Tag: Janardhana Reddy

  • ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ

    ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ

    ಬೆಂಗಳೂರು: ಕೆಆರ್‌ಪಿಪಿ ಪಕ್ಷದ ಸ್ಥಾಪಕ ಶಾಸಕ ಜನಾರ್ದನ ರೆಡ್ಡಿ (Janardhan Reddy) ಅವರಿಂದು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ (Bengaluru BJP Office) ನಡೆದ ಕೆಆರ್‌ಪಿಪಿ (KRPP) ಪಕ್ಷ ವಿಲೀನ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಸೇರಿ ಕೆಆರ್‌ಪಿಪಿ ಪಕ್ಷದ ಎಲ್ಲ ಪದಾಧಿಕಾರಿಗಳು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa), ಮಾಜಿ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಸಿಟಿ ರವಿ, ಅಶ್ವಥ್‌ನಾರಾಯಣ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪಕ್ಷದ ಶಾಲು ಹೊದಿಸಿ, ಭಾವುಟ ನೀಡಿ ಸ್ವಾಗತಿಸಿದರು. ಅಲ್ಲದೇ ಪಕ್ಷ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ ಎಂದು ಭರವಸೆಯನ್ನೂ ನೀಡಿದರು. ಈ ವೇಳೆ ಜನಾರ್ದನ ರೆಡ್ಡಿ, ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

  • ಮರಳಿ ಗೂಡಿಗೆ ಜನಾರ್ದನ ರೆಡ್ಡಿ- ಸೋಮವಾರ ಬಿಜೆಪಿ ಸೇರ್ಪಡೆ

    ಮರಳಿ ಗೂಡಿಗೆ ಜನಾರ್ದನ ರೆಡ್ಡಿ- ಸೋಮವಾರ ಬಿಜೆಪಿ ಸೇರ್ಪಡೆ

    ಬೆಂಗಳೂರು/ಬಳ್ಳಾರಿ: ಸೋಮವಾರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ(KRPP) ಶಾಸಕ, ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ (G. Janardhana Reddy) ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

    ಪಕ್ಷ ಸೇರ್ಪಡೆಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಜನಾರ್ದನ ರೆಡ್ಡಿ ಯಾವುದೇ ಷರತ್ತುಗಳು ಇಲ್ಲದೇ ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ.

     

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಸಂಜೆ 4 ಗಂಟೆಗೆ ಜನಾರ್ನದ ರೆಡ್ಡಿ ಕೆಆರ್‌ಪಿಪಿ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.  ಕೆಆರ್‌ಪಿಪಿ ವಿಲೀನಕ್ಕೆ ಬಿಜೆಪಿ ಆಫರ್ ನೀಡಿದ್ದು ಈ ವಿಚಾರದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿದ್ದುಕೊಂಡೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಕೇಜ್ರಿವಾಲ್‌ – ಆದೇಶದಲ್ಲಿ ಏನಿದೆ?

    ರಾಜ್ಯಸಭೆ ಚುನಾವಣೆಯ (Rajya Sabha Election) ಒಂದು ದಿನದ ಮೊದಲು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ್ದ ಜನಾರ್ದನ ರೆಡ್ಡಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಜನಾರ್ದನ ರೆಡ್ಡಿ ಮುಂದಾಗಿದ್ದರು. ಆದರೆ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್‌ ಒಪ್ಪಿಗೆ ಸೂಚಿಸಿರಲಿಲ್ಲ. ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗಂಗಾವತಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ವಿಧಾನ ಸಭಾ ಚುನಾವಣೆಯಲ್ಲಿ ಕೆಆರ್‌ಪಿಪಿ ಒಂದೇ ಸ್ಥಾನ ಗೆದ್ದಿದ್ದರೂ ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಏಟು ನೀಡಿತ್ತು. ಇದನ್ನೂ ಓದಿ: ಉಗ್ರನಾಗಲು ಐಸಿಸ್‌ ಸೇರಲು ಮುಂದಾಗಿದ್ದ ಐಐಟಿ ವಿದ್ಯಾರ್ಥಿ ವಶಕ್ಕೆ

    ಕೆಲ ದಿನಗಳ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರನ್ನು ಜನಾರ್ದನ ರೆಡ್ಡಿ ಭೇಟಿ ಮಾಡಿ ಚರ್ಚಿಸಿದ್ದರು.

