Tag: japan

  • ಪಾಕ್ ಆಯ್ತು, ಇದೀಗ ಜಪಾನ್‍ನಲ್ಲೂ ಕೆಜಿಎಫ್ ಹವಾ..!

    ಪಾಕ್ ಆಯ್ತು, ಇದೀಗ ಜಪಾನ್‍ನಲ್ಲೂ ಕೆಜಿಎಫ್ ಹವಾ..!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಠಿಸಿದ್ದು, ನೆರೆಯ ಪಾಕಿಸ್ತಾನದಲ್ಲೂ ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾ ಜಪಾನ್‍ನಲ್ಲೂ ಸಖತ್ ಸದ್ದು ಮಾಡುತ್ತಿದೆ.

    ಹೌದು. ಕೆಜಿಎಫ್ ಸಿನಿಮಾ 50ನೇ ದಿನದತ್ತ ದಾಪುಗಾಲಿಡುತ್ತಿದ್ದು, ಜಪಾನ್‍ನ ಟೋಕ್ಯೋದ ಚಿತ್ರಮಂದಿರವೊಂದರಲ್ಲಿ ಚಿತ್ರದ ಪ್ರದರ್ಶನ ಜೋರಾಗಿ ನಡೆಯುತ್ತಿದೆ. ಜಪಾನ್‍ನಲ್ಲೂ ಅಪಾರ ಕನ್ನಡ ಅಭಿಮಾನಿಗಳು ಸಿನಿಮಾ ವೀಕ್ಷಿಸಿದ್ದಾರೆ. ಅದರಲ್ಲೂ ಕನ್ನಡ ಭಾಷೆಯಲ್ಲಿಯೇ ಸಿನಿಮಾವನ್ನು ನೋಡಿ ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ:  ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ ಶುರು

    ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿದೆ, ಕನ್ನಡ ಭಾಷೆಯಲ್ಲಿ ನೋಡುತ್ತಿದ್ದೇವೆ ಎಂದು ಹೇಳಿ ಯಶ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಇದೇ ವೇಳೆ ಅಭಿಮಾನಿಗಳು ಸಿನಿಮಾದ ಒಂದು ಡೈಲಾಗ್ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಭಿಮಾನಿಗಳ ಒತ್ತಾಯದ ಮೇರೆಗೆ ಯಶ್ ಫೋನ್ ಮೂಲಕವೇ ಡೈಲಾಗ್ ಹೇಳಿದ್ದಾರೆ. ಯಶ್ ಡೈಲಾಗ್ ಹೇಳಿದ ಬಳಿಕ ಚಿತ್ರಮಂದಿರದಲ್ಲಿದ್ದ ಅಭಿಮಾನಿಯೊಬ್ಬರು, ಯಶ್ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲಾ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಯಕಿ ಸಿಗದ್ದಕ್ಕೆ ಆಕೆಯನ್ನು ಹೋಲುವ ಗೊಂಬೆಯ ಜೊತೆ ಮದ್ವೆಯಾದ- ವಿಡಿಯೋ ನೋಡಿ

    ಗಾಯಕಿ ಸಿಗದ್ದಕ್ಕೆ ಆಕೆಯನ್ನು ಹೋಲುವ ಗೊಂಬೆಯ ಜೊತೆ ಮದ್ವೆಯಾದ- ವಿಡಿಯೋ ನೋಡಿ

    ಟೊಕಿಯೊ: ಬರೋಬ್ಬರಿ 13 ಲಕ್ಷ ರೂ. ವೆಚ್ಚದಲ್ಲಿ ಜಪಾನಿ ವ್ಯಕ್ತಿ ತಾನು ಪ್ರೀತಿಸುತ್ತಿದ್ದ ಗೊಂಬೆ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾನೆ.

