Tag: Janata Curfew

  • ಜನತಾ ಕರ್ಫ್ಯೂ ನಡುವೆಯೇ ಸರಳ ವಿವಾಹ

    ಜನತಾ ಕರ್ಫ್ಯೂ ನಡುವೆಯೇ ಸರಳ ವಿವಾಹ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಈ ಮಧ್ಯೆ ಸರಳ ವಿವಾಹವೊಂದು ನಡೆದಿದೆ.

    ಹೌದು. ನಗರದ ಅಣ್ಣಮ್ಮ ದೇವಾಲಯದಲ್ಲಿ ಜೋಡಿಯೊಂದು ನವ ಜೀವನಕ್ಕೆ ಕಾಲಿಟ್ಟಿದೆ. ಸಮಸ್ಯೆ ಎಂದು ಹೇಳಿ ಕಡಿಮೆ ಜನರೊಂದಿಗೆ ಮದುವೆ ಕಾರ್ಯ ಮುಗಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಕಡಿಮೆ ಜನ ಮದುವೆಗೆ ಬಂದಿದ್ದೀವಿ. ಕಷ್ಟದಲ್ಲಿ ನಾವು ಈಗ ಮದುವೆಗೆ ಮುಂದಾಗಿದ್ದೆವು. ನಾವು ಶೇಷಾದ್ರಿಪುರಂ ನಿವಾಸಿಗಳು ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಪ್ರಧಾನಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಬಸ್ ನಿಲ್ದಾಣ ಜನರಿಲ್ಲದೆ ಭಣಗುಡುತ್ತಿದೆ. ಫ್ಲಾಟ್ ಫಾರಂ 1 ರಿಂದ 34 ರ ರವರೆಗೂ ಜನವೇ ಇಲ್ಲದೇ ಖಾಲಿ ಹೊಡೆಯುತ್ತಿದ್ದು, ಈ ಮೂಲಕ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

    ಮೆಜೆಸ್ಟಿಕ್ ಕಪಾಲಿ ಚಿತ್ರಮಂದಿರ ರಸ್ತೆಯಲ್ಲಿ ಹಾಲು ಮಾರಾಟ ಮಾತ್ರ ನಡೆಯುತ್ತಿದ್ದು, ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ನಮ್ಮ ಮೆಟ್ರೋ ಸೇವೆ ಬಂದ್ ಆಗಿದೆ.

  • ಉಡುಪಿಯಲ್ಲಿ 10 ದಿನ ಬ್ಯೂಟಿ ಪಾರ್ಲರ್ ಬಂದ್

    ಉಡುಪಿಯಲ್ಲಿ 10 ದಿನ ಬ್ಯೂಟಿ ಪಾರ್ಲರ್ ಬಂದ್

    ಉಡುಪಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ 10 ದಿನ ಉಡುಪಿ ಜಿಲ್ಲೆಯ ಬ್ಯೂಟಿ ಪಾರ್ಲರ್ ಗಳು ಬಂದ್ ಆಗಲಿವೆ.

    ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷೆ ವೇದ ಸಂಜೀವ್ ಸುವರ್ಣ, ಕೋವಿಡ್ 19 ಮಹಾಮರಿಯನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಮತ್ತು ಅವಶ್ಯಕವಾಗಿದೆ. ಸ್ವಚ್ಛತೆ ಮತ್ತು ಜಾಗೃತಿ ವಹಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ನಮ್ಮ ಸೇವೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲರೂ ಸಹಕರಿಸಬೇಕು. ನಮಗೂ ಕೊರೋನಾ ಬೇಡ- ನಮ್ಮಿಂದ ಕೊರೋನಾ ಹರಡೋದು ಬೇಡ ಎಂದು ಹೇಳುವ ಮೂಲಕ ಜನತಾ ಕರ್ಫ್ಯೂಗೆ ಮಹಿಳಾ ಸೌಂದರ್ಯ ತಜ್ಞರ ಉಡುಪಿ ಜಿಲ್ಲಾ ಸಂಘ ಬೆಂಬಲ ನೀಡಿದೆ.

