Tag: Jamshedpur

  • ಜಾರ್ಖಂಡ್‌ನ ಹಲವೆಡೆ ಭೂಮಿ ಕಂಪನ – ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

    ಜಾರ್ಖಂಡ್‌ನ ಹಲವೆಡೆ ಭೂಮಿ ಕಂಪನ – ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

    ರಾಂಚಿ: ಜಾರ್ಖಂಡ್‌ನ (Jharkhand) ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹಿರಿಯ ಹವಾಮಾನ ತಜ್ಞ ಉಪೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.

    ರಾಂಚಿಯಿಂದ (Ranchi) ಸುಮಾರು 35 ಕಿಮೀ ದೂರದಲ್ಲಿರುವ ಖುಂತಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅದರ ಆಳವು ಐದು ಕಿ.ಮೀಗಳಷ್ಟಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ವರದಿ ತಿಳಿಸಿದೆ. ಇದನ್ನೂ ಓದಿ: ಒಂದು ಚುನಾವಣೆಗೆ ಸಲಹೆ ನೀಡಲು 100 ಕೋಟಿ ಪಡೆಯುತ್ತೇನೆ: ಪ್ರಶಾಂತ್‌ ಕಿಶೋರ್‌

    ಸೆರೈಕೆಲಾ-ಖರ್ಸ್ವಾನ್ ಜಿಲ್ಲೆಯ ಜಮ್‌ಶೆಡ್‌ಪುರ ಮತ್ತು ಕಂದ್ರದಲ್ಲೂ ಕಂಪನದ ಅನುಭವವಾಗಿದೆ. ಆದರೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಲೆಮರೆಸಿಕೊಳ್ಳಲು 8 ಮೊಬೈಲ್‌, 20 ಸಿಮ್‌, 6 ನಕಲಿ ಹೆಸರು – ಆರೋಪಿಯನ್ನು 1,600 ಕಿ.ಮೀ ಬೆನ್ನಟ್ಟಿ ಹಿಡಿದ ಪೊಲೀಸರು!

  • ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ

    ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ

    – ಸೆಕ್ಷನ್ 144 ಜಾರಿ, ಇಂಟರ್‌ನೆಟ್ ಸ್ಥಗಿತ

    ರಾಂಚಿ: ಜಾರ್ಖಂಡ್‌ನ (Jharkhand) ಜಮ್ಶೆಡ್‌ಪುರದಲ್ಲಿ (Jamshedpur) ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಎರಡು ಗುಂಪುಗಳ ನಡುವೆ ಭಾರೀ ಘರ್ಷಣೆ ಉಂಟಾಗಿದೆ. ಕಲ್ಲುತೂರಾಟ ಹಾಗೂ ವಾಹನ, ಅಂಗಡಿಗಳಿಗೆ ಬೆಂಕಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಾಸ್ತ್ರೀನಗರದಲ್ಲಿ (Shastrinagar) ಹಿಂಸಾಚಾರ (Violence) ನಡೆದಿದ್ದು, ಪರಿಸ್ಥಿತಿಯನ್ನು ತಣ್ಣಗಾಗಿಸಲು ಪ್ರದೇಶದಲ್ಲಿ ಸೆಕ್ಷನ್ 144 ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಾತ್ರವಲ್ಲದೇ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮದ ವೇಳೆ ಧರೆಗುರುಳಿದ ಮರ 7 ಸಾವು, ಐವರಿಗೆ ಗಾಯ

    ಮೂಲಗಳ ಪ್ರಕಾರ ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡನ್ನು ಕಟ್ಟಿದ್ದನ್ನು ಸ್ಥಳೀಯ ಸಂಘಟನೆಯ ಸದಸ್ಯರು ನೋಡಿದ್ದಾರೆ. ಬಳಿಕ ಶನಿವಾರ ರಾತ್ರಿ ವೇಳೆ ಈ ವಿಚಾರವಾಗಿ 2 ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಬಳಿಕ ಪರಸ್ಪರ ಇಟ್ಟಿಗೆಗಳಿಂದ ದಾಳಿ ನಡೆಸಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ ಎನ್ನಲಾಗಿದೆ.

