Tag: Janhvi Kapoor

  • ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಶಿವಕಾರ್ತಿಕೇಯನ್‌, ಸಾಯಿ ಪಲ್ಲವಿ ಸಿನಿಮಾ ನೋಡಿ ಮ್ಯಾಜಿಕಲ್ ಎಂದ ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಹಿಂದಿ ಮಾತ್ರವಲ್ಲೇ ಸೌತ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಮ್ಯಾಜಿಕಲ್ ಸಿನಿಮಾ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ:BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    ಶಿವಕಾರ್ತಿಕೇಯನ್, ಸಾಯಿ ಪಲ್ಲವಿ (Sai Pallavi) ನಟನೆಯ ‘ಅಮರನ್’ (Amaran) ಸಿನಿಮಾ ವೀಕ್ಷಿಸಿದ ಜಾನ್ವಿ ಕಪೂರ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದಾರೆ. ಸಿನಿಮಾ ನೋಡೋದು ತಡವಾಗಿದೆ. ಆದರೆ ಇದೊಂದು ಮ್ಯಾಜಿಕಲ್ ಸಿನಿಮಾ ಎಂದಿದ್ದಾರೆ. ಈ ವರ್ಷವನ್ನು ಈ ಸಿನಿಮಾ ನೋಡಿ ಕೊನೆಗೊಳಿಸಿದೆ ಎಂಬರ್ಥದಲ್ಲಿ ನಟಿ ಬರೆದುಕೊಂಡಿದ್ದಾರೆ. ಈ ವರ್ಷ ನೋಡಿದ ಹೃದಯಸ್ಪರ್ಶಿ ಸಿನಿಮಾ ಇದಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ.

    ಅಂದಹಾಗೆ, ಅಕ್ಟೋಬರ್ 31ರಂದು ‘ಅಮರನ್’ ಸಿನಿಮಾ ರಿಲೀಸ್ ಆಗಿತ್ತು. ಮೇಜತ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ (Sivakarthikeyan) ನಟಿಸಿದ್ದಾರೆ. ಅವರಿಗೆ ಸಾಯಿ ಪಲ್ಲವಿ ಜೋಡಿಯಾಗಿದ್ದಾರೆ.

    ಇನ್ನೂ ಜಾನ್ವಿ ಕಪೂರ್ ಅವರು ತೆಲುಗಿನ ‘ದೇವರ’ ಸಿನಿಮಾ ಬಳಿಕ ರಾಮ್ ಚರಣ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತಮಿಳಿನ ಹೊಸ ಸಿನಿಮಾಗೂ ನಟಿ ಓಕೆ ಎಂದಿದ್ದಾರೆ. ಅದ್ಯಾವ ಸಿನಿಮಾ ಎಂದು ಕಾಯಬೇಕಿದೆ.

  • RC 16: ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಸ್ಕ್ರಿಪ್ಟ್‌ ಹಿಡಿದು ನಿಂತ ‘ಉಪ್ಪೇನ’ ಡೈರೆಕ್ಟರ್‌

    RC 16: ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಸ್ಕ್ರಿಪ್ಟ್‌ ಹಿಡಿದು ನಿಂತ ‘ಉಪ್ಪೇನ’ ಡೈರೆಕ್ಟರ್‌

