Tag: Janardhana Reddy

  • ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ?

    ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ?

    ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಅವರು ಡಿ.25ರಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ಅವರು, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮುಂದಿನ ವಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಡಿ.25ರಂದು ಬೆಂಗಳೂರಿನಲ್ಲಿ(Bengaluru) ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದಾರೆ. ಒಂದು ವಾರದ ವಿಶ್ರಾಂತಿ ಬಳಿಕ ಮತ್ತೆ ಓಡಾಟ ಶುರು ಮಾಡಿರುವ ರೆಡ್ಡಿ, ತಮ್ಮ ಪ್ರವಾಸದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.


    ಡಿ.18 ರಂದು ಗಂಗಾವತಿಯಲ್ಲಿ ಸುದ್ದಿಗೋಷ್ಠಿ ಕರೆಯುವುದಾಗಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ತಿಳಿಸಿದ್ದು, ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಇದೀಗ ಸ್ವತಃ ಜನಾರ್ದನ ರೆಡ್ಡಿ ಅವರು ಡಿ.25ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಬಾರೀ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಒಂದೇ ಏಟಿಗೆ ಎರಡು ಹಕ್ಕಿ – ಬಿಜೆಪಿ `ಸಾವರ್ಕರ್’ ಅಸ್ತ್ರ ಸೀಕ್ರೆಟ್ ಏನು?

    ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

     

    ಡಿ.19ರಂದು ತುಮಕೂರಿನ ಸಿದ್ದಗಂಗಾ ಮಠ ಮತ್ತು ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ, ಡಿ.20ಕ್ಕೆ ಗದಗಿನ ಪುಟ್ಟರಾಜ ಗವಾಯಿಗಳು ಮತ್ತು ತೋಂಟದಾರ್ಯ ಶ್ರೀಗಳ ಗದ್ದುಗೆ ದರ್ಶನ, ಡಿ.21ಕ್ಕೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಭಾಗದ ಮುಖಂಡರನ್ನು ಭೇಟಿ ಮಾಡಲಿರುವ ರೆಡ್ಡಿ ಚರ್ಚೆ ನಡೆಸಲಿದ್ದಾರೆ. ಡಿ.22ರಂದು ಗಂಗಾವತಿಯ ದುರ್ಗಾದೇವಿ ಜಾತ್ರೆಯಲ್ಲಿ ರೆಡ್ಡಿ ಭಾಗಿಯಾಗಲಿದ್ದಾರೆ.

    ಕೊನೆಗೆ ಡಿ.25ರಂದು ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ರೆಡ್ಡಿ ತಮ್ಮ ರಾಜಕೀಯ ಪಕ್ಷದ ಹೆಸರು ಪ್ರಕಟ ಮಾಡಲಿದ್ದಾರೆಂದು ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಗೆ ಗಂಗಾವತಿ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡಿದ್ದೇನೆ: ಜನಾರ್ದನ ರೆಡ್ಡಿ

    ಚುನಾವಣೆಗೆ ಗಂಗಾವತಿ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡಿದ್ದೇನೆ: ಜನಾರ್ದನ ರೆಡ್ಡಿ

    ಗದಗ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರ ಮುಂದಿನ ರಾಜಕಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿರುವ ಬೆನ್ನಲ್ಲೇ ತಾವು ಗಂಗಾವತಿ (Gangavati) ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ತೀರ್ಮಾನವನ್ನು ಘೋಷಿಸುವುದಕ್ಕೂ ಮುನ್ನವೇ ರೆಡ್ಡಿ ಗಂಗಾವತಿಯಲ್ಲಿ ತಮ್ಮದೇ ರೀತಿಯಲ್ಲಿ ಅಸಲಿ ಆಟ ಪ್ರಾರಂಭಿಸಿದ್ದಾರೆ.

