Tag: jammu kashmir

  • ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ನವದೆಹಲಿ: ಮೋದಿ ಕ್ರಮ ಕೂಗೊಳ್ಳಲು ವಿಫಲರಾದ್ರೆ ನಾನೇ ನನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ತೀನಿ ಎಂದು ಕುಪ್ವಾರದಲ್ಲಿ ಹುತಾತ್ಮರಾದ ಯೋಧರೊಬ್ಬರ ತಾಯಿ ಹೇಳಿಕೆ ನೀಡಿದ್ದಾರೆ.

    ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಸೇರಿ ಮೂವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಕ್ಯಾಪ್ಟನ್ ಆಯುಷ್ ಯಾದವ್, ಜೆಸಿಒ ಭೂಪ್ ಸಿಂಗ್ ಗುಜ್ಜರ್ ದುಸ್ಸಾ ಹಾಗೂ ನಾೈಕ್ ವೆಂಕಟ್ ರಮಣ್ ಹುತಾತ್ಮರಾದ ಸೈನಿಕರು. ಇಬ್ಬರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿತ್ತು.

    25 ವರ್ಷದ ಮಗ ಆಯುಷ್ ಯಾದವ್ ಉಗ್ರರ ದಾಳಿಗೆ ಬಲಿಯಾಗಿರೋದ್ರಿಂದ ಮನನೊಂದ ತಾಯಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಯನ್ನ ಒತ್ತಾಯಿಸಿದ್ದಾರೆ. ಒಂದು ವೇಳೆ ಪ್ರಧಾನಿಯವರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ರೆ ನಾನೇ ಮಗನ ಸಾವಿನ ಸೇಡು ತೀರಿಸುತ್ತೇನೆ ಅಂತಾ ತಿಳಿಸಿದ್ದಾರೆ.

    ಆಯುಷ್ ಯಾದವ್ ತಂದೆ ಅರುಣ್ ಕಂಟ್ ಯಾದವ್ ಕೂಡ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದು, ಈ ರೀತಿ ನಮ್ಮ ಮಕ್ಕಳು ಹತ್ಯೆಯಾಗೋದನ್ನ ಎಲ್ಲಿಯತನಕ ನೋಡಿಕೊಂಡಿರಲು ಸಾಧ್ಯ? ಎಂದಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಹೋರಾಟಗಾರರ ಬಗ್ಗೆ ಕಿಡಿಕಾರಿದ ಅವರು, ಇಂತಹ ಘಟನೆಗಳ ಬಗ್ಗೆ ಅವರು ತುಟಿ ಬಿಚ್ಚಲ್ಲ. ಸೈನಿಕರು ಪ್ರತೀಕಾರ ತೀರಿಸಿಕೊಂಡಾಗ ಮಾನವ ಹಕ್ಕುಗಳ ಹೋರಾಟಗಾರರು ದೂರುತ್ತಾರೆ. ಆದ್ರೆ ಈ ಘಟನೆ ಅವರಿಗೇನೂ ಅಲ್ಲ. ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದಾಗ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ, ತನಿಖೆಗಳು ನಡೆಯುತ್ತದೆ, ಕ್ರಮ ಕೈಗೊಳ್ತಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

    ನನ್ನ ಅಣ್ಣನ ಮಗಳು ಮತ್ತು ಆಕೆಯ ಗಂಡ ಇಬ್ಬರೂ ಮೇಜರ್‍ಗಳಾಗಿದ್ದಾರೆ. ನನ್ನ ಮಗ ಬದುಕಿದ್ದರೆ ಮುಂದೊಂದು ದಿನ ಆತನೂ ಮೇಜರ್ ಆಗ್ತಿದ್ದ ಅಂತಾ ಯಾದವ್ ಹೇಳಿದ್ರು.

