Tag: janhavi kapoor

  • ಸೌತ್ ಚಿತ್ರದಲ್ಲಿ ನಟಿಸಲು ರಶ್ಮಿಕಾಗಿಂತ ಅತೀ ಹೆಚ್ಚು ಸಂಭಾವನೆಗೆ ಬೇಡಿಕೆಯಿಟ್ಟ ಜಾನ್ವಿ ಕಪೂರ್

    ಸೌತ್ ಚಿತ್ರದಲ್ಲಿ ನಟಿಸಲು ರಶ್ಮಿಕಾಗಿಂತ ಅತೀ ಹೆಚ್ಚು ಸಂಭಾವನೆಗೆ ಬೇಡಿಕೆಯಿಟ್ಟ ಜಾನ್ವಿ ಕಪೂರ್

    ಬಾಲಿವುಡ್ (Bollywood) ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ದಕ್ಷಿಣದ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಹೀಗಿರುವಾಗ ಸೌತ್ ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಭಾರೀ ಸಂಭಾವನೆ ಕೇಳಿದ್ದಾರೆ. ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದು ಜಾನ್ವಿ ಕಪೂರ್ ಅತೀ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಒಂದೇ ಒಂದು ಹಿಟ್ ಸಿನಿಮಾ ಕೊಡದೇ ಇದ್ದರು ಕೂಡ ಶ್ರೀದೇವಿ (Actress Sridevi) ಪುತ್ರಿ ಜಾನ್ವಿಗೆ ಭಾರಿ ಬೇಡಿಕೆಯಿದೆ. ಇದೀಗ ಜ್ಯೂನಿಯರ್ ಎನ್‌ಟಿಆರ್‌ಗೆ 9Jr.ntr) ನಾಯಕಿಯಾಗುವ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡ್ತಿರುವ ಜಾನ್ವಿ, ದುಬಾರಿ ಸಂಭಾವನೆ ಕೇಳಿ ಎಲ್ಲರ ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಇನ್ನೂ `ಪುಷ್ಪ’ ಮತ್ತು `ಸೀತಾ ರಾಮಂ’ (Seetharamam) ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದ ರಶ್ಮಿಕಾ, ಮೃಣಾಲ್ ಠಾಕೂರ್‌ಗಿಂತ ಅಧಿಕ ಸಂಭಾವನೆಯನ್ನ ನಟಿ ಜಾನ್ವಿ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ʻಪುಷ್ಪʼ (Pushpa Film) ಸಕ್ಸಸ್‌ ನಂತರ ರಶ್ಮಿಕಾ ಮಂದಣ್ಣ (Rashmika Mandanna) 5 ಕೋಟಿಗಿಂತ ಅಧಿಕ ಸಂಭಾವನೆಯನ್ನ ತಮ್ಮ ಮುಂಬರುವ ಚಿತ್ರಗಳಿಗೆ ಪಡೆಯುತ್ತಿದ್ದಾರೆ. ಹೀಗಿರುವಾಗ ರಶ್ಮಿಕಾಗಿಂತ ಭಾರಿ ಸಂಭಾವನೆಗೆ ಜಾನ್ವಿ ಡಿಮ್ಯಾಂಡ್‌ ಮಾಡಿದ್ದಾರಂತೆ. ಈ ಸುದ್ದಿ ಕೇಳಿ ಸಿನಿಪಂಡಿತರು ಶಾಕ್ ಆಗಿದ್ದಾರೆ.

