Tag: Janata Darshana

  • ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಜನತಾ ದರ್ಶನ – ಅಧಿಕಾರಿಗಳು ಗೈರು; ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

    ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಜನತಾ ದರ್ಶನ – ಅಧಿಕಾರಿಗಳು ಗೈರು; ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

    ಮಂಡ್ಯ: ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಮುಖ್ಯಮಂತ್ರಿ ಆಗಿದ್ದಾಗ ಜನತಾ ದರ್ಶನ ಅತ್ಯದ್ಭುತವಾಗಿ ಯಶಸ್ವಿಯಾಗಿತ್ತು. ಜನರ ಸಮಸ್ಯೆ ಆಲಿಸುವ ಮೂಲಕವೇ ಮನೆ ಮಾತಾಗಿದ್ದರು. ಇದೀಗ ಮತ್ತೆ ಅದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ. ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಮಂಡ್ಯಕ್ಕೆ ಎರಡನೇ ಬಾರಿಗೆ ಆಗಮಿಸಿದ್ದ ಹೆಚ್‌ಡಿಕೆ, ಇಡೀ ದಿನ ಜನತಾ ದರ್ಶನ ನಡೆಸಿದರು.

    ಮಂಡ್ಯದ (Mandya) ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಭಾಗಿಯಾಗಿದ್ದರು. ಪ್ರಾರಂಭದಲ್ಲೇ ವಿಶೇಷಚೇತನರ ಬಳಿಗೆ ತೆರಳಿ ಅರ್ಜಿಗಳನ್ನ ಸ್ವೀಕರಿಸಿದರು. ಕೇಂದ್ರ ಸಚಿವರು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಯಾವೊಬ್ಬ ಅಧಿಕಾರಿಗಳು ಕೂಡ ಬಂದಿರಲಿಲ್ಲ. ಇದು ಸಚಿವರ ಆಕ್ರೋಶಕ್ಕೆ ಕಾರಣವಾಯ್ತು. ರಾಜ್ಯ ಸರ್ಕಾರ ಹೊಸದಾಗಿ ಸುತ್ತೋಲೆ ಹೊರಡಿಸಿ ಅಧಿಕಾರಿಗಳು ಹೋಗದಂತೆ ತಡೆದಿದ್ದಾರೆ. ಇದು ನನ್ನ ಮನೆಯ ಕಾರ್ಯಕ್ರಮವಲ್ಲ. ಸರ್ಕಾರ ಸಣ್ಣತನ ತೋರುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮ ಗೋಲ್ಮಾಲ್ ತನಿಖೆ ಮತ್ತೆ ಚುರುಕು – ನಾಗೇಂದ್ರ, ದದ್ದಲ್‌ಗೆ ಎಸ್‌ಐಟಿ ನೋಟಿಸ್

    ಜನತಾ ದರ್ಶನಕ್ಕೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಒಮ್ಮೆಲೆ ಅಹವಾಲು ಸಲ್ಲಿಸಲು ಮುಗಿಬಿದ್ದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ವೇದಿಕೆ ಮೇಲೆ ಕುಳಿತು ಎಲ್ಲರ ಸಮಸ್ಯೆಗಳನ್ನ ಖುದ್ದು ಕುಮಾರಸ್ವಾಮಿ ಕೇಳಿದರು. ಊಟಕ್ಕೂ ಬ್ರೇಕ್ ಕೊಡದೇ ಜನರ ಸಮಸ್ಯೆ ಆಲಿಸುತ್ತಿದ್ದ ಕುಮಾರಸ್ವಾಮಿ, ಸಂಜೆ 4 ಗಂಟೆಗೆ ಅರ್ಜಿ ಸ್ವೀಕರಿಸುತ್ತಲೇ ಚಿತ್ರಾನ್ನ, ಮೊಸರನ್ನ ಸೇವಿಸಿದರು. ಜೆಡಿಎಸ್ ಶಾಸಕ ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಸಾಥ್ ನೀಡಿದರು.

    ಜನತಾ ದರ್ಶನಕ್ಕೂ ಮುನ್ನ ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬ ದೇಗುಲಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೂ ಮುನ್ನ ಮಾಡಿಕೊಂಡಿದ್ದ ಹರಕೆ ತೀರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

  • ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ

    ಸಿಎಂರ ಜನಸ್ಪಂದನವನ್ನು ಅಭಿನಂದಿಸುತ್ತೇನೆ, ಎಲ್ಲವನ್ನು ಟೀಕಿಸಲ್ಲ: ಹೆಚ್‌ಡಿಕೆ

    ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಿನ್ನೆ ದಿನ ನಡೆಸಿದ ಜನತಾ ದರ್ಶನವನ್ನು ಜನಸ್ಪಂದನಾ (Janaspandana) ಎಂದಿದ್ದಾರೆ. ಸಿಎಂ ಅವರ ಜನ ಸ್ಪಂದನವನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

