Tag: jammu kashmir

  • ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

    ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

    – ಭಯೋತ್ಪಾದಕರ ಗುಂಡೇಟಿಗೆ ಡಿಎಸ್ಪಿ ಹುಮಾಯೂನ್‌ ಭಟ್‌ ಹುತಾತ್ಮ
    – ಕೊನೆ ಕ್ಷಣದಲ್ಲಿ 1 ತಿಂಗಳ ಮಗು ನೋಡಲು ಪತ್ನಿಗೆ ವೀಡಿಯೋ ಕರೆ

    ಶ್ರೀನಗರ: ಅನಂತ್‌ನಾಗ್‌ನ ಕೋಕರ್‌ನಾಗ್ (Anantnag Encounter) ಪ್ರದೇಶದ ಗಡೋಲ್ ಅರಣ್ಯದಲ್ಲಿ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹತರಾಗಿದ್ದಾರೆ. ಸಾವಿಗೆ ಕೆಲವೇ ಕ್ಷಣಗಳ ಮೊದಲು ಡಿಎಸ್ಪಿ ಹುಮಾಯೂನ್ ಭಟ್ ತಮ್ಮ ಒಂದು ತಿಂಗಳ ಮಗುವನ್ನು ನೋಡುವುದಕ್ಕಾಗಿ ಕುಟುಂಬದವರಿಗೆ ವೀಡಿಯೋ ಕರೆ ಮಾಡಿದ್ದರು. ಆಗ ಅವರಾಡಿದ ಕೊನೆ ಮಾತು ಮನಕಲಕುವಂತಿತ್ತು.

    ಭಯೋತ್ಪಾದಕರ ಗುಂಡೇಟಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಹುಮಾಯೂನ್ ಭಟ್ (Humayun Bhat) ಅವರು ಸಾವಿಗೆ ಕೆಲವೇ ಕ್ಷಣ ಇದ್ದಾಗ, ತಮ್ಮ ಪತ್ನಿ ಫಾತಿಮಾ ಅವರಿಗೆ ವೀಡಿಯೋ ಕರೆ ಮಾಡಿದರು. ಈ ವೇಳೆ ಪತ್ನಿಗೆ ‘ನಾನು ಬದುಕಿ ಉಳಿಯವುದಿಲ್ಲ’ ಎಂದು ಹೇಳಿದರು. ಕುಟುಂಬದ ಸದಸ್ಯರೊಂದಿಗೆ ಅವರಾಡಿದ ಕೊನೆ ಮಾತು ಇದು. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರು ಹಾರಿಸಿದ ಗುಂಡುಗಳು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇಹವನ್ನು ಒಕ್ಕಿದ್ದವು. ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಆಫ್-ಶೂಟ್ ಆಗಿರುವ ಟಿಆರ್‌ಎಫ್‌ನ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಗುಂಟೇಟಿನಿಂದ ಹುಮಾಯೂನ್‌ ಭಟ್‌ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಹುಮಾಯೂನ್ ಭಟ್ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ 15 ದಿನಗಳಷ್ಟೇ ಬಾಕಿ ಇದ್ದವು. ಆ ಹೊತ್ತಿಗಾಗಲೇ ಈ ದುರಂತ ನಡೆದು ಹೋಗಿತ್ತು.

