Tag: jammu kashmir

  • ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

    ಉಗ್ರರ ದಾಳಿ ಸ್ಥಳದಲ್ಲೇ ಮಾರ್ಟಿನ್ ಸಿನಿಮಾ ಶೂಟಿಂಗ್ ನಡೆದಿತ್ತು, ಆಗ ಸೆಕ್ಯೂರಿಟಿ ಚೆನ್ನಾಗಿತ್ತು: ಧ್ರುವ ಸರ್ಜಾ

    – ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದ ನಟ

    ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯ ಕುರಿತು ನಟ ಧ್ರುವ ಸರ್ಜಾ  (Dhruva Sarja) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಾಳಿ ನಡೆದ ಸ್ಥಳದಲ್ಲೇ ಮಾರ್ಟಿನ್ ಚಿತ್ರೀಕರಣ ನಡೆದಿತ್ತು. ಆದರೆ ಆಗ ಸೆಕ್ಯೂರಿಟಿ ಚೆನ್ನಾಗಿತ್ತು. ಈಗ ಈ ದಾಳಿ ನಡೆಸಿರೋ ಬಾಸ್ಟರ್ಡ್‌ಗಳ  ಬಗ್ಗೆ ಏನು ಮಾತಾಡೋದು? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

    ಟೆರರಿಸ್ಟ್‌ಗಳಿಗೆ ಬಾಸ್ಟರ್ಡ್ ಎಂದು ಬೈದು ಮಾತನಾಡಿದ ಅವರು, ಆ ಬಾಸ್ಟರ್ಡ್‌ಗಳ ಬಗ್ಗೆ ಮಾತಾಡೋಕೆ ಏನಿದೆ? ಅವರಿಗೆ ಅರ್ಥ ಆಗುವ ಭಾಷೆಯಲ್ಲೇ ನಮ್ಮ ಭಾರತೀಯ ಸೇನೆ ಉತ್ತರ ಕೊಟ್ಟೆ ಕೊಡುತ್ತಾರೆ. ಈಗ ಸಿಂಧೂ ನೀರನ್ನು ಬಂದ್ ಮಾಡಿದ್ದಾರೆ. ನಮ್ಮ ಭಗವತ್ ಗೀತೆಯಲ್ಲೇ ಇದೆ ತಾಳ್ಮೆಯಿಂದ ಇರಬೇಕು ಅಂತ, ಬೇಗ ಉತ್ತರ ಕೊಡುತ್ತಾರೆ, ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ ಎಂದಿದ್ದಾರೆ.

    ಈ ಕುರಿತು ಮೋದಿಯವರು ಮುಂದೆ ಯಾವ ನಿರ್ಧಾರ ತೆಗೆದುಕೊಳಬಹುದು ಎಂದ ಪ್ರಶ್ನೆಗೆ, ನಾನು ಮೋದಿಯವರ ಪಿಎ ನಾ? ಫ್ಯಾಮಿಲಿ ನೋಡುತ್ತಿರುತ್ತಾರೆ, ನಮ್ಮ ಬಾಯಲ್ಲಿ ಬೇರೆ ರೀತಿ ಮಾತು ಬಂದರೆ ತಪ್ಪಾಗುತ್ತದೆ. ಇದನ್ನು ಡೈವರ್ಟ್ ಮಾಡೋದು ಬೇಡ, ಯಾವತ್ತಿದ್ದರೂ ಜಮ್ಮು ಮತ್ತು ಕಾಶ್ಮೀರ ನಮ್ಮ ಕಿರೀಟ. ನಾವು ಇನ್ನು ಯುದ್ಧ ಪ್ರಾರಂಭ ಮಾಡಿಲ್ಲ ಅಷ್ಟೇ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪಾಕ್ ಪ್ರಜೆಗಳನ್ನು ಕಳುಹಿಸಲು ಕೇಂದ್ರದಿಂದ ಅಡ್ವೈಸರಿ, ಪತ್ತೆಹಚ್ಚಲು ಎಸ್‌ಪಿಗಳಿಗೆ ಸೂಚನೆ: ಪರಮೇಶ್ವರ್

  • ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ದಲ್ಲಿ (Pahalgam) ಭಯೋತ್ಪಾದಕರ ದಾಳಿಗೆ 26 ಅಮಾಯಕ ಹಿಂದೂಗಳು ಜೀವ ತೆತ್ತಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ (Indian Army) ಪ್ರತೀಕಾರ ಪ್ರಾರಂಭಿಸಿದೆ. ಉಗ್ರರ ಸದೆಬಡಿಯುವ ಶಪಥಗೈಯ್ದಿರುವ ಭಾರತೀಯ ಸೇನೆ ಮೊದಲ ದಿಟ್ಟ ಹೆಜ್ಜೆ ಇರಿಸಿದೆ. ಪಹಲ್ಗಾಮ್‌ನ ದಾಳಿಯಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ಲಷ್ಕರ್-ಇ-ತೈಬಾ ಉಗ್ರ ಆಸೀಫ್ ಶೇಖ್ ಮತ್ತು ಆದಿಲ್ ಮನೆಗಳನ್ನು ಸೇನೆ ಉಡಾಯಿಸಿದೆ.

    ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (PM Narendra Modi), ಅಮಾಯಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇವತ್ತು ಸೇನೆ ಅಖಾಡಕ್ಕೆ ಇಳಿದಿದೆ. ಕಾಶ್ಮೀರದ (Kashmir)  ಟ್ರಾಲ್‌ನಲ್ಲಿರುವ ಎಲ್‌ಇಟಿ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆ, ಅನಂತ್‌ನಾಗ್ ಜಿಲ್ಲೆಯಲ್ಲಿರುವ ಆದಿಲ್ ಮನೆಯನ್ನು ಸ್ಫೋಟಿಸಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶೇಖ್ ಭಾಗಿಯಾಗಿದ್ದಾನೆಂದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಶೇಖ್ ಮನೆ-ಆಸ್ತಿಯನ್ನು ನಾಶಪಡಿಸಿದ್ದಾರೆ. ಟ್ರಾಲ್ ಮತ್ತು ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.ಇದನ್ನೂ ಓದಿ: ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ಪಹಲ್ಗಾಮ್‌ನಲ್ಲಿ ಗುಂಡಿನ ಸುರಿಮಳೆ ಸುರಿಸಿ ಹಿಂದೂಗಳ ಹತ್ಯೆಗೈಯ್ದ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ. 5 ರಿಂದ 7 ಭಯೋತ್ಪಾದಕರು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಪೈಕಿ ಇಬ್ಬರು ಸ್ಥಳೀಯ ಉಗ್ರರೇ ಆಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈಗಾಗಲೇ ಇಬ್ಬರು ಉಗ್ರರ ಮನೆಗಳನ್ನು ಧ್ವಂಸ ಮಾಡಿರುವ ಸೇನೆ ಭಯೋತ್ಪಾದಕರ ಜಾಲ ಭೇದಿಸಲು ಕಾರ್ಯಾಚರಣೆ ಶುರು ಮಾಡಿದೆ.

