Tag: jana swaraj yatra

  • ಮಹಾತ್ಮ ಗಾಂಧಿ ಹೆಸರಿನಲ್ಲಿ ಈ ದೇಶದ ಜನರಿಗೆ ಕಾಂಗ್ರೆಸ್ ಟೋಪಿ ಹಾಕಿದೆ: ಕಟೀಲ್

    ಮಹಾತ್ಮ ಗಾಂಧಿ ಹೆಸರಿನಲ್ಲಿ ಈ ದೇಶದ ಜನರಿಗೆ ಕಾಂಗ್ರೆಸ್ ಟೋಪಿ ಹಾಕಿದೆ: ಕಟೀಲ್

    ಬೀದರ್: ಮಹಾತ್ಮ ಗಾಂಧಿ ಹೆಸರಿನಲ್ಲಿ ಈ ದೇಶದ ಜನರಿಗೆ ಕಾಂಗ್ರೆಸ್ ಟೋಪಿ ಹಾಕಿ ಮೋಸ, ವಂಚನೆ ಮಾಡಿದೆ. ಎಂದು ಬೀದರ್‌ನಲ್ಲಿ ನಡೆದ ಜನ ಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರು ದೇಶದ ಜನರನ್ನು ಬಡವರನ್ನಾಗಿಸಿದ್ದಾರೆ. ಗ್ರಾಮ ಸ್ವರಾಜ್ ಕಲ್ಪನೆಗೆ ಕಾಂಗ್ರೆಸ್ ಶಕ್ತಿ ತುಂಬಿಲ್ಲ, ಶಕ್ತಿ ತುಂಬಿದ್ದು ಪ್ರಧಾನಿ ಮೋದಿ. ಕಾಂಗ್ರೆಸ್ ಆಡಳಿತದಲ್ಲಿ ಈ ರಾಷ್ಟ್ರವನ್ನು ಜನರು ಭಿಕ್ಷೆ ಬೇಡುವ ರಾಷ್ಟ್ರ ಎಂದು ಕರೆದಿದ್ದರು ಯಾಕೆಂದ್ರೆ ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ನಿರುದ್ಯೋಗ ಎಂದು ಕಿಡಿಕಾರಿದರು. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

    ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‍ವರೆಗೆ ಕಳಂಕಿತರಾಗಿ ಜೈಲಿಗೆ ಹೋದವರೆ. ಲಾಲ್ ಬಹದ್ದೂರ್ ಶಾಸ್ತ್ರಿಯೊಬ್ಬರೆ ಕಳಂಕ ರಹಿತ ಪ್ರಧಾನಿ. ಕಾಂಗ್ರೆಸ್‍ನಿಂದ ಗರೀಬಿ ಹಠಾವೋ ಎಂಬ ಘೋಷಣೆ ಜೋರಾಗಿತ್ತು ಆದರೆ ಗರೀಬಿ ಹಠಾವೋ ಆಗಿದ್ದು ಈಶ್ವರ್ ಖಂಡ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಮನೆಯ ಬಡತನದ ನಿರ್ಮೂಲನೆಯಾಗಿದೆ ಆದರೆ ಬಡವರದ್ದು ಗರೀಬಿ ಹಠಾವೋ ಮಾತ್ರ ಆಗಲಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ

  • ಮುಂಬರುವ ಚುನಾವಣೆಗೆ ಪಕ್ಷ ಬಲಪಡಿಸುವುದಕ್ಕೆ ಜನ ಸ್ವರಾಜ್ ಯಾತ್ರೆ: ಬಿ.ಸಿ ಪಾಟೀಲ್

    ಮುಂಬರುವ ಚುನಾವಣೆಗೆ ಪಕ್ಷ ಬಲಪಡಿಸುವುದಕ್ಕೆ ಜನ ಸ್ವರಾಜ್ ಯಾತ್ರೆ: ಬಿ.ಸಿ ಪಾಟೀಲ್

    – ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಿದ್ದರೆ, ರಾಜ್ಯವನ್ನೇ ಮಾರಿಬಿಡುತ್ತಿದ್ದರು

    ಗದಗ: ಮುಂಬರುವ ಚುನಾವಣೆಗಾಗಿ, ಪಕ್ಷ ಬಲಪಡಿವುದಕ್ಕೆ ಜನ ಸ್ವರಾಜ್ ಯಾತ್ರೆಯಾಗಿದೆ. ಜನ ಸ್ವರಾಜ್ ಯಾತ್ರೆ ಬಗ್ಗೆ ಕಾಂಗ್ರೆಸ್ ಟೀಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

    ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷದಲ್ಲಿ ಕೋವಿಡ್ ನಿಯಂತ್ರಣ ಮಾಡಿದ್ದೇ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಜೊತೆಗೆ ರಾಜ್ಯದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಕಾಂಗ್ರೆಸ್‍ನವರಿಗೆ ಕೇಳಿ ಬಿಜೆಪಿ ಜನ ಸ್ವರಾಜ್ ಕಾರ್ಯಕ್ರಮದ ಮಾಡಬೇಕಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಜಾಥಾ, ಅಭಿಮಾನ ನಡೆಸುವುದು ಸಾಮಾನ್ಯವಾಗಿದೆ. ಆ ಮೂಲಕ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಿದ್ದರೆ, ರಾಜ್ಯವನ್ನೇ ಮಾರಿಬಿಡುತ್ತಿದ್ದರು. ಇಲ್ಲವೇ ಹಾದಿ ಬೀದಿಯಲ್ಲೇ ಸಾಲು ಸಾಲು ಹೆಣಗಳು ಬೀಳುತ್ತಿದ್ದವು. ಈ ಹಿಂದೆ 18 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಕೊಡುಗೆ ಏನು ಎಂದು ಕುಟುಕಿದರು. ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಮತ ಪೆಟ್ಟಿಗೆ ಮೂಲಕ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

    ರಮೇಶ್ ಜಾರಕಿಹೋಳಿಗೆ ಸಚಿವ ಸ್ಥಾನ ಕುರಿತು ಮಾತನಾಡಿದ್ದು, ಯಾರದ್ದೋ ಕುತಂತ್ರದಲ್ಲಿ ಸಿಲುಕಿದ್ದ ರಮೇಶ್ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ದಿನಗಳು ಬರುತ್ತವೆ ಎಂದರು.

    ಮೇಕೆದಾಟು ಯೋಜನೆ ಕೋರ್ಟ್‍ನಲ್ಲಿದ್ದು, ಅಲ್ಲಿ ಕ್ಲಿಯರೆನ್ಸ್ ದೊರಕುತ್ತಿದ್ದಂತೆ ನಾವೇ ಮಾಡುತ್ತೇವೆ. ಈ ಬಗ್ಗೆ ಕಾಂಗ್ರೆಸನವರಿಂದ ಹೇಳಿಸಿಕೊಳ್ಳಬೇಕಿಲ್ಲ. ತಮ್ಮದೇ ಯೋಜನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ತಮ್ಮ ಅಧಿಕಾರದಲ್ಲಿ ಏಕೆ ಮಾಡಲಿಲ್ಲ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಸಂಸದ ಪಿ.ಸಿ.ಗದ್ದಿಗೌಡರ ಮತ್ತಿತರರು ಇದ್ದರು.