ನಟಿ ಜಾನ್ವಿ ಕಪೂರ್‌ಗೆ (Janhavi Kapoor) ಬಾಲಿವುಡ್‌ಗಿಂತ ಟಾಲಿವುಡ್‌ನಲ್ಲಿ (Tollywood) ಬೇಡಿಕೆ ಹೆಚ್ಚಾಗಿದೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದೇವರ’ ಬಳಿಕ ಹಲವು ಅವಕಾಶಗಳು ನಟಿಯನ್ನು ಅರಸಿ ಬಂದಿವೆ. ಇದನ್ನೂ ಓದಿ:‘ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ
ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ‘ದೇವರ’ ಸಿನಿಮಾ ಮೂಲಕ ಟಾಲಿವುಡ್‌ಗೆ ಪರಿಚಿತರಾದರು. ಮೊದಲ ಸಿನಿಮಾದಲ್ಲೇ ನಟನೆ ಮತ್ತು ಗ್ಲ್ಯಾಮರ್‌ನಿಂದ ಜಾನ್ವಿ ಗಮನ ಸೆಳೆದರು. ಇದರ ನಡುವೆ ‘ದೇವರ’ ಪಾರ್ಟ್ 2ನಲ್ಲೂ (Devara 2) ಜಾನ್ವಿ ಪಾತ್ರ ಕಂಟಿನ್ಯೂ ಆಗಲಿದೆ. ಭಾಗ 2ರಲ್ಲಿ ತಾರಕ್ ಜೊತೆ ನಟಿ ಮಿಂಚಲಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್
ಸದ್ಯ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ‘ಪೆಡ್ಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಅವರೊಂದಿಗೆ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ನಟಿಸುವ ಚಾನ್ಸ್ ಸಿಕ್ಕಿದೆ. ರಾಮ್ ನಟಿಸಲಿರುವ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಭಾಗ 2ರಲ್ಲಿ ನಟಿಸಲು ಜಾನ್ವಿಗೆ ಆಫರ್ ಸಿಕ್ಕಿದೆ. ಮತ್ತೆ ‘ಪೆಡ್ಡಿ’ ಜೋಡಿ ಈ ಸಿನಿಮಾದಲ್ಲೂ ಒಂದಾಗುತ್ತಿದೆ.

1990ರಲ್ಲಿ ತೆರೆಕಂಡ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಮೊದಲ ಭಾಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಖ್ಯಾತ ನಟಿ ಶ್ರೀದೇವಿ ನಟಿಸಿದ್ದರು. ಇದರ ಭಾಗ 2ರಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ನಟಿಸಿದರೆ ಸೂಕ್ತ ಎಂದು ಚಿತ್ರತಂಡ ಯೋಚಿಸಿದೆ. ಸದ್ಯದಲ್ಲೇ ಈ ಎಲ್ಲದರ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.










ಕಪ್ಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಜಾನ್ವಿ ಕಪೂರ್ ಬೋಲ್ಡ್ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಬ್ಲ್ಯಾಕ್ ಕಲರ್ ಬಟ್ಟೆ ಧರಿಸಿ ಮಾದಕ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:
ಬಾಲಿವುಡ್‌ನಲ್ಲಿ ಮಿಂಚ್ತಿದ್ದ ಶ್ರೀದೇವಿ ಕಪೂರ್ ಪುತ್ರಿ ಜಾನ್ವಿ ತೆಲುಗಿಗೆ ಕಾಲಿಟ್ಟಿರೋದು ಗೊತ್ತೇ ಇದೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಣ್ಣ ಹಚ್ತಿದ್ದಾರೆ. ‘ದೇವರ’ (Devara Film) ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.