    ಚಿಕ್ಕಬಳ್ಳಾಪುರ ಗೌರಿಬಿದನೂರಿನ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ವ್ಯಕ್ತಿ ಮೆಕ್ಕಾದಿಂದ ಹೈದರಾಬಾದ್ ಮಾರ್ಗವಾಗಿ ಕರ್ನಾಟಕಕ್ಕೆ ಆಗಮಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಶುಕ್ರವಾರದ ವರದಿ ಪ್ರಕಾರ, ಭಾರತದಲ್ಲಿ ಸೋಂಕಿತರ ಸಂಖ್ಯೆ 249ಕ್ಕೆ ಏರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಕೇರಳದ ಕಾಸರಗೋಡಿನಲ್ಲಿ 5 ಹೊಸ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದರೆ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 5 ಪಟ್ಟು ಹೆಚ್ಚಳವಾಗಿದೆ.

    ಒಟ್ಟು 185 ರಾಷ್ಟ್ರ ಹಾಗೂ ಪ್ರಾಂತ್ಯಗಳ ಮೇಲೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ವೈರಸ್‍ಗೆ ಈವರೆಗೆ ಸುಮಾರು 2,75,953 ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ವಿಶ್ವದೆಲ್ಲೆಡೆ ಒಟ್ಟು 11,399 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 91,912 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,72,642 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

  • ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಜನರು ಸಜ್ಜು

    ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಜನರು ಸಜ್ಜು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಮಂದಿ ಒಂದು ದಿನ ಮುಂಚಿತವಾಗಿ ಸಿದ್ಧಗೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯ ಹೊಸ ಪ್ರಯತ್ನಕ್ಕೆ ಬೆಂಗಳೂರು ಜನರು ಉಘೇ ಉಘೇ ಎಂದಿದ್ದಾರೆ. ಮೋದಿಯ ಜನತಾ ಕರ್ಫ್ಯೂಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾಳೆ ಎಲ್ಲರೂ ಮನೆ ಬಿಟ್ಟು ಹೊರಗೆ ಬರದೆ ಇರುವುದಕ್ಕೆ ಸಿದ್ಧಗೊಂಡಿದ್ದಾರೆ.

    ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಯಾರು ಕೂಡ ಮನೆಯಿಂದ ಹೊರಗೆ ಬರಬಾರದು ಹಾಗೂ ಸಂಜೆ 5 ಗಂಟೆಗೆ ಅವರರವರ ಮನೆಯ ಬಾಲ್ಕಾನಿಯಲ್ಲಿ ನಿಂತು ಮಹಾಮಾರಿಯನ್ನು ಮಟ್ಟಹಾಕಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪತ್ರಿಕ್ಯೋದ್ಯಮದ ಬಳಗದವರಿಗೆ ಚಪ್ಪಾಳೆ ಹೊಡೆಯುವ ಮೂಲಕ ಅವರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸಲ್ಲು ಬೆಂಗಳೂರು ಜನರು ತಯಾರಾಗಿದ್ದಾರೆ.

    ಭಾನುವಾರ ಮುಂಜಾನೆಯಿಂದ ಎಲ್ಲರೂ ಅದರಲ್ಲೂ ಹಿರಿಯ ನಾಗರಿಕರು ಹಾಗೂ ಮಕ್ಕಳು ಯಾರು ಕೂಡ ಹೊರಗೆ ಬರದ ರೀತಿಯಲ್ಲಿ ನೋಡಿಕೊಳ್ಳುವಂತೆ ಪ್ರಧಾನಿ ಸಂದೇಶ ಸಾರಿದ್ದರು. ಪ್ರಧಾನಿ ನರೇಂದ್ರ ಮೋದಿಯ ಈ ಸಂದೇಶಕ್ಕೆ ಬದ್ಧರಾಗಿರುಲು ಜನರು ಸಜ್ಜಾಗಿದ್ದಾರೆ.

  • ಕೊರೊನಾ ತಡೆಗೆ ಭಾನುವಾರ ಜನತಾ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ಕೊರೊನಾ ತಡೆಗೆ ಭಾನುವಾರ ಜನತಾ ಕರ್ಫ್ಯೂ – ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಮನೆಯಂಗಳಕ್ಕೆ ಬಂದು ಬಾಗಿಲು ಬಡಿಯುತ್ತಿರುವ ಕೊರೊನಾ ಮಾರಿ ಹೊಡೆದೊಡಿಸಲು ಪ್ರಧಾನಿ ಮೋದಿ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಪ್ರಯೋಗಿಸಿರುವ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಇಡೀ ಕರುನಾಡು ಕಂಕಣ ತೊಟ್ಟಿದೆ.

