Tag: janaswaraj yatra

  • ರಾಷ್ಟ್ರದಲ್ಲಿಯೇ ಚುನಾವಣೆಗೆ ಕುಟುಂಬದವರೇ ಹೆಚ್ಚು ಮಂದಿ ಸ್ಪರ್ಧಿಸಿರುವ ಪಕ್ಷ ಜೆಡಿಎಸ್: ಕೆ.ಎಸ್.ಈಶ್ವರಪ್ಪ

    ರಾಷ್ಟ್ರದಲ್ಲಿಯೇ ಚುನಾವಣೆಗೆ ಕುಟುಂಬದವರೇ ಹೆಚ್ಚು ಮಂದಿ ಸ್ಪರ್ಧಿಸಿರುವ ಪಕ್ಷ ಜೆಡಿಎಸ್: ಕೆ.ಎಸ್.ಈಶ್ವರಪ್ಪ

    ಹಾಸನ: ರಾಷ್ಟದಲ್ಲಿಯೇ ಚುನಾವಣೆಗೆ ಒಂದು ಕುಟುಂಬದವರೇ ಹೆಚ್ಚು ಮಂದಿ ಸ್ಪರ್ಧಿಸಿರುವ ಪಕ್ಷ ಜೆಡಿಎಸ್ ಎಂದು ಕೆಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

    ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ವ್ಯಂಗ್ಯವಾಡಿದ ಅವರು, ದೇವೇಗೌಡರ ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ನಿಮಗೆ ಗೊತ್ತಾ? ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಇನ್ನೂ ಯಾರಾದರು ಉಳಿದಿದ್ದಾರಾ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ

    ಎಂಎಲ್‌ಸಿ ಚುನಾವಣೆಗೆ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅಭ್ಯರ್ಥಿ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ನಮ್ಮ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು. ರಾಷ್ಟದಲ್ಲಿಯೇ ಚುನಾವಣೆಗೆ ಒಂದು ಕುಟುಂಬದವರೇ ಸ್ಪರ್ಧಿಸಿರುವ ಪಕ್ಷ ಜೆಡಿಎಸ್. ವಿಶ್ವದಲ್ಲಿಯೇ ಮೊದಲನೆಯ ಸ್ಥಾನದ ನಾಯಕ ಪಟ್ಟಿಯಲ್ಲಿರುವುದು ಮೋದಿ ಅವರು. ವಿಶ್ವದಲ್ಲಿಯೇ ಎಂಟು ಜನ ಒಂದೇ ಕುಟುಂಬದವರು ಪಕ್ಷದಲ್ಲಿರುವುದು ಜೆಡಿಎಸ್‌ನಲ್ಲಿ. ಆದ್ದರಿಂದ ಸೂರಜ್ ರೇವಣ್ಣ ವಿರುದ್ಧ ಸ್ಪರ್ಧಿಸಿರುವ ನಮ್ಮ‌ ಪಕ್ಷದ ಎಂಎಲ್‌ಸಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ. ಮುಂಬರುವ ದಿನಗಳಲ್ಲಿ ಈ ಜಿಲ್ಲೆ ಭಾರತೀಯ ಜನತಾ ಪಕ್ಷದ ಜಿಲ್ಲೆ ಆಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಈಗ ಸೇನಾಧಿಕಾರಿ

  • ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತ: ಶಾಸಕ ಪ್ರೀತಂಗೌಡ ವ್ಯಂಗ್ಯ

    ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತ: ಶಾಸಕ ಪ್ರೀತಂಗೌಡ ವ್ಯಂಗ್ಯ

    ಹಾಸನ: ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಜೆಡಿಎಸ್ ಕಾರ್ಯಕರ್ತರು ಪಕ್ಷದ ಜೀತ ಮಾಡಲು ಇದ್ದಾರೆ ಎಂದು ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

    ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ, ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮದುವೆ ಬೇಡವೆಂದ ಪ್ರಿಯಕರನ ಮೇಲೆ ಆಸಿಡ್ ಎರಚಿದಳು

    ದೇವೇಗೌಡರ ಕುಟುಂಬ ಇರುವುದೇ ಚುನಾವಣೆಗೆ ಸ್ಪರ್ಧಿಸಲು. ಕುಟುಂಬ ರಾಜಕಾರಣದಿಂದ ಜೆಡಿಎಸ್ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ಈ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹೋರಾಟ ನಡೆಯಲಿದೆ. ಜೆಡಿಎಸ್ ಪಕ್ಷ ಕೇವಲ ಮೂರು ಜೆಲ್ಲೆಗೆ ಮಾತ್ರ ಸೀಮಿತವಾಗಿದೆ. ನಮ್ಮ ಪಕ್ಷದ ಎಂಎಲ್‌ಸಿ ಅಭ್ಯರ್ಥಿ ಹೆಚ್.ಎಂ.ವಿಶ್ವನಾಥ್ ಗೆದ್ದೇ ಗೆಲ್ಲುತ್ತಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಶಾಸಕ ಪ್ರೀತಂಗೌಡ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಭಾಷಣದಲ್ಲಿಂದು ಪೂರ್ತಿ ಮೋದಿ ‘ಜೀ’ ಮಯ

  • ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

    ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

    ಕೊಪ್ಪಳ: ಅಲ್ಲಿ ಸೋನಿಯಾ ಗಾಂಧಿ ಮಗಳ ಹೆಸರು ಪ್ರಿಯಾಂಕಾ, ಇಲ್ಲಿ ನಟ ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದರೆ ಖರ್ಗೆ ಮಗ ಯಾವ ಪ್ರಿಯಾಂಕ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.

    ನಗರದ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಅಲ್ಲಿ ಸೋನಿಯಾ ಮಗಳು ಪ್ರಿಯಾಂಕಾ, ಇಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕ ನಿಮ್ಮಲ್ಲೇ ಪ್ರಿಯಾಂಕಾ ಎಂದು ಕರೆದರೆ ಮಹಿಳೆಯರೇ ತಿರುಗಿ ನೋಡುತ್ತಾರೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೆಸರಿನ ಕುರಿತು ಮತ್ತೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

    ಪ್ರಿಯಾಂಕ್ ಖರ್ಗೆ ಹೆಸರಿನಲ್ಲೇ ದಾಸ್ಯ ಇದೆ. ನೀವು ಸೋನಿಯಾ ಮಗಳ ಹೆಸರು ಇಟ್ಟುಕೊಂಡಿದ್ದೀರಿ. ಶೋಷಿತ ವರ್ಗದ ನೀವು ರಾಜ್ಯಾದ್ಯಂತ ಬಂಗಲೆ ಹೊಂದಿದ್ದೀರಿ. ನೀವು ಬಿಟ್ ಕಾಯಿನ್ ಬಗ್ಗೆ ಕೇಳುತ್ತೀರಿ ಆದರೆ ಚುನಾವಣೆ ಆಯೋಗಕ್ಕೆ ಸಾಕಷ್ಟು ಮನೆ ಇರುವ ಮಾಹಿತಿಯನ್ನೇ ನೀಡಿಲ್ಲ. ರೆಫೇಲ್‌ನಲ್ಲಿ ತಾಯಿ-ಮಗ ಹಗರಣ ಮಾಡಿದ್ದಾರೆ ಅಂತಾ ಗೊತ್ತಾಯಿತು. ಅದಕ್ಕೆ ಈಗ ಬಿಟ್ ಕಾಯಿನ್ ಹಿಡಿದುಕೊಂಡಿದ್ದಾರೆ. ಬಿಜೆಪಿ ಆರ್‌ಎಸ್‌ಎಸ್‌ಗೆ ಜನಿಸಿದೆ. ಅದರ ಸಿದ್ಧಾಂತರ ಅಡಿಯಲ್ಲೇ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಹುಟ್ಟಿರುವುದು ಬ್ರಿಟಿಷರಿಗೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ ಆದರೆ ಕಾಂಗ್ರೆಸ್‌ನ ಕ್ಯಾಪ್ಟರ್ ಯಾರು? ಸಿದ್ದರಾಮಯ್ಯ ಅವರದ್ದು ಒಂದು ಟೀಮ್, ಡಿಕೆಶಿ ಅವರದ್ದು ಮತ್ತೊಂದು ಟೀಮ್. ಸಿದ್ದರಾಮಯ್ಯ ಅವರಿಗೆ ಗೌರಿಪಾಳ್ಯದ ನ್ಯಾಷನಲ್ ಟ್ರಾವೆಲ್ ವೈಸ್ ಕ್ಯಾಪ್ಟನ್‌, ಡಿಕೆಶಿಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್. ಇವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರುವುದಿಲ್ಲ, ತಾಲೀಬಾನ್ ಸರ್ಕಾರ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    priyank kharge

    ಬಿಟ್‌ ಕಾಯಿನ್‌ ಹಗರಣದ ವಿಚಾರವಾಗಿ ಬಿಜೆಪಿ ವಿರುದ್ಧ ಶಾಸಕ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದ ವೇಳೆ ಪ್ರತಾಪಸಿಂಹ ಅವರನ್ನು ಪೇಪರ್‌ ಸಿಂಹ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಾಪಸಿಂಹ ತಿರುಗೇಟು ನೀಡಿ ಪ್ರಿಯಾಂಕ್‌ ಖರ್ಗೆ ಹೆಸರನ್ನು ಇಟ್ಟುಕೊಂಡು ವ್ಯಂಗ್ಯವಾಡಿದ್ದರು. ಈಗ ಮತ್ತೆ ಖರ್ಗೆ ಅವರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಹರಿಹಾಯ್ದಿದ್ದಾರೆ.

