Tag: jammu kashmira

  • ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    ಆಜಾದ್ ಬೆಂಬಲಿಸಿ 51 ನಾಯಕರ ರಾಜೀನಾಮೆ – ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಆಘಾತ

    ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೈಕಮಾಂಡ್ ನಾಯಕರಿಗೆ ಶಾಕ್ ಮೂಡಿಸಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಈಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಬೆಚ್ಚಿಬೀಳುವಂತ ಆಘಾತ ನೀಡಿದ್ದಾರೆ.

    ಗುಲಾಂ ನಬಿ ಅಜಾದ್ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಅವರ ಬೆಂಬಲಿಗರು ರಾಜೀನಾಮೆ ನೀಡಿದ್ದು, ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ 51 ಮಂದಿ ಸಾಮೂಹಿಕ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈವರೆಗೂ 64 ಮಂದಿ ರಾಜೀನಾಮೆ ನೀಡಿದ್ದು, ಗುಲಾಂ ನಬಿ ಅಜಾದ್ ಅವರ ಹೊಸ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ

    ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತಮ್ಮ ಎಲ್ಲ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ‌.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಕಳೆದ ಶುಕ್ರವಾರ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಒಡನಾಟವನ್ನು ಕೊನೆಗೊಳಿಸಿದರು. ಅಸಮರ್ಥ ನಾಯಕರು ಪಕ್ಷವನ್ನು ಸಮಗ್ರವಾಗಿ ನಾಶಪಡಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಿಂದ ರಾಷ್ಟ್ರೀಯ ಮಟ್ಟದ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ

    ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು, ನೂರಾರು ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐ) ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಈಗಾಗಲೇ ಆಜಾದ್‌ ಪಕ್ಷ ಸೇರಲು ಕಾಂಗ್ರೆಸ್ ತೊರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆನ್ ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲ- ಜಿಲ್ಲೆಗೆ ರ್‍ಯಾಂಕ್ ಪಡೆದ ಬಾಲಕ

    ಆನ್ ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲ- ಜಿಲ್ಲೆಗೆ ರ್‍ಯಾಂಕ್ ಪಡೆದ ಬಾಲಕ

    ಶ್ರೀನಗರ: ಆನ್‍ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲದೇ 10 ನೇ ತರಗತಿ ಪರೀಕ್ಷೆಯಲ್ಲಿ ಶೇ. 98 ಅಂಕ ಪಡೆದು ಪಾಸ್ ಆಗಿ ಜಮ್ಮು ಮತ್ತು ಕಾಶ್ಮೀರದ ಬಾಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ಉಧಂಪುರ ಜಿಲ್ಲೆಯ ಅನೋಹ್ ಗ್ರಾಮದ ನಿವಾಸಿ ಮನ್ ದೀಪ್ ಸಿಂಗ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ತೆಗೆದುಕೊಂಡು ಪಾಸ್ ಆಗಿದ್ದಾನೆ. ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಶಾಲೆಗೂ ತೆರಳದೆ, ಆನ್‍ಲೈನ್ ಪಾಠದಲ್ಲಿ ಭಾಗಿಯಾಗಲೂ ಸಾಧ್ಯವಾದೆ 10 ನೇ ತರಗತಿಯಲ್ಲಿ ಉತ್ತಮ ಅಂಕನ್ನು ಪಡೆದು ಜಿಲ್ಲೆಗೆ ಪ್ರಥಮಸ್ಥಾನವನ್ನು ಪಡೆದಿದ್ದಾನೆ. ಇದನ್ನೂ ಓದಿ:  ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್ ಮಾಡಲು ಸರ್ಕಾರದ ನಿರ್ಧಾರ!

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಇರಲಿಲ್ಲ. ಅಧ್ಯಾಪಕರು ಮತ್ತು ಸ್ನೇಹಿತರ ಸಹಾಯದಿಂದ ಶ್ರದ್ಧೆಯಿಂದ ಕಲಿತೆ. ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ನಾನು ರೈತ ಕುಟುಂಬಕ್ಕೆ ಸೇರಿದವನಾಗಿರುವ ಕಾರಣ ಕೆಲವೊಮ್ಮೆ ಕೆಲಸವನ್ನೂ ಮಾಡುತ್ತಿದ್ದೇನು ಎಂದು ದೀಪ್ ಸಿಂಗ್ ಹೇಳಿಕೊಂಡಿದ್ದಾನೆ.

