Tag: jammu kashmir

  • ಬೆಳಿಗ್ಗೆ ಪಹಲ್ಗಾಮ್‌ನಲ್ಲಿ ಎಂಜಾಯ್ ಮಾಡಿ ಹೋಗಿದ್ವಿ – ಉಗ್ರರ ದಾಳಿಯಿಂದ ಪಾರಾದ ಬೀದರ್ ದಂಪತಿ

    ಬೆಳಿಗ್ಗೆ ಪಹಲ್ಗಾಮ್‌ನಲ್ಲಿ ಎಂಜಾಯ್ ಮಾಡಿ ಹೋಗಿದ್ವಿ – ಉಗ್ರರ ದಾಳಿಯಿಂದ ಪಾರಾದ ಬೀದರ್ ದಂಪತಿ

    -ಗುಂಡಿನ ದಾಳಿ ವೇಳೆ 14 ಕಿ.ಮೀ ದೂರದಲ್ಲಿದ್ವಿ ಎಂದ ದಂಪತಿ

    ಬೀದರ್: ನಾವು ಗುಂಡಿನ ದಾಳಿ ನಡೆಯುತ್ತಿದ್ದ ಪ್ರದೇಶದಿಂದ 14 ಕಿ.ಮೀ ದೂರದಲ್ಲಿದ್ದೆವು, ಸ್ವಲ್ಪದರಲ್ಲೇ ಆ ದಾಳಿಯಿಂದ ಪಾರಾಗಿ ಬಂದಿದ್ದೇವೆ ಎಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದಿಂದ ಪಾರಾದ ಬೀದರ್‌ನ (Bidar) ದಂಪತಿ ಅಲ್ಲಿನ ಭೀಕರತೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ.ಇದನ್ನೂ ಓದಿ: ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ

    `ಪಬ್ಲಿಕ್ ಟಿವಿ’ಯೊಂದಿಗೆ ದಂಪತಿ ಮಾತನಾಡಿ, ನಾವು ಹೊಸದಾಗಿ ಮದುವೆಯಾಗಿದ್ದಕ್ಕೆ ಕಾಶ್ಮೀರಕ್ಕೆ ಹೋಗಿದ್ವಿ. ಕುಟುಂಬದವರು ಸೇರಿ ನಮ್ಮ ಸೋದರ ಸಂಬಂಧಿ ಜೊತೆಗೆ ಸ್ವಂತ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದೆವು. ಏ.22 ರಂದು ಬೆಳಗಿನ ಜಾವ ನಾವು ಪಹಲ್ಗಾಮ್‌ನ ಬೈಸರನ್ (Baisaran) ವ್ಯಾಲಿಗೆ ಹೋಗಿ, ಅಲ್ಲಿ ಎಂಜಾಯ್ ಬಳಿಕ ನಾವು ಅಲ್ಲಿಂದ 14 ಕಿ.ಮೀ. ದೂರದಲ್ಲಿರುವ ಬೆಹತಬ್ ವ್ಯಾಲಿಗೆ ಹೋಗಿದ್ವಿ, ಆಗ ಬೈಸರನ್ ವ್ಯಾಲಿಯಲ್ಲಿ ಉಗ್ರರ ದಾಳಿ ನಡೆಯಿತು.

    ದೇವರು, ಹಿರಿಯರ ಕೃಪೆಯಿಂದ ನಾವು ಪಾರಾಗಿ ಬಂದಿದ್ದೇವೆ ಅನಿಸುತ್ತದೆ. ನಾವು ಅಲ್ಲಿಂದ 14 ಕಿ.ಮಿ. ದೂರದಲ್ಲಿದ್ದರೂ ಕೂಡ ಸಹಜವಾಗಿಯೇ ತುಂಬಾ ಭಯ ಆಯ್ತು. ಇನ್ನೂ ಆ ಭಯದಿಂದ ಹೊರಬಂದಿಲ್ಲ. ಆದರೆ ಬೈಸರನ್ ವ್ಯಾಲಿಗೆ ಬಂದ ಪ್ರವಾಸಿಗರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಬಹಳ ಧೈರ್ಯ ತುಂಬಿದರು. ನೂರು ಮೀಟರ್‌ಗೆ ಒಬ್ಬರು ಭದ್ರತಾ ಸಿಬ್ಬಂದಿ ಇದ್ದರು. ಸೆಕ್ಯೂರಿಟಿ ತುಂಬಾ ಚೆನ್ನಾಗಿದೆ. ಡೇಂಜರ್ ಝೋನ್‌ನಲ್ಲಿ ನಮ್ಮನ್ನು ಓಡಾಡೋಕೆ ಬಿಡುತ್ತಿರಲಿಲ್ಲ. ಘಟನೆಯಾದ ಬಳಿಕ ನಾವು ಅಲ್ಲಿಂದ ವಾಪಸ್ ಬಂದ್ವಿ. ಈ ರೀತಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರನ್ನು ಬಿಡಬಾರದು. ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಹಿಂದೂಗಳ ನರಮೇಧಕ್ಕೆ ಪ್ರತೀಕಾರ ತಿರಿಸಿಕೊಳ್ಳಬೇಕು ಎಂದರು.ಇದನ್ನೂ ಓದಿ: ಪಹಲ್ಗಾಮ್‌ ದಾಳಿ – ಉ.ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೈಅಲರ್ಟ್‌

  • Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ನವದೆಹಲಿ: ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ (Pahalgam Terrorist Attack) ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಬುಧವಾರ (ಏ.30) ಮಹತ್ವದ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

    ಬೆಳಗ್ಗೆ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಭದ್ರತೆಯ ಕುರಿತು ದೇಶದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತಾ ಸಂಪುಟ ಸಮಿತಿ (CCS) ಸಭೆ ನಡೆಸಲಿದೆ. ಇದಾದ ಬಳಿಕ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (CCPA), ನಂತರ ಕೇಂದ್ರ ಸಂಪುಟ ಸಮಿತಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದೆ. ಇದನ್ನೂ ಓದಿ: 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಪಾಕ್‌ ಪ್ರಜೆಗಳಿಗೆ ಭಾರತ ವಾರ್ನಿಂಗ್‌ – ಪಾಕ್‌ ಸಂಬಂಧಕ್ಕೆ ಎಳ್ಳುನೀರು

    ಪಹಲ್ಗಾಮ್ ದಾಳಿಯ ನಂತರ ನಡೆಯುತ್ತಿರುವ ಅತ್ಯುನ್ನತ ಮಟ್ಟದ 2ನೇ ಸುತ್ತಿನ ಸಭೆ ಇದಾಗಿದ್ದು, ಭದ್ರತೆ ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ಪಾಕಿಸ್ತಾನದ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆರೋಗ್ಯ ಸಚಿವ ಜೆ.ಪಿ ನಡ್ಡಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರ ಹಿರಿಯ ಸಚಿವರೂ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಆರ್ಥಿಕ ವ್ಯವಹಾರಗಳ ಸಮಿತಿ ಸಭೆ ನಡೆಸಲಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

    ಏ.23ರಂದು ಪ್ರಧಾನಿ ಮೋದಿ ನೇತೃತ್ವದಲ್ಲೇ ಸತತ 3 ಗಂಟೆಗಳ ಕಾಲ ಕೇಂದ್ರ ಸಂಪುಟ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಟ್ಟಾರಿ-ವಾಘಾ ಗಡಿ ಚೆಕ್‌ಪೋಸ್ಟ್‌ (Attari Border) ಅನ್ನು ತಕ್ಷಣದಿಂದ ಮುಚ್ಚುವುದು, ಸಾರ್ಕ್ ವಿಸಾ ವಿನಾಯಿತಿ ಯೋಜನೆ ಪಾಕಿಸ್ತಾನದವರಿಗೆ ರದ್ದು, ರಾಯಭಾರ ಕಚೇರಿ ಸಿಬ್ಬಂದಿ ಹಂತಹಂತವಾಗಿ ಕಡಿತಗೊಳಿಸುವುದು ಮತ್ತು 1960ರ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಸಮಿತಿ ತೆಗೆದುಕೊಂಡಿತ್ತು. ಈ ಮೂಲಕ ಪಾಕಿಸ್ತಾನ ಜೊತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಎಳ್ಳುನೀರು ಬಿಡಲಾಗಿತ್ತು. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

  • ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಭಯೋತ್ಪಾದಕ ದಾಳಿಯ ಕುರಿತು ಬೆಚ್ಚಿ ಬೀಳಿಸುವ ಅಂಶವೊಂದು ಎನ್‌ಐಎ (NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಏ.22 ರಂದು ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಹಿಂದೂಗಳ ನರಮೇಧ, ಅದಕ್ಕೂ ಎರಡು ದಿನಗಳ ಹಿಂದೆಯೇ ನಡೆಯಬೇಕಿತ್ತು. ಏ.20ರಂದು ಭಯೋತ್ಪಾದಕರು ದಾಳಿಯ ಸಂಚು ರೂಪಿಸಿಕೊಂಡು ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಹವಾಮಾನದಲ್ಲಿ ತೀವ್ರ ಬದಲಾವಣೆ, ತೀವ್ರವಾದ ಮಳೆ ಮತ್ತು ಮಂಜು ಮುಸುಕಿದಂತಹ ವಾತಾವರಣವಿದ್ದ ಕಾರಣದಿಂದ ಯೋಜನೆಯನ್ನು ಮುಂದೂಡಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿ: ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕರ ಟಾರ್ಗೆಟ್ ಬಹುದೊಡ್ಡದಾಗಿತ್ತು. ದೊಡ್ಡ ಬೇಟೆಗಾಗಿ ಕಾದು ಬಂದಿದ್ದ ಉಗ್ರರಿಗೆ ಅಂದು ಹವಾಮಾನ ಕೈಕೊಟ್ಟಿತ್ತು. ವಾತಾವರಣದಲ್ಲಿ ಹಠಾತ್ ಬದಲಾವಣೆಯಿಂದಾಗಿ ಬೈಸರನ್ ವ್ಯಾಲಿಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಹೆಚ್ಚು ಜನರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ಮಾಡುವ ಯೋಜನೆಯನ್ನು ಮುಂದೂಡಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಏ.22ರಂದು ನಡೆದಿದ್ದೇನು?
    ಹತ್ಯೆಯಾದ ದಿನ ಉಗ್ರರು ಸುತ್ತಮುತ್ತಲಿನ ಕಾಡು ಬೆಟ್ಟದಂತಿರುವ ಪ್ರದೇಶದಿಂದ ನುಗ್ಗಿ ಬಂದು ಗುಂಡು ಹಾರಿಸಿದ್ದರು ಎಂದು ಅಂದಾಜಿಸಲಾಗಿತ್ತು. ಎನ್‌ಐಎ ತನಿಖೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಉಗ್ರರು ಏ.22 ರಂದು ಮಧ್ಯಾಹ್ನ 2:30ಕ್ಕೆ ಫುಡ್ ಸ್ಟಾಲ್ ಹಿಂಭಾಗದಲ್ಲಿ ಪ್ರವಾಸಿಗರಿಗಾಗಿ ಕಾದು ಕುಳಿತಿದ್ದರು. ಜನ ಸಮೂಹ ದೊಡ್ಡಗಾಗಿ ಸೇರುತ್ತಿದ್ದಂತೆ ಎದ್ದು ನಿಂತು ಹೆಸರು, ಧರ್ಮ ಕೇಳಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದರು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

  • Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಶ್ರೀನಗರ: ಪಲಹ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ (Pahalgam Terror Attack) ಸಂಬಂಧ ಮತ್ತೊಂದು ವೀಡಿಯೋ ರಿಲೀಸ್ ಆಗಿದ್ದು, ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ತೆರಳುತ್ತಿದ್ದ ಪ್ರವಾಸಿಗರೊಬ್ಬರ (Tourist) ಮೊಬೈಲ್‌ನಲ್ಲಿ ಉಗ್ರರ ದಾಳಿಯ ಭೀಕರ ದೃಶ್ಯಗಳು ಸೆರೆಯಾಗಿವೆ.

    ಅಹಮದಾಬಾದ್‌ನ ರಿಷಿ ಭಟ್ ಅವರ ಮೊಬೈಲ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ಹೋಗುವಾಗಲೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದೂ ಕೇಳಿದೆ. ಆದರೆ ಪ್ರವಾಸಿಗ ರಿಷಿ ಭಟ್‌ಗೆ ಇದರ ಅರಿವೇ ಇರಲಿಲ್ಲ. ತಮಗೆ ಅರಿವೇ ಇಲ್ಲದೇ ದಾಳಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್‌ ಸಚಿವ