    ಜನಾರ್ದನ ರೆಡ್ಡಿಯವರು ಇಂದು ನಗರದ ಐತಿಹಾಸಿಕ ಬಸವೇಶ್ವರ ಪುತ್ಥಳಿ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಗಂಗಾವತಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ನಿಶ್ಚಯಿಸಿದ್ದೆನೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕಳೆದ 12 ವರ್ಷದಿಂದ ಬಳ್ಳಾರಿಯಲ್ಲಿದ್ದೇನೆ. ಬಳ್ಳಾರಿಯಿಂದ ಗಂಗಾವತಿಗೆ 1 ಗಂಟೆ ಪ್ರಯಾಣ. ಗಂಗಾವತಿ ಕ್ಷೇತ್ರವನ್ನು ಮುಂದಿನ ಚುನಾವಣೆಗೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

    ಅದು ಆಂಜನೇಯನ ಜನ್ಮಸ್ಥಳ, ವಿದ್ಯಾರಣ್ಯರು ತಪಸ್ಸು ಮಾಡಿದ ಪುಣ್ಯಭೂಮಿ. ಮತ್ತೆ ಹೊರಗಡೆ ಇರುವ ಪರಿಸ್ಥಿತಿ ಬಂದಾಗ ಪದೆ ಪದೆ ಬೆಂಗಳೂರಿಗೆ ಹೋಗೊಕಾಗಲ್ಲ. ಬಳ್ಳಾರಿಯಿಂದ ಹಿಡಿದು ಗದಗ, ಬೆಳಗಾವಿ, ಬೀದರ್, ಉತ್ತರ ಕರ್ನಾಟಕದ ಗಾಳಿ, ವಾತಾವರಣ ನನಗೆ ಹಿಡಿಸಿದೆ. ಹೀಗಾಗಿ ನಾನು ಗಂಗಾವತಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿ ಅವರು ಬೇರೆ ಪಕ್ಷ ಕಟ್ಟುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯೇ ನನ್ನ ಇಡೀ ರಾಜಕೀಯದ ಜೀವನ. ಕಳೆದ 30 ವರ್ಷಗಳಿಂದ ಬಿಜೆಪಿಯೇ ನಮ್ಮ ಕುಟುಂಬ. ಲಾಲ್ ಕೃಷ್ಣಾ ಆಡ್ವಾಣಿಯವರ ರಾಮಮಂದಿರ ವಿಚಾರದಲ್ಲಿ ಎಮೋಷನಲ್‌ನಿಂದ ಬಂದವರು ನಾವು. ನನ್ನ ವಿಚಾರದಲ್ಲಿ ಪಕ್ಷದ ಹಿರಿಯರು ಏನು ತೀರ್ಮಾನ ಮಾಡುತ್ತಾರೆ ಅಂತ ನೋಡುತ್ತಿದ್ದೇನೆ. ಸದ್ಯಕ್ಕೆ ಬೇರೆ ವಿಚಾರವನ್ನೆನೂ ಹೇಳಲು ಇದು ಸರಿಯಾದ ಸಮಯ ಅಲ್ಲ ಎಂದರು. ಇದನ್ನೂ ಓದಿ: ಶಿರಸಿ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಗೇರಿ ಬೆಂಬಲ

    12 ವರ್ಷಗಳ ಕಾಲ ನಾನು ಮನೆಯಲ್ಲಿ ಕೂತಿದ್ದೇನೆ. ಈಗ ಮನೆಯಲ್ಲಿ ಕುಳಿತುಕೊಳ್ಳುವ ವಯಸ್ಸೂ ಕೂಡಾ ನನ್ನದಲ್ಲ. ಸಾರ್ವಜನಿಕ ಬದುಕಲ್ಲಿ ಬರಬೇಕೆನ್ನುವುದು ನನ್ನ ಸ್ಪಷ್ಟ ತೀರ್ಮಾನ. ನನ್ನನ್ನು ಯಾವ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತೊ ಅನ್ನೋದು ಬಸವೇಶ್ವರನಿಗೆ ಬಿಟ್ಟಿದ್ದು ಎಂದು ನುಡಿದರು.

