Tag: jammu kashmir

  • ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ

    ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ

    ಶ್ರೀನಗರ: ಶತ್ರುದೇಶಗಳಾದ ಪಾಕಿಸ್ತಾನ (Pakistan) ಮತ್ತು ಚೀನಾ (China) ಬೆದರಿಕೆಗಳನ್ನು ಎದುರಿಸುವ ಸಲುವಾಗಿ ಭಾರತ ಆಗಸ್ಟ್ 12ರ ಶನಿವಾರದಂದು ಶ್ರೀನಗರದಲ್ಲಿ (Srinagar) ಮೇಲ್ದರ್ಜೆಗೆರಿಸಿದ MiG -29 ಯುದ್ಧವಿಮಾನಗಳನ್ನು (Fighter Jet) ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

    ಟ್ರೈಡೆಂಟ್ಸ್ ಸ್ಕ್ವಾಡ್ರನ್ (Tridents Squadron) ಅನ್ನು ಉತ್ತರದ ರಕ್ಷಕ ಎಂದು ಕರೆಯುತ್ತಿದ್ದು, ಶ್ರೀನಗರದ ವಾಯುನೆಲೆಯಲ್ಲಿ MiG -21 ಸ್ಕ್ವಾಡ್ರನ್‌ಗಳ ಬದಲಾಗಿ MiG -29 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಗಡಿ ರಾಷ್ಟ್ರಗಳಿಂದ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಫೈಟರ್ ಜೆಟ್‌ಗಳು ಒಳಗೊಂಡಿವೆ. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    2020ರ ಗಲ್ವಾನ್ ಘರ್ಷಣೆಯ ಮೊದಲ ಬಾರಿಗೆ MiG -29ರ ಮೊದಲನೇ ವಿಮಾನವನ್ನು ಲಡಾಖ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿತ್ತು. ಇದು ಚೀನಾದ ಯಾವುದೇ ಬೆದರಿಕೆಯನ್ನು ವಿಫಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ

    ಭಾರತೀಯ ವಾಯುಪಡೆಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ (Vipul Sharma) ಈ ಕುರಿತು ಮಾಹಿತಿ ನೀಡಿದ್ದು, ಶ್ರೀನಗರ ಕಾಶ್ಮೀರ ಕಣಿವೆ ಮಧ್ಯ ಭಾಗದಲ್ಲಿದೆ ಮತ್ತು ಅದರ ಎತ್ತರವು ಬಯಲು ಪ್ರದೇಶಕ್ಕಿಂತ ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಿದ್ದು, MiG -29 ಇದನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ್ರೋಹ ಕಾನೂನು ರದ್ದು: ಅಮಿತ್ ಶಾ ಮಸೂದೆ ಮಂಡನೆ

    ಮತ್ತೊಬ್ಬ ಲೀಡರ್ ಶಿವಂ ರಾಣಾ ಈ ಬಗ್ಗೆ ಮಾತನಾಡಿದ್ದಾರೆ. ಮೇಲ್ದರ್ಜೆಗೆ ಏರಿಸಿದ ಯುದ್ಧವಿಮಾನಗಳು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನದ ಅತಿದೊಡ್ಡ ಸಾಮರ್ಥ್ಯವೆಂದರೆ ಅದು ಭಾರತೀಯ ವಾಯುಪಡೆಯಿಂದ ಆರಿಸಲ್ಪಟ್ಟ ಪೈಲೆಟ್‌ಗಳು ಇದರಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಶತ್ರು ವಿಮಾನವನ್ನು ಜ್ಯಾಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಜನಾಂಗೀಯ ಸಂಘರ್ಷ – ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಂಗ ಸಮಿತಿ ರಚನೆ

    ಮಣಿಪುರ ಜನಾಂಗೀಯ ಸಂಘರ್ಷ – ತನಿಖೆಯ ಮೇಲ್ವಿಚಾರಣೆಗೆ ನ್ಯಾಯಾಂಗ ಸಮಿತಿ ರಚನೆ

    ನವದೆಹಲಿ: ಮಣಿಪುರ ಜನಾಂಗೀಯ ಸಂಘರ್ಷದ (Manipur Violence) ತನಿಖೆಯ ಮೇಲ್ವಿಚಾರಣೆಗೆ ಜಮ್ಮು ಮತ್ತು ಕಾಶ್ಮೀರ (Jammu Kashmir) ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದಲ್ಲಿ ಮೂವರು ಮಹಿಳಾ ಸದಸ್ಯರ ಒಳಗೊಂಡ ನ್ಯಾಯಾಂಗ ಸಮಿತಿಯನ್ನು ಸುಪ್ರೀಂಕೋರ್ಟ್ (Supreme Court) ರಚಿಸಿದೆ.