    ರಿಷಿ ಜಿಪ್‌ಲೈನ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಕೆಳಗಡೆ ಪ್ರವಾಸಿಗರು ಏಕಾಏಕಿ ಓಡಲು ಶುರುಮಾಡುತ್ತಾರೆ. ಬಳಿಕ ಉಗ್ರನೊಬ್ಬ ಪ್ರವಾಸಿಗನ ತಲೆಗೆ ಗುಂಡು ಹೊಡೆಯುತ್ತಾನೆ. ಆ ಪ್ರವಾಸಿಗ ಅಲ್ಲೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಾನೆ. ಈ ವೇಳೆ ದಾಳಿಯ ಅರಿವಾಗಿ ಜಿಪ್‌ಲೈನ್‌ನಲ್ಲಿದ್ದ ರಿಷಿ ಭಟ್ 15 ಫೀಟ್ ಎತ್ತರದಿಂದ ಕೆಳಗೆ ಹಾರಿ ಪತ್ನಿ ಮತ್ತು ಮಗುವಿನೊಂದಿಗೆ ಓಡುತ್ತಾರೆ. ಇದಕ್ಕೂ ಮುನ್ನ ರಿಷಿ ಭಟ್ ಅವರ ಪತ್ನಿ ಜೊತೆ ಇನ್ನೂ ಒಂದು ದಂಪತಿ ಇದ್ದರು. ಅವರ ಬಳಿ ಬಂದ ಉಗ್ರ ಅವರ ಧರ್ಮ ಕೇಳಿ ಅವರನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಈ ವೇಳೆ ಜಿಪ್‌ಲೈನಲ್ಲಿದ್ದ ಕಾರಣ ನಾನು ಜೀವಂತವಾಗಿ ಉಳಿದಿದ್ದೇನೆ. ನನ್ನ ಕಣ್ಣಮುಂದೆಯೇ 16ರಿಂದ 18 ಜನ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸುವುದನ್ನು ನೋಡಿದ್ದೇನೆ ಎಂದು ಸ್ವತಃ ರಿಷಿ ಭಟ್ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು

  • ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು: ಉಗ್ರ ಪುತ್ರನಿಗೆ ತಾಯಿ ಮನವಿ

    ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು: ಉಗ್ರ ಪುತ್ರನಿಗೆ ತಾಯಿ ಮನವಿ

    – ಪಹಲ್ಗಾಮ್‌ ದಾಳಿಯ ಶಂಕಿತ ಆದಿಲ್‌ ಹುಸೇನ್‌ ಮನೆ ಧ್ವಂಸ; ಕುಟುಂಬಸ್ಥರು ಕಣ್ಣೀರು

    ಶ್ರೀನಗರ: ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು ಎಂದು ಪುತ್ರ ಉಗ್ರನಿಗೆ ಆತನ ತಾಯಿ ಮನವಿ ಮಾಡಿಕೊಂಡಿದ್ದಾರೆ.

    ಪಹಲ್ಗಾಮ್‌ ದಾಳಿ (Pahalgam Terror Attack) ಬೆನ್ನಲ್ಲೇ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಹಲವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಭಯೋತ್ಪಾದಕರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಉಗ್ರ ಆದಿಲ್‌ ಹುಸೇನ್‌ ಥೋಕರ್‌ ಮನೆ ಕೂಡ ಧ್ವಂಸ ಮಾಡಲಾಗಿದೆ. ಇದನ್ನೂ ಓದಿ: ಉಗ್ರರ ದಾಳಿಯಲ್ಲಿ ಅನೇಕರ ಜೀವ ಉಳಿಸಿದ ನನ್ನ ಪತಿಗೆ ‘ಹುತಾತ್ಮ’ ಸ್ಥಾನಮಾನ ಕೊಡಿ: ಸಂತ್ರಸ್ತೆ ಒತ್ತಾಯ

    ಭದ್ರತಾ ಪಡೆಗಳು ಸ್ಫೋಟಕ ಬಳಸಿ ಮನೆ ಧ್ವಂಸ ಮಾಡಿವೆ. ಹಿಂದೊಮ್ಮೆ ಉಗ್ರ ಆದಿಲ್‌ ಊಟ ಮಾಡಲು ಬಂದಿದ್ದ ಸ್ಥಳವನ್ನು ಆತ ತಾಯಿ ಶಹಜಾದಾ ಬಾನೊ, ಭದ್ರತಾ ಪಡೆ ಸಿಬ್ಬಂದಿಗೆ ತೋರಿಸಿದ್ದಾರೆ.