    ಇದೇ ವೇಳೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ಬಿರುಕು ಅನ್ನೋದು ಮಾಧ್ಯಮಗಳ ಸೃಷ್ಟಿ. ಈ ಜನ್ಮದಲ್ಲಿ ಅದು ಕನಸಾಗಿಯೇ ಉಳಿಯುತ್ತೆ. ಯಾವತ್ತೂ ಬಿರುಕು ಅನ್ನೋ ಪ್ರಶ್ನೆಯೇ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ದೇವಾಲಯದ ರಸ್ತೆಯಲ್ಲಿ ಚಿರತೆ ದರ್ಶನ – ಭಕ್ತರಲ್ಲಿ ಆತಂಕ

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನಾಣ್ಯದಿಂದ ತುಲಾಭಾರ

    ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ನಾಣ್ಯದಿಂದ ತುಲಾಭಾರ

    ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ (Janardhana Reddy) ಅಭಿಮಾನಿಗಳು ನಾಣ್ಯದ ತುಲಾಭಾರ (Tulabhara) ಮಾಡಿದ್ದಾರೆ.

    ಬಳ್ಳಾರಿ (Bellary) ಜಿಲ್ಲೆಯ ಕೃಷ್ಣಾನಗರ ಕ್ಯಾಂಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಲಾಭಾರ ಮಾಡಿದ್ದಾರೆ. ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎರಡು ಗಂಟೆಗಳ ಕಾಲ ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮ ಪತ್ನಿ ಹೋಮದಲ್ಲಿ ಪಾಲ್ಗೊಂಡರು. ರೆಡ್ಡಿ ಅವರ ಅಭಿಮಾನಿ, ರೈತ ಆಲಪಾಟಿ ಶ್ರೀನಿವಾಸನಿಂದ ಅವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದನ್ನೂ ಓದಿ: ಹಿಂದೂಗಳು ಒಟ್ಟಾಗಿರಬೇಕೆಂಬುದು ಸಾವರ್ಕರ್ ಕನಸಾಗಿತ್ತು – ಮೊಮ್ಮಗ ಸಾತ್ಯಕಿ ಸಾವರ್ಕರ್

    ಹೋಮದ ನಂತರ ಜನಾರ್ದನ ರೆಡ್ಡಿಯವರ ತುಲಾಭಾರ ಮಾಡಿದ್ದು, ಮಂತ್ರ ಘೋಷಗಳ ಮಧ್ಯೆ ನಡೆದ ಹೋಮ ಮತ್ತು ತುಲಾಭಾರ ಮಾಡಿ ಅಭಿಮಾನಿಗಳು ಸಂತೋಷ ಪಟ್ಟರು. ಬಳಿಕ ಕಾರ್ಯಕ್ರಮದ ನಂತರ ರೆಡ್ಡಿ ಅವರ ಜೊತೆಯಲ್ಲಿ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಇದನ್ನೂ ಓದಿ: ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ

    Live Tv
    [brid partner=56869869 player=32851 video=960834 autoplay=true]

  • ಮಗಳ ಹೆರಿಗೆಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

    ಮಗಳ ಹೆರಿಗೆಗೆ ತೆರಳಲು ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ

    ನವದೆಹಲಿ: ಮಗಳ ಹೆರಿಗೆ (Delivery) ಹಿನ್ನೆಲೆ ಬಳ್ಳಾರಿಗೆ (Bellary) ತೆರಳಲು ಅನುಮತಿ ಕೋರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ (Janardhana Reddy) ಸುಪ್ರೀಂಕೋರ್ಟ್ (Supreme Court) ಒಂದು ತಿಂಗಳ ಕಾಲಾವಕಾಶ ನೀಡಿದೆ. ಇಂದು ಈ ಬಗ್ಗೆ ತೀರ್ಪು ನೀಡಿದ ನ್ಯಾ. ಎಂ.ಆರ್.ಶಾ ಅವರ ಪೀಠ, ನವೆಂಬರ್ 6 ರ ವರೆಗೆ ಭೇಟಿ ನೀಡಲು ಮತ್ತು ವಾಸ್ತವ್ಯ ಹೂಡಲು ಅನುಮತಿ ನೀಡಿದೆ.

