Tag: jammu kashmir

  • 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

    1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

    ಚಿಕ್ಕಮಗಳೂರು: 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಪಾಕ್‌ ಆಕ್ರಮಿತ ಕಾಶ್ಮೀರದ ತೀತ್ವಾಲ್‌ನಲ್ಲಿರುವ ಶಾರದಾ ಮಂದಿರವನ್ನು ಪುನರ್‌ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಶೃಂಗೇರಿ ಶ್ರೀಗಳು ಭೇಟಿ ನೀಡಿದ್ದಾರೆ.

    ತೀತ್ವಾಲ್‌ನಲ್ಲಿ ಸ್ಥಾಪನೆಗೊಂಡಿರುವ ಶಾರದಾಂಬೆ ವಿಗ್ರಹಕ್ಕೆ ಶೃಂಗೇರಿಯ ಗುರುವತ್ರಯರಾದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಪ್ರತಿಷ್ಠಾಪನಾ ಪೂಜೆ ನೆರವೇರಿಸಲಿದ್ದಾರೆ. ಪಂಚಲೋಹದ ವಿಗ್ರಹಕ್ಕೆ ಪೂಜೆ ಮಾಡಲಿದ್ದಾರೆ. ಅಲ್ಲದೇ ಇದೇ ಜೂ.5 ರಂದು ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ. ಇದನ್ನೂ ಓದಿ: ಪಂಚ ಗ್ಯಾರಂಟಿಗೆ ಪಿಎಂ ಕಿಸಾನ್‌ ಯೋಜನೆಗೆ ಕತ್ತರಿ?

    ಆರ್ಟಿಕಲ್ 370 ರದ್ದತಿ ನಂತರ ಪುನರ್‌ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಯುಗಾದಿಯಂದು ಲೋಕಾರ್ಪಣೆಗೊಳಿಸಲಾಗಿತ್ತು. ಆದಿ ಶಂಕರಾಚಾರ್ಯರು, ಸರ್ವಜ್ಞರ ಪೀಠ ಇಲ್ಲಿದೆ.

    ಮಾರ್ಚ್ 18 ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಪಂಚಲೋಹದ ಶಾರದಾಂಬೆ ವಿಗ್ರಹ ಕೊಂಡೊಯ್ದಿದ್ದರು. ಮಾರ್ಚ್‌ 22 ರಂದು‌ ತೀತ್ವಾಲ್‌ನಲ್ಲಿ ಕಾಶ್ಮೀರಿ ಪಂಡಿತರು ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಪಂಚಲೋಹದ ವಿಗ್ರಹಕ್ಕೆ‌ ಇದೀಗ‌‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

  • ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಬಸ್ – 10 ಮಂದಿ ಸಾವು, 55 ಮಂದಿಗೆ ಗಾಯ

    ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಬಸ್ – 10 ಮಂದಿ ಸಾವು, 55 ಮಂದಿಗೆ ಗಾಯ

    ಶ್ರೀನಗರ: ಒಟ್ಟು 75 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ (Jammu Bus Accident) ಸೇತುವೆ ಮೇಲಿನಿಂದ ಉರುಳಿ ಕಂದಕಕ್ಕೆ ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, 55 ಮಂದಿ ಗಾಯಗೊಂಡಿರವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

    ಅಪಘಾತಕ್ಕೀಡಾದ ಬಸ್ ಅಮೃತಸರ (Amritsar) ದಿಂದ ಕತ್ರಾಕ್ಕೆ ತೆರಳುತ್ತಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಮೂಲತಃ ಬಿಹಾರ (Bihar) ದವರಾಗಿದ್ದಾರೆ. ಕುಟುಂಬದಲ್ಲಿ ಮಗುವಿಗೆ ‘ಮುಂಡನಾ’ ಕಾರ್ಯಕ್ರಮವಿದ್ದರಿಂದ ಎಲ್ಲಾ ಕುಟುಂಬ ಸದಸ್ಯರು ಮತ್ತು ಆತ್ಮೀಯರು ಸಮಾರಂಭಕ್ಕೆಂದು ಕತ್ರಾಗೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ವೈಷ್ಣೋದೇವಿ (Vaishno Devi) ದೇಗುಲಕ್ಕೆ ಯಾತ್ರೆಯನ್ನು ಕೈಗೊಂಡಿದ್ದ ಸಂದರ್ಭ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

    ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜಜ್ಜರ್ ಕೋಟ್ಲಿ ಬಳಿ ಘಟನೆ ನಡೆದಿದೆ. ರಕ್ಷಣಾ ಕಾರ್ಯಚರಣೆ ಬಹುತೇಕ ಪೂರ್ಣಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಮ್ಮುವಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬಸ್‍ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಜನ ಪ್ರಯಾಣಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಮ್ಮು ಎಸ್‍ಎಸ್‍ಪಿ ಚಂದನ್ ಕೋಹ್ಲಿ ತಿಳಿಸಿದ್ದಾರೆ.

    ಬಸ್ ಅಮೃತಸರದಿಂದ ಕತ್ರಾದ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದಿರಬಹುದು. ತನಿಖೆ ಬಳಿಕ ಸತ್ಯಾಸತ್ಯತೆಗಳು ಹೊರಬರಲಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಘಟನೆ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    ಜಮ್ಮುವಿನ ಝಜ್ಜರ್ ಕೋಟ್ಲಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ತೀವ್ರ ನೋವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ನೆರವು ಮತ್ತು ಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಶ್ರೀನಗರ: ಕ್ರೂಸರ್ (Cruiser) ವಾಹನವೊಂದು ಕಮರಿಗೆ ಬಿದ್ದು 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ (jammu Kashmir) ದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸುದೇಶ್ ಕುಮಾರ್, ಅಖ್ತರ್ ಹುಸೇನ್, ಅಬ್ದುಲ್ ರಶೀದ್, ಮುಬ್ಶರ್ ಅಹ್ಮದ್, ಇಟ್ವಾ, ರಾಹುಲ್ ಮತ್ತು ಕರಣ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತನನ್ನು ಕಿಶ್ತ್ವಾದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ದೇವಾನ್ಶ್ ಯಾದವ್ ಹೇಳಿದರು.

    ದಂಗದೂರು ಅಣೆಕಟ್ಟು ಸಮೀಪ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾಮಗಾರಿ ಸ್ಥಳದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾರು 10 ಮಂದಿ ಕಾರ್ಮಿಕರು ದಚನ್ ಗ್ರಾಮದಲ್ಲಿರುವ ಕಾಮಗಾರಿ ಸ್ಥಳಕ್ಕೆ ಕ್ರೂಸರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಆಳದ ಕಮರಿಗೆ ಬಿದ್ದಿದೆ.

    ಕ್ರೂಸರ್ ಕಂದಕಕ್ಕೆ ಉರುಳಿದ ಸುದ್ದಿಯಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ವಿವರಿಸಿದ್ದಾರೆ. ಇದನ್ನೂ ಓದಿ: The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    ಅಪಘಾತದ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕಿಶ್ತ್ವಾರ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