    ಗುಂಡೇಟಿನಿಂದ ದೇಹಕ್ಕೆ ಗಂಭೀರ ಗಾಯಗಳಾಗಿವೆ. ನಾನು ಬದುಕಿ ಉಳಿಯುವುದಿಲ್ಲ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹುಮಾಯೂನ್‌ ಅವರು ಪತ್ನಿ ಫಾತಿಮಾಗೆ ವೀಡಿಯೋ ಕರೆ ಮಾಡಿ ಕೊನೆ ಮಾತುಗಳನ್ನು ಹೇಳಿದ್ದರು. ಪತ್ನಿಗೆ ಕರೆ ಮಾಡುವುದಕ್ಕೂ ಮುನ್ನ ಅವರು ತಮ್ಮ ತಂದೆ, ನಿವೃತ್ತ ಐಜಿ ಗುಲಾಮ್ ಹಸನ್ ಭಟ್ ಅವರಿಗೆ ಕರೆ ಮಾಡಿದ್ದರು. ತಮಗಾಗಿರುವ ಗಾಯದ ಪ್ರಮಾಣದ ಬಗ್ಗೆ ತಿಳಿಸಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್‌ನಲ್ಲಿ ಬುಧವಾರ ನಡೆದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್‌ ಭಟ್‌, ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ತೀವ್ರವಾಗಿ ಗಾಯಗೊಂಡು ನಂತರ ಹುತಾತ್ಮರಾದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತ್‌ನಾಗ್ (Anantnag) ಜಿಲ್ಲೆಯಲ್ಲಿ ಭಯೋತ್ಪಾದಕರ (Terrorist) ವಿರುದ್ಧ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆ (Operation) ನಡೆಸಲು ತೆರಳಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಪೊಲೀಸ್ ಉಪ ಅಧೀಕ್ಷಕ ಹಿಮಯುನ್ ಭಟ್ ಹುತಾತ್ಮರಾಗಿದ್ದಾರೆ. ಇದಾದ ಬಳಿಕವೂ ಭಯೋತ್ಪಾದಕರಿಗಾಗಿ ಮೂರು ದಿನದಿಂದ ತೀವ್ರ ಶೋಧ ನಡೆಯುತ್ತಿದ್ದು, ಮಿಷನ್ ಮಾತ್ರ ಪೂರ್ಣವಾಗುತ್ತಿಲ್ಲ.

    ಈ ಮಿಷನ್ ವಿಳಂಬಕ್ಕೆ ದಟ್ಟವಾದ ಕಾಡು ಮತ್ತು ಆಳವಾದ ಕಂದಕ ಕಾರಣ ಎಂದು ತಿಳಿದು ಬಂದಿದೆ. ಭಯೋತ್ಪಾದಕರು ಅಡಗಿ ಕುಳಿತಿರುವ ಪ್ರದೇಶ ದಟ್ಟ ಅರಣ್ಯದಿಂದ ಕೂಡಿದೆ. ಭಯೋತ್ಪಾದಕರು ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಅಡಗಿಕೊಂಡಿರುವುದರಿಂದ ಮೇಲಿನಿಂದ ಕೆಳ ಭಾಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿ ಪ್ರತಿದಾಳಿ ಮಾಡುತ್ತಿದ್ದಾರೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್

    ಬೆಟ್ಟದ ತುದಿಗೆ ತೆರಳಲು ಸೀಮಿತವಾದ ಸ್ಥಳವಿರುವ ಹಿನ್ನೆಲೆ ಅದೇ ಮಾರ್ಗದ ಮೂಲಕ ಚಲಿಸಬೇಕಿದೆ. ಇಲ್ಲಿ ಒಂದು ಕಡೆ ಅರಣ್ಯ, ಮತ್ತೊಂದು ಕಡೆ ಆಳವಾದ ಕಂದಕಗಳಿರುವ ಹಿನ್ನೆಲೆ ಸೈನಿಕರ ಸಂಚಾರ ತ್ರಾಸದಾಯವಾಗಿದೆ. ಭದ್ರತಾ ಪಡೆ ಸಿಬ್ಬಂದಿ ಶಸ್ತ್ರಾಸ್ತ್ರ ಮದ್ದುಗುಂಡು ಅಥವಾ ಆಹಾರದ ಕೊರತೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನೂ ಓದಿ: 39 ವರ್ಷದ ವ್ಯಕ್ತಿಗೆ ಪಾಸಿಟಿವ್- ಕೇರಳದಲ್ಲಿ ನಿಫಾ ಪ್ರಕರಣ 6ಕ್ಕೆ ಏರಿಕೆ

    ದಾಳಿ ಆರಂಭ:
    ಮಂಗಳವಾರ ರಾತ್ರಿ ಕೋಕರ್‌ನಾಗ್‌ನ ಗದುಲ್ ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮೊದಲು ಗುಪ್ತಚರ ಮಾಹಿತಿ ಸಿಕ್ಕಿದ ಬಳಿಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆದರೆ ಭಯೋತ್ಪಾದಕರು ಪತ್ತೆಯಾಗಲಿಲ್ಲ. ನಂತರ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯ ಜಂಟಿ ತಂಡಕ್ಕೆ ಭಯೋತ್ಪಾದಕರು ಬೆಟ್ಟದ ಮೇಲಿರುವ ಮಾಹಿತಿ ದೊರೆಯಿತು. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ

    ಬುಧವಾರ ಮುಂಜಾನೆ, ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಮೂಲಕ ಭಯೋತ್ಪಾದಕರ ಮೇಲೆ ದಾಳಿ ಮಾಡಲು ನಿರ್ಧರಿಸಿದವು. ಬೆಟ್ಟದ ತುದಿಗೆ ಹೋಗಲು ಪಡೆಗಳು ತೆಗೆದುಕೊಳ್ಳಬೇಕಾದ ಮಾರ್ಗವು ಸಾಕಷ್ಟು ಸವಾಲಿನದ್ದಾಗಿತ್ತು. ಕಿರಿದಾದ ಮಾರ್ಗದ ಮೂಲಕ ಸಿಬ್ಬಂದಿಗಳು ಬೆಟ್ಟ ಹತ್ತಲು ಪ್ರಾರಂಭಿಸಿದರು. ರಾತ್ರಿಯಾಗುತ್ತಿದ್ದಂತೆ ಭದ್ರತಾ ಪಡೆಗಳು ಇನ್ನಷ್ಟು ಸಮಸ್ಯೆಯನ್ನು ಎದುರಿಸಿತು. ಇದನ್ನೂ ಓದಿ: ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ಸವಾಲಿನ ನಡುವೆ ಬೆಟ್ಟದ ಮೇಲಿರುವ ಅಡುಗುತಾಣ ಗುಹೆಯನ್ನು ಭದ್ರತಾ ಪಡೆಗಳು ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ದಾಳಿ ಆರಂಭಿಸಿದರು. ಕಿರಿದಾದ ಮಾರ್ಗದಲ್ಲಿದ್ದ ಭದ್ರತಾ ಪಡೆಗಳು ಕಂದಕಗಳಿಗೆ ಬೀಳುವ ಸಾಧ್ಯತೆ ಎದುರಿಸಿದರು. ಪ್ರತಿದಾಳಿ ಮಾಡಲು ಸೂಕ್ತವಾದ ಅವಕಾಶ ಇಲ್ಲದಂತಾಯಿತು. ಈ ವೇಳೆ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಪೊಲೀಸ್ ಉಪ ಅಧೀಕ್ಷಕ ಹಿಮಯುನ್ ಭಟ್ ಗುಂಡಿನ ದಾಳಿಗೆ ಗಾಯಗೊಂಡು ಬಳಿಕ ಸಾವನ್ನಪ್ಪಿದರು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಬೆಟ್ಟ ಸುತ್ತುವರಿದ ಭದ್ರತಾ ಪಡೆಗಳು:
    ಎನ್‌ಕೌಂಟರ್ ಪ್ರಾರಂಭವಾಗಿ ಸುಮಾರು 72 ಗಂಟೆಗಳು ಕಳೆದಿವೆ. ಭದ್ರತಾ ಪಡೆಗಳು ಬೆಟ್ಟವನ್ನು ಸುತ್ತುವರೆದಿವೆ. ಡ್ರೋನ್‌ಗಳನ್ನು ಬಳಸಿ ಸ್ಫೋಟಕಗಳನ್ನು ಬೀಳಿಸಲಾಗುತ್ತಿದೆ. ರಾಕೆಟ್ ಲಾಂಚರ್‌ಗಳನ್ನು ಬಳಸಲಾಗುತ್ತಿದೆ ಮತ್ತು ಸಿಬ್ಬಂದಿ ನಿರಂತರ ಗುಂಡು ಹಾರಿಸುತ್ತಿದ್ದಾರೆ. ಆದರೆ ಅದರ ಸವಾಲಿನ ಭೌಗೋಳಿಕತೆಯಿಂದಾಗಿ ಸೇನೆಯು ಈ ಪ್ರದೇಶದ ಪ್ರಾಬಲ್ಯವನ್ನು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೆ.18 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ

    ಸಾಮಾನ್ಯ ಭಯೋತ್ಪಾದಕರಿಲ್ಲ:
    ಮೂಲಗಳ ಪ್ರಕಾರ ಭಯೋತ್ಪಾದಕರ ಸಂಖ್ಯೆ ಮೂರಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ. ಈ ಪೈಕಿ ಕಳೆದ ವರ್ಷ ಲಷ್ಕರ್-ಎ-ತೊಯ್ಬಾಗೆ ಸೇರಿದ್ದ ಉಝೈರ್ ಖಾನ್ ಕೂಡ ಸೇರಿದ್ದಾನೆ ಎನ್ನಲಾಗಿದೆ. ಅಡಗಿರುವ ಭಯೋತ್ಪಾದಕರು ಇಡೀ ಪ್ರದೇಶದ ಮಾಹಿತಿಯನ್ನು ಹೊಂದಿದ್ದು, ಅದರ ಲಾಭ ಪಡೆಯುತ್ತಿದ್ದಾರೆ. ಸಾಮಾನ್ಯ ಭಯೋತ್ಪಾದಕರು ಇಷ್ಟು ದಿನ ಎನ್‌ಕೌಂಟರ್ ಅನ್ನು ವಿಸ್ತರಿಸಲು ಸಾಧ್ಯವಿಲ್ಲ. ಸದ್ಯಕ್ಕಿರುವ ಭಯೋತ್ಪಾದಕರು ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

    ನವದಹೆಲಿ: ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ (Colonel Manpreet Singh) ಪಾರ್ಥಿವ ಶರೀರಕ್ಕೆ ಅವರ 6 ವರ್ಷದ ಪುತ್ರ ಸೆಲ್ಯೂಟ್‌ ಮಾಡಿದ ಮನಕಲಕುವ ದೃಶ್ಯ ವೈರಲ್‌ ಆಗಿದೆ.

    ಕಾಶ್ಮೀರದ (Jammu Kashmir) ಅನಂತ್‌ನಾಗ್‌ನಲ್ಲಿ (Anantnag Encounter) ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್‌ ಅಧಿಕಾರಿ ಹುತಾತ್ಮರಾದರು. ಅವರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದಲ್ಲಿ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ವೇಳೆ ಅವರ 6 ವರ್ಷದ ಪುತ್ರ ಮಿಲಿಟರಿ ಡ್ರೆಸ್‌ನಲ್ಲಿ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದ. ಪುಟ್ಟ ಬಾಲಕನ ಪಕ್ಕದಲ್ಲಿ ಆತನಿಗಿಂತ 2 ವರ್ಷ ಚಿಕ್ಕವಳಾದ ಸಹೋದರಿ ಕೂಡ ನಿಂತಿದ್ದಳು. ಆಕೆಯೂ ಅಣ್ಣನಂತೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದಳು.

    ಇಬ್ಬರಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಈ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ತಂದೆಯ ಪಾರ್ಥಿವ ಶರೀರ ದರ್ಶನ ಮಾಡಿಸಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ತೀವ್ರ ದುಃಖದಿಂದಾಗಿ ಬಳಲಿದ್ದರು.

    19 ರಾಷ್ಟ್ರೀಯ ರೈಫಲ್ಸ್‌ನ (19 ಆರ್‌ಆರ್) ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್ (41) ಬುಧವಾರ ರಾತ್ರಿ ಗುಂಡಿನ ದಾಳಿಯಿಂದಾಗಿ ಹುತಾತ್ಮರಾಗಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಹಾಗೂ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಕರ್ನಲ್ ಮನ್‌ಪ್ರೀತ್‌ ಸಿಂಗ್‌, ಮೇಜರ್ ಆಶಿಶ್ ಧೋಂಚಕ್‌, ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತನಾಗ್ (AnanthNag) ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ.

    ಭಯೋತ್ಪಾದಕರ ಗುಂಡೇಟಿಗೆ ಭಾರತೀಯ ಯೋಧ ಕರ್ನಲ್ ಮನ್‍ಪ್ರೀತ್ ಸಿಂಗ್ ಹಾಗೂ ಮೇಜರ್ ಆಶಿಶ್ ಧೋಂಚಕ್ ಹುತಾತ್ಮರಾಗಿದ್ದಾರೆ. ಈ ಕುರಿತು ಜನರಲ್ ವಿಕೆ ಸಿಂಗ್ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಕರ್ನಲ್ ಮನ್‍ಪ್ರೀತ್ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ಸ್ (19 ಖಖ) ಘಟಕದ ಕಮಾಂಡಿಂಗ್ ಅಧಿಕಾರಿಯಾಗಿದ್ದರು. ಅನಂತನಾಗ್‍ನ ಕೋಕರ್‍ನಾಗ್ ಪ್ರದೇಶದ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರು ನಡೆಸಿದ ಭಾರೀ ಗುಂಡಿನ ದಾಳಿಯ ನಡುವೆಯೇ ಅಧಿಕಾರಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಸೇನೆಯ 15 ಕಾಪ್ರ್ಸ್ ಕಮಾಂಡರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೇರಿದಂತೆ ಉನ್ನತ ಅಧಿಕಾರಿಗಳು ಎನ್‍ಕೌಂಟರ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮತ್ತು ಮೃತದೇಹಗಳ ತೆರವು ಕಾರ್ಯದ ಮೇಲ್ವಿಚಾರಣೆ ಮಾಡಿದ್ದಾರೆ..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ

    ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು (Article 370 Case) ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಅಂತ್ಯವಾಗಿದ್ದು, 16 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಸುಪ್ರೀಂಕೋರ್ಟ್ (Supreme Court) ತನ್ನ ಆದೇಶವನ್ನು ಕಾಯ್ದಿರಿಸಿದೆ.

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019 ರ ನಿರ್ಧಾರವನ್ನು ಪ್ರಶ್ನಿಸುವ ಒಂದು ಬ್ಯಾಚ್ ಅರ್ಜಿಗಳನ್ನು ಆಲಿಸಿತು.

    ಕೇಂದ್ರವು ತನ್ನ ಲಾಭಕ್ಕಾಗಿ ಎಲ್ಲವನ್ನೂ ಮಾಡುತ್ತಿದೆ ಮತ್ತು ನೆಲದ ನಿಯಮಕ್ಕೆ ಬದ್ಧವಾಗಿಲ್ಲ ಎಂದು ಅರ್ಜಿದಾರರು ವಿಚಾರಣೆ ವೇಳೆ ಆರೋಪಿಸಿದರು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, 370 ನೇ ವಿಧಿಯನ್ನು ರದ್ದುಗೊಳಿಸಿರುವುದು ಅಧಿಕಾರದ ದುರುಪಯೋಗದ ಶ್ರೇಷ್ಠ ಉದಾಹರಣೆಯಾಗಿದೆ ಎಂದು ವಾದಿಸಿದ್ದರು.  ಇದನ್ನೂ ಓದಿ: ಹಿಂದೂ ಹೆಸರನ್ನು ನೀಡಿದವರೇ ವಿದೇಶಿಯರು: ಅಧೀರ್‌ ರಂಜನ್‌ ಚೌಧರಿ

    ಕೇಂದ್ರವು ಆರ್ಟಿಕಲ್ 370ರ ರದ್ದತಿಗೆ ಬೆಂಬಲವಾಗಿ ವಾದಿಸಿತು ಮತ್ತು ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ನಿಬಂಧನೆಯನ್ನು ರದ್ದುಗೊಳಿಸುವಲ್ಲಿ ಯಾವುದೇ ʼಸಾಂವಿಧಾನಿಕ ವಂಚನೆ ಎಸಗಿಲ್ಲ ಎಂದು ಪ್ರತಿಪಾದಿಸಿತು.

    ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು ಭಾರತದ ಸಂವಿಧಾನಕ್ಕೆ ಅಧೀನವಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕ್ರಮವು ʼತಾತ್ಕಾಲಿಕ ಕ್ರಮʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಭವಿಷ್ಯದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯವಾಗಿ ಹಿಂತಿರುಗಿಸಿದರೆ, ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನಮಾನ ಯಾವಾಗ? – ಕಾಲಮಿತಿ ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಪ್ರಸ್ತುತ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮರಳಿ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಕಾಲಮಿತಿಯನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ವಿಶೇಷ ರಾಜ್ಯ ಸ್ಥಾನಮಾನವನ್ನು (Special Status of Jammu and Kashmir) ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI Chandrachud) ನೇತೃತ್ವದ ಸಂವಿಧಾನ ಪೀಠದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ವಿಚಾರಣೆಯ ಸಂದರ್ಭದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಜಮ್ಮು ಕಾಶ್ಮೀರದಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕ್ರಮವು ತಾತ್ಕಾಲಿಕವಾಗಿದ್ದು, ಭವಿಷ್ಯದಲ್ಲಿ ರಾಜ್ಯವಾಗಿ ಮರುಕಳಿಸಲಿದೆ ಎಂದು ತಿಳಿಸಿದ್ದರು.

    ಮೆಹ್ತಾ ಅವರ ವಾದವನ್ನು ಆಲಿಸಿದ ಪೀಠ, ಇದು ಎಷ್ಟು ತಾತ್ಕಾಲಿಕ? ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿತು.