    ಅಮಾಯಕ 26 ಮಂದಿ ಹಿಂದೂಗಳ ಕಗ್ಗೊಲೆ ಮಾಡಿದ ಕಡುಪಾಪಿಗಳ ಹುಟ್ಟಡಗಿಸಲು ಭಾರತೀಯ ಸೇನೆ ಶಪಥ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಎನ್‌ಕೌಂಟರ್ ಆರಂಭಿಸಲಾಗಿದೆ. ಅಡಗಿ ಕುಳಿತಿರುವ ಉಗ್ರರು ಹಾಗೂ ಭಾರತೀಯ ಸೇನಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆ ವೇಳೆ ಲಷ್ಕರ್-ಎ ತೊಯ್ಬಾ ಸಂಘಟನೆಯ ಕಮಾಂಡರ್ ಅಲ್ತಫಾ ಲಲ್ಲಿಯನ್ನು ಫಿನಿಶ್ ಮಾಡಲಾಗಿದೆ.

    ಬಂಡಿಪೋರಾ ಜಿಲ್ಲೆಯ ಬಾಜಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆ ಭದ್ರತಾ ಪಡೆಗಳು ಕೂಂಬಿAಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಇಬ್ಬರು ಭದ್ರತಾಪಡೆ ಸಿಬ್ಬಂದಿಗೆ ಗಾಯಗಳಾಗಿವೆ. ಉಗ್ರರು ಅಡಗಿರುವ ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆಯನ್ನು ಎನ್‌ಕೌಂಟರ್ ಆಗಿ ಬದಲಿಸಿದ್ದು, ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

    ಒಟ್ಟಿನಲ್ಲಿ ಭಾರತ ಪಾಕಿಸ್ತಾನದ ಮಧ್ಯೆ ಆತಂಕದ ವಾತಾವರಣವಿದ್ದು, ಇದು ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ.ಇದನ್ನೂ ಓದಿ: ಉಗ್ರರ ದಾಳಿ ನಡೆದ ಪಹಲ್ಗಾಮ್‌ನಲ್ಲಿ ನಿಮ್ಮ ʻPublic TVʼ; ಬೈಸರನ್ ವ್ಯಾಲಿಯಿಂದ ಕನ್ನಡದ ಏಕೈಕ ಚಾನಲ್ ಪ್ರತ್ಯಕ್ಷ ವರದಿ..!

  • ಉಗ್ರರು ದಾಳಿ ಮಾಡಿಲ್ಲ ಎಂದ ನ್ಯೂಯಾರ್ಕ್‌ ಟೈಮ್ಸ್‌ – ವರದಿಯನ್ನು ಸರಿ ಮಾಡಿದ ಅಮೆರಿಕ ಸರ್ಕಾರ

    ಉಗ್ರರು ದಾಳಿ ಮಾಡಿಲ್ಲ ಎಂದ ನ್ಯೂಯಾರ್ಕ್‌ ಟೈಮ್ಸ್‌ – ವರದಿಯನ್ನು ಸರಿ ಮಾಡಿದ ಅಮೆರಿಕ ಸರ್ಕಾರ

    ವಾಷಿಂಗ್ಟನ್‌: ಕಾಶ್ಮೀರದ ಪಹಲ್ಗಾಮ್‌ ದಾಳಿಯನ್ನು (Pahalgam Terror Attack) ಉಗ್ರರ ದಾಳಿ ಎಂದು ಬರೆಯದ ಅಮೆರಿಕ ನ್ಯೂಯಾರ್ಕ್‌ ಟೈಮ್ಸ್‌ (The New York Times) ವರದಿಯನ್ನು ಅಮೆರಿಕ ಸರ್ಕಾರ (US Government) ಟೀಕಿಸಿದೆ.

    ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ʼMilitantsʼ ಎಂದು ಹೆಡ್‌ಲೈನ್‌ ಹಾಕಿ ವರದಿ ಮಾಡಿತ್ತು. ಆದರೆ ಅಮೆರಿಕದ House Foreign Affairs Committee Majority ಸಾಮಾಜಿಕ ಜಾಲತಾಣದಲ್ಲಿ Militants ಇರುವ ಜಾಗದಲ್ಲಿ ʼTerroristʼ ಎಂದು ಹಾಕಿ ಪೋಸ್ಟ್‌ ಮಾಡಿದೆ. ಇದನ್ನೂ ಓದಿ: Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್

    ತನ್ನ ಪೋಸ್ಟ್‌ನಲ್ಲಿ ನಾನು ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಸರಿ ಮಾಡಿದ್ದೇವೆ. ಭಾರತವಾಗಲಿ ಅಥವಾ ಇಸ್ರೇಲ್‌ನಲ್ಲಿ ನಡೆಯಲಿ ಇದು ಭಯೋತ್ಪಾದಕ ದಾಳಿ ಎಂದು ಬರೆದುಕೊಂಡಿದೆ.

