Tag: Jangamavadi Matt

  • ಜಂಗಮವಾಡಿ ಮಠದಲ್ಲಿ ಮೋದಿ, ಬಿಎಸ್‍ವೈ – ಕನ್ನಡದಲ್ಲಿ ಮಾತನಾಡಿದ ಪ್ರಧಾನಿ

    ಜಂಗಮವಾಡಿ ಮಠದಲ್ಲಿ ಮೋದಿ, ಬಿಎಸ್‍ವೈ – ಕನ್ನಡದಲ್ಲಿ ಮಾತನಾಡಿದ ಪ್ರಧಾನಿ

    ಲಕ್ನೋ: ವಾರಣಾಸಿಯಲ್ಲಿ ಇಂದು ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದ್ದು, ಈ ಕಾರ್ಯಕ್ರದಮದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಿ ಕನ್ನಡದಲ್ಲಿ ಮಾತನಾಡಿದ್ದಾರೆ.

    ಮೋದಿ, ಯಡಿಯೂರಪ್ಪ ಹಾಗೂ ಯೋಗಿ ಆದಿತ್ಯನಾಥ್ ಹಾಗೂ ಇತರೆ ಗಣ್ಯರು ಜಂಗಮವಾಡಿ ಮಠಕ್ಕೆ ಭೇಟಿ ಕೊಟ್ಟಿದ್ದರು. ಪವಿತ್ರ ಗ್ರಂಥ `ಸಿದ್ಧಾಂತ ಶಿಖಾಮಣಿ’ಯ ಪ್ರಾಮುಖ್ಯತೆ ಬಗ್ಗೆ ಮೋದಿ ಮಾತನಾಡಿದರು. ಎಲ್ಲರಿಗೂ ನಮಸ್ಕಾರಗಳು, ವೇದಿಕೆ ಮೇಲಿರುವ ವೀರಶೈವ ಜಗದ್ಗುರುಗಳಿಗೆ ನಮಸ್ಕಾರಗಳು ಎಂದು ಹೇಳುವ ಮೂಲಕ ಮೋದಿ ಅವರು ಭಾಷಣ ಆರಂಭಿಸಿದರು.

    ಮೋದಿ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ವೇದಿಕೆ ಮುಂದೆ ಕುಳಿತಿದ್ದವರು ಜೋರಾಗಿ ಚಪ್ಪಾಳೆ ಕಟ್ಟಿ ಮೋದಿ, ಮೋದಿ ಎಂದು ಜೈಕಾರ ಹಾಕಿದರು. ಭಾಷಣದ ಕೊನೆಯಲ್ಲಿ ಕನ್ನಡದಲ್ಲಿ ನಿಮಗೆಲ್ಲರಿಗೂ ನನ್ನ ಅನಂತ ವಂದನೆಗಳು ಎಂದು ಹೇಳಿ ಮೋದಿ ತಮ್ಮ ಮಾತನ್ನು ಮುಗಿಸಿದರು.

    ಪ್ರಧಾನಿ ಮೋದಿ ಅವರು ಸಮಾರಂಭದಲ್ಲಿ 18 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡ `ಸಿದ್ಧಾಂತ ಶಿಖಾಮಣಿ’ ಕೃತಿಯನ್ನು ಬಿಡುಗಡೆ ಮಾಡಿದರು. ಸಿದ್ಧಾಂತ ಶಿಖಾಮಣಿ ಕೃತಿಯು ವೀರಶೈವ ಧರ್ಮದ ಧರ್ಮ ಗ್ರಂಥವಾಗಿದೆ.

    ಸಿಎಂ ರಾತ್ರಿ ವಾರಣಾಸಿಯಲ್ಲೇ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಭಾಗಿಯಾಗಿದ್ದಾರೆ.