Tag: Janardhan Reddy

  • ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

    ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

    ಕೊಪ್ಪಳ: ಗಂಗಾವತಿಯ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhan Reddy), ಮಾಜಿ ಸಚಿವ ಶ್ರೀರಾಮುಲು (Sriramulu) ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ರಾಜಕಾರಣದಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೆಡ್ಡಿ-ರಾಮುಲು ಈ ಜೋಡಿ ಇತ್ತೀಚೆಗಷ್ಟೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕೆಲವು ಆಸ್ತಿ ಜಗಳಗಳಿಂದಾಗಿ ದೂರವಾಗಿದ್ದರು. ಬಿಜೆಪಿ ಹಿರಿಯ ನಾಯಕರು ಇವರನ್ನು ಒಂದು ಮಾಡಲು ನೋಡಿದ್ದರು. ಆದರೆ, ನಾವು ಒಂದಾಗುವ ಮಾತೇ ಇಲ್ಲ. ಪರಸ್ಪರ ಮುಖವನ್ನು ನೋಡುವುದಿಲ್ಲ ಎನ್ನುವ ಶಪಥ ತೊಟ್ಟಿದ್ದರು. ಆದರೆ, ದಿಢೀರ್ ಈಗ ಮನಸು ಬದಲಾಯಿಸಿದ್ದಾರೆ. ನಮ್ಮ ನಡುವೆ ಯಾವುದೇ ಜಗಳಗಳಿಲ್ಲ. ನಾವು ಚೆನ್ನಾಗಿದ್ದೇವೆ ಎಂದು ಒತ್ತಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್

    ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಳ್ಳಾರಿ ವಿಭಾಗದ ಸಂಘಟನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಕುಶಲೋಪರಿ ವಿಚಾರಿಸಿದರು. ಕೆಲ ನಿಮಿಷ ಗಮನಾರ್ಹವಾಗಿ ಚರ್ಚೆ ನಡೆಸಿದರು. ಭಾಷಣದಲ್ಲೂ ನಾವಿಬ್ಬರೂ ಒಂದಾಗಿದ್ದೇವೆ. ಯಾರು ಎಷ್ಟೇ ಹುಳಿ ಹಿಂಡಿದರೂ ಕಿವಿಗೊಡುವುದಿಲ್ಲ. ಹಿಂದೆಯೂ, ಮುಂದೆಯೂ ಜೀವದ ಗೆಳೆಯರಾಗಿದ್ದೇವೆ ಎಂದು ಪ್ರಸ್ತಾಪಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದರು.

    ರೆಡ್ಡಿ-ಶ್ರೀರಾಮುಲು ಆಪ್ತಮಿತ್ರರು. ಅಕ್ರಮ ಗಣಿಗಾರಿಗೆ ಆರೋಪದ ಮೇಲೆ ಜನಾರ್ದನ ರೆಡ್ಡಿ ಜೈಲು ಸೇರಿದರೂ ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪ್ರಚಾರ ಮಾಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಆಗಿದ್ದ ಬಂಗಾರು ಹನುಮಂತು ಅವರ ಸೋಲಾಯಿತು ಎಂದು ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಇದೊಂದು ಘಟನೆಯಿಂದ ರೆಡ್ಡಿ-ರಾಮುಲು ನಡುವಿನ ಬಿರುಕಿಗೆ ಕಿಡಿ ಹೊತ್ತಿಸಿತ್ತು. ಇದರ ಜೊತೆಗೆ ಆಂತರಿಕವಾಗಿ ಇದ್ದ ಕೆಲ ಖಾಸಗಿ ಭಿನ್ನಾಭಿಪ್ರಾಯದಿಂದ ಇಬ್ಬರು ಸಿಡಿದೆದ್ದು, ಏಕವಚನದಲ್ಲೇ ಬೈದಾಡಿಕೊಂಡಿದ್ದರು. ಬಳ್ಳಾರಿಯಲ್ಲಿದ್ದ ತಮ್ಮ ಮನೆಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ದ್ವಾರ(ಗೇಟ್)ಗಳನ್ನು ಬಂದ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

    ಮೇಲ್ನೋಟಕ್ಕೆ ರಾಜಕೀಯ ಕಿತ್ತಾಟವೇ ಆಗಿದ್ದರೂ ರೆಡ್ಡಿ-ರಾಮುಲು ನಡುವೆ ಆಸ್ತಿ ಕಲಹಗಳಿವೆ. ಇದೇ ಕಾರಣಕ್ಕೆ ದೂರವಾಗಿದ್ದಾರೆ ಎಂಬುದು ಅವರ ಬೆಂಬಲಿಗರ ಸ್ಪಷ್ಟೋಕ್ತಿ ಆಗಿತ್ತು. ಆದರೆ ಈಗ ಇಬ್ಬರು ಯಾರ ಮಧ್ಯಸ್ಥಿಕೆ ಇಲ್ಲದೇ ಒಂದಾಗಿ ಬಿಜೆಪಿ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ. ಮರು ಹೊಂದಾಣಿಕೆ ಹಿಂದಿನ ಮರ್ಮವೇನು? ಎನ್ನುವ ಪ್ರಶ್ನೆ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಬಿಜೆಪಿ ರಾಜ್ಯ ಮುಖಂಡರಲ್ಲೂ ಮೂಡಿದೆ.

