Tag: janaradhan reddy

  • ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ ಪಕ್ಷ – ಜನಾರ್ದನ ರೆಡ್ಡಿ

    ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ ಪಕ್ಷ – ಜನಾರ್ದನ ರೆಡ್ಡಿ

    ಕೊಪ್ಪಳ: ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ (Congress) ಪಕ್ಷ ಎಂದು ಶಾಸಕ ಜನಾರ್ದನ ರೆಡ್ಡಿ (Janardhana Reddy) ವಾಗ್ದಾಳಿ ನಡೆಸಿದರು.ಇದನ್ನೂ ಓದಿ: PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    ಜಿಲ್ಲೆಯ ಇರಕಲಗಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಜಾಹೀರಾತಿನ ವಿಚಾರವಾಗಿ ಮಾತನಾಡಿದರು. ನನಗೆ ತಾಯಿ ಆಶೀರ್ವಾದ ಇದ್ದಿದ್ದರಿಂದಲೇ ನವರಾತ್ರಿ ಮೊದಲ ದಿನ ಬಳ್ಳಾರಿಗೆ ಹೋಗಲು ಅವಕಾಶ ಸಿಕ್ಕಿದೆ. ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ ಪಕ್ಷ. ಆದರೆ ಈ ದೇಶದ ಜನರು ಮೋದಿ (PM Narendra Modi) ಅವರನ್ನು ಬೆಂಬಲಿಸಲಿಕ್ಕೆ ತಾಯಿ ಆಶೀರ್ವಾದವೇ ಕಾರಣ ಎಂದರು.

    ರಾಜ್ಯದಲ್ಲಿ ಒಂದು ವರ್ಷದಲ್ಲಿ ಅನೇಕ ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ (Valmiki Scam) ಹಣ ರಾಜಕೀಯಕ್ಕಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ರಾಜ್ಯದ ಜನರಿಗೆ, ವಾಲ್ಮೀಕಿ ಜನಾಂಗಕ್ಕೆ ಇವರೇ ದುಷ್ಟಶಕ್ತಿಯಾಗಿದ್ದಾರೆ. ಕಾಂಗ್ರೆಸ್ ನಾಯಕರು ಹತಾಸೆಯಾಗಿದ್ದಾರೆ. ಈಗಾಗಲೇ ಸಮುದ್ರದಲ್ಲಿ ಬಿದ್ದು, ಅಧಿಕಾರ ಉಳಿಸಿಕೊಳ್ಳಲು ಅನೇಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಇದನ್ನೂ ಓದಿ: 2013 ರಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿದ್ದ ರತನ್ ಟಾಟಾ

  • ಗಣಿಧಣಿ ಜನಾರ್ದನ ರೆಡ್ಡಿ ಮೇಲೆ ಕ್ರಿಮಿನಲ್ ಕೇಸ್..!

    ಗಣಿಧಣಿ ಜನಾರ್ದನ ರೆಡ್ಡಿ ಮೇಲೆ ಕ್ರಿಮಿನಲ್ ಕೇಸ್..!

    ಬೆಂಗಳೂರು: ಮಾಜಿ ಸಚಿವ, ಗಣಧಣಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

    2009-10 ರ ಆದಾಯ ತೆರಿಗೆ ವಂಚಿಸಿ ಸಾವಿರಾರು ಟನ್‍ಗಟ್ಟಲೇ ಅದಿರು ಸಾಗಿಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ನಿವಾಸ, ಕಚೇರಿ ಸೇರಿ ಐಟಿ ಇಲಾಖೆ ಹಲವೆಡೆ ದಾಳಿ ನಡೆಸಿತ್ತು. ಈ ಬಗ್ಗೆ ಕೆಲವೊಂದು ದಾಖಲಾತಿ, ಡಿಜಿಟಲ್ ಸಾಕ್ಷ್ಯ ಲಭ್ಯವಾಗಿತ್ತು. ಈ ಬಗ್ಗೆ, ಖಾಸಗಿ ದೂರು ದಾಖಲಾಗಿತ್ತು.

    ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ಎಸ್‍ಐಟಿ ತಂಡ, ತನಿಖೆ ವೇಳೆ ಬೇರೊಂದು ಕಂಪನಿಯಕ್ರಮವಾಗಿದೆ ಅಂತ ತಿಳಿಸಿತ್ತು. ಹೀಗಾಗಿ ಜನಾರ್ದನ ರೆಡ್ಡಿ ಸೇರಿದಂತೆ ಪ್ರಕರಣದಲ್ಲಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದೆ.  ಇದನ್ನೂ ಓದಿ: ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ತರಾಟೆ – ಬೆಸ್ಕಾಂ, ಜಲ ಮಂಡಳಿಗೂ ಹೈಕೋರ್ಟ್ ಚಾರ್ಜ್