    ದೇಶದಲ್ಲಿ ಯಾವ ರೀತಿಯ ವಾತಾವರಣ ಇದೆ ಅಂತ ನೀವು ನೋಡಬಹುದು. ಬಲವಾದ ನೀತಿ ಇಲ್ಲದಿದ್ರೆ ಮತ್ತು ಸೂಕ್ತ ಕ್ರಮ ಕೈಗೊಳ್ಳದಿದ್ರೆ ಇದು ಮುಂದುವರೆಯುತ್ತದೆ. ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಏನಾದ್ರೂ ಮಾಡಲೇಬೇಕು. ಬೇರೆ ಯಾರ ಮಕ್ಕಳಿಗೂ ಈ ರೀತಿ ಆಗಬಾರದು ಅಂತ ಯಾದವ್ ಮರುಗಿದ್ರು.

  • ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    – ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಸೇನಾ ನೆಲೆ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ 3 ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಮುಂಜಾನೆ 4 ಗಂಟೆಯ ವೇಳೆಗೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಯೋಧರು ಮತ್ತು ಉಗ್ರರ ಮಧ್ಯೆ 4 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಯೋಧರ ಕಾರ್ಯಾಚರಣೆ ಮುಂದುವರೆದಿದೆ.

    ಕಳೆದ ವರ್ಷ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ನಡೆಸಿದ ದಾಳಿಯಲ್ಲಿ  19 ಯೋಧರು ಹುತಾತ್ಮರಾಗಿದ್ದರು.

  • ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಕೆರೆಯಲ್ಲಿ ಮೀನು ಹಿಡಿಯಲು ಸೇನೆಯ ಗ್ರೆನೇಡ್!- ಸೈನಿಕ ಅರೆಸ್ಟ್

    ಶ್ರೀನಗರ: ಬ್ಯಾಗ್‍ ನಲ್ಲಿ 2 ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    17 ಜಮ್ಮು ಕಾಶ್ಮೀರ ರೈಫಲ್ಸ್ ನ ಗೋಪಾಲ್ ಮುಖಿಯಾ ಬಂಧಿತ ಯೋಧ. ಇವರು ಜಮ್ಮು ಕಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಉರಿ ಸೆಕ್ಟರ್‍ನಲ್ಲಿ ಕಾರ್ಯ ನಿರ್ವಸುತ್ತಿದ್ದಾರೆಂದು ತಿಳಿದುಬಂದಿದೆ. ಗೋಪಾಲ್ ಇಂದು ಬೆಳಿಗ್ಗೆ ದೆಹಲಿಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ ತಪಾಸಣೆ ಮಾಡಿದಾಗ ಗ್ರೆನೇಡ್ ಇರುವುದು ಪತ್ತೆಯಾಗಿದೆ.

    ಯೋಧ ಗೋಪಾಲ್ ದೆಹಲಿಗೆ ಹೋಗಬೇಕಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆಗೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಯೋಧ ಡಾರ್ಜಿಲಿಂಗ್ ಮೂಲದವರಾಗಿದ್ದು, ಗ್ರೆನೇಡ್ ತಗೆದುಕೊಂಡು ಹೋರಟಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಕೆರೆಯಲ್ಲಿ ಸ್ಫೋಟಿಸಿ ಮೀನು ಹಿಡಿಯುವ ಸಲುವಾಗಿ ಗ್ರೆನೇಡ್ ತೆಗೆದುಕೊಂಡು ಹೋಗುತ್ತಿದ್ದುದಾಗಿ ಯೋಧ ಹೇಳಿದ್ದಾರೆಂದು ಸೇನಾ ಮೂಲಗಳಿಂದ ತಿಳಿದುಬಂದಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ವೀಡಿಯೋ: ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

    ವೀಡಿಯೋ: ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ

    ಶ್ರೀನಗರ: ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗ ಭಾರತದಲ್ಲಿ ನಿರ್ಮಾಣವಾಗಿದ್ದು, ಇಂದು ಪ್ರಧಾನಿ ಮೋದಿ ಸುರಂಗವನ್ನು ಉದ್ಘಾಟಿಸಿದ್ದಾರೆ.

    ಪ್ರಧಾನಿ ಮೋದಿ, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ನಿತಿನ್ ಗಡ್ಕರಿ ಬಟ್ಟಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.