    ಸೋಮವಾರ ಪ್ರಕರಣ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಪೀಠ, ಸಿಬಿಐ ತನಿಖೆಯನ್ನು (CBI Enquiry) ಬದಲಿಸುವುದಿಲ್ಲ ಆದರೆ ಕಾನೂನಿನ ಆಳ್ವಿಕೆಯಲ್ಲಿ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಸಮಿತಿಯೂ ನ್ಯಾ.ಶಾಲಿನಿ ಜೋಶಿ ಮತ್ತು ನ್ಯಾ. ಆಶಾ ಮೆನನ್ ಅವರನ್ನು ಒಳಗೊಂಡಿರುತ್ತದೆ ಎಂದು ತಿಳಿಸಿತು. ಇದನ್ನೂ ಓದಿ: ಜೂನ್‌ನಲ್ಲಿ ರಷ್ಯಾದಿಂದ ಭಾರೀ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಿದ ಭಾರತ

    ಸಮಿತಿಯೂ ಕೇಂದ್ರೀಯ ತನಿಖಾ ದಳ ಮತ್ತು ಮಣಿಪುರ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯನ್ನು ಪರಿಶೀಲಿಸಲಿದೆ. ಇದರ ಜೊತೆಗೆ ಪರಿಹಾರ ಮತ್ತು ಪುನರ್ವಸತಿಯನ್ನು ಸೂಚಿಸುವ ವಿಶಾಲ-ಆಧಾರಿತ ಕಾರ್ಯವನ್ನು ಹೊಂದಿರುತ್ತದೆ ಎಂದು ಪೀಠ ಹೇಳಿತು.

    ಇದೇ ವೇಳೆ ಪ್ರಕರಣಗಳ ವಿಚಾರಣೆಯನ್ನು ಮಣಿಪುರದ ಹೊರಗಿನ ರಾಜ್ಯಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರಾಕರಿಸಿತು. ಸಿಬಿಐ ವಿಚಾರಣೆ ನಡೆಸುತ್ತಿರುವ ಹಿನ್ನೆಲೆ ನಾವು ಅದನ್ನು ಬದಲಿಸುವುದಿಲ್ಲ. ಆದರೆ ಕಾನೂನಿನಲ್ಲಿ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ತನಿಖಾ ಪ್ರಗತಿಯನ್ನು ಮಹಾರಾಷ್ಟ್ರದ ಮಾಜಿ ಡಿಜಿಪಿ ಮತ್ತು ಎನ್ಐಎ ಅಧಿಕಾರಿ ದತ್ತಾತ್ರೇ ಪಡಸಾಲ್ಗಿಕರ್ ಅವರು ವಿಶೇಷವಾಗಿ ಪರಿಶೀಲಿಸುತ್ತಾರೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು. ನ್ಯಾಯಾಂಗ ಸಮಿತಿ ಮತ್ತು ದತ್ತಾತ್ರೇ ಪಡಸಾಲಗಿಕರ್ ಇಬ್ಬರೂ ಪ್ರತ್ಯೇಕ ವರದಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ರಾಜೌರಿ (Rajouri) ಜಿಲ್ಲೆಯ ಬರಿಯಾಮ ಪ್ರದೇಶದಲ್ಲಿ ಭಯೋತ್ಪಾದಕರು (Terrorists) ಮತ್ತು ಭದ್ರತಾ ಪಡೆಗಳ (Security Force) ನಡುವೆ ಎನ್‌ಕೌಂಟರ್ (Encounter) ನಡೆದಿದ್ದು, ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.

    ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಕೂಡಾ ಎನ್‌ಕೌಂಟರ್‌ನಲ್ಲಿ ತೊಡಗಿದ್ದು, ಘಟನಾ ಪ್ರದೇಶವನ್ನು ಭಾರತೀಯ ಸೇನೆ ಸುತ್ತುವರೆದಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಆನ್‌ಲೈನ್‌ನಲ್ಲೇ ಪಾಕಿಸ್ತಾನದ ವಧುವನ್ನು ವರಿಸಿದ ರಾಜಸ್ಥಾನದ ವರ

    ಶನಿವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಖಾವಸ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದ್ದು, ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತ್ಯೆಯಾಗಿದ್ದಾನೆ. ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ: ಓವೈಸಿ ಕಿಡಿ

    ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ: ಓವೈಸಿ ಕಿಡಿ

    ನವದೆಹಲಿ: ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಕಿಡಿಕಾರಿದ್ದಾರೆ.

    ಜಮ್ಮು-ಕಾಶ್ಮೀರದಲ್ಲಿ (Jammu Kashmir) ಆರ್ಟಿಕಲ್‌ 370 ರದ್ದು ಮಾಡಿ ಇಲ್ಲಿಗೆ ನಾಲ್ಕು ವರ್ಷಗಳಾಗಿವೆ. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಪಾಕಿಸ್ತಾನದಿಂದ (Pakistan) ಬಂದ ಭಯೋತ್ಪಾದಕರು (Terrorists) ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಂತಹ ದೇಶದ ಜೊತೆ ನೀವು ವಿಶ್ವಕಪ್‌ ಪಂದ್ಯ ಆಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

    ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ಕುರಿತು ಮಾತನಾಡಿ, ಎಎಸ್‌ಐ ವರದಿ ಬಂದಾಗ ಬಿಜೆಪಿ-ಆರ್‌ಎಸ್‌ಎಸ್ ಏನು ಮಾತನಾಡುತ್ತೋ ಎಂಬ ಆತಂಕ ನಮಗಿದೆ. ಅದು ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಡಿಸೆಂಬರ್ 23 ಅಥವಾ ಡಿಸೆಂಬರ್ 6 (ಬಾಬರಿ ಮಸೀದಿ ಧ್ವಂಸ) ರಂತಹ ಘಟನೆಯ ಬಗ್ಗೆ ನನಗೆ ಆತಂಕವಿದೆ. ಬಾಬರಿ ಮಸೀದಿಯಂತಹ ಸಮಸ್ಯೆಗಳು ಉದ್ಭವಿಸುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.

    ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಎಎಸ್‌ಐ ಸಮೀಕ್ಷೆ ನಡೆಸಲು ಅನುಮತಿ ನೀಡಿ ಅಲಹಾಬಾದ್‌ ಹೈಕೋರ್ಟ್‌ ಆದೇಶ ಹೊರಡಿಸಿದೆ. ಅದರಂತೆ ಎಎಸ್‌ಐ ಅಧಿಕಾರಿಗಳು ನಿನ್ನೆಯಿಂದ ಸರ್ವೆ ಕಾರ್ಯವನ್ನು ಆರಂಭಿಸಿದ್ದಾರೆ. ಇಂದು ಕೂಡ ಬಿಗಿ ಭದ್ರತೆಯೊಂದಿಗೆ ಸಮೀಕ್ಷೆ ನಡೆಸಲಾಯಿತು. ಇದನ್ನೂ ಓದಿ: ಹಿಜಬ್‌ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಶ್ರೀನಗರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದಾರೆ. ಮೋದಿ ಅವರು ಮತ್ತೆ ಪ್ರಧಾನಿ ಹುದ್ದೆಗೇರಲಿ ಎಂದು ಅಮರನಾಥಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ವೀಡಿಯೋ ಸಮೇತ ಕೇಂದ್ರ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಅಮರನಾಥ ದರ್ಶನ ಪಡೆದು ಧನ್ಯಳಾಗಿದ್ದೇನೆ. ದೇಶವಾಸಿಗಳ ಯೋಗಕ್ಷೇಮ ಮತ್ತು ನರೇಂದ್ರ ಮೋದಿ (Narendra Modi) ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ತಂದೆ, ಮಗ ಸೇರಿ ಮೂವರು ಬಲಿ