    ಇದಕ್ಕೆ ಉತ್ತರಿಸಿದ ಮೆಹ್ತಾ, 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳು ನಡೆದಿದೆ. ಇದು 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬಂದಿದೆ ಎಂದು ತಿಳಿಸಿದರು.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ನವದೆಹಲಿ: ಸಿಆರ್‌ಪಿಎಫ್‌ (CRPF) ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ದಾಳಿ (Pulwama Attack) ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು (Special Status of Jammu and Kashmir) ರದ್ದು ಪಡಿಸಲು ಮತ್ತು ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಸಂಪೂರ್ಣವಾಗಿ ಸೇರಿಸುವ ಕ್ರಮಕ್ಕೆ ಪ್ರೇರೇಪಿಸಿತು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.

    ವಿಶೇಷ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸಂವಿಧಾನ ಪ್ರಕಾರವಾಗಿ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ

    ಆರ್ಟಿಕಲ್ 35(ಎ) ನಂತಹ ನಿಬಂಧನೆಗಳಿಂದಾಗಿ ಜಮ್ಮು ಕಾಶ್ಮೀರದ ನಿವಾಸಿಗಳು ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗಲಿಲ್ಲ. ಹಿಂದಿನ ತಪ್ಪನ್ನು ಸರಿಪಡಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ನಿರ್ಧಾರದಿಂದ ಸಕಾರಾತ್ಮಕ ಫಲಿತಾಂಶಗಳು ಬರುತ್ತಿವೆ ಎಂದು ತಿಳಿಸಿದರು.

    ಪಂಜಾಬ್  ವಿಭಜಿಸುವ ಮೂಲಕ ಹರಿಯಾಣ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು 1966 ರಲ್ಲಿ ಅಳವಡಿಸಿಕೊಂಡ ಮಾದರಿಯಂತೆಯೇ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗದೊಂದಿಗೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಪೊಲೀಸ್ ಅಧಿಕಾರ ಮಾತ್ರ ಕೇಂದ್ರದ ಬಳಿಯಿದೆ. ಭವಿಷ್ಯದಲ್ಲಿ ಅದು ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯಬಹುದು ಎಂದು ಹೇಳಿದರು.  ಇದನ್ನೂ ಓದಿ:  ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    2019ರ ಫೆ.24 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಮಾರುತಿ ಇಕೋ ಕಾರನ್ನು ಪುಲ್ವಾಮಾದಲ್ಲಿ  ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.

    2019ರ ಆಗಸ್ಟ್‌ 6 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು (Abrogation of Article 370) ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂ ಮೊರೆ ಹೋಗಿದ್ದರು. 370ನೇ ವಿಧಿಯನ್ನು ರದ್ದುಗೊಳಿಸಿದ ನಾಲ್ಕು ವರ್ಷಗಳ ನಂತರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಸಂವಿಧಾನ ಪೀಠವು 20 ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯೋಧನ ಸವಿನೆನಪಿಗೆ ನಿರ್ಮಾಣವಾಯ್ತು ಬಸ್ ನಿಲ್ದಾಣ

    ಯೋಧನ ಸವಿನೆನಪಿಗೆ ನಿರ್ಮಾಣವಾಯ್ತು ಬಸ್ ನಿಲ್ದಾಣ

    ಕಾರವಾರ: ಆತ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರರೊಂದಿಗೆ ಹೋರಾಡಿ ವೀರ ಮರಣ ಹೊಂದಿದ್ದ. ಆತನ ಸವಿ ನೆನಪಿಗಾಗಿ ಆತನ ಕುಟುಂಬ ಇದೀಗ ಜನರ ಉಪಯೋಗಕ್ಕಾಗಿ ಆತನಿಗೆ ಸರ್ಕಾರ ನೀಡಿದ ಹಣವನ್ನು ಸಾರ್ವಜನಿಕರ ಬಸ್ ನಿಲ್ದಾಣ ನಿರ್ಮಿಸುವ ಜೊತೆ ಸಮಾಜದ ಒಳಿತಿಗಾಗಿ ವಿನಿಯೋಗಿಸುತ್ತಿದೆ.

