Tag: Janata Dal

  • ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಪಾಟ್ನಾ: ಎನ್‌ಡಿಎ (NDA) ಮೈತ್ರಿಕೂಟದ ಜನತಾ ದಳ (Janata Dal)  (ಯುನೈಟೆಡ್) ಪಕ್ಷವು ಮೈಥಿಲಿ ಭಾಷೆಗೆ (Maithali Lnaguage) ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಬೇಕು ಎಂದು ಸೋಮವಾರ ಒತ್ತಾಯಿಸಿದೆ.

    ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ನಿರ್ಧರಿಸಿದ ಬೆನ್ನಲ್ಲೇ ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಜೆಡಿಯು ಈ ಬೇಡಿಕೆಯಿಟ್ಟಿದೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ (Sanjay Kumar Jha) ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಅವರನ್ನು ಭೇಟಿಯಾಗಿ ಈ ಬೇಡಿಕೆಗೆ ಒತ್ತಾಯಿಸುವುದಾಗಿ ಹೇಳಿದರು.

    ಇದಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಶೀಘ್ರದಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಮಾಡಿ ಮೈಥಿಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು. ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರವು ಮೊದಲಿನಿಂದಲೂ ನನ್ನ ಮೊದಲ ಆದ್ಯತೆಯಾಗಿದೆ.

    ಮೈಥಿಲಿ ಭಾಷೆ ಸುಮಾರು 1,300 ವರ್ಷಗಳಷ್ಟು ಹಳೆಯದು. ಅದರ ಸಾಹಿತ್ಯವು ಸ್ವಾತಂತ್ರ್ಯವಾಗಿ ಮತ್ತು ನಿರಂತರವಾಗಿ ಅಭಿವೃದ್ಧಿಯಾಗುತ್ತಾ ಬಂದಿದೆ. ಜೊತೆಗೆ ಮೈಥಿಲಿ ಭಾಷೆ ಸುಮಾರು 1300 ವರ್ಷಗಳಷ್ಟು ಹಳೆಯದು. ಆದ್ದರಿಂದ, ಇದನ್ನು ಶಾಸ್ತ್ರೀಯ ಭಾಷೆಯ ವರ್ಗಕ್ಕೆ ಸೇರಿಸಬೇಕು ಎಂದರು.

    ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಹಾರ ರಾಜ್ಯ ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೈಥಿಲಿ ಲಿಪಿಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ಧಿಗಾಗಿ ಮೈಥಿಲ್ ವಿದ್ವಾಂಸರನ್ನು ಆಹ್ವಾನಿಸುವ ಮೂಲಕ ಜಾವಡೇಕರ್ ಅವರು ನನ್ನ ಜ್ಞಾಪಕ ಪತ್ರವನ್ನು ಸ್ವೀಕರಿಸಿದರು. ಪರಿಣಿತ ಸಮಿತಿಯ ರಚನೆಗೆ ಸೂಚನೆಗಳನ್ನು ನೀಡಿದರು ಮತ್ತು ಅದಕ್ಕೆ ಹೆಸರುಗಳನ್ನು ಸೂಚಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ಬರೆದಿದ್ದಾರೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಕೂಲಂಕಷವಾಗಿ ಚರ್ಚಿಸಿದ ನಂತರ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

  • 1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ

    1989: ಯಾವ ಪಕ್ಷಕ್ಕೂ ಬಹುಮತ ನೀಡದ ಭಾರತದ ಜನ

    – ಬಿಜೆಪಿಗೆ ‘ರಾಮಜನ್ಮಭೂಮಿ’ ರಾಜಕೀಯ ಅಸ್ತ್ರ
    – 2 ರಿಂದ 85 ಸ್ಥಾನಕ್ಕೆ ಬಿಜೆಪಿ ಅಸಾಧಾರಣ ಜಿಗಿತ
    – ಎರಡನೇ ಬಾರಿಗೆ ಕಾಂಗ್ರೆಸ್ಸೇತರ ಮೈತ್ರಿ ಅಧಿಕಾರಕ್ಕೆ

