Tag: jammu kashmir

  • ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಚಿಕ್ಕೋಡಿ: ಅನಾರೋಗ್ಯ ಕಾರಣದಿಂದ ರಜೆಗೆ ಬಂದಿದ್ದ ಯೋಧ ಸಾವನ್ನಪ್ಪಿದ್ದಾರೆ. ಪರಿಣಾಮ ಸರ್ಕಾರಿ ಸಕಲ ಗೌರದೊಂದಿಗೆ ಸಂಜೆ ಅಂತಿಮ ನಮನ ಸಲ್ಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.

    ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಲಗೌಡ ಹಡಗಿನಾಳ. ಕಳೆದ ಮಾರ್ಚ 20 ರಂದು ಎರಡು ತಿಂಗಳ ರಜೆಯ ಮೇಲೆ ಸ್ವಗ್ರಾಮ ಬೆಳಗಾವಿ ಗ್ರಾಮಕ್ಕೆ ಬಂದಿದ್ದರು. ಭಾನುವಾರ ರಾತ್ರಿ ಮನೆಯಲ್ಲಿದ್ದ ಕಲಗೌಡರಿಗೆ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಬೆಳವಿ ಸೇನೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಗೌಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ವೇಯ್ಟ್‌ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ

    ಅಣ್ಣ-ತಮ್ಮ ಇಬ್ಬರು ಯೋಧರು
    ರೈತ ಕುಟುಂಬದಿಂದ ಬೆಳೆದ ಯೋಧ ಕಲಗೌಡ ಭೀಮಪ್ಪ ಹಡಗಿನಾಳ ಕಳೆದ(2014) ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಸಹೋದರ ಮಲ್ಲಪ್ಪ ಕೂಡ ಭಾರತೀಯ ಸೇನೆಯ ಆಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಲಗೌಡ ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

    ಬೆಳವಿ ಗ್ರಾಮ ಪಂಚಾಯತಿ ಆವರಣದಲ್ಲಿ ವೀರಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿದ್ದರಿಂದ ಸಾರ್ವಜನಿಕರು ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.

    ಪುಷ್ಪ ನಮನ ಸಲ್ಲಿಸಿದ ಗಣ್ಯರು
    ಅಲಂಕೃತಗೊಂಡ ವಾಹನದಲ್ಲಿ ಯೋಧ ಕಲಗೌಡ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು. ಕಲಗೌಡ ‘ಅಮರ್ ರಹೇ’ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯತಿ ಚೇರಮನ್ ಜಯಶ್ರೀ ಸತ್ಯಾಯಿಗೋಳ ಹಿರಿಯ ಸದಸ್ಯರಾದ ರಮೇಶ್ ಕುಲಕರ್ಣಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಡಿಓ ಶೋಭಾ, ತಳವಾರ ಗ್ರಾಮ ಲೆಕ್ಕಾಧಿಕಾರಿ ಶಾನೂರ ಮುಲ್ತಾನಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಬನ್ನಕಗೋಳ ಗ್ರಾಮದ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾ

    ಯೋಧನ ಸ್ವತೋಟದಲ್ಲಿ ಅಂತಿಮ ಗೌರವ ನಮನ ನಡೆಯಿತು. ಗ್ರಾಮದ ಜನರು, ಹಾಲಿ, ಮಾಜಿ ಸೈನಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸೈನಿಕರು ಪಾಲ್ಗೊಂಡಿದ್ದರು.

  • ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    ಅಮರನಾಥ ಯಾತ್ರೆ – ಕೇಂದ್ರ ಗೃಹ ಇಲಾಖೆಯಿಂದ ಭದ್ರತಾ ಪರಿಶೀಲನೆ

    ನವದೆಹಲಿ: ಜೂನ್ 30 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯ ಭದ್ರತೆಯ ಬಗ್ಗೆ ಕೇಂದ್ರ ಗೃಹ ಇಲಾಖೆ ಪರಿಶೀಲನಾ ಸಭೆ ನಡೆಸಿದೆ. ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಯಾತ್ರೆಗೆ ನಿಯೋಜಿಸಿರುವ ಭದ್ರತೆಯ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.

    ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ತೆರಳಿದ್ದ ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ್ ಕುಮಾರ್ ಶುಕ್ರವಾರ ಅಜಯ್ ಕುಮಾರ್ ಭಲ್ಲಾ ಜೊತೆಗೆ ಮೊದಲ ಹಂತದ ಸಭೆ ನಡೆಸಿದರು. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡನೇ ಸಭೆ ನಡೆಯಲಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೆ‌ಎನ್‌ಯು ಕ್ಯಾಂಪಸ್ ಬಳಿ ಕೇಸರಿ ಧ್ವಜ ಹಾರಿಸಿದ ಹಿಂದೂ ಸೇನೆ

    ಅಮರನಾಥ ಯಾತ್ರೆಗೆ ಭದ್ರತೆ ಮುಖ್ಯವಾಗಿದ್ದು, ಭಯೋತ್ಪಾದನೆ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆ ಭದ್ರತಾ ಪಡೆಗಳ ನಿಯೋಜನೆ ಬಗ್ಗೆ ಇಂದಿನ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು ಎನ್ನಲಾಗಿದ್ದು, ಸಭೆಯಲ್ಲಿ ಕಾಶ್ಮೀರ ಪೊಲೀಸ್ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

    ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರದ್ದು ಮಾಡಲಾಗಿದ್ದ ಅಮರನಾಥ ಯಾತ್ರೆಗೆ ಮತ್ತೆ ಚಾಲನೆ ನೀಡಿದ್ದು, ಏಪ್ರಿಲ್ 11 ರಿಂದ ಯಾತ್ರೆಗೆ ಭಕ್ತಾದಿಗಳ ನೋಂದಣಿ ಆರಂಭವಾಗಿದೆ. ಜೂನ್ 30 ರಿಂದ ಅಗಸ್ಟ್ 11 ವರೆಗೂ ಯಾತ್ರೆ ನಡೆಸಲು ತಿರ್ಮಾನಿಸಲಾಗಿದ್ದು, ಯಾತ್ರೆ ಕೈಗೊಳ್ಳುವ ಭಕ್ತಾದಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಒಮ್ಮೆ ನಡೆಸುವ ವ್ಯಭಿಚಾರಕ್ಕಾಗಿ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

    ಶ್ರೈನ್ ಬೋರ್ಡ್‌ನ ವೆಬ್‌ಸೈಟ್ ಅಥವಾ ಮೂಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಈ ವರ್ಷ ಮೂರು ಲಕ್ಷ ಜನರು ಯಾತ್ರೆ ಮಾಡುವ ನಿರೀಕ್ಷೆಯಿದೆ. ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ 3,000 ಜನರು ಉಳಿದುಕೊಳ್ಳಲು ವ್ಯವಸ್ಥೆ ಇರುವ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದ್ದು ಅಲ್ಲಿ ಭಕ್ತಾಧಿಗಳು ತಂಗಲು ಅವಕಾಶ ಮಾಡಿಕೊಡಲಾಗಿದೆ.

  • ಸ್ವಾತಂತ್ರ ಪಡೆದ 75 ವರ್ಷಗಳ ನಂತ್ರ ಈ ಹಳ್ಳಿಗೆ ಸಿಕ್ತು ಕತ್ತಲೆಯಿಂದ ಮುಕ್ತಿ

    ಸ್ವಾತಂತ್ರ ಪಡೆದ 75 ವರ್ಷಗಳ ನಂತ್ರ ಈ ಹಳ್ಳಿಗೆ ಸಿಕ್ತು ಕತ್ತಲೆಯಿಂದ ಮುಕ್ತಿ

    ಶ್ರೀನಗರ: ಸ್ವಾತಂತ್ರ್ಯದ 75 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರದ ಗ್ರಾಮ ಸದ್ದಲ್‍ಗೆ ಕೇಂದ್ರ ಸರ್ಕಾರದ ‘ಅನ್ಟೈಡ್ ಗ್ರ್ಯಾಂಟ್ಸ್ ಸ್ಕೀಮ್’ ಅಡಿಯಲ್ಲಿ ಬುಧವಾರ ಮೊದಲ ಬಾರಿಗೆ ವಿದ್ಯುತ್ ಪಡೆಯುವ ಮೂಲಕ ಕತ್ತಲೆಯಿಂದ ಮುಕ್ತಿ ದೊರೆತಿದೆ.

    ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ಈ ಗ್ರಾಮದ ನಿವಾಸಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯಕ್ಕಾಗಿ ಆಶಾಭಾವನೆ ಮೂಡಿಸಿದ್ದಾರೆ. ಮೊದಲು, ಹಳ್ಳಿಯಲ್ಲಿ ಸಂಜೆಯ ಸಮಯದಲ್ಲಿ ಬೆಳಕಿನ ಏಕೈಕ ಮೂಲವೆಂದರೆ ಮೇಣದಬತ್ತಿಗಳು ಮತ್ತು ಎಣ್ಣೆ ದೀಪಗಳು, ಅದು ಕ್ರಮೇಣ ಅವರ ದೈನಂದಿನ ಜೀವನದ ಭಾಗವಾಯಿತು. ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್

    ಈ ಕಾರ್ಯಾಚರಣೆಯ ಯಶಸ್ಸಿಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಗ್ರಾಮಸ್ಥರು ಮನ್ನಣೆ ನೀಡಿದ್ದಾರೆ. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಉಧಮ್‍ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಮಕ್ಕಳು ಕೃತಜ್ಞರಾಗಿದ್ದಾರೆ. ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

    8 ನೇ ತರಗತಿ ವಿದ್ಯಾರ್ಥಿನಿ ಪ್ಯಾರ್ ಸಿಂಗ್ ಅನ್ನುವವರು ಮಾತನಾಡಿ, ಈಗ ನಾವು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಓದುತ್ತೇವೆ. ಈ ಹಿಂದೆ ವಿದ್ಯುತ್ ಇಲ್ಲದ ಕಾರಣ ಎಣ್ಣೆ ದೀಪ ಹಚ್ಚಿಕೊಂಡು ಓದಬೇಕಾಗಿತ್ತು. ಇದರಿಂದ ನಮಗೆ ಹೆಚ್ಚು ಬೇಸರ ತರಿಸುತ್ತಿತು ಎಂದರು. 72 ವರ್ಷದ ತಾತ ಬದರಿನಾಥ್ ಅವರು, ಮಾತನಾಡಿ, ಹಿಂದಿನ ಪೀಳಿಗೆಯವರಂತು ವಿದ್ಯುತ್ ಪವಾಡವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟು ಸುದೀರ್ಘ ಕಾಯುವಿಕೆಯ ನಂತರ ನಮಗೆ ವಿದ್ಯುತ್ ಒದಗಿಸಿದ ಇಲಾಖೆಗೆ ಇಂದು ನಾವು ಕೃತಜ್ಞರಾಗಿರುತ್ತೇವೆ ಎಂದು ಖುಷಿಪಟ್ಟರು.

    BRIBE

    ಎಕ್ಸಿಕ್ಯೂಟಿವ್ ಇಂಜಿನಿಯರ್ (ಎಕ್ಸ್‌ಇಎನ್), ಪವರ್ ಡೆವಲಪ್‍ಮೆಂಟ್ ಡಿಪಾರ್ಟ್‍ಮೆಂಟ್ (ಪಿಡಿಡಿ) ಉಧಮ್‍ಪುರ್ ಜಾವೇದ್ ಹುಸೇನ್ ಅಖ್ತರ್ ಮಾತನಾಡಿ, ಗ್ರಾಮ ಸದ್ದಲ್ ಭಾರತ ಸರ್ಕಾರದ ನಿರ್ದೇಶನಗಳೊಂದಿಗೆ ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದೆ. ಇದಕ್ಕೆ 10.28 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದರು.

    ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, 25 ಕೆವಿಎ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದ ನಂತರ ಗ್ರಾಮದ ಸುಮಾರು 25 ಮನೆಗಳು ಪ್ರಯೋಜನ ಪಡೆದಿವೆ. ಇದು ಜಿಲ್ಲೆಯ ವಿದ್ಯುತ್ ವಲಯದಿಂದ ಐತಿಹಾಸಿಕ ಸಾಧನೆಯಾಗಿದೆ. ಉಧಂಪುರದ ಪಂಚರಿ ತಹಸಿಲ್‍ನಲ್ಲಿರುವ ಪಂಚಾಯತ್ ಹಲ್ಕಾ ಕುಲ್ತ್ಯಾರ್ ಬಾಳದ ವಾರ್ಡ್ ಸಂಖ್ಯೆ 5ರ ಅಡಿಯಲ್ಲಿ ಈ ಗ್ರಾಮವು ಬರುತ್ತದೆ.

  • ಕಾಶ್ಮೀರ ಪಂಡಿತರ ಹತ್ಯಾಕಾಂಡ – ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಿ: ರಾಷ್ಟ್ರಪತಿಗಳಿಗೆ ಪತ್ರ

    ಕಾಶ್ಮೀರ ಪಂಡಿತರ ಹತ್ಯಾಕಾಂಡ – ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಿ: ರಾಷ್ಟ್ರಪತಿಗಳಿಗೆ ಪತ್ರ

    ನವದೆಹಲಿ: ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಕಾಶ್ಮೀರ ಪಂಡಿತರ ಹತ್ಯಾಕಾಂಡದ ಬಗ್ಗೆ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ.

    1990ರಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಕರಣ ತೆರೆದು ವಿಶೇಷ ತನಿಖಾ ತಂಡದಿಂದ(ಎಸ್‌ಐಟಿ) ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

    33 ವರ್ಷಗಳ ಹಿಂದೆ ನಡೆದ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ವಿಷಯಗಳ ಮರು ತನಿಖೆ ನಡೆಸಬಹುದಾದರೆ, 27 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತರ ಪ್ರಕರಣಗಳನ್ನೂ ಸಹ ಮತ್ತೆ ತನಿಖೆ ನಡೆಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆಯ ಸಂತ್ರಸ್ತರು, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಆಘಾತದ ಸ್ಥಿತಿಯಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿದ್ದರಿಂದ ಅವರು ತಮಗೆ ಆಗಿರುವ ಅನ್ಯಾಯಗಳ ಬಗ್ಗೆ ದೂರುಗಳನ್ನು ದಾಖಲಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಈಗ ಅವರ ಹೇಳಿಕೆಗಳನ್ನು ದಾಖಲಿಸಿ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು

    ಅರ್ಜಿ ವಜಾಗೊಂಡಿತ್ತು:
    1989-90ರಲ್ಲಿ ಕಣಿವೆಯಲ್ಲಿ ಉಗ್ರಗಾಮಿಗಳ ಅಟ್ಟಹಾಸ ಉತ್ತುಂಗದಲ್ಲಿದ್ದ ಸಮಯದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ, ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಸೇರಿದಂತೆ ವಿವಿಧ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವಂತೆ ಕೋಟಿ ಸಲ್ಲಿಸಲಾದ ಮನವಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

    ಅಂದಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಅವರ ಪೀಠ, ಪ್ರಕರಣ ನಡೆದು ಸುಮಾರು 27 ವರ್ಷಗಳು ಕಳೆದಿವೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಕಾರಣವಾದ ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ

    SUPREME COURT

    27 ವರ್ಷದವರೆಗೆ ನೀವು ಸುಮ್ಮನಿದ್ದೀರಿ. ಈಗ ಸಾಕ್ಷ್ಯವು ಎಲ್ಲಿಂದ ಬರುತ್ತದೆ ಎಂದು ನಮಗೆ ತಿಳಿಸಿ ಎಂದು ಪೀಠ ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿತ್ತು.

    ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು,  ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ.

  • ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ

    ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ

    ಶ್ರೀನಗರ: ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

    ಶ್ರೀನಗರದ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಿಆರ್‌ಪಿಎಫ್‌ನ 83ನೇ ರೈಸಿಂಗ್ ಡೇ ಪರೇಡ್‍ನಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಬೃಹತ್ ಭದ್ರತಾ ನಿಯೋಜನೆಯನ್ನು ತೆಗೆದುಹಾಕಲು ಉನ್ನತ ಮಟ್ಟದಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಪ್ರಯತ್ನಿಸುತ್ತಿದೆ. ಇದು ಕೆಲವೇ ವರ್ಷಗಳಲ್ಲಿ ಈಡೇರಿಸಲಿದೆ ಎಂದು ಭರವಸೆ ನೀಡಿದರು.

    ಸಿಆರ್‌ಪಿಎಫ್ ಯೋಧರ ಶ್ರಮದಿಂದಾಗಿ ಇನ್ನೂ ಕೆಲವೇ ವರ್ಷಗಳಲ್ಲಿ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಮೂರು ಪ್ರದೇಶಗಳಲ್ಲೂ ಸಿಆರ್‌ಪಿಎಫ್ ಅಗತ್ಯವಿಲ್ಲದೇ ನಾವು ಸಂಪೂರ್ಣವಾಗಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಇದರ ಸಂಪೂರ್ಣ ಪ್ರಶಂಸೆಯೂ ಸಿಆರ್‌ಪಿಎಫ್ ಯೋಧರಿಗೆ ಸಲ್ಲುತ್ತದೆ ಎಂದರು. ಇದನ್ನೂ ಓದಿ: RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

    ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಸಿಆರ್‌ಪಿಎಫ್ ನಿಯಂತ್ರಣ ತೆಗೆದುಕೊಂಡಿದೆ. ಇದು ಯೋಧರು ಜಮ್ಮು- ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಪ್ರಶಂಸಿದರು. ಇದನ್ನೂ ಓದಿ: ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

    ಕಾಶ್ಮೀರದಲ್ಲಿ ಸಿಆರ್‌ಪಿಎಫ್ ದೊಡ್ಡ ಅಸ್ತಿತ್ವವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಸಿಆರ್‌ಪಿಎಫ್ ಸ್ಥಳೀಯ ಪೊಲೀಸರಲ್ಲದೇ, ಸೇನೆ, ಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಬಿ ಸಹ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯ ಸಿಆರ್‌ಪಿಎಫ್ ಪ್ರಧಾನ ಕಚೇರಿಯ ಹೊರಗೆ ಪರೇಡ್ ನಡೆಯುತ್ತಿದೆ.

  • ಕಾಶ್ಮೀರ್ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಜೆಡಿಎಸ್‌ ಶಾಸಕರ ನಿರಾಸಕ್ತಿ

    ಕಾಶ್ಮೀರ್ ಫೈಲ್ಸ್‌ ಸಿನಿಮಾ ವೀಕ್ಷಣೆಗೆ ಜೆಡಿಎಸ್‌ ಶಾಸಕರ ನಿರಾಸಕ್ತಿ

    ಬೆಂಗಳೂರು: ದಿ ಕಾಶ್ಮೀ‌ರ್‌ ಫೈಲ್ಸ್ ಸಿನಿಮಾ ನೋಡಲು ಜೆಡಿಎಸ್ ಬಹುತೇಕ ಶಾಸಕರು ನಿರಾಸಕ್ತಿ ತೋರಿಸಿದ್ದಾರೆ.

    ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ವೀಕ್ಷಣೆಗೆ ನಿರಾಸಕ್ತಿ ತೋರಿದ್ದಾರೆ.

    ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯಾಕಾಂಡ ಕುರಿತ ಚಿತ್ರ ʼದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗೆ ಮಂಗಳವಾರ ವಿಧಾನಸಭೆ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ವಿಧಾನಸಭೆ ಕಲಾಪದಲ್ಲಿಂದು ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದರು. ಆಡಳಿತ ಮತ್ತು ವಿಪಕ್ಷಗಳ ಸದಸ್ಯರಿಗೆ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದರು. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ

    ಸಂಜೆ 6:45 ಕ್ಕೆ ಮಂತ್ರಿ ಮಾಲ್‍ನಲ್ಲಿ ಶಾಸಕರಿಗೆ ಸಿನಿಮಾ ವೀಕ್ಷಣೆಗೆ ವಿಧಾನಸಭೆ ಸಚಿವಾಲಯದಿಂದ ವ್ಯವಸ್ಥೆ ಮಾಡಲಾಗಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಸ್ಪೀಕರ್ ಕಾಗೇರಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಶಾಸಕರು ಹಾಗೂ ಸಚಿವರು ಸಿನಿಮಾ ವೀಕ್ಷಿಸಲು ಬರಬೇಕು. ಎಲ್ಲರೂ ಜೊತೆಗೂಡಿ ನೋಡೋಣ. ವಿರೋಧ ಪಕ್ಷಗಳ ಸದಸ್ಯರೂ ಸಿನಿಮಾ ನೋಡಲು ಬರಬೇಕು ಎಂದು ಸ್ಪೀಕರ್ ಆಹ್ವಾನ ನೀಡಿದರು. ಭಾನುವಾರ ಸಿಎಂ ಬೊಮ್ಮಾಯಿ ಹಾಗೂ ಸಚಿವ ಮುನಿರತ್ನ ಸಹ ಸಿನಿಮಾ ವೀಕ್ಷಣೆ ಮಾಡಿದರು. ಬಳಿಕ ಸಿಎಂ ಈ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ ಘೋಷಣೆ ಮಾಡಿದರು. ಇದನ್ನೂ ಓದಿ: ಏನದು ಸಿನಿಮಾ? ನಾನು ಹೋಗಲ್ಲ: ಸ್ಪೀಕರ್‌ ಆಹ್ವಾನ ತಿರಸ್ಕರಿಸಿದ ಸಿದ್ದು

  • ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ

    ಶ್ರೀನಗರ: ಉತ್ತರ ಕಾಶ್ಮೀರದ ಬಂಡೀಪೊರಾದಲ್ಲಿ ಸೇನಾ ಚೀತಾ ಹೆಲಿಕಾಪ್ಟರ್ ಪತನವಾಗಿದೆ. ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಿದ್ದ ಪೈಲಟ್ ಹಾಗೂ ಸಹ ಪೈಲಟ್ ಅನ್ನು ರಕ್ಷಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೇನಾ ಚೀತಾ ಹೆಲಿಕಾಪ್ಟರ್ ಗುರೆಜ್ ಕಣಿವೆಯ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಪತನಗೊಂಡಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು

    ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಸಹ ಪೈಲಟ್ ಇಬ್ಬರನ್ನೂ ಘಟನಾ ಸ್ಥಳದಿಂದ ರಕ್ಷಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದ್ದು, 92 ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತನ್ನದೇ ದಾಖಲೆ ಮುರಿದು ಗಿನ್ನಿಸ್ ದಾಖಲೆ ಬರೆದ ಲಿಮೋಸಿನ್ ಕಾರು

  • ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು- 6 ಮಂದಿ ಸ್ಥಳದಲ್ಲೇ ಸಾವು

    ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು- 6 ಮಂದಿ ಸ್ಥಳದಲ್ಲೇ ಸಾವು

    ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಇಕೋ ವಾಹನವೊಂದು ಕಂದಕಕ್ಕೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಅಬ್ದುಲ್ ಲತೀಫ್ (42), ಅಬ್ದುಲ್ ರೆಹಮಾನ್ (29), ಅತಾ ಮುಹಮ್ಮದ್ (22), ಇನಾಮ್ (45), ಮೊಹಮ್ಮದ್ ಅಖ್ರಾಮ್ (29) ಮತ್ತು ಜಮೀರ್ (18) ಮೃತರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ  ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    POLICE JEEP

    ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ವಾಹನ ಕಂದಕಕ್ಕೆ ಬಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

  • ಆಸ್ಪತ್ರೆಗೆ ತಲುಪಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಿದ ಭಾರತೀಯ ಸೈನಿಕರು

    ಆಸ್ಪತ್ರೆಗೆ ತಲುಪಲು ಗರ್ಭಿಣಿ ಮಹಿಳೆಗೆ ಸಹಾಯ ಮಾಡಿದ ಭಾರತೀಯ ಸೈನಿಕರು

    ಶ್ರೀನಗರ: ಜಮ್ಮು-ಕಾಶ್ಮೀರದ ಭಾರೀ ಹಿಮಪಾತದ ನಡುವೆ ತುಂಬು ಗರ್ಭಿಣಿಯನ್ನು ಸ್ಟ್ರೇಚರ್ ಮೂಲಕ ಆಸ್ಪತ್ರೆಗೆ ಸೇರಿಸಲು ಭಾರತೀಯ ಸೈನಿಕರು ಸಹಾಯ ಮಾಡಿದ್ದಾರೆ.