    ಇನ್ನೂ ಮಹಾನ್ ನಟಿ ಶ್ರೀದೇವಿ ಬಹುಭಾಷಾ ನಟಿಯಾಗಿ ಜನಮನ ಗೆದ್ದಿದ್ದರು. ಇದೀಗ ಅಮ್ಮನ ಹಾದಿಯಲ್ಲಿ ಜಾನ್ವಿ ಕಪೂರ್ ಹೆಜ್ಜೆ ಇಡ್ತಿದ್ದಾರೆ. ಬಾಲಿವುಡ್‌ನಿಂದ ಸೌತ್‌ನತ್ತ ನಟಿ ಮುಖ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕಾಂತಾರ’ ಹೀರೋ ರಿಷಬ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್

    `ಕಾಂತಾರ’ ಹೀರೋ ರಿಷಬ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ ಜಾನ್ವಿ ಕಪೂರ್

    `ಕಾಂತಾರ’ (Kantara) ಸೂಪರ್ ಸ್ಟಾರ್ ರಿಷಬ್ ಶೆಟ್ಟಿಗೆ ದೇಶದ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ಕಾಂತಾರ ಸಿನಿಮಾದಲ್ಲಿನ ರಿಷಬ್ ನಿರ್ದೇಶನ, ನಟನೆ ನೋಡಿ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಅನೇಕ ಸ್ಟಾರ್ ನಟ-ನಟಿಯರು ರಿಷಬ್ ಶೆಟ್ಟಿ (Rishab Shetty) ಜೊತೆ ಸಿನಿಮಾ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಅನೇಕರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಜಾನ್ವಿ ಕಪೂರ್ ರಿಷಬ್ ಜೊತೆ ಸಿನಿಮಾ ಮಾಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಸ್ಟಾರ್ ನಟಿ ಜಾನ್ವಿ ಕಪೂರ್ (Janhavi Kapoor) ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಜಾನ್ವಿ ರಿಷಬ್ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿರುವ ಜಾನ್ವಿ ಕಪೂರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ತುಂಬಾ ಇಷ್ಟಪಡುತ್ತೇನೆ. `ಕಾಂತಾರ’ ಕೊನೆಯ 30 ನಿಮಿಷಗಳು ಅವರು ಏನು ಮಾಡಿದ್ದಾರೆ ಎಂಬುದು ಸಿನಿಮಾನೇ ತೋರಿಸಿ ಕೊಟ್ಟಿದೆ. ಕಾಂತಾರ ತುಂಬಾ ವಿಭಿನ್ನವಾಗಿದೆ. ಆ ಸ್ಥಳ, ಸಮುದಾಯ, ಧಾರ್ಮಿಕ ಪದ್ಧತಿ, ಪ್ರತಿಯೊಬ್ಬರೂ ರಿಲೇಟ್ ಆಗಲು ಸಾಧ್ಯವಾಯಿತು. ಏಕೆಂದರೆ ತಮ್ಮ ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ನಿಖರವಾಗಿ ಚಿತ್ರಸಿದ್ದಾರೆ ಎಂದು ಹೇಳಿದ್ದಾರೆ.

    ರಿಷಬ್ ಮಾತ್ರವಲ್ಲದೇ ಜಾನ್ವಿ ಸೌತ್ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸೌತ್ ಕನೆಕ್ಷನ್ ಹೊಂದಿರುವ ನಟಿ ಜಾನ್ವಿ ಹೆಚ್ಚಾಗಿ ಹೈದರಾಬಾದ್‌ನಲ್ಲಿ ಇರುತ್ತಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಾಗಿ ಹೇಳಿದ ಜಾನ್ವಿ ತೆಲುಗು ಸ್ಟಾರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ನಟ ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಜೊತೆ ನಟಿಸಬೇಕೆಂದು ಹೇಳಿದ್ದಾರೆ. ಈ ವೇಳೆ ನಟ ರಿಷಬ್ ಶೆಟ್ಟಿ ಜೊತೆಯೂ ಕೆಲಸ ಮಾಡಬೇಕೆಂದು ಜಾನ್ವಿ ಕಪೂರ್ ಬಹಿರಂಗ ಪಡಿಸಿದ್ದಾರೆ.