    ಮಗಳ 2ನೇ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಅನುಮತಿ ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. 2 ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

    ಸಿಬಿಐ ಆಕ್ಷೇಪದ ಬಳಿಕ ಕನಿಷ್ಠ 1 ತಿಂಗಳ ಕಾಲವಾದರೂ ಅನುಮತಿ ನೀಡಬೇಕು ಮತ್ತು ನನ್ನ ಮೇಲೆ ಪೊಲೀಸ್ ನಿಗಾ ಇಡಬಹುದು ಎಂದು ಜನಾರ್ದನ ರೆಡ್ಡಿ ಕೇಳಿಕೊಂಡಿದ್ದರು. ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಈ ಆದೇಶವನ್ನು ಇಂದು ಪ್ರಕಟಿಸಿದೆ. ಇದನ್ನೂ ಓದಿ: ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದ ಹಂಸಲೇಖ: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

    ಬಳ್ಳಾರಿಗೆ ತೆರಳಲು ಅನುಮತಿ ನೀಡಿದ್ದಲ್ಲದೇ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರತಿನಿತ್ಯ ವಿಚಾರಣೆಯನ್ನು ನಡೆಸುವಂತೆ ಮತ್ತು ನವೆಂಬರ್ 9 ರಿಂದ 6 ತಿಂಗಳಲ್ಲಿ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಲು ಕೇಳಿ ಹಂತದ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಈ ಹಿಂದೆ ಬಳ್ಳಾರಿ ತೆರಳಲು ನಿರ್ಬಂಧಿಸಿತ್ತು. ಇದನ್ನೂ ಓದಿ: ಮಹಾರಾಷ್ಟ್ರದ ಕನ್ನೇರಿಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    ಬಳ್ಳಾರಿಯಲ್ಲಿ ಶುರುವಾಗುತ್ತಾ ಮೈನಿಂಗ್ ಚಾಪ್ಟರ್ 2? – ಅನುಮತಿ ಕೇಳಿದ ರೆಡ್ಡಿ

    ನವದೆಹಲಿ: ಗಣಿಗಾರಿಕೆ ಚಟುವಟಿಕೆಗಳನ್ನು ಪುನಾರಂಭಿಸಲು ಅನುಮತಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಗಣಿ ಕಂಪನಿ(ಓಎಂಸಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

    ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ತಮ್ಮ ಕಂಪನಿಗೆ ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಗಣಿಗಾರಿಕೆ ನಿಲ್ಲಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ವಿವಾದ ಕಾರಣವಾಗಿತ್ತು. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದ್ದು, ಅನುಮತಿ ತಡೆಹಿಡಿಯಲು ಕಾರಣಗಳಿಲ್ಲ. ಹೀಗಾಗಿ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಬೇಕು ಎಂದು ಓಎಂಸಿ ಮನವಿ ಮಾಡಿದೆ.

    ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ.

    ಪ್ರಕರಣದ ವಿಚಾರಣೆಯನ್ನು ನಾಳೆ ಸುಪ್ರೀಂಕೋರ್ಟ್ ನಡೆಸಲಿದ್ದು, ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹನ್ನೊಂದು ವರ್ಷಗಳ ಬಳಿಕ ಮತ್ತೆ ರೆಡ್ಡಿ ಸಹೋದರರಿಗೆ ಗಣಿಗಾರಿಕೆಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಎದ್ದಿದೆ.

    ಅಕ್ರಮ ಗಣಿಗಾರಿಕೆ ಹಿನ್ನಲೆ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಜೈಲು ಶಿಕ್ಷೆ ಅನುಭವಿಸಿದ್ದರು. ಸದ್ಯ ವಿದೇಶಗಳಲ್ಲಿ ಹಣ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ತನಿಖೆಗೆ ಎದುರಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಮಗಳಿಗೆ ಸುಷ್ಮಾ ಸ್ವರಾಜ್ ಎಂದು ಹೆಸರಿಡಲು ಮುಂದಾದ ಬಿಜೆಪಿ ಕಾರ್ಯಕರ್ತ

    ಕೊಪ್ಪಳ: ಅಭಿಮಾನಿಯೊಬ್ಬರು ತನ್ನ ಮಗಳಿಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡಲು ಮುಂದಾಗಿದ್ದಾನೆ.

