Tag: Jana Nayagan

  • ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?

    ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?

    ವಿಜಯ್ (Vijay) ಈಗ ರಾಜಕೀಯ ಭಾಷಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನವಾಣೆಯನ್ನು (Tamil Nadu Election) ಗುರಿಯಾಗಿಸಿಕೊಂಡಿರುವ ವಿಜಯ್ ರಾಜ್ಯದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಜನ ಸಂಘಟನೆ ಗುರಿಯಾಗಿಸಿಕೊಂಡಿರುವ ವಿಜಯ್‌ಗೆ ಈಗ ಸಿನಿಮಾ ಬಗ್ಗೆ ಯೋಚನೆ ಇಲ್ಲ. ಆದರೆ ದೀಪಾವಳಿಗೆ (Deepavali) ಅಭಿಮಾನಿಗಳಿಗೆ ʼಗಿಫ್ಟ್‌ʼ ನೀಡಲಿದ್ದಾರೆ.

    ಮುಂದಿನ ವರ್ಷಾರಂಭದಲ್ಲೇ ವಿಜಯ್ ಜನನಾಯಕನ್ (Jana Nayagan) ಚಿತ್ರದ ಮೂಲಕ ಚಿತ್ರಮಂದಿರಗಳನ್ನು ಅಲಂಕರಿಸಲಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ಏರ್ಪಡಿಸೋದಕ್ಕೆ ಯೋಜನೆಯೂ ಆಗಿದೆ. ಅದಕ್ಕೂ ಮುನ್ನ ವಿಜಯ್ ಕಡೆಯಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್, ಸರ್ಪ್ರೈಸ್‌ ಆಗಿ ಪ್ಲ್ಯಾನ್‌ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ. ಇದನ್ನೂ ಓದಿ:  ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌

     

    ಟಿವಿಕೆ ಹೆಸರಲ್ಲಿ ಹೊಸ ಪಕ್ಷ ಕಟ್ಟಿರುವ ವಿಜಯ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ವೇಳೆಯೇ ಸಿನಿಮಾ ಅಭಿಮಾನಿಗಳನ್ನು ಬ್ಯಾಲೆನ್ಸ್ ಮಾಡಲು ವಿಜಯ್ ಇದೇ ದೀಪಾವಳಿಗೆ ಮುಂಬರುವ `ಜನನಾಯಕನ್’ ಚಿತ್ರದ ಮೊದಲ ಹಾಡನ್ನ ರಿಲೀಸ್ ಮಾಡಲಿದ್ದಾರೆ. ವಿಶೇಷ ಅಂದ್ರೆ ಇದು ವಿಜಯ್ ಧ್ವನಿಯಲ್ಲೇ ಮೂಡಿ ಬಂದಿದೆ. ಇದನ್ನೂ ಓದಿ:  ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್‌ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ

    ಮಾಸ್ ಪ್ರೇಕ್ಷಕರ ಮಹಾನಟ ವಿಜಯ್ ಫ್ಯಾನ್ಸ್‌ಗಾಗಿ ಈ ಟ್ರೀಟ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಈ ವಿಚಾರವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಮಾಣ ಸಂಸ್ಥೆ ಕಡೆಯಿಂದ ಅಧಿಕೃತವಾಗಿ ಪ್ರಕಟವಾಗಲಿದೆ.

  • ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

    ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ

    ವಿಜಯ್ ದಳಪತಿ (Vijay Thalapathy) ಅಭಿನಯದ `ಜನ ನಾಯಗನ್’ (Jana Nayagan) ಸಿನಿಮಾ 2026ರ ಜನವರಿ 9ಕ್ಕೆ ತೆರೆಕಾಣಲಿದೆ. ಈಗಾಗಲೇ ಚಿತ್ರತಂಡ ಈ ಬಗ್ಗೆ ಅನೌನ್ಸ್ ಕೂಡಾ ಮಾಡಿದೆ. ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಎನ್ನುವ ಕಾರಣದಿಂದ ಈ ಸಿನಿಮಾ ಮೇಲೆ ಸಹಜವಾಗಿಯೇ ಬೆಟ್ಟದಷ್ಟು ನಿರೀಕ್ಷೆಗಳು ದಳಪತಿ ಅಭಿಮಾನಿಗಳಲ್ಲಿದೆ. ಇದರ ನಡುವೆ ಶಿವಕಾರ್ತಿಕೇಯನ್ (Sivakarthikeyan) ನಟನೆಯ `ಪರಾಶಕ್ತಿ’ (Parasakthi) ಸಿನಿಮಾ ಕೂಡಾ ತೆರೆಗೆ ಬರಲು ಪೊಂಗಲ್ (ಸಂಕ್ರಾಂತಿ)ಗೆ ಡೇಟ್ ಗುರುತು ಮಾಡಿಕೊಂಡಿದೆಯಂತೆ.