    ಕಾಂತಾರ ಸಿನಿಮಾ ಸಕ್ಸಸ್‌ ನಂತರ ಇದೀಗ ಬಿಟೌನ್‌ ಸ್ಟಾರ್ಸ್‌ ಕನ್ನಡ ಚಿತ್ರರಂಗದತ್ತ ಬರುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ನಲ್ಲಿ ಫ್ಲಾಪ್: ಸೌತ್‌ನತ್ತ ಮುಖ ಮಾಡಿದ ಜಾನ್ವಿ ಕಪೂರ್

    ಬಾಲಿವುಡ್‌ನಲ್ಲಿ ಫ್ಲಾಪ್: ಸೌತ್‌ನತ್ತ ಮುಖ ಮಾಡಿದ ಜಾನ್ವಿ ಕಪೂರ್

    ಬಾಲಿವುಡ್‌ನ (Bollywood)  ಸ್ಟಾರ್ ನಟಿ ಶ್ರೀದೇವಿ (Sridevi kpoor) ಅವರ ಪುತ್ರಿ ಜಾನ್ವಿ ಕಪೂರ್ ಸೌತ್ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗಿ ನಟಿಸಲು ಜಾನ್ವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    `ದಢಕ್’ (Dhadak) ಸಿನಿಮಾದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ (Janhavi Kapoor) ಹಲವು ಬಗೆಯ ಪಾತ್ರಗಳ ಮೂಲಕ ಕಾಣಿಸಿಕೊಂಡರು. ನಟಿ ಶ್ರೀದೇವಿ ಕೂಡ ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿದ್ದರು. ಈಗ ಅಮ್ಮನ ಹಾದಿಯನ್ನೇ ಜಾನ್ವಿ ಕೂಡ ಫಾಲೋವ್ ಮಾಡ್ತಿದ್ದಾರೆ. ಸೌತ್ ರಂಗದತ್ತ ನಟಿ ಮುಖ ಮಾಡ್ತಿದ್ದಾರೆ. ಇದನ್ನೂ ಓದಿ: ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    `ಎನ್‌ಟಿಆರ್ 30′ (Ntr 30) ಚಿತ್ರಕ್ಕೆ ಜಾನ್ವಿ ಕಪೂರ್ (Janhavi Kapoor) ನಾಯಕಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಕಷ್ಟು ಸಂದರ್ಶನಗಳಲ್ಲಿ ಜಾನ್ವಿ ತೆಲುಗಿನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಜ್ಯೂನಿಯರ್ ಎನ್‌ಟಿಆರ್ ನಟನೆ ಅಂದ್ರೆ ಇಷ್ಟ ಎಂದು ಕೂಡ ಹೇಳಿದ್ದರು. ಈ ಎಲ್ಲಾ ವಿಚಾರಗಳು ಇದೀಗ ಸದ್ದು ಮಾಡುತ್ತಿದೆ. ಕೊರಟಾಲ ಶಿವ (Kortala Shiva)  ನಿರ್ದೇಶನದ ಸಿನಿಮಾದಲ್ಲಿ ತಾರಕ್‌ಗೆ ಜಾನ್ವಿ ನಾಯಕಿ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

    ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಕೂಡ ಸೌತ್ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಾಲಿವುಡ್‌ನಲ್ಲಿ ಅಷ್ಟೇನು ಸಕ್ಸಸ್ ಕಾಣದ ನಟಿ ತೆಲುಗು ರಂಗದಲ್ಲಿ ನಾಯಕಿಯಾಗಿ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಜಾನ್ವಿ

    ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಜಾನ್ವಿ

    ಬಾಲಿವುಡ್ (Bollywood) ನಟಿ ಜಾನ್ವಿ ಕಪೂರ್ (Janhavi Kapoor) ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗ ಶಿಖರ್ ಪಹಾರಿಯಾ (Shikhar Pahariya) ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಮಾಜಿ ಗಳೆಯನ ಜೊತೆ ನಟಿ ವೆಕೇಷನ್ಸ್ ಎಂಜಾಯ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.