    ಹಿಂಸಾಚಾರ ಮುಂದುವರಿದು ಭಾನುವಾರ ಶಾಸ್ತ್ರೀನಗರದಲ್ಲಿ 2 ಅಂಗಡಿಗಳಿಗೆ ಮತ್ತು ಆಟೋ ರಿಕ್ಷಾಗೆ ಬೆಂಕಿ ಹಚ್ಚಲಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಪ್ರಯೋಗಿಸಿದ್ದಾರೆ. ಬಳಿಕ ನಗರದಲ್ಲಿ ಸೆಕ್ಷನ್ 144ನ್ನು ವಿಧಿಸಲಾಗಿದ್ದು, ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಶಾಸ್ತ್ರಿನಗರದಲ್ಲಿ ಸಾಕಷ್ಟು ಪೊಲೀಸ್ ಪಡೆ ನಿಯೋಜಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

  • ಟಾಟಾ ಉಕ್ಕು ಘಟಕದಲ್ಲಿ ಭಾರೀ ಸ್ಫೋಟ

    ಟಾಟಾ ಉಕ್ಕು ಘಟಕದಲ್ಲಿ ಭಾರೀ ಸ್ಫೋಟ

    ರಾಂಚಿ: ಜೆಮ್‌ಶೆಡ್‌ಪುರದಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ.

    ಯಾವುದೇ ಅನಾಹುತವಾಗಿಲ್ಲ. ಹಲವಾರು ಅಗ್ನಿಶಾಮಕ ವಾಹನಗಳು ತೆರಳಿ ಬೆಂಕಿಯನ್ನು ನಂದಿಸಿವೆ ಎಂದು ವರದಿಯಾಗಿದೆ.

    ಜೆಮ್‌ಶೆಡ್‌ಪುರದ ಟಾಟಾ ಉಕ್ಕು ಕಾರ್ಖಾನೆಯ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಜಿಲ್ಲಾಡಳಿತ ಟಾಟಾ ಉಕ್ಕು ಘಟಕದ ಆಡಳಿತದ ಜತೆಗೂಡಿ ತೆರವು ಕಾರ್ಯಾಚರಣೆ ಮತ್ತು ಗಾಯಾಳುಗಳ ಚಿಕಿತ್ಸೆಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸರೇ ಕಳ್ಳರು, ಇನ್ನು ಕಳ್ಳತನ ಹೇಗೆ ತಪ್ಪಿಸುತ್ತಾರೆ: ಸಿದ್ದರಾಮಯ್ಯ 

    ಬ್ಯಾಟರಿ ಸ್ಫೋಟದಿಂದಾಗಿ ಘಟಕದಲ್ಲಿ ಬೆಳಿಗ್ಗೆ 10:20ರ ವೇಳೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

  • 3 ವರ್ಷದ ಬಾಲಕಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ – ಶಿರಚ್ಛೇದ ಮಾಡಿ ಕೊಲೆ

    3 ವರ್ಷದ ಬಾಲಕಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ – ಶಿರಚ್ಛೇದ ಮಾಡಿ ಕೊಲೆ

    ಜಮ್‍ಶೆಡ್‍ಪುರ: ಮೂರು ವರ್ಷದ ಬಾಲಕಿಯನ್ನ ಅಪಹರಿಸಿ, ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ಬಳಿಕ ಶಿರಚ್ಛೇದ ಗೈದು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಜಮ್‍ಶೆಡ್‍ಪುರದಲ್ಲಿ ನಡೆದಿದೆ.