    ಹೌದು, ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿಯಾಗಿರುವ ಬಿಜೆಪಿ ಕಾರ್ಯಕರ್ತ ದೇವರಾಜ್ ಅವರು ತಮ್ಮ ಮಗಳಿಗೆ ದಿವಂಗತೆ ಸುಷ್ಮಾ ಸ್ವರಾಜ್ ಹೆಸರಿಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಈ ಹೆಸರು ನಾಮಕರಣ ಮಾಡಲು ಸುಷ್ಮಾ ಸ್ವರಾಜ್ ಅವರ ಮಾನಸಪುತ್ರರಾದ ಸಚಿವ ಬಿ. ಶ್ರೀರಾಮುಲು ಹಾಗೂ ಜಿ. ಜನಾರ್ದನರಡ್ಡಿ ಅವರೇ ಬರಬೇಕು ಎಂದು ದೇವರಾಜ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಸುಷ್ಮಾ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಹಾಗೂ ರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರು ಬಂದು ನಾಮಕಾರಣ ಮಾಡಬೇಕು. ಅವರು ಬರುವವರೆಗೂ ಮಗಳಿಗೆ ನಾಮಕಾರಣ ಮಾಡಲ್ಲ ಎಂದು ದೇವರಾಜ್ ಹಠ ಹಿಡಿದು ಕುಳಿತುಕೊಂಡಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ, ರಾಮುಲು ಆಪ್ತ ಸಹಾಯಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

    ಅಪ್ಪಟ ಸುಷ್ಮಾ ಸ್ವರಾಜ್ ಅಭಿಮಾನಿಯಾಗಿರುವ ದೇವರಾಜ್ ತನಗೆ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ನಾಮಕಾರಣ ಮಾಡುತ್ತೇನೆ ಅಂದುಕೊಂಡಿದ್ದೆ. ಮೊದಲನೆಯದು ಗಂಡು ಮಗುವಾದ ಕಾರಣ ಹೆಸರನ್ನಿಡಲು ಆಗಲಿಲ್ಲ. ಇತ್ತೀಚೆಗೆ ಎರಡನೇಯದಾಗಿ ಹೆಣ್ಣು ಮಗು ಜನಿಸಿದೆ. ಆ ಮಗುವಿಗೆ ನನ್ನ ಆಸೆಯಂತೆ ಸುಷ್ಮಾ ಸವರಾಜ್ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ದೇವರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು

    ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು

    ಬಳ್ಳಾರಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ. ನಾವೂ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೂ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಾರೆ ಎನ್ನುವುದನ್ನು ಕೇಳಿದ್ದೇನೆ. ಈ ರೀತಿಯ ಹಲವಾರು ರಾಜಕೀಯ ಘಟನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿವೆ. ಅಲ್ಲಿನ ಶಾಸಕರೇ ಆ ಸರ್ಕಾರದಲ್ಲಿ ಇರಲ್ಲ ಅಂದ ಮೇಲೆ ಅಘಾಡಿ ಸರ್ಕಾರ ಉಳಿಯುವ ಮಾತೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಇದೇ ವೇಳೆ ಮನಸ್ಸು ಮಾಡಿದರೆ ಒಂದು ದಿನದ ಮಟ್ಟಿಗೆ ನಾನು ಸಿಎಂ ಆಗುತ್ತೇನೆ ಎಂಬ ಜನಾರ್ದನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನೀವು ಜರ್ನಾದನ ರೆಡ್ಡಿ ಅವರನ್ನೇ ಕೇಳಬೇಕು. ಜರ್ನಾದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದು ಅವರ ವೈಯಕ್ತಿಕ ಹೇಳಿಕೆ, ಅವರ ಹೇಳಿಕೆಗೂ ಹಾಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಷಕಂಟನಂತೆ ಮೋದಿ 19 ವರ್ಷಗಳಿಂದ ಗುಜರಾತ್ ಗಲಭೆ ನೋವನ್ನು ಸಹಿಸಿಕೊಂಡಿದ್ದಾರೆ: ಅಮಿತ್ ಶಾ