    ಹೌದು, ಚಿಕ್ಕ ವಯಸ್ಸಿನಿಂದಲೂ ಗಾಯಕಿ ಹಟ್ಸುನೆ ಮಿಕು ಅಂದ್ರೆ ಅಕಿಹಿಕೋ ಗೆ ಅಚ್ಚುಮೆಚ್ಚು. ಪುಟ್ಟ ಬಾಲಕನಿದ್ದಾಗಲೇ ಮಿಕುವನ್ನೇ ಮದುವೆಯಾಗಬೇಕು ಅಂತಾ ಕನಸ್ಸು ಕಂಡಿದ್ದ. ಅದಕ್ಕಾಗಿಯೇ ಸುಮಾರು 9 ಸಾವಿರ ರೂ. ಖರ್ಚು ಮಾಡಿ ಗಾಯಕಿಯನ್ನೇ ಹೋಲುವ ಗೊಂಬೆಯೊಂದನ್ನು ತಯಾರಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಈತ ತನ್ನ 35 ವಯಸ್ಸಿನಲ್ಲಿ ತನ್ನ ಮಿಕು ಗೊಂಬೆ ಜೊತೆಗೆ ಅದ್ದೂರಿಯಾಗಿ ಬರೋಬ್ಬರಿ 13 ಲಕ್ಷ ರೂ. ಖರ್ಚು ಮಾಡಿ ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

    ಅಕಿಹಿಕೋ ಪ್ರೀತಿಸಿದ ಹುಡುಗಿ ಆತನನ್ನು ಬಿಟ್ಟು ಹೋದ ಕಾರಣಕ್ಕೆ ನೊಂದಿದ್ದನು. ಆಗ ಚಿಕ್ಕ ವಯಸ್ಸಿನಿಂದಲೂ ಜೊತೆಗಿರುವ ಮಿಕು ಗೊಂಬೆಯನ್ನು ಮದುವೆಯಾಗಿ ಚೆನ್ನಾಗಿರಬಹುದು ಎಂದು ನಿರ್ಧರಿಸಿದನು. ಈ ವಿಚಿತ್ರ ಮದುವೆಗೆ ಅಕಿಹಿಕೋ ತಾಯಿ ಒಪ್ಪಿಗೆ ನೀಡಲಿಲ್ಲ. ಆದರು ವಿರೋಧದ ನಡುವೆಯೆ ಅಕಿಹಿಕೋ ತನ್ನ ಪ್ರೀತಿಯ ಗೊಂಬೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದಾನೆ.

    ಅಷ್ಟೇ ಅಲ್ಲದೇ ನನಗೆ ಗಾಯಕಿ ಹಟ್ಸುನೆ ಮಿಕು ಅಂದ್ರೆ ತುಂಬಾ ಇಷ್ಟ. ಅವರನ್ನು ಮದುವೆಯಾಗಲು ನನಗೆ ಅಗೋಲ್ಲ ಆದ್ರೆ ಮಿಕು ತರಹದ ಗೊಂಬೆಯನ್ನು ಪ್ರೀತಿಸಿ ವಿವಾಹವಾಗಿದ್ದೇನೆ. ನಾನು ಎಂದಿಗು ಮಿಕುವಿಗೆ ಮೋಸ ಮಾಡಲ್ಲ, ನಾನು ಪ್ರೀತಿಯಿಂದ ಮಿಕುವನ್ನು ನೋಡಿಕೊಳ್ಳುತ್ತೇನೆ ಎಂದು ಅಕಿಹಿಕೋ ಮಾಧ್ಯಮದವರಿಗೆ ತಿಳಿಸಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಕಿಂಗ್ ಸ್ಟಾರ್ ಯಶ್‍ಗೆ ತಮಿಳು ನಟ ವಿಶಾಲ್ ಸಾಥ್!

    ರಾಕಿಂಗ್ ಸ್ಟಾರ್ ಯಶ್‍ಗೆ ತಮಿಳು ನಟ ವಿಶಾಲ್ ಸಾಥ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೆಜಿಎಫ್. ಈಗಾಗಲೇ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಯಶ್ ಅವರಿಗೆ ಅಭಿಮಾನಿ ಸಮೂಹವೊಂದು ಹುಟ್ಟಿಕೊಂಡಿದೆ. ಅವರಿಗಾಗಿಯೇ ಕೆಜಿಎಫ್ ಚಿತ್ರ ತಮಿಳು, ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಇದೀಗ ತಮಿಳು ವರ್ಷನ್ನಿನ ಕೆಜಿಎಫ್ ಟ್ರೈಲರ್ ಬಿಡುಗಡೆ ಮಾಡಿ ಅದೇ ಸಂದರ್ಭದಲ್ಲಿ ರಿಲೀಸಿಂಗ್ ಡೇಟ್ ಅನೌನ್ಸ್ ಮಾಡಲು ತಮಿಳು ಸ್ಟಾರ್ ವಿಶಾಲ್ ರೆಡಿಯಾಗಿದ್ದಾರೆ.