    ಸೈನಿಕರು ಅನಂತನಾಗ್ ಜಿಲ್ಲೆಯಲ್ಲಿನ ಕುಟುಂಬದ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಬಾನೊ ಅವರನ್ನು ಪಕ್ಕದ ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಶಿಫ್ಟ್‌ ಮಾಡಿದ್ದಾರೆ. ಒಂದು ಕಾಲದಲ್ಲಿ ಭರವಸೆಯ ವಿದ್ಯಾರ್ಥಿಯಾಗಿದ್ದ ಆದಿಲ್, ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಪ್ರಮುಖ ಶಂಕಿತರಲ್ಲಿ ಒಬ್ಬನಾಗಿದ್ದಾನೆ. 2018 ರಿಂದ ಅವನೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಆತನ ಕುಟುಂಬ ಹೇಳಿಕೊಂಡಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

    ನನ್ನ ಮಗ ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಭಾಗಿಯಾಗಿದ್ದರೆ, ಅವನಿಗೆ ಸೈನಿಕರು ತಕ್ಕ ಶಿಕ್ಷೆ ಕೊಡಲಿ ಎಂದು ಆದಿಲ್‌ನ ತಾಯಿ ಶಹಜಾದಾ ಬಾನೊ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಪುತ್ರನಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ‘ನಾವು ನೆಮ್ಮದಿಯಿಂದ ಬದುಕಬೇಕು. ನೀನು ಬಂದು ಶರಣಾಗು’ ಎಂದು ಪುತ್ರನಿಗೆ ಕೇಳಿಕೊಂಡಿದ್ದಾರೆ.

    ಆದಿಲ್ ತಂದೆ ವಲೀಮ್, ಸಹೋದರರಾದ ಜಹೀರ್ ಮತ್ತು ಅರ್ಶ್ಲಾಮ್ ಮತ್ತು ಸೋದರಸಂಬಂಧಿಗಳಾದ ಜುಲಂಕರ್ ಮತ್ತು ಸಜ್ಜದ್ ಎಲ್ಲರೂ ಬಂಧನದಲ್ಲಿದ್ದಾರೆ. ಅವರ ತಾಯಿಯನ್ನು ಒಂದು ದಿನದ ಮಟ್ಟಿಗೆ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: ಧರ್ಮ ಕೇಳಿ ಉಗ್ರರಿಂದ ದಾಳಿ – ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ

  • ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

    ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರಾ ಜಿಲ್ಲೆಯ ಕಂಡಿಖಾಸ್ ಪ್ರದೇಶದಲ್ಲಿ ಉಗ್ರರು ಸಾಮಾಜಿಕ ಕಾರ್ಯಕರ್ತನನ್ನು (Social Activist) ಗುಂಡಿಟ್ಟು ಕೊಂದಿದ್ದಾರೆ.

    ರಸೂಲ್ ಮಗ್ರೆ (45) ಉಗ್ರರ (Terrorist) ಗುಂಡೇಟಿಗೆ ಬಲಿಯಾದ ವ್ಯಕ್ತಿ. ಶನಿವಾರ ರಾತ್ರಿ ಇವರ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಹೊಟ್ಟೆ ಮತ್ತು ಎಡ ಮಣಿಕಟ್ಟಿಗೆ ಗುಂಡು ತಗುಲಿತ್ತು. ಇದನ್ನೂ ಓದಿ:ಮತ್ತೊಬ್ಬ ಉಗ್ರನ ಮನೆ ಉಡೀಸ್‌ – ಇಲ್ಲಿಯವರೆಗೆ 8 ಉಗ್ರರ ನಿವಾಸ ಧ್ವಂಸ

    ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕುಪ್ವಾರಾದ ಹಂದ್ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ ಬೆಂಬಲಿಸಿ ಪೋಸ್ಟ್‌ – ಶಾಸಕ, ಶಿಕ್ಷಕ, ವಕೀಲ ಸೇರಿ 19 ಮಂದಿ ಅರೆಸ್ಟ್‌

    ಉಗ್ರರು ಸಾಮಾಜಿಕ ಕಾರ್ಯಕರ್ತನನ್ನು ಗುರಿಯಾಗಿಸಿ ಹತ್ಯೆ ಮಾಡಿದ ಉದ್ದೇಶ ತಿಳಿದು ಬಂದಿಲ್ಲ. ಭದ್ರತಾ ಪಡೆಗಳು ರಸೂಲ್ ಮಗ್ರೆ ನಿವಾಸಕ್ಕೆ ಆಗಮಿಸಿ ಪರಿಶೀಲಿಸುತ್ತಿವೆ.

  • ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!

    ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಘಟನೆಗೆ ಸಂಬಂಧಿಸಿದಂತೆ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆಯನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ.

    ಲಷ್ಕರ್ ಎ ತೊಯ್ಬಾ ಉಗ್ರ ಫಾರೂಕ್ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ ಛಿದ್ರಛಿದ್ರ ಮಾಡಿದ್ದು, ಇಲ್ಲಿವರೆಗೆ ಒಟ್ಟು 6 ಉಗ್ರರ ಮನೆಯನ್ನು ನಾಶಪಡಿಸಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ

    ಪಹಲ್ಗಾಮ್ ದಾಳಿಯ ನಂತರ ಪುಲ್ವಾಮಾ, ಶೋಪಿಯಾನ್, ಅನಂತ್‌ನಾಗ್, ಕುಲ್ಗಾಮ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸ್ಫೋಟಕಗಳನ್ನು ಬಳಸಿ ಆರು ಭಯೋತ್ಪಾದಕರ ಮನೆಗಳನ್ನು ಕೆಡವಲಾಗಿದೆ. ಈ ಎಲ್ಲಾ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?

    ಫಾರೂಕ್ ಪ್ರಸ್ತುತ ಪಾಕಿಸ್ತಾನದಲ್ಲಿದ್ದು, ಭಾರತದಲ್ಲಿ ತೊಂದರೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ – ಬುಸುಗುಟ್ಟಿದ ಪಾಕ್‌ ಗೃಹ ಸಚಿವ

  • ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pehalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LOC) ಬಳಿಯಿರುವ ಗ್ರಾಮಗಳ ಜನರು ಸ್ವಯಂ ಜಾಗರೂಕರಾಗ್ತಿದ್ದಾರೆ. ಒಂದು ವೇಳೆ ಭಾರತ-ಪಾಕ್‌ ನಡುವೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್‌ಗಳನ್ನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಬೆಳೆಯನ್ನು ಅವಧಿಗೆ ಮುಂಚಿತವಾಗಿಯೇ ಕೊಯ್ಲು ಮಾಡ್ತಿದ್ದಾರೆ.

    ಬಂಕರ್‌ಗಳನ್ನ ಶುಚಿಗೊಳಿಸುವ ಕೆಲಸ ಶುರು:
    ಭಾರತ ಸರ್ಕಾರದ ಒಂದೊಂದು ಕಠಿಣ ನಿರ್ಧಾರಗಳು ಶತ್ರುರಾಷ್ಟ್ರ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಜನ ಯಾವುದೇ ಕ್ಷಣದಲ್ಲೂ ಯುದ್ಧ ಸಂಭವಿಸಬಹುದು ಎನ್ನುವ ಆತಂಕದಲ್ಲಿದ್ದಾರೆ. ಒಂದು ವೇಳೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ಬಂಕರ್‌ಗಳನ್ನು ಶುಚಿಗೊಳಿಸುವ ಕೆಲಸ ಶುರು ಮಾಡಿದ್ದಾರೆ. ಸರ್ಕಾರ ಈ ಹಿಂದೆಯೇ ಸಾವಿರಾರು ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳನ್ನು (Community Bunkers) ನಿರ್ಮಿಸಿತ್ತು, ಈಗ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

    ಈ ಕುರಿತು ಮಾತನಾಡಿರುವ ಆರ್‌ಎಸ್ ಪುರ ವಲಯದ ಟ್ರೆವಾ ಗ್ರಾಮದ ಮಾಜಿ ಸರಪಂಚ್ ಬಲ್ಬೀರ್ ಕೌರ್, ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಗಡಿಯಾಚೆಯಿಂದ ಶೆಲ್ ದಾಳಿ ಅಥವಾ ಗುಂಡಿನ ದಾಳಿ ನಡೆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ಸಿದ್ಧಪಡಿಸಲು ನಾವು ನಿರ್ಧರಿಸಿದ್ದೇವೆ. ಮಾಜಿ ಸರಪಂಚ್‌ಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದು, ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ತಿಳಿಸಿದ್ದಾರೆ.