    ಮೊದಲಿನಿಂದಲೂ ಜಮ್ಮು ಕಾಶ್ಮೀರದಲ್ಲಿ ಉಗ್ರರು ದಾಳಿ ಮಾಡಿದಾಗ ಪಾಶ್ಚಿಮಾತ್ಯ, ಅಮೆರಿಕ, ಮಧ್ಯಪ್ರಾಚ್ಯದಲ್ಲಿರುವ ಮಾಧ್ಯಮಗಳು ಅವರನ್ನು ಉಗ್ರರು ಎಂದು ಕರೆಯುವುದಿಲ್ಲ. ಪ್ರತ್ಯೇಕವಾದಿಗಳು, ಬಂಡುಕೋರರು, ಸ್ವತಂತ್ರ ಹೋರಾಟಗಾರರು ಎಂಬ ಬಣ್ಣ ಬಣ್ಣದ ಪದಗಳನ್ನು ಬಳಸಿ ಅವರ ಮೇಲೆ ವಿಶ್ವದ ಜನರು ಅನುಕಂಪ ಬರುವಂತಹ ವರದಿಗಳನ್ನು ಪ್ರಕಟಿಸುತ್ತಿದ್ದವು, ಈಗಲೂ ಪ್ರಕಟಿಸುತ್ತಲೇ ಇದೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

     

    ಕನ್ನಡದಲ್ಲಿ Militants ಪದಕ್ಕೆ ಅರ್ಥ ಹುಡುಕಿದರೆ ʼಉಗ್ರರುʼ ಎಂದೇ ಗೂಗಲ್‌ ತೋರಿಸುತ್ತದೆ. ಆದರೆ ಇಂಗ್ಲಿಷ್‌ನಲ್ಲಿ Militants ಅಂದರೆ ಉಗ್ರರು ಎಂಬ ಅರ್ಥ ಬರುವುದಿಲ್ಲ. ಸಶಸ್ತ್ರ ಪ್ರತಿರೋಧ, ದಂಗೆಗಳು ಅಥವಾ ಗೆರಿಲ್ಲಾ ಯುದ್ಧದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ವಿವರಿಸಲು ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತದೆ. ಸರ್ಕಾರದ ವಿರುದ್ಧ ವಿಮೋಚನಾ ಹೋರಾಟ ಮಾಡುತ್ತಿರುವ ವಿಮೋಚನಾ ಹೋರಾಟಗಾರರು, ಪ್ರತ್ಯೇಕವಾದಿಗಳು ಎಂಬ ಅರ್ಥ ಕೊಡುತ್ತದೆ.

  • ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಶ್ರೀನಗರ: ಗಡಿ ನಿಯಂತ್ರಣ ರೇಖೆಯ (LoC) ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ನೆಲೆಯಿಂದ (Pakistan) ತಡರಾತ್ರಿ ಭಾರತದ ಮೇಲೆ ಗುಂಡಿನ ದಾಳಿ ನಡೆಸಿದೆ.

    ಪಾಕಿಸ್ತಾನ ಸೇನೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು, ಪ್ರತಿಯಾಗಿ ಭಾರತವೂ ಗುಂಡು ಹಾರಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌


    ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ (Pahalgam Attack) ನಂತರ ಭಾರತ ಮತ್ತು ಪಾಕಿಸ್ತಾನ ಸೈನಿಕರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಭಾರತ ಕ್ಷಿಪಣಿ ಹಾರಿಸಿ ಪರೀಕ್ಷೆ ನಡೆಸಿದರೆ ಇನ್ನೊಂದು ಕಡೆ ಪಾಕಿಸ್ತಾನವೂ ಕ್ಷಿಪಣಿ ಹಾರಿಸಿದೆ.


     

  • `ಪ್ರೇಮ ಕಾಶ್ಮೀರ’ದಲ್ಲಿ ರಕ್ತದೋಕುಳಿ – ಭೀಕರ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

    `ಪ್ರೇಮ ಕಾಶ್ಮೀರ’ದಲ್ಲಿ ರಕ್ತದೋಕುಳಿ – ಭೀಕರ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭೀಕರ ದಾಳಿಯ ಬಗ್ಗೆ ಅಲ್ಲಿನ ಪ್ರತ್ಯಕ್ಷದರ್ಶಿಗಳು ದುರಂತ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಏಪ್ರಿಲ್ 22ರ ಮಧ್ಯಾಹ್ನ 1:50ರ ಸುಮಾರಿಗೆ ನಡೆದ ಪೈಶಾಚಿಕ ಕೃತ್ಯದಲ್ಲಿ 26 ಪ್ರವಾಸಿಗರು ಬಲಿಯಾಗಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮತ್ತಷ್ಟು ಮಾಹಿತಿ ನೀಡಿದ್ದು, ಕರಾಳ ಘಟನೆ ಕಣ್ಮುಂದೆ ಕಟ್ಟಿದಂತಾಗಿದೆ.ಇದನ್ನೂ ಓದಿ: Pahalgam Terror Attack | ಪಾಕಿಸ್ತಾನ ಸಮರ್ಥಿಸಿಕೊಂಡಿದ್ದ ಅಸ್ಸಾಂ ಶಾಸಕ ಅರೆಸ್ಟ್‌