    ಇಂದು ಸಂಜೆ 6 ಘಂಟೆಗೆ ವಿಶಾಲ್ ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಜಿಎಫ್ ಟ್ರೈಲರನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮಿಳು ಕೆಜಿಎಫ್ ಬಿಡುಗಡೆಯಾಗೋ ದಿನಾಂಕವನ್ನೂ ಘೋಷಿಸಲಿದ್ದಾರೆ.

    ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಕೆಜಿಎಫ್ ಚಿತ್ರದ ಬಗೆಗೊಂದು ಕುತೂಹಲ ನೆಲೆಗೊಂಡಿದೆ. ಸುದೀರ್ಘವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣ ನಡೆಸಿಕೊಂಡಿರೋ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಇದೆ. ಈ ಚಿತ್ರ ಜಪಾನ್ ಹಾಗೂ ಚೈನೀಸ್ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಥಾಯ್ಲೆಂಡ್ ಓಪನ್ ಸೀರಿಸ್ ಫೈನಲ್‍ನಲ್ಲಿ ಎಡವಿದ ಪಿವಿ ಸಿಂಧು

    ಥಾಯ್ಲೆಂಡ್ ಓಪನ್ ಸೀರಿಸ್ ಫೈನಲ್‍ನಲ್ಲಿ ಎಡವಿದ ಪಿವಿ ಸಿಂಧು

    ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಜಪಾನ್‍ನ ನೊಝೊಮಿ ಓಕುಹಾರ ವಿರುದ್ಧ ಸೋಲುಂಡಿದ್ದು, ಈ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿರಾದರು.

    ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‍ನಲ್ಲಿ ಜಪಾನ್‍ನ ನೊಝೊಮಿ ಓಕುಹಾರ ಮುಂದೆ 15-21, 18-21ರ ಅಂತರದಲ್ಲಿ ಸಿಂಧು ಸೋಲುಂಡರು. ಅಲ್ಲದೇ ವಿಶ್ವ 29ನೇ ಶ್ರೇಯಾಂಕ ಪಡೆದಿರುವ ನೊಝೊಮಿ ವಿರುದ್ಧ ವಿಶ್ವ 3ನೇ ಶ್ರೇಯಾಂಕ ಹೊಂದಿರುವ ಸಿಂಧೂ ಹಿನ್ನಡೆ ಅನುಭವಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

    ಪಂದ್ಯದ ಆರಂಭದಿಂದಲೂ ತಮ್ಮದೇ ತಪ್ಪುಗಳನ್ನು ಪುನರಾವರ್ತಿಸಿದ ಸಿಂಧು ಎರಡನೇ ಸೆಟ್ ನಲ್ಲಿ ಅಲ್ಪ ಮುನ್ನಡೆ ಪಡೆದರೂ, ಅಂತಿಮವಾಗಿ ಸೋಲುವ ಮೂಲಕ ಎದುರಾಳಿಗೆ ಮಣಿದರು. ಅಂದಹಾಗೇ 2017ರ ವಿಶ್ವ ಚಾಂಪಿಯನ್ ಶಿಪ್‍ನಲ್ಲೂ ಸಿಂಧೂ, ಓಕುಹಾರ ಎದುರು ಸೋಲುಂಡಿದ್ದರು.

    ಥಾಯ್ಲೆಂಡ್ ಓಪನ್ ಸಿಥಾಯ್ಲೆಂಡ್ ಓಪನ್ ಸೀರಿಸ್ ಕ್ವಾಟರ್ ಫೈನಲ್ ನಲ್ಲಿ ಮಲೇಷಿಯಾದ ಸೊನಿಯಾ ಚೆಹಾ ವಿರುದ್ಧ ಹಿಂದಿಕ್ಕಿ ಫೈನಲ್ ಪ್ರವೇಶಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಸಿಂಧು ಕಾಮನ್‍ವೆಲ್ತ್ ಗೇಮ್ಸ್ ಸೇರಿದಂತೆ ಇಂಡಿಯಾ ಓಪನ್ ಫೈನಲ್ ನಲ್ಲಿ ಸೋಲುಂಡಿದ್ದರು.

  • ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಮಾಸ್ಕೋ: ಇಂಜುರಿ ಟೈಂನ ಕೊನೆಯ ಕ್ಷಣದಲ್ಲಿ (90+4ನೇ ನಿಮಿಷ) ಮಿಡ್‍ಫೀಲ್ಡರ್ ನಾಸೆರ್ ಚಾಡ್ಲಿ ಗಳಿಸಿದ ಸುಂದರ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ರೋಚಕವಾಗಿ ಮಣಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ರೋಸ್ಟೋವ್ ಅರೆನಾದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು 2 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್, ನಂತರದಲ್ಲಿ 3 ಗೋಲು ಬಿಟ್ಟುಕೊಟ್ಟು ಕೂಟದಿಂದಲೇ ಹೊರನಡೆಯಿತು.

    ಗೋಲು ರಹಿತ ಮೊದಲಾರ್ಧದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್, 48ನೇ ನಿಮಿಷದಲ್ಲಿ ಶಿಬಾಸ್ಕಿ ನೀಡಿದ ಪಾಸ್ ಮೂಲಕ ಮಿಡ್ ಫೀಲ್ಡರ್ ಜೆಂಕಿ ಹರಗುಚಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಮೊದಲನೇ ಗೋಲು ದಾಖಲಿಸಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿಯೇ ಎರಡನೇ ಗೋಲು ದಾಖಲಿಸಿದ ಜಪಾನ್, ಬೆಲ್ಜಿಯಂಗೆ ಡಬಲ್ ಶಾಕ್ ನೀಡಿತು.

    52ನೇ ನಿಮಿಷದಲ್ಲಿ ಕಗಾವಾ ಅಸಿಸ್ಟ್ ನೆರವಿನಿಂದ ಚೆಂಡನ್ನು ಪಡೆದ ತಕಾಶಿ ಇನೂಯ್, ಡಿ ಬಾಕ್ಸ್‍ನ ಹೊರಗಡೆಯಿಂದಲೇ ಗೋಲ್ ಪೋಸ್ಟ್ ನ ಬಲತುದಿಯನ್ನು ಗುರಿಯಾಗಿಸಿ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಗುರಿ ಸೇರಿತು. 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್ ಪಂದ್ಯ ಗೆದ್ದೇ ಬಿಟ್ಟಿತು ಎಂಬ ವಿಶ್ವಾಸದಲ್ಲಿರುವಾಗಲೇ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದ ಬೆಲ್ಜಿಯಂ, ಜಪಾನ್ ತಂಡ ಬೆಚ್ಚಿಬೀಳುವಂತೆ ಮಾಡಿತು.

    69ನೇ ನಿಮಿಷದಲ್ಲಿ ಡಿ ಬಾಕ್ಸ್‍ನಿಂದಲೇ ಆಕರ್ಷಕ ಹೆಡರ್ ಮೂಲಕ ಜಪಾನ್ ಗೋಲಿ ಕವಾಶಿಮಾರನ್ನು ವಂಚಿಸಿದ ಮಿಡ್ ಫೀಲ್ಡರ್ ವೇರೊಂಗನ್ ಮೊದಲ ಗೋಲು ದಾಖಲಿಸಿದರು. ಹಝಾರ್ಡ್ ಪಾಸ್ ಅನ್ನು ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದ ಅನುಭವಿ ಅಟಗಾರ ಮರೌನೆ ಫೆಲೈನಿ 74ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಸಾಧಿಸುವಂತೆ ಮಾಡಿದರು. ಮತ್ತಷ್ಟು ರೋಚಕತೆಯತ್ತ ತಿರುಗಿದ ಪಂದ್ಯ ನಿಗದಿತ ಅವಧಿ ಮುಗಿದು, ಇನ್ನೇನು ಇಂಜುರಿ ಟೈಂ ಮುಗಿಯಿತು ಎನ್ನುವಷ್ಟರಲ್ಲಿ ಮಿಂಚಿನ ಕೌಂಟರ್ ಅಟ್ಯಾಕ್ ನಡೆಸಿದ ಬೆಲ್ಜಿಯಂ, ಸ್ಟಾರ್ ಅಟಗಾರ ಕೆವಿನ್ ಡಿ ಬ್ರೂನೆ, ಮಿನ್ಯೂಯೆರ್ ಶರವೇಗದಲ್ಲಿ ನೀಡಿದ ಪಾಸ್‍ಗೆ ಅಂತಿಮ ಟಚ್ ಕೊಟ್ಟ ನಾಸೆರ್ ಚಾಡ್ಲಿ, ಬೆಲ್ಜಿಯಂಗೆ ಅವಿಸ್ಮರಣೀಯ ಜಯ ತಂದಿತ್ತರು.