    ಎರಡೂ ಸಿನಿಮಾಗಳು ತೆರೆಗೆ ಬರುವ ಬಗ್ಗೆ ಪರಾಶಕ್ತಿ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರಾ ಮೌನ ಮುರಿದಿದ್ದಾರೆ. `ಪರಾಶಕ್ತಿ’ ಸಿನಿಮಾ ಶೂಟಿಂಗ್ ಮಾಡುತ್ತಿದೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎನ್ನುವ ಬಗ್ಗೆ ನಿರ್ಮಾಪಕರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಆದ್ರೆ ಈ ಹಿಂದೆ ಪರಾಶಕ್ತಿ ಹಾಗೂ ಜನ ನಾಯಗನ್ ಸಿನಿಮಾಗಳು ಒಂದೇ ವೇಳೆಗೆ ರಿಲೀಸ್ ಆಗುತ್ತವೆ. ಎರಡೂ ಸಿನಿಮಾಗಳ ನಡುವೆ ಡೇಟ್ ಕ್ಲ್ಯಾಶ್ ಆಗುತ್ತೆ ಎಂದು ಸುದ್ದಿ ಹರಿದಾಡಿದ್ದಿದೆ ಎಂದಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ

    ಸದ್ಯ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಪರಾಶಕ್ತಿ ಚಿತ್ರತಂಡ ಹಾಗೂ ಜನ ನಾಯಗನ್ ಚಿತ್ರತಂಡ. ವಿಜಯ್ ದಳಪತಿ ಅಭಿಮಾನಿಗಳಂತು ಈ ಬಾರಿಯ ಪೊಂಗಲ್‌ನ್ನ ಅದ್ದೂರಿಯಾಗಿ `ಜನ ನಾಯಗನ್’ ಚಿತ್ರದ ಜೊತೆ ಸೆಲಬ್ರೆಟ್ ಮಾಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಇತ್ತ ಶಿವಕಾರ್ತಿಕೇಯನ್ ಚಿತ್ರದ ನಿರ್ಮಾಪಕರು ಕೂಡಾ ಪೊಂಗಲ್ ಹಬ್ಬದ ಸಂಭ್ರಮಕ್ಕೆ ಚಿತ್ರ ರಿಲೀಸ್ ಮಾಡುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಫೈನಲ್‌ನಲ್ಲಿ ಈ ಎರಡೂ ಸಿನಿಮಾಗಳು ರಿಲೀಸ್ ಆಗುತ್ತಾ? ಅಥವಾ ವಿಜಯ್ ದಳಪತಿ ಸಿನಿಮಾ ಮಾತ್ರ ಪೊಂಗಲ್‌ಗೆ ರಿಲೀಸ್ ಆಗುತ್ತಾ ಎಂದು ಕಾದು ನೋಡಬೇಕಿದೆ.

  • ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ವಿಜಯ್ ದಳಪತಿ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್

    ಕಾಲಿವುಡ್‌ನ ನಟ ವಿಜಯ್ ದಳಪತಿಗೆ (Vijay Thalapathy) ಇಂದು (ಜೂನ್-22) ಹುಟ್ಟುಹಬ್ಬದ ಸಂಭ್ರಮ. 51ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ದಳಪತಿ ತಮ್ಮ ಕೊನೆಯ ಸಿನಿಮಾ ʻಜನ ನಾಯಗನ್ʼ ಫಸ್ಟ್ ಲುಕ್ ಟೀಸರ್ (Jana Nayagan Teaser) ರಿಲೀಸ್ ಆಗಿದೆ. ವಿಜಯ್ ದಳಪತಿ ಖಾಕಿ ತೊಟ್ಟು ಕೊಡುವ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ವಿಜಯ್ ದಳಪತಿ ಜನ ನಾಯಗನ್ ಸಿನಿಮಾ ಮೂಲಕ ತಮ್ಮ ಸಿನಿಮಾ ಕೆರಿಯರ್‌ಗೆ ಬ್ರೇಕ್ ತೆಗೆದುಕೊಳ್ತಿದ್ದಾರೆ. ನಂತರ ರಾಜಕೀಯದಲ್ಲೇ ತಮ್ಮನ್ನ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. 2026ರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಮೂಲಕ ಜನಸೇವೆಗೆ ಇಳಿಯಲು ಸಕಲ ಸಿದ್ಧತೆಯ ಜೊತೆಗೆ ಕೊನೆಯ ಸಿನಿಮಾ ಮೇಲೂ ಗಮನಹರಿಸಿದ್ದಾರೆ.

    ಜನ ನಾಯಗನ್ ಸಿನಿಮಾಗೆ ಎಚ್.ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ದಳಪತಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆರೆಹಂಚಿಕೊಂಡಿದ್ದಾರೆ. ಅನಿರುದ್ಧ್ ಮ್ಯೂಸಿಕಲ್ ಮ್ಯಾಜಿಕ್ ಈ ಚಿತ್ರಕ್ಕಿರಲಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು, ಪ್ರಕಾಶ್ ರಾಜ್ ಮುಂತಾದವ್ರು ಚಿತ್ರದ ತಾರಾಗಣದಲ್ಲಿದ್ದಾರೆ.

    ವಿಜಯ್ ದಳಪತಿ ನಟನೆಯ 69ನೇ ಸಿನಿಮಾ ಇದಾಗಿದ್ದು, ಜನ ನಾಯಗನ್ ಸಿನಿಮಾ 2026ರ ಜನವರಿ 09 ರಂದು ತೆರೆಗೆ ಬರಲಿದೆ. ಬರುವ ವರ್ಷ ಸಂಕ್ರಾಂತಿ ವಿಜಯ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸೃಷ್ಟಿಸಲಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಒಟ್ಟಿನಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದ್ದಾರೆ ವಿಜಯ್.