    ಸ್ವತಂತ್ರ ಭಾರತದಲ್ಲಿ ನಾಲ್ಕು ದಶಕಗಳ ಕಾಲ ರಾಜಕೀಯ, ಚುನಾವಣಾ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ (Congress) ಆಡಳಿತವು 1980 ರ ದಶಕದ ಅಂತ್ಯದಲ್ಲಿ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು. ಇಂದಿರಾ ಗಾಂಧಿ ಹತ್ಯೆಯ ಕಹಿ ನೆರಳಿನಲ್ಲಿ 1984 ಚುನಾವಣೆಯ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ದಾಖಲಿಸಿತ್ತು. ಆದರೆ ಆಡಳಿತ ವೈಫಲ್ಯ, ಹಗರಣಗಳ ಸುಳಿಗೆ ಸಿಲುಕಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನ ಕಂಡಿತು. ಇದು ಮತ್ತೊಮ್ಮೆ ಕಾಂಗ್ರೆಸ್ಸೇತರ ಸಮ್ಮಿಶ್ರ ರಾಜಕೀಯದ ಹೊಸ ಯುಗಕ್ಕೆ ನಾಂದಿ ಹಾಡಿತು.

    ಯುವ ಮತ್ತು ರಾಜಕೀಯವಾಗಿ ಅನನುಭವಿ ರಾಜೀವ್ ಗಾಂಧಿಯವರು (Rajiv Gandhi) ತಮ್ಮ ತಾಯಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಭಾರತದ ಪ್ರಧಾನ ಮಂತ್ರಿಯಾಗಿ 1984 ರಲ್ಲಿ ಅಧಿಕಾರ ವಹಿಸಿಕೊಂಡರು. ಆದರೆ ಬೋಫೋರ್ಸ್ ಹಗರಣ (Bofors Scandal), ಪಂಜಾಬ್‌ನಲ್ಲಿನ ಭಯೋತ್ಪಾದನೆ, ಶಾ ಬಾನೋ ಪ್ರಕರಣದಲ್ಲಿ ಮುಸ್ಲಿಮರ ತುಷ್ಟೀಕರಣ ಮತ್ತು ಶ್ರೀಲಂಕಾದಲ್ಲಿ ತಮಿಳು ಬಂಡಾಯವನ್ನು ರಾಜೀವ್ ಗಾಂಧಿ ಸರಿಯಾಗಿ ನಿರ್ವಹಿಸದ ರೀತಿ ಆಡಳಿತ ವಿರೋಧಿ ಅಲೆಗೆ ಕಾರಣವಾಯಿತು. ಇದರಿಂದ ಕಾಂಗ್ರೆಸ್ ಪಕ್ಷದಲ್ಲೇ ಒಡಕುಂಟಾಯಿತು. ಇದನ್ನೂ ಓದಿ: 1984: ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್‌ಗೆ ‘400+ ಪಾರ್’

    ಏನಿದು ಬೋಫೋರ್ಸ್ ಹಗರಣ?
    ಭಾರತ ಹಾಗೂ ಸ್ವೀಡನ್‌ನ ಬೋಫೋರ್ಸ್ ಕಂಪನಿ ನಡುವೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದವಾಗಿತ್ತು. ಸುಮಾರು 1.3 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಇದಾಗಿತ್ತು. ಸ್ವೀಡನ್ ನಡೆಸಿದ ಅತ್ಯಂತ ದೊಡ್ಡ ಡೀಲ್ ಇದಾಗಿದ್ದು, ಭಾರತಕ್ಕೆ ಸುಮಾರು 410ಕ್ಕೂ ಅಧಿಕ ಫಿರಂಗಿಗಳು ರವಾನೆಯಾಗಿತ್ತು. 1980 ರಿಂದ 1990ರ ದಶಕಗಳಲ್ಲಿ ಭಾರತ ಹಾಗೂ ಸ್ವೀಡನ್ ನಡುವೆ ಶಸ್ತ್ರಾಸ್ತ್ರ ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ಕೇಳಿಬಂತು. ಇದೇ ಬೋಫೋರ್ಸ್ ಹಗರಣ. ಆಂದಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಮೇಲೆ ಲಂಚ ಪಡೆದ ಆರೋಪ ಕೇಳಿಬಂತು. ಆಗಿನ ರಕ್ಷಣಾ ಸಚಿವರಾಗಿದ್ದ ವಿ.ಪಿ.ಸಿಂಗ್ (V.P.Singh) ಅವರು ರಾಜೀವ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಪಕ್ಷ ಹಾಗೂ ಸಂಸದ ಸ್ಥಾನವನ್ನು ತ್ಯಜಿಸಿದ್ದರು. ಹಗರಣವು 1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು.