    ಮುನ್ನಡೆ ಸಾಧಿಸಿದ ಬಳಿಕ ರಕ್ಷಣಾ ವಿಭಾಗವನ್ನು ಹೆಚ್ಚು ಬಲಪಡಿಸಿ ಪಂದ್ಯ ಉಳಿಸಿಕೊಳ್ಳುವ ಫುಟ್ಬಾಲ್‍ನ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಕೈಬಿಟ್ಟಿದ್ದೇ ಜಪಾನ್ ಸೋಲಿಗೆ ಕಾರಣವಾಯಿತು. ಈ ಗೆಲುವಿನ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಎರಡು ಗೋಲಿನಿಂದ ಹಿಂದಿದ್ದು, ಬಳಿಕ ನಿಗದಿತ ಅವಧಿಯಲ್ಲಿ ಪಂದ್ಯ ಗೆದ್ದ ಮೊದಲ ತಂಡವೆಂಬ ದಾಖಲೆ ಬೆಲ್ಜಿಯಂ ಪಾಲಾಯಿತು.

    ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 2-0 ಗೋಲಿನ ಅಂತರದಲ್ಲಿ ಗೆದ್ದ ಬ್ರಜಿಲ್ ತಂಡವನ್ನು ಕ್ವಾರ್ಟರ್ ಫೈನಲ್‍ನಲ್ಲಿ ಬೆಲ್ಜಿಯಂ ಎದುರಿಸಲಿದೆ.

  • ಆಗಸಕ್ಕೆ ಚಿಮ್ಮಿದ ಕೆಲವೇ ಸೆಕೆಂಡ್‍ಗಳಲ್ಲಿ ಧರೆಗಪ್ಪಳಿಸಿ ಸ್ಫೋಟಗೊಂಡಿತು ರಾಕೆಟ್ – ವಿಡಿಯೋ ನೋಡಿ

    ಆಗಸಕ್ಕೆ ಚಿಮ್ಮಿದ ಕೆಲವೇ ಸೆಕೆಂಡ್‍ಗಳಲ್ಲಿ ಧರೆಗಪ್ಪಳಿಸಿ ಸ್ಫೋಟಗೊಂಡಿತು ರಾಕೆಟ್ – ವಿಡಿಯೋ ನೋಡಿ

    ಟೋಕಿಯೋ: ಜಪಾನ್ ತೈಕಿಯಲ್ಲಿ ಶನಿವಾರ ಮೊಮೊ-2 ರಾಕೆಟ್ ಆಗಸಕ್ಕೆ ಚಿಮ್ಮಿದ ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಬಿದ್ದು ಸ್ಫೋಟಗೊಂಡಿದೆ.

    ಮೊದಲ ಬಾರಿಗೆ ಜಪಾನ್ ಉದ್ಯಮಿಯೊಬ್ಬರು ಖಾಸಗಿಯಾಗಿ ನಿರ್ಮಿಸಿದ್ದ ರಾಕೆಟ್ ಹೊಕೈಡ್ ನಗರದ ಬಳಿ ಇರುವ ತೈಕಿ ದ್ವೀಪದಿಂದ ಉಡಾವಣೆಗೊಂಡಿತ್ತು. ತಜ್ಞರ ನಿಗಧಿತ ಗುರಿಯ ಪ್ರಕಾರ ಉಡಾವಣೆಯಾದ ರಾಕೆಟ್ ಆಗಸದಲ್ಲಿ 100 ಕಿಮೀ ಕ್ರಮಿಸಬೇಕಿತ್ತು. ಆದರೆ ಉಡಾವಣೆಯಾದ ಕೆಲ ಸೆಕೆಂಡಿನಲ್ಲೇ ರಾಕೆಟ್ ಪತನಗೊಂಡು ಸ್ಫೋಟಗೊಂಡಿದೆ.

    https://twitter.com/nic_galindo/status/1012886360468975616

    ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಕೆಟ್ ಉಡಾವಣೆ ಮಾಡಿದ ಸಂಸ್ಥೆಯ ಮುಖ್ಯಸ್ಥರು ತಿಳಿಸಿರುವಂತೆ ರಾಕೆಟ್‍ನ ಎಂಜಿನ್ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಯೋಜನೆ ವಿಫಲ ಆಗಿದ್ದಕ್ಕೆ ಕ್ಷಮೆ ಕೋರಿದ್ದು, ನಮ್ಮ ತಂಡವು ಯೋಜನೆಯ ವಿಫಲವಾದ ಕುರಿತ ಕಾರಣಗಳನ್ನು ತಿಳಿದು ಸುಧಾರಿತ ರಾಕೆಟ್ ಸಿದ್ಧಪಡಿಸುವುದಾಗಿ ಹೇಳಿದ್ದಾರೆ.