    ಪ್ರತ್ಯಕ್ಷದರ್ಶಿಗಳು ಹೇಳೋದೇನು?
    * ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವಾಗ ಹುಲ್ಲುಗಾವಲಿನ ಪೈನ್ ಮರಗಳ ಮಧ್ಯದಿಂದ 5 ಉಗ್ರರು ಬಂದರು.
    * ಯಾವ ಕಡೆಯಲ್ಲಿ ಹೆಚ್ಚು ಪ್ರವಾಸಿಗರಿದ್ದರೋ ಆ ಕಡೆ 3 ತಂಡಗಳಾಗಿ ತೆರಳಿದರು.
    * ಉಗ್ರರು ಬಂದೂಕಗಳ ಜೊತೆಗೆ ತಮ್ಮ ಕಡೆ ಬಾಡಿ ಕ್ಯಾಮೆರಾವನ್ನು ಇಟ್ಟುಕೊಂಡಿದ್ದರು.
    * ತಮ್ಮ ಕುಟುಂಬದ ಜೊತೆಗಿದ್ದವರು ಬಂದೂಕುಧಾರಿಗಳನ್ನು ನೋಡಿ, ಇರ‍್ಯಾಕೆ ನಮ್ಮ ಹತ್ತಿರ ಬರುತ್ತಿದ್ದಾರೆ ಎಂದುಕೊಳ್ಳುತ್ತಿದ್ದರು.
    * ಹತ್ತಿರ ಬಂದಿದ್ದೇ ಉಗ್ರರು ಧರ್ಮ ಯಾವುದು, ಇಸ್ಲಾಂ ಶ್ಲೋಕ ಹೇಳಿ ಎಂದು ಕೇಳಿದರು.
    * ಆ ದಿನ ಉಗ್ರರು ಮೊದಲ ಗುಂಡು ಹಾರಿಸಿದ್ದು ಮ.1:50ರ ಸುಮಾರಿಗೆ, ಆದರೆ 10 ನಿಮಿಷಗಳಲ್ಲೇ 26 ಜನರನ್ನು ಕೊಂದು ಕಾಡಿನಲ್ಲಿ ಅದೃಶ್ಯರಾದರು.
    * ಪ್ರವಾಸಿಗರನ್ನು ಗುರಿಯಾಗಿಸಿ ತಲೆಗೆ ಗುಂಡಿಟ್ಟು ಕೊಂದ ಅರ್ಧಗಂಟೆ ಬಳಿಕ ಪೊಲೀಸರಿಗೆ ಸಂದೇಶ ರವಾನೆಯಾಗಿದೆ.
    * ದುರ್ಗಮ ಪ್ರದೇಶವಾಗಿರುವ ಕಾರಣ ಮ.3 ಗಂಟೆ ಬಳಿಕ ಅಲ್ಲಿದ್ದವರಿಗೆ ಸಹಾಯ ಸಿಕ್ಕಿದೆ, ಒಂದು ವೇಳೆ ಗಾಯಗೊಂಡವರಿಗೆ ಬೇಗ ಚಿಕಿತ್ಸೆ ಸಿಕ್ಕಿದ್ದರೆ, ಹಲವು ಜನ ಬದುಕುವ ಅವಕಾಶ ಇತ್ತು ಎಂದು ಘಟನೆ ಬಗ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: Pahalgam Attack | ಕೇಂದ್ರ ಯಾವ್ದೇ ಕ್ರಮ ತೆಗೆದುಕೊಂಡ್ರೂ‌ ಪೂರ್ಣ ಬೆಂಬಲ ಇದೆ: ರಾಹುಲ್‌ ಗಾಂಧಿ

     

  • Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ

    Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ

    – ಪುಟ್ಟ ಮಗುವನ್ನು ಎದೆಗವುಚಿ ಪತ್ನಿ ಭಾವುಕ ವಿದಾಯ

    ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ಭಯೋತ್ಪಾದಕರ ದಾಳಿಗೆ ಬಲಿಯಾದ ಕನ್ನಡಿಗ ಭರತ್ ಭೂಷಣ್ ಅಂತ್ಯಕ್ರಿಯೆ ಹೆಬ್ಬಾಳ (Hebbal) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಪತಿಯನ್ನು ಕಳೆದುಕೊಂಡ ಭರತ್ ಭೂಷಣ್ ಪತ್ನಿ ಪುಟ್ಟ ಮಗುವನ್ನು ಎದೆಗವುಚಿಕೊಂಡು ಭಾವುಕ ವಿದಾಯ ಹೇಳಿದ್ದಾರೆ.

    ಮತ್ತಿಕೇರಿ ನಿವಾಸದ ಬಳಿ ಕುಟುಂಬದ ಸದಸ್ಯರಿಂದ ದಿ. ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದರು. ರಾಜ್ಯಪಾಲರು, ಸಿಎಂ, ಹಿರಿಯ ಅಧಿಕಾರಿಗಳು ಸೇರಿದಂತೆ ರಾಜಕಾರಿಗಳು ಅಂತಿಮ ದರ್ಶನ ಪಡೆದರು.ಇದನ್ನೂ ಓದಿ: ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

     

    ಅಂತಿಮ ಪೂಜೆ ಬಳಿಕ ಸಿಗ್ನಲ್ ಫ್ರೀಯಲ್ಲಿ ಪಾರ್ಥಿವ ಶರೀರವನ್ನು ಹೆಬ್ಬಾಳ ಚಿತಾಗಾರಕ್ಕೆ ರವಾನಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ, ಕುಟುಂಬದವರ ಸಮ್ಮುಖದಲ್ಲಿ ಗೌರವ ಸಲ್ಲಿಸಲಾಯಿತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.

    ಭರತ್ ಭೂಷಣ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಜಮ್ಮು ಕಾಶ್ಮೀರ ಪ್ರವಾಸಕ್ಕೆಂದು ತೆರಳಿದ್ದರು. ಏ.22 ರಂದು ಜಮ್ಮು ಕಾಶ್ಮೀರದ ಪಹಗ್ಲಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಭರತ್ ಭೂಷಣ್ ಬಲಿಯಾದರು.ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ್ ಅಂತ್ಯಕ್ರಿಯೆ

  • ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    ಏ.27ರೊಳಗೆ ಭಾರತ ಬಿಟ್ಟು ತೊಲಗಿ – ಪಾಕ್ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್

    -ಮೆಡಿಕಲ್ ವೀಸಾಗಳಿಗೆ ಏ.29ರವರೆಗೆ ಅವಕಾಶ

    ನವದೆಹಲಿ: ಜಮ್ಮು ಕಾಶ್ಮೀರದ (Jammu Kashmir) ಪಹಗ್ಲಾಮ್ (Pahalgam) ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ. ಈ ಮೂಲಕ ಪಾಕ್ ಪ್ರಜೆಗಳ ಎಲ್ಲಾ ರೀತಿಯ ವೀಸಾಗಳನ್ನು ಸರ್ಕಾರ ಗುರುವಾರ ಸ್ಥಗಿತಗೊಳಿಸಿದ್ದು, ಮೆಡಿಕಲ್ ವೀಸಾಗಳಿಗೆ (Medical Visa) ಏ.29ರವೆಗೆ ಅವಕಾಶ ನೀಡಿದೆ.