    ತೆಲುಗು ನಟ ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾ ಕೆಲಸ ಮೈಸೂರಿನಲ್ಲಿ ಆರಂಭವಾಗಿದೆ. ಚಾಮುಂಡೇಶ್ವರಿ ದರ್ಶನ ಪಡೆದು ಸ್ಕ್ರಿಪ್ಟ್ ಹಿಡಿದು ನಿಂತಿರುವ ಫೋಟೋವನ್ನು ‘ಉಪ್ಪೇನ’ ನಿರ್ದೇಶಕ ಬುಚ್ಚಿಬಾಬು ಸನಾ (Buchibabu Sana) ಸೋಶಿಯಲ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ‘ಉಪ್ಪೇನ’ ಚಿತ್ರದಿಂದ ಸಕ್ಸಸ್ ಕಂಡಿದ್ದ ನಿರ್ದೇಶಕ ಬುಚ್ಚಿಬಾಬು ಸನಾ ಇದೀಗ ರಾಮ್ ಚರಣ್, ಜಾನ್ವಿ ಕಪೂರ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಮೊದಲ ಹಂತದ ಶೂಟಿಂಗ್‌ಗಾಗಿ ಮೈಸೂರಿಗೆ ರಾಮ್ ಚರಣ್ ಟೀಮ್ ಆಗಮಿಸಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಚಿತ್ರದ ನಿರ್ದೇಶಕ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ದೇವಿ ಸನ್ನಿಧಿಯ ಮುಂದೆ ಬುಚ್ಚಿಬಾಬು ನಿಂತಿರುವ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಬಹಳ ಮಹತ್ವದ ದಿನ, ನಿರೀಕ್ಷೆಯಿಂದ ಕಾಯುತ್ತಿದ್ದ ದಿನವಿದು. ಮೈಸೂರಿನ ತಾಯಿ ಆಶೀರ್ವಾದೊಂದಿಗೆ ದಿನ ಪ್ರಾರಂಭಿಸಿದ್ದೇನೆ. ನಿಮ್ಮ ಹಾರೈಕೆಯ ಅವಶ್ಯಕತೆಯಿದೆ ಎಂದು ನಿರ್ದೇಶಕ ಬುಚ್ಚಿಬಾಬು ಸನಾ ಬರೆದುಕೊಂಡಿದ್ದಾರೆ.

    ಇನ್ನೂ ಇದೇ ನ.25ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶಿವರಾಜ್‌ಕುಮಾರ್ (Shivarajkumar)  ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಿನ್ನೆಲೆ ಅವರು ಕೂಡ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರತಿಭಾವಂತರೇ ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಮೈಸೂರಿಗೆ ಬರಲಿದ್ದಾರೆ ರಾಮ್ ಚರಣ್, ಜಾನ್ವಿ ಕಪೂರ್- ಚಿತ್ರತಂಡಕ್ಕೆ ಸಾಥ್ ಕೊಡ್ತಾರಾ ಶಿವಣ್ಣ?

    ಮೈಸೂರಿಗೆ ಬರಲಿದ್ದಾರೆ ರಾಮ್ ಚರಣ್, ಜಾನ್ವಿ ಕಪೂರ್- ಚಿತ್ರತಂಡಕ್ಕೆ ಸಾಥ್ ಕೊಡ್ತಾರಾ ಶಿವಣ್ಣ?

    ಟಾಲಿವುಡ್ ನಟ ರಾಮ್ ಚರಣ್ (Ram Charan) ಮತ್ತು ಜಾನ್ವಿ ಕಪೂರ್ (Janhvi Kapoor) ಹೊಸ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದು, ಚಿತ್ರೀಕರಣಕ್ಕಾಗಿ ಮೈಸೂರಿಗೆ ಬರಲಿದ್ದಾರೆ. ಇವರೊಂದಿಗೆ ಕನ್ನಡದ ನಟ ಶಿವಣ್ಣ (Shivarajkumar) ಕೂಡ ಸಾಥ್ ನೀಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ‘ಉಪ್ಪೇನಾ’ ನಿರ್ದೇಶಕ ಬುಚ್ಚಿ ಬಾಬು ಅವರು ‘ಆರ್ ಸಿ 16’ ಚಿತ್ರಕ್ಕೆ (RC 16) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಜೊತೆ ಶಿವಣ್ಣ ಕೂಡ ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಅನ್ನು ನ.22ರಂದು ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. ಚಿತ್ರತಂಡಕ್ಕೆ ಶಿವಣ್ಣ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಮೈಸೂರಿನ ಕೆಲವು ಪುರಾತನ ಕಟ್ಟಡಗಳು ಹಾಗೂ ಮೈಸೂರಿನ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆಯಂತೆ.

    ಶಿವಣ್ಣ ಅವರು ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿ ನಂತರ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರತಂಡ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದೆ.

    ಅಂದಹಾಗೆ, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸ ಮುಗಿದಿದೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಸಿದ್ಧಾರ್ಥ್‌ ಮಲ್ಹೋತ್ರಾಗೆ ಜಾನ್ವಿ ಕಪೂರ್‌ ನಾಯಕಿ