    ಸಣ್ಣ ಹಾಗೂ ಹಗುರ ರಾಕೆಟ್ ಸಿದ್ಧಪಡಿಸಲು ಉದ್ಯಮಿ ಲಿವೆಡೂರ್ ಹಾಗೂ ಹಲವು ಬಾಹ್ಯಾಕಾಶ ವೈಜ್ಞಾನಿಕ ತಜ್ಞರು ಸೇರಿ 2005ರಲ್ಲಿ ಯೋಜನೆ ಆರಂಭಿಸಿದ್ದರು.

    ಅಮೆರಿಕದ ಎಲೋನ್ ಮಾಸ್ಕ್ ಸಿಇಒ ಆಗಿರುವ ಸ್ಪೇಸ್ ಎಕ್ಸ್ ಕಂಪೆನಿ ರಾಕೆಟ್ ಉಡಾವಣೆಗೆ ಕೈ ಹಾಕಿದ ಸಂದರ್ಭದಲ್ಲೂ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ರಾಕೆಟ್ ಸ್ಫೋಟಗೊಂಡಿತ್ತು. ಹಲವು ಪ್ರಯತ್ನಗಳ ಬಳಿಕ ಸ್ಪೇಸ್ ಎಕ್ಸ್ ಕಂಪೆನಿ ರಾಕೆಟ್ ಉಡಾವಣೆಯಲ್ಲಿ ಯಶಸ್ಸು ಕಂಡಿತ್ತು.

    https://www.youtube.com/watch?v=RvTxQq8Wbe0

  • ಜಪಾನ್ ನಲ್ಲಿ ಭೀಕರ ಚಂಡಮಾರುತಕ್ಕೆ ನಾಲ್ವರು ಬಲಿ

    ಜಪಾನ್ ನಲ್ಲಿ ಭೀಕರ ಚಂಡಮಾರುತಕ್ಕೆ ನಾಲ್ವರು ಬಲಿ

    ಟೋಕಿಯೋ: ಜಪಾನ್ ನಲ್ಲಿ ಚಂಡಮಾರುತ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಚಂಡಮಾರುತ ಲ್ಯಾನ್ ರೌದ್ರ ರೂಪಕ್ಕೆ ನಾಲ್ವರು ಬಲಿಯಾಗಿದ್ದಾರೆ.

    ಗಂಟೆಗೆ 198 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿರುವ ಲ್ಯಾನ್ ದ್ವೀಪ ರಾಷ್ಟ್ರದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಪ್ರವಾಹದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ರಸ್ತೆಗಳಲ್ಲಿ ಪ್ರವಾಹ ಉಂಟಾಗಿದ್ದು ಹೆದ್ದಾರಿಗಳು ಕುಸಿದಿವೆ.

    ಸೇತುವೆಗಳು ಮುರಿದು ಬಿದ್ದಿದ್ದು ವಾಹನಗಳು ಕೊಚ್ಚಿಕೊಂಡು ಹೋಗಿವೆ. ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ರಾಜಧಾನಿ ಟೋಕಿಯೋ ಸೇರಿದಂತೆ ರಸ್ತೆ, ರೈಲು, ವಿಮಾನ ಸಂಪರ್ಕ ಅಸ್ತವ್ಯಸ್ಥಗೊಂಡಿದೆ.

    ವರದಿಯ ಪ್ರಕಾರ ರಾತ್ರಿಯೆಲ್ಲಾ ಪ್ರಯಾಣಿಕರು ರೈಲಿನಲ್ಲಿ ಸಿಲುಕಿಕೊಂಡಿದ್ದು, ಸೋಮವಾರದ ಮಾರ್ನಿಂಗ್ ಎಕ್ಸ್ ಪ್ರೆಸ್ ಟ್ರೈನ್ ಹಾಗೂ ಫೆರೀ ಸರ್ವಿಸ್ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಭೂ ಕುಸಿತದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವು ಗಾಯಗಳಿಂದ ಇಬ್ಬರು ಕೋಮಾಗೆ ಜಾರಿದ್ದಾರೆ. 90 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ.

    https://twitter.com/newnewspage/status/922421938345136128

  • 159 ಗಂಟೆ ಓವರ್‍ಟೈಮ್ ಕೆಲಸ ಮಾಡಿ ಮಹಿಳೆ ಸಾವು!