    ಎಲ್ಲಾ ರೀತಿಯ ವೀಸಾಗಳನ್ನು ಗುರುವಾರ ಸ್ಥಗಿತಗೊಳಿಸಿದ್ದು, ಏ.27ರೊಳಗೆ ಭಾರತ ತೊರೆಯುವಂತೆ ಸೂಚಿಸಿದೆ. ವೈದ್ಯಕೀಯ ವೀಸಾಗಳು ಏ.29ರವರೆಗೆ ಮಾನ್ಯವಾಗಿರಲಿದ್ದು, ಬಳಿಕ ರದ್ದಾಗಲಿವೆ ಎಂದು ತಿಳಿಸಿದೆ.ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ವಿದೇಶಾಂಗ ಸಚಿವಾಲಯದ (Ministry of External Affairs) ಮಾಹಿತಿ ಪ್ರಕಾರ, ಏ.22 ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಬಳಿಕ ಸಚಿವ ಸಂಪುಟ ಹಲವು ಭದ್ರತೆಯ ಕುರಿತಾದ ನಿರ್ಧಾರಗಳನ್ನು ಕೈಗೊಂಡಿದೆ. ಈ ನಿರ್ಧಾರದ ಮುಂದುವರಿದ ಭಾಗವಾಗಿ ಭಾರತ ಸರ್ಕಾರ (Indian Government) ತಕ್ಷಣವೇ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

    ಜೊತೆಗೆ ಪಾಕಿಸ್ತಾನದಲ್ಲಿರುವ ಎಲ್ಲ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಸಚಿವಾಲಯ ಸೂಚಿಸಿದೆ ಹಾಗೂ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ವೀಸಾ ಅವಧಿ ಮುಗಿಯುವ ಮೊದಲು ಭಾರತವನ್ನು ತೊರೆಯಬೇಕು ಎಂದು ಸೂಚಿಸಿದೆ.

    ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಿಸಿಎಸ್ ಸಭೆಯ ನಂತರ, ಸರ್ಕಾರ ಪಾಕಿಸ್ತಾನಿ ಪ್ರಜೆಗಳ ಸಾರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿತ್ತು. ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕ್ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಮತ್ತು ಈ ಹಿಂದೆ ನೀಡಿದ್ದ ಎಲ್ಲಾ ಎಸ್‌ಪಿಇಎಸ್ ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಪ್ರಸ್ತುತ ಎಸ್‌ಪಿಇಎಸ್ ವೀಸಾದಡಿಯಲ್ಲಿ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯೊಳಗೆ ಭಾರತವನ್ನು ತೊರೆಯಲು ಕಾಲಾವಕಾಶವಿದೆ ಎಂದು ತಿಳಿಸಿದರು.ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್‌ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ

  • ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು: ಸಿಎಂ

    ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು: ಸಿಎಂ

    ಬೆಂಗಳೂರು: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ. ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ (Pahalgam Terrorist Attack) ಬಲಿಯಾದ ಮತ್ತಿಕೆರೆಯ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರದ ಪರವಾಗಿ ಕನ್ನಡ ನಾಡಿನ ಏಳು ಕೋಟಿ ಜನರ ಪರವಾಗಿ ಭರತ್ ಭೂಷಣ್‌ಗೆ ಶ್ರದ್ದಾಂಜಲಿ ಸಲ್ಲಿಸಿದ್ದೇನೆ. ಇನ್ನೂ ಚಿಕ್ಕ ವಯಸ್ಸು. ಭರತ್ ಭೂಷಣ್ ಬಿಇ ಎಂಬಿಎ ಮಾಡಿದ್ದಾರೆ. ಉಗ್ರರು ಅಮಾನವೀಯವಾಗಿ ಕೃತ್ಯ ಎಸಗಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿದ್ದೇನೆ. ಉಗ್ರ ಚಟುವಟಿಕೆಗಳು ಈ ದೇಶದಿಂದ ಹೋಗಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಕನಿಕರ ತೋರಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪಾಕ್‌ ಸೇನಾ ಮುಖ್ಯಸ್ಥ ಮುನೀರ್‌ ಉಗ್ರ – ಲಾಡೆನ್‌ನಂತೆ ಈತನ ಅಂತ್ಯವಾಗಬೇಕು: ಪೆಂಟಗನ್‌ ಮಾಜಿ ಅಧಿಕಾರಿ

    ಹಾಡಹಗಲೇ ಹೆಂಡತಿ, ಮಗು ಇದ್ದಾಗಲೆ ಶೂಟ್ ಮಾಡೋದಕ್ಕಿಂತ ಹೇಯಕೃತ್ಯ ಇನ್ನೊಂದಿಲ್ಲ. ಮನುಷ್ಯತ್ವ ಇಲ್ಲದವರು ಅವರು. ಇದನ್ನು ಖಂಡಿಸುತ್ತೇನೆ. ಇದೇ ಜಿಲ್ಲೆಯಲ್ಲಿ ಪುಲ್ವಾಮ ಅಟ್ಯಾಕ್ ಆಯಿತು. ಘಟನೆಯಲ್ಲಿ 40 ಸೈನಿಕರು ಸಾವನ್ನಪ್ಪಿದ್ದರು. ಅಲ್ಲೇ ಇದೀಗ ಮತ್ತೆ ಮರುಕಳಿಸಿದೆ. ಅವರು ಎಲ್ಲೇ ಇದ್ದರೂ ಪತ್ತೆ ಹಚ್ಚಿ ನಿರ್ಮೂಲನೆ ಮಾಡಬೇಕು. ಬಹುಷಃ ಎಲ್ಲೋ ಒಂದು ಕಡೆ ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ ಅನ್ನಿಸುತ್ತಿದೆ ಎಂದರು. ಇದನ್ನೂ ಓದಿ: ಸಿಗರೇಟ್‌ ಸೇದಬೇಡಿ ಎಂದಿದ್ದಕ್ಕೆ ಅನ್ಯ ಕೋಮಿನ ಯುವಕರಿಂದ ಆರ್‌ಎಸ್ಎಸ್ ಮುಖಂಡ, ಕುಟುಂಬದ ಮೇಲೆ ಹಲ್ಲೆ