    ಬಿಜೆಪಿಗೆ ಸಿಕ್ತು ‘ರಾಮಜನ್ಮಭೂಮಿ’ ರಾಜಕೀಯ ಅಸ್ತ್ರ
    ಕಾಂಗ್ರೆಸ್ ಆಡಳಿತ ವಿರೋಧದ ಅಲೆಯ ಸಂದರ್ಭದಲ್ಲಿ ಹಠಾತ್ತನೆ ಬಿಜೆಪಿಗೆ ರಾಜಕೀಯ ಚಿನ್ನದ ನಿಕ್ಷೇಪವೇ ದೊರೆತಂತಾಯಿತು. 1986 ರ ಜನವರಿ 31 ರಂದು ಬಾಬ್ರಿ ಮಸೀದಿ ಆವರಣದ ಗೇಟುಗಳ ಬೀಗವನ್ನು ತೆರೆಯಲಾಯಿತು. ಶತಮಾನಗಳ ಹಿಂದೆ ಆಕ್ರಮಣಕಾರರ ದಾಳಿಗೆ ತುತ್ತಾದ ಹಿಂದೂ ಪವಿತ್ರ ಸ್ಥಳಗಳನ್ನು ಮರಳಿ ವಶಪಡಿಸಿಕೊಳ್ಳುವ ದಿಸೆಯಲ್ಲಿ ಸಂಘ ಪರಿವಾರದ ಅಂಗವೇ ಆದ ವಿಶ್ವ ಹಿಂದೂ ಪರಿಷತ್ (VHP) ಅದಾಗಲೇ ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಆರಂಭಿಸಿತ್ತು. 1984 ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಮತ್ತೆ ತಲೆಯೆತ್ತಲು ‘ಹಿಂದುತ್ವ’ ಅಸ್ತ್ರವಾಗಿ ಸಿಕ್ಕಿತು. ಬಾಬ್ರಿ ಮಸೀದಿ ನಿಂತಿದ್ದ ಜಾಗದಲ್ಲಿ ರಾಮಮಂದಿರ (Ram Mandir) ನಿರ್ಮಾಣವನ್ನು ಚುನಾವಣಾ ವಿಷಯವಾಗಿ ಆಗಿನ ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ (L.K.Advani) ಘೋಷಿಸಿಯೇ ಬಿಟ್ಟರು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

    9ನೇ ಸಾರ್ವತ್ರಿಕ ಚುನಾವಣೆ
    1989 ರ ಲೋಕಸಭಾ ಚುನಾವಣೆಯು ನವೆಂಬರ್ 22 ರಿಂದ 26 ರ ವರೆಗೆ ಐದು ದಿನಗಳ ಕಾಲ ನಡೆಯಿತು.

    113 ಪಕ್ಷಗಳ ಸ್ಪರ್ಧೆ
    ರಾಷ್ಟ್ರೀಯ 8, ಪ್ರಾದೇಶಿಕ 20 ಪಕ್ಷಗಳು ಸೇರಿ 113 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

    ಮತದಾರರು
    ಒಟ್ಟು: 49,89,06,129
    ಪುರುಷರು: 26,20,45,142
    ಮಹಿಳೆಯರು: 23,68,60,987