    ಜಾರ್ಖಂಡ್‍ನ ಜಮ್‍ಶೆಡ್‍ಪುರ ರೈಲ್ವೆ ನಿಲ್ದಾಣದ ಬಳಿ ಜುಲೈ 25ರ ಗುರುವಾರ ರಾತ್ರಿ ಘಟನೆ ನಡೆದಿದೆ. ಬಾಲಕಿ ಫೋಷಕರೊಂದಿಗೆ ಮಲಗಿದ್ದ ಸಮಯದಲ್ಲಿ ದುಷ್ಕರ್ಮಿಗಳು ಕಳೆದ ಆಕೆಯನ್ನು ಅಪಹರಣ ಮಾಡಿದ್ದರು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಶಾಕ್ ಉಂಟು ಮಾಡಿತ್ತು. ಪೋಷಕರ ಮಗ್ಗುಲಲ್ಲೇ ಮಲಗಿದ್ದ ಬಾಲಕಿಯ ಅಪಹರಣ ದೃಶ್ಯ ರೈಲ್ವೆ ನಿಲ್ದಾಣದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಪ್ರಕರಣದಲ್ಲಿ ರಿಂಕು ಸಾಹು ಎಂಬಾತನನ್ನು ಜುಲೈ 27ರ ಶನಿವಾರ ಬಂಧಿಸಲಾಗಿದ್ದು, ಈತ 2015 ರಲ್ಲಿ ಬಾಲಕಿಯ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿ ರಿಂಕು ಆತನ ಸ್ನೇಹಿತ ಕೈಲಾಶ್‍ನೊಂದಿಗೆ ಸೇರಿ ಬರ್ಬರ ಕೃತ್ಯ ನಡೆಸಿದ್ದಾನೆ. ಪೊಲೀಸರ ಎದುರು ಆರೋಪಿಗಳು ನೀಡಿರುವ ಹೇಳಿಕೆಯ ಅನ್ವಯ, ಬಾಲಕಿಯ ದೇಹವನ್ನು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿ ಕಾಲುವೆಗೆ ಎಸೆದಿದ್ದಾರೆ. ಪೊಲೀಸರು ಮಗುವಿನ ಮುಂಡವನ್ನು ಪತ್ತೆ ಮಾಡಿದ್ದು, ಮೃತ ದೇಹದಿಂದ ಕಾಣೆಯಾಗಿದ್ದ ತಲೆಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ರೈಲ್ವೇ ನಿಲ್ದಾಣದ 4 ಕಿಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಹೆಚ್ಚಿನ ಮಳೆ ಆಗುತ್ತಿರುವುದು ಕಾರ್ಯಾಚರಣೆಗೆ ತಡವಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.

    ಇಬ್ಬರು 30 ವರ್ಷದ ವಯಸ್ಸಿನ ಆರೋಪಿಗಳನ್ನು ಸೈಕೋ ಕಿಲ್ಲರ್‍ಗಳು ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ನಗರದ ರೈಲ್ವೆ ನಿಲ್ದಾಣದಿಂದ ಬಾಲಕಿ ಕಾಣೆಯಾಗಿದ್ದಳು. ಈ ಬಗ್ಗೆ ಬಾಲಕಿಯ ತಾಯಿಯಿಂದ ದೂರು ಪಡೆದ ಪೊಲೀಸರಿಗೆ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಯ ಚಹರೆ ಪತ್ತೆಯಾಗಿತ್ತು. ಟಿ ಶರ್ಟ್ ಮತ್ತು ಶಾಟ್ರ್ಸ್ ಧರಿಸಿದ್ದ ಆರೋಪಿ ರಿಂಕು ಮಗುವನ್ನು ತೆಗೆದುಕೊಂಡು ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಲಕಿಯ ಕಿಡ್ನಾಪ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಂದಹಾಗೇ ಆರೋಪಿ ರಿಂಕು ಸಾಹು ಅವರ ತಾಯಿ ಪೊಲೀಸ್ ಪೇದೆಯಾಗಿದ್ದಾರೆ. ಅವರು ರಿಂಕು ಜೈಲಿನಿಂದ ಬಿಡುಗಡೆಯಾಗಲು ಸಹಾಯ ಮಾಡಿದ್ದರು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಆರೋಪಿ ರಿಂಕು ಕೂಡ 3 ಮಕ್ಕಳ ತಂದೆಯಾಗಿದ್ದು, ಈ ಹಿಂದೆ ಹಲವು ಮಕ್ಕಳನ್ನು ಕಿಡ್ನಾಪ್ ಮಾಡಿ ಕಿರುಕುಳ ನೀಡಿದ ಆರೋಪವಿದೆ. ಆತನ ಸ್ನೇಹಿತ ಕೈಲಾಶ್ ತಂದೆ ಕೂಡ ಯೋಧರಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ನಕಲಿ ಅಧಿಕಾರಿಗೆ ನಡು ರಸ್ತೆಯಲ್ಲೇ ಮಹಿಳೆಯಿಂದ ಗೂಸಾ -ವಿಡಿಯೋ ನೋಡಿ