    ಶ್ರೀ ಅಮರನಾಥದಲ್ಲಿರುವ ಪವಿತ್ರ ಶಿವಲಿಂಗದ ದರ್ಶನ ಪಡೆದೆ. ನನ್ನ ಯಾತ್ರೆಗೆ ಸಹಕಾರಿಯಾದ ಅಮರನಾಥ ದೇಗುಲ ಮಂಡಳಿಯ ಎಲ್ಲಾ ಸಿಬ್ಬಂದಿ ಮತ್ತು ಭದ್ರತಾ ತಂಡಕ್ಕೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಎಲ್ಲರ ಸುಗಮ ಯಾತ್ರೆಗೆ ಅನುವು ಮಾಡಿಕೊಟ್ಟಿರುವ ಮನೋಜ್‌ ಸಿನ್ಹಾ ಅವರಿಗೆ ವಂದನೆಗಳು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್‌ ಲೇಡಿ ಎಸ್ಕೇಪ್‌ – ಒಬ್ಬಳಿಗಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂತ್ರಸ್ತರು

    27 ಯುವಕರನ್ನ ಮದುವೆಯಾಗಿ ವಂಚಿಸಿ ಖತರ್ನಾಕ್‌ ಲೇಡಿ ಎಸ್ಕೇಪ್‌ – ಒಬ್ಬಳಿಗಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಸಂತ್ರಸ್ತರು

    ಶ್ರೀನಗರ: ಮಹಿಳೆಯೊಬ್ಬಳು ಬರೋಬ್ಬರಿ 27 ಯುವಕರನ್ನು ಮದುವೆಯಾಗಿ ವಂಚಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ (Jammu Kashmir) ನಡೆದಿದೆ. ವಂಚಿತರ ಪೈಕಿ 12 ಮಂದಿ ತಮ್ಮ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ಫೋಟೋಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

    ಈ ಖತರ್ನಾಕ್‌ ಲೇಡಿ, 2015 ರಲ್ಲಿ ಬಿಡುಗಡೆಯಾದ ‘ಡಾಲಿ ಕಿ ಡೋಲಿ’ ಸಿನಿಮಾದಿಂದ ಸ್ಫೂರ್ತಿಯಾಗಿ ಯುವಕರನ್ನು ವಂಚಿಸಿದ್ದಾಳೆ. ಮಹಿಳೆ ಶ್ರೀಮಂತ ವ್ಯಕ್ತಿಗಳನ್ನು ಮದುವೆಯಾಗುತ್ತಾಳೆ. ಹುಡುಗನ ಕುಟುಂಬಗಳಿಂದ ನಗದು ಮತ್ತು ಆಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಾಳೆ. ಇದು ಸಿನಿಮಾದ ಸ್ಟೋರಿ. ಅದರಿಂದ ಸ್ಫೂರ್ತಿಯಾಗಿ ಕಾಶ್ಮೀರದ ಮಹಿಳೆ ಕೂಡ 27 ಯುವಕರನ್ನು ವಂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ- ಆರೋಪಿಗಳಲ್ಲಿ ಓರ್ವ ಬಿಜೆಪಿ ನಾಯಕನ ಮಗ!

    ಮಹಿಳೆ ಬದ್ಗಾಮ್ ಜಿಲ್ಲೆಯಲ್ಲಿಯೇ 27 ಮಂದಿಯನ್ನು ಮದುವೆಯಾಗಿದ್ದು, 12 ಮಂದಿ ಮಾತ್ರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ವಂಚನೆಗೊಳಗಾದವರ ಪೈಕಿ ಯುವಕನೊಬ್ಬನ ತಂದೆ, ಪೊಲೀಸರಿಗೆ ದೂರು ನೀಡಿದ್ದಾರೆ. ದೈಹಿಕ ಅನಾರೋಗ್ಯದ ಕಾರಣ ನನ್ನ ಮಗನಿಗೆ ಮದುವೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮಧ್ಯವರ್ತಿಯೊಬ್ಬರು ನಮ್ಮ ಬಳಿಗೆ ಬಂದು 2 ಲಕ್ಷ ರೂ. ನೀಡಿದರೆ, ವಧುವನ್ನು ಮದುವೆಗೆ ಹೊಂದಿಸುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿ ಆತನೊಂದಿಗೆ ಒಪ್ಪಂದ ಮಾಡಿಕೊಂಡು ಮದುವೆಗೆ ಮುಂದಾದೆವು ಎಂದು ತಿಳಿಸಿದ್ದಾರೆ.