    ಸತ್ತವರ ಕುಟುಂಬಗಳಿಗೆ ನಮ್ಮ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಿದೆ. ಯಾವಾಗಲೂ ನಮ್ಮ ಸರ್ಕಾರ ಕುಟುಂಬದ ಜೊತೆ ಇದೆ. ಸಚಿವ ಸಂತೋಷ್ ಲಾಡ್ ಅವರನ್ನು ಕೂಡಲೇ ಕಾಶ್ಮೀರಕ್ಕೆ ಕಳುಹಿಸಿದ್ದೆ. ಮೃತದೇಹಗಳು ಹಾಗೂ ಕನ್ನಡಿಗರನ್ನು ವಾಪಸ್ ಕರೆತರುವಂತೆ ತಿಳಿಸಿದ್ದೆ. 177 ಜನರನ್ನು ಲಾಡ್ ವಾಪಸ್ ಕರೆತರುತ್ತಿದ್ದಾರೆ. ಇನ್ನೊಂದು ಸಾರಿ ಉಗ್ರ ಕೃತ್ಯ ಮರುಕಳಿಸದೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: Pahalgam Terror Attack: ಶಿವಮೊಗ್ಗ ತಲುಪಿದ ಮಂಜುನಾಥ್‌ ಮೃತದೇಹ

  • Pahalgam Attack – ಲೆಫ್ಟಿನೆಂಟ್ ವಿನಯ್ ನರ್ವಾಲ್ ಅಂತ್ಯಕ್ರಿಯೆ ನೆರವೇರಿಸಿದ ತಂಗಿ

    Pahalgam Attack – ಲೆಫ್ಟಿನೆಂಟ್ ವಿನಯ್ ನರ್ವಾಲ್ ಅಂತ್ಯಕ್ರಿಯೆ ನೆರವೇರಿಸಿದ ತಂಗಿ

    – ನನ್ನ ಅಣ್ಣನ ಕೊಂದವ್ರನ್ನ ಸಾಯ್ಸಿ ಎಂದು ಆಕ್ರೋಶ

    ಚಂಡೀಗಢ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ (Pahalgam Terrorist Attack) ಬಲಿಯಾದ ನವವಿವಾಹಿತ, ನೌಕಾ ಸೇನೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ (Vinay Narwal) ಅವರ ಅಂತ್ಯಕ್ರಿಯೆಯನ್ನು ವಿನಯ್ ತಂಗಿ ಸೃಷ್ಟಿ ನೆರವೇರಿಸಿದ್ದಾರೆ.

    ಹರ್ಯಾಣದ (Haryana) ಕರ್ನಲ್‌ನಲ್ಲಿ ವಿನಯ್ ಅವರ ಅಂತ್ಯಕ್ರಿಯೆ ನೆರವೇರಿದೆ. ಅಣ್ಣನ ಚಿತೆಗೆ ತಂಗಿ ಸೃಷ್ಟಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಅತೀವ ದುಃಖದಿಂದ ಕಣ್ಣೀರು ಹಾಕುತ್ತಾ ವಿನಯ್ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ: ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು

    ಈ ವೇಳೆ ತಂಗಿ ಸೃಷ್ಟಿಯ ಆಕ್ರೋಶ ಕಟ್ಟೆಯೊಡೆದು, ನನ್ನ ಅಣ್ಣನ ಕೊಂದವ್ರನ್ನ ಸಾಯ್ಸಿ ಸರ್ ಎಂದು ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿಗೆ ಮನವಿ ಮಾಡಿದ್ದಾರೆ. ಅವರು ನನ್ನಣ್ಣನಿಗೆ ನೀನು ಮುಸ್ಲಿಮಾ ಎಂದು ಕೇಳಿದ್ರು. ಬಳಿಕ ಅಣ್ಣನ ಮೇಲೆ ಮೂರು ಗುಂಡು ಹಾರಿಸಿದ್ರು. ಒಂದೂವರೆ ಗಂಟೆ ಕಾಲ ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಉಗ್ರರು ಸಾಯ್ಬೇಕು, ನಂಗೆ ನ್ಯಾಯ ಬೇಕು ಎಂದು ಸೃಷ್ಟಿ ಕಣ್ಣೀರಿಟ್ಟರು. ಇದನ್ನೂ ಓದಿ: Pahalgam Terror Attack: ಶಿವಮೊಗ್ಗ ತಲುಪಿದ ಮಂಜುನಾಥ್‌ ಮೃತದೇಹ

    ಏಪ್ರಿಲ್ 16 ರಂದು ವಿನಯ್ ಹಾಗೂ ಹಿಮಾಂಶಿ ಅವರ ವಿವಾಹವಾಗಿತ್ತು. ಮೂರು ದಿನಗಳ ನಂತರ ಆರತಕ್ಷತೆ ನಡೆಯಿತು. ಆ ಬಳಿಕ ಜಮ್ಮು ಕಾಶ್ಮೀರಕ್ಕೆ ಹನಿಮೂನ್‌ಗೆ ತೆರಳಿದ್ದರು. ಇಬ್ಬರು ಪಹಲ್ಗಾಮ್ ಬಳಿಯ ಬೈಸರನ್‌ನ ರಮಣೀಯ ತಾಣದಲ್ಲಿ ಭೇಲ್‌ಪುರಿ ತಿನ್ನುತ್ತಿದ್ದಾಗ ಭಯೋತ್ಪಾದಕನೊಬ್ಬ ಲೆಫ್ಟಿನೆಂಟ್ ವಿನಯ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ನಿನು ಮುಸಲ್ಮಾನನಾ? ಅಂತ ಕೇಳಿ ಗುಂಡು ಹಾರಿಸಿದ್ದಾನೆ. ಬಂದೂಕಿನಲ್ಲಿ ಸಿಡಿದ ಗುಂಡು ವಿನಯ್ ತಲೆಯನ್ನ ಸೀಳಿ ಪತ್ನಿ ಎದುರೇ ಪತಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ

  • ಕಾಶ್ಮೀರ ಭಾರತದ ಮುಕುಟ ಮಣಿ, ಭಯೋತ್ಪಾದನೆ ಮೂಲಕ ಸತ್ಯ ಮುಚ್ಚಿಹಾಕಲು ಸಾಧ್ಯವಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಕಾಶ್ಮೀರ ಭಾರತದ ಮುಕುಟ ಮಣಿ, ಭಯೋತ್ಪಾದನೆ ಮೂಲಕ ಸತ್ಯ ಮುಚ್ಚಿಹಾಕಲು ಸಾಧ್ಯವಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಮಂಗಳೂರು: ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿ ನನ್ನ ಮನಸ್ಸಿಗೆ ತೀವ್ರ ನೋವು ನೀಡುವ ಜೊತೆಗೆ ಬಹಳ ಆಕ್ರೋಶವನ್ನುಂಟುಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Captain Brijesh Chowta) ಹೇಳಿದ್ದಾರೆ.