    ಮುಂಬರುವ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತ ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ. ಸದ್ಯಕ್ಕೆ ಸೇವೆ ಮಾಡುವ ಅವಕಾಶವನ್ನು ಭಗವಂತ ನೀಡಿದ್ದಾನೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆಗಿರುವೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದಿದ್ದಾರೆ.

    Live Tv

  • ಆನೆಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ

    ಆನೆಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ

    ಬಳ್ಳಾರಿ: ಅಂಗಾರಕ ಸಂಕಷ್ಟ ದಿನದ ಹಿನ್ನೆಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ನಾನ ಮಾಡಿಸಿ ವಿಶೇಷ ಆಹಾರ ನೀಡಿ ಪೂಜೆ ಸಲ್ಲಿಸಿದ್ದಾರೆ.

    Janardhana Reddy

    ಬಳ್ಳಾರಿಯ ಹವಂಬಾವಿಯಲ್ಲಿ ಇರುವ ರೆಡ್ಡಿ ನಿವಾಸದಲ್ಲಿ ಇಂದು ಬೆಳಗ್ಗೆ ಜನಾರ್ದನ್ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ, ಆನೆಗೆ ಸ್ನಾನ ಮಾಡಿಸಿದರು. ಬಳಿಕ ಗಜರಾಜನಿಗೆ ಕಬ್ಬು, ಕಲ್ಲಂಗಡಿ, ಬೆಲ್ಲ, ಬಾಳೆಹಣ್ಣು ಸೇರಿದಂತೆ ತರಹೇವಾರಿ ಹಣ್ಣು, ಹಂಪಲ ತಿನಿಸುಗಳನ್ನು ಆನೆಗೆ ತಿನ್ನಿಸಿದರು. ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಅಗರ್ವಾಲ್

    Janardhana Reddy

    ಆನೆ ತನ್ನ ಕಾಲಿನಿಂದ ತೆಂಗಿನಕಾಯಿ ಒಡೆದು ದಂಪತಿಗೆ ನೀಡಿ ಆಶೀರ್ವಾದ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ವೈರಲ್ ಆಗುತ್ತಿದೆ. ಆನೆ ತೆಂಗಿನಕಾಯಿ ಒಡೆಯುತ್ತಿರುವ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಸಂಕಷ್ಟದ ದಿನದಂದು ಆನೆಗೆ ಸ್ನಾನ ಮಾಡಿಸಿ ರೆಡ್ಡಿ ದಂಪತಿ ಬಳ್ಳಾರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

  • ಕಲ್ಯಾಣ ಕರ್ನಾಟಕ ಅಲ್ಲ, ಇಡೀ ಕರ್ನಾಟಕ ಕಲ್ಯಾಣ ಆಗಬೇಕಿದೆ: ಜನಾರ್ದನ ರೆಡ್ಡಿ

    ಕಲ್ಯಾಣ ಕರ್ನಾಟಕ ಅಲ್ಲ, ಇಡೀ ಕರ್ನಾಟಕ ಕಲ್ಯಾಣ ಆಗಬೇಕಿದೆ: ಜನಾರ್ದನ ರೆಡ್ಡಿ

    ಕೊಪ್ಪಳ: ಸಚಿವ ಶ್ರೀರಾಮುಲು ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕೀಯ ವಿಚಾರದಲ್ಲಿ ಶ್ರೀರಾಮುಲು ಅವರಿಗೆ ನಾನೂ ಬೆಂಬಲವಾಗಿ ಇರುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.