  • ಪ್ರಧಾನಿ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ: ಸಚಿವ ಸುಧಾಕರ್

    ಪ್ರಧಾನಿ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ: ಸಚಿವ ಸುಧಾಕರ್

    ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರು ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಮೊದಲು ಅರಿಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

    ಬಿಜೆಪಿ-ಕರ್ನಾಟಕ ವತಿಯಿಂದ ದಾವಣಗೆರೆಯಲ್ಲಿ ನಡೆದ ಜನಸ್ವರಾಜ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ವಿರೋಧ ಪಕ್ಷದ ಇಬ್ಬರು ನಾಯಕರು ಹೇಳಿದ್ದಾರೆ. ದೇಶ ವಿಭಜನೆ ಮಾಡಲು ಜಾತಿ ವಿಷಬೀಜ ಬಿತ್ತುವುದು, ಧರ್ಮಗಳ ನಡುವೆ ವಿವಾದ ತರುವುದು ಕಾಂಗ್ರೆಸ್ ಪಕ್ಷದ ಪ್ರತೀತಿ. ಕೆಲ ನಾಯಕರು ಅಹಿಂದ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಚ್ಯುತಿ ತರುವ ಆಲೋಚನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕ ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಅಹಿಂದ ಎಂದು ಹೇಳುವ ರಾಜ್ಯದ ನಾಯಕರು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

    ಪ್ರಧಾನಿ ಮೋದಿಯವರು 20 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದಾರೆ. ಆದರೂ ಅವರು ಜಾತೀಯತೆಯನ್ನು ಮಾಡಲಿಲ್ಲ. ಸಬ್ ಕಾ ವಿಶ್ವಾಸ್ ಎಂದು ಎಲ್ಲರ ವಿಶ್ವಾಸ ಗಳಿಸಿದರು. ಆದರೆ ಕಾಂಗ್ರೆಸ್‌ ಪಕ್ಷ ಹಿಂದುಳಿದವರು, ದಲಿತರು, ವೀರಶೈವ ಲಿಂಗಾಯತರನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸತತ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

    ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಕೋವಿಡ್ ಸಮಯದಲ್ಲಿ ಜನರ ಆರೋಗ್ಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ‘ಕಾಮನ್ ಮ್ಯಾನ್’ ಆಗಿ ಆಡಳಿತ ನಡೆಸುತ್ತಿದ್ದಾರೆ. ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುವವರು ಅವರೆಲ್ಲ ಜೀತದಾಳಾಗಿ ಇರಲಿ ಎಂದು ಬಯಸುತ್ತಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವವರು ಅವರ ಉದ್ಧಾರಕ್ಕಾಗಿ ಏನೂ ಮಾಡಿಲ್ಲ. ಆದರೆ ಪ್ರಧಾನಿಗಳು ಮುದ್ರಾ ಯೋಜನೆ ತಂದು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ನೆರವಾಗಿದ್ದಾರೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗುವುದು ಬಹಳ ಕಷ್ಟ. ಜನರಿಗೆ ಹೇಗೆ ಸ್ಪಂದಿಸುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಗ್ರಾಮದ ಮತದಾರರು ನೋಡುತ್ತಾರೆ. ಈ ಸವಾಲು ಎದುರಿಸಿ ಆಯ್ಕೆಯಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಈಗ ನಡೆಯುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಯಾವುದೇ ಕಾಯ್ದೆಯ ತಿದ್ದುಪಡಿ, ರಚನೆ ಆಗಬೇಕೆಂದರೆ ಎರಡೂ ಮನೆಗಳಲ್ಲಿ ಬೆಂಬಲ ಪಡೆಯಬೇಕು. ಬಿಜೆಪಿ ವಿಧಾನಪರಿಷತ್‌ನಲ್ಲಿ ಹೆಚ್ಚಿನ ಸಂಖ್ಯೆ ಪಡೆಯಲು ಅವಕಾಶ ಒದಗಿ ಬಂದಿದೆ. ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು ವಿಧಾನಪರಿಷತ್‌ಗೆ ಉತ್ತಮರನ್ನು ಆಯ್ಕೆ ಮಾಡಬೇಕು. ಆಮಿಷದ ಮತಾಂತರ ತಡೆಯಲು ಕಾಯ್ದೆ ತರಬೇಕಿದೆ. ಇಂತಹ ಕಾನೂನು ತರಲು ಮೇಲ್ಮನೆಯಲ್ಲಿ ಹೆಚ್ಚಿನ ಬಲ ಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ವಿಧಾನಪರಿಷತ್ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸ್ವಾಭಿಮಾನದಿಂದ ಗೆದ್ದಿರುತ್ತಾರೆ. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಿದಂತಾಗುತ್ತದೆ ಎಂದರು.