    ಹೌದು. ಉತ್ತರ ಕನ್ನಡ (Uttara Kannada) ಜಿಲ್ಲೆ ಕಾರವಾರ (Karwar) ನಗರದ ಕಡವಾಡದ ಯುವಕ ವಿನೋದ್ ನಾಯ್ಕ ದೇಶೆ ಸೇವೆ ಮಾಡಬೇಕು ಅಂತಾ 2001 ಜುಲೈ ತಿಂಗಳಲ್ಲಿ ಸೈನ್ಯಕ್ಕೆ ಸೇರಿದ್ದರು. ನಾಲ್ಕೂವರೆ ವರ್ಷಗಳ ಕಾಲ ಭಾರತಾಂಬೆಯ ಸೇವೆ ಮಾಡಿ ಸೈ ಎನ್ನಿಸಿಕೊಂಡಿದ್ದ ಅವರು 2005 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‍ನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಉಗ್ರರ ಗುಂಡಿಗೆ ಬಲಿಯಾಗಿ ವೀರ ಮರಣ ಹೊಂದಿದ್ದರು. ತಮ್ಮ ಏಕೈಕ ಮಗನ ಸಾವಿನಿಂದ ನೊಂದರೂ ಸರ್ಕಾರ ನೀಡಿದ ಹಣವನ್ನು ಸದುಪಯೋಗ ಆಗಬೇಕು ಎಂಬ ದೃಷ್ಟಿಯಿಂದ 18 ವರ್ಷದ ಬಳಿಕ ಯೋಧನ (Soldier) ನೆನಪಿಗಾಗಿ ಪೋಷಕರು ಕಡವಾಡದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದ್ದಾರೆ.

    ಕಡವಾಡ ವೀರ ಯೋಧನ ಹುಟ್ಟೂರು. ಊರಿನಲ್ಲಿ ಇದ್ದ ಚಿಕ್ಕ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿತ್ತು. ಬಸ್ ನಲ್ಲಿ ಪ್ರಯಾಣಿಸುವ ಜನರು ಮಳೆಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಬಸ್ ಹತ್ತಬೇಕಿತ್ತು. ಹೀಗಾಗಿ ಊರಿನವರಿಗೆ ಸಹಾಯ ಆಗಲಿ ಎಂಬ ಮನಸ್ಸಿನಿಂದ ವೀರ ಮರಣ ಹೊಂದಿರುವ ಯೋಧನ ತಂದೆ ಮಹದೇವ ನಾಯ್ಕ ಮತ್ತು ಗೀತಾ ಮಹದೇವ ನಾಯ್ಕರವರು ಬಸ್ ತುಂಗುದಾಣ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ಮಗನ ಹೆಸರಿನಲ್ಲಿ ಬಂದ ಹಣವನ್ನು ಸಮಾಜದ ಕೆಲಸಕ್ಕೆ ವಿನಿಯೋಗ ಮಾಡಲು ಈ ಕುಟುಂಬ ಕಂಕಣಬದ್ಧವಾಗಿದ್ದು ಊರಿನವರು ಸಹ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಸೀಮೆ ಎಣ್ಣೆ ಎರಚಿ ಬೆಂಕಿಹಚ್ಚಲು ಮಹಿಳೆ ಯತ್ನ!

    ದೇಶಕ್ಕಾಗಿ ವೀರ ಯೋಧ ಪ್ರಾಣಬಿಟ್ಟರೆ ಆತನ ಕುಟುಂಬ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಮೂಲಕ ಮಾದರಿಯಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮರನಾಥ ಯಾತ್ರೆಗೆ ಹೊರಟಿದ್ದ ಯಾತ್ರಾರ್ಥಿ 300 ಅಡಿ ಆಳಕ್ಕೆ ಬಿದ್ದು ಸಾವು

    ಅಮರನಾಥ ಯಾತ್ರೆಗೆ ಹೊರಟಿದ್ದ ಯಾತ್ರಾರ್ಥಿ 300 ಅಡಿ ಆಳಕ್ಕೆ ಬಿದ್ದು ಸಾವು

    ಶ್ರೀನಗರ: ಅಮರನಾಥ ಯಾತ್ರೆಗೆ (Amarnath Yatra) ಹೊರಟಿದ್ದ ಯಾತ್ರಾರ್ಥಿಯೊಬ್ಬರು 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ (Jammu Kashmir) ಪೊಲೀಸರು ತಿಳಿಸಿದ್ದಾರೆ.