    ನಕಲಿ ಅಧಿಕಾರಿಗೆ ನಡು ರಸ್ತೆಯಲ್ಲೇ ಮಹಿಳೆಯಿಂದ ಗೂಸಾ -ವಿಡಿಯೋ ನೋಡಿ

    ರಾಂಚಿ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯಂತೆ ಬಂದು, 50 ಸಾವಿರ ರೂ. ಬೇಡಿಕೆ ಇಟ್ಟಿದ್ದ ನಕಲಿ ಅಧಿಕಾರಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಜಮ್ಶೆಡ್‍ಪುರ್ ಮ್ಯಾಗೋ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಪೊಲೀಸರ ಎದುರೇ ಮಹಿಳೆ ನಕಲಿ ಅಧಿಕಾರಿಯ ಶರ್ಟ್ ಹಿಡಿದು ಗೂಸಾ ಕೊಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    50 ಸಾವಿರ ರೂ. ನೀಡುವಂತೆ ಕೇಳಿದ್ದ ನಕಲಿ ಅಧಿಕಾರಿಗೆ ಹಣ ನೀಡುತ್ತೇನೆ ಇಂದು ಬಾ ಎಂದು ಹೇಳಿದ್ದಳು. ಇತ್ತ ಪೊಲೀಸರಿಗೂ ಮಹಿಳೆ ದೂರು ನೀಡಿದ್ದಳು. ನಕಲಿ ಅಧಿಕಾರಿ ಹಣ ಪಡೆಯಲು ಬಂದ ತಕ್ಷಣ ಆತನನ್ನು ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿಯೇ ಥಳಿಸಿದ್ದಾನೆ. ಬಳಿಕ ಮಹಿಳೆ, ನನ್ನ ಜೀವನ್ನೇ ಹಾಳು ಮಾಡಲು ಬಂದಿದ್ಯಾ ಎಂದು ಹೇಳುತ್ತ ಚಪ್ಪಲಿ ಹಿಡಿದು ಹೊಡೆದಿದ್ದಾಳೆ.

    ಈ ವೇಳೆ ಸ್ಥಳದಲ್ಲಿಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ.

  • ಅಮ್ಮನ ಜೊತೆ ಜಗಳವಾಡಬೇಡಿ ಎಂದಿದ್ದಕ್ಕೆ 12 ವರ್ಷದ ಮಗನನ್ನೇ ಕೊಂದ ತಂದೆ!

    ಅಮ್ಮನ ಜೊತೆ ಜಗಳವಾಡಬೇಡಿ ಎಂದಿದ್ದಕ್ಕೆ 12 ವರ್ಷದ ಮಗನನ್ನೇ ಕೊಂದ ತಂದೆ!

    ಜಮ್‍ಶೇಡ್‍ಪುರ್: ಪೋಷಕರು ಜಗಳವಾಡುವುದನ್ನು ನೋಡಿ ಅವರನ್ನು ತಡೆಯಲು ಹೋದ ಮಗನನ್ನು ತಂದೆಯೇ ಕೊಲೆ ಮಾಡಿದ ಘಟನೆ ಜಾರ್ಖಂಡ್‍ನ ಜಮ್‍ಶೇಡ್‍ಪುರ್ ನಲ್ಲಿ ನಡೆದಿದೆ.

    ಗೋವಿಂದೋ ಮುಂಡಾ ಮಗನನ್ನೇ ಕೊಂದ ಆರೋಪಿ ತಂದೆ. ಗೋವಿಂದೋ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದನು. ಆಗ ಬಾಲಕ ಜಗಳವಾಡಬೇಡಿ ಎಂದು ಅವರ ಜಗಳದಲ್ಲಿ ಮಧ್ಯೆ ಪ್ರವೇಶಿಸಿದ್ದನು.

    ಇದರಿಂದ ಕೋಪಗೊಂಡ ಗೋವಿಂದೋ ತನ್ನ ಮಗನನ್ನು ತಮುಕ್‍ಪಾಲ್ ಗ್ರಾಮದಲ್ಲಿ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನನ್ನು ಕೊಂದಿದ್ದಕ್ಕೆ ಗ್ರಾಮಸ್ಥರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಜಮ್‍ಶೆಡ್‍ಪುರ: ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ ಘಟನೆ ಮಾರ್ಚ್ 14ರಂದು ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರಾಮ್‍ಸಿಂಗ್ ಸಿರ್ಕಾ(42), ಪಾನೂ ಕುಯಿ(40), ರಂಭಾ(17), ಕಂದೆ(12) ಹಾಗೂ ಸೋನಿಯಾ(8) ಮೃತ ದುರ್ದೈವಿಗಳು. ದೂರಿನಲ್ಲಿ 9 ಜನರ ಹೆಸರು ದಾಖಲಾಗಿದ್ದು, ಅದರಲ್ಲಿ ನಾಲ್ವರು ಪ್ರಭಾವಶಾಲಿ ಕುಟುಂಬದವರು ಎಂದು ಎಸ್‍ಐ ತೌಕೀರ್ ಅಲಾಮ್ ತಿಳಿಸಿದ್ದಾರೆ.