    ಸಿದ್ಧಾರ್ಥ್‌ ಮಲ್ಹೋತ್ರಾಗೆ ಜಾನ್ವಿ ಕಪೂರ್‌ ನಾಯಕಿ

    ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಸಿನಿಮಾ ಕೆರಿಯರ್‌ನಲ್ಲಿ ಬಿಗ್ ಸಕ್ಸಸ್ ಸಿಗದೆ ಇದ್ರೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಿದ್ಧಾರ್ಥ್ ಮಲ್ಹೋತ್ರಾಗೆ (Siddarth Malhotra) ಜೋಡಿಯಾಗಿ ನಟಿಸಲು ಜಾನ್ವಿಗೆ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಪುಟ್ಟಕ್ಕನ ಮಕ್ಕಳು’ ಸ್ನೇಹಾ ಪಾತ್ರ ಅಂತ್ಯ- ಫ್ಯಾನ್ಸ್‌ಗೆ ಸಂದೇಶ ನೀಡಿದ ಸಂಜನಾ

    ಲವ್ ಕಮ್ ಕಾಮಿಡಿ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ಪರಮ ಸುಂದರಿ’ (Param Sundari) ಎಂಬ ಕ್ಯಾಚಿ ಟೈಟಲ್ ಅನ್ನು ಇಡಲಾಗಿದೆ. ಚಿತ್ರದಲ್ಲಿ ದೆಹಲಿಯ ಉದ್ಯಮಿ ಸಿದ್ಧಾರ್ಥ್ ಜೊತೆ ಕೇರಳದ ಹುಡುಗಿ ಜಾನ್ವಿಗೆ ಹೇಗೆ ಲವ್ ಆಗುತ್ತೆ, ಮುಂದೆ ಎನೆಲ್ಲಾ ತಿರುವು ಸಿಗಲಿದೆ ಅನ್ನೋದೆ ಚಿತ್ರದ ತಿರುಳಾಗಿದೆ.

    ಈ ಚಿತ್ರವನ್ನು ತುಷಾರ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಡಿಸೆಂಬರ್‌ನಿಂದ ‘ಪರಮ ಸುಂದರಿ’ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ಜಾನ್ವಿ ಮತ್ತು ಸಿದ್ಧಾರ್ಥ್ ಜೊತೆಯಾಗಿ ನಟಿಸುತ್ತಿರುವ ಕಾರಣ, ಚಿತ್ರದ ಕುರಿತು ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

    ‘ದೇವರ’ ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್- ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ

    ತೆಲುಗು ನಟ ಜ್ಯೂ.ಎನ್‌ಟಿಆರ್ (Jr.Ntr) ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಬರುತ್ತಿರುವ ‘ದೇವರ’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ದೇವರ’ (Devara Film) ರಿಲೀಸ್‌ಗೂ ಮುನ್ನವೇ ಮುಂಗಡ ಬುಕ್ಕಿಂಗ್ ಸೋಲ್ಡ್ ಆಗಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ

    ದೇಶಾದ್ಯಂತ ‘ದೇವರ’ ಚಿತ್ರ ಸೆ.27ರಂದು ರಿಲೀಸ್ ಆಗಲಿದೆ. ಮಿಡ್ ನೈಟ್ ಶೋ ನೋಡೋದ್ದಕ್ಕೂ ಫ್ಯಾನ್ಸ್‌ಗೆ ಅವಕಾಶವಿದೆ. ಹೈದರಾಬಾದ್, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವೆಡೆ 1,300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ದೇವರ’ ಚಿತ್ರ ತೆರೆಕಾಣುತ್ತಿದೆ. ರಿಲೀಸ್‌ಗೆ 4 ದಿನ ಬಾಕಿಯಿರುವಾಗಲೇ ಲಕ್ಷ ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ.  ಟಿಕೆಟ್ ದರ ಹೆಚ್ಚಾಗಿದ್ರೂ ಚಿತ್ರಕ್ಕೆ ಭಾರೀ ಬೇಡಿಕೆಯಿದೆ.

    ಅಂದಹಾಗೆ, ‘ದೇವರ’ ಟ್ರೈಲರ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ದ್ವಿಪಾತ್ರಗಳಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರೋದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ. ಹೇಡಿ ಮಗ ಇನ್ನೊಂದು ಕಡೆ ಹಿಂಸಾತ್ಮಕ ತಂದೆಯಾಗಿ ಬದಲಾಗಿದ್ದರ ಬಗ್ಗೆ ಟ್ರೈಲರ್‌ನಿಂದ ಚಿತ್ರದ ಕಥೆಯ ಸುಳಿವು ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ನಟನೆ ನೋಡುಗರಿಗೆ ಕಿಕ್ ಕೊಟ್ಟಿದೆ. ತಾರಕ್ ಮತ್ತು ಜಾನ್ವಿ ಕಾಂಬಿನೇಷನ್ ಝಲಕ್ ಸೊಗಸಾಗಿದೆ. ಒಟ್ನಲ್ಲಿ ರಿಲೀಸ್ ಆಗಿರುವ ‘ದೇವರ’ ಚಿತ್ರದ ಟ್ರೈಲರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ.