  • ಮೋದಿ ಜೀ.. ನಮಗೆ ಒಳ್ಳೆ ಶಾಲೆ ಕಟ್ಟಿಸಿಕೊಡಿ ಪ್ಲೀಸ್‌ – ಪ್ರಧಾನಿ ಬಳಿ ಪುಟ್ಟ ಹುಡುಗಿ ಮನವಿ

    ಮೋದಿ ಜೀ.. ನಮಗೆ ಒಳ್ಳೆ ಶಾಲೆ ಕಟ್ಟಿಸಿಕೊಡಿ ಪ್ಲೀಸ್‌ – ಪ್ರಧಾನಿ ಬಳಿ ಪುಟ್ಟ ಹುಡುಗಿ ಮನವಿ

    ಶ್ರೀನಗರ: ಮೋದಿ ಜೀ.. ನೀವು ದೇಶದ ಮಾತು ಆಲಿಸುತ್ತೀರಾ. ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಂದೊಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಳಿ ಕಾಶ್ಮೀರದ ಪುಟ್ಟ ಹುಡುಗಿ ಮನವಿ ಮಾಡಿದ್ದಾಳೆ. ಬಾಲಕಿಯ ಮನವಿ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಜಮ್ಮು ಮತ್ತು ಕಾಶ್ಮೀರದ (Jammu Kasmir) ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಸೀರತ್ ನಾಜ್ ಎಂಬ ಬಾಲಕಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯೊಂದನ್ನು ಮಾಡಿದ್ದಾಳೆ. ವೀಡಿಯೋದಲ್ಲಿ ತನ್ನ ಶಾಲೆಯ ದುಸ್ಥಿತಿ ಬಗ್ಗೆ ಬಾಲಕಿ ವಿವರಿಸಿದ್ದಾಳೆ. ಅಲ್ಲದೇ ಶಾಲೆಯ ಅವ್ಯವಸ್ಥೆಯನ್ನು ಸಹ ವೀಡಿಯೋದಲ್ಲಿ ಚಿತ್ರೀಕರಿಸಿದ್ದಾಳೆ. ಇದನ್ನೂ ಓದಿ: ಕೆಎಂಎಫ್‌ನಿಂದ ಫೆಡರಲ್‌ ತತ್ವ ಉಲ್ಲಂಘನೆ – ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ

    ವೀಡಿಯೋದಲ್ಲಿ ಬಾಲಕಿ ಏನು ಹೇಳಿದ್ದಾಳೆ?
    ಮೋದಿಜಿ, ನಾನು ನಿಮಗೆ ಒಂದು ವಿಷಯ ಹೇಳಬೇಕು. ನಮ್ಮ ಶಾಲೆಯ ನೆಲ ಎಷ್ಟು ಕೊಳಕಾಗಿದೆ ನೋಡಿ. ಶಿಕ್ಷಕರು ನಮ್ಮನ್ನು ಇಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ. ನಮ್ಮ ಶಾಲೆ ಇರುವ ದೊಡ್ಡ ಕಟ್ಟಡ ನೋಡಿ ಹೇಗಿದೆ. ಕಳೆದ 5 ವರ್ಷಗಳಿಂದ ಕಟ್ಟಡ ಎಷ್ಟು ಅಶುದ್ಧವಾಗಿದೆ ನೋಡಿ. ಶೌಚಾಲಯ ತುಂಬಾ ಕೊಳಕಾಗಿದೆ. ಬಾಗಿಲು ಮುರುದು ಹೋಗಿದೆ ನೋಡಿ.

    ನಮಗಾಗಿ ಒಂದು ಉತ್ತಮವಾದ ಶಾಲೆಯನ್ನು ನಿರ್ಮಿಸಿಕೊಡುವಂತೆ ವಿನಂತಿಸುತ್ತೇನೆ. ಈಗ ನಾವು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿರುವುದರಿಂದ ನಮ್ಮ ಸಮವಸ್ತ್ರಗಳು ಕೊಳಕಾಗುತ್ತವೆ. ಸಮವಸ್ತ್ರವನ್ನು ಕೊಳಕು ಎಂದು ಅಮ್ಮ ಆಗಾಗ್ಗೆ ನಮ್ಮನ್ನು ಬೈಯುತ್ತಾರೆ. ನಮಗೆ ಕುಳಿತುಕೊಳ್ಳಲು ಬೆಂಚುಗಳಿಲ್ಲ. ಪ್ಲೀಸ್‌ ಮೋದಿ ಜೀ, ಶಾಲೆಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಲು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ದಯವಿಟ್ಟು ನನ್ನ ಆಸೆಯನ್ನು ಈಡೇರಿಸಿ. ಇದನ್ನೂ ಓದಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗುಂಡಿಕ್ಕಿ ಬ್ಯಾಂಕ್‍ನಲ್ಲಿ 13.28 ಲಕ್ಷ ಲೂಟಿ