    50 ವರ್ಷದ ಯಾತ್ರಾರ್ಥಿಯೊಬ್ಬರು ಶುಕ್ರವಾರ ತಡರಾತ್ರಿ ಪವಿತ್ರ ಅಮರನಾಥ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತಾ ಬಳಿ ಜಾರಿ 300 ಅಡಿ ಕೆಳಗೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ವಿಜಯ್ ಕುಮಾರ್ ಶಾ ಎಂದು ಗುರುತಿಸಲಾಗಿದ್ದು, ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬ ಗ್ರಾಮದ ನಿವಾಸಿ. ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ ಬ್ರಿಟಿಷ್‌ ನರ್ಸ್‌ – ಭಾರತೀಯ ಮೂಲದ ವೈದ್ಯನಿಂದ ಸಿಕ್ಕಿಬಿದ್ದಳು ಹಂತಕಿ

    ವಿಜಯ್ ಕುಮಾರ್ ಶಾ ಮತ್ತೊಬ್ಬರು ಯಾತ್ರಾರ್ಥಿ ಮಮತಾ ಕುಮಾರಿಯೊಂದಿಗೆ ಪವಿತ್ರ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತೆಯ ಬಳಿ ಕಾಲು ಜಾರಿ 300 ಅಡಿ ಕೆಳಗೆ ಬಿದ್ದಿದ್ದಾರೆ. ಯಾತ್ರಾರ್ಥಿಯನ್ನು ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಭಾರತೀಯ ಸೇನೆ ಜಂಟಿಯಾಗಿ ರಕ್ಷಿಸಿತ್ತು. ಆದರೂ ಯಾತ್ರಾರ್ಥಿ ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಉರಿವ ಕೆಂಡದ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್

    ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್

    ಶ್ರೀನಗರ: ಕಾಂಗ್ರೆಸ್‌ನ (Congress) ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಮುಸ್ಲಿಮರ (Muslims) ಮೂಲದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಹಿಂದೂ (Hindu) ಧರ್ಮವು ಇಸ್ಲಾಂ ಧರ್ಮಕ್ಕಿಂತ ಹಳೆಯದು ಎಂದು ಹೇಳಿದ್ದಾರೆ.

    ಆಗಸ್ಟ್ 14ರಂದು ದೋಡಾ ಜಿಲ್ಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಕಾಶ್ಮೀರದ ಉದಾಹರಣೆ ಇದೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರು ಇರಲಿಲ್ಲ. ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡರು. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಇಸ್ಲಾಂ ಧರ್ಮ 1,500 ವರ್ಷಗಳ ಹಿಂದೆ ಬಂದಿತ್ತು. ಆದರೆ ಹಿಂದೂ ಧರ್ಮ ಬಹಳ ಹಳೆಯದು ಎಂದರು. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

    ಇಸ್ಲಾಂ ಧರ್ಮ ಹೊರಗಿನಿಂದ ಬಂದಿರಬೇಕು, 10-20 ಜನರು ಮೊಘಲ್ ಸೈನ್ಯದಿಂದ ಬಂದಿರಬೇಕು. ಉಳಿದವರು ಹಿಂದೂ ಮತ್ತು ಸಿಖ್ ಧರ್ಮದಿಂದ ಮತಾಂತರಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಅವರ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋದಲ್ಲಿ ಆಜಾದ್ ಅವರು, ನಾವು ಹಿಂದೂಗಳು. ಮುಸ್ಲಿಮರು, ದಲಿತರು, ಕಾಶ್ಮೀರಿಗಳಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಇದು ನಮ್ಮ ಭೂಮಿ. ಇಲ್ಲಿ ಯಾರೂ ಹೊರಗಿನಿಂದ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ನಾಲ್ವರಿಗೆ ಶೂಟೌಟ್ ಮಾಡಿದ್ದ ಅಧಿಕಾರಿ ಸೇವೆಯಿಂದ ವಜಾ

    600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸಲ್ಮಾನರಾಗಿದ್ದವರು ಯಾರು? ಎಲ್ಲಾ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡರು. ಹಾಗಾಗಿ ಎಲ್ಲರೂ ಹಿಂದೂ ಧರ್ಮದಲ್ಲಿ ಹುಟ್ಟಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೇನೆಗೆ ಪ್ರಬಲ ಶಸ್ತ್ರಾಸ್ತ್ರಗಳ ಬಲ ನೀಡಿದ್ದ DRDO ಮಾಜಿ ಮುಖ್ಯಸ್ಥ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]