    ಮುಂದುವರಿದು, ಮದುವೆಗೆ ನಾವು ತಯಾರಿ ನಡೆಯುತ್ತಿದ್ದಾಗ ಮಧ್ಯವರ್ತಿ ವ್ಯಕ್ತಿ ಕರೆ ಮಾಡಿದರು. ವಧು ಅಪಘಾತಕ್ಕೀಡಾಗಿ 2 ಲಕ್ಷ ರೂ.ಗಳಲ್ಲಿ ಅರ್ಧದಷ್ಟು ಹಣವನ್ನು ತೆಗೆದುಕೊಂಡು ಹಿಂದಿರುಗಿದ್ದಾರೆ. ಉಳಿದ ಹಣವನ್ನು ವಾಪಸ್‌ ಮಾಡಿದ್ದಾರೆ ಎಂದು ಹೇಳಿದ. ಕೆಲವು ದಿನಗಳ ನಂತರ ಮಧ್ಯವರ್ತಿ ಮತ್ತೆ ಮತ್ತೊಂದು ಪ್ರಸ್ತಾಪದೊಂದಿಗೆ ಬಂದ. ಮತ್ತೊಂದು ಯುವತಿಯ ಫೋಟೋ ತೋರಿಸಿ, ಅದಕ್ಕೆ ನಮ್ಮ ಒಪ್ಪಿಗೆ ಪಡೆದ. ಮದುವೆಯ ಸಮಯದಲ್ಲಿ ವಧುವಿಗೆ 3.80 ಲಕ್ಷ ರೂ. ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಮೆಹರ್ ಆಗಿ ನೀಡಲಾಯಿತು. ಮದುವೆಯಾದ ಕೆಲ ದಿನಗಳ ನಂತರ ಆಸ್ಪತ್ರೆಗೆ ಹೋಗುವುದಾಗಿ ಅತ್ತೆಯಂದಿರಿಂದ ಅನುಮತಿ ಪಡೆದ ವಧು ವಾಪಸ್‌ ಬರಲೇ ಇಲ್ಲ ಎಂದು ದೂರಿದ್ದಾರೆ. ಬಹುತೇಕ ಎಲ್ಲಾ ಸಂತ್ರಸ್ತರ ಅನುಭವವೂ ಇದೇ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    ಬುದ್ಗಾಮ್ ಜಿಲ್ಲೆಯೊಂದರಲ್ಲೇ 27 ಮಂದಿ ವಂಚನೆಗೊಳಗಾಗಿದ್ದು, ಈ ಪೈಕಿ 12 ಮಂದಿ ಮಾತ್ರ ದೂರು ನೀಡಿದ್ದಾರೆ. ಮಹಿಳೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Jammu Kashmir Article 370 Abrogation – ಅಗಸ್ಟ್ 2 ರಿಂದ ಅಂತಿಮ ವಿಚಾರಣೆ

    ನವದೆಹಲಿ : ಜಮ್ಮು (Jammu) ಮತ್ತು ಕಾಶ್ಮೀರಕ್ಕೆ (Kashmir) ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು (Abrogation of Article 370) ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಆಗಸ್ಟ್‌ 2 ರಿಂದ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್‌ (Supreme Court) ಹೇಳಿದೆ. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಕೋರ್ಟ್ ಹೇಳಿದೆ.

    ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು ಜುಲೈ 27 ರೊಳಗೆ ಎಲ್ಲಾ ದಾಖಲೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದೆ. ಜೊತೆಗೆ ಈ ದಾಖಲೆಗಳನ್ನು ನಿರ್ವಹಿಸಲು ಇಬ್ಬರು ವಕೀಲರನ್ನು ನೊಡೆಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಪೀಠ ಹೇಳಿದೆ.  ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಅಂಬುಲೆನ್ಸ್ ಅಡ್ಡಗಟ್ಟಿದ ದೃಶ್ಯ ಪತ್ತೆ

    ಮುಖ್ಯ ಅರ್ಜಿದಾರರಾದ ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಶೆಹ್ಲಾ ರಶೀದ್ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಮತ್ತು ಅರ್ಜಿದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಮನವಿ ಮಾಡಿದರು. ಈ‌ ಮನವಿಯನ್ನು ಸುಪ್ರೀಂಕೋರ್ಟ್ ಅನುಮತಿಸಿತು.

    ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ಬಳಿಕ ವಿಚಾರಣೆ ನಡೆಯುತ್ತಿದೆ.

    ಮುಖ್ಯನ್ಯಾಯಮೂರ್ತಿ ಡಿ. ಚಂದ್ರಚೂಡ್​​​ ಸೇರಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ 5 ನ್ಯಾಯಮೂರ್ತಿಗಳಿರುವ ಪೀಠ ವಿಚಾರಣೆ ನಡೆಸಲಿದೆ.

    2019ರ ಆಗಸ್ಟ್‌ 6 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮರನಾಥದಲ್ಲಿ ಭಾರೀ ಮಳೆ – ಸಂಕಷ್ಟದಲ್ಲಿ ಧಾರವಾಡದ ಐವರು ಯಾತ್ರಿಗಳು

    ಅಮರನಾಥದಲ್ಲಿ ಭಾರೀ ಮಳೆ – ಸಂಕಷ್ಟದಲ್ಲಿ ಧಾರವಾಡದ ಐವರು ಯಾತ್ರಿಗಳು

    ಧಾರವಾಡ: ಅಮರನಾಥದಲ್ಲಿ (Amarnath) ಭಾರೀ ಮಳೆಯಾಗುತ್ತಿದ್ದು (Heavy Rain) ಧಾರವಾಡದಿಂದ (Dharwada) ಹೋಗಿದ್ದ ಐವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಜುಲೈ 3 ರಂದು ಧಾರವಾಡದಿಂದ ಹೋಗಿದ್ದ ಐವರು ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಸೇನಾ ಪಡೆಯುವರು (Indian Army) ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ (Panchtarni) ಎಂಬಲ್ಲಿ ಖಾಸಗಿಯವರ ಟೆಂಟ್‌ನಲ್ಲಿ ಇರಿಸಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನ ಕೂಡ ಇದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

    ವಿಪರೀತ ಮಳೆ ಸುರಿಯುತ್ತಿದ್ದು, ಟೆಂಟ್ ಬಿಟ್ಟು ಹೊರಗಡೆ ಬರಲಾರದ ಸ್ಥಿತಿ ಇದೆ. ಇಲ್ಲಿ ಆಹಾರಕ್ಕೆ ಸಮಸ್ಯೆ ಆಗುತ್ತಿದ್ದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರವಾಸಿಗರನ್ನು ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಕನ್ನಡಿಗರು ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರ 370ನೇ ವಿಧಿ ರದ್ದು – ಜುಲೈ 11 ರಿಂದ ವಿಚಾರಣೆ ಆರಂಭ

    ನವದೆಹಲಿ: ಜಮ್ಮು (Jammu) ಮತ್ತು ಕಾಶ್ಮೀರಕ್ಕೆ (Kashmir) ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು (Abrogation of Article 370) ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜುಲೈ 11 ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ.

    370ನೇ ವಿಧಿಯನ್ನು ರದ್ದುಗೊಳಿಸಿದ ನಾಲ್ಕು ವರ್ಷಗಳ ನಂತರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಸಂವಿಧಾನ ಪೀಠವು 20 ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.  ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ- ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್

    ಮುಖ್ಯನ್ಯಾಯಮೂರ್ತಿ ಡಿ. ಚಂದ್ರಚೂಡ್​​​ ಸೇರಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು  ಒಳಗೊಂಡ 5 ನ್ಯಾಯಮೂರ್ತಿಗಳಿರುವ ಪೀಠ ವಿಚಾರಣೆ ನಡೆಸಲಿದೆ.

    2019ರ ಆಗಸ್ಟ್‌ 6 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.

