Tag: Janty Rhodes

  • ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಆಡಬೇಕು ಎಂದು ಧೋನಿಗೆ ಸಲಹೆ ಕೊಟ್ಟ `ಇಂಡಿಯಾ’

    ದಕ್ಷಿಣ ಆಫ್ರಿಕಾದಲ್ಲಿ ಹೇಗೆ ಆಡಬೇಕು ಎಂದು ಧೋನಿಗೆ ಸಲಹೆ ಕೊಟ್ಟ `ಇಂಡಿಯಾ’

    ನವದೆಹಲಿ: ಟೀಂ ಇಂಡಿಯಾ-ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಭಾನುವಾರ ಕೊನೆಯಾಗಲಿದ್ದು, ಟೆಸ್ಟ್ ಸರಣಿಯ ನಂತರ ಫೆಬ್ರವರಿ 1 ಆರಂಭವಾಗುವ ಏಕದಿನ ಸರಣಿಗೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರಿಗೆ `ಇಂಡಿಯಾ’ ಸಲಹೆ ನೀಡಿದ್ದಾಳೆ.

    ಹೌದು, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಜಾಂಟಿ ರೋಡ್ಸ್ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ತಮ್ಮ ಮಗಳು ಇಂಡಿಯಾ ಧೋನಿಗೆ ಸಲಹೆ ನೀಡುತ್ತಿದ್ದಾಳೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧ ಆರು ಪಂದ್ಯಗಳ ಏಕದಿನ ಸರಣಿ ಆಯ್ಕೆಯಾದ ಭಾರತ ತಂಡದ ಆಟಗಾರರು ಇಂದು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು, ಈ ವೇಳೆ ಧೋನಿ ಇಂಡಿಯಾ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಜಾಂಟಿ ಟ್ವೀಟ್ ಮಾಡಿದ್ದಾರೆ.

    ಎರಡು ತಿಂಗಳು ಕುಟುಂಬಸ್ಥರಿಂದ ದೂರ ಇರುವುದು ಬಹಳ ಕಷ್ಟ. ಆದರೆ ನನಗೆ ಈ ವಿಷಯದಲ್ಲಿ ಯಾವುದೇ ಭಯವಿಲ್ಲ. ಏಕೆಂದರೆ ನನ್ನ ಮಕ್ಕಳು ಧೋನಿ ಬಳಿ ಕ್ಷೇಮವಾಗಿದ್ದಾರೆ. ಧೋನಿ ಇಂಡಿಯಾ ಮತ್ತು ನಾಥನ್ ಜಾನ್ ರಿಂದ ಕೆಲವು ಸಲಹೆಗಳನ್ನು ಪಡೆಯುತ್ತಿದ್ದಾರೆ. ಆದರೆ ಅವರು ಇದಕ್ಕೆ `ಮುಜೆ ಪತಾ ಹೈ’ ಎಂದು ಹೇಳಿದ್ದಾರೆ. ಧನ್ಯವಾದ ಮಾಹಿ ಎಂದು ಜಾಂಟಿ ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಅಂದಹಾಗೇ ಜಾಂಟಿ ರೋಡ್ಸ್ ಭಾರತದ ಮೇಲಿನ ಅಭಿಮಾನದಿಂದ ತಮ್ಮ ಮೊದಲ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅಲ್ಲದೇ ಜಾಂಟಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಹಲವು ಬಾರಿ ಭಾರತದ ಬಗ್ಗೆ ಟ್ವೀಟ್ ಮಾಡಿರುವ ಜಾಂಟಿ ಇಲ್ಲಿನ ಜನರ ಪ್ರೀತಿ, ಸಂಸ್ಕೃತಿ ಬಗ್ಗೆ ವಿವಿಧ ಬಗೆಯ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಜಾಂಟಿ ಮಾಡಿರುವ ಟ್ವೀಟ್‍ಗೆ ಅಭಿಮಾನಿಗಳು ನಗೆಯ ಚಟಾಕಿ ಹರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಆಫಿಕ್ರಾ ವಿರುದ್ಧದ ಆರು ಪಂದ್ಯಗಳ ಏಕದಿನ ಪಂದ್ಯಗಳ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿ ಫೆಬ್ರವರಿ 1 ರಿಂದ ಆರಂಭವಾಗಲಿದೆ.