    159 ಗಂಟೆ ಓವರ್‍ಟೈಮ್ ಕೆಲಸ ಮಾಡಿ ಮಹಿಳೆ ಸಾವು!

    ಟೋಕಿಯೋ: ಓವರ್ ಟೈಮ್ ಕೆಲಸ ಮಾಡಿ ಜಪಾನ್‍ನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ಇಲ್ಲಿನ ಎನ್‍ಹೆಚ್‍ಕೆ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆ ಮಿವಾ ಸಾದೋ ಓವರ್‍ಟೈಮ್ ಕೆಲಸ ಮಾಡಿ ಸಾವನ್ನಪ್ಪಿದರೆಂದು ಗುರುವಾರದಂದು ಜಪಾನ್‍ನ ಲೇಬರ್ ಇನ್ಸ್ ಪೆಕ್ಟರ್‍ಗಳು ಹೇಳಿದ್ದಾರೆ.

    ಮಿವಾ ಸಾದೋ ಟೋಕಿಯೋದಲ್ಲಿನ ಮುಖ್ಯಕಚೇರಿಯಲ್ಲಿ ಕೆಲಸ ಮಾಡ್ತಿದ್ರು. 159 ಗಂಟೆಗಳ ಕಾಲ ಅತಿಯಾದ ಕೆಲಸ ಮಾಡಿದ್ದು, ತಿಂಗಳಿನಲ್ಲಿ ಕೇವಲ ಎರಡು ದಿನ ರಜೆ ತೆಗೆದುಕೊಂಡಿದ್ದರು. ಇದರಿಂದಾಗಿ ಹೃದಯ ವೈಫಲ್ಯವಾಗಿ 2013ರ ಜುಲೈನಲ್ಲಿ ಸಾವನ್ನಪ್ಪಿದ್ರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಆಕೆಗೆ ಉದ್ಯೋಗ ನೀಡಿದ ವಕ್ತಿ ಈ ವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಸಾವಿಗೆ ಮೂರು ದಿನಗಳ ಮುನ್ನ ಮಿವಾ ಸಾದೋ ಇಲ್ಲಿನ ಸ್ಥಳೀಯ ಚುನಾವಣೆ ಬಗ್ಗೆ ವರದಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಟೋಕಿಯೋದ ಲೇಬರ್ ಸ್ಟಾಂಡರ್ಡ್ಸ್ ಕಚೇರಿ ಆಕೆ ‘ಕರೋಶಿ’ ಯಿಂದ ಮೃತಪಟ್ಟಿದ್ದಾಳೆ ಎಂದು ಹೇಳಿದೆ.

    ಕರೋಶಿ ಅಂದ್ರೇನು?: ಅತಿಯಾದ ಕೆಲಸದಿಂದ ಸಾವನ್ನಪ್ಪೋದಕ್ಕೆ ಕರೋಶಿ ಅಂತಾರೆ. ಹೃದಯಾಘಾತ, ಸ್ಟ್ರೋಕ್, ಹಸಿವು- ಹೀಗೆ ಹಲವಾರು ವೈದ್ಯಕೀಯ ಕಾರಣಗಳಿಂದ ಕರೋಶಿ ಸಾವು ಸಂಭವಿಸಬಹುದು.

    2015ರಲ್ಲಿ ಜಾಹಿರಾತು ಸಂಸ್ಥೆಯೊಂದರಲ್ಲಿ ತಿಂಗಳಿಗೆ 100 ಗಂಟೆಗಳ ಕಾಲ ಓವರ್‍ಟೈಮ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾದ ದೇಶದಾದ್ಯಂತ ಈ ಬಗ್ಗೆ ಚರ್ಚೆಯಾಗಿತ್ತು. ಜಪಾನ್‍ನ ಉದ್ಯೋಗ ಸಂಸ್ಕೃತಿ ಬದಲಾಗಬೇಕು ಎಂಬ ಕೂಗು ಕೇಳಿಬಂದಿತ್ತು.