    ಒಂಬತ್ತು ಆರೋಪಿಗಳಲ್ಲಿ ಒಬ್ಬಾತ ರಾಮ್‍ಸಿಂಗ್‍ನ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದನು. ಆದ್ರೆ ರಾಮ್‍ಸಿಂಗ್ ಮಗಳು ಇನ್ನು ಚಿಕ್ಕವಳಿದ್ದಾಳೆ ಅಂತಾ ಹೇಳಿ ಆರೋಪಿಯ ಮನವಿಯನ್ನು ತಿರಸ್ಕರಿಸಿದ್ರು. ಇದರಿಂದ ಅವಮಾನಿತನಾದ ಆರೋಪಿ ರಾಮ್ ಸಿಂಗ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ್ದಾನೆ.

    ಐವರನ್ನು ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ಆರೋಪಿ ತನ್ನ ಸಹಚರರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು. ನಂತರ ರಾಮ್ ಸಿಂಗ್ ಮನೆಗೆ ಬರುವವರೆಗೂ ಕಾದು ಆತನನ್ನು ಕೂಡ ಕೊಲೆ ಮಾಡಿದ್ದಾನೆ. ನಂತರ ಆತನ ಮೃತದೇಹವನ್ನು ಕೂಡ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ.

    ಐವರು ಸದಸ್ಯರನ್ನು 9 ಮಂದಿ ಕೊಲೆ ಮಾಡಿದ್ದಾರೆ. 9 ಜನ ಆರೋಪಿಗಳಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ರಾಜ್ಯದಿಂದ ಪರಾರಿಯಾಗಿದ್ದಾರೆ ಎಂದು ಎಸ್‍ಐ ಹೇಳಿದ್ದಾರೆ.

    ಮಾರ್ಚ್ 24ರಂದು ಗುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತುಲಸೈ ಗ್ರಾಮದಿಂದ 3ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ರಾಮ್ ಸಿಂಗ್ ಸಿರ್ಕಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಇನ್ನೂ ಉಳಿದ ನಾಲ್ವರ ಮೃತದೇಹ 5 ಕಿ.ಮೀ ದೂರದಲ್ಲಿರುವ ಮತ್ತೊಂದು ಕಾಡಿನಲ್ಲಿ ದೊರೆಯಿತ್ತು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

  • ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

    ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

    ಬೆಂಗಳೂರು: ಸೌಂದರ್ಯವನ್ನೇ ಬಂಡವಾಳ ಮಾಡಿ ನನ್ನ ಕಂಪೆನಿಗೆ ಹಣ ಹೂಡಿ ಎಂದು ಹೇಳಿ ವಂಚನೆ ಎಸಗುತ್ತಿದ್ದ ಯುವತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಒಂಡ್ರಿಲಾ ದಾಸ್‍ಗುಪ್ತಾ ಬಂಧಿತ ಆರೋಪಿ. ವಂಚನೆಗೊಳಗಾದ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಈಕೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

    ವಂಚನೆ ಹೇಗೆ?
    ಫ್ಯಾಶನ್, ಬ್ರಾಂಡಿಂಗ್, ಜಾಹೀರಾತು ಕ್ಷೇತ್ರದಲ್ಲಿ ನಾನು ಕಂಪೆನಿಗಳನ್ನು ತೆರೆದಿದ್ದು, ಇದಕ್ಕೆ ಬಂಡವಾಳ ಹೂಡುವಂತೆ ಸಾಮಾಜಿಕ ಜಾಲತಾಣದಲ್ಲಿ ಜನರ ಬಳಿ ಒಂಡ್ರಿಲಾ ಮನವಿ ಮಾಡುತ್ತಿದ್ದಳು. ಈಕೆ ಇಂಗ್ಲಿಷ್ ಭಾಷೆಯ ಹಿಡಿತ, ಸಂವಹನ ಕಲೆಗೆ ಮನಸೋತ ಜನ, ಈಕೆ ನೀಡಿದ್ದ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದರು.

    ಈಕೆ ಜನರಿಂದ ಲಕ್ಷಗಟ್ಟಲೇ ಹಣವನ್ನು ಪಡೆದು ವಂಚಿಸಿದ್ದು, ವಂಚನೆಗೊಳಗಾದ ಮಂದಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದು, ಈಗ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

    ಯಾರು ಈ ಒಂಡ್ರಿಲಾ ದಾಸ್ ಗುಪ್ತಾ?
    ಜಾರ್ಖಂಡ್‍ನ ಜೆಮ್ಶೆಡ್‍ಪುರದಲ್ಲಿ ಜನಿಸಿದ ಈಕೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಭಾರತದ ಹೆಸರಾಂತ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಇದಾದ ಬಳಿಕ ದೇಶದ ಪ್ರಸಿದ್ಧ ಫ್ಯಾಶನ್ ಮ್ಯಾಗಜಿನ್ ನಲ್ಲಿ ಉದ್ಯೋಗ ಆರಂಭಿಸಿದ್ದಳು. ಇಲ್ಲಿ ಈಕೆಗೆ ಫ್ಯಾಶನ್ ಜಗತ್ತಿನ ಪರಿಚಯವಾಗಿತ್ತು. ಇದಾದ ಬಳಿಕ eatshoplove.in ಹೆಸರಿನ ಕಂಪೆನಿಯನ್ನು ತೆರೆದಿದ್ದಳು.

    ವಿಶೇಷ ಏನೆಂದರೆ ವ್ಯಕ್ತಿಗಳ ಸಾಧನೆಗಳ ಕುರಿತಾಗಿ ಸುದ್ದಿ ಮಾಡುವ ವೆಬ್‍ಸೈಟ್ ಒಂದು ಒಂಡ್ರಿಲಾ ದಾಸ್ ಗುಪ್ತಾಳ ಸಾಧನೆಯನ್ನು ವಿವರಿಸಿತ್ತು. ಇದರಲ್ಲಿ ಬಂದಿರುವ ಸುದ್ದಿಯನ್ನು ಇಟ್ಟುಕೊಂಡು ಈಕೆ ತನ್ನ ಸಾಧನೆಯನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲು ಯಶಸ್ವಿಯಾಗುತ್ತಿದ್ದಳು.

    https://youtu.be/2HQ3ZrQMlc4

     

  • ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ: ವೈರಲ್ ವಿಡಿಯೋ ನೋಡಿ

    ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ: ವೈರಲ್ ವಿಡಿಯೋ ನೋಡಿ

    ಜೆಮ್‍ಶ್ಷೆಡ್‍ಪುರ: ಗುರು ಪೂರ್ಣಿಮಾ ಮಹೋತ್ಸವದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿರುವ ವಿಡಿಯೋವೊಂದು ವೈರಲ್ ಆಗಿದೆ.

    ಜಾರ್ಖಂಡ್‍ದ ಜೆಮ್‍ಶ್ಷೆಡ್‍ಪುರದ ಬ್ರಹ್ಮ ಲೋಕ ಧಾಮದಲ್ಲಿ ನಡೆಯುತ್ತಿರುವ `ಗುರು ಮಹೋತ್ಸವ’ ಸಮಾರಂಭದಲ್ಲಿ ಇಬ್ಬರು ಮಹಿಳೆಯರು ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ತೊಳೆದಿದ್ದಾರೆ.

    ರಘುವರ್ ದಾಸ್ ಅವರು ಕೈ ಮುಗಿದುಕೊಂಡು ಬರುವಾಗ ದೊಡ್ಡ ತಟ್ಟೆಯೊಂದರಲ್ಲಿ ನಿಲ್ಲಿಸಿ ನೀರು, ಹೂವನ್ನು ಅವರ ಪಾದಕ್ಕೆ ಹಾಕಿ ತೊಳೆದಿದ್ದಾರೆ. ಮುಖ್ಯಮಂತ್ರಿ ರಘುವರ್ ದಾಸ್ ಅವರು ಅಲ್ಲಿಯ ಜನರಿಗೆ ಕೈ ಮುಗಿದುಕೊಂಡು ಬರುವ ದೃಶ್ಯ ವಿಡಿಯೋದಲ್ಲಿದೆ.