    ಭಾರೀ ಹಿಮಪಾತದಿಂದ ಜಮ್ಮುಕಾಶ್ಮೀರ ತತ್ತರಿಸಿಹೋಗಿದೆ. ಈ ನಡುವೆ ಜಮ್ಮು-ಕಾಶ್ಮೀರದ ಘಗ್ಗರ್ ಬೆಟ್ಟದ ಗ್ರಾಮದಿಂದ ಗರ್ಭಿಣಿಯನ್ನು ಬೋನಿಯಾರ್ ತಹಸಿಲ್‍ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಬೋನಿಯಾರ್‍ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾರೀ ಹಿಮಾಪಾತದ ನಡುವೆಯೂ ಆಕೆಯನ್ನು ಸ್ಟ್ರೇಚರ್ ಮೂಲಕ ಸಾಗಿಸಿದ್ದಾರೆ.

    ಬೋನಿಯಾರ್ ತೆಹಸಿಲ್‍ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಘಗ್ಗರ್ ಹಿಲ್‍ನಲ್ಲಿರುವ ಭಾರತೀಯ ಸೇನಾ ಪೋಸ್ಟ್‌ಗೆ ಜನವರಿ 8 ರಂದು ಬೆಳಿಗ್ಗೆ 10.30ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯನ್ನು ತುರ್ತು ವೈದ್ಯಕೀಯ ನೆರವು ಕೋರಿ ಸ್ಥಳೀಯರಿಂದ ಕರೆ ಬಂದಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಕೂಡಲೇ ಸ್ಥಳಕ್ಕೆ ಆಗಮಿಸಿದ ಸೇನಾ ವೈದ್ಯಕೀಯ ತಂಡ ಗರ್ಭಿಣಿಯ ಆರೋಗ್ಯವನ್ನು ಪರಿಶೀಲಿಸಿದ ಬಳಿಕ ಸಂಕಷ್ಟದ ಸಮಯದಲ್ಲಿಯೂ ಗರ್ಭಿಣಿಯನ್ನು ಸ್ಥಳಾಂತರಿಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

  • ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ- 27 ಮಂದಿ ಗಂಭೀರ

    ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ- 27 ಮಂದಿ ಗಂಭೀರ

    ಶ್ರೀನಗರ: ನಿರ್ಮಾಣ ಹಂತದ ಸೇತುವೆ ಕುಸಿದು 27 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

    ಸಾಂಬಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಬ್ಬಿಣದ ಕಟ್ಟು, ಹಲಗೆಗಳು ಕುಸಿದು ಬಿದ್ದಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ:  ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ರಾಮಗಡ-ಕೌಲ್‍ಪುರದಲ್ಲಿ ದೇವಿಕಾ ನದಿಯ ಮೇಲೆ ಗಡಿ ರಸ್ತೆಗಳ ಸಂಸ್ಥೆ ಪ್ರಮುಖ ಸೇತುವೆಯನ್ನು ಕಾಮಗಾರಿ ಆಗುತ್ತಿತ್ತು. ಕಾಂಕ್ರೀಟ್ ಸ್ಲ್ಯಾಬ್ ಹಾಕುವ ವೇಳೆ ಕಬ್ಬಿಣದ ಶೆಟರ್ ಕುಸಿದಿದೆ. ಈ ಅವಘಡ ಸಂಭವಿಸಿದಾಗ ಅಲ್ಲೇ ಇದ್ದ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದರು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಸ್ಥಳಾಂತರ ಮಾಡಲಾಗಿದೆ.