Tag: janashirvad yatra

  • ಬೆಂಗ್ಳೂರಲ್ಲಿಂದು ರಸ್ತೆಗಿಳಿಯೋ ಮುನ್ನ ಎಚ್ಚರ- ಜನಾಶೀರ್ವಾದಕ್ಕಾಗಿ ನಡೀತಿದೆ ರಾಹುಲ್ ಶೋ

    ಬೆಂಗ್ಳೂರಲ್ಲಿಂದು ರಸ್ತೆಗಿಳಿಯೋ ಮುನ್ನ ಎಚ್ಚರ- ಜನಾಶೀರ್ವಾದಕ್ಕಾಗಿ ನಡೀತಿದೆ ರಾಹುಲ್ ಶೋ

    ಬೆಂಗಳೂರು: ಇಂದು ಭಾನುವಾರ ಅಂತ ಮೂವಿಗೆ, ಶಾಪಿಂಗ್ ಹೋಗೋಣ, ಲಾಂಗ್ ಡ್ರೈವ್‍ಗೆ ಹೋಗೋಣ ಅಂತಾ ಬೆಂಗಳೂರು ರಸ್ತೆಗೆ ಇಳಿಯೋ ಮುನ್ನಾ ಅಲರ್ಟ್ ಆಗಿರಿ.

    ಯಾಕೆಂದ್ರೆ ರಾಜ್ಯಾದ್ಯಂತ ಐದು ಹಂತದ ಅಬ್ಬರದ ಪ್ರಚಾರ ಯಾತ್ರೆಗಳ ಮೂಲ ಕೈ ಬಲಪಡಿಸಲು ಹೊರಟ ರಾಹುಲ್ ಯಾತ್ರೆ ಇಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ತಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ನಗರದೆಲ್ಲೆಡೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ಕೆಳಗೆ ಬೀಳುತ್ತಿದ್ದ ಟೋಪಿ ಹಿಡಿದು ಪೊಲೀಸ್ ಪೇದೆಗೆ ತೊಡಿಸಿದ ರಾಹುಲ್ ಗಾಂಧಿ

    ಅರಮನೆ ಮೈದಾನದಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸುಮಾರು 4-5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹೆಬ್ಬಾಳ, ಏರ್‍ಪೋರ್ಟ್ ರೋಡ್, ಮೇಖ್ರಿ ಸರ್ಕಲ್, ಕಾರ್ಪೋರೇಷನ್, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗದಲ್ಲೂ ಟ್ರಾಫಿಕ್ ಜಾಮ್ ಆಗಲಿದೆ. ಕಾರ್ಯಕರ್ತರು, ಬಸ್, ಬೈಕ್‍ನಲ್ಲಿ ದೂರದೂರಿಂದ ಬರೋದ್ರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಇಂದಿನ ಕಾರ್ಯಕ್ರಮಗಳು:
    * ಬೆಳಗ್ಗೆ 8.30ಕ್ಕೆ ಅಶೋಕ ಹೋಟೆಲ್‍ನಲ್ಲಿ ಮಾಧ್ಯಮದವರ ಜೊತೆ ಸಂವಾದ
    * ಬೆಳಗ್ಗೆ 9.30ಕ್ಕೆ ಜಕ್ಕರಾಯನ ಕೆರೆಯಲ್ಲಿ ಸಫಾಯಿ ಕರ್ಮಚಾರಿಗಳ ಜೊತೆ ಸಂವಾದ
    * ಬೆಳಗ್ಗೆ 11.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಚರ್ಚೆ
    * ಮಧ್ಯಾಹ್ನ 12.30ಕ್ಕೆ ಖಾಸಗಿ ಹೋಟೆಲ್‍ನಲ್ಲಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರ ಜೊತೆ ಸಂವಾದ
    * ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ.