದೇ ಮೊದಲಾ?

    ಈ ಪ್ರಶ್ನೆಗೆ ಖಂಡಿತಾ ಇಲ್ಲಾ ಅಂದೇ ಉತ್ತರ ಸಿಗುತ್ತದೆ. 20 ವರ್ಷಗಳ ಬಳಿಕ ಹೊಸ ಬ್ಯಾಂಕ್‌ ನೋಟು ಚಲಾವಣೆಗೆ ಜಪಾನ್‌ ಮುಂದಾಗಿದೆ. 1885ರಲ್ಲಿ ತನ್ನ ಮೊದಲ ಬ್ಯಾಂಕ್‌ ನೋಟು ಚಲಾವಣೆಗೆ ತಂದಿದ್ದ ಜಪಾನ್‌ ಮತ್ತೊಮ್ಮೆ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿದೆ. ಜಪಾನ್‌ ಹಣಕಾಸು ಇಲಾಖೆ ಮೂಲಗಳ ಪ್ರಕಾರ ದೇಶದ ಇತಿಹಾಸದಲ್ಲಿ ಜಾರಿಗೊಳಿಸುತ್ತಿರುವ 53ನೇ ನೋಟು ಮುದ್ರಣ ಇದಾಗಿದೆ.

    ಹೊಸ ನೋಟು ಜಾರಿಗೆ ಕಾರಣ ಏನು?

    ಮೇಲ್ನೋಟಕ್ಕೆ ನಕಲಿ ನೋಟುಗಳನ್ನು ತಡೆಯುವ ಉದ್ದೇಶದಿಂದ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಏಕೆಂದರೆ 2020ರಲ್ಲಿ ಜಪಾನ್‌ನಲ್ಲಿ 2,693 ನಕಲಿ ನೋಟು ವಿನಿಮಯ ಪ್ರಕರಣಗಳು ವರದಿಯಾಗಿದ್ದರೆ, 2023ರಲ್ಲಿ 681 ಪ್ರಕರಣಗಳು ಕಂಡುಬಂದಿದೆ. ಆದ್ರೆ ಅಸಲಿ ಕಾರಣವೇ ಬೇರೆಯಿದೆ. ಇಡೀ ವಿಶ್ವವೇ ಡಿಜಿಟಲ್‌ ಪಾವತಿಗೆ ಒಗ್ಗಿಕೊಂಡಿದೆ. ಹಾಗಾಗಿ ಜಪಾನ್‌ ಸಹ ಡಿಜಿಟಲ್‌ ಪಾವತಿಗೆ ಒತ್ತು ನೀಡಿ ನಗದು ರಹಿತ ಪಾವತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಎಷ್ಟೆಷ್ಟು ಬೆಲೆಯ ನೋಟುಗಳು ಜಾರಿ?

    10,000, 5,000, 1,000 ಜಪಾನ್‌ ಕರೆನ್ಸಿ ಯೇನ್‌ ಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಇದೇ ತಿಂಗಳ ಜುಲೈ 3 ರಿಂದ ನೋಟುಗಳನ್ನು ಜಾರಿಗೆ ತರಲಾಗಿದೆ.

    ಹೊಸ ನೋಟುಗಳ ವಿಶೇಷತೆ ಏನು?

    * ಈ ಯೇನ್‌ ಕರೆನ್ಸಿ ಮೇಲೆ ಬ್ರ್ಯಾಂಡಿಂಗ್‌ ಹಾಗೂ ಹೆಚ್ಚಿನ ಸುರಕ್ಷತೆಯುಳ್ಳ ಹೊಲೊಗ್ರಾಫಿಕ್‌ ಸ್ಟ್ರೈಪ್‌ಗಳನ್ನು ಬಳಸಲಾಗಿದೆ. ಹೀಗಾಗಿ 3ಡಿ ಪರಿಣಾಮ ಉಂಟುಮಾಡುವ ಹೊಲೊಗ್ರಾಫಿಯನ್ನು ಬಳಸುವ ಮೊದಲ ದೇಶ ಜಪಾನ್‌ ಎಂದೂ ಹೇಳಿಕೊಂಡಿದೆ.
    * ಎಲ್ಲ ವಯಸ್ಸಿನ ಜನರು ಸುಲಭವಾಗಿ ಕರೆನ್ಸಿ ಗುರುತಿಸಲು ಸಹಾಯಕವಾಗುವಂತೆ ವಿಸ್ತೃತ ಅರೇಬಿಕ್‌ ಅಂಕಿ ಅಂಶಗಳನ್ನು ಬಳಸಲಾಗಿದೆ.
    * ದೃಷ್ಟಿಹೀನ ವ್ಯಕ್ತಿಗಳು ಸ್ಪರ್ಶದ ಮೂಲಕವೂ ನೋಟುಗಳನ್ನು ಗುರುತಿಸಲು ಬ್ರೈಲ್‌ ಮಾದರಿಯನ್ನು ಅಳವಡಿಸಲಾಗಿದೆ.
    * ದೃಢೀಕರಣಕ್ಕಾಗಿ ಇಟಾಂಗ್ಲಿಯೋ ಮುದ್ರಣ ಮತ್ತು ವಾಟರ್‌ಮಾರ್ಕ್‌ ಸಹ ಒಳಗೊಂಡಿದೆ.

