Tag: jammu kashmir

  • ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ –  ಓರ್ವ ಯೋಧ ಹುತಾತ್ಮ

    ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ (Poonch) ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

    ಘಟನೆಯಲ್ಲಿ ಐವರು IAF ಅಧಿಕಾರಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಧಂಪುರದ ಕಮಾಂಡ್ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ರವಾನೆ ಮಾಡಲಾಗಿದೆ. ಮೂಲಗಳ ಪ್ರಕಾರ, ಉಗ್ರರು ಸುಮಾರು 30 ಸುತ್ತು ಗುಂಡು ಹಾರಿಸಿದ್ದಾರೆ. ದಾಳಿ ನಡೆಸಿದ ಬಳಿಕ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಿಡ್ನಾಪ್‌ ಕೇಸಲ್ಲಿ ಹೆಚ್‌.ಡಿ ರೇವಣ್ಣ ಅರೆಸ್ಟ್

    ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶಾಸಿತಾರ್ ಬಳಿಯ ಜನರಲ್ ಏರಿಯಾದಲ್ಲಿರುವ ವಾಯುನೆಲೆಯೊಳಗೆ ವಾಹನಗಳಿಗೆ ಭದ್ರತೆ ಒದಗಿಸಲಾಗಿದೆ. ಸೇನಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಭದ್ರತಾ ಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಓರ್ವ ಹುತಾತ್ಮ: ಗಾಯಗೊಂಡ ಸೈನಿಕರ ಪೈಕಿ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಯೋಧನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮುಂದುವರಿದ ಚಿಕಿತ್ಸೆ. ಉಳಿದ ಮೂವರು ಯೋಧರ ಆರೋಗ್ಯದಲ್ಲಿ ಸ್ಥಿರವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

     

  • ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಮನೆಗಳು, ರಸ್ತೆಗಳಿಗೂ ಹಾನಿ

    ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಮನೆಗಳು, ರಸ್ತೆಗಳಿಗೂ ಹಾನಿ

    ಜುಮ್ಮು-ಕಾಶ್ಮೀರ: ಕಳೆದ 48 ಗಂಟೆಗಳಿಂದ ಜಮ್ಮು ಮತ್ತು ಕಾಶ್ಮೀರದ (Rain In Jammu Kashmir) ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪೂಂಚ್‌ನಲ್ಲಿ ಹಾನಿಯುಂಟುಮಾಡಿದೆ.

    ಪೂಂಚ್‌ನ ಮಂಡಿ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಭೂಕುಸಿತ ಉಂಟಾಗಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಪೂಂಚ್ ಮತ್ತು ಉತ್ತರ ಕಾಶ್ಮೀರದ ಭಾಗಗಳಲ್ಲಿ ಸರಿದ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದೆ. ಪರಿಣಾಮ 8 ರಿಂದ 10 ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಮೋದಿ ಭಾಷಣವನ್ನು ತಿರುಚಿ ಅಪ್ಲೋಡ್‌ – ಪ್ರಿಯಾಂಕ್‌ ಖರ್ಗೆ ವಿರುದ್ಧ ದೂರು

    ಈ ಸಂಬಂಧ ಸ್ಥಳೀಯ ನಿವಾಸಿ ಅಶ್ಫಾಕ್ ಹುಸೇನ್ ಪ್ರತಿಕ್ರಿಯಿಸಿ, ಭಾರೀ ಮಳೆಯಿಂದಾಗಿ 8 ರಿಂದ 10 ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋದರೆ, ಇನ್ನೂ ಕೆಲವು ಭಾಗಶಃ ಹಾನಿಯಾಗಿದೆ. ಇದರ ಜೊತೆಗೆ ರಸ್ತೆಗಳು ಕೂಡ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

    ಇನ್ನೊಂದು ಘಟನೆಯಲ್ಲಿ ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ. ಸೋನಾಮಾರ್ಗ್ ಅರಣ್ಯ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಆರ್ಥಿಕ ನಷ್ಟ ಸಂಭವಿಸಿಲ್ಲ.