  • ಕಾಂಗ್ರೆಸ್-ಬಿಜೆಪಿ ಎಲ್ಲಿಗೂ ಹೋಗಲ್ಲ: ಜನಾರ್ದನ ರೆಡ್ಡಿ

    ಕಾಂಗ್ರೆಸ್-ಬಿಜೆಪಿ ಎಲ್ಲಿಗೂ ಹೋಗಲ್ಲ: ಜನಾರ್ದನ ರೆಡ್ಡಿ

    – ಬಿಜೆಪಿ ಜೊತೆ ಮೈತ್ರಿಗೆ ಸಿದ್ಧ, ಆದರೆ ಪಕ್ಷ ವಿಲೀನ ಮಾಡಲ್ಲ

    ಕೊಪ್ಪಳ: ನಾನು ವಾಪಸ್ ಬಿಜೆಪಿಗೆ (BJP) ಸೇರುವ, ಪಕ್ಷ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ. ಇನ್ನೂ ಕಾಂಗ್ರೆಸ್ (Congress) ಸೇರುವುದಂತೂ ಕನಸಿನಲ್ಲೂ ಆಗದ ಮಾತು ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಡಳಿತ ವೈಖರಿ ಮೆಚ್ಚಿದ್ದಾರೆ. ಈ ಹಿನ್ನೆಲೆ ಜನರ ಆಶಯಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಜೊತೆಗೆ ಮೈತ್ರಿಗೆ ನಾನು ಸಿದ್ಧನಿದ್ದೇನೆ. ಹಾಗೆಂದು ಕೆಆರ್‌ಪಿಪಿಯನ್ನು (KRPP) ವಿಲೀನ ಮಾಡುವುದಿಲ್ಲ. ನನ್ನ ಜೊತೆ ಮಾತನಾಡಿರುವ ಹಿರಿಯರಿಗೆ ನನ್ನ ವಿಚಾರ ಹೇಳಿದ್ದೇನೆ. ರಾಜ್ಯಸಭೆ ಚುನಾವಣೆ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ: ಸಿದ್ದರಾಮಯ್ಯ

    ಮುಂದುವರೆದು, ನಾನು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತಮ ಸ್ನೇಹಿತರು. ನಮ್ಮದು ಇಪ್ಪತ್ತು ವರ್ಷದ ಸಂಬಂಧ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ. ಹಾಗಂತಾ ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದರೆ ಅದು ಸುಳ್ಳು. ಕನಸಿನಲ್ಲಿಯೂ ಅದು ಸಾಧ್ಯವಿಲ್ಲ ಎಂದಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah) ಅವರು ಅನುದಾನ ನೀಡಲು ತಾರತಮ್ಯ ಮಾಡುತ್ತಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ಈ ಬಾರಿ 100 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಅಂತಾ ಕರೆದರೆ ಹೊಟ್ಟೆ ತುಂಬುತ್ತಾ: ಮಂಗಳೂರು ಜನತೆಗೆ ಖರ್ಗೆ ಪ್ರಶ್ನೆ

  • ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

    ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

    ಬೆಂಗಳೂರು/ಬಳ್ಳಾರಿ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಸಿಬಿಐ (CBI) ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದು ಭಾರೀ ಚರ್ಚೆ ನಡೆಯುತ್ತಿರುವಾಗಲೇ ಸಚಿವ ನಾಗೇಂದ್ರ (Nagendra) ವಿರುದ್ಧದ ಕೇಸ್‌ಗಳನ್ನು ಹಿಂಪಡೆಯಬೇಕು ಎಂಬ ಕೂಗು ಕೇಳಿಬಂದಿದೆ.