    ಡಬಲ್ ರೋಲ್‌ನಲ್ಲಿ ನಟಿಸಿರುವ ಜ್ಯೂ.ಎನ್‌ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ತಾರಕ್ ಮತ್ತು ಜಾನ್ವಿ ಕಪೂರ್ ಜೊತೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಅನೇಕರು ನಟಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • Devara Trailer: ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ ಜ್ಯೂ.ಎನ್‌ಟಿಆರ್‌, ಜಾನ್ವಿ ಕಪೂರ್‌

    Devara Trailer: ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ ಜ್ಯೂ.ಎನ್‌ಟಿಆರ್‌, ಜಾನ್ವಿ ಕಪೂರ್‌

    ಜ್ಯೂ.ಎನ್‌ಟಿಆರ್ (Jr.Ntr), ಜಾನ್ವಿ ಕಪೂರ್ (Janhvi Kapoor) ನಟನೆಯ ಬಹುನಿರೀಕ್ಷಿತ ‘ದೇವರ’ (Devara) ಸಿನಿಮಾದ ಟ್ರೈಲರ್ ಕನ್ನಡ ಸೇರಿ ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ರಕ್ತದಿಂದ ಸಮುದ್ರವೇ ಕೆಂಪಾದ ಕಥೆಯನ್ನು ಹೇಳೋಕೆ ತಾರಕ್ ಮತ್ತು ಜಾನ್ವಿ ಬರುತ್ತಿದ್ದಾರೆ.

    ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

     

    View this post on Instagram

     

    A post shared by Janhvi Kapoor (@janhvikapoor)

    ದ್ವಿಪಾತ್ರಗಳಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರೋದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ. ಹೇಡಿ ಮಗ ಇನ್ನೊಂದು ಕಡೆ ಹಿಂಸಾತ್ಮಕ ತಂದೆಯಾಗಿ ಬದಲಾಗಿದ್ದರ ಬಗ್ಗೆ ಟ್ರೈಲರ್‌ನಿಂದ ಚಿತ್ರದ ಕಥೆಯ ಸುಳಿವು ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ನಟನೆ ನೋಡುಗರಿಗೆ ಕಿಕ್ ಕೊಟ್ಟಿದೆ. ತಾರಕ್ ಮತ್ತು ಜಾನ್ವಿ ಕಾಂಬಿನೇಷನ್ ಝಲಕ್ ಸೊಗಸಾಗಿದೆ. ಒಟ್ನಲ್ಲಿ ರಿಲೀಸ್ ಆಗಿರುವ `ದೇವರ’ ಚಿತ್ರದ ಟ್ರೈಲರ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ.

    ಅಂದಹಾಗೆ, ಬಹುಭಾಷೆಗಳಲ್ಲಿ ‘ದೇವರ’ ಸಿನಿಮಾ ಸೆ.27ಕ್ಕೆ ರಿಲೀಸ್ ಆಗುತ್ತಿದೆ. ಡಬಲ್ ರೋಲ್‌ನಲ್ಲಿ ನಟಿಸಿರುವ ಜ್ಯೂ.ಎನ್‌ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ತಾರಕ್ ಮತ್ತು ಜಾನ್ವಿ ಕಪೂರ್ ಜೊತೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಅನೇಕರು ನಟಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • ಸೆ.10ರಂದು ರಿಲೀಸ್‌ ಆಗಲಿದೆ ಜ್ಯೂ.ಎನ್‌ಟಿಆರ್‌ ನಟನೆಯ ‘ದೇವರ’ ಚಿತ್ರದ ಟ್ರೈಲರ್‌