    ಈ ಸುರಂಗದ ವಿಶೇಷತೆ ಏನು? ಎಷ್ಟು ಉದ್ದವಿದೆ? ನಿರ್ಮಾಣ ವೆಚ್ಚ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    1. ಎಲ್ಲಿ ನಿರ್ಮಾಣವಾಗಿದೆ?
    ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣವಾಗಿದೆ.

    2. ಎಷ್ಟು ಉದ್ದವಿದೆ?
    ಈ ಸುರಂಗ 9.2 ಕಿ.ಮೀ ಉದ್ದವಿದೆ. ಎರಡು ಟ್ಯೂಬ್‍ಗಳ ಈ ಸುರಂಗ ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿದೆ. ಸುರಂಗದ ಪಕ್ಕದಲ್ಲೇ ಪಾರು ಸುರಂಗ(ಎಸ್ಕೇಪ್ ಟನಲ್) ಕೂಡ ಇದೆ.

    3. ನಿರ್ಮಾಣ ಕಾರ್ಯ ಶುರುವಾಗಿದ್ದು ಯಾವಾಗ?
    2011ರ ಮೇ 23ರಂದು ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ಆರಂಭಿಸಲಾಯ್ತು. ಇದೀಗ 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 2017ರ ಮಾಚ್ 9 ಹಾಗೂ ಮಾರ್ಚ್ 15ರ ನಡುವೆ ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ.

    4. ವೆಚ್ಚ ಎಷ್ಟು?
    ಈ ಯೋಜನೆಗೆ ಸುಮಾರು 2,519 ಕೋಟಿ ರೂ. ವೆಚ್ಚ ಮಾಡಲಾಗಿದೆ.

    5. ಲಾಭ ಏನು?
    * ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರದ ಸಮಯ ಕಡಿಮೆಯಾಗಲಿದ್ದು, ಪ್ರವಾಸಿಗರು ಕಣಿವೆಯನ್ನು ತಲುಪಲು ಅನುಕೂಲವಾಗಲಿದೆ.
    * ಜಮ್ಮುವಿನಿಂದ ಶ್ರೀನಗರಕ್ಕಿರುವ ಪ್ರಯಾಣ ದೂರ 41 ಕಿ.ಮೀ ನಷ್ಟು ಕಡಿಮೆಯಾಗಲಿದೆ.
    * ಸಂಚಾರದ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ.
    * ಪ್ರತಿದಿನ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.
    * ಮಂಜು ಹಾಗೂ ಭೂಕುಸಿತದಿಂದ ಚಳಿಗಾಲದ ಬಹುತೇಕ ಸಮಯ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ರೆ ಇನ್ಮುಂದೆ ಸುರಂಗ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾಗಿದ್ದು, ಕಣಿವೆಯಲ್ಲಿ ವಾಣಿಜ್ಯೋದ್ಯಮಕ್ಕೆ ಉತ್ತೇಜನ ಸಿಗಲಿದೆ.

    6. ವಿಶೇಷತೆ ಏನು?
    ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ.

    7. ಟೋಲ್ ಶುಲ್ಕ ಎಷ್ಟು?
    * ಲೈಟ್ ಮೋಟಾರ್ ವಾಹನಗಳಿಗೆ ಒಂದು ಕಡೆಗೆ ಹೋಗಲು 55 ರೂ. ಕೊಡ್ಬೇಕು. ಹೋಗಿ ವಾಪಸ್ ಬರಲು 85 ರೂ., ಹಾಗೆ 1870 ರೂ. ನೀಡಿದ್ರೆ ಒಂದು ತಿಂಗಳು ಪೂರ್ತಿ ಸಂಚರಿಸಬಹುದು.
    * ಮಿನಿ ಬಸ್‍ಗಳು ಒಂದು ಕಡೆಗೆ ಸಂಚರಿಸಲು 90 ರೂ., ಎರಡೂ ಕಡೆಗೆ 135 ರೂ. ಕೊಡ್ಬೇಕು.
    * ದೊಡ್ಡ ಬಸ್ ಮತ್ತು ಟ್ರಕ್‍ಗಳು ಒಂದು ಕಡೆಗೆ ಸಂಚರಿಸಲು 190 ರೂ ಕೊಡಬೇಕು. ಹಾಗೂ ಎರಡೂ ಕಡೆಯ ಟೋಲ್‍ಗೆ 285 ರೂ. ಕಟ್ಟಬೇಕು.
    * ಸುರಂಗದೊಳಗೆ ವಾಹನಗಳು ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸಬೇಕು. ಲೋ ಬೀಮ್‍ನಲ್ಲಿ ಹೆಡ್‍ಲೈಟ್‍ಗಳನ್ನ ಬಳಸಬೇಕು.
    * ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಸುರಂಗನೊಳಗೆ ಪ್ರವೇಶವಿಲ್ಲ.