    ಈ ಹಿಂದೆ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯಲ್ಲಿಯೇ ನಾಗೇಂದ್ರ ವಿರುದ್ಧ 20ಕ್ಕೂ ಹೆಚ್ಚು ಕೇಸ್ ದಾಖಲಾಗಿತ್ತು. ಈಗ ಅದೇ ನಾಗೇಂದ್ರ, ಸಿದ್ದರಾಮಯ್ಯ ಸಂಪುಟದಲ್ಲಿದ್ದಾರೆ. ಅವರ ಮೇಲೆಯೂ ದ್ವೇಷಪೂರಿತ ಕೇಸ್ ಆಗಿದ್ರೆ ವಾಪಸ್ ಪಡೆಯಬೇಕು. ಡಿಕೆ ಶಿವಕುಮಾರ್‌ಗೆ ಒಂದು ನ್ಯಾಯ, ನಾಗೇಂದ್ರಗೆ ಒಂದು ನ್ಯಾಯವೇ ಎಂದು ಜನಾರ್ದನ ರೆಡ್ಡಿ (Janardhana Reddy) ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ದುಬೈ ಪ್ರಯಾಣಕ್ಕೆ ಡಿಕೆಶಿಗೆ ಕೋರ್ಟ್ ಅನುಮತಿ

     

    ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ನಾಗೇಂದ್ರ ವಿರುದ್ಧದ ಕೇಸ್ ಹಿಂಪಡೆಯುವ ಅಗತ್ಯ ಬಿದ್ದರೆ ಅದನ್ನು ತೆಗೆಯುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಏನಿದು ಕೇಸ್‌?
    ಈಗಲ್ ಟ್ರೇಡಿಂಗ್ ಕಂಪನಿ ಮೂಲಕ ಅಕ್ರಮ ಗಣಿಗಾರಿಕೆ ಮಾಡಿ ರಾಜ್ಯದ ಬೊಕ್ಕಸಕ್ಕೆ 2.82 ಕೋಟಿ ರೂ. ನಷ್ಟ ಮಾಡಿದ ಆರೋಪ ನಾಗೇಂದ್ರ ಮೇಲಿದೆ. ಒಟ್ಟು ಆರು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದ್ದು ನಾಗೇಂದ್ರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.

  • ವಿಧಾನಸೌಧದಲ್ಲಿ ಜನಾರ್ದನ ರೆಡ್ಡಿಗೆ ಶುಭ ಕೋರಿದ ಡಿಕೆಶಿ

    ವಿಧಾನಸೌಧದಲ್ಲಿ ಜನಾರ್ದನ ರೆಡ್ಡಿಗೆ ಶುಭ ಕೋರಿದ ಡಿಕೆಶಿ

    ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಜನಾರ್ದನ ರೆಡ್ಡಿಯವರಿಗೆ (Janardhana Reddy) ಡಿಸಿಎಂ ಡಿಕೆ ಶಿವಕುಮಾರ್  (DK Shivakumar) ಶುಭ ಕೋರಿದ್ದಾರೆ.

    ವಿಧಾನಸೌಧದ ಒಳಗೆ ಶಾಸಕರ ಫೋಟೋ ತೆಗೆಸಲು ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಬಂದಿದ್ದ ಶಾಸಕರು ವಿವಿಧ ಐಡಿ ಕಾರ್ಡ್‍ಗಳಿಗೆ ಫೋಟೋ ತೆಗೆಸಿಕೊಂಡರು. ಇದಲ್ಲದೆ ಆಡಳಿತ ಮತ್ತು ವಿಪಕ್ಷ ಮೊಗಸಾಲೆಯಲ್ಲಿ ಫೋಟೋ ತೆಗೆಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತದಾರರಿಗೆ ನೀಡದೇ ಇಟ್ಟುಕೊಂಡ ನನ್ನ ಹಣ ವಾಪಸ್ ಕೊಡಿ: ಅಂಗಾಲಾಚಿದ ಕೆಸಿ ನಾರಾಯಣಗೌಡ

    ಇಂದಿನಿಂದ ಆರಂಭಗೊಂಡ ಅದಿವೇಶನದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ ನೂತನ ಸಚಿವ ಸಂಪುಟ ರಚನೆಯಾಗಲಿದೆ. ಶಾಸಕರಿಗೆ ಪ್ರಮಾಣ ವಚನ ಭೋಧಿಸಲು ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆಮಾಡಲಾಗಿದೆ.

    ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸೆ. 2011 ರಲ್ಲಿ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಬಳಿಕ ಜ. 2015 ರಲ್ಲಿ ಜಾಮೀನು ನೀಡಿ ಬಳ್ಳಾರಿಗೆ ಭೇಟಿ ನೀಡದಂತೆ ಸುಪ್ರೀಂ ಷರತ್ತು ವಿಧಿಸಿತ್ತು.

    ಇದಾದ ನಂತರ ಬಿಜೆಪಿ (BJP) ತೊರೆದಿದ್ದ ಅವರು 2023ರ ಚುನಾವಣೆ ಹೊತ್ತಿಗೆ ನೂತನ ಪಕ್ಷವನ್ನು ಕಟ್ಟಿದರು. ಈ ಬಾರಿಯ ಗಂಗಾವತಿ (Gangavati) ಕ್ಷೇತ್ರದಿಂದ ನಿಂತು ರೆಡ್ಡಿ ಜಂಯಗಳಿಸಿದ್ದರು. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ

  • ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

    ಜನಾರ್ದನ ರೆಡ್ಡಿ ಸಮ್ಮುಖದಲ್ಲೇ ಅಭ್ಯರ್ಥಿಗೆ 1 ಲಕ್ಷ ಹಣ ನೀಡಿದ ಸ್ವಾಮೀಜಿ

    ಚಿಕ್ಕೋಡಿ: ಕಲ್ಯಾಣ ರಾಜ್ಯ ಪ್ರಗತಿ (KRPP) ಸಮಾವೇಶದಲ್ಲಿ ಸ್ವಾಮೀಜಿಯೊಬ್ಬರು ಗಾಲಿ ಜನಾರ್ದನ ರೆಡ್ಡಿ (Janardhana Reddy) ಸಮ್ಮುಖದಲ್ಲಿಯೇ ಅಭ್ಯರ್ಥಿಗೆ 1 ಲಕ್ಷ ರೂ. ಹಣವನ್ನು (Money) ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ (Code of Conduct) ಉಲ್ಲಂಘಿಸಿದ್ದಾರೆ.

    ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಆಯೋಜಿಸಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶದಲ್ಲೇ ಬಹಿರಂಗವಾಗಿ 1 ಲಕ್ಷ ರೂ. ಹಣವನ್ನು ಹೊನ್ಯಾಳದ ರೇವನಸಿದ್ದಯ್ಯ ಶ್ರೀಶೈಲಯ್ಯ ಶ್ರೀಗಳು ಕುಡಚಿ ಮತಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಶ್ರೀಶೈಲ ಭಜಂತ್ರಿಯವರಿಗೆ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: 70 ಸೀಟ್ ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ: ಶಾಮನೂರು ಸ್ಫೋಟಕ ಹೇಳಿಕೆ

     

    ಸಮಾವೇಶದಲ್ಲಿ ಬಹಿರಂಗವಾಗಿ ನೀತಿ ಸಂಹಿತೆ ಉಲ್ಲಂಘಿಸಿದರೂ ರಾಯಬಾಗಾ ತಾಲೂಕಾಡಳಿತ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಚೆಕ್ ಪೋಸ್ಟ್‌ಗಳ ಕಣ್ಣು ತಪ್ಪಿಸಿ 1 ಲಕ್ಷ ರೂ. ಬಂದಿದ್ದಾರೂ ಹೇಗೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಂಕಣಿ ಭಾಷಿಗರೇ ಶಾಸಕರಾಗಿರುವ ಮಂಗಳೂರು ದಕ್ಷಿಣದಲ್ಲಿ ಈ ಬಾರಿ ಗೆಲ್ಲೋದ್ಯಾರು?

  • ಯುಗಾದಿ ಒಳಗೆ ಕೆಆರ್‌ಪಿಪಿ ಪಕ್ಷದ ಚಿನ್ಹೆ ಗೊಂದಲ ಪರಿಹಾರ: ಜನಾರ್ದನ ರೆಡ್ಡಿ

    ಯುಗಾದಿ ಒಳಗೆ ಕೆಆರ್‌ಪಿಪಿ ಪಕ್ಷದ ಚಿನ್ಹೆ ಗೊಂದಲ ಪರಿಹಾರ: ಜನಾರ್ದನ ರೆಡ್ಡಿ

    ಕೊಪ್ಪಳ: ರಾಜ್ಯಾದ್ಯಂತ ಈಗಾಗಲೇ ಕೆಆರ್‌ಪಿಪಿ (KRPP) ಪಕ್ಷದ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಮಾರ್ಚ್ 30ರ ಒಳಗಾಗಿ 30ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.

