Tag: janhavi kapoor

  • ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್

    ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್

    ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಟಾಲಿವುಡ್ ಸಿನಿಮಾದತ್ತ ಬರುವ ಸೂಚನೆ ಕೂಡ ಕೊಟ್ಟಿದ್ದಾರೆ.ಸಂದರ್ಶನವೊಂದರಲ್ಲಿ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ.

    ಸದ್ಯ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತಮ್ಮ ಸಿನಿಮಾ ಕೆರಿಯರ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜತೆಗೆ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ. ತಾಯಿ ಶ್ರೀದೇವಿ ಅವರು ಕೂಡ ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿ ಮೆರೆದ ನಟಿಯಾಗಿದ್ದರು. ಇಂದಿಗೂ ಅವರ ನಟಿಸಿರುವ ಸಿನಿಮಾಗಳನ್ನ ನೋಡಿ ಫ್ಯಾನ್ಸ್ ಕಣ್ತುಂಬಿಕೊಳ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುವ ಇಚ್ಛೆಯ ಬಗ್ಗೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್ ಲೆಜೆಂಡರಿ ಆಕ್ಟರ್ ಅವರ ಜತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಕಥೆ ಚೆನ್ನಾಗಿದ್ದರೆ ದಕ್ಷಿಣದ ಸಿನಿಮಾಗಳಲ್ಲಿ ಮಿಂಚಲು ರೆಡಿ ಎಂದ ಸೂಚನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾಹ್ನವಿ ಕಪೂರ್‌

    ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾಹ್ನವಿ ಕಪೂರ್‌

    ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್‌ಗೆ ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಿರುವಾಗ ಶ್ರೀದೇವಿ ಪುತ್ರಿ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಭಿನ್ನ ಅವತಾರದ ಮೂಲಕ ಗಮನ ಸೆಳೆಯಲು ರೆಡಿಯಾಗಿದ್ದಾರೆ.

    ನಟಿ ಜಾಹ್ನವಿ 2018ರಲ್ಲಿ `ಧಡಕ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ರು. ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಕೊಡದೇ ಇದ್ರೂ ಅವಕಾಶಗಳಿಗೇನು ಕಮ್ಮಿಯಾಗಿಲ್ಲ. ಶ್ರೀದೇವಿ ಕಪೂರ್ ಅವರ ಪುತ್ರಿ ಎಂಬ ಕಾರಣಕ್ಕೆ ಈ ನಟಿಯ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಕೊಂಡಿದ್ದರು. ಸದ್ಯ ಜಾಹ್ನವಿ ಕಪೂರ್ ತೆಲುಗು ಚಿತ್ರರಂಗದತ್ತ ಬರಲು ಮನಸ್ಸು ಮಾಡಿದ್ದಾರಂತೆ.

    ಈ ಹಿಂದೆ `ಆರ್‌ಆರ್‌ಆರ್’ ಚಿತ್ರದಲ್ಲಿ ಆಲಿಯಾ ಭಟ್ ಮಾಡಿದ್ದ ಪಾತ್ರಕ್ಕೆ ಜಾಹ್ನವಿಯನ್ನು ಮೊದಲು ಕೇಳಲಾಗಿತ್ತಂತೆ, ಶ್ರೀದೇವಿ ಪುತ್ರಿ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ಆ ನಂತರ `ಆರ್‌ಆರ್‌ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಹಿಸ್ಟರಿ ಕ್ರಿಯೇಟ್ ಮಾಡತ್ತು. ಹಾಗಾಗಿ ಟಾಲಿವುಡ್‌ನತ್ತ ಬರಲು ಜಾಹ್ನವಿ ಕಪೂರ್ ನಿರ್ಧರಿಸಿದ್ದಾರೆ. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

    ಇತ್ತೀಚೆಗೆ ಜಾಹ್ನವಿ ನಟನೆಯ ಸಿನಿಮಾ ಪ್ರಚಾರದಲ್ಲಿ ತಂದೆ ಬೋನಿ ಕಪೂರ್ ಕೂಡ ಒಳ್ಳೆಯ ಕಥೆ, ಪಾತ್ರ ಬಂದರೆ ಜಾಹ್ನವಿ ಸೌತ್ ಸಿನಿಮಾಗಳಲ್ಲಿ ನಟಿಸಲು ಸಿದ್ಧ ಅಂದಿದ್ದಾರೆ. ಒಟ್ನಲ್ಲಿ ಸಿನಿರಂಗದಲ್ಲಿ ಯಶಸ್ಸಿಗಾಗಿ ಕಾಯ್ತಿರೋ ಶ್ರೀದೇವಿ ಪುತ್ರಿಗೆ ಟಾಲಿವುಡ್‌ನಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