    ಮತ ಚಲಾಯಿಸಿದವರ ಸಂಖ್ಯೆ: 30,90,50,495
    ಮತದಾನ ಪ್ರಮಾಣ: 61.95%

    ಒಟ್ಟು ಕ್ಷೇತ್ರಗಳು: 529
    ಸ್ಪರ್ಧಿಸಿದ್ದ ಅಭ್ಯರ್ಥಿಗಳು: 6,160
    ಮಹಿಳಾ ಅಭ್ಯರ್ಥಿಗಳು: 198
    ಗೆದ್ದ ಮಹಿಳೆಯರು: 29

    ಕುಸಿದ ಕಾಂಗ್ರೆಸ್
    ನವೆಂಬರ್ 1989 ರ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಗಲಿಲ್ಲ. ಪಿಎಂ ರಾಜೀವ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಕಳೆದ ಬಾರಿ (1984) ಗೆದ್ದಿದ್ದ ಒಟ್ಟು ಸ್ಥಾನಗಳ ಅರ್ಧಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಿ ಸೋಲನುಭವಿಸಿತು. ಕೇವಲ 197 ಸ್ಥಾನಗಳನ್ನು ಮಾತ್ರ ಗೆದ್ದಿತು. ಕಾಂಗ್ರೆಸ್ ಕೇವಲ ರಾಷ್ಟ್ರೀಯ ಶಕ್ತಿಯನ್ನಷ್ಟೇ ಅಲ್ಲ ರಾಜಕೀಯ ಪ್ರಾಬಲ್ಯವನ್ನೂ ಕಳೆದುಕೊಂಡಿತು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಕಾಂಗ್ರೆಸ್ – 197
    ಬಿಜೆಪಿ – 85
    ಜನತಾ ದಳ – 143
    ಸಿಪಿಐ – 12
    ಸಿಪಿಎಂ – 33
    ಇತರೆ – 47
    ಪಕ್ಷೇತರ – 12

    ವಿ.ಪಿ.ಸಿಂಗ್ ಪಕ್ಷಕ್ಕೆ 143 ಸ್ಥಾನ
    ಬೋಫೋರ್ಸ್ ಹಗರಣ ವಿಚಾರವನ್ನು ಮುಂದು ಮಾಡಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಹೊರಬಂದಿದ್ದ ವಿ.ಪಿ.ಸಿಂಗ್ ಗುಂಪು ಜನತಾ ದಳ ಪಕ್ಷದಿಂದ ಸ್ಪರ್ಧೆ ಮಾಡಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿ 143 ಸ್ಥಾನಗಳನ್ನು ಗೆದ್ದಿತು.

    ಬಿಜೆಪಿ 2 ರಿಂದ 85 ಕ್ಕೆ ಜಿಗಿತ
    1989 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 85 ಸ್ಥಾನಗಳನ್ನು ಗೆದ್ದು ಗಮನ ಸೆಳೆಯಿತು. 2 ರಿಂದ 85 ಸ್ಥಾನಗಳಿಗೆ ಅಸಾಧಾರಣ ನೆಗೆತ ಕಂಡಿತು.

    ಮತ್ತೆ ಕಾಂಗ್ರೆಸ್ಸೇತರ ಸರ್ಕಾರ
    ಜನಮೋರ್ಚಾ, ಜನತಾ ಪಕ್ಷ, ಲೋಕದಳ ಮತ್ತು ಕಾಂಗ್ರೆಸ್ (ಎಸ್) ವಿಲೀನಗೊಂಡು ಜನತಾ ದಳ ಉದಯವಾಯಿತು. ಚುನಾವಣೆಯಲ್ಲಿ ಪಕ್ಷ 143 ಸ್ಥಾನಗಳನ್ನು ಗೆದ್ದಿತು. ಯಾವ ಪಕ್ಷಕ್ಕೂ ಬಹುಮತ ಬಾರದ ಕಾರಣ ಎಡಪಕ್ಷಗಳು ಮತ್ತು ಬಿಜೆಪಿ ಸೇರಿ ವಿ.ಪಿ.ಸಿಂಗ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದವು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