    ಕೊಪ್ಪಳ (Koppala) ಜಿಲ್ಲೆ ಗಂಗಾವತಿಯ ವಿರೂಪಾಪುರ ತಾಂಡದಲ್ಲಿ ಸುದ್ದಿಗಾರರೊಂದಿಗೆ ಜನಾರ್ದನ ರೆಡ್ಡಿ ಮಾತನಾಡಿದರು. ಈ ವೇಳೆ ಬಿಜೆಪಿಯ (BJP) ಸಾಲು ಸಾಲು ನಾಯಕರು ಗಂಗಾವತಿಗೆ ಬಂದು ಅಬ್ಬರದ ಪ್ರಚಾರ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಇವಾಗಲಾದರೂ ಗಂಗಾವತಿ ಕಡೆ ತಿರುಗಿ ನೋಡುತ್ತಿದ್ದಾರೆ ಎಂಬುದು ಒಳ್ಳೆಯ ವಿಚಾರ. ರಾಜ್ಯ ಮಟ್ಟದ ನಾಯಕರು 5 ವರ್ಷದಲ್ಲಿ ಒಮ್ಮೆಯೂ ಬಂದಿರಲಿಲ್ಲ. ನನ್ನಿಂದಾಗಿ ಎಲ್ಲಾ ನಾಯಕರು ಗಂಗಾವತಿಗೆ ಬಂದಿದ್ದು ನನಗೆ ಖುಷಿ ತಂದಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

    ಮತ್ತೆ ಬಿಜೆಪಿ ಸೇರ್ಪಡೆ ಆಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಗೆದುಕೊಂಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಕೆಆರ್‌ಪಿಪಿಯಿಂದಲೇ ಚುನಾವಣೆ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

    ಸಿದ್ದರಾಮಯ್ಯ ಕ್ಷೇತ್ರ ಗೊಂದಲ ವಿಚಾರದ ಬಗ್ಗೆ ಮಾತನಾಡಿ, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಈ ವಿಚಾರಗಳು ಅವರವರ ಪಕ್ಷದವರಿಗೆ ಬಿಟ್ಟಿದ್ದು ಎಂದರು.

    ಇದೇ ವೇಳೆ ಯುಗಾದಿ ಒಳಗಾಗಿ ಕೆಆರ್‌ಪಿಪಿ ಪಕ್ಷದ ಚಿನ್ಹೆ ಗೊಂದಲ ಪರಿಹಾರ ಆಗಲಿದೆ ಎಂದು ತಿಳಿಸಿದರು. ಉರಿಗೌಡ, ನಂಜೇಗೌಡ ಕುರಿತ ಚರ್ಚೆ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ಡಿಕೆಶಿ ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? – ಕಟೀಲ್ ಟೀಕೆ

  • ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಜನಾರ್ದನ ರೆಡ್ಡಿ ಭರ್ಜರಿ ರೋಡ್ ಶೋ – ಬಾಗೇಪಲ್ಲಿಯಲ್ಲಿ ಅಭ್ಯರ್ಥಿ ನಿಲ್ಲಿಸಲು ತಯಾರಿ

    ಚಿಕ್ಕಬಳ್ಳಾಪುರ: ಬಿಜೆಪಿ (BJP) ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Paksha) ಸ್ಥಾಪನೆ ಮಾಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಬಾಗೇಪಲ್ಲಿಯಲ್ಲಿ (Bagepalli) ಭಾನುವಾರ ಭರ್ಜರಿ ರೋಡ್ ಶೋ (Road Show) ನಡೆಸಿದ್ದಾರೆ.