    8. ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಯಾವುದು? ಎಲ್ಲಿದೆ?
    ನಾರ್ವೇಯಲ್ಲಿರುವ 24.51 ಕಿ.ಮೀ ಉದ್ದದ ಲೇರ್ಡಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ.

  • ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

    ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

    ನವದೆಹಲಿ: ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗವನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. ಈ ಸುರಂಗದ ವಿಶೇಷತೆ ಏನು? ಎಷ್ಟು ಉದ್ದವಿದೆ? ನಿರ್ಮಾಣ ವೆಚ್ಚ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    1. ಎಲ್ಲಿ ನಿರ್ಮಾಣವಾಗಿದೆ?
    ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣವಾಗಿದೆ.

    2. ಎಷ್ಟು ಉದ್ದವಿದೆ?
    ಈ ಸುರಂಗ 9.2 ಕಿ.ಮೀ ಉದ್ದವಿದೆ. ಎರಡು ಟ್ಯೂಬ್‍ಗಳ ಈ ಸುರಂಗ ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿದೆ. ಸುರಂಗದ ಪಕ್ಕದಲ್ಲೇ ಪಾರು ಸುರಂಗ(ಎಸ್ಕೇಪ್ ಟನಲ್) ಕೂಡ ಇದೆ.

    3. ನಿರ್ಮಾಣ ಕಾರ್ಯ ಶುರುವಾಗಿದ್ದು ಯಾವಾಗ?
    2011ರ ಮೇ 23ರಂದು ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ಆರಂಭಿಸಲಾಯ್ತು. ಇದೀಗ 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 2017ರ ಮಾಚ್ 9 ಹಾಗೂ ಮಾರ್ಚ್ 15ರ ನಡುವೆ ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ.

    4. ವೆಚ್ಚ ಎಷ್ಟು?
    ಈ ಯೋಜನೆಗೆ ಸುಮಾರು 2,519 ಕೋಟಿ ರೂ. ವೆಚ್ಚ ಮಾಡಲಾಗಿದೆ.

    5. ಲಾಭ ಏನು?
    * ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರದ ಸಮಯ ಕಡಿಮೆಯಾಗಲಿದ್ದು, ಪ್ರವಾಸಿಗರು ಕಣಿವೆಯನ್ನು ತಲುಪಲು ಅನುಕೂಲವಾಗಲಿದೆ.
    * ಜಮ್ಮುವಿನಿಂದ ಶ್ರೀನಗರಕ್ಕಿರುವ ಪ್ರಯಾಣ ದೂರ 41 ಕಿ.ಮೀ ನಷ್ಟು ಕಡಿಮೆಯಾಗಲಿದೆ.
    * ಸಂಚಾರದ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ.
    * ಪ್ರತಿದಿನ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.
    * ಮಂಜು ಹಾಗೂ ಭೂಕುಸಿತದಿಂದ ಚಳಿಗಾಲದ ಬಹುತೇಕ ಸಮಯ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ರೆ ಇನ್ಮುಂದೆ ಸುರಂಗ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾಗಿದ್ದು, ಕಣಿವೆಯಲ್ಲಿ ವಾಣಿಜ್ಯೋದ್ಯಮಕ್ಕೆ ಉತ್ತೇಜನ ಸಿಗಲಿದೆ.

    6. ವಿಶೇಷತೆ ಏನು?
    ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ.