    ಇತ್ತೀಚೆಗೆ ನಟಿ ಜಾನ್ವಿ ಮಾಲ್ಡೀವ್ಸ್‌ನಲ್ಲಿ (Maldivas) ಕಳೆದ ತಮ್ಮ ಬೋಲ್ಡ್ ಫೋಟೋಗಳನ್ನ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದರು. ಈಗ ನಟಿಯ ಬಗ್ಗೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗ ಶಿಖರ್ ಜೊತೆ ನಟಿ ಡೇಟ್ ಮಾಡ್ತಿದ್ದಾರೆ. ಇಬ್ಬರು ಮಾಲ್ಡೀವ್ಸ್‌ನ ಫೋಟೋ ಶೇರ್ ಮಾಡಿರುವುದ್ದಕ್ಕೆ ಈ ಅನುಮಾನ ಮೂಡಲು ಕಾರಣವಾಗಿದೆ. ಇದನ್ನೂ ಓದಿ: ರಿಷಬ್ ಮಗನಿಗೆ ಕೂಸುಮರಿ ಮಾಡಿದ ʻಕಾಂತಾರʼ ನಟಿ ಸಪ್ತಮಿ

    ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್. ಈ ಮೊದಲು ಜಾನ್ವಿ ಮತ್ತು ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಬಳಿಕ ಬ್ರೇಕಪ್ ಮಾಡಿಕೊಂಡು ದೂರ ಆಗಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ, ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಚುಮು ಚುಮು ಚಳಿಗೆ ಜಾನ್ವಿಯ ಹಸಿಬಿಸಿ ಫೋಟೋಸ್

    ಚುಮು ಚುಮು ಚಳಿಗೆ ಜಾನ್ವಿಯ ಹಸಿಬಿಸಿ ಫೋಟೋಸ್

    ಬಾಲಿವುಡ್ (Bollywood) ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಸೌಂಡ್ ಮಾಡುತ್ತಿರುತ್ತಾರೆ. ಈಗ ನಟಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೂಲ್ ಆಗಿರುವ ಪ್ರದೇಶದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸದ್ದು ಮಾಡ್ತಿದೆ.

     

    View this post on Instagram

     

    A post shared by Janhvi Kapoor (@janhvikapoor)

    ನಟಿ ಜಾನ್ವಿ ಬಾಲಿವುಡ್ ಸಿನಿಮಾಗಳ ಜೊತೆ ಸೌತ್‌ನತ್ತ ಬರಲಿದ್ದಾರೆ ಎಂದು ಇತ್ತೀಚೆಗೆ ಸಖತ್ ಸುದ್ದಿಯಾಗಿದ್ದರು. ಸದ್ಯ ಸಿನಿಮಾ ಶೂಟಿಂಗ್ ಎಲ್ಲದಕ್ಕೂ ಬ್ರೇಕ್ ಹಾಕಿ, ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಪ್ರವಾಸಿಗರ ತಾಣ ಮಾಲ್ಡೀವ್ಸ್‌ನಲ್ಲಿ ಚುಮು ಚುಮು ಚಳಿಗೆ ಸಖತ್ ಹಾಟ್ ಆಗಿ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಜಾನ್ವಿ ಅವತಾರ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

     

    View this post on Instagram

     

    A post shared by Janhvi Kapoor (@janhvikapoor)

    ಶ್ರೀದೇವಿ ಪುತ್ರಿ ಹಾಟ್‌ನೆಸ್ ನೋಡಿ ಪಡ್ಡೆಹುಡುಗರು ಖುಷಿಪಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಾನ್ವಿ ಶೇರ್ ಮಾಡಿರುವ ಬಿಕಿನಿ ಫೋಟೋ ಪಡ್ಡೆಹೈಕ್ಳ ಹಾರ್ಟಿಗೆ ಲಗ್ಗೆ ಇಟ್ಟಂತಾಗಿದೆ. ಒಟ್ನಲ್ಲಿ ನಟಿಯ ಫೋಟೋ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್

    ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್

    ಬಾಲಿವುಡ್‌ನ(Bollywood) ಸುಂದರಿ ಜಾಹ್ನವಿ ಕಪೂರ್ (Janhvi Kapoor) ಮತ್ತೆ ಸುದ್ದಿಯಲ್ಲಿದ್ದಾರೆ. ಟ್ರೋಲಿಗರ ವಿರುದ್ಧ ಫುಲ್ ಗರಂ ಆಗಿದ್ದಾರೆ. ತಾವು ಏನೇ ಮಾಡಿದ್ರು ನೆಗೆಟಿವ್ ಟ್ರೋಲ್ ಮಾಡುವವರಿಗೆ ನಟಿ ಜಾಹ್ನವಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಹಜ ನಟನೆಯ ಮೂಲಕ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ಶ್ರೀದೇವಿ (Sridevi Kapoor) ಪುತ್ರಿ ಜಾಹ್ನವಿ ಕಪೂರ್ ಇದೀಗ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ವಿಚಾರ ಗೊತ್ತೆ ಇದೆ. ಇತ್ತೀಚೆಗೆ ಜಾಹ್ನಿವಿ ಕಪೂರ್ ಎಲ್ಲಿಯೇ ಹೋದರು, ಏನೇ ಮಾಡಿದ್ದರು ಟ್ರೋಲ್ ಮಾಡೋದ್ದಕ್ಕೆ ಶುರು ಮಾಡಿದ್ದಾರೆ. ಇದರಿಂದ ಬೇಸರವಾಗಿರುವ ನಟಿ ಇದೀಗ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ನಾನು ಚಿತ್ರೀಕರಣದಲ್ಲಿ ಎಷ್ಟು ಕಷ್ಟ ಪಡುತ್ತೀನಿ ಎಂದು ನನ್ನ ರಕ್ತದಿಂದ ಬೇಕಿದ್ದರೆ ಬರೆದು ಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನ ಬೇಡ ಯಾರು ಅನುಮಾನ ಪಡುವ ಅಗತ್ಯವಿಲ್ಲ. ನನಗೆ ಒಂದೇ ವಿಷಯವನ್ನು ಪದೇ ಪದೇ ಹೇಳುವುದು ಬೇಸರ ತರುತ್ತದೆ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಈಗಷ್ಟೆ ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದೇನೆ ಎನ್ನುವುದು ಗೊತ್ತಿದೆ ಅಂದ್ಮೇಲೆ ಯಾಕೆ ಸ್ಟಾರ್ ಕಿಡ್ ಅಂತ ಹೇಳಿ ಅವಕಾಶ ಕಿತ್ತುಕೊಳ್ಳುತ್ತಿರುವುದು ಎಂದು ಜಾಹ್ನವಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ನಮ್ಮ ತಾಯಿಗೆ ಇರುವ ಸ್ಟಾರ್ ಡಮ್ ನೋಡಿ ನಾನು ಹೇಗೆ ಸುಮ್ಮನಿರಲು ಸಾಧ್ಯ, ನಾನು ಸಾಧನೆ ಮಾಡಬೇಕು ಅನ್ನೋ ಯೋಚನೆ ಪದೇ ಪದೇ ಬರುತ್ತದೆ. ಅಮ್ಮ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಾಗ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗ ನಾನು ಇರಲಿಲ್ಲ. ಅವರು ನಟಿಸುವುದನ್ನು ನಿಲ್ಲಿಸಿದ ಮೇಲೆ ನಾನು ಹುಟ್ಟಿದ್ದು. ಅಮ್ಮ ಸಿನಿಮಾ ಮಾಡುವಾಗ, ಪರ್ಫಾರ್ಮೆನ್ಸ್ ಕೊಡುವಾಗ ಅಥವಾ ಸೆಟ್‌ನಲ್ಲಿ ಇದ್ದಾಗ ಮಾತನಾಡುತ್ತಿದ್ದ ವಿಧಾನ, ತಂಡಕ್ಕೆ ನೀಡುತ್ತಿದ್ದ ಸಹಕಾರದ ಬಗ್ಗೆ ಬಹಳ ಜನರು ಹೇಳಿದನ್ನು ನಾನು ಕೇಳಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿರುವೆ ಎಂದು ನಟಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವಿನ ಅಂಚಿಗೆ ತಲುಪಿದ್ದರ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಸಾರಾ- ಜಾನ್ವಿ ಕಪೂರ್