    ಕರ್ನಾಟಕದಲ್ಲಿ ಏನಾಗಿತ್ತು?
    ಕಾಂಗ್ರೆಸ್: 27
    ಜನತಾ ದಳ: 1

    2ನೇ ಬಾರಿಗೆ ಗೆದ್ದ ಒಡೆಯರ್
    ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಎರಡನೇ ಬಾರಿಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

  • 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ

    ಕಲಬುರಗಿ: ಕಲಬುರಗಿ (kalaburagi) ಜಿಲ್ಲೆಯ 9 ವಿಧಾನಸಭೆ ಮತಕ್ಷೇತ್ರಗಳಿದ್ದು ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರ ಬಹಳ ವಿಶೇಷವಾಗಿ ಗುರುತಿಸಲ್ಪುಡುತ್ತಿದೆ. ಕಳೆದ ಎರಡು ದಶಕಗಳಿಂದ ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಸತತ ಎರಡು ಬಾರಿ ಯಾವೊಬ್ಬ ವ್ಯಕ್ತಿಯೂ ಆಯ್ಕೆಯಾಗಿಲ್ಲ.

    ಈ ಕ್ಷೇತ್ರದಲ್ಲಿ 1999ರಿಂದ ಇಲ್ಲಿಯವರೆಗೆ ಸುಭಾಶ್ ಗುತ್ತೇದಾರ್ ಹಾಗೂ ಬಿ.ಆರ್.ಪಾಟೀಲ್ ಇಬ್ಬರ ನಡುವೆ ನೇರಾ ನೇರ ಹಣಾಹಣಿಯಿದ್ದು ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಹತ್ವ ಜಾಸ್ತಿಯಾಗಿದೆ. ಹೀಗಾಗಿ ಈ ಇಬ್ಬರು ನಾಯಕರು ಯಾವ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಆ ಎರಡು ಪಕ್ಷಗಳ‌ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.

    1999 ರಲ್ಲಿ ಜನತಾದಳ(ಎಸ್) (Janata Dal) ಸುಭಾಶ್ ಗುತ್ತೇದಾರ್‌ (Subhash Guttedar) ಸ್ಪರ್ಧಿಸಿದರೆ ಇತ್ತ ಲೋಕಶಕ್ತಿಯಿಂದ ಬಿ.ಆರ್.ಪಾಟೀಲ್ (B.R Patel) ಸ್ಪರ್ಧಿಸಿದ್ದರು. ಆಗ 2 ಸಾವಿರ ಮತಗಳ ಆಸುಪಾಸಿನಲ್ಲಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು. ನಂತರ 2004ರಲ್ಲಿ ಬಿ.ಆರ್.ಪಾಟಿಲ್ ಜೆಡಿಎಸ್ ನಿಂದ ಸ್ಪರ್ಧಿಸಿದ್ದರೆ ಸುಭಾಶ್ ಗುತ್ತೇದಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.‌ ಆಗ ಕೈ ಅಭ್ಯರ್ಥಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಬಿ.ಆರ್.ಪಾಟೀಲ್ ಜಯಗಳಿಸಿದ್ದರು. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

    2008ರಲ್ಲಿ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್ ಸ್ಪರ್ಧೆ ಮಾಡಿದರೆ ಬಿ.ಆರ್.ಪಾಟೀಲ್‌ ಕಾಂಗ್ರೆಸ್ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಬಿ.ಆರ್.ಪಾಟೀಲ್ ವಿರುದ್ಧ ಸುಭಾಶ್ ಗುತ್ತೇದಾರ್‌ ಅವರು 4 ಸಾವಿರ ಮತಗಳಿಂದ ಜಯಗಳಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ.ಆರ್.ಪಾಟೀಲ್ ಸ್ಪರ್ಧಿಸಿದರೆ ಜೆಡಿಎಸ್ ನಿಂದ ಸುಭಾಶ್ ಗುತ್ತೇದಾರ್‌ ಸ್ಪರ್ಧೆ ಮಾಡಿದ್ದರು. ಆಗ ಗುತ್ತೇದಾರ್‌ ವಿರುದ್ಧ ಬಿ.ಆರ್.ಪಾಟೀಲ್ ಅವರು 17 ಸಾವಿರ ಮತಗಳ‌ ಅಂತರದಿಂದ ಜಯಗಳಿಸಿದ್ದರು.