    ಉಗ್ರರು ಮುಗ್ಧ ಜನರ ಮೇಲೆ ನಡೆಸಿರುವ ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಅವರು, ಈ ದಾಳಿಯಲ್ಲಿ ಶಿವಮೊಗ್ಗ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆಯಿಂದ ಕಾಶ್ಮೀರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡಿರುವುದು ಹೃದಯ ಮಿಡಿಯುವಂತೆ ಮಾಡಿದೆ. ಇದು ಕೇವಲ ಒಂದು ಪ್ರದೇಶ ಅಥವಾ ಗುಂಪಿನ ಮೇಲೆ ನಡೆದ ದಾಳಿಯಲ್ಲ. ಬದಲಿಗೆ ಇದು ಪ್ರತಿ ಭಾರತೀಯರ ಮನೆಯ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರಕ್ಕೆ ತೆರಳಿದ್ದ 180 ಕನ್ನಡಿಗರು ಸೇಫ್ – ಸ್ವಂತ ಹಣದಲ್ಲೇ ಎಲ್ಲರನ್ನು ಕರೆತರುತ್ತಿರೋ ಸಂತೋಷ್ ಲಾಡ್

    ಕಾಶ್ಮೀರ ಶಾರದಾ ದೇಶ, ಅದು ಅನಾದಿ ಕಾಲದ ದೇವಾಲಯಗಳನ್ನು ಮಡಿಲಲ್ಲಿ ಹೊತ್ತುಕೊಂಡ ಪವಿತ್ರ ಜ್ಞಾನದ ಭೂಮಿ. ಅಷ್ಟೇ ಅಲ್ಲ ಅದು ನಮ್ಮ ಭಾರತದ ಮುಕುಟ ಮಣಿ ಎಂಬುವುದನ್ನು ಬಹಳ ಸ್ಪಷ್ಟ ಹಾಗೂ ಗಟ್ಟಿ ಧ್ವನಿಯಿಂದ ಹೇಳಬೇಕು. ಆದರೆ ಈ ಸತ್ಯ ಶತ್ರುಗಳನ್ನು ಕಂಗೆಡಿಸುತ್ತಿದೆ. ಹೀಗಾಗಿ ಈ ಹೇಡಿ ಭಯೋತ್ಪಾದಕರು ನಿರಾಯುಧ ನಾಗರಿಕರನ್ನು ಕೊಂದು ಭಯ ಹುಟ್ಟಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Pahalgam Terrorist Attack | ಗುರುವಾರ ಸರ್ವಪಕ್ಷ ಸಭೆ ಕರೆದ ಕೇಂದ್ರ

    ಈ ಉಗ್ರರು ಹಾಗೂ ಅವರ ಹಿಂದಿನ ದುಷ್ಟರಿಗೆ ಮುಖ್ಯ ಆಯುಧ ಬಂದೂಕುಗಳಲ್ಲ, ಬದಲಿಗೆ ಜನರಲ್ಲಿ ಭಯ ಹುಟ್ಟಿಸುವುದೇ ಅವರ ಗುರಿ. ಕಾಶ್ಮೀರದ ಬೀದಿಗಳು ಬಿಕೋ ಎನ್ನಬೇಕು, ಅಲ್ಲಿ ವ್ಯಾಪಾರ ವಹಿವಾಟು- ಆರ್ಥಿಕತೆ ಹಾಳಾಗಬೇಕು, ಜನರು ನಿರಾಶರಾಗಬೇಕು ಎಂಬುವುದೇ ಅವರ ಮುಖ್ಯ ಉದ್ದೇಶ. ಭಾರತ ವಿರೋಧಿ ಶಕ್ತಿಗಳು ದೇಶದ ಒಳಗೆ ಮತ್ತು ಹೊರಗಿದ್ದುಕೊಂಡು ಒಂದು ಪ್ರದೇಶದಲ್ಲಿ ಅಭಾವವನ್ನು ಸೃಷ್ಟಿಸಿ, ಆರ್ಥಿಕತೆಯನ್ನು ಹಾಳುಗೆಡವಿ, ಜನರಲ್ಲಿ ಹತಾಶೆಯನ್ನು ತುಂಬುತ್ತಾರೆ. ಆ ನಿರ್ಜನತೆ ಮತ್ತು ಹತಾಶೆಯ ವಾತಾವರಣವನ್ನು ಬಳಸಿಕೊಂಡು ಇಡೀ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಅವರ ಕಾರ್ಯತಂತ್ರ ಹಾಗೂ ಒಳಸಂಚಿನ ಒಂದು ಮುಖ್ಯ ಭಾಗವಾಗಿದೆ ಎಂದು ಗುಡುಗಿದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ

    ಭಾರತ ಬದಲಾಗಿದ್ದು, ಜಗತ್ತು ಕೂಡ ಬದಲಾಗಿದೆ. ಇಂದು, ವಾಷಿಂಗ್ಟನ್‌ನಿಂದ ಪಶ್ಚಿಮ ಏಷ್ಯಾದವರೆಗೆ ಜಾಗತಿಕ ಸಮುದಾಯ ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಪ್ರಪಂಚದಾದ್ಯಂತ ಬಲಿಷ್ಠ ರಾಷ್ಟ್ರಗಳು ಈ ಭಯೋತ್ಪಾದಕ ಕೃತ್ಯವನ್ನು ಸ್ಪಷ್ಟವಾಗಿ ಖಂಡಿಸಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಆಧುನಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಭಾರತದಲ್ಲೂ ಇದಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಭಾರತ ವಾರ್ನಿಂಗ್‌ – ಪಾಕ್‌ ಸಂಬಂಧಕ್ಕೆ ಎಳ್ಳುನೀರು