    ಸಾವಿನ ಅಂಚಿಗೆ ತಲುಪಿದ್ದರ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ಸಾರಾ- ಜಾನ್ವಿ ಕಪೂರ್

    ಟಿ ಸಾರಾ ಆಲಿ ಖಾನ್ (Sara Ali Khan) ಮತ್ತು ಜಾನ್ವಿ ಕಪೂರ್ (Janhavi Kapoor) ಬಿಟೌನ್‌ನ ಸಾಲು ಸಾಲು ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇದರನಾಥಗೆ ಭೇಟಿ ಕೊಟ್ಟಾಗ ನಡೆದ ಆತಂಕಕಾರಿ ವಿಚಾರವೊಂದನ್ನ `ಕಾಫಿ ವಿತ್ ಕರಣ್’ (Coffe With Karan) ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ.

    ಬಾಲಿವುಡ್‌ನ ಸೆಲೆಬ್ರಿಟಿ ಕಿಡ್ಸ್‌ಗಳಾದ ಸಾರಾ ಮತ್ತು ಜಾನ್ವಿ ಕಪೂರ್ ಬಾಲ್ಯದಿಂದ ಸ್ನೇಹಿತರು. ಇಂದಿಗೂ ಅಷ್ಟೇ ಒಳ್ಳೆಯ ಬಾಂದವ್ಯವನ್ನಿಟ್ಟುಕೊಂಡು ಚಿತ್ರರಂಗದಲ್ಲಿ ಸಾರಾ ಮತ್ತು ಜಾನ್ವಿ ಕಮಾಲ್ ಮಾಡ್ತಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಬಂದಿದ್ದ ಸಾರಾ, ಜಾನ್ವಿ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ಕೇದರನಾಥ್‌ಗೆ ಹೋದಾಗ ಸಾವಿನ ಅಂಚಿಗೆ ತಲುಪಿದ್ದ ಅಚ್ಚರಿಯ ವಿಷ್ಯವನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು

    ಕೇದರನಾಥ್‌ಗೆ ಭೇಟಿ ಕೊಟ್ಟ ವೇಳೆಯಲ್ಲಿ ಪಾದಾಯಾತ್ರೆ ಮಾಡಲು ನಾವು ನಿರ್ಧರಿಸಿದ್ದೆವು. ಈ ವೇಳೆ ಬಂಡೆಯ ಮೇಲೆ ನಾವು ಹತ್ತಿದ್ದೆವು. ಬಂಡೆಗಳನ್ನು ಹತ್ತುವಾಗ ಸಿಲುಕಿಕೊಂಡಿದ್ದೆವು. ಅಂದು ಸಾವಿನ ಅಂಚಿಗೆ ಬಂದ ಪರಿಚಯ ನಮಗೆ ಆಗಿತ್ತು. ನಂತರ ಸಾರಾ, ಚಾಲಕ ಇದನ್ನೇಲ್ಲ ಗಮನಿಸಿ ಇತರರ ಸಹಾಯದಿಂದ ರಕ್ಷಿಸಿದ ವಿಚಾರವನ್ನ ಸಾರಾ ಮತ್ತು ಜಾನ್ವಿ ಶೋನಲ್ಲಿ ರಿವೀಲ್ ಮಾಡಿದ್ದಾರೆ.

