Tag: Jan Suraj Abhiyan

  • ನಾನು ನಿತೀಶ್ ಕುಮಾರ್‌ಗೆ ಬೆಂಬಲ ನೀಡುತ್ತೇನೆ: ಪ್ರಶಾಂತ್ ಕಿಶೋರ್

    ನಾನು ನಿತೀಶ್ ಕುಮಾರ್‌ಗೆ ಬೆಂಬಲ ನೀಡುತ್ತೇನೆ: ಪ್ರಶಾಂತ್ ಕಿಶೋರ್

    ಪಾಟ್ನಾ: ಬಿಹಾರದ ಮಹಾ ಘಟಬಂಧನ್ ಸರ್ಕಾರವು ಮುಂದಿನ ಒಂದೆರಡು ವರ್ಷಗಳಲ್ಲೇ 5 ರಿಂದ 10 ಲಕ್ಷ ಉದ್ಯೋಗ ಕಲ್ಪಿಸಿದರೆ ನಾನು ನನ್ನ `ಜನ್ ಸೂರಜ್’ ಅಭಿಯಾನವನ್ನು ಹಿಂತೆಗೆದುಕೊಳ್ಳುತ್ತೇನೆ. ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಬೆಂಬಲ ನೀಡುತ್ತೇನೆ ಎಂದು ರಾಯಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

    ಈ ಕುರಿತು ಬಿಹಾರದ ಸಮಸ್ತಿಪುರದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಉಪಮುಖ್ಯಮಂತ್ರಿಯಾಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಇತ್ತೀಚೆಗೆ ತಮ್ಮ ಪಕ್ಷವು ಹೊಸ ಸರ್ಕಾರದ ಭಾಗವಾಗಿದೆ. ಅದರಿಂದ 2020ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದೆ ಎಂದು ಹೇಳಿದ್ದರು. ಒಂದು ವೇಳೆ ಮುಂದಿನ ಒಂದೆರಡು ವರ್ಷಗಳಲ್ಲಿ 5 ರಿಂದ 10 ಲಕ್ಷ ಉದ್ಯೋಗ ಕಲ್ಪಿಸಿದರೆ ನಾನು `ಜನ್ ಸೂರಜ್’ ಅಭಿಯಾನ ಹಿಂತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಹಾರ ಸುಧಾರಣೆಗೆ 3,000 ಕಿ.ಮೀ. ಪಾದಯಾತ್ರೆ: ಪ್ರಶಾಂತ್‌ ಕಿಶೋರ್‌ ಘೋಷಣೆ

    ನಿತೀಶ್ ಕುಮಾರ್ ಸಿಎಂ ಹುದ್ದೆಗೆ ಫೆವಿಕಲ್ ಹಾಕಿ ಅಂಟಿಕೊಂಡಿದ್ದಾರೆ. ಅವರಿಗೆ ಆಪ್ತರಾದವರು ನಿತೀಶ್ ಸುತ್ತಲೇ ತಿರಗುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್

    ಇದೇ ವೇಳೆ ನಾನು ಬಿಹಾರದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಕೇವಲ ಮೂರು ತಿಂಗಳಾಗಿದೆ. ಇಲ್ಲಿ ರಾಜಕೀಯವು ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯದ ರಾಜಕೀಯದಲ್ಲಿ ಇನ್ನಷ್ಟು ಘರ್ಷಣೆಗೆ ಕಾರಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]