    ಮೋದಿ ಜೀ, ನೀವು ಇಡೀ ರಾಷ್ಟ್ರವನ್ನು ಆಲಿಸಿತ್ತೀರಿ. ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಳ್ಳೆಯ ಶಾಲೆ ಕಟ್ಟಿಸಿಕೊಡಿ. ನಮಗೆ ಒಳ್ಳೆಯ ಶಾಲೆ ಇದ್ದರೆ ಚೆನ್ನಾಗಿ ಓದುತ್ತೇವೆ. ಶಾಲೆ ಚೆನ್ನಾಗಿ ನಮ್ಮ ಬಟ್ಟೆ ಕೊಳಕಾಗಲ್ಲ. ಆಗ ಮನೆಯಲ್ಲಿ ಅಮ್ಮ ರೇಗುವುದಿಲ್ಲ. ದಯವಿಟ್ಟು ನಮಗಾಗಿ ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿಕೊಡಿ ಎಂದು ವೀಡಿಯೋದಲ್ಲಿ ಬಾಲಕಿ ಮನವಿ ಮಾಡಿದ್ದಾಳೆ.

  • ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕಾರು ಅಪಘಾತ

    ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕಾರು ಅಪಘಾತ

    – ಅಪಘಾತಕ್ಕೂ ಹಿಂದಿನ ದಿನ “ಪ್ರಯಾಣದುದ್ದಕ್ಕೂ ಸುಂದರವಾದ ರಸ್ತೆ ಆನಂದಿಸಬಹುದು” ಎಂದು ಹೊಗಳಿದ್ದ ಸಚಿವ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಜಿಲ್ಲೆಯ ಬನಿಹಾಲ್‌ ಪ್ರದೇಶದಲ್ಲಿ ಕಾನೂನು ಸಚಿವ ಕಿರಣ್‌ ರಿಜಿಜು ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಸಣ್ಣ ಮಟ್ಟದ ಅಪಘಾತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

    ಶನಿವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಬಾನ್‌ನಲ್ಲಿ ಕೇಂದ್ರ ಸಚಿವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ರಸ್ತೆ ಅಪಘಾತದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಎಡಿಜಿ ಮುಖೇಶ್‌ ಸಿಂಗ್‌ ತಿಳಿಸಿದ್ದಾರೆ.

    ಘಟನೆಯ ದೃಶ್ಯಾವಳಿಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭದ್ರತಾ ಸಿಬ್ಬಂದಿ ಸಚಿವರ ಕಪ್ಪು ಸ್ಕಾರ್ಪಿಯೊದ ಬಾಗಿಲು ತೆರೆದು ಒಳಗಿದ್ದವರನ್ನು ಹೊರಗೆ ಕರೆತರಲು ಮುಂದಾಗುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

    ಈ ಪ್ರಯಾಣಕ್ಕೂ ಹಿಂದಿನ ದಿನ ಕಾನೂನು ಸೇವಾ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಸಚಿವರು, “ಪ್ರಯಾಣದ ಉದ್ದಕ್ಕೂ ಸುಂದರವಾದ ರಸ್ತೆಯನ್ನು ಆನಂದಿಸಬಹುದು” ಎಂದು ಟ್ವೀಟ್ ಮಾಡಿದ್ದರು.

  • ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಿದೇಶಿ ಬಂಡವಾಳ ಹೂಡಿಕೆ (FDI) ಅಡಿ ನಿರ್ಮಾಣವಾಗಲಿರುವ ಮೊದಲ ಯೋಜನೆಯ ನಿರ್ಮಾಣ ಕಾಮಗಾರಿ ಕೆಲಸ ಅಧಿಕೃತವಾಗಿ ಆರಂಭವಾಗಿದೆ.

