Tag: Jamnagar

  • ತರಬೇತಿ ಕಾರ್ಯಾಚರಣೆಯಲ್ಲಿದ್ದ ಜಾಗ್ವಾರ್‌ ಯುದ್ಧ ವಿಮಾನ ಪತನ – ಪೈಲಟ್‌ ಸಾವು

    ತರಬೇತಿ ಕಾರ್ಯಾಚರಣೆಯಲ್ಲಿದ್ದ ಜಾಗ್ವಾರ್‌ ಯುದ್ಧ ವಿಮಾನ ಪತನ – ಪೈಲಟ್‌ ಸಾವು

    ಗಾಂಧೀನಗರ: ಗುಜರಾತ್‌ನ ಜಮ್‌ನಗರದಲ್ಲಿ ಬುಧವಾರ ನಡೆದ ರಾತ್ರಿ ಕಾರ್ಯಾಚರಣೆಯಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ.

    ಎರಡು ಆಸನಗಳ ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಭಾರತೀಯ ವಾಯುಪಡೆಯ ಪೈಲಟ್ ಮೃತಪಟ್ಟಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

    ಪತನಗೊಂಡ ವಿಮಾನದಿಂದ ಒಬ್ಬ ಪೈಲಟ್‌ ರಕ್ಷಿಸಲಾಯಿತು. ಮತ್ತೊಬ್ಬರು ನಾಪತ್ತೆಯಾಗಿದ್ದರು. ರಕ್ಷಿಸಿದ ಪೈಲಟ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರೇಮ್‌ಸುಖ್ ಡೆಲು ತಿಳಿಸಿದ್ದಾರೆ.

    ಜಮ್‌ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಸುವರ್ಡಾ ಗ್ರಾಮದಲ್ಲಿ ತೆರೆದ ಮೈದಾನದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾಯಿತು. ಪತನದ ಬೆನ್ನಲ್ಲೇ ಬೆಂಕಿ ಹೊತ್ತಿಕೊಂಡಿತ್ತು.

    ಈ ಮೊದಲು ಮಾರ್ಚ್ 7 ರಂದು, ಭಾರತೀಯ ವಾಯುಪಡೆ (ಐಎಎಫ್) ಜಾಗ್ವಾರ್ ಫೈಟರ್ ಜೆಟ್ ಹರಿಯಾಣದ ಅಂಬಾಲಾ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಪೈಲಟ್‌ ರಕ್ಷಣೆ ಮಾಡಲಾಗಿತ್ತು.

  • ಗುಜರಾತ್‌ನಲ್ಲಿ  ಜಾಗ್ವಾರ್ ಯುದ್ಧ ವಿಮಾನ ಪತನ – ಓರ್ವ ಪೈಲಟ್‌ಗೆ ಗಾಯ

    ಗುಜರಾತ್‌ನಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನ – ಓರ್ವ ಪೈಲಟ್‌ಗೆ ಗಾಯ

    ಗಾಂಧಿನಗರ: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ (Jaguar Fighter Aircraft ) ಪತನಗೊಂಡು ಒಬ್ಬ ಪೈಲಟ್ ಗಾಯಗೊಂಡಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿರುವ ಘಟನೆ ಗುಜರಾತ್‌ನ (Gujarat) ಜಾಮ್‌ನಗರದಲ್ಲಿ (Jamnagar) ನಡೆದಿದೆ.

    ವಿಮಾನ ಅಪಘಾತಕ್ಕೀಡಾದ ನಂತರ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪತನಗೊಂಡ ಬಗ್ಗೆ ರಾತ್ರಿ 9:50ರ ಸುಮಾರಿಗೆ ಮಾಹಿತಿ ದೊರೆಯಿತು. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಕಾಣೆಯಾದ ಪೈಲಟ್‌ಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಪ್ರೇಮ್‌ಸುಖ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಮನೆ ಪಾರ್ಕಿಂಗ್‌ಗೂ ಟ್ಯಾಕ್ಸ್

    ಘಟನೆಯಲ್ಲಿ ಯಾವುದೇ ಸ್ಥಳೀಯರಿಗೆ ಗಾಯಗಳಾಗಿಲ್ಲ. ವಿಮಾನ ತೆರೆದ ಮೈದಾನದಲ್ಲಿ ಪತನಗೊಂಡ ಕಾರಣ ದೊಡ್ಡ ಅನಾಹುತ ತಪ್ಪಿದೆ. ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Andhra Pradesh | ಹಕ್ಕಿಜ್ವರಕ್ಕೆ 2 ವರ್ಷದ ಹೆಣ್ಣು ಮಗು ಬಲಿ

  • ಗುಜರಾತಿನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಮುಂದಾದ ರಿಲಯನ್ಸ್‌

    ಗುಜರಾತಿನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಮುಂದಾದ ರಿಲಯನ್ಸ್‌

    ನವದೆಹಲಿ: ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂದಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಅನುಮತಿ ನೀಡಿದ್ದು 280 ಎಕ್ರೆ ಭೂಮಿಯಲ್ಲಿ ಮೃಗಾಲಯ ನಿರ್ಮಾಣವಾಗಲಿದೆ. ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಯೋಜನೆ ಆರಂಭ ತಡವಾಗಿದ್ದು 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ.

    ಆರ್‌ಐಎಲ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರ್ಮಿಲ್ ನಾಥ್ವಾನಿ ಪ್ರತಿಕ್ರಿಯಿಸಿ, ನಾವು ಈ ಯೋಜನೆಯ ಕೆಲಸಗಳನ್ನು ಪ್ರಾರಂಭಿಸಿದ್ದೇವೆ. ಈ ಮೃಗಾಲಯವು ವಿಶ್ವದ ಅತಿದೊಡ್ಡ ಮೃಗಾಲಯವಾಗಲಿದೆ. ಸಿಂಗಾಪುರದಲ್ಲಿ ಇರುವ ಮೃಗಾಲಯಕ್ಕಿಂತಲೂ ಈ ಮೃಗಾಲಯ ದೊಡ್ಡದಿರಲಿದೆ ಎಂದು ಹೇಳಿದ್ದಾರೆ.

     

    ಜಾಮ್‌ ನಗರದಲ್ಲಿ ಈಗಾಗಲೇ ರಿಲಯನ್ಸ್‌ ತೈಲ ಸಂಸ್ಕರಣ ಘಟಕವಿದೆ. ಈ ಘಟಕದ ಸಮೀಪ ಇರುವ ಮೋತಿ ಖಾವ್ಡಿ ಎಂಬಲ್ಲಿ ಈ ಮೃಗಾಲಯ ನಿರ್ಮಾಣವಾಗಲಿದೆ.

    ಪ್ರವಾಸೋದ್ಯಮದ ಮೂಲಕ ಅದಾಯ ಮತ್ತು ಉದ್ಯೋಗವಕಾಶ ಸೃಷ್ಟಿಗೆ ಗುಜರಾತ್‌ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ನಿರ್ಮಾಣವಾಗಿದೆ. ಈಗ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

  • ಜಾಗ್ವಾರ್ ವಿಮಾನ ಪತನ: ಪೈಲಟ್, ದನಕರು ಸಾವು

    ಜಾಗ್ವಾರ್ ವಿಮಾನ ಪತನ: ಪೈಲಟ್, ದನಕರು ಸಾವು

    ಗಾಂಧಿನಗರ: ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನವೊಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟ ಘಟನೆ ಗುಜರಾತ್‍ನ ಕಛ್ ಸಮೀಪದಲ್ಲಿ ಮಂಗಳವಾರ ನಡೆದಿದೆ.

    ವಾಯುಪಡೆ ಕಮಾಂಡರ್ ಸಂಜಯ್ ಚೌಹಾನ್ ಮೃತಪಟ್ಟಿದ್ದಾರೆ. ಜಾಗ್ವಾರ್ ಪತನಗೊಂಡ ಯುದ್ಧ ವಿಮಾನವಾಗಿದ್ದು, ವೈಮಾನಿಕ ಪರೀಕ್ಷೆಗಾಗಿ ಜಾಮ್‍ನಗರನಿಂದ ಹಾರಾಟ ನಡೆಸಿತ್ತು. ಕಛ್ ಸಮೀಪದ ಗ್ರಾಮವೊಂದರ ಗೋಮಾಳದಲ್ಲಿ ವಿಮಾನ ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಅನೇಕ ದನಕರುಗಳು ಮೃತಪಟ್ಟಿವೆ.

    ಎಂದಿನಂತೆ ಇಂದು ಬೆಳಿಗ್ಗೆ 10:30 ಗಂಟೆಗೆ ವೈಮಾನಿಕ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ವಿಮಾನ ಪತನದ ಕುರಿತು ತನಿಖೆ ನಡೆಸುವಂತೆ ವಾಯುಪಡೆ ಆದೇಶಿಸಿದೆ. ಜಾಗ್ವಾರ್ ಯುದ್ಧ ವಿಮಾನವು ಎರಡು ಎಂಜಿನ್ ಹೊಂದಿದ್ದು, ಶತ್ರುಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲು ಬಳಕೆ ಮಾಡಲಾಗುತಿತ್ತು.

    ಪ್ರತಿ ಗಂಟೆಗೆ 1,350 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದ ಜಾಗ್ವಾರ್ 1979ರಲ್ಲಿಯೇ ವಾಯುಪಡೆ ಸೇರಿತ್ತು.