    ಪಂಪಾ ಸರೋವರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆನೆಗೊಂದಿ, ಪಂಪಾಸರೋವರ ಹಾಗೂ ಹಂಪಿ ಎಂದರೆ ನನಗೆ ಬಹಳ ಪ್ರೀತಿ. ರಾಮುಲು ಒಳ್ಳೆ ಅಭಿವೃದ್ಧಿ ಮಾಡುತ್ತಿದ್ದಾರೆ. ಇದು ರಾಜಕೀಯದ ಕುರಿತು ಬೇರೆ ವಿಷಯ ಮಾತಾನಾಡುವ ಸಮಯ ಅಲ್ಲ. ಇಡೀ ರಾಜ್ಯಕ್ಕೆ ಒಳ್ಳೆಯದಾಗಬೇಕಿದ್ದು, ಕಲ್ಯಾಣ ಕರ್ನಾಟಕ ಅಲ್ಲ ಇಡೀ ಕರ್ನಾಟಕ ಕಲ್ಯಾಣ ಆಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಡೋರ ಲಿಸ್ಟ್, ಬಿಜೆಪಿ ಬಿಡೋರ ಲಿಸ್ಟ್ ನನ್ನ ಬಳಿ ಇದೆ: ಯತ್ನಾಳ್

    ರಾಮುಲು ಅವರೊಟ್ಟಿಗೆ ನಾನೂ ಹೆಜ್ಜೆ ಹಾಕುತ್ತಿದ್ದೇನೆ. ರಾಜಕೀಯ ವಿಚಾರದಲ್ಲಿ ಬರುವ ದಿನಗಳಲ್ಲಿ ನಾನು ಅವರೊಂದಿಗೆ ನಡೆಯಲಿದ್ದೇನೆ. ಹಿರಿಯರು ಹೇಳಿದಂತೆ ನಾನು ಕೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಶಿವರಾಮೇಗೌಡಗೆ ಜೆಡಿಎಸ್‍ನಿಂದ ಗೇಟ್ ಪಾಸ್: ಎಚ್‍ಡಿಕೆ

  • ಚಿನ್ನ, ಬೆಳ್ಳಿ ನಾಣ್ಯದಿಂದ ಜನಾರ್ದನ ರೆಡ್ಡಿ ತುಲಾಭಾರ

    ಚಿನ್ನ, ಬೆಳ್ಳಿ ನಾಣ್ಯದಿಂದ ಜನಾರ್ದನ ರೆಡ್ಡಿ ತುಲಾಭಾರ

    ಬಳ್ಳಾರಿ/ವಿಜಯನಗರ: ಚಿನ್ನ ಹಾಗೂ ಬೆಳ್ಳಿ ನಾಣ್ಯಗಳಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ತುಲಾಭಾರ ಸೇವೆ ನಡೆದಿದೆ.

    ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ವಾಸ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ಮತ್ತು ಇಂದು ಜನಾರ್ದನ ರೆಡ್ಡಿ ಅವರು 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಡಬಲ್ ಸಂಭ್ರಮದಲ್ಲಿರುವ ಅಭಿಮಾನಿಗಳು ಬಳ್ಳಾರಿಯ ದುರ್ಗಮ್ಮ ದೇಗುಲದಲ್ಲಿ ಜನಾರ್ದನ ರೆಡ್ಡಿಗೆ ತುಲಾಭಾರ ಸೇವೆ ನಡೆಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

    ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯಕ್ಕೆ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯ ಜೊತೆಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯದಿಂದ ತುಲಾಭಾರ ನಡೆಸಲಾಯಿತು. ಈ ವೇಳೆ ಜನಾರ್ದನ ರೆಡ್ಡಿ ಅವರೊಂದಿಗೆ ಸಾರಿಗೆ ಸಚಿವ ರಾಮುಲು, ಶಾಸಕ ಸೋಮಶೇಖರ್ ರೆಡ್ಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ತಂತಿ ಮಾರಾಟ, ಸಂಗ್ರಹಣೆ ನಿಷೇಧ

    ತುಲಾಭಾರ ಕಾರ್ಯಕ್ರಮದ ವೇಳೆ ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮ ಸಂಪೂರ್ಣ ಉಲ್ಲಂಘಿಸಿದ್ದರು.