    ಬುರ್ಜ್ ಖಲೀಫಾದ ಡೆವಲಪರ್ ಯುಎಇ ಮೂಲದ Emaar ಗ್ರೂಪ್ ಶ್ರೀನಗರದಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಕೈಹಾಕಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 10 ಲಕ್ಷ ಚದರ ಅಡಿ ನಿರ್ಮಾಣವಾಗಲಿರುವ “ಮಾಲ್ ಆಫ್ ಶ್ರೀನಗರ”ಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ

    ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್‌ ಸಿನ್ಹಾ, ಇದು 500 ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷವಾಗಿ ಶ್ರೀನಗರ ಮತ್ತು ಸುತ್ತಮುತ್ತಲಿನ ಜನರ ಬಹುಕಾಲದ ಕನಸು ಈಡೇರಲಿದೆ. ಜಮ್ಮುವಿನಲ್ಲಿ 150 ಕೋಟಿ ರೂ.ಗಳ ಐಟಿ ಟವರ್‌ ಸ್ಥಾಪಿಸಲಾಗುವುದು. ಅದಕ್ಕಾಗಿ ಭೂಮಿ ನೀಡಲಾಗಿದೆ ಎಂದು ತಿಳಿಸಿದರು.

    ಶ್ರೀನಗರ ಮತ್ತು ಜಮ್ಮುವಿನಲ್ಲಿ ಎಮಾರ್ ಯೋಜನೆಗಳಿಂದ ಉದ್ಯೋಗದ ಪರ್ವ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕೈಗಾರಿಕಾ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ಹಲವಾರು ಗಲ್ಫ್‌ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತೆ ಆಹ್ವಾನಿಸಿತ್ತು. ಕಳೆದ ವರ್ಷ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳ ಸುಮಾರು 36 ಸಿಇಒಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

  • ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ – ಪಾಕಿಸ್ತಾನಕ್ಕೆ ಭಾರತ ವಾರ್ನಿಂಗ್

    ಮೊದಲು ನಿಮ್ಮ ದೇಶವನ್ನು ನೋಡಿಕೊಳ್ಳಿ – ಪಾಕಿಸ್ತಾನಕ್ಕೆ ಭಾರತ ವಾರ್ನಿಂಗ್

    ವಾಷಿಂಗ್ಟನ್: ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸುವ ಮೊದಲು ನೆರೆಯ ರಾಷ್ಟ್ರಗಳು ತಮ್ಮ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ವಿಶ್ವಸಂಸ್ಥೆ (UN) ವೇದಿಕೆಯಲ್ಲಿ ಪಾಕಿಸ್ತಾನಕ್ಕೆ (Pakistan) ಭಾರತ (India) ಎಚ್ಚರಿಕೆ ನೀಡಿದೆ.

    ಭಾರತವು ಜಮ್ಮು ಕಾಶ್ಮೀರವನ್ನು (Jammu Kashmir) ವಶಪಡಿಸಿಕೊಂಡಿದೆ ಎಂದು ಪಾಕಿಸ್ತಾನವು ಆರೋಪಿಸಿತ್ತು. ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ರುಚಿರಾ ಕಾಂಬೋಜ್ ಮಾತನಾಡಿ, ಪಾಕಿಸ್ತಾನದ ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದು ಅಪರಾಧವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಂತಿ ಹಾಗೂ ಭದ್ರತೆಯ ಕುರಿತು ಮುಕ್ತ ಚರ್ಚೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದು ಹಾನಿಕರ ಹಾಗೂ ದಾರಿತಪ್ಪಿಸುವ ಕೆಲಸವಾಗಿದೆ ಎಂದು ಕಿಡಿಕಾರಿದರು.