    ಮೋಸ್ಟ್ ವಾಂಟೆಡ್ ಉಗ್ರ ತಹಾವ್ವೂರ್ ರಾಣಾ ಭಾರತದಲ್ಲಿ ಕಾನೂನಿನಡಿ ಕ್ರಮ ಎದುರಿಸಿಬೇಕಾಗಿರುವುದು, ದಶಕಗಳ ಕಾಲದ ಅನಿಯಂತ್ರಿತ ದುರ್ಬಳಕೆಯನ್ನು ಕೊನೆಗೊಳಿಸುವ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕಾಶ್ಮೀರದಲ್ಲಿ ಜನರನ್ನು ಭಯದ ವಾತಾವರಣದಲ್ಲಿಡುವ 370ನೇ ವಿಧಿಯನ್ನು ರದ್ದುಗೊಳಿಸಿರುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಹೆಮ್ಮೆಯ ನವ ಭಾರತದ ಉದಯ ಮತ್ತು ಹಿಂಸೆಯನ್ನು ಸೃಷ್ಟಿಸುವ ಹೇಡಿಗಳಿಗೆ ದೊರಕುತ್ತಿರುವ ಮರೆಯಲಾಗದ ತಕ್ಕ ಉತ್ತರ. ಆದರೆ, ಇಂಥಹ ದಾಳಿಯನ್ನು ಎಂದಿಗೂ ಕ್ಷಮಿಸಲಾಗದು ಮತ್ತು ಮರೆಯಲಾಗದು. ಇದಕ್ಕೆ ಪ್ರತಿಕಾರವನ್ನು ತೀರಿಸಲೇಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

    ಈ ಹಿಂದೆ ದೇಶ ಸೇವೆಗೈದ ಓರ್ವ ಯೋಧನಾಗಿ ಹಾಗೂ ಇಂದು ನಿಮ್ಮ ಜನಪ್ರತಿನಿಧಿಯಾಗಿ ನಾನು ಹೇಳುವುದೇನೆಂದರೆ, ಪ್ರತಿಯೊಬ್ಬ ಭಾರತೀಯನೂ ಮಾನಸಿಕವಾಗಿ ಸೈನಿಕನಾಗಬೇಕಾದ ಸಮಯವಿದು. ನಮ್ಮ ದೇಶದ ಪ್ರತಿಯೊಂದು ಮನೆಯಿಂದಲೂ ಒಗ್ಗಟ್ಟಿನ ಶಕ್ತಿ ಹೊರಹೊಮ್ಮಲಿ. ಏಕೆಂದರೆ ಈ ಹೋರಾಟ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದವರ ವಿಕೃತ ಮನಸ್ಥಿತಿಗಳು, ವಕ್ಫ್ ಸುಧಾರಣೆಯನ್ನು ವಿರೋಧಿಸಿದ ಅದೇ ಗುಂಪು ಈ ಕೃತ್ಯಗಳ ಹಿಂದೆಯೂ ಇದೆ. ನಮ್ಮ ಬಲಿಷ್ಠ, ಸ್ವತಂತ್ರ ಮತ್ತು ಸಂಸ್ಕೃತಿಯನ್ನು ಗೌರವಿಸುವ ಭಾರತವನ್ನು ಕಂಡು ಭಯಪಡುವ ಶಕ್ತಿಗಳೇ ಇವೆಲ್ಲವನ್ನೂ ಮಾಡುತ್ತಿವೆ ಎಂದರು. ಇದನ್ನೂ ಓದಿ: ಏ.16ಕ್ಕೆ ಮದುವೆ, 22ಕ್ಕೆ ಪತಿ ಸಾವು – ಮದ್ವೆಯಾಗಿ ವಾರ ಕಳೆದಿಲ್ಲ, ಮೆಹಂದಿ ಬಣ್ಣ ಮಾಸಿಲ್ಲ: ಇದು ವಿನಯ್ ನರ್ವಾಲ್ – ಹಿಮಾಂಶಿ ದುರಂತ ಕಥೆ

    ಪಹಲ್ಗಾಮ್‌ನಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥ್ ಇರಬಹುದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸುತ್ತಿದ್ದ ನವ ದಂಪತಿಗಳಿರಬಹುದು ಮತ್ತು ರಜೆಯ ಖುಷಿ ಅನುಭವಿಸಬೇಕಾದ ಮುದ್ದು ಮಗು ಇರಬಹುದು, ಅವರೆಲ್ಲರೂ ನಮ್ಮಂತೆಯೇ ಇದ್ದರು. ಅವರಿಗೂ ಕನಸುಗಳಿದ್ದವು, ಭವಿಷ್ಯವಿತ್ತು. ಈ ದಾಳಿ ಕೇವಲ ಒಂದು ಪ್ರದೇಶಕ್ಕೆ ಆದ ಗಾಯವಲ್ಲ. ಇದು ಇಡೀ ದೇಶಕ್ಕೆ ಆದ ನೋವು. ಈ ದುರಂತ ನಮ್ಮೆಲ್ಲರ ಹೃದಯವನ್ನು ತಟ್ಟಿದೆ. ಭಾರತವು ಈ ನೋವಿಗೆ ಒಗ್ಗಟ್ಟಿನಿಂದ, ತನ್ನೆಲ್ಲಾ ಶಕ್ತಿಯಿಂದ ಮತ್ತು ದೃಢವಾದ ನಿರ್ಧಾರದಿಂದ ಉತ್ತರಿಸುತ್ತದೆ. ನಾವು ಈ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ನಮ್ಮೆಲ್ಲರ ಏಕತೆಯೇ ಇದಕ್ಕೆ ಪ್ರಬಲವಾದ ಉತ್ತರವಾಗಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