    ಬಾಗೇಪಲ್ಲಿಯ ಸುಂಕಲಮ್ಮ ದೇವಾಲಯದ ಬಳಿ ಪಕ್ಷದ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿಯವರು ಜನಾರ್ದನ ರೆಡ್ಡಿಯವರನ್ನು ಸ್ವಾಗತಿಸಿಕೊಂಡರು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರೆಡ್ಡಿಯವರ ಬೆಂಬಲಿಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನೂರಾರು ಮಂದಿಯಿಂದ ಬೈಕ್ ರ್ಯಾಲಿ ನಡೆಯಿತು. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ

    ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ ಜನಾರ್ದನ ರೆಡ್ಡಿ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ನಗರದ ಹೊರವಲಯದ ಕೆಎಸ್‍ಆರ್‌ಟಿಸಿ (KSRTC) ಬಸ್ ಡಿಪೋ ರಸ್ತೆಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಸೇರಿದ್ದರು.

    ಹಳೇ ಮೈಸೂರು (Old Mysuru) ಬಯಲುಸೀಮೆ ಭಾಗದಲ್ಲೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜನಾರ್ದನ ರೆಡ್ಡಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

  • ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

    ಸಿದ್ದರಾಮಯ್ಯ ಹರಕೆಯ ಕುರಿ, ಕಾಂಗ್ರೆಸ್‍ಗೆ ದಮ್ಮಿದ್ರೆ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಿ: ಶ್ರೀರಾಮುಲು ಸವಾಲು

    ರಾಯಚೂರು: ಸಿದ್ದರಾಮಯ್ಯ (Siddaramaiah) ಹರಕೆಯ ಕುರಿಯಾಗಿದ್ದಾರೆ. ಅವರು ಹರಕೆಯ ಕುರಿಯಾಗಬಾರದು. ಕಾಂಗ್ರೆಸ್‍ಗೆ (Congress) ದಮ್, ತಾಕತ್ ಇದ್ರೆ ಸಿದ್ದರಾಮಯ್ಯ ಅವರನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಸವಾಲು ಹಾಕಿದ್ದಾರೆ.

    ರಾಯಚೂರಿನ (Raichuru) ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijaya sankalpa yatre) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇವರಾಜ ಅರಸು (Devaraj Arasu), ನಿಜಲಿಂಗಪ್ಪ (Nijalingappa), ವೀರೇಂದ್ರ ಪಾಟೀಲ್, ಬಂಗಾರಪ್ಪ (Bangarappa) ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಂಡರೋ, ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರನ್ನು ನಡೆಸಿಕೊಳ್ಳುತ್ತಿದೆ. ಆ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು ಎಂದಿದ್ದಾರೆ. ಇದನ್ನೂ ಓದಿ: ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು

    ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿಲ್ಲ, ಒಳ ಜಗಳಗಳು ಪ್ರಾರಂಭವಾಗಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯಮಾಡಿದ್ದಾರೆ.

    ನಾನು ಉಪ ಮುಖ್ಯಮಂತ್ರಿ ಸ್ಥಾನ ಕೇಳವ ಕಾಲ ಹೋಗಿದೆ. ಈಗ ಪ್ರಮೋಷನ್ ಆಗಿ ಸಿಎಂ ಸ್ಥಾನ ಕೇಳುವ ಸಮಯ ಬಂದಿದೆ. ಪಕ್ಷ ಮುಂದೆ ನನ್ನನ್ನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಬಹುದು ಎಂದು ಸಿಎಂ ಬಯಕೆಯನ್ನು ತೆರೆದಿಟ್ಟಿದ್ದಾರೆ.

    ಬಿಎಂಟಿಸಿ (BMTC) ಬಸ್‍ನಲ್ಲಿ ಕಂಡಕ್ಟರ್ ಸಜೀವ ದಹನ ವಿಚಾರವಾಗಿ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶ ಮಾಡಿದ್ದೇನೆ. ಕುಟುಂಬದವರಿಗೆ ಉದ್ಯೋಗ ನೀಡಲು ಆದೇಶಿಸಿಸಲಾಗಿದೆ. ಇನ್ಸೂರೆನ್ಸ್ ಬಗ್ಗೆಯೂ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇವೆ. 10% ವೇತನ ಹೆಚ್ಚಳಕ್ಕೆ ನಾವು ಒಪ್ಪಿದ್ದೇವೆ. ಆದರೆ ನೌಕರರು ಒಪ್ಪುತ್ತಿಲ್ಲ ಎಂದಿದ್ದಾರೆ.