    ಪದವಿ ಪೂರ್ವ ತರಗತಿ ಪರೀಕ್ಷೆ ಬಳಿಕ ನೀಟ್‍ನಲ್ಲಿ ಉತ್ತೀರ್ಣನಾಗಿ ಎಂಬಿಬಿಎಸ್‍ಗೆ ಸೇರ್ಪಡೆಯಾಗಬೇಕು ಎಂದಿದ್ದೇನೆ. ನನ್ನ ಸಹೋದರ ಜಮ್ಮುವಿನಲ್ಲಿರುವ ಶೇರ್-ಇ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕಲಿಯುತ್ತಿದ್ದಾನೆ. ಎಲ್ಲರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿದ್ದಾನೆ

  • ಕಣಿವೆ ರಾಜ್ಯದಲ್ಲಿ 8 ಭಯೋತ್ಪಾದಕರ ಹತ್ಯೆ- 4 ಮಂದಿ ಭದ್ರತಾ ಸಿಬ್ಬಂದಿಗಳಿಗೆ ಗಾಯ

    ಕಣಿವೆ ರಾಜ್ಯದಲ್ಲಿ 8 ಭಯೋತ್ಪಾದಕರ ಹತ್ಯೆ- 4 ಮಂದಿ ಭದ್ರತಾ ಸಿಬ್ಬಂದಿಗಳಿಗೆ ಗಾಯ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್ ನಾಗ್ ಹಾಗೂ ಸೋಫಿಯಾನಾ ಜಿಲ್ಲೆಯಲ್ಲಿ ಭಾರತೀಯ ಯೋಧರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 8 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

    ಸೋಫಿಯಾನ ಜಿಲ್ಲೆಯ ದ್ರಗ್ಗಾದ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಯೋಧರು 7 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಸದ್ಯ ಈ 7 ಮಂದಿಯ ಶವವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಅನಂತ್ ನಾಗ್ ಜಿಲ್ಲೆಯಲ್ಲಿ ಶರಣಾಗಲು ಒಪ್ಪದ ಭಯೋತ್ಪಾದಕನ ಮೇಲೆ ಗುಂಡಿಕ್ಕಿದ್ದು, ಆತ ಮೃತಪಟ್ಟಿದ್ದಾನೆ. ಇನ್ನೋರ್ವ ಜೀವಂತವಾಗಿ ಯೋಧರ ಕೈಗೆ ಸಿಕ್ಕಿದ್ದಾನೆ ಅಂತ ಪೊಲೀಸ್ ಅಧಿಕಾರಿ ಎಸ್ ಪಿ ವೈದ್ ಟ್ವೀಟ್ ಮಾಡಿದ್ದಾರೆ.

    ಅನಂತ್ ನಾಗ್, ಸೋಫಿಯಾನಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಯೋಧರ ಗುಂಡಿನ ಚಕಮಕಿಯಿಂದಾಗಿ 4 ಮಂದಿ ಭದ್ರತಾ ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಸೋಫಿಯಾನದಲ್ಲಿ ಇನ್ನೂ 3,4 ಭಯೋತ್ಪಾದಕರು ಅವಿತುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಮಧ್ಯರಾತ್ರಿ ಯೋಧರು ಈ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಓರ್ವ ಜೀವಂತವಾಗಿ ಸಿಕ್ಕಿದ್ದು, ಉಳಿದವರನ್ನು ಹತ್ಯೆ ಮಾಡಿದ್ದಾರೆ. ಈ ಮೊದಲು ಪೊಲೀಸರು ಭಯೋತ್ಪಾದಕರ ಕುಟುಂಬವನ್ನು ಸಂಪರ್ಕಿಸಿ, ಅವರು ಶರಣಾಗುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಓರ್ವ ಶರಣಾಗಿದ್ದು, ಮತ್ತೋರ್ವ ನಿರಾಕರಿಸಿದ್ದನು. ಇದೀಗ ಈತ ಯೋಧರ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆಯಿಂದಾಗಿ ಸದ್ಯ ಶ್ರೀನಗರ-ಬನಿಹಾಲ್ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ದಕ್ಷಿಣ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯನ್ನು ಕೂಡ ರದ್ದುಗೊಳಿಸಲಾಗಿದೆ.