    ಕೊಡಗಿನ (Kodagu) ಮಡಿಕೇರಿ (Madikeri) ತಾಲೂಕಿನ ಹಾಕತ್ತೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ಬರಲು ಹೇಳಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಈಗಲಾದರೂ ಇವರಿಗೆ ರಾಜ್ಯದ ಜನತೆಯ ಗ್ರೌಂಡ್ ರಿಯಾಲಿಟಿ ಅರ್ಥವಾಗಿದೆ ಎಂದುಕೊಂಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರ್ಥವಾಗಿರಬಹುದು. ಒಬ್ಬ ಸಿಎಂ ಜನಸ್ಪಂದನೆ ಮಾಡುವುದನ್ನು ನಾನು ಅಭಿನಂದಿಸುತ್ತೇನೆ. ಈ ವಿಷಯದಲ್ಲಿ ನಾನು ಎಲ್ಲವನ್ನು ಟೀಕಿಸುವುದಿಲ್ಲ ಎಂದಿದ್ದಾರೆ.

    ಮುಂದಿನ 3 ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಅಧಿಕಾರಿಗಳಿಗೆ 3 ತಿಂಗಳ ಗಡುವು ನೀಡಿದ್ದಾರೆ. ಈಗ ಅವರಿಗೆ ಅರ್ಥ ಆಗಿರಬಹುದು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು. ನಾನು ಜನತಾ ದರ್ಶನ ಮಾಡಿದಾಗ ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ಮಾಡಿದ್ದೆ. ಅಂದು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಕೇಸ್ ವಾಪಸ್; ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರು ಕೂಡ ಮಾಡಿದ್ದರು. ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಅಂತ ಮಾಡಿದ್ದರು. ತಿಂಗಳಿಗೆ ಒಂದು ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು. ಈಗ ಸಿಎಂ ಅವರು ಜನಸ್ಪಂದನಾ ಮಾಡಿದ್ದಾರೆ. ಅವರಿಗೆ ಮನವರಿಕೆ ಆಗಿರುವ ಕಷ್ಟಗಳನ್ನು ಸಿಎಂ ಆದಷ್ಟು ಬಗೆಹರಿಸಲಿ. ಆಗ ಅವು ಅರ್ಥಪೂರ್ಣ ಆಗುತ್ತವೆ ಎಂದು ಹೆಚ್‌ಡಿಕೆ ಹೇಳಿದರು. ಇದನ್ನೂ ಓದಿ: ಯಾರೇ ನಿಂತರೂ 2 ಲಕ್ಷ ಮತಗಳ ಅಂತರದಿಂದ ಗೆಲ್ತೀನಿ: ಪ್ರತಾಪ್‌ ಸಿಂಹ

  • ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ- ಜನತಾ ದರ್ಶನದ ವೇಳೆ ವ್ಯಕ್ತಿ ಅಳಲು

    ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ- ಜನತಾ ದರ್ಶನದ ವೇಳೆ ವ್ಯಕ್ತಿ ಅಳಲು

    ಚಾಮರಾಜನಗರ: ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನಡೆಸಿದ ಜನತಾ ದರ್ಶನ (Janatha Darshana) ಸಭೆ ಹೈ ಡ್ರಾಮಾವೊಂದಕ್ಕೆ ಸಾಕ್ಷಿಯಾಯ್ತು.

    ನಗರದ ಜಿಲ್ಲಾಧಿಕಾರಿ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಡ್ರಾಮಾ ಮಾಡಿದ್ದಾನೆ. ನಗರದಲ್ಲಿ ರಸ್ತೆ ಅಗಲೀಕರಣ ವೇಳೆಯ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದ್ದ ನಿವೇಶನಕ್ಕೆ ಇನ್ನೂ ಪರಿಹಾರ ನೀಡಿಲ್ಲ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಅಲ್ಲದೆ ನನಗೆ 40 ವರ್ಷ ಆದರೂ ಮದುವೆ ಆಗಿಲ್ಲ. ಸರ್ಕಾರದಿಂದ ಬೇರೆ ನಿವೇಶನವೂ ಸಿಕ್ಕಿಲ್ಲ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.

    ಸರ್ಕಾರದಿಂದ ನಿಗದಿಯಾಗಿದ್ದ ಬದಲೀ ನಿವೇಶನ ಇನ್ನೂ ಸಿಕ್ಕಿಲ್ಲ. ನನಗೆ ಹುಡುಗಿ ಕೊಡಬೇಕೆಂದರೆ ಮನೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ಮನೆ-ಮಠ ನಿವೇಶನ, ಮದುವೆ ಇಲ್ಲದೆ ಪರದಾಡುತ್ತಿದ್ದೇನೆ. ಹೀಗಾಗಿ ನನಗೆ ದಯಾಮರಣ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ರಸ್ತೆಗಿಳಿಯಲ್ಲ BMTC, KSRTC; ಶಾಲಾ- ಕಾಲೇಜುಗಳಿಗೂ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?