    2018ರಲ್ಲಿ ಕಾಂಗ್ರೆಸ್‌ನಿಂದ (Congress) ಬಿ.ಆರ್.ಪಾಟೀಲ್ ಹಾಗೂ ಬಿಜೆಪಿಯಿಂದ (BJP) ಸುಭಾಶ್ ಗುತ್ತೇದಾರ್ ಇಬ್ಬರು ಮತ್ತೆ ಸ್ಪರ್ಧಿಸಿದ್ದಾಗ ಕೇವಲ 697 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಭಾಶ್ ಗುತ್ತೇದಾರ್‌ ಜಯಗಳಿಸಿದ್ದರು.

    ಈ ಮೂಲಕ ಕಳೆದ ಎರಡು ದಶಕಗಳಿಂದ ಈ ಇಬ್ಬರು ರಾಜಕೀಯ ಬದ್ದ ವೈರಿಗಳ ಹೋರಾಟದಲ್ಲಿ ಮತದಾರ ಪ್ರಭು ಮಾತ್ರ ಸತತ ಎರಡನೇ ಬಾರಿಗೆ ಗೆಲ್ಲಿಸಿರುವ ಉದಾಹರಣೆಯೆ ಇಲ್ಲ. ಹೀಗಾಗಿ 2023ರಲ್ಲಿ ಇದೇ ಇತಿಹಾಸ ಮುಂದುವರಿಯುತ್ತಾ? ಅಥವಾ ಇದಕ್ಕೆ ಸುಭಾಶ್ ಗುತ್ತೇದಾರ ಬ್ರೇಕ್ ಹಾಕಿ ಎರಡನೇ ಬಾರಿ ಜಯಗಳಿಸುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಭಾರತದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸಲಾರೆ: ವರುಣ್ ಗಾಂಧಿ

  • ಬೊಮ್ಮಾಯಿ ಜನತಾದಳದ ಸಿಎಂ – ಎಚ್‍ಡಿ ಕುಮಾರಸ್ವಾಮಿ

    ಬೊಮ್ಮಾಯಿ ಜನತಾದಳದ ಸಿಎಂ – ಎಚ್‍ಡಿ ಕುಮಾರಸ್ವಾಮಿ

    ಬೆಂಗಳೂರು: ಬಸವರಾಜ ಬೊಮ್ಮಾಯಿ ಜನತಾದಳದ ಸಿಎಂ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊಸ ಸಿಎಂ ಬೊಮ್ಮಾಯಿ ಅವರಿಗೆ ಅನುಭವವಿದೆ. ಬಿಜೆಪಿಯಿಂದ ಆಯ್ಕೆ ಆಗಿದ್ದರೂ ಜನತಾದಳದವರೇ ಮುಖ್ಯಮಂತ್ರಿಗಳು ಆಗಿದ್ದಾರೆ ಎಂಬ ಭಾವನೆ ನಮಗೆ ಇದೆ. ಈಗಲೂ ಬೊಮ್ಮಾಯಿ ನಮಗೆ ಸ್ನೇಹಿತರು, ಒಳ್ಳೆ ಹಿತೈಷಿಗಳು. ಅವರು ಉತ್ತಮವಾಗಿ ಕೆಲಸ ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.

    ಯಡಿಯೂರಪ್ಪನವರಿಗೆ ಮಾಡಿದ ರೀತಿ ಬೊಮ್ಮಾಯಿ ಅವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡದೇ ಇರಲಿ. ಕೇಂದ್ರ ಸರ್ಕಾರ ಯಡಿಯೂರಪ್ಪನವರಿಗೆ ಸರಿಯಾದ ಸಹಕಾರ ನೀಡಲಿಲ್ಲ. ಯಡಿಯೂರಪ್ಪರನ್ನ ಸಿಎಂ ಅಂತ ಭಾವನೆ ಮೂಡುವುದಕ್ಕೂ ಕೇಂದ್ರದ ನಾಯಕರು ಅವಕಾಶ ಕೊಡಲಿಲ್ಲ. ಬೊಮ್ಮಾಯಿ ಅವರನ್ನು ಈಗ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುವುದು ಬೇಡ ಎಂದರು.