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತೈಗೈದ ಸೇನೆ

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಹತೈಗೈದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಬಾರಾಮುಲ್ಲದಲ್ಲಿ (Baramulla) ಭಯೋತ್ಪಾದಕರು (Terrorist) ಮತ್ತು ಭದ್ರತಾ ಪಡೆಗಳ (Security Force) ನಡುವೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದು, ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

    ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಚೆಕ್ ಮೊಹಲ್ಲಾ ನೌಪೋರಾದಲ್ಲಿ ಗುರುವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಪ್ರಾರಂಭಗೊಂಡು, ಶುಕ್ರವಾರ ಮುಂಜಾನೆಯೂ ಗುಂಡಿನ ದಾಳಿ ಮುಂದುವರೆದಿದೆ. ಇದುವರೆಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 100% ವಿವಿಪ್ಯಾಟ್ ಸ್ಲಿಪ್ ಎಣಿಕೆ ಸಾಧ್ಯವಿಲ್ಲ: ಸುಪ್ರೀಂ ಹೇಳಿದ್ದೇನು?

    ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಇಬ್ಬರು ಸೇನಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಸಮೀಪದ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ವಿರುದ್ಧ ಪ್ರತಿಭಟನೆ – ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಬಂಧನ

  • ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಅಟ್ಟಹಾಸ – ಗುಂಡಿನ ದಾಳಿಗೆ ಓರ್ವ ಬಲಿ

    ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಅಟ್ಟಹಾಸ – ಗುಂಡಿನ ದಾಳಿಗೆ ಓರ್ವ ಬಲಿ

    ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಜೌರಿ (Rajouri) ಜಿಲ್ಲೆಯಲ್ಲಿ ಉಗ್ರರು (Terrorist) ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದು, ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಬ್ದುಲ್ ರಜಾಕ್ ಉಗ್ರರ ಗುಂಡಿಗೆ ಬಲಿಯಾದ ವ್ಯಕ್ತಿ. ಥಾನಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾ ಟಾಪ್ ಎಂಬ ಹಳ್ಳಿಯ ಮಸೀದಿಯಲ್ಲಿ ಸಂಜೆಯ ನಮಾಜ್ ಮುಗಿಸಿ ಹೊರಗೆ ಬಂದಾಗ ಅಬ್ದುಲ್ ರಜಾಕ್ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ರಜಾಕ್ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮದುವೆ ಮಂಟಪಕ್ಕೆ ನುಗ್ಗಿ ವಧುವನ್ನು ಎಳೆದೊಯ್ಯಲು ಯತ್ನಿಸಿದ ಆಕೆಯ ಕುಟುಂಬ!

    ಮೃತ ರಜಾಕ್‌ನ ಸಹೋದರ ಟೆರಿಟೋರಿಯಲ್ ಆರ್ಮಿಯಲ್ಲಿ ಸೈನಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಭಯೋತ್ಪಾದಕರು ಸಮೀಪದಿಂದ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಬೃಹತ್ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ತೈವಾನ್​ನಲ್ಲಿ 24 ಗಂಟೆಯೊಳಗೆ 80ಕ್ಕೂ ಹೆಚ್ಚು ಬಾರಿ ಕಂಪಿಸಿದ ಭೂಮಿ!

  • Jammu Kashmir Election: ಹೆಡ್‌ ಮಾಸ್ತರ್‌ ಮನೆ ಮೇಲೆ ದಾಳಿ – ಪಿಸ್ತೂಲ್‌, ಚೀನಾ ಗ್ರೆನೇಡ್‌ ವಶ

    Jammu Kashmir Election: ಹೆಡ್‌ ಮಾಸ್ತರ್‌ ಮನೆ ಮೇಲೆ ದಾಳಿ – ಪಿಸ್ತೂಲ್‌, ಚೀನಾ ಗ್ರೆನೇಡ್‌ ವಶ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಸಂಭವಿಸಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯವನ್ನು ಭದ್ರತಾ ಪಡೆ ವಿಫಲಗೊಳಿಸಿದೆ.