    ಬೆಂಗಳೂರಿಗರನ್ನು ಸೇರಿದಂತೆ ಇಡೀ ರಾಜ್ಯದ ಜನರನ್ನು ಮಾತನಾಡಿಸಿದಾಗ, ನಾವು ಜನತಾ ಕರ್ಫ್ಯೂನಲ್ಲಿ ಪಾಲ್ಗೊಳ್ಳುತ್ತೇವೆ. ಮನೆಯಲ್ಲಿ ಇದ್ದು ಜನತಾ ಕರ್ಫ್ಯೂಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಭಾನುವಾರದ ಜನತಾ ಕರ್ಫ್ಯೂಗೆ ರಾಜ್ಯದ ಸಾವಿರಾರು ಸಂಘಟನೆಗಳು, ಬೆಂಬಲ ಘೋಷಿಸಿವೆ.

    ಒಂದು ದಿನದ ಮಟ್ಟಿಗೆ ತಮ್ಮೆಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುತ್ತೇವೆ. ಪ್ರಧಾನಿ ಮೋದಿ ಹೇಳುತ್ತಿರುವುದು ನಮ್ಮ ಒಳ್ಳೆಯದಕ್ಕೆ ಎಂದು ಸಂಘ ಸಂಸ್ಥೆಗಳ ಮುಖಂಡರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಭಾನುವಾರದ ಜನತಾ ಕರ್ಫ್ಯೂ ಯಶಸ್ವಿ ಆಗೋದು ಬಹುತೇಕ ಖಚಿತವಾಗಿದೆ.

    ಭಾನುವಾರ ಏನೇನು ಇರಲ್ಲ:
    * ದರ್ಶಿನಿ, ಕೆಫೆ, ಹೋಟೆಲ್, ಸ್ಟಾರ್ ಹೋಟೆಲ್
    * ನಗರ ಪೊಲೀಸ್ ಕಮೀಷನರ್ ಕಚೇರಿ (ಕಂಟ್ರೋಲ್ ರೂಮ್ ಹೊರತುಪಡಿಸಿ ಬೇರೆಲ್ಲಾ ಕಚೇರಿ ಬಂದ್)
    * ಬಿಎಂಟಿಸಿ (ಶೇ.20ರಷ್ಟು ಮಾತ್ರ ಸೇವೆ), ಕೆಎಸ್ಆರ್‌ಟಿಸಿ, ಲಾರಿ
    * ನಮ್ಮ ಮೆಟ್ರೋ
    * ರೈಲು ಸೇವೆ (ನಾಳೆ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆಯವರೆಗೆ)
    * ಆಟೋ, ಓಲಾ, ಊಬರ್


    * ಎಪಿಎಂಸಿ, ತರಕಾರಿ ಮಾರ್ಕೆಟ್ (ತರಕಾರಿ, ಹೂವು, ಹಣ್ಣು)
    * ಕೆ.ಆರ್ ಮಾರ್ಕೆಟ್
    * ಆಭರಣ ಮಳಿಗೆ
    * ಬಟ್ಟೆ ಅಂಗಡಿ
    * ಬಾರ್, ವೈನ್ ಶಾಪ್
    * ಪೀಣ್ಯಾ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳು
    * ದೇವಸ್ಥಾನ
    * ಚಿತ್ರೋದ್ಯಮದ ಶೂಟಿಂಗ್, ಚಟುವಟಿಕೆ
    * ಇಂದಿರಾ ಕ್ಯಾಂಟೀನ್

    ಜನತಾ ಕರ್ಫ್ಯೂ- ಏನೇನು ಇರುತ್ತೆ?
    * ಅಂಬುಲೆನ್ಸ್ ಸೇವೆ
    * ಆಸ್ಪತ್ರೆ, ಮೆಡಿಕಲ್ ಶಾಪ್
    * ಪೆಟ್ರೋಲ್ ಬಂಕ್ ( ಶಿವಮೊಗ್ಗ, ಮೈಸೂರಿನಲ್ಲಿ ಮಾತ್ರ ಬಂದ್)
    * ಹಾಲು, ಪೇಪರ್

     

  • ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ

    ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ

    – ಜನರೇ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು
    – ಅದಷ್ಟು ಜನ ಮನೆಯಲ್ಲಿರಿ, ಹೊರಗಡೆ ಬರಬೇಡಿ
    – ವೈದ್ಯರು, ನರ್ಸ್‍ಗಳು, ಮಾಧ್ಯಮಗಳಿಗೆ ಧನ್ಯವಾದ

    ನವದೆಹಲಿ: ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನರೇ ಈ ಭಾನುವಾರ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ದೇಶದ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ದೇಶವ್ಯಾಪಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆಗೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಪರಿಸ್ಥಿತಿ ಎರಡನೇ ಮಹಾಯುದ್ಧದ ಸನ್ನಿವೇಶಕ್ಕಿಂತ ಗಂಭೀರವಾಗಿದೆ. ಮುಂದಿನ ಕೆಲವು ವಾರ ಮನೆಯಿಂದ ಹೊರಗೆ ಬರಬೇಡಿ. ಈ ವೇಳೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಜನತೆ ಮನೆಯಲ್ಲಿ ಇರಬೇಕು. ಈ ಅವಧಿಯಲ್ಲಿ ಯಾರು ಹೊರಗಡೆ ಓಡಾಡಬೇಡಿ ಎಂದು ಮನವಿ ಮಾಡಿಕೊಂಡರು.

    ಜನರೇ ವಿಧಿಸುವ  ಕರ್ಫ್ಯೂ ಯಶಸ್ವಿಯಾಗಲು ಎನ್‍ಸಿಸಿ, ಎನ್‍ಎಸ್‍ಎಸ್ ಸೇರಿದಂತೆ ಸ್ವಯಂ ಸೇವಾ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಕನಿಷ್ಟ 10 ಜನರಿಗೆ ತಿಳಿಸಬೇಕು. ಇದು ಭಾರತದ ಮಟ್ಟಿಗೆ ದೊಡ್ಡ ಪರೀಕ್ಷೆ ಎಂದರು.

     

    ಕೊರೊನಾಗೆ ಔಷಧಿ ಇಲ್ಲ. ಹೀಗಾಗಿ ನಾವು ಜಾಗ್ರತೆಯಿಂದ ಇರಲು ಸಂಕಲ್ಪ ಮತ್ತು ಸಂಯಮ ಬಹಳ ಮುಖ್ಯ. ಸ್ವಯಂ ಸಂಕಲ್ಪದಿಂದ ನಾವು ಮಹಾಮಾರಿಯನ್ನು ಹೊಡೆದೋಡಿಸಬಹುದು. ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ವೈರಸ್ ಸೋಕದೇ ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.

    ಮುಂದಿನ ಕೆಲವು ವಾರ ತುರ್ತು ಸಂದರ್ಭ, ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರಬೇಡಿ. ನಿಮಗೆ ನೀವು ಸ್ವಯಂ ಗೃಹ ನಿರ್ಬಂಧ ವಿಧಿಸಿಕೊಳ್ಳಿ. ಆದರಲ್ಲೂ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬರಲೇಬೇಡಿ ಎಂದು ನಿರ್ದೇಶನ ನೀಡಿದರು.

    ವೈದ್ಯರು, ನರ್ಸ್, ಮಾಧ್ಯಮ ಸೇರಿದಂತೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಭಾನುವಾರ ಸಂಜೆ 5 ಗಂಟೆಗೆ ಮನೆಯಲ್ಲೇ ನಿಂತು ವಂದನೆ ಸಲ್ಲಿಸಬೇಕು. ಕೊರೊನಾ ಬಂದಿದ್ದಕ್ಕೆ ನಾವು ಎದೆಗುಂದಬೇಕಿಲ್ಲ .ಆತಂಕ ಪಡಬೇಕಿಲ್ಲ. ಆದರೆ ಕೊರೊನಾ ವಿರುದ್ಧದ ಕದನವನ್ನು ಇನ್ನೂ ಕೆಲವು ವಾರ ಮಾಡಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಸಹಕಾರ, ಸಮಯ ಬೇಕಿದೆ. ಮುಂಬರುವ ಕೆಲ ದಿನಗಳನ್ನು ನಮಗೆ ನೀಡಿ. ಕೆಲವೊಂದು ತ್ಯಾಗಗಳಿಗೆ ಜನತೆ ಸಿದ್ದರಾಬೇಕಿದೆ ಎಂದು ಕರೆ ನೀಡಿದರು.