    ಇನ್ನೂ ಸಾರಾ, ವಿಕ್ಕಿ ಕೌಶಲ್‌ಗೆ (Vicky Kaushal) ಜೋಡಿಯಾಗಿ ನಟಿಸುತ್ತಿದ್ದಾರೆ. ನಟ ರಾಜ್‌ಕುಮಾರ್ ರಾವ್ (Rajkumar Rao) ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಕ್ಸ್‌ಬಾಯ್‌ಫ್ರೆಂಡ್‌ಗೆ ಮತ್ತೆ ಲವ್ ಯೂ ಎಂದ ಜಾನ್ವಿ ಕಪೂರ್

    ಎಕ್ಸ್‌ಬಾಯ್‌ಫ್ರೆಂಡ್‌ಗೆ ಮತ್ತೆ ಲವ್ ಯೂ ಎಂದ ಜಾನ್ವಿ ಕಪೂರ್

    `ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿಯೇ ಜಾನ್ವಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ತನ್ನ ಹಳೆಯ ಬಾಯ್‌ಫ್ರೆಂಡ್‌ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ಲವ್ ಯೂ ಎಂದಿರುವ ವಿಷ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಬಿಟೌನ್‌ನಲ್ಲಿ ಜಾನ್ವಿ ಕಪೂರ್ ಅವರ ಪ್ರೇಮ ಪುರಾಣ ಇದೀಗ ಭಾರೀ ಚರ್ಚೆಯಾಗುತ್ತಿದೆ. ಅಕ್ಷತ್ ರಾಜನ್ ಮತ್ತು ಜಾನ್ವಿ ಕಪೂರ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರು ಬಾಲ್ಯದ ಸ್ನೇಹಿತರು, ಸಾಕಷ್ಟು ಸಮಯದಿಂದ ಡೇಟಿಂಗ್‌ನಲ್ಲಿದ್ದರು. ನಂತರ ಬ್ರೇಕಪ್ ಆಗಿತ್ತು. ಈಗ ಮತ್ತೆ ಇವರಿಬ್ಬರೂ ಜೊತೆಯಾಗಿದ್ದಾರೆ. ಎಕ್ಸ್‌ಬಾಯ್‌ಫ್ರೆಂಡ್‌ಗೆ ಜಾನ್ವಿ ಮತ್ತೆ ಲವ್ ಯೂ ಎಂದಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ಅಕ್ಷತ್ ರಾಜನ್ ಕೇಕ್ ಮಾಡುತ್ತಿದ್ದಾರೆ ಈ ವೇಳೆ ಜಾನ್ವಿ ಕಪೂರ್ ಕೂಡ ಇದ್ದಾರೆ. ನನ್ನ ಹೃದಯವೇ ನಿನಗೆ ಹುಟ್ಟುಹಬ್ಬದ ಶುಭಾಶಯ. ನಿನಗೆ ಒಂದು ಮುತ್ತು, ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹಾರೈಸಿ, ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಸ್ಟೇಟಸ್‌ಗೆ ಪ್ರತಿಕ್ರಿಯಿಸಿ, ಅಕ್ಷತ್ ಲವ್ ಯೂ ಟು ಅಂತಾ ಹೇಳಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ಕಿರುತೆರೆ ನಟಿ ಸ್ವಪ್ನಾ ಪತಿಗೆ ಕೆಲಸ ಕೊಡಿಸಿದ ಗೋಲ್ಡನ್ ಸ್ಟಾರ್ ಗಣೇಶ್

    ಇನ್ನೂ ಬ್ರೇಕಪ್ ಆಗಿದ್ದ ಜಾನ್ವಿ ಲವ್ ಸ್ಟೋರಿ ಮತ್ತೆ ಪ್ಯಾಚ್ ಅಪ್ ಆಯ್ತಾ? ಇವರಿಬ್ಬರ ಮಧ್ಯೆ ಗೆಳೆತನ ಇದೆಯಾ ಅಥವಾ ಪ್ರೀತಿ ಇದ್ಯಾ ಎಂಬ ಗೊಂದಲ ಇದೀಗ ಅಭಿಮಾನಿಗಳನ್ನ ಕಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ಜಾನ್ವಿ ಕಪೂರ್

    ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ಜಾನ್ವಿ ಕಪೂರ್

    ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ, ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಸದಾ ಮಾಡರ್ನ್ ಲುಕ್ ಮಿಂಚಿದ್ದ ನಟಿ ಈಗ ತೆಲುಗು ಹುಡುಗಿಯಂತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದಕ್ಷಿಣ ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಚಿತ್ರೀಕರಣ ಬ್ರೇಕ್ ನೀಡಿ,ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿ ಕಂಗೊಳಿಸುತ್ತಿದ್ದ ನಟಿ ಜಾನ್ವಿ, ಇದೀಗ ತಿರುಪತಿಯಲ್ಲಿ ತೆಲುಗಿನ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಟ್ರಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್: ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ

    ಜಾನ್ವಿ ಕಪೂರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಜೊತೆಗೆ ಇದೀಗ ದಕ್ಷಿಣ ಸಿನಿಮಾಗಳಲ್ಲೂ ಮಿಂಚಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೌತ್ ಸಿನಿರಂಗದಲ್ಲಿ ಅದ್ಯಾವ ಹೀರೋ ತೆರೆಹಂಚಿಕೊಳ್ಳಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಜಾನ್ವಿ ಕಪೂರ್ ಸದ್ಯ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಜಾನ್ವಿ ಪೋಸ್ ನೀಡಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    `ಧಡಕ್’ ಚಿತ್ರದ ಮೂಲಕ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್‌ಗೆಪರಿಚಿತರಾಗಿದ್ದರು. ನಂತರ ಸಾಕಷ್ಟು ಚಿತ್ರಗಳು ಮೂಲಕ ಬಿಟೌನ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ದಕ್ಷಿಣ ಸಿನಿಮಾಗಳಲ್ಲೂ ನಟಿಸಲು ತೆರೆಮರೆಯಲ್ಲಿ ಜಾನ್ವಿ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ:ರಮ್ಯಾ ಮನೆಯಲ್ಲೇ ಕಥೆ ಹೇಳಿದ್ರಂತೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ : ಪದ್ಮಾವತಿ ಕಮ್ ಬ್ಯಾಕ್ ಕನ್ಫರ್ಮ್

     

    View this post on Instagram

     

    A post shared by Janhvi Kapoor (@janhvikapoor)

    ಸಿನಿಮಾ ಜೊತೆ ಆಗಾಗ ಹಾಟ್ ಫೋಟೋಶೂಟ್‌ನಿಂದ ಸದ್ದು ಮಾಡುವ ನಟಿ ಜಾನ್ವಿ ಕಪೂರ್ ಈಗ ಬಿಳಿ ಬಣ್ಣದ ಡಿಸೈನರ್ ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ತಮ್ಮ ಮಾದಕ ಲುಕ್ಕಿನಿಂದ ನೋಡುಗರನ್ನ ಮೋಡಿ ಮಾಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಪೋಸ್ ನೀಡಿ, ಸೀರೆಯಲ್ಲಿ ಜಾನ್ವಿ ಶೈನ್ ಮಾಡಿದ್ದಾರೆ.

    ಇನ್ನು ಜಾನ್ವಿ ಕಪೂರ್ ಲಿಸ್ಟ್ನಲ್ಲಿ ಕೈತುಂಬಾ ಸಿನಿಮಾಗಳಿವೆ. ಹೊಸ ಬಗೆಯ ಸಿನಿಮಾಗಳ ಮೂಲಕ ಮೋಡಿ ಮಾಡಲು ಜಾನ್ವಿ ಕಪೂರ್ ಸಜ್ಜಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]