    ಸೆ.10ರಂದು ರಿಲೀಸ್‌ ಆಗಲಿದೆ ಜ್ಯೂ.ಎನ್‌ಟಿಆರ್‌ ನಟನೆಯ ‘ದೇವರ’ ಚಿತ್ರದ ಟ್ರೈಲರ್‌

    ಜ್ಯೂ.ಎನ್‌ಟಿಆರ್ (Jr.Ntr) ಅಭಿನಯದ ಬಹುನಿರೀಕ್ಷಿತ ‘ದೇವರ’ (Devara) ಸಿನಿಮಾ. ಇದೇ ಸೆ.27ಕ್ಕೆ ದೇಶದಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡೋಕೆ ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಸಿನಿಮಾ ರಿಲೀಸ್‌ಗೂ ಮುಂಚೆ ಟ್ರೈಲರ್ ರಿಲೀಸ್ ಮಾಡೋಕೆ ಡಿಫರೆಂಟ್ ಆಗಿ ಪ್ಲ್ಯಾನ್ ಕೂಡ ಮಾಡಿಕೊಂಡಿದೆಯಂತೆ ಸಿನಿಮಾತಂಡ. ಟ್ರೈಲರ್ ಲಾಂಚ್ ಇವೆಂಟ್‌ಗೆ ಸ್ಟಾರ್ ನಟ, ನಟಿಯರು ಹಾಗೂ ಡೈರೆಕ್ಟರ್‌ಗಳನ್ನ ಅತಿಥಿಯಾಗಿ ಕರೆಯುವುದಕ್ಕೂ ಮಾತುಕತೆ ನಡೆದಿದೆ. ಅದೆಲ್ಲದರ ವಿವರ ಇಲ್ಲಿದೆ.

    ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ತಾರಕ್‌ ಅವರು ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾರನ್ನ ಮೀಟ್ ಮಾಡಿದ್ದಾರೆ. ಇವರಿಗೂ ಸೆಪ್ಟಂಬರ್ 10ಕ್ಕೆ ನಡೆಯಲಿರುವ ‘ದೇವರ’ ಸಿನಿಮಾದ ಟ್ರೈಲರ್ ಲಾಂಚ್‌ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಬೋನಿ ಕಪೂರ್‌, ಶಾರುಖ್‌, ಸಲ್ಮಾನ್‌, ಅರ್ಜುನ್‌ ಕಪೂರ್ ಸೇರಿದಂತೆ ಹಲವರಿಗೆ ಚಿತ್ರತಂಡ ಆಹ್ವಾನ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ‌ಇನ್ನೂ ದೇವರ ಟ್ರೈಲರ್‌ ರಿಲೀಸ್‌ ಕೌಂಟ್‌ಡೌನ್‌ ಶುರುವಾಗಿದ್ದು, ಇದರ ಝಲಕ್‌ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ಇದನ್ನೂ ಓದಿ:15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    ಕೊರಟಾಲ ಶಿವ ನಿರ್ದೇಶನವಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವಿದೆ. ತಾರಕ್‌ಗೆ ಜೋಡಿಯಾಗಿ ಜಾಹ್ನವಿ ಕಪೂರ್ (Janhvi Kapoor) ಕಾಣಿಸಿಕೊಂಡಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಹಾಗೂ ಪ್ರಕಾಶ್ ರಾಜ್ ಕೂಡಾ ವಿಭಿನ್ನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸದ್ಯ ಟ್ರೈಲರ್ ಲಾಂಚ್ ಕಾರ್ಯಕ್ರಮದ ಕಡೆ ಗಮನಹರಿಸಿರುವ ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಚಿತ್ರವನ್ನ ರಿಲೀಸ್ ಮಾಡಲಿದೆ.

  • Devara: ಜ್ಯೂ.ಎನ್‌ಟಿಆರ್‌ ಜೊತೆ ಸೊಂಟ ಬಳುಕಿಸಿದ ಜಾನ್ವಿ ಕಪೂರ್

    Devara: ಜ್ಯೂ.ಎನ್‌ಟಿಆರ್‌ ಜೊತೆ ಸೊಂಟ ಬಳುಕಿಸಿದ ಜಾನ್ವಿ ಕಪೂರ್

    ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara) ಸಿನಿಮಾದ ಸಾಂಗ್ ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತಾರಕ್ ರಾಮ್ ಜೊತೆಯಾಗಿ ಜಾನ್ವಿ ಕಪೂರ್ ಸೊಂಟ ಬಳುಕಿಸಿರುವ ರೀತಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ‘ದೇವರ’ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ. ‘ದಾವೂದಿ’ ಎಂಬ ಸಾಂಗ್‌ಗೆ ಮಸ್ತ್ ಆಗಿರೋ ಹಾಡಿಗೆ ಜಬರ್‌ದಸ್ತ್ ಆಗಿ ತಾರಕ್ ಮತ್ತು ಜಾನ್ವಿ ಡ್ಯಾನ್ಸ್ ಮಾಡಿದ್ದಾರೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇಬ್ಬರ ಡ್ಯಾನ್ಸ್ ಧಮಾಕಾ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಎಷ್ಟು ಜನರ ಜೊತೆ ಮಲಗಿದ್ದೀ?- ಬಾಲಕನ ಅಸಭ್ಯ ಪ್ರಶ್ನೆಗೆ ಉರ್ಫಿ ಜಾವೇದ್ ಶಾಕ್