    ಈ ಹಿಂದೆ ಆ ದೇಶದ ನಾಯಕರೇ ಭಯೋತ್ಪಾದಕ ಗುಂಪುಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಉಗ್ರರರಿಗೆ ತರಬೇತಿ ನೀಡಿ ಭಾರತ ಹಾಗೂ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಇಂತಹ ಪಾಕಿಸ್ತಾನವು ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ಜಗತ್ತಿಗೆ ಹೇಳುತ್ತದೆ. ಲಡಾಖ್, ಜಮ್ಮು ಮತ್ತು ಕಾಶ್ಮೀರ ಎಲ್ಲವೂ ಭಾರತದ ಅವಿಭಾಜ್ಯ ಅಂಗಗಳು. ಇದರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾರ್ಚ್ 11,12 ರಂದು ಮಹಿಳಾ ಕ್ರೀಡಾ ಹಬ್ಬ: ಡಾ. ನಾರಾಯಣಗೌಡ

    ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ತಾನವು ತನ್ನ ಜನರಿಗೆ ಪ್ರಜಾಪ್ರಭುತ್ವವನ್ನು ನಿರಾಕರಿಸುತ್ತಲೇ ಜಗತ್ತಿಗೆ ನೈತಿಕತೆಯನ್ನು ಬೋಧಿಸುತ್ತಿದೆ. ಪಾಕಿಸ್ತಾನವು ಮೊದಲು ತನ್ನ ಸ್ವಂತ ಮನೆಯನ್ನು ಕ್ರಮಬದ್ಧಗೊಳಿಸಬೇಕು ಎಂದ ಅವರು, ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಹೇಳಿಕೆಯನ್ನು ತಿರಸ್ಕರಿಸಿದರು. ಇದನ್ನೂ ಓದಿ: ಸುಮಲತಾ ಶುಕ್ರವಾರ ಬಿಜೆಪಿ ಸೇರ್ತಾರೆ: ಶಾಸಕ ಪುಟ್ಟರಾಜು

  • ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ

    ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‍ಗೆ ಮುಜುಗರ

    ಶ್ರೀನಗರ: ಜಮ್ಮು-ಕಾಶ್ಮೀರ (Jammu Kashmir) ಕ್ಕೆ ಭಾರತ್ ಜೋಡೋ ಯಾತ್ರೆ (Bharat Jodo Yatre) ತಲುಪುವ ಒಂದು ದಿನದ ಮೊದಲು ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ. ಸಂಸದ ರಾಹುಲ್ ಗಾಂಧಿ ನಡೆ ಖಂಡಿಸಿರುವ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ (Deepika PushkarNath), ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿರುವುದು, ಪಕ್ಷ ಸೇರ್ಪಡೆ ಪ್ರಸ್ತಾಪ ಗಮನಿಸಿದರೆ ರಾಜೀನಾಮೆ ಹೊರೆತು ಬೇರೆ ಆಯ್ಕೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    2018 ರಲ್ಲಿ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಲಾಲ್ ಸಿಂಗ್ (Lal singh) ಅವರು ಹಿಂದಿನ ಬಿಜೆಪಿ-ಪಿಡಿಪಿ ಸರ್ಕಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಎರಡು ಬಾರಿ ಸಂಸದ ಹಾಗೂ ಮೂರು ಬಾರಿ ಶಾಸಕರಾಗಿದ್ದ ಲಾಲ್ ಸಿಂಗ್ 2014ರಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. 2018 ರಲ್ಲಿ ಬಲವಂತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು 2019 ರಲ್ಲಿ ಬಿಜೆಪಿ ತೊರೆದು ರಾಜಕೀಯ ಸಂಘಟನೆಯಾದ ಡೋಗ್ರಾ ಸ್ವಾಭಿಮಾನ್ ಸಂಘಟನೆ (DSSP) ಸೇರಿದ್ದರು.