  • ತುಳುನಾಡಿನ ದೈವದ ನುಡಿಗೆ ತಲೆಬಾಗಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ

    ತುಳುನಾಡಿನ ದೈವದ ನುಡಿಗೆ ತಲೆಬಾಗಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ

    – ದಕ್ಷಿಣ ಕನ್ನಡ ಜಿಲ್ಲೆಯ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ
    – ನಿಜವಾಯ್ತು ದೈವದ ನುಡಿ; 1 ತಿಂಗಳೊಳಗೆ ಜೈಲು ಶಿಕ್ಷೆಯಿಂದ ಮುಕ್ತಿ ಸಿಗುತ್ತೆ ಎಂದಿದ್ದ ದೈವ

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಭೇಟಿ ನೀಡಿದ್ದಾರೆ.

    ಪ್ರಕರಣವೊಂದರಲ್ಲಿ ಜನಾರ್ದನ ರೆಡ್ಡಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆಗ, ಒಂದು ತಿಂಗಳ ಒಳಗಾಗಿ ಶಿಕ್ಷೆಯಿಂದ ಮುಕ್ತಿ ಸಿಗುವುದು ಎಂದು ದೈವ ಅಭಯ ನೀಡಿತ್ತು. ದೈವದ ನುಡಿ ನಿಜವಾದ ಬೆನ್ನಲ್ಲೇ ಗಂಗಾವತಿ ಶಾಸಕ ದೈವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

    ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನ (Savanur Areltadi Devasthanam) ಇದಾಗಿದೆ. ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ರೆಡ್ಡಿ ಆಗಮಿಸಬೇಕಿತ್ತು. ಆದರೆ, ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಮತ್ತೆ ಜೈಲುಶಿಕ್ಷೆಗೆ ಗುರಿಯಾಗಿದ್ದರು. ರೆಡ್ಡಿ ಕಾನೂನಿನ ಕುಣಿಕೆಗೆ ಸಿಲುಕಿದ್ದ ಪರಿಣಾಮ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಮೇ 13 ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲು ಶಿಕ್ಷೆಯಿಂದ ಮುಕ್ತಿಗೆ ಮೊರೆ ಇಟ್ಟಿದ್ದರು.

    ಇಂದಿನಿಂದ 1 ತಿಂಗಳ ಒಳಗಡೆ ಜೈಲು ಶಿಕ್ಷೆಯಿಂದ ಮುಕ್ತಿ ಸಿಗಲಿದೆ ಎಂದು ದೈವ ನುಡಿ ನೀಡಿತ್ತು. ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಶಿಕ್ಷೆಯಿಂದ ಪಾರಾಗಿದ್ದಾರೆ. ಹಾಗಾಗಿ, ಇಂದು ಸವಣೂರಿನಲ್ಲಿರುವ ಇರ್ವೆಲ್ ಉಳ್ಳಾಕ್ಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

    ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ತಂಬಿಲ ಸೇವೆ ನೀಡಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜನಾರ್ದನ ರೆಡ್ಡಿಗೆ ಸಾಥ್ ನೀಡಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಇದ್ದರು.

  • ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

    – ಕೋರ್ಟ್‌ ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದ ಶಾಸಕ

    ಕೊಪ್ಪಳ: ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ದಂಪತಿಯು ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಶಾಸಕ ರೆಡ್ಡಿ, ಆಂಜಯೇಯನ ದರ್ಶನ ಪಡೆದಿದ್ದಾರೆ. ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದು ತಿಳಿಸಿದ್ದಾರೆ.

    ಜನಾರ್ದನ ರೆಡ್ಡಿ 575 ಮೆಟ್ಟಿಲು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಅವರಿಗೆ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದ್ದಾರೆ. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

    ರೆಡ್ಡಿ ಜೈಲಿನಲ್ಲಿ ಇದ್ದಾಗ ತಮ್ಮ ಪತಿ ಬೇಗ ಬಿಡುಗಡೆಯಾಗಲಿ ಎಂದು ಪತ್ನಿ ಪೂಜೆ ಸಲ್ಲಿಸಿದ್ದರು. ಪೂಜೆಗೆ ಫಲ ಸಿಕ್ಕ ಹಿನ್ನೆಲೆ ಪತಿ ಜನಾರ್ದನ ರೆಡ್ಡಿ ಜೊತೆಗೂಡಿ ಅರುಣಾಲಕ್ಷ್ಮೀ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು.