    ಬ್ಯಾಂಕ್‌ ನೋಟುಗಳನ್ನು ಎಲ್ಲಿ ಪಡೆಯಬೇಕು?

    ಹೊಸ ಬ್ಯಾಂಕ್‌ ನೋಟುಗಳನ್ನು ಬ್ಯಾಂಕ್‌ ಆಫ್‌ ಜಪಾನ್‌ನಲ್ಲಿ ಪಡೆಯಬೇಕು. ಶೀಘ್ರದಲ್ಲೇ ದೇಶದ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ನೋಟುಗಳನ್ನು ತಲುಪಿಸಲಾಗುತ್ತದೆ. ಇದರೊಂದಿಗೆ ದೇಶದ ಎಲ್ಲಾ ಎಟಿಎಂ ಬ್ಯಾಂಕ್‌ಗಳಿಗೆ ತಲುಪಿದ ನಂತರ ಮಾರುಕಟ್ಟೆಯಲ್ಲಿ ಅಧಿಕೃತ ಚಲಾವಣೆ ಶುರುವಾಗಲಿದೆ. ಜಪಾನ್‌ ಟೈಮ್ಸ್‌ ಪ್ರಕಾರ ಜುಲೈ 5ರ ವೇಳೆಗೆ ನೋಟುಗಳ ಸಂಖ್ಯೆ 5 ಬಿಲಿಯನ್‌ ತಲುಪಿದೆ. 2025ರ ಅಂತ್ಯದ ವೇಳೆಗೆ 7.5 ಶತಕೋಟಿ ಹೊಸ ನೋಟುಗಳು ಚಲಾವಣೆಯಲ್ಲಿರುವ ನಿರೀಕ್ಷೆಯಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೇ ಹೊಸ ನೋಟುಗಳ ಚಲಾವಣೆ ಸಂದರ್ಭದಲ್ಲಿಯೂ ಹಳೆಯ ನೋಟುಗಳು ವಹಿವಾಟಿಗೆ ಮಾನ್ಯವಾಗಿರುತ್ತವೆ ಎಂದು ಹೇಳಿದೆ.

    ಸ್ಥಳೀಯ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆಯೇ?

    ಖಂಡಿತವಾಗಿಯೂ ಹೌದು… ಏಕೆಂದರೆ ಹೊರ ನೋಟುಗಳು ದೇಶದ ಮುಕ್ತ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದ ನಂತರ ಬ್ಯಾಂಕ್, ರೈಲು ನಿಲ್ದಾಣ, ವಾಣಿಜ್ಯ ಮಳಿಗೆಗಳು ಮತ್ತು ಸೂಪರ್‌ ಮಾರ್ಕೆಟ್‌, ಮಾಲ್‌ಗಳು ಹೊಸ ನೋಟುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಯಂತ್ರಗಳನ್ನು ನವೀಕರಿಸಬೇಕು ಎಂದು ಸರ್ಕಾರ ಹೇಳಿದೆ. ಈ ಕ್ರಮಕ್ಕೆ ಕನಿಷ್ಠ 10 ಲಕ್ಷ ಯೇನ್‌ ವೆಚ್ಚವಾಗುತ್ತದೆ. ಇದು ಸಣ್ಣ ಉದ್ಯಮಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ಕೆಲವೆಡೆ ಸಣ್ಣ ಉದ್ದಿಮೆದಾರರಿಗೆ 3 ಲಕ್ಷ ಯೇನ್‌ ವರೆಗೆ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಆದ್ರೆ ಇದು ಆರ್ಥಿಕ ಹೊರೆ ತಗ್ಗಿಸುವಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.