    4,000ಕ್ಕೂ ಹೆಚ್ಚು ಬಂಕರ್‌ಗಳಿಗೆ ಅನುಮೋದನೆ
    ಪಾಕಿಸ್ತಾನದ ಶೆಲ್ ದಾಳಿಯಿಂದ ಗಡಿಯಲ್ಲಿ ವಾಸಿಸುವ ಜನರನ್ನು ರಕ್ಷಿಸಲು, ಕೇಂದ್ರ ಸರ್ಕಾರವು ಡಿಸೆಂಬರ್ 2017 ರಲ್ಲಿ ಜಮ್ಮು, ಕಥುವಾ ಮತ್ತು ಸಾಂಬಾದ ಐದು ಜಿಲ್ಲೆಗಳಲ್ಲಿ 14,460 ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ಬಂಕರ್‌ಗಳು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಹಳ್ಳಿಗಳು ಮತ್ತು ನಿಯಂತ್ರಣ ರೇಖೆಯಲ್ಲಿರುವ ಪೂಂಚ್ ಮತ್ತು ರಾಜೌರಿ ಹಳ್ಳಿಗಳನ್ನು ಒಳಗೊಂಡಿವೆ. ನಂತರ, ಸರ್ಕಾರವು ದುರ್ಬಲ ಜನಸಂಖ್ಯೆಗಾಗಿ 4,000ಕ್ಕೂ ಹೆಚ್ಚು ಬಂಕರ್‌ಗಳನ್ನು ಅನುಮೋದಿಸಿತು.

    3,323 ಕಿಮೀ ಉದ್ದದ ಗಡಿ ಹಂಚಿಕೆ
    ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ 221 ಕಿ.ಮೀ ಅಂತಾರಾಷ್ಟ್ರೀಯ ಗಡಿಯಾಗಿದ್ದು, 744 ಕಿಮೀ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಾಗಿದೆ. 2021 ರಿಂದ ಕದನ ವಿರಾಮ ಉಲ್ಲಂಘನೆಗಳು ಕಡಿಮೆಯಾಗಿದ್ದರೂ, ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

    2020ರಲ್ಲಿ 5,000ಕ್ಕೂ ಹೆಚ್ಚು ಉಲ್ಲಂಘನೆಗಳು
    ಭಾರತ ಮತ್ತು ಪಾಕಿಸ್ತಾನ ಆರಂಭದಲ್ಲಿ 2003 ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು, ಆದರೆ ಪಾಕಿಸ್ತಾನ ಪದೇ ಪದೇ ಒಪ್ಪಂದ ಉಲ್ಲಂಘಿಸುತ್ತಾ ಬಂದಿದೆ. 2020 ರಲ್ಲಿ 5,000ಕ್ಕೂ ಹೆಚ್ಚು ಬಾರಿ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.

  • Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

    Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

    – ಸಹಜ ಸ್ಥಿತಿಗೆ ಮರಳಿದ ಪಹಲ್ಗಾಮ್

    ಶ್ರೀನಗರ: ಪಹಲ್ಗಾಮ್‌ನ (Pahalgam) ಬೈಸರನ್ ವ್ಯಾಲಿಯಲ್ಲಿ (Baisaran Valley) ಭಯೋತ್ಪಾದಕ ದಾಳಿಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಘಟನಾ ಸ್ಥಳದ ಇನ್ನಷ್ಟು ವಿಡಿಯೋಗಳು ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ದಟ್ಟ ಕಾನನದಿಂದ ಒಳ ನುಸುಳಿದ ಉಗ್ರರು, ಮರದಿಂದ ಕೆಳಗಿಳಿದು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    ಅನಂತನಾಗ್ ಜಿಲ್ಲೆಯಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ. ಉಗ್ರರಿಗಾಗಿ ಕಾರ್ಯಾಚರಣೆ ನಡೆಸಿದೆ. ಸೇನಾ ಪಡೆಗಳು ಹುಡುಕಾಡುತ್ತಿವೆ. ಉಗ್ರರ ಸಂಪರ್ಕ ಹಾಗೂ ಹಣಕಾಸಿನ ನೆರವು ನೀಡಿದ್ದ ಅನುಮಾನದ ಮೇಲೆ 170 ಶಂಕಿತರ ವಿಚಾರಣೆ ನಡೆಸಿದೆ. ಇನ್ನು 14 ಉಗ್ರರ ಹೊಸ ಪಟ್ಟಿ ತಯಾರಾಗಿದ್ದು, ಲಷ್ಕರ್, ಜೈಷ್ ಇ ಮೊಹಮ್ಮದ್ ಸಂಘಟನೆಯ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

    ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಒಂದೊಂದು ದೃಶ್ಯಗಳು ಘೋರವಾಗಿದೆ. ಇನ್ನೂ ಕೂಡ ದಾಳಿಯ ಕುರುಹುಗಳು ಇವೆ. ತಾತ್ಕಾಲಿಕ ಟೆಂಟ್‌ನಲ್ಲಿನ ಹೋಟೆಲ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಇದನ್ನೂ ಓದಿ: ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    ಸಹಜ ಸ್ಥಿತಿಗೆ ಬಂದ ಪಹಲ್ಗಾಮ್:
    ಉಗ್ರರ ದಾಳಿಯ ಬಳಿಕ ಪೆಹಲ್ಗಾಮ್ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ರೀ ಓಪನ್ ಆಗಿವೆ. ಭದ್ರತೆ ಕಾರಣಕ್ಕೆ ಕಳೆದ ಎರಡು ದಿನಗಳಿಂದ ಇಡೀ ಪ್ರದೇಶ ಬಂದ್ ಆಗಿತ್ತು. ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಇದನ್ನೂ ಓದಿ: ನಾನು ಭಾರತದ ಸೊಸೆ, ಇಲ್ಲೇ ಇರುತ್ತೇನೆ: ಸೀಮಾ ಹೈದರ್

    ಇನ್ನೂ, ಪ್ರವಾಸಿಗರಿಲ್ಲದೆ ಪಹಲ್ಗಾಮ್ ಬಿಕೋ ಎನ್ನುತ್ತಿದೆ. ಭಯೋತ್ಪಾದಕರ ದಾಳಿ ಬಳಿಕವೂ ಧೈರ್ಯವಾಗಿ ಪಹಲ್ಗಾಮ್‌ನಲ್ಲಿ ಕೆಲವರು ಪ್ರವಾಸ ಕೈಗೊಂಡಿದ್ದಾರೆ. ಪಹಲ್ಗಾಮ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟೂರ್ ಮತ್ತೆ ಆರಂಭವಾಗಿದೆ. ಯಾರೂ ಭಯಪಡಬೇಡಿ, ಬನ್ನಿ ಎಂದು ಹಿರಿಯ ನಾಗರಿಕರು ಸ್ವಾಗತ ಮಾಡಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

  • ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರನ್ನು ಬಗ್ಗು ಬಡಿಯಬೇಕು: ಶಾಸಕ ನಾರಾಯಣಸ್ವಾಮಿ

    ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರನ್ನು ಬಗ್ಗು ಬಡಿಯಬೇಕು: ಶಾಸಕ ನಾರಾಯಣಸ್ವಾಮಿ

    – ಅಮಿಶ್ ಶಾ ಅವರ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ

    ಕೋಲಾರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯನ್ನು (Pahalgam Terror Attack) ಖಂಡಿಸುತ್ತೇನೆ. ನರಮೇಧ ನಡೆಸಿದ ಇಂತಹ ಉಗ್ರರನ್ನು ಬಗ್ಗು ಬಡಿಯಬೇಕು ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಹೇಳಿದ್ದಾರೆ.

    ಬಂಗಾರಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ದೇಶದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ, ಬೇಹುಗಾರಿಕೆ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವ ಅಮಿಶ್ ಶಾ ಅವರ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅವರು ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನೋದು ಇಲ್ಲ. ಇದರಲ್ಲಿ ಧರ್ಮ ಅನ್ನೋದಕ್ಕಿಂತ ಎಲ್ಲರದ್ದು ಜೀವ ಅಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

    ಗೃಹ ಇಲಾಖೆ ವಿಫಲವಾಗಿದೆ. ಹಾಗಾಗಿ ಇಂದಿರಾಗಾಂಧಿ, ನೆಹರು ಕಾಲದಲ್ಲಿ ದೇಶವನ್ನ ರಕ್ಷಣೆ ಮಾಡಿದಂತೆ ಸದ್ಯ ಈಗಲೂ ಕೇಂದ್ರ ಸರ್ಕಾರ ಎಚ್ವೆತ್ತುಕೊಂಡು ಇಂತಹದಕ್ಕೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