    ಏನಿದು ಪ್ರಕರಣ?
    ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

    2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಸಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

  • ಜನಾರ್ದನ ರೆಡ್ಡಿಗೆ ಜಾಮೀನು – ಗಂಗಾವತಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಜನಾರ್ದನ ರೆಡ್ಡಿಗೆ ಜಾಮೀನು – ಗಂಗಾವತಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಕೊಪ್ಪಳ: ಅಕ್ರಮ ಗಣಿಗಾರಿಕೆ ಹಗರಣ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿಯವರಿಗೆ (Janardhan Reddy) ಜಾಮೀನು ಸಿಕ್ಕ ಬೆನ್ನಲ್ಲೇ ಗಂಗಾವತಿ ಜನರಲ್ಲಿ ಸಂಭ್ರಮ ಮನೆಮಾಡಿದೆ.

    ಓಬಳಾಪುರಂ ಅಕ್ರಮ ಗಣಿಗಾರಿಕೆ (Obulapuram Illegal Mining Case) ಪ್ರಕರಣ ಸಂಬಂಧ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ (Telangana High Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಹಿನ್ನೆಲೆ ರೆಡ್ಡಿ ಬೆಂಬಲಿಗರು ಗಂಗಾವತಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

    ಪಟಾಕಿ ಸಿಡಿಸಿ, ಸಿಹಿ ಹಂಚಿ, ಬಣ್ಣ ಎರಚುವ ಮೂಲಕ ಸಂಭ್ರಮಿಸಿದ್ದಾರೆ. ಎತ್ತುಗಳನ್ನು ಹಿಡಿದುಕೊಂಡು ಬಣ್ಣ ಎರಚುವುದಲ್ಲದೇ ಜನಾರ್ದನ ರೆಡ್ಡಿ ಫೋಟೋ ಹಿಡಿದು ಘೋಷಣೆ ಕೂಗಿದ್ದಾರೆ.ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಏನಿದು ಪ್ರಕರಣ?
    ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

    2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಷಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

    ಸದ್ಯ ಈ ಪ್ರಕರಣ ಸಂಬಂಧ ತೆಲಂಗಾಣ ಹೈಕೋರ್ಟ್ ಶಾಸಕ ಜನಾರ್ದನ ರೆಡ್ಡಿಯವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಜೊತೆಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ 7 ವರ್ಷ ಜೈಲು ಶಿಕ್ಷೆ ಆದೇಶಕ್ಕೆ ತಡೆ ನೀಡಿದೆ.ಇದನ್ನೂ ಓದಿ: ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ

  • ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    – ಭಾರತ ಬಿಟ್ಟು ಬೇರೆಡೆ ತೆರಳದಂತೆ ಕೋರ್ಟ್‌ ಸೂಚನೆ

    ಹೈದರಾಬಾದ್:‌ ಅಕ್ರಮ ಗಣಿಗಾರಿಕೆ ಹಗರಣ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿಗೆ (Janardhan Reddy) ತೆಲಂಗಾಣ ಹೈಕೋರ್ಟ್‌ (Telangana High Court) ಷರತ್ತುಬದ್ಧ ಜಾಮೀನು ನೀಡಿದೆ.

    ಓಬಳಾಪುರಂ ಅಕ್ರಮ ಗಣಿಗಾರಿಕೆ (Obulapuram Illegal Mining Case) ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

    ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿರುವ ಕೋರ್ಟ್‌, ತಲಾ 10 ಲಕ್ಷ ಮೌಲ್ಯದ ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೇ, ಭಾರತ ಬಿಟ್ಟು ಹೋಗಲು ಅನುಮತಿ ಇರುವುದಿಲ್ಲ. ಗಾಲಿ ಜನಾರ್ದನ ರೆಡ್ಡಿ ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆಯೂ ಆದೇಶಿಸಿದೆ.

    ಏನಿದು ಪ್ರಕರಣ?
    ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶದ ಬಳಿಕ ಜನಾರ್ದನ ರೆಡ್ಡಿ ಶಾಸಕತ್ವ ಅನರ್ಹತೆ ಬಗ್ಗೆ ತೀರ್ಮಾನ – ಯು.ಟಿ.ಖಾದರ್

    2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಸಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

  • ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

    ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

    ಬೆಂಗಳೂರು: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ (Obulapuram Mining Company Illegal Mining Case) ಬಂಧನಕ್ಕೆ ಒಳಗಾದ ಶಾಸಕ ಜನಾರ್ದನ ರೆಡ್ಡಿ (Janardhan Reddy) ಚಂಚಲಗೂಡ ಜೈಲಿನಿಂದ ಬೆಂಗಳೂರು ಪರಪ್ಪನ ಅಗ್ರಹಾರ (Parappana Agrahara) ಜೈಲಿಗೆ ಸ್ಥಳಾಂತರವಾಗಲಿದ್ದಾರೆ.