    ಜಮ್ಮು ಮೂಲದ ಮಾನವ ಹಕ್ಕುಗಳ ವಕೀಲರಾದ ದೀಪಿಕಾ ಪುಷ್ಕರ್ ನಾಥ್, ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರ ಪ್ರಕರಣವನ್ನು ಮುನ್ನಡೆಸಿದ್ದರು. ಆರಂಭದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ಇದೇ ಕಾರಣಕ್ಕೆ ದೀಪಿಕಾ ಪುಷ್ಕರ್ ನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್‌ ಅಧಿಕಾರಿಗಳು

    ಜನವರಿ 2018 ರ ಮೊದಲ ವಾರದಲ್ಲಿ ಅಲೆಮಾರಿ ಮುಸ್ಲಿಂ ಬ್ಯಾಕರ್‍ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಿಂದ ಅಪಹರಿಸಲಾಗಿತ್ತು. ಅವಳನ್ನು ಒಂದು ಸಣ್ಣ ಸ್ಥಳೀಯ ದೇವಸ್ಥಾನದಲ್ಲಿ ಬಂಧಿಸಿ ಮಾದಕವಸ್ತು ನೀಡಿ ಅತ್ಯಾಚಾರ ಮಾಡಲಾಯಿತು, ಬಳಿಕ ಕೊನೆಗೆ ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬುದ್ಗಾಮ್ ಕೋರ್ಟ್‌ ಸಂಕೀರ್ಣದ  ಬಳಿ  ಎನ್‌ಕೌಂಟರ್‌ – ಇಬ್ಬರು ಉಗ್ರರ ಹತ್ಯೆ

    ಬುದ್ಗಾಮ್ ಕೋರ್ಟ್‌ ಸಂಕೀರ್ಣದ ಬಳಿ ಎನ್‌ಕೌಂಟರ್‌ – ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir) ಬುದ್ಗಾಮ್ ಜಿಲ್ಲೆಯ ನ್ಯಾಯಾಲಯ ಸಂಕೀರ್ಣದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ಲಷ್ಕರ್-ಎ-ತೊಯ್ಬಾ (Lashkar-e-Toiba) ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

    ಬಡ್ಗಾಮ್ ಮೂಲಕ ಭಯೋತ್ಪಾದಕರ ಚಲನೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸೇನೆ ಮತ್ತು ಪೊಲೀಸರು ಜಂಟಿಯಾಗಿ ನ್ಯಾಯಾಲಯದ ಸಂಕೀರ್ಣದ ಬಳಿ ಒಂದು ಶಂಕಿತ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

    ಈ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿ ಇಬ್ಬರು ಉಗ್ರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು  ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್‌ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ

    ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಹತ್ಯೆಗೀಡಾದ ಉಗ್ರರು ನಿಷೇಧಿತ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಅವರನ್ನು ಪುಲ್ವಾಮಾ ಜಿಲ್ಲೆಯ ಅರ್ಬಾಜ್ ಮಿರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದೆ. ಮಗಮ್ ಪ್ರದೇಶದಲ್ಲಿ ಕಳೆದ ವಾರ ನಡೆದ ಶೋಧ ಕಾರ್ಯಾಚರಣೆಯಿಂದ ಇಬ್ಬರೂ ಭಯೋತ್ಪಾದಕರು ತಪ್ಪಿಸಿಕೊಂಡಿದ್ದರು ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಹಿಮದಿಂದ ಕೂಡಿದ್ದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದ ವಾಹನ – 3 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿ (Army Personnel) ಹುತಾತ್ಮರಾಗಿದ್ದಾರೆ.

    ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಮತ್ತು ಇಬ್ಬರು ಇತರ ಶ್ರೇಣಿಯ (OR) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್‌ನಿಂದ ಜಾರಿ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    ದುರಂತದಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರ ಪಾರ್ಥೀವ ಶರೀರಗಳನ್ನು ಪಡೆಯಲಾಗಿದೆ ಎಂದು ಸೇನೆಯ ಚಿನಾರ್‌ ಕಾರ್ಪ್ಸ್‌ ತಿಳಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಮಂದಿ ಭಾರತೀಯ ಸೈನಿಕರು ಮಡಿದಿದ್ದರು. ಟ್ರಕ್‌ ಸಿಕ್ಕಿಂನಲ್ಲಿ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿ 16 ಸೈನಿಕರು ಹುತಾತ್ಮರಾಗಿದ್ದರು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k