    ಸರಿಯಾದ ಸಹಕಾರ, ಅನುದಾನವನ್ನು ಬೊಮ್ಮಾಯಿ ಅವರಿಗೆ ನೀಡಬೇಕು. ರಾಜ್ಯದ ಬೇಡಿಕೆ, ಇಲಾಖೆ ಹಣ, ಜಿಎಸ್‍ಟಿ ಹಣ ಸರಿಯಾಗಿ ರಾಜ್ಯಕ್ಕೆ ನೀಡಿ ಬೊಮ್ಮಾಯಿಗೆ ಕೇಂದ್ರ ಸಹಕಾರ ನೀಡಲಿ. ಯಾರ ಹಿಡಿತಕ್ಕೆ ಬೊಮ್ಮಾಯಿ ಅವರು ಒಳಗಾಗೋದು ಬೇಡ ಎಂದು ಹೇಳಿದರು.ಇದನ್ನೂ ಓದಿ:ನನ್ನನ್ನು ಬಿಟ್ಟು ಕ್ಯಾಬಿನೆಟ್ ಮಾಡಲ್ಲ – ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಕತ್ತಿ ಲಾಬಿ

    ಬಸವರಾಜ್ ಬೊಮ್ಮಾಯಿ ಅವರಿಗೆ ನೀರಾವರಿ ಸಚಿವರಾಗಿ ತುಂಬಾ ಅನುಭವ ಇದೆ. ಈ ಮೂರು ಯೋಜನೆ ಪರವಾಗಿ ರಾಜ್ಯದ ಪರವಾಗಿ ಕೇಂದ್ರ ನಿರ್ಧಾರ ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದ ಜನರ ಜೊತೆ ಚೆಲ್ಲಾಟ ಆಡುತ್ತಿದೆ. ಹೀಗಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ದೂರು ನೀಡುತ್ತಿದ್ದೇವೆ ಎಂದರು.

    ಇಂದು ಮೊದಲ ಹಂತದಲ್ಲಿ ರಾಜ್ಯಪಾಲರಿಗೆ ಮನವಿ ಕೊಡುತ್ತೇವೆ. ಪ್ರಧಾನಿ ಅವರಿಗೂ ಪತ್ರವನ್ನು ಕಳಿಸುತ್ತೇವೆ. ಕೇಂದ್ರ ಸರ್ಕಾರದ ಸ್ಪಂದನೆ ಮೇಲೆ ಮುಂದಿನ ತೀರ್ಮಾನ ಮಾಡುತ್ತೇವೆ. ನಿರಂತರವಾಗಿ ನಮ್ಮ ಹೋರಾಟ ರಾಜ್ಯದ ನೀರಾವರಿ ಪರ ಇರುತ್ತೆ. ಯಾವುದೇ ಕಾರಣಕ್ಕೂ ಇದನ್ನ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

    ನಾಡಿನ ನೀರಾವರಿ ವಿಚಾರದಲ್ಲಿ, ಉತ್ತರ ಕರ್ನಾಟಕ ಭಾಗಕ್ಕೆ ಮತ್ತು ಯುಕೆಪಿ ಯೋಜನೆಗೆ ದೇವೇಗೌಡರ ಕೊಡುಗೆ ಅಪಾರ. ಯಾವುದೇ ಪಕ್ಷಗಳಿಂದ ಅದನ್ನ ಮಾಡಲು ಆಗಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ ಆಗುತ್ತಿದೆ. ಜನರಿಗೆ ಇದನ್ನ ಎಚ್ಚರಿಸುವ ಕೆಲಸ ಮಾಡುತ್ತೇವೆ. ಹೀಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ:ನನ್ನ ಪ್ರೀತಿಯ ಊರು ಹುಬ್ಬಳ್ಳಿ : ಸಿಎಂ ಬೊಮ್ಮಾಯಿ