    ಇಂದು ಬಾಡಿ ವಾರಂಟ್‌ ಮೇಲೆ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

    ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ್ ಭಟ್ ಅವರು ಜನಾರ್ದನ ರೆಡ್ಡಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ಪ್ರಕಟಿಸಿ ಮುಂದಿನ ವಿಚಾರಣೆಯನ್ನು ಜೂನ್‌ 2ಕ್ಕೆ ಮುಂದೂಡಿಕೆ ಮಾಡಿದರು. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ

     

    ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದ್ದು ಖುದ್ದು ಹಾಜರಾತಿಗೆ ಕೋರ್ಟ್‌ ಸೂಚಿಸಿದ್ದರಿಂದ ರೆಡ್ಡಿ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ಇದನ್ನೂ ಓದಿ: ಪ್ರಜ್ವಲ್‌ ಮೊಬೈಲಿನಲ್ಲಿ 2000 ಮಹಿಳೆಯರ ಚಿತ್ರ: ಸಾಕ್ಷ್ಯ ನುಡಿದ ಚಾಲಕ

    ಏನಿದು ಕೇಸ್‌?
    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ವಿಧಿಸಿದ ನಂತರ ಪೊಲೀಸರು ರೆಡ್ಡಿಯನ್ನು ಬಂಧಿಸಿ ಚಂಚಲಗೂಡ ಜೈಲಿಗೆ ಶಿಫ್ಟ್‌ ಮಾಡಿದ್ದರು. ಈ ಮೂಲಕ 10 ವರ್ಷಗಳ ಬಳಿಕ ಮತ್ತೆ ಜನಾರ್ದನ ರೆಡ್ಡಿ ಜೈಲುಪಾಲಾಗಿದ್ದಾರೆ.

    ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತ್ತು. ರೆಡ್ಡಿ ಜತೆಗೆ ಒಎಂಸಿ ಕಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ಆಪ್ತ ಎಂ.ಅಲಿಖಾನ್‌, ಗಣಿ ಇಲಾಖೆ ಮಾಜಿ ಅಧಿಕಾರಿ ವಿ.ಡಿ.ರಾಜಗೋಪಾಲ್‌ ದೋಷಿಗಳು ಎಂದು ಹೇಳಿದೆ. ಕೋರ್ಟ್‌ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಹಾಗೂ ಒಎಂಸಿ ಗಣಿ ಕಂಪನಿಗೆ 2 ಲಕ್ಷ ರೂ. ದಂಡ ವಿಧಿಸಿದೆ.

  • ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ, ಡಿಕೆಶಿ ಜೊತೆ ಯಾವುದೇ ಮುನಿಸಿಲ್ಲ: ಸತೀಶ್ ಜಾರಕಿಹೊಳಿ

    ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ, ಡಿಕೆಶಿ ಜೊತೆ ಯಾವುದೇ ಮುನಿಸಿಲ್ಲ: ಸತೀಶ್ ಜಾರಕಿಹೊಳಿ

    ಚಿಕ್ಕೋಡಿ: ಶ್ರೀರಾಮುಲು (Sriramulu) ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ (Congress) ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಬಳಿಕ ಮಾತನಾಡಿದ ಅವರು, ಶ್ರೀರಾಮುಲು ಪಕ್ಷಕ್ಕೆ ಬರಲು ನನ್ನ ವಿರೋಧವಿಲ್ಲ. ಶ್ರೀರಾಮುಲು ಪಕ್ಷಕ್ಕೆ ಬರುತ್ತಾರೆ ಎನ್ನುವುದು ವದಂತಿ ಅಷ್ಟೇ. ವಿರೋಧದ ಬಗ್ಗೆ ಮಾತನಾಡಿದರೆ ಹೈಕಮಾಂಡ್ ನೋಟಿಸ್ ನೀಡುತ್ತದೆ. ಆಗ ನಾನು ಉತ್ತರ ನೀಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಚಿತ್ರದುರ್ಗ| ಬೈಕಲ್ಲಿ ಬಂದು ಸುಲಿಗೆ ಮಾಡ್ತಿದ್ದ ಆರೋಪಿ ಅರೆಸ್ಟ್

    ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡಿಕೆಶಿ ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದ್ದು ನನಗೆ ಗೊತ್ತಿಲ್ಲ. ಇನ್ನೂ ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಸಿಎಂ ಮಾಡುವುದು ಬಿಡುವುದು ಹೈಕಮಾಂಡ್ ಜವಾಬ್ದಾರಿ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

    ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದೆ. ಅದರಲ್ಲಿ ನಾನು ಭಾಗೀದಾರ. ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಎಲ್ಲರೂ ಸೇರಿ ಬೆಳಗಾವಿ ಸಮಾವೇಶ ಯಶಸ್ವಿ ಮಾಡಿದ್ದೇವೆ. ಡಿಕೆಶಿ ನಾನು ಒಗ್ಗಟ್ಟಾಗಿ ಇದ್ದೇವೆ. ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವನ್ನು ದೆಹಲಿಯಲ್ಲಿ ಕೇಳಬೇಕು. ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಷ್ಟು ನಮ್ಮ ಬಳಿ ಶಕ್ತಿಯಿಲ್ಲ, ಅಧಿಕಾರ ಇಲ್ಲ. ಚರ್ಚೆ ಅನಾವಶ್ಯಕ ಎಂದರು. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ, ಸಂಕಷ್ಟದಲ್ಲಿ ಪ್ರಾಣಿ ಸಂಕುಲ

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿರಣ ರಜಪೂತ್, ಬಸ್ಸು ಕೋಳಿ, ಮಲ್ಲಿಕಾರ್ಜುನ ರಾಶಿಂಗೆ ಸಂಜು ಗಂಡ್ರೋಳಿ ಉಪಸ್ಥಿತರಿದ್ದರು. ಇದನ್ನೂ ಓದಿ: PUBLiC TV Impact | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾದ ಮಹಿಳೆ ಮನೆಗೆ ತಹಶೀಲ್ದಾರ್ ಭೇಟಿ

  • ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

    ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

    ಬಳ್ಳಾರಿ: ಜನಾರ್ದನ ರೆಡ್ಡಿ- ಶ್ರೀರಾಮುಲು (Sri Ramulu) ನಡುವೆ ದೋಸ್ತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆ, ರೆಡ್ಡಿ ಮನೆ ಸಂಪರ್ಕದ ಗೇಟ್ ಅನ್ನು ರಾಮುಲು ಬಂದ್ ಮಾಡಿಸಿದ್ದಾರೆ.

    ಜನಾರ್ದನ ರೆಡ್ಡಿ (Janardhan Reddy) ಮನೆಗೆ ಸಂಪರ್ಕಿಸಲು ರಾಮುಲು ಮನೆಯ ಕೌಂಪೌಂಡ್‌ಗೆ ಗೇಟ್ ಹಾಕಲಾಗಿತ್ತು. ಇಬ್ಬರ ಸಂಬಂಧ ಹಳಸಿದ್ರಿಂದ ವಾಸ್ತು ಹೆಸರನಲ್ಲಿ ಗೇಟ್ ಬಂದ್ ಮಾಡಿಸಲಾಗಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    ಬಳ್ಳಾರಿ ನಗರದ (Ballari City) ಅವಂಬಾವಿಯಲ್ಲಿ ಅಕ್ಕಪಕ್ಕದಲ್ಲೇ ಕೇವಲ 50 ಮೀಟರ್ ಅಂತರದಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಮನೆಗಳಿವೆ. ರಸ್ತೆಯಿಂದ ಬರಬಾರದು ಅನ್ನೋ ಕಾರಣಕ್ಕೆ ಕಂಪೌಂಡ್‌ಗೆ ಒಂದು ಗೇಟ್ ಮಾಡಿಸಲಾಗಿತ್ತು. ಇಬ್ಬರ ನಡುವೆ ವೈಮನಸ್ಸು ಆಗ್ತಿದಂತೆ ಇಟ್ಟಿಗೆ ಸಿಮೆಂಟ್ ಹಾಕಿ ಗೇಟನ್ನು ರಾಮುಲು ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲೇ 120 ಟನ್‌ ಕಬ್ಬು ಕಟಾವು ಮಾಡಿ ಲೋಡ್‌ – ಜೈ ಹನುಮಾನ್ ತಂಡಕ್ಕೆ ಜೈ

  • ಪಕ್ಷದ ವಿದ್ಯಮಾನಗಳು ಸಂತೋಷ ತಂದಿಲ್ಲ – ರಾಮುಲು ಅಪಾರ್ಥಕ್ಕೆ ಅವಕಾಶ ಕೊಡೋ ಮಾತಾಡಬಾರದು: ವಿಜಯೇಂದ್ರ

    ಪಕ್ಷದ ವಿದ್ಯಮಾನಗಳು ಸಂತೋಷ ತಂದಿಲ್ಲ – ರಾಮುಲು ಅಪಾರ್ಥಕ್ಕೆ ಅವಕಾಶ ಕೊಡೋ ಮಾತಾಡಬಾರದು: ವಿಜಯೇಂದ್ರ

    ಬೆಂಗಳೂರು: ಬಿಜೆಪಿಯೊಳಗಿನ (BJP) ಬೆಳವಣಿಗೆಗಳು ನನಗೂ, ಕಾರ್ಯಕರ್ತರಿಗೂ ಸಂತೋಷ ತಂದಿಲ್ಲ ಎಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹೇಳಿದರು.

