Tag: janaganama film

  • ಪೂಜಾ ಹೆಗ್ಡೆಗೆ ಸ್ಪೆಷಲ್‌ ಆಗಿ ವೆಲ್‌ಕಮ್‌ ಮಾಡಿದ ‌ʻಜನ ಗಣ ಮನʼ ಚಿತ್ರತಂಡ

    ಪೂಜಾ ಹೆಗ್ಡೆಗೆ ಸ್ಪೆಷಲ್‌ ಆಗಿ ವೆಲ್‌ಕಮ್‌ ಮಾಡಿದ ‌ʻಜನ ಗಣ ಮನʼ ಚಿತ್ರತಂಡ

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಡ್ಯುಯೇಟ್ ಹಾಡಲು ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಸಜ್ಜಾಗಿದ್ದಾರೆ.. ಪೂಜಾ ಸೆಟ್ ಬರುತ್ತಿದ್ದಂತೆ ಸಖತ್ ಆಗಿ ವೆಲ್‌ಕಮ್ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

    ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಎರಡನೇ ಮೆಗಾ ಪ್ರಾಜೆಕ್ಟ್ `ಜನ ಗಣ ಮನ’ ಚಿತ್ರಕ್ಕೆ ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಈಗಾಗಲೇ ಶೂಟಿಂಗ್ ಸಕಲ ತಯಾರಿ ನಡೆದಿದ್ದು, ಪೂಜಾ ಹೆಗ್ಡೆ ಸೆಟ್‌ಗೆ ಕಾಲಿಡುತ್ತಿದ್ದಂತೆ ನಿರ್ಮಾಪಕಿ ಚಾರ್ಮಿ ಕೌರ್ ಸ್ಪೆಷಲ್ ಆಗಿ ವೆಲ್‌ಕಮ್ ಮಾಡಿದ್ದಾರೆ. ಇದನ್ನೂ ಓದಿ: Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

     

    View this post on Instagram

     

    A post shared by Pooja Hegde (@hegdepooja)

    `ಜನ ಗಣ ಮನ’ ಚಿತ್ರಕ್ಕೆ ಪೂಜಾ ಸಾಥ್ ನೀಡಿದ್ದು, ವಿಜಯ್ ಸದ್ಯ ಸಮಂತಾ ಜತೆಗಿನ `ಖುಷಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲಿ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ಇದೊಂದು ಆಕ್ಷನ್ ಕಥೆಯಾಗಿದ್ದು, ಈ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ.

    vijaydevarakonda

    ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಳ್ತಿರೋ ವಿಜಯ್ ಮತ್ತು ಪೂಜಾ ಹೆಗ್ಗೆ ಅವರ ಜೋಡಿ ಬೆಳ್ಳಿತೆರೆಯಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂದು ಕಾದುನೋಡಬೇಕಿದೆ.