    Live Tv

  • ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಬಾಲಿವುಡ್ ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ನಟಿ ಜಾನ್ವಿ, ಈಗ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿರೋ ಅಭಿಮಾನಿಗಳು, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    `ದಡಕ್’ ಚಿತ್ರದ ಮೂಲಕ ಬಿಟೌನ್‌ಗೆ ಲಗ್ಗೆಯಿಟ್ಟ ನಟಿ ಜಾನ್ವಿ ಕಪೂರ್, ಮೊದಲ ಚಿತ್ರದಲ್ಲೇ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು. ಇನ್ನು ಖ್ಯಾತ ನಟಿ ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅನೇಕರಿಗೆ ಜಾನ್ವಿ ಅಚ್ಚುಮೆಚ್ಚು. ಶ್ರೀದೇವಿ ನಿಧನದ ನಂತರ ಜಾನ್ವಿ ಅವರಲ್ಲಿ ಶ್ರೀದೇವಿ ಅವರನ್ನು ಕಾಣುತ್ತಿದ್ದಾರೆ. ಆದರೆ ಜಾನ್ವಿ ನಟನೆಯಲ್ಲಿ ಇನ್ನೂ ಪಳಗಬೇಕಾಗಿದೆ. ಆದರೆ ಡ್ಯಾನ್ಸ್‌ನಲ್ಲಿ ಪಳಗಿದ್ದಾರೆ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ. ಇದೀಗ ಜಾನ್ವಿ ಹಂಚಿಕೊಂಡಿರೋ ಡ್ಯಾನ್ಸ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಬಾಲಿವುಡ್ ನಟಿ ರೇಖಾ ಅವರು ಹೆಜ್ಜೆ ಹಾಕಿದ್ದ `ಆಂಕೋ ಕೋ ಮಸ್ತಿ’ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಏ.29 ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ಶೇರ್ ಮಾಡಬೇಕಿದ್ದ ವಿಡಿಯೋ ಇದೀಗ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಟ್ಯಾಲೆಂಟ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜಾನ್ವಿ ಡ್ಯಾನ್ಸ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌ಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

    ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಪ್ರಯತ್ನಿಸಿದ್ದ ಬೈರಕೀ ಭಾವ. ಎಲ್ಲರಿಗೂ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯ. ಎರಡು ದಿನ ತಡವಾಗಿ ಹೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. `ಆಂಕೋ ಕೋ ಮಸ್ತಿ’ ಹಾಡಿಗೆ ಕುಳಿತೇ ಡ್ಯಾನ್ಸ್ ಮಾಡಿದ್ದಾರೆ. ಜಾನು ಡ್ಯಾನ್ಸ್ ನೋಡಿ ಪಡ್ಡೆ ಹುಡುಗರು ದಿಲ್‌ಖುಷ್ ಆಗಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುವಾಗಲೇ ಸೂಪರ್ ಸ್ಟಾರ್: ನಟ ಶಿವಣ್ಣ ಭಾವನ್ಮಾತಕ ಮಾತು

     

    View this post on Instagram

     

    A post shared by Janhvi Kapoor (@janhvikapoor)

    ಇನ್ನು ಸಿನಿಮಾಗಳ ವಿಚಾರಕ್ಕೆ ಬರೋದಾದರೆ ನಟಿ ಜಾನ್ವಿ ಅಕೌಂಟ್‌ನಲ್ಲಿ `ಗುಡ್ ಲಕ್ ಜೆರ್ರಿ’, `ಮಿಲಿ’, `ಬವಾಲ್’, ಮತ್ತು `ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಚಿತ್ರಗಳು ಕೈಯಲ್ಲಿವೆ. ಜಾನ್ವಿ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್!

    ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್!

    ಮುಂಬೈ: ಇತ್ತೀಚೆಗಷ್ಟೇ 39 ಕೋಟಿ ಮೌಲ್ಯದ ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ಖರೀದಿಸಿ ಭಾರೀ ಸುದ್ದಿಯಾಗಿದ್ದ ನಟಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಹೌದು. ಈಗಾಗಲೇ ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಜಾಹ್ನವಿ ಇದೀಗ ಬೆಲ್ಲಿ ಡ್ಯಾನ್ಸ್ ಮಾಡಿರುವ ಮೂಲಕ ಸುದ್ದಿಯಾಗಿದ್ದಾರೆ. ನಟಿ ಕರೀನಾ ಕಪೂರ್ ಅಭಿನಯದ ಅಶೋಕ ಸಿನಿಮಾದ ಸನ್.. ಸನನ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಅದರ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬಿಳಿ ಬಣ್ಣದ ಪೈಜಾಮಾ ಹಾಗೂ ಕ್ರಾಪ್ ಟಾಪ್ ಧರಿಸಿ ಜಾಹ್ನವಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಜಾಹ್ನವಿ ಈ ಡ್ಯಾನ್ಸ್ ಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ಜಾಹ್ನವಿ ತಾಯಿ ಶ್ರೀದೇವಿ ಅವರು ಅಧ್ಬುತ ನೃತ್ಯಗಾರ್ತಿ ಎಂಬ ವಿಚಾರ ಎಲ್ಲರಿಗೂ ತಿಳೀದಿದೆ. ಇದೀಗ ಮಗಳು ಕೂಡ ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಜಾಹ್ನವಿ ನೃತ್ಯ ಮಾಡಿ ಸೈ ಎನಿಸಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)