    ಈ ವ್ಯಕ್ತಿಯ ಮಾತು ಕೇಳಿ ವೇದಿಕೆಯಲ್ಲಿದ್ದ ಸಚಿವರು, ಶಾಸಕರು ಕಕ್ಕಾಬಿಕ್ಕಿಯಾದರು. ತಕ್ಷಣವೇ ಆ ವ್ಯಕ್ತಿಯನ್ನ ಅಧಿಕಾರಿಗಳು ಸಮಾಧಾನಪಡಿಸಿ ಆಚೆ ಕರೆದುಕೊಂಡು ಹೋದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಎಂ ವಾಸ್ತವ್ಯಕ್ಕೆ ಉಜಳಂಬದಲ್ಲಿ ಸಿದ್ಧತೆ- ಹೊಸ ಕರೆಂಟ್ ಕಂಬ, ಶಾಲೆಗೆ ಸುಣ್ಣಬಣ್ಣ

    ಸಿಎಂ ವಾಸ್ತವ್ಯಕ್ಕೆ ಉಜಳಂಬದಲ್ಲಿ ಸಿದ್ಧತೆ- ಹೊಸ ಕರೆಂಟ್ ಕಂಬ, ಶಾಲೆಗೆ ಸುಣ್ಣಬಣ್ಣ

    – ಕಳಪೆ ಕಾಮಗಾರಿಯಾಗಿದ್ರೂ ರೋಡ್ ಲಕ ಲಕ

    ಬೀದರ್: ಇಂದು ಜಿಲ್ಲೆಯ ಬಸವಕಲ್ಯಾಣದ ಉಜಳಂಬ ಗ್ರಾಮಕ್ಕೆ ಆಗಮಿಸಿ ಜನತಾ ದರ್ಶನ ನಡೆಸಲಿದ್ದಾರೆ. ಈ ಬಾರಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುತ್ತಿರುವ 3ನೇ ಗ್ರಾಮ ಇದಾಗಿದೆ. ಕರೇಗುಡ್ಡ ಗ್ರಾಮದಂತೆ ಇಲ್ಲಿಯೂ ತರಾತುರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ರಸ್ತೆ, ಚರಂಡಿಗಳನ್ನು ಮಾಡಿ ಝಗಮಗಿಸುವಂತೆ ಮಾಡಲಾಗಿದೆ. ಆದರೆ ಇವುಗಳ ಗುಣಮಟ್ಟ ಮಾತ್ರ ಕಳಪೆಯಾಗಿದ್ದು, ಒಂದೇ ಒಂದು ಮಳೆ ಬಂದರೆ ಎಲ್ಲಾ ಕೊಚ್ಚಿಕೊಂಡು ಹೋಗುವಂತಿದೆ.

    ಉಜಳಂಬ ಗ್ರಾಮದಲ್ಲಿ ವಿದ್ಯುತ್ ಕೈ ಕೊಡುತ್ತಿತ್ತು. ಸಿಎಂ ಆಗಮನ ಎಚ್ಚೆತ್ತ ಅಧಿಕಾರಿಗಳು ಕಂಬ, ವೈರ್ ಎಲ್ಲಾ ಚೇಂಜ್ ಮಾಡಿ ವಿದ್ಯುತ್ ಸಮಸ್ಯೆ ಆಗದಂತೆ ಮಾಡಿದ್ದಾರೆ. ಗ್ರಾಮದ ಶಾಲೆಗೆ ಅವಸರದಲ್ಲಿ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಗಿದೆ. ಜೊತೆಗೆ ಸಿಎಂ ವಾಸ್ತವ್ಯಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಮುಂಭಾಗ ಜನತಾ ದರ್ಶನಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಜೊತೆಗೆ ಅಹವಾಲು ಸ್ವೀಕರಿಸಲು ತಡವಾಗಬಾರದು ಅನ್ನೋ ಕಾರಣಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಕೊಕ್ ನೀಡಲಾಗಿದೆ.

    ಒಟ್ಟಿನಲ್ಲಿ ಸಿಎಂ ಆಗಮನದ ಹಿನ್ನೆಲೆಯಲ್ಲಿ ಉಜಳಂಬ ಗ್ರಾಮ ಅಲಂಕಾರಗಳಿಂದ ಸಿದ್ಧಗೊಂಡಿದೆ. ಈಗಾಗಲೇ ಮುಖ್ಯಮಂತ್ರಿಗಳು ರಾಯಚೂರಿನ ಕರೇಗುಡ್ಡದ ಗ್ರಾಮದಿಂದ ಉಜಳಂಬದತ್ತ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 10.30ಕ್ಕೆ ತಲುಪಲಿದ್ದಾರೆ.