    ರಾಷ್ಟ್ರೀಯ ಸರ್ವೆಯೊಂದರ ಪ್ರಕಾರ, ಜಪಾನ್‍ನ ಐದರಲ್ಲಿ ಒಂದು ಭಾಗದಷ್ಟು ಉದ್ಯೋಗಿಗಳು ಕರೋಶಿ ಭೀತಿಯಲ್ಲಿದ್ದಾರೆ. ಯಾಕಂದ್ರೆ ಅವರೆಲ್ಲಾ ಪ್ರತಿ ತಿಂಗಳು 80 ಗಂಟೆಗಳಿಗೂ ಹೆಚ್ಚು ಓವರ್‍ಟೈಮ್ ಕೆಲಸ ಮಾಡ್ತಿದ್ದಾರೆ ಎಂದು ವರದಿಯಾಗಿದೆ.

    ಸುಮಾರು 2 ಸಾವಿರ ಮಂದಿ ಉದ್ಯೋಗ ಸಂಬಂಧಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಜಪಾನ್ ಸರ್ಕಾರ ಇತ್ತೀಚೆಗೆ ಈ ಬಗ್ಗೆ ಕ್ರಮಗಳನ್ನ ಕೈಗೊಂಡಿದೆ. ಪ್ರತಿ ತಿಂಗಳ ಕೊನೆ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಕೆಲಸದಿಂದ ಹೊರಡುವಂತೆ ಹೇಳಿದೆ. ಅಲ್ಲದೆ ಮೇ ತಿಂಗಳಲ್ಲಿ ಕಾರ್ಮಿಕ ನೀತಿಯನ್ನು ಉಲ್ಲಂಘಿಸಿದ 300 ಸಂಸ್ಥೆಗಳಿಗೆ ಛೀಮಾರಿ ಹಾಕಿತ್ತು.

  • ಜಪಾನ್ ಓಪನ್ ಬ್ಯಾಡ್ಮಿಂಟನ್ ಸೋತ್ರೂ ಸಿಂಧು ಜೀವನ ಶ್ರೇಷ್ಠ ರ‍್ಯಾಂಕಿಂಗ್‌

    ಜಪಾನ್ ಓಪನ್ ಬ್ಯಾಡ್ಮಿಂಟನ್ ಸೋತ್ರೂ ಸಿಂಧು ಜೀವನ ಶ್ರೇಷ್ಠ ರ‍್ಯಾಂಕಿಂಗ್‌

    ಟೋಕಿಯೋ: ಪಿ.ವಿ.ಸಿಂಧು ಜಪಾನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಎರಡನೇ ಸುತ್ತಿನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಜಪಾನಿನ ನೊಜೊಮಿ ಒಕುಹಾರ ಅವರು ಸಿಂಧು ಅವರನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

    ಒಕುಹಾರ ಅವರು 21-18, 21-08 ನೇರ ಸೆಟ್‍ಗಳಲ್ಲಿ ಸಿಂಧು ಅವರನ್ನು ಸೋಲಿಸಿದ್ದಾರೆ. ಗ್ಲಾಸ್ಗೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ.ಸಿಂಧು ಒಕುಹಾರ ವಿರುದ್ಧ ಸೋತಿದ್ದರು. ಇದರ ಪ್ರತಿಕಾರವಾಗಿ ಸಿಂಧು ಕೊರಿಯಾದಲ್ಲಿ ನಡೆದ ಟೂರ್ನಿಯಲ್ಲಿ ಸೇಡು ತೀರಿಸಿಕೊಂಡು ಪ್ರಶಸ್ತಿ ಗೆದ್ದಿದ್ದರು. ಆದರೆ ಗುರುವಾರ ಸಿಂಧು ಅವರನ್ನು ಒಕುಹಾರ ಸೋಲಿಸಿದ್ದಾರೆ.

    ಈ ಪಂದ್ಯದಲ್ಲಿ ಸೋತರೂ ಸಿಂಧು ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ ನಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕೊರಿಯಾ ಓಪನ್ ಗೆಲ್ಲುವ ಮೂಲಕ 4ನೇ ಸ್ಥಾನದಲ್ಲಿದ್ದ ಸಿಂಧು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಒಕುಹಾರ 1 ಸ್ಥಾನ ಜಿಗಿದು 8ನೇ ಸ್ಥಾನ ಪಡೆದುಕೊಂಡಿದ್ದಾರೆ.