    ಮಾರ್ಚ್ 2020ರಲ್ಲಿ ಸುಪ್ರೀಂಕೋರ್ಟ್‍ನ 5 ನ್ಯಾಯಾಧೀಶರ ಸಂವಿಧಾನಿಕ ಪೀಠವು 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ ಅನ್ನು 7 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಹೇಳಿತ್ತು. ಕೆಲವು ಅರ್ಜಿದಾರರು ಸುಪ್ರೀಂಕೋರ್ಟ್‍ನ ಎರಡು ತೀರ್ಪುಗಳ ನಡುವೆ ಸಂಘರ್ಷವಿದೆ ಎಂದು ವಾದಿಸಿ 7 ನ್ಯಾಯಾಧೀಶರ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಮನವಿ ಮಾಡಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಐವರು ನ್ಯಾಯಾಧೀಶರ ಪೀಠ ಹಿಂದಿನ ಎರಡು ತೀರ್ಪುಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಪರಿಗಣಿಸಿ ಪ್ರಕರಣವನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

    ಹಿಂದೂಗಳ ಪವಿತ್ರ ‘ಅಮರನಾಥ ಯಾತ್ರೆ’ ಆರಂಭ

    ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ (Amarnath Yatra 2023) ಚಾಲನೆ ಸಿಕ್ಕಿದೆ. ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಹಸಿರು ನಿಶಾನೆ ತೋರಿಸಲಾಗಿದೆ.

    ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಶ್ರೀ ಅಮರನಾಥ ಜಿ ಪುಣ್ಯಕ್ಷೇತ್ರ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಗಂದರ್‌ಬಾಲ್ ಉಪ ಆಯುಕ್ತ ಶ್ಯಾಂಬೀರ್ ಯಾತ್ರೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ

    62 ದಿನಗಳ ಅಮರನಾಥ ಯಾತ್ರೆಯು ಪ್ರಾರಂಭವಾಗಿದ್ದು, ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಬಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಗುಹೆ ದೇಗುಲಕ್ಕೆ ಯಾತ್ರಿಕರು ಹೊರಟಿದ್ದಾರೆ. ಬಿಗಿ ಭದ್ರತೆಯ ನಡುವೆ ಶನಿವಾರ ಮುಂಜಾನೆ ಯಾತ್ರಾರ್ಥಿಗಳು ಬೇಸ್ ಕ್ಯಾಂಪ್‌ನಿಂದ ನಿರ್ಗಮಿಸಿದರು.

    ಮೊದಲ ಬ್ಯಾಚ್‌ನಲ್ಲಿ 7 ರಿಂದ 8 ಸಾವಿರ ಮಂದಿ ಯಾತ್ರಾರ್ಥಿಗಳಿದ್ದಾರೆ. ಬೇಸ್ ಕ್ಯಾಂಪ್‌ನಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಅಮರನಾಥ ಗುಹೆಯ ದೇಗುಲಕ್ಕೆ 12 ಕಿಮೀ ಪ್ರಯಾಣವನ್ನು ಕೈಗೊಂಡಿದ್ದಾರೆ. 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ಕಳೆದ ಬಾರಿ ಮೇಘಸ್ಪೋಟ ಸಂಭವಿಸಿ ಯಾತ್ರಿಗಳು ನಾನಾ ತೊಂದರೆ ಅನುಭವಿಸಿದ್ದರು. ಹೀಗಾಗಿ ಈ ಬಾರಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

    ಇಂದು ನಾವು ಪ್ರಯಾಣಿಕರ ಮೊದಲ ಬ್ಯಾಚ್‌ನ್ನು ಕಳುಹಿಸುತ್ತಿದ್ದೇವೆ. ಎಲ್ಲರಿಗೂ ಪ್ರಯಾಣ ಸುಖಕರವಾಗಿರಲಿ. ನಮ್ಮ ಸ್ವಯಂಸೇವಕರು ಸಹಾಯ ಮಾಡಲು ಎಲ್ಲೆಡೆ ಇದ್ದಾರೆ ಎಂದು ಶ್ಯಾಂಬಿರ್ ಹೇಳಿದ್ದಾರೆ.