     

    View this post on Instagram

     

    A post shared by Janhvi Kapoor (@janhvikapoor)

    ಇನ್ನೂ ಇತ್ತೀಚೆಗೆ ‘ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಹುಡುಗನ ಹುರುಪು ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  • ‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

    ‘ದೇವರ’ ಚಿತ್ರದ ಪೋಸ್ಟರ್ ಔಟ್- ಎರಡು ವಿಭಿನ್ನ ಲುಕ್‌ನಲ್ಲಿ ಜ್ಯೂ.ಎನ್‌ಟಿಆರ್

    ತೆಲುಗು ನಟ ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara Film) ಸಿನಿಮಾದ ಹೊಸ ಪೋಸ್ಟರ್ ರಿವೀಲ್ ಆಗಿದೆ. ರಗಡ್ ಲುಕ್‌ನಲ್ಲಿ ಎರಡು ಡಿಫರೆಂಟ್ ಗೆಟಪ್‌ನಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ

    ‘ದಿ ಫೇಸಸ್ ಆಫ್ ಫಿಯರ್’ ಎಂದು ‘ದೇವರ’ ಸಿನಿಮಾದ ಪೋಸ್ಟರ್‌ನಲ್ಲಿ ಬರೆಯಲಾಗಿದ್ದು, ಜ್ಯೂ.ಎನ್‌ಟಿಆರ್ ಅವರ ಎರಡು ರೀತಿಯ ವಿಭಿನ್ನ ಲುಕ್ ನೋಡುಗರನ್ನು ಸೆಳೆಯುತ್ತಿದೆ. ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಅವರು ಕಾಣಿಸಿಕೊಳ್ತಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟು ಕೊಟ್ಟಿಲ್ಲ.

     

    View this post on Instagram

     

    A post shared by NTR Arts (@ntrartsoffl)

    ಇನ್ನೂ ಇತ್ತೀಚೆಗೆ ‌’ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಚಿತ್ರದ ಪೋಸ್ಟರ್ ಬಿಟ್ಟಿರೋದು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಜೊತೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

  • ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

    ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

    ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ (Devara Film) ಸಿನಿಮಾದ ರೊಮ್ಯಾಂಟಿಕ್ ಸಾಂಗ್ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಕಾತರಕ್ಕೆ ತೆರೆಬಿದ್ದಿದೆ. ‘ದೇವರ’ ಚಿತ್ರದ ಸಾಂಗ್ ರಿಲೀಸ್ ಆಗಿದೆ. ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಜಾನ್ವಿ (Janhvi Kapoor) ಕಪೂರ್ ಸಖತ್ ಆಗಿ ಸ್ಟೇಪ್ ಹಾಕಿದ್ದಾರೆ.

    ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಿದ್ದಾರೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

     

    View this post on Instagram

     

    A post shared by Janhvi Kapoor (@janhvikapoor)

    ಹಾಡಿನಲ್ಲಿ ಜಾನ್ವಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಎಂದೂ ಕಾಣಿಸಿಕೊಂಡಿದ ಲುಕ್‌ನಲ್ಲಿ ಮೋಡಿ ಮಾಡಿದ್ದಾರೆ. ತಾರಕ್ ಮತ್ತು ಕೆಮಿಸ್ಟ್ರಿ ಪಡ್ಡೆಹುಡುಗರ ಮನಸ್ಸು ಗೆದ್ದಿದೆ. ಸಾಂಗ್ ರಿಲೀಸ್ ಕೆಲವೇ ಹೊತ್ತಿನಲ್ಲಿ ಮಿಲಿಯನ್ ಗಟ್ಟಲೇ ವಿವ್ಸ್ ಪಡೆದಿದೆ. ಇದೇ ಸೆ.27ರಂದು ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇವರ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.