    ಯಾರೋ ಒಂದಾರು ಜನ ಪ್ರಮುಖರು ನನ್ನ ವಿರುದ್ಧ ಹೇಳಿಕೆ ಕೊಡ್ತಿದ್ದಾರೆ. ರಾಜ್ಯದ ಉಸ್ತುವಾರಿಗಳೂ ಆದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರ್ವಾಲ್‌ (Radhamohan Das Agarwal) ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಪೊನ್ನು ರಾಧಾಕೃಷ್ಣ ಅವರು ಮೊನ್ನೆ ಸಭೆಯಲ್ಲಿದ್ದರು. 55- 60 ಜನ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಇದ್ದ ಸಭೆ ಅದಾಗಿತ್ತು. ಶೇ 80-90 ಜನರು ರಾಜ್ಯದ ಅಧ್ಯಕ್ಷರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರರನ್ನು ಮುಂದುವರೆಸಬೇಕೆಂದು ಅಭಿಪ್ರಾಯ ನೀಡಿದ್ದಾಗಿ ಮಾಧ್ಯಮಗಳಲ್ಲೂ ವರದಿ ಬಂದಿದೆ ಎಂದು ವಿಜಯೇಂದ್ರ ಗಮನ ಸೆಳೆದರು.

    ಕಾರ್ಯಕರ್ತರು ನನ್ನ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಅವರ ಅಸಮಾಧಾನ ಇರುವುದು ಅಧ್ಯಕ್ಷಗಿರಿ ಬಗ್ಗೆ ಅಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ, ಅದರಂತೆ ಅಧ್ಯಕ್ಷರ ಆಯ್ಕೆ ಆಗಲಿದೆ. ಇನ್ನೂ ಜಿಲ್ಲಾಧ್ಯಕ್ಷರ ಚುನಾವಣೆಗಳು ಈಗಾಗಲೇ ನಡೆಯುತ್ತಿವೆ. ರಾಜ್ಯದ ಅಧ್ಯಕ್ಷರ ಹುದ್ದೆಗೂ ಚುನಾವಣೆ ನಡೆಯಲಿದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಸಮರ್ಪಕ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಹೇಳಿದರು. ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆ ಕೇಸ್‌ನಲ್ಲಿ ಎಲ್ಲಾ ಹಣ, ಚಿನ್ನಾಭರಣ ರಿಕವರಿ: ಪರಮೇಶ್ವರ್

    ಸ್ಥಳೀಯ ಚುನಾವಣೆಗಳು (Local Election) ಬರುವ ಮುಂಚಿತವಾಗಿ ಪಕ್ಷದ ವರಿಷ್ಠರು ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಗಮನಿಸಬೇಕೆಂಬ ಅಪೇಕ್ಷೆ ನನ್ನದು ಮತ್ತು ಕಾರ್ಯಕರ್ತರದು. ಮಾಜಿ ಮುಖ್ಯಮಂತ್ರಿಗಳು, ಹೋರಾಟಗಾರ ಯಡಿಯೂರಪ್ಪನವರ ಬಗ್ಗೆ ಕೆಲವು ಮುಖಂಡರು ಅಪಮಾನ ಮಾಡುವ ರೀತಿಯಲ್ಲಿ ಒಂದು ವರ್ಷದಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾರ್ಯಕರ್ತರು ಇದರಿಂದ ನೊಂದಿದ್ದಾರೆ ಎಂದು ತಿಳಿಸಿದರು. ಎಲ್ಲ ವಿಷಯಗಳನ್ನ ಸರಿಪಡಿಸುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುವುದಾಗಿ ಹೇಳಿದರು. ಇದನ್ನೂ ಓದಿ: ಹಿಂದೂ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿ ಉಸ್ತುವಾರಿ – ದೇವಿ ಕನಸಲ್ಲಿ ಬಂದು ಮೊಹಮ್ಮದ್‌ ಅಲಿಗೆ ಹೇಳಿದ್ದೇನು?

    ಶ್ರೀರಾಮುಲು ಅವರ ವಿಚಾರದಲ್ಲಿ ಮೊನ್ನೆ ಕೋರ್ ಕಮಿಟಿಯಲ್ಲಿ ಏನು ಚರ್ಚೆ ಆಗಿದೆಯೋ ಅದರ ಕುರಿತ ಶ್ರೀರಾಮುಲು ಅವರ ಮಾತುಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಶ್ರೀರಾಮುಲು ಅವರು ಹಿರಿಯರಿದ್ದು ಅವರ ಬಗ್ಗೆ ಗೌರವವಿದೆ. ಒಳಗಡೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅವರ ಉಪಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕೆಂಬ ಚರ್ಚೆ ನಡೆದಿದೆ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕೆಂಬ ದೃಷ್ಟಿಯಿಂದ ಕೆಲವೊಂದು ಚರ್ಚೆಗಳು ನಡೆದಿವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