    7. ಟೋಲ್ ಶುಲ್ಕ ಎಷ್ಟು?
    * ಲೈಟ್ ಮೋಟಾರ್ ವಾಹನಗಳಿಗೆ ಒಂದು ಕಡೆಗೆ ಹೋಗಲು 55 ರೂ. ಕೊಡ್ಬೇಕು. ಹೋಗಿ ವಾಪಸ್ ಬರಲು 85 ರೂ., ಹಾಗೆ 1870 ರೂ. ನೀಡಿದ್ರೆ ಒಂದು ತಿಂಗಳು ಪೂರ್ತಿ ಸಂಚರಿಸಬಹುದು.
    * ಮಿನಿ ಬಸ್‍ಗಳು ಒಂದು ಕಡೆಗೆ ಸಂಚರಿಸಲು 90 ರೂ., ಎರಡೂ ಕಡೆಗೆ 135 ರೂ. ಕೊಡ್ಬೇಕು.
    * ದೊಡ್ಡ ಬಸ್ ಮತ್ತು ಟ್ರಕ್‍ಗಳು ಒಂದು ಕಡೆಗೆ ಸಂಚರಿಸಲು 190 ರೂ ಕೊಡಬೇಕು. ಹಾಗೂ ಎರಡೂ ಕಡೆಯ ಟೋಲ್‍ಗೆ 285 ರೂ. ಕಟ್ಟಬೇಕು.
    * ಸುರಂಗದೊಳಗೆ ವಾಹನಗಳು ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸಬೇಕು. ಲೋ ಬೀಮ್‍ನಲ್ಲಿ ಹೆಡ್‍ಲೈಟ್‍ಗಳನ್ನ ಬಳಸಬೇಕು.
    * ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಸುರಂಗನೊಳಗೆ ಪ್ರವೇಶವಿಲ್ಲ.

    8. ಉದ್ಘಾಟನೆ ಯಾವಾಗ?
    ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ.

    9. ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಯಾವುದು? ಎಲ್ಲಿದೆ?
    ನಾರ್ವೇಯಲ್ಲಿರುವ 24.51 ಕಿ.ಮೀ ಉದ್ದದ ಲೇರ್ಡಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ.

  • ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 3 ಯೋಧರು ಬಲಿ, ಮಹಿಳೆ ಸಾವು

    ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 3 ಯೋಧರು ಬಲಿ, ಮಹಿಳೆ ಸಾವು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು, ದಾಳಿ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ಶೋಪಿಯಾನ್ ಜಿಲ್ಲೆಯ ಕುಂಗೋ ಗ್ರಾಮದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಗಿಸಿ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಸೇನಾ ಪಡೆಯ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡಿದೆ. ಹೀಗೆ ಉಗ್ರರು ಮತ್ತು ಸೈನಿಕ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮನೆಯೊಳಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, 6 ಜನರಿಗೆ ಗಾಯವಾಗಿದೆ. ಈ ಮಧ್ಯೆ ಕತ್ತಲೆಯಲ್ಲಿ ಉಗ್ರರು ತಪ್ಪಿಸಿಕೊಂಡಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಕಳೆದ ಮೂರು ವಾರಗಳಲ್ಲಿ ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗಳಲ್ಲಿ ಇದು ನಾಲ್ಕನೇ ದೊಡ್ಡ ದಾಳಿಯಾಗಿದೆ. ದಾಳಿ ನಡೆಯುತ್ತಿದ್ದಂತೆಯೇ ಸ್ಥಳದ ಸುತ್ತಲೂ ಸೇನಾ ಪಡೆ ಸುತ್ತುವರೆದಿದ್ದು, ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.

  • ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

    ನವದೆಹಲಿ: ಕಳೆದ ವರ್ಷ ಉರಿ ಸೇನಾನೆಲೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳೊಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಯೋಧರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ನೀಡಿದೆ. ಆದ್ರೆ 19 ಮಂದಿ ಯೋಧರ ಬಗ್ಗೆ ಮಾಹಿತಿಗಳನ್ನ ನೀಡಿರಲಿಲ್ಲ. ಈಗ ವೀರ ಯೋಧರ ಬಗ್ಗೆ ಮಾಹಿತಿ ಹೊರಬಂದಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್‍ಗೆ ಹೆದರಿ ಪಿಓಕೆಯಿಂದ ಕಾಲ್ಕಿತ್ತ 300 ಉಗ್ರರು

    ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 4 ಹಾಗೂ 9ನೇ ಪ್ಯಾರಾ ರೆಜಿಮೆಂಟ್‍ನ ಒಬ್ಬರು ಕರ್ನಲ್, ಐವರು ಮೇಜರ್, ಇಬ್ಬರು ಕ್ಯಾಪ್ಟನ್, ಒಬ್ರು ಸುಬೇದಾರ್, ಇಬ್ಬರು ನೈಬ್ ಸುಬೇದಾರ್, ಮೂವರು ಹವಾಲ್ದಾರ್, ಒಬ್ರು ಲ್ಯಾನ್ಸ್ ನಾಯ್ಕ್, ನಾಲ್ವರು ಪ್ಯಾರಟ್ರೂಪರ್ಸ್ ಸೇರಿ ಒಟ್ಟು 19 ಮಂದಿ ಭಾಗಿಯಾಗಿದ್ದರು ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ

    ಈ ದಾಳಿಯಲ್ಲಿ ಮೇಜರ್ ರೋಹಿತ್ ಸೂರಿಯದ್ದೇ ಮುಖ್ಯ ಪಾತ್ರ. ಉರಿ ದಾಳಿಗೆ ಸೇಡು ತೀರಿಸಿಕೊಳ್ಳೋಕೆ ಸ್ಕೆಚ್ ಹಾಕಿದ್ದ ನಮ್ಮ ಸೇನೆ ಸೆಪ್ಟೆಂಬರ್ 29ರಂದು ಅಮಾವಾಸ್ಯೆ ರಾತ್ರಿ ಸರ್ಜಿಕಲ್ ಸ್ಟ್ರೈಕ್‍ಗೆ ಮುಹೂರ್ತ ಫಿಕ್ಸ್ ಮಾಡಿದ್ರು. 8 ಮಂದಿ ಯೋಧರ ಜೊತೆ ತೆರಳಿದ್ದ ಸೂರಿ, ಉಗ್ರರ ಗುಂಡಿಗೆಗೆ ಪಿಸುಗುಟ್ಟುವ ದೂರದಿಂದಲೇ ಗುಂಡು ಹೊಕ್ಕಿಸಿದ್ದರು. ಯಾವುದೇ ಕ್ಷಣದಲ್ಲೂ ತನ್ನ ಜೊತೆಗಿದ್ದವರ ಪ್ರಾಣಕ್ಕೆ ಸಂಚಕಾರ ಎದುರಾಗದಂತೆ ಹಾಗೂ ಉಗ್ರರು ಮೇಲ್ಗೈ ಸಾಧಿಸಲು ಆಸ್ಪದ ನೀಡದಂತೆ ಸರ್ಜಿಕಲ್ ಸ್ಟ್ರೈಕ್‍ನ ಯಶಸ್ವಿಯಾಗಿ ಮುಗಿಸಿದ್ರು. ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ, ಕರ್ನಲ್ ಹರ್‍ಪ್ರೀತ್ ಸಂಧು ಅವಧಿಗೆ ಯುದ್ಧ ಸೇವಾ ಪದಕ ಸಿಕ್ಕಿದೆ.

    ಇದನ್ನೂ ಓದಿ: ಆ 4 ಗಂಟೆಗಳ ಆಪರೇಷನ್ ಟೆರರ್ ಕಾರ್ಯಾಚರಣೆ ನಡೆದಿದ್ದು ಹೀಗೆ…

    ಸರ್ಜಿಕಲ್ ಸ್ಟ್ರೈಕ್ ತುಂಬಾ ಕಠಿಣವಾಗಿದ್ದು, ಉಗ್ರರು ಸಹ ಗುಂಡಿನ ದಾಳಿ ನಡೆಸಿದ್ದರು. ಅಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನ ಬಳಸಿದ್ದ ಭಾರತೀಯ ಯೋಧರು ಉಗ್ರರ ಅಡುಗುತಾಣಗಳನ್ನ ಧ್ವಂಸ ಮಾಡಿದ್ದರು.

