Tag: janardgan reddy

  • ಜನಾರ್ದನ ರೆಡ್ಡಿಯ ಪ್ರಾಣ ಸ್ನೇಹಿತನಾಗಿ ಅವ್ರಿಗೆ ಒಳ್ಳೆಯದಾಗ್ಲಿ ಅಂತ ಬಯಸುತ್ತೇನೆ: ಶ್ರೀರಾಮುಲು

    ಜನಾರ್ದನ ರೆಡ್ಡಿಯ ಪ್ರಾಣ ಸ್ನೇಹಿತನಾಗಿ ಅವ್ರಿಗೆ ಒಳ್ಳೆಯದಾಗ್ಲಿ ಅಂತ ಬಯಸುತ್ತೇನೆ: ಶ್ರೀರಾಮುಲು

    ಬೆಂಗಳೂರು: ಜನಾರ್ದನ ರೆಡ್ಡಿ (Janardhan Reddy) ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ರೆಡ್ಡಿ ಬುದ್ಧಿವಂತರು, ಅನುಭವಸ್ಥ ಇದ್ದಾರೆ. ಅವರ ಪ್ರಾಣ ಸ್ನೇಹಿತನಾಗಿ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದು ಸಚಿವ ಶ್ರೀರಾಮುಲು (Sriramulu) ಹೇಳಿದರು.

    ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕರು, ಸಿಎಂ ಜೊತೆ ಮಾತನಾಡಿದ್ದೆ. ಮತ್ತೆ ಅವಕಾಶ ಸಿಕ್ರೆ ಮಾತನಾಡುತ್ತೇನೆ. ಬೊಮ್ಮಾಯಿ (Basavaraj Bommai) ಮಂತ್ರಿ ಮಂಡಲದಲ್ಲಿ ಸಚಿವನಾಗಿದ್ದೇನೆ. ನಮ್ಮ ಉದ್ದೇಶ ಕಾಂಗ್ರೆಸ್ (Congress) ಮುಕ್ತ ಆಗಬೇಕು. 2023 ಕ್ಕೆ ಮತ್ತೆ ಬಿಜೆಪಿ (BJP) ಪಕ್ಷ ಆಡಳಿತಕ್ಕೆ ಬರಬೇಕು ಎಂದರು. ಇದನ್ನೂ ಓದಿ:  ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

    ನಮ್ಮದು ರಾಷ್ಟ್ರೀಯ ರಾಜಕೀಯ ಪಕ್ಷ. ನಾನು ಡಿಬೇಟ್ ಮಾಡಲ್ಲ. ಒಳ್ಳೆಯದು ಕೆಟ್ಟದ್ದರ ಬಗ್ಗೆ ನಾನು ಮಾತನಾಡಲ್ಲ. ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತೇವೆ. ಶ್ರೀರಾಮುಲುಗೆ ಧರ್ಮ ಸಂಕಟ ಅನ್ನೊದಕ್ಕಿಂತ ನಾಲ್ಕು ಬಾರಿ ಶಾಸಕ, ಸಂಸದ, ಸಚಿವನಾಗಿದ್ದೇನೆ. ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ

    Live Tv
    [brid partner=56869869 player=32851 video=960834 autoplay=true]