    ಸಭೆಯ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡುವುದಿಲ್ಲ. ಶ್ರೀರಾಮುಲು (SriRamulu) ಅವರು ಕೂಡ ಅಪಾರ್ಥಕ್ಕೆ ಅವಕಾಶ ಮಾಡಿಕೊಡಬಾರದು. ನಾವೆಲ್ಲರೂ ಒಟ್ಟಾಗಿ ಹೋಗೋಣ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ರು. ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತವನ್ನು ಸ್ವತಂತ್ರಗೊಳಿಸಲು ಹೋರಾಡಿದ ಅಪ್ರತಿಮ ದೇಶಭಕ್ತ: ಸಿದ್ದರಾಮಯ್ಯ

  • ಸೋದರ ಮಾವ ಕೊಲೆಯಾದ ನಂತ್ರ ನನ್ನ ಆಶ್ರಯಕ್ಕೆ ಬಂದ ರಾಮುಲುವನ್ನು ಬೆಳೆಸಿದ್ದೇ ನಾನು: ರೆಡ್ಡಿ

    ಸೋದರ ಮಾವ ಕೊಲೆಯಾದ ನಂತ್ರ ನನ್ನ ಆಶ್ರಯಕ್ಕೆ ಬಂದ ರಾಮುಲುವನ್ನು ಬೆಳೆಸಿದ್ದೇ ನಾನು: ರೆಡ್ಡಿ

    ಬೆಂಗಳೂರು: ಶ್ರೀರಾಮುಲು (Sriramulu) ವಿಚಾರದಲ್ಲಿ ನಾನು ಯಾರಿಗೂ ಚಾಡಿ ಹೇಳಿಲ್ಲ, ಅದರ ಅವಶ್ಯಕತೆ ನನಗೆ ಇಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ.

    ತನ್ನ ವಿರುದ್ಧ ಶ್ರೀರಾಮುಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಬಂಗಾರು ಹನುಮಂತುಗೆ (Bangaru Hanumanthu) ಸಂಡೂರು ಉಪಚುನಾವಣೆಯ ಟಿಕೆಟ್ ನಾನು ಕೊಡಿಸಲಿಲ್ಲ. ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ನನಗೆ ಕೆಲಸ ಮಾಡಲು ಪಕ್ಷ ಆದೇಶ ಮಾಡಿತ್ತು. ನಮ್ಮ ಪಕ್ಷದ ಎಲ್ಲ ನಾಯಕರು ಬಂದು ಸಂಡೂರಲ್ಲಿ ಪ್ರಚಾರ ಮಾಡಿದ್ದರು. ಆದರೆ ರಾಮುಲು ಮೂರು ದಿನ ತಡವಾಗಿ ಪ್ರಚಾರಕ್ಕೆ ಬಂದಿದ್ದರು. ಅವರ ಜತೆಗೂ ನಾನು ಕೆಲಸ ಮಾಡಿ ಪ್ರಚಾರ ಮಾಡಿದೆ. ಆದರೆ ಬಿಜೆಪಿ ಅಭ್ಯರ್ಥಿ ಸೋಲುವ ಪರಿಸ್ಥಿತಿ ಬಂತು ಎಂದು ತಿಳಿಸಿದರು.

    ಲೋಕಸಭೆ ಚುನಾವಣೆ ನಡೆಯುವ ತಿಂಗಳ ಮೊದಲು ಬಿಜೆಪಿಗೆ ನಾನು ಸೇರಿದೆ. ಬಳ್ಳಾರಿಗೆ ಹೋಗಲು ನನಗೆ ಅನುಮತಿ ಇರಲಿಲ್ಲ. ಸುಪ್ರೀಂ ಕೋರ್ಟ್‌ ಅನಮತಿ ನೀಡಿದ ಬಳಿಕ ನಾನು ಬಳ್ಳಾರಿಗೆ ಹೋಗಿದ್ದೆ. ಸಂಡೂರು ಕ್ಷೇತ್ರದ ಟಿಕೆಟ್ ಚರ್ಚೆಯ ವೇಳೆ ಯಾರಿಗೂ ನೀಡಿದರೂ ನಾನು ದುಡಿಯುತ್ತೇನೆ ಎಂದು ಹೇಳಿದ್ದೆ ಎಂದರು.  ಇದನ್ನೂ ಓದಿ: ಸತೀಶ್‌ ಜಾರಕಿಹೊಳಿಯನ್ನು ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಆಪರೇಷನ್‌- ರೆಡ್ಡಿ ಬಾಂಬ್‌

    ರಾಮುಲುಗೆ ಸಹಕಾರ ನೀಡಿದ್ದೆ
    1991 ರಲ್ಲಿ ರಾಮುಲು ಅವರ ಸೋದರ ಮಾವನ ಕೊಲೆ ನಡೆಯುತ್ತದೆ. ಆ ಕೊಲೆಯ ನಂತರ ನನ್ನಆಶ್ರಯಕ್ಕೆ ರಾಮುಲು ಬರುತ್ತಾರೆ. ಚಾಕು ಹಿಡಿದು, ಬೆನ್ನಿಗೆ ಕೊಡಲಿ ಕಟ್ಟಿಕೊಂಡವರ ರಕ್ಷಣೆಯಲ್ಲಿ ರಾಮುಲು ಬಂದರು. ಆಗ ಅವರಿಗೆ ರಕ್ಷಣೆ ಬೇಕಿತ್ತು.

    ಮಾವನನ್ನು ಮುಗಿಸಿದವರು ರಾಮುಲು ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ರಾಮುಲು ಬಗ್ಗೆ ನಮ್ಮ ತಾಯಿಗೆ ನಂಬಿಕೆ ಇತ್ತು. ಅವನನ್ನು ಕಾಪಾಡುವ ಜವಾಬ್ದಾರಿ ನಿನ್ನದು ಅಂತ ನಮ್ಮ ತಾಯಿ ನನಗೆ ಹೇಳಿದ್ದರು.

    ಬಳ್ಳಾರಿಯಲ್ಲಿ ರಾಘವೇಂದ್ರ ಎನ್ನುವವನ ಕೊಲೆ ನಡೆಯಿತು. ಆ ಕೊಲೆ ಆರೋಪ ರಾಮುಲು ಮೇಲೆ ಬಂದಿತ್ತು. ಆಗ ನಾನು ಒಂದು ಸುದ್ದಿಗೋಷ್ಠಿ ಮಾಡಿ ದಿವಾಕರ್ ಬಾಬು ಮೇಲೆ ನಾನು ಆರೋಪ ಮಾಡಿದೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದನ್ನೂ ಓದಿ: ಕ್ರಿಮಿನಲ್ ಬ್ಯಾಗ್ರೌಂಡ್‌ ಬಗ್ಗೆ ಸಾಚಾ ಅಂತಾರೆ, ಸಮಯ ಬಂದಾಗ ಜನರ ಮುಂದೆ ಬಿಚ್ಚಿಡ್ತೀನಿ: ರೆಡ್ಡಿಗೆ ರಾಮುಲು ವಾರ್ನಿಂಗ್

     

    ರಾಮುಲು ಅವರ ಮಾವನ ಕೊಲೆಗೆ ಫಂಡಿಂಗ್ ಮಾಡಿದವರು ಸೂರ್ಯನಾರಾಯಣ ರೆಡ್ಡಿ. ದಿವಾಕರ್ ಬಾಬು ಮೂಲಕ ಸೂರ್ಯನಾರಾಯಣ ರೆಡ್ಡಿ ಕೊಲೆ ಮಾಡಿಸಿದರು. ಈಗ ಅವರು ಕಾಂಗ್ರೆಸ್‌ನಲ್ಲಿದ್ದಾರೆ. ರಾಮುಲು ತಮ್ಮ ಮಾವನ ಕೊಲೆಗಾರರ ಮೇಲೆ ಸೇಡಿಗೆ ಮುಂದಾಗಿದ್ದರು. ಆಗ ನಾನು ರಾಮುಲುಗೆ ಬುದ್ಧಿವಾದ ಹೇಳಿ, ಅಪರಾಧದಲ್ಲಿ ಶಾಮೀಲಾದರೆ ಬೆಳೆಯಲು ಸಾಧ್ಯವಿಲ್ಲ. ಅವರ ಮುಂದೆ ದೊಡ್ಡದಾಗಿ ಬೆಳಿ ಎಂದು ಹೇಳಿದೆ.

    ಪ್ರಾಣ ತೆಗೆಯುವ ಕೆಲಸ ಬೇಡ ಅಂತ ರಾಮುಲು ಅವರನ್ನು ಸನ್ಮಾರ್ಗದಲ್ಲಿ ಹೋಗುವಂತೆ ಮಾಡಿದೆ. ರಾಮುಲು ಮತ್ತವರ ತಂಡ ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ದರು. ಅದನ್ನು ತಡೆದು ಸನ್ಮಾರ್ಗದಲ್ಲಿ ಕರೆದುಕೊಂಡು ಬಂದಿದ್ದು ನಾನು.

    ನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದರು. 1999 ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿ ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ. ಆಗ ರಾಮುಲು ಬಿಎಸ್‌ ಯಡಿಯೂರಪ್ಪನವರ ಮುಂದೆ ಕಣ್ಣೀರು ಹಾಕಿದ್ದರು.ಆ ಚುನಾವಣೆಯಲ್ಲಿ ರಾಮುಲು ಸೋತರೂ ಬಿಜೆಪಿಯಲ್ಲಿ ಅವರು ಬೆಳೆದರು. ನಮ್ಮಿಬ್ಬರ ಸ್ನೇಹ ರಾಜಕೀಯ ಮೀರಿದ್ದು. ನಂತರ ಸಮ್ಮಿಶ್ರ ಸರ್ಕಾರ ಬಂದಾಗ ರಾಮುಲು ಅವರನ್ನು ನಾನು ಮಂತ್ರಿ ಮಾಡಿಸಿದ್ದೆ ಎಂದು ತಿಳಿಸಿದರು.