    ಜನಾರ್ದನ ರೆಡ್ಡಿಗೆ (Janardhana Reddy) ಸಿಬಿಐ (CBI) ಸಮನ್ಸ್ (Summons) ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಸಾಮಾನ್ಯ ಪ್ರಕ್ರಿಯೆ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿಗರ (BJP) ಮೇಲೂ ದಾಳಿಯಾಗಿವೆ. ಕಾನೂನು ಚೌಕಟ್ಟಿನಲ್ಲಿ ಸಿಬಿಐ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ

  • ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು – ರೆಡ್ಡಿ

    ರಾಜ್ಯ ಆಳ್ತೀನಿ ಎಂಬ ಭಯದಿಂದ ನನ್ನನ್ನ ಮುಗಿಸಲು ಹೊರಟಿದ್ರು – ರೆಡ್ಡಿ

    ತುಮಕೂರು: ನಾನು ಖಂಡಿತವಾಗಿಯೂ ರಾಜ್ಯ ಆಳ್ತೀನಿ ಎಂಬ ಭಯ ಕೆಲವರಿಗೆ ಇತ್ತು. ಹಾಗಾಗಿ ಎಲ್ಲರೂ ಸೇರಿ ನನ್ನನ್ನ ಮುಗಿಸಲು ಮುಂದಾಗಿದ್ದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhana Reddy) ಹೇಳಿದ್ದಾರೆ.

    ಪಾವಗಡ ಪಟ್ಟಣದಲ್ಲಿ ನಡೆದ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮನೆಯಲ್ಲೇ ಕೂರಿಸಬೇಕು. ಇವನು ಹೊರಗಡೆ ಎಂದೂ ಬರಬಾರದು ಎಂದು ಕೆಲವರು ಪ್ರಯತ್ನಿಸಿದ್ದರು. ನನ್ನನ್ನ ಹೇಗಾದರೂ ಮಾಡಿ ಮುಗಿಸಬೇಕು ಎಂದು ಎಲ್ಲರೂ ಪ್ರಯತ್ನಪಟ್ಟರು. ಆದರೆ ದೇವರಿಚ್ಛೆ ಬೇರೆಯೇ ಇತ್ತು. ಹಾಗಾಗಿ ನಾನು 12 ವರ್ಷಗಳ ಬಳಿಕ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

    ಒಬ್ಬ ಮನುಷ್ಯನನ್ನ ಮುಗಿಸಬೇಕು, ಬೆಳೆಸಬೇಕು ಅಂದ್ರೆ ಆ ಪರಮಾತ್ಮನೇ ಬರಬೇಕು. ಹಾಗಾಗಿ ಇವತ್ತು 12 ವರ್ಷಗಳ ನಂತರ ನಾನು ನಿಮ್ಮ ಮುಂದೆ ಇದ್ದೇನೆ. ಜನರ ಪ್ರೀತಿ ಅಭಿಮಾನ ಭಗವಂತನ ಆಶೀರ್ವಾದದಿಂದ ಮತ್ತೇ ನಿಮ್ಮ ಮುಂದೆ ಇದ್ದೇನೆ ಎಂದು ತಾವು ಜೈಲಿಗೆ ಹೋಗಿದ್ದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರನ್ನ ನೇಮಿಸೋಕೆ ಸುಧಾಕರ್ 50 ಲಕ್ಷ ಕೇಳಿದ್ದಾರೆ – ಹೆಚ್‌ಡಿಕೆ ಆರೋಪ

    ಪಾವಗಡದಲ್ಲಿ ನೇರಳೆಕೆರೆ ನಾಗೇಂದ್ರ ಕಳೆದ ನಾಲ್ಕೈದು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರು ಸಮಾಜ ಸೇವೆ ಮಾಡಬೇಕು ಎಂಬ ಉತ್ಸಾಹ ಹೊಂದಿದ್ದಾರೆ. ನಾಗೇಂದ್ರ ಅವರು ಕೆಆರ್‌ಪಿಪಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಈ ವೇಳೆ ಘೋಷಣೆ ಮಾಡಿದರು. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