    ಭಾನುವಾರ ಭಾರತೀಯ ಸೇನೆಯು (Indian Army) ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲಿಸರು (Jammu Kashmir Police) ಜಂಟಿ ಕಾರ್ಯಾಚರಣೆ ನಡೆಸಿ ಪೂಂಚ್‌ ಜಿಲ್ಲೆಯ ಹರಿ ಬುದ್ಧ ನಗರದಲ್ಲಿ ಉಗ್ರರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಹೆಡ್‌ ಮಾಸ್ತರ್‌ನನ್ನು (Head Master) ಬಂಧಿಸಿದೆ.

    ಖಮರುದ್ದೀನ್ ಬಂಧಿತ ಹೆಡ್‌ಮಾಸ್ತರ್‌. ಈತನ ಮನೆಯಲ್ಲಿ ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು ಚೀನಾದ ಗ್ರೆನೇಡ್‌ಗಳು ಸಿಕ್ಕಿದ್ದು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಅನಾರೋಗ್ಯ – ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಗೈರು

     

    ಪೂಂಚ್ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ವೇಳೆ ಹಿಂಸಾಚಾರ ನಡೆಸಲು ಗ್ರೆನೇಡ್‌ ಸಂಗ್ರಹಿಸಡಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ವಯನಾಡ್‌ನಲ್ಲಿ ರಾಹುಲ್‌ಗೆ ಬಿಗ್‌ ಶಾಕ್‌ – ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

    ಜಮ್ಮು ಮತ್ತು ಕಾಶ್ಮೀರದಲ್ಲಿ 5 ಲೋಕಸಭಾ ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ. ಉದಂಪುರ್‌ನಲ್ಲಿ ಏ.19 ರಂದು ನಡೆದಿದ್ದರೆ ಏ.26 ರಂದು ಜಮ್ಮು, ಮೇ 7 ರಂದು ಅನಂತನಾಗ್‌-ರಾಜೌರಿ, ಮೇ 13 ರಂದು ಶ್ರೀನಗರ, ಮೇ 20 ರಂದು ಬಾರಾಮುಲ್ಲಾದಲ್ಲಿ ಚುನಾವಣೆ ನಡೆಯಲಿದೆ.

     

  • ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

    ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್‌ ಟೈಂ ಫಾರ್ಮುಲಾ 4 ರೇಸ್‌ – ಮೋದಿ ಮೆಚ್ಚುಗೆ

    ಶ್ರೀನಗರ: ಕಲ್ಲೆಸೆತಕ್ಕೆ ಸುದ್ದಿಯಾಗುತ್ತಿದ್ದ ಕಾಶ್ಮೀರ (Jammu Kashmir) ಈಗ ಬದಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಫಾರ್ಮುಲಾ 4(Formula 4 ) ಕಾರ್‌ ರೇಸ್‌ ನಡೆದಿದೆ.

    ಶ್ರೀನಗದ ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ (Srinagar’s Dal Lake) ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ವೃತ್ತಿಪರ ಫಾರ್ಮುಲಾ 4 ಚಾಲಕರು ಪ್ರದರ್ಶಿಸಿದ ಸಾಹಸಗಳನ್ನು ವೀಕ್ಷಿಸಿದ ಸ್ಥಳೀಯರು ರೋಮಂಚನಗೊಂಡಿದ್ದಾರೆ. ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್‌ನಿಂದ ನೆಹರೂ ಪಾರ್ಕ್‌ವರೆಗಿನ 1.7 ಕಿಮೀ ಟ್ರ್ಯಾಕ್‌ನಲ್ಲಿ ಸ್ಲೀಕ್ ರೇಸಿಂಗ್ ಕಾರುಗಳು ಘರ್ಜಿಸಿದವು. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ – ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌

    ನೂರಾರು ಉತ್ಸಾಹಿ ಯುವಕರು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಈ ರೇಸ್‌ ವೀಕ್ಷಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು (Tourism) ಉತ್ತೇಜಿಸಲು ಮತ್ತು ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಆರ್ಟಿಕಲ್‌ 370 ತೆಗೆದ ನಂತರ ನಮ್ಮ ಕಾಶ್ಮೀರ ಬದಲಾಗುತ್ತಿದೆ. ಕಾಶ್ಮೀರವನ್ನೇ ಬದಲಿಸಿದ ಪ್ರಧಾನಿ ಮೋದಿ! ಮೊಟ್ಟಮೊದಲ ಫಾರ್ಮುಲಾ 4 ಕಾರ್ ಶೋ ಇಂದು ದಾಲ್ ಲೇಕ್ ಶ್ರೀನಗರದ ದಡದಲ್ಲಿ ನಡೆಯಿತು ಎಂದು ಕಾಶ್ಮೀರದ ನೆಟ್ಟಿಗರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕಾಶ್ಮೀರದ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನು ನೋಡಲು ತುಂಬಾ ಸಂತೋಷವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಮತ್ತಷ್ಟು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಭಾರತವು ಮೋಟಾರು ಕ್ರೀಡೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ (PM Narendra Modi) ಎಕ್ಸ್‌ನಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸೋದು ಪಕ್ಕಾ ಅಂದ್ರಾ ನಟಿ ಕರೀನಾ

     

  • ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ: ನರೇಂದ್ರ ಮೋದಿ

    ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ: ನರೇಂದ್ರ ಮೋದಿ

    ಶ್ರೀನಗರ: ಲೋಕಸಭಾ ಚುನಾವಣೆಗೂ (Loksabha Election) ಮುನ್ನ ವಿವಿಧ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಅವರು 6,400 ಮೌಲ್ಯದ 53 ಯೋಜನೆಗಳಿಗೆ ಚಾಲನೆ ನೀಡಿದರು. ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರ ವಿತರಿಸಿದರು‌.

    ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ಶ್ರೀನಗರದ ಅದ್ಭುತ ಜನರಲ್ಲಿ ಒಬ್ಬರಾಗಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ, ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ. ಇಂದು ಸಮರ್ಪಿಸಲಾಗುತ್ತಿರುವ ಅಭಿವೃದ್ಧಿ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ ಆದ್ಯತೆ ಎಂದರು.

    ಜಮ್ಮು ಮತ್ತು ಕಾಶ್ಮೀರದ (Jammu & Kashmir) ಜನರು ಪ್ರಯೋಜನಗಳಿಂದ ವಂಚಿತರಾದ ಯುಗವೂ ಇತ್ತು. ದೇಶದ ಇತರ ಭಾಗಗಳಲ್ಲಿ ಜಾರಿಗೊಳಿಸಲಾದ ಕಾನೂನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲು ಸಾಧ್ಯವಾಗದ ಯುಗವಿತ್ತು. ದೇಶಾದ್ಯಂತ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದಾಗ, ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರ-ಸಹೋದರಿಯರು ವಂಚಿತರಾಗಿದ್ದರು. ಈಗ ನೋಡಿ ಸಮಯ ಹೇಗೆ ಬದಲಾಗಿದೆ. ಕಾಂಗ್ರೆಸ್ ಕೇವಲ ಜಮ್ಮು ಮತ್ತು ಕಾಶ್ಮೀರದ ಜನರನ್ನು ಮಾತ್ರವಲ್ಲದೆ ಇಡೀ ದೇಶವನ್ನು 370 ನೇ ವಿಧಿಯ ಬಗ್ಗೆ ತಪ್ಪುದಾರಿಗೆಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಇಂದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿದೆ. ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮ ಸಾಧ್ಯತೆಗಳು, ರೈತರ ಸಬಲೀಕರಣ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಾಯಕತ್ವ ಹೆಚ್ಚಿಸಲಿದೆ. ಜಮ್ಮು ಮತ್ತು ಕಾಶ್ಮೀರ ಕೇವಲ ಒಂದು ಪ್ರದೇಶವಲ್ಲ, ಅದು ಭಾರತದ ಹಣೆಬರಹ. ವಿಕ್ಷಿತ್ ಜಮ್ಮು ಮತ್ತು ಕಾಶ್ಮೀರವು ವಿಕ್ಷಿತ್ ಭಾರತ್‌ನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ 285 ಬ್ಲಾಕ್‌ಗಳಿಂದ 1 ಲಕ್ಷ ಜನರು ವಾಸ್ತವಿಕವಾಗಿ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹೊಸ ಜಮ್ಮು ಮತ್ತು ಕಾಶ್ಮೀರಕ್ಕೆ ಉಜ್ವಲ ಭವಿಷ್ಯವಿದೆ ಮತ್ತು ಸವಾಲುಗಳನ್ನು ಜಯಿಸುವ ಧೈರ್ಯವಿದೆ. ನಿಮ್ಮ ಸಂತೋಷದ ಮುಖಗಳನ್ನು ನೋಡಿ, ದೇಶಾದ್ಯಂತ 140 ಕೋಟಿ ಜನರು ಸಂತೃಪ್ತಿ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು

    ಇದಕ್ಕೂ ಮುನ್ನ ಪ್ರಧಾನಿಯವರು ಹೊಸದಾಗಿ ನೇಮಕಗೊಂಡ ಸುಮಾರು 1,000 ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು ಮಹಿಳಾ ಸಾಧಕರು, ರೈತರು ಮತ್ತು ಉದ್ಯಮಿಗಳು ಸೇರಿದಂತೆ ವಿವಿಧ ಕೇಂದ್ರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

  • ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (NC) ಎಲ್ಲಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ. ಈ ಮೂಲಕ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರುವ ಸುಳಿವು ನೀಡಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, I.N.D.I.A ಒಕ್ಕೂಟದ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ತನ್ನ ಸ್ವಂತ ಬಲದ ಮೇಲೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಚುಕ್ಕಾಣಿ ಹಿಡಿದಾಗ ನ್ಯಾಷನಲ್ ಕಾನ್ಫರೆನ್ಸ್ ಎನ್‌ಡಿಎ ಭಾಗವಾಗಿತ್ತು.

    ಕಳೆದ ತಿಂಗಳು ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಬ್ದುಲ್ಲಾ ಅವರ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ತಲಾ ಮೂರು ಸ್ಥಾನಗಳನ್ನು ಗೆದ್ದವು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

  • ಶ್ರೀನಗರದಲ್ಲಿ ಪಂಜಾಬ್‌ ನಿವಾಸಿಯನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

    ಶ್ರೀನಗರದಲ್ಲಿ ಪಂಜಾಬ್‌ ನಿವಾಸಿಯನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ಪಂಜಾಬ್ (Punjab) ನಿವಾಸಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರನ್ನು ಅಮೃತಸರ ಮೂಲದ ಅಮೃತಪಾಲ್ ಸಿಂಗ್ (Amritpal Singh) ಎಂದು ಗುರುತಿಸಲಾಗಿದೆ. ಶ್ರೀನಗರದ (Srinagar) ಶಹೀದ್ ಗುಂಜ್ ಪ್ರದೇಶದಲ್ಲಿ ಅಮೃತಪಾಲ್ ಮೇಲೆ‌ ಈ ದಾಳಿ ನಡೆದಿದೆ. ದಾಳಿಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಘಟನಾ ಸ್ಥಳವನ್ನು ಪೊಲೀಸರು ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: AAP ಸಂಸದ ಸಂಜಯ್ ಸಿಂಗ್ ಜಾಮೀನು ಅರ್ಜಿ ತಿರಸ್ಕರಿಸಿದ‌ ದೆಹಲಿ ಹೈಕೋರ್ಟ್

    ಈ ಸಂಬಂಧ ಕಾಶ್ಮೀರ ವಲಯ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶಹೀದ್ ಗುಂಜ್ ಶ್ರೀನಗರದಲ್ಲಿ ಅಮೃತಸರ ನಿವಾಸಿ ಅಮೃತಪಾಲ್ ಸಿಂಗ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗುಂಡಿನ ದಾಳಿ ನಡೆದ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ತಿಳಿಸಿದ್ದಾರೆ.

  • ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ಜಮ್ಮು-ಕಾಶ್ಮೀರ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನಾ ಸಮಾರಂಭವು ದೇಶದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷವನ್ನು ಕೊನೆಗೊಳಿಸಲು ದಾರಿ ಮಾಡಿಕೊಡಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಶ್ರೀರಾಮನನ್ನು (Shri Ram) ಸ್ತುತಿಸುತ್ತೇನೆ ಎಂದು ಒತ್ತಿ ಹೇಳಿದರು. ಅಯೋಧ್ಯೆಯ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಯಾರು ಹೋಗುತ್ತಾರೋ, ಯಾರು ಹೋಗುವುದಿಲ್ಲವೋ ಎಂಬುದು ಅವರವರಿಗೆ ಬಿಟ್ಟ ವಿಚಾರವಾಗಿದೆ. ಆದರೆ ರಾಮಮಂದಿರಲ್ಲಿ ದೇವಸ್ಥಾನದ ಬಾಗಿಲು ತೆರೆಯುವುದರೊಂದಿಗೆ ಜನರ ಹೃದಯದ ಬಾಗಿಲುಗಳೂ ತೆರೆದು ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳಲಿ ಎಂದು ಆಶಿಸುತ್ತೇನೆ. ಇದು ನನ್ನ ಪ್ರಾರ್ಥನೆ ಕೂಡ ಆಗಿದೆ ಎಂದರು.

    ರಾಮನು (Ram) ನನ್ನಂತೆಯೇ ನಿಮ್ಮವನು ಕೂಡ. ನಾನು ಪಾಕಿಸ್ತಾನಿ ವಿದ್ವಾಂಸರ ಕುರಾನ್‌ನ ಅನುವಾದವನ್ನು ಓದಿದ್ದೇನೆ. ಎಲ್ಲರೂ ಸಹೋದರತ್ವ ಮತ್ತು ಪ್ರೀತಿಯಿಂದ ಮುಂದುವರಿಯಬೇಕೆಂದು ರಾಮ ಬಯಸುತ್ತಾರೆ. ಭಾರತವನ್ನು ರಾಮ ‘ರಾಜ್ಯ’ ಮಾಡಲು ಬಯಸಿದ್ದಾರೆ ಎಂದು ಹೇಳುತ್ತಾರೆ. ಇದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ: ಫಾರೂಕ್‌ ಅಬ್ದುಲ್ಲಾ

    ನಾನು ಹಲವಾರು ವರ್ಷಗಳಿಂದ ವಿವಿಧ ದೇವಾಲಯಗಳಲ್ಲಿ ಮನಃಪೂರ್ವಕವಾಗಿ ರಾಮನ ‘ಭಜನೆ’ಗಳನ್ನು ಹಾಡಿದ್ದೇನೆ. ಯಾರ ಟೀಕೆಗಳಿಗೂ ನಾನು ಹೆದರುವುದಿಲ್ಲ. ಏಕೆಂದರೆ ನಾವು ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಉಳಿಸಬೇಕಾದರೆ ಅದನ್ನು ಮಾಡಬೇಕು. ಮುಂದೆ ಸಾಗಲು ನಾವು ಕೈ ಜೋಡಿಸಬೇಕಾಗಿದೆ ಎಂದು ತಿಳಿಸಿದರು.

    ಚುನಾವಣೆ (Election) ಸಮೀಪಿಸುತ್ತಿದ್ದು, ಕೆಲವರು ರಾಮ ಮಂದಿರದ ಹೆಸರಿನಲ್ಲಿ ಜೈ ಶ್ರೀ ರಾಮ್ (Jai Shri Ram) ಎಂದು ಘೋಷಣೆ ಕೂಗಿ ಮತ ಕೇಳುತ್ತಿದ್ದಾರೆ ಎಂದು ಇದೇ ವೇಳೆ ಅಬ್ದುಲ್ಲಾ ಅವರು ಹೆಸರೇಳದೆ ಬಿಜೆಪಿಗೆ (BJP) ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಧರ್ಮ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಜನರು ಅವರು ಎಂದು ವಾಗ್ದಾಳಿ ನಡೆಸಿದರು.