    ಇದನ್ನೂ ಓದಿ: ಏನಿದು ಸರ್ಜಿಕಲ್ ಕಾರ್ಯಾಚರಣೆ? ಹೇಗೆ ನಡೆಯುತ್ತದೆ?

  • ತಾಯಿಯ ಶವವನ್ನು ಹೊತ್ತು ಹಿಮದ ಮೇಲೆಯೇ 30 ಕಿ.ಮೀ ನಡೆದ ಭಾರತೀಯ ಯೋಧ!

    ನವದೆಹಲಿ: ಭಾರತೀಯ ಸೇನಾ ಯೋಧರೊಬ್ಬರು ದಟ್ಟವಾದ ಹಿಮದ ರಾಶಿಯನ್ನು ಲೆಕ್ಕಿಸದೆ 10 ಗಂಟೆಯಲ್ಲಿ ಸುಮಾರು 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಂತಹ ಮನಕಲಕುವ ಘಟನೆ ನಡೆದಿದೆ.

    ಏನಿದು ಘಟನೆ?: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ತಹಸಿಲ್ ಪ್ರಾಂತ್ಯದ ಮೊಹಮದ್ ಅಬ್ಬಾಸ್ ಎಂಬ ಯೋಧ ಪಂಜಾಬಿನ ಪಠಣ್‍ಕೋಟ್‍ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಚಳಿ ಹೆಚ್ಚಿರುವ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿಯನ್ನು ಪಠಾಣಕೋಟ್‍ಗೆ ಕರೆಸಿದ್ದರು. ಆದ್ರೆ ವಾರದ ಹಿಂದೆ ಅಬ್ಬಾಸ್ ಅವರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮರುದಿನ ಸೇನೆಯು ತಾಯಿಯ ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದೆ. ಬಳಿಕ ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ದಟ್ಟವಾದ ಹಿಮದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಯೋಧ ಮತ್ತೆ ಸ್ಥಳೀಯ ಆಡಳಿತದ ಸಹಾಯವನ್ನು ಬಯಸಿದ್ದರು. ಆದ್ರೆ ಪರಿಸ್ಥಿತಿ ಕ್ಲಿಷ್ಟವಾಗಿದ್ದರಿಂದ ಸೇನೆಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಕುಪ್ವಾರಾದವರೆಗೆ ಹೇಗಾದ್ರೂ ಮಾಡಿ ಅಬ್ಬಾಸ್ ತಾಯಿಯ ದೇಹವನ್ನು ತಂದಿದ್ದರು. ಆದ್ರೆ ಅಲ್ಲಿಂದ ಅವರ ಸ್ವಗ್ರಾಮಕ್ಕೆ 30 ಕಿ.ಮಿ. ದೂರವಿದೆ. ಈ ಗ್ರಾಮವು ಎತ್ತರದಲ್ಲಿರುವುದರಿಂದ ಅಲ್ಲಿಗೆ ವಾಹನ ಸಂಚರಿಸುತ್ತಿಲ್ಲ. ಹೀಗಾಗಿ ಈ ಕೆಟ್ಟ ಪರಿಸ್ಥಿಯಲ್ಲೂ ತನ್ನ ಹಠ ಬಿಡೆದೆ ಕೊರೆಯುವ ಚಳಿಯಲ್ಲಿಯೂ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾರೆ.

    ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಹಾಗೂ ಸ್ಥಳೀಯರು ಅಬ್ಬಾಸ್ ಸಹಾಯಕ್ಕೆ ಧಾವಿಸಿದ್ದಾರೆ. `ಸೇನೆಯವರು ಹೆಲಿಕಾಪ್ಟರ್ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಅಂತಾ ಅಬ್ಬಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರ ಈ ಆರೋಪವನ್ನು ಸೇನೆ ತಳ್ಳಿಹಾಕಿದೆ.

    ಒಟ್ಟಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ತಾಯಿಯ ಅಂತ್ಯಸಂಸ್ಕಾರ ವನ್ನು ಗುರುವಾರ ಸಂಜೆ ಸ್ವಗ್ರಾಮದಲ್ಲೇ ಅಬ್ಬಾಸ್ ನೆರವೇರಿಸಿದ್ದಾರೆ.