    ಕಳೆದ 3 ದಿನಗಳಿದ ಹಲವು ಬಾರಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದರು ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಮೃತರಾಗಿ ಒಬ್ಬರು ಗಾಯಗೊಂಡಿದ್ದರು.

  • ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಯೋಧರು, ಉಗ್ರರ ನಡುವೆ ಗುಂಡಿನ ಚಕಮಕಿ- ಓರ್ವ ಮಹಿಳೆ ಸಾವು

    ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಯೋಧರು, ಉಗ್ರರ ನಡುವೆ ಗುಂಡಿನ ಚಕಮಕಿ- ಓರ್ವ ಮಹಿಳೆ ಸಾವು

    ಶ್ರೀನಗರ: ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ನಾಗರೀಕರಿಗೆ ಗಾಯವಾಗಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.

    ಗುಂಡಿನ ದಾಳಿಗೆ ಬಲಿಯಾದ ಮಹಿಳೆಯನ್ನು 44 ವರ್ಷದ ತಾಹಿರಾ ಬೇಗಂ ಎಂದು ಗುರುತಿಸಲಾಗಿದೆ. ಜಮ್ಮು-ಕಾಶ್ಮೀರದ ಬ್ಯಾಟ್ಪೊರಾ ಗ್ರಾಮದ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿರುವ ಮಾಹಿತಿ ಪಡೆದ ಭದ್ರತಾ ಪಡೆ ಇಂದು ಉಗ್ರರ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದು, ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.

    ಕಾಶ್ಮೀರದ ಪೊಲೀಸ್ ಅಧಿಕಾರಿ ಫೆರೋಜ್ ಅಹಮದ್ ದಾರ್ ಸೇರಿದಂತೆ ಐವರು ಪೊಲೀಸರ ಹತ್ಯೆಯ ಹಿಂದಿದ್ದಾನೆ ಎನ್ನಲಾದ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರ ಬಶೀರ್ ಲಷ್ಕರಿ ಆ ಮನೆಯಲ್ಲಿ ಅಡಗಿದ್ದಾನೆ ಎಂದು ಯೋಧರಿಗೆ ಮಾಹಿತಿ ಸಿಕ್ಕಿತ್ತು. ಲಷ್ಕರಿ ಹಾಗೂ ಆತನ ಮತ್ತೊಬ್ಬ ಸಹಚರ ಇನ್ನೂ ಮನೆಯಲ್ಲೇ ಅಡಗಿರುವುದಾಗಿ ವರದಿಯಾಗಿದೆ.

    ಶೋಧ ಕಾರ್ಯಾರಚಣೆ ವೇಳೆ ಉಗ್ರರು ಅಲ್ಲಿನ ನಿವಾಸಿಗಳನ್ನು ಮಾನವ ರಕ್ಷೆಯಾಗಿ ಬಳಸಿ ಗುಂಡಿನ ದಾಳಿ ಆರಂಭಿಸಿದ ಪರಿಣಾಮ ತಾಹಿರಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

    ಈವರೆಗೆ 17 ನಿವಾಸಿಗಳನ್ನ ಮನೆಯಿಂದ ಸ್ಥಳಾಂತರಿಸಲಾಗಿದ್ದು, ಭದ್ರತಾ ಪಡೆಯ ಕಾರ್ಯಾಚರಣೆ ಮುಂದುವರೆದಿದೆ.

  • ಯೋಧ ತೇಜ್ ಬಹದ್ದೂರ್ ಯಾದವ್ ಸಾವನ್ನಪ್ಪಿದ್ದಾರೆ ಸುದ್ದಿ ಶೇರ್ ಮಾಡೋ ಮುನ್ನ ಓದಿ

    ಯೋಧ ತೇಜ್ ಬಹದ್ದೂರ್ ಯಾದವ್ ಸಾವನ್ನಪ್ಪಿದ್ದಾರೆ ಸುದ್ದಿ ಶೇರ್ ಮಾಡೋ ಮುನ್ನ ಓದಿ

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತೇಜ್ ಬಹದ್ದೂರ್ ಹೋಲುವಂತಹ ಯೋಧರೊಬ್ಬರ ಫೋಟೋವೊಂದು ಹರಿದಾಡುತ್ತಿದ್ದು, ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಯಾದವ್ ಅವರ ಪತ್ನಿ ಹಾಗೂ ಬಿಎಸ್ ಎಫ್ ಯೋಧರು ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

    ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಹೋಲುವ ಯೋಧರೊಬ್ಬರು ಮೃತಪಟ್ಟಂತೆ ಇರುವ ಚಿತ್ರವೊಂದು ಕಳೆದ ಬುಧವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿರೋ ಯೋಧನ ತಲೆ ಬಟ್ಟೆಯಿಂದ ಮುಚ್ಚಲ್ಪಟ್ಟಿದ್ದು, ಕಣ್ಣು ಮುಚ್ಚಿದೆ. ಮಾತ್ರವಲ್ಲದೇ ಮೂಗಿನಿಂದ ರಕ್ತ ಸೋರಿತ್ತಿರುವಂತಿರುವ ಚಿತ್ರ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಈ ಪೋಟೋ ಮತ್ತು ತೇಜ್ ಬಹದ್ದೂರ್ ಫೋಟೋವನ್ನು ಜೋಡಿಸಿ ತೇಜ್ ಬಹದ್ದೂರು ಯಾದವ್ ಅವರು ಮೃತಪಟ್ಟಿದ್ದಾರೆ ಎಂದು ವೈರಲ್ ಆಗಿತ್ತು.

    ಆದ್ರೆ ಈ ಸುದ್ದಿಯನ್ನು ಯೋಧರ ಪತ್ನಿ ಹಾಗೂ ಬಿಎಸ್‍ಎಫ್ ತಳ್ಳಿಹಾಕಿದ್ದಾರೆ. ತೇಜ್ ಬಹದ್ದೂರ್ ಯಾದವ್ ಆರೋಗ್ಯವಾಗಿದ್ದಾರೆ. ಸದ್ಯ ಇವರು ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಾ ಬಿಎಸ್‍ಎಫ್ ಪಬ್ಲಿಕ್ ರಿಲೇಶನ್ ಆಫೀಸರ್ ಶುಭೇಂದು ಭಾರಧ್ವಾಜ್ ಸ್ಪಷ್ಟಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ನೋಡಿ ಹಿರಿಯ ಅಧಿಕಾರಿಯೊಬ್ಬರು ತನಗೆ ಕರೆ ಮಾಡಿ ಗಂಡನ ಬಗ್ಗೆ ವಿಚಾರಿಸುವಂತೆ ಹೇಳಿದ್ದರು. ಅಂತೆಯೇ ನಾನು ತೇಜ್ ಬಹದ್ದೂರ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಅಂತಾ ಯಾದವ್ ಪತ್ನಿ ಶರ್ಮಿಳಾ ಯಾದವ್ ಹೇಳಿದ್ದಾರೆ.

    ತೇಜ್ ಬಹದ್ದೂರು ಇತ್ತೀಚೆಗಷ್ಟೆ ಸೇನೆಯಲ್ಲಿ ಕೊಡುವ ಆಹಾರದ ಗುಣಮಟ್ಟ ಹಾಗೂ ಅಧಿಕಾರಿಗಳ ಭ್ರಷ್ಟತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ವೈರಲ್ ಆಗಿತ್ತು. 5 ದಿನಗಳ ಬಳಿಕ ಭ್ರಷ್ಟಾಚಾರ ಬಯಲಿಗೆಳೆದ ಬಳಿಕ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದರು.

    https://